6 Oct 2016

ಪ್ರವಾದಿ ﷺ ಸಾಮಾನ್ಯ ಮನುಷ್ಯರೇ?

ಪ್ರವಾದಿ ﷺ ಸಾಮಾನ್ಯ ಮನುಷ್ಯರೇ?

ಪ್ರವಾದಿ ﷺ ರು ಈ ಲೋಕದಲ್ಲಿರುವ ಬೇರೆ ಎಲ್ಲಾ ಸೃಷ್ಟಿಗಳಿಗಿಂತ ಅನೇಕ ವೈಶಿಷ್ಟತೆ ಮತ್ತು ಶ್ರೇಷ್ಟತೆಯಿರುವ ಮಹಾತ್ಮರಾಗಿದ್ದರು ಎಂದು ಇಸ್ಲಾಂ ಕಲಿಸುತ್ತದೆ. ನುಬುವ್ವತ್, ರಿಸಾಲತ್, ಮುಹ್'ಜಿಝತ್, ಪಾಪ ಸುರಕ್ಷತೆ.... ಮೊದಲಾದವುಗಳು ಕೆಲವು ಉದಾಹರಣೆಗಳಾಗಿವೆ. ಮಾತ್ರವಲ್ಲದೆ ಪ್ರವಾದಿ ﷺ ರಿಗೆ ಇತರ ಪ್ರವಾದಿಗಳಂತೆ ಪ್ರತ್ಯೇಕವಾದ ಬೇರೆ ಹಲವು ಪ್ರತ್ಯೇಕ ಶ್ರೇಷ್ಠತೆ ಕೂಡಾ ಇದೆ.

ಉದಾ:- ಪಪ್ರಪ್ರಥಮವಾಗಿ ಸ್ವರ್ಗ ಪ್ರವೇಶಿಸುವವರೂ, ಪರ ಲೋಕದಲ್ಲಿ ಶಫಾಅತ್ ಮಾಡಲು ಮೊದಲು ಅನುಮತಿ ಲಭಿಸುವವರೂ, ಹೌಲುಲ್ ಕೌಸರ್ ನಿಂದ ಪಾನೀಯ ಕೊಡುವ ಅರ್ಹತೆ ಲಭಿಸುವವರೂ ಪ್ರವಾದಿ ﷺ ಆಗಿರುವರು.

ಈ ವಾಸ್ತವಿಕತೆಯನ್ನು ಹೇಳುವವರನ್ನು ಮುಸ್ಲಿಯಾರ್ ಗಳು ಪ್ರವಾದಿ ﷺ ರನ್ನು ಸಾಮಾನ್ಯ ಮನುಷ್ಯರನ್ನಾಗಿ ಮಾಡುವವರು, ಅವರನ್ನು ಪ್ರೀತಿಸದವರು ಎಂದು ಅಪಪ್ರಚಾರ ನಡೆಸುತ್ತಾರೆ.

ಆದರೆ, ಕುರಾನ್ ಹೇಳುವುದನ್ನು ನೋಡಿ.

قُلْ إِنَّمَا أَنَا بَشَرٌ مِثْلُكُمْ يُوحَىٰ إِلَيَّ أَنَّمَا إِلَٰهُكُمْ إِلَٰهٌ وَاحِدٌ ۖ فَمَنْ كَانَ يَرْجُو لِقَاءَ رَبِّهِ فَلْيَعْمَلْ عَمَلًا صَالِحًا وَلَا يُشْرِكْ بِعِبَادَةِ رَبِّهِ أَحَدًا

(ಓ ಪ್ರವಾದಿಯವರೇ!) ಹೇಳಿರಿ: ‘ನಾನು ನಿಮ್ಮಂತಿರುವ ಒಬ್ಬ ಮನುಷ್ಯನು ಮಾತ್ರವಾಗಿರುವೆನು.[559] ನಿಮ್ಮ ಆರಾಧ್ಯನು ಏಕಮೇವ ಆರಾಧ್ಯನಾಗಿರುವನೆಂದು ನನಗೆ ದಿವ್ಯಸಂದೇಶ ನೀಡಲಾಗುತ್ತಿದೆ. ಆದ್ದರಿಂದ ಯಾರಾದರೂ ತನ್ನ ಪ್ರಭುವಿನ ಭೇಟಿಯನ್ನು ಆಶಿಸುವು ದಾದರೆ ಅವನು ಸತ್ಕರ್ಮವನ್ನು ಮಾಡಲಿ ಮತ್ತು ತನ್ನ ಪ್ರಭುವಿನ ಆರಾಧನೆಯಲ್ಲಿ ಯಾರನ್ನೂ ಸಹಭಾಗಿಯನ್ನಾಗಿ ಮಾಡದಿರಲಿ’.

ಟಿಪ್ಪಣಿಗಳು :
[559] ಪ್ರವಾದಿ ಮುಹಮ್ಮದ್ ﷺ ‍ರವರು ತಿನ್ನುವ, ಕುಡಿಯುವ, ಮಾಂಸ-ನೆತ್ತರುಗಳಿರುವ, ನೋವು-ನಲಿವುಗಳನ್ನು ಹೊಂದಿರುವ ಓರ್ವ ಮನುಷ್ಯರೇ ಆಗಿದ್ದರು. ಅಲ್ಲಾಹುವಿನಿಂದ ಅವರಿಗೆ ವಹ್ಯ್ ಲಭಿಸುತ್ತದೆ ಎಂಬುದು ಅವರನ್ನು ಇತರ ಜನಸಾಮಾನ್ಯರಿಂದ ಉನ್ನತಗೊಳಿಸುತ್ತದೆ.

[ಅಲ್-ಕಹ್'ಫ್ : 110]

قُلْ إِنَّمَا أَنَا بَشَرٌ مِثْلُكُمْ يُوحَىٰ إِلَيَّ أَنَّمَا إِلَٰهُكُمْ إِلَٰهٌ وَاحِدٌ فَاسْتَقِيمُوا إِلَيْهِ وَاسْتَغْفِرُوهُ ۗ

ಹೇಳಿರಿ: ‘ನಾನು ನಿಮ್ಮಂತಿರುವ ಒಬ್ಬ ಮನುಷ್ಯ ಮಾತ್ರವಾಗಿರುವೆನು. ನಿಮ್ಮ ಆರಾಧ್ಯನು ಏಕಮೇವ ಆರಾಧ್ಯ ನಾಗಿರುವನೆಂದು ನನಗೆ ದಿವ್ಯಸಂದೇಶ ನೀಡಲಾಗುತ್ತಿದೆ. ಆದ್ದರಿಂದ ಅವನೆಡೆಗಿರುವ ಮಾರ್ಗದಲ್ಲಿ ನೀವು ನೇರವಾಗಿ ನೆಲೆಗೊಳ್ಳಿರಿ. ಅವನೊಂದಿಗೆ ಪಾಪಮುಕ್ತಿಯನ್ನು ಬೇಡಿರಿ.

[ಫುಸ್ಸಿಲತ್ : 6]

قَالَتْ لَهُمْ رُسُلُهُمْ إِنْ نَحْنُ إِلَّا بَشَرٌ مِثْلُكُمْ وَلَٰكِنَّ اللَّهَ يَمُنُّ عَلَىٰ مَنْ يَشَاءُ مِنْ عِبَادِهِ ۖ وَمَا كَانَ لَنَا أَنْ نَأْتِيَكُمْ بِسُلْطَانٍ إِلَّا بِإِذْنِ اللَّهِ ۚ وَعَلَى اللَّهِ فَلْيَتَوَكَّلِ الْمُؤْمِنُونَ

ಅವರೆಡೆಗೆ ಕಳುಹಿಸಲಾದ ಸಂದೇಶವಾಹಕರು ಅವರೊಂದಿಗೆ ಹೇಳಿದರು: ‘ನಾವು ನಿಮ್ಮಂತಿರುವ ಮನುಷ್ಯರು ಮಾತ್ರವಾಗಿರುವೆವು. ಆದರೆ ಅಲ್ಲಾಹು ತನ್ನ ದಾಸರ ಪೈಕಿ ತಾನಿಚ್ಛಿಸುವವರ ಮೇಲೆ ಔದಾರ್ಯ ತೋರುವನು. ಅಲ್ಲಾಹುವಿನ ಅನುಮತಿಯ ವಿನಾ ನಿಮಗೆ ಯಾವುದಾದರೂ ಆಧಾರ ಪ್ರಮಾಣವನ್ನು ತಂದುಕೊಡಲು ನಮ್ಮಿಂದಾಗದು. ಸತ್ಯವಿಶ್ವಾಸಿಗಳು ಅಲ್ಲಾಹುವಿನ ಮೇಲೆ ಭರವಸೆಯಿಡಲಿ.

[ಇಬ್ರಾಹೀಮ್ : 11]

أَوْ يَكُونَ لَكَ بَيْتٌ مِنْ زُخْرُفٍ أَوْ تَرْقَىٰ فِي السَّمَاءِ وَلَنْ نُؤْمِنَ لِرُقِيِّكَ حَتَّىٰ تُنَزِّلَ عَلَيْنَا كِتَابًا نَقْرَؤُهُ ۗ قُلْ سُبْحَانَ رَبِّي هَلْ كُنْتُ إِلَّا بَشَرًا رَسُولًا

ಅಥವಾ ತಮಗೆ ಒಂದು ಸ್ವರ್ಣ ಭವನ ವುಂಟಾಗುವ ತನಕ, ಅಥವಾ ತಾವು ಆಕಾಶಕ್ಕೆ ಏರಿ ಹೋಗುವ ತನಕ. ನಮಗೆ ಓದಬಹುದಾದ ಒಂದು ಗ್ರಂಥವನ್ನು ತಾವು ನಮ್ಮ ಬಳಿಗೆ ಇಳಿಸಿಕೊಡುವ ತನಕ ತಾವು ಏರಿ ಹೋಗಿರುವುದಾಗಿ ನಾವೆಂದೂ ವಿಶ್ವಾಸವಿಡಲಾರೆವು’. (ಓ ಪ್ರವಾದಿಯವರೇ!) ಹೇಳಿರಿ: ‘ನನ್ನ ಪ್ರಭು ಪರಮಪಾವನನು! ಸಂದೇಶ ವಾಹಕನಾಗಿರುವ ಒಬ್ಬ ಮಾನವ ಎಂಬುದರ ಹೊರತು ನಾನು ಇನ್ನೇನಾದರೂ ಆಗಿರುವೆನೇ?’[517]

ಟಿಪ್ಪಣಿಗಳು :
[517] ಹೇರಳವಾಗಿ ಅದ್ಭುತ ಕಾರ್ಯಗಳನ್ನು ತೋರಿಸುವ ಶಕ್ತಿ ಪ್ರವಾದಿಗಳಿಗಿಲ್ಲ. ಅಲ್ಲಾಹು ಅವರ ಮೂಲಕ ಅದ್ಭುತ ಕಾರ್ಯಗಳನ್ನು ಪ್ರಕಟಿಸಲು ಇಚ್ಛಿಸುವಾಗ ಅವು ಸಂಭವಿಸುತ್ತವೆ.

[ಅಲ್-ಇಸ್ರಾ'ಅ : 93]

ಇಲ್ಲಿ ನಾವು ತಿಳಿಯಬೇಕಾಗಿರುವುದು, ಪ್ರವಾದಿ ﷺ ರ ಕುರಿತು ಮನುಷ್ಯರ ಪರಮಾವಧಿ ತಿಳುವಳಿಕೆ ನಿಶ್ಚಯವಾಗಿಯೂ ತಾವೋರ್ವ ಮನುಷ್ಯರು ಹಾಗೂ ಅಲ್ಲಾಹನ ಸರ್ವ ಸೃಷ್ಟಿ ಗಳಲ್ಲಿ ಅತ್ಯುನ್ನತರು ಮಾತ್ರರಾಗಿದ್ದೀರಿ ಎಂದಾಗಿದೆ.

ಪ್ರವಾದಿ ﷺ ರ ಹಖೀಖತ್ತನ್ನು ತಿಳಿದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಎಷ್ಟು ಅಧ್ಯಯನ ನಡೆಸಿದರೂ ಮನುಷ್ಯರು ತಲುಪುವ ಪರಮಾವಧಿ ಜ್ಞಾನ ಪ್ರವಾದಿ ﷺ ರು ಇಲಾಹ್, ಅಥವಾ ಮಲಕ್ ಅಲ್ಲವೆಂದಾಗಿದೆ.

ಪ್ರತಿಯೊಬ್ಬ ಪ್ರವಾದಿಗಳಲ್ಲೂ ಸಾಧಾರಣತ್ವ, ಮತ್ತು ಅಸಾಧಾರಣತ್ವ ಇದೆ.

ಸಾಧಾರಣತ್ವ: ಎಂದರೆ ತಿನ್ನುವುದು, ಕುಡಿಯುವುದು, ನಿದ್ರಿಸುವುದು, ಮಾತನಾಡುವರು, ವ್ಯಾಪಾರ, ಪತಿ-ಪತ್ನಿ ಸಂಬಂಧ, ಮಲ ಮೂತ್ರ ವಿಸರ್ಜನೆ, ನೋವು ನಲಿವು, ಮಾಂಸ-ನೆತ್ತರುಗಳಿರುವ, ನಮ್ಮಂತೆಯೇ ರೂಪವಿರುವ ಸಾಮಾನ್ಯ ಮನುಷ್ಯರಾಗಿದ್ದಾರೆ.

ಅಸಾಧಾರಣತ್ವ: ಎಂದರೆ ಅಲ್ಲಾಹನಿಂದ ವಹೀಹ್ ಲಭಿಸುವವರೂ, ಪಪ್ರಪ್ರಥಮವಾಗಿ ಸ್ವರ್ಗ ಪ್ರವೇಶಿಸುವವರೂ, ಪರ ಲೋಕದಲ್ಲಿ ಶಫಾಅತ್ ಮಾಡಲು ಮೊದಲು ಅನುಮತಿ ಲಭಿಸುವವರೂ, ಹೌಲುಲ್ ಕೌಸರ್ ನಿಂದ ಪಾನೀಯ ಕೊಡುವ ಅರ್ಹತೆ ಲಭಿಸುವವರೂ, ಇತ್ಯಾದಿ... ಪ್ರವಾದಿ ﷺ ಆಗಿರುವರು. ಇದೆಲ್ಲವೂ ಅಸಾಧಾರಣ ವ್ಯಕ್ತಿತ್ವಕ್ಕೆ ಉದಾಹರಣೆಗಳಾಗಿವೆ.
ಎಂದರೆ, ಹೇರಳವಾಗಿ ಅದ್ಭುತ ಕಾರ್ಯಗಳನ್ನು ತೋರಿಸುವ ಶಕ್ತಿ ಪ್ರವಾದಿಗಳಿಗಿಲ್ಲ. ಅಲ್ಲಾಹುಅವರ ಮೂಲಕ ಅದ್ಭುತ ಕಾರ್ಯಗಳನ್ನು ಪ್ರಕಟಿಸಲು ಇಚ್ಛಿಸುವಾಗ ಅವು ಸಂಭವಿಸುತ್ತವೆ.

ಪ್ರತಿಯೊಬ್ಬ ಪ್ರವಾದಿಗಳನ್ನು ನಾವು ಗೌರವಿಸಬೇಕು, ಅವರು ನಡೆದು ಬಂದ ದಾರಿಯನ್ನು ನಾವು ಹಿಂಬಾಲಿಸಬೇಕು. ಆದರೆ ಯಹೂದಿ ಮತ್ತು ಕ್ರೈಸ್ತರಂತೆ ಪ್ರವಾದಿಗಳನ್ನು ದಿವ್ಯತ್ವಕ್ಕೇರಿಸುವುದು, ಹಾಗೂ ಸತ್ಯ ವಿಶ್ವಾಸಿಗಳನ್ನು ಅಪಮಾನಿಸಿ ತೇಜೋವಧೆ ಮಾಡುವುದು ಸಲ್ಲದು.
ಪ್ರವಾದಿಗಳ ಪದವಿಗೆ ನ್ಯೂನತೆಗಳನ್ನು ಉಂಟು ಮಾಡದೆ ಮಾನುಷಿಕ ಕಾರ್ಯಗಳೆಲ್ಲವೂ ಅವರಿಂದ ಸಂಭವಿಸುವುದರಲ್ಲಿ ವಿರೋಧವಿಲ್ಲ.

ಕುರಾನ್ ಹೇಳುವುದನ್ನು ನೋಡಿ.

وَمَا أَرْسَلْنَا قَبْلَكَ مِنَ الْمُرْسَلِينَ إِلَّا إِنَّهُمْ لَيَأْكُلُونَ الطَّعَامَ وَيَمْشُونَ فِي الْأَسْوَاقِ ۗ وَجَعَلْنَا بَعْضَكُمْ لِبَعْضٍ فِتْنَةً أَتَصْبِرُونَ ۗ وَكَانَ رَبُّكَ بَصِيرًا

ಆಹಾರವನ್ನು ಸೇವಿಸುವವರಾಗಿ ಮತ್ತು ಪೇಟೆಗಳಲ್ಲಿ ನಡೆಯುವವರಾಗಿ ಹೊರತು ತಮಗಿಂತ ಮುಂಚೆ ನಾವು ಸಂದೇಶವಾಹಕರ ಪೈಕಿ ಯಾರನ್ನೂ ಕಳುಹಿಸಿಲ್ಲ. ನೀವು ತಾಳ್ಮೆ ವಹಿಸುವಿರೋ ಎಂದು ನೋಡುವುದಕ್ಕಾಗಿ ನಿಮ್ಮಲ್ಲಿ ಕೆಲವರನ್ನು ನಾವು ಇತರ ಕೆಲವರಿಗೆ ಒಂದು ಪರೀಕ್ಷೆಯನ್ನಾಗಿ ಮಾಡಿರುವೆವು.[690] ತಮ್ಮ ಪ್ರಭು (ಎಲ್ಲವನ್ನೂ) ವೀಕ್ಷಿಸುವವನಾಗಿರುವನು.

ಟಿಪ್ಪಣಿಗಳು :
[690] ಅಲ್ಲಾಹು ಕೆಲವರಿಗೆ ಆಧ್ಯಾತ್ಮಿಕ ಪದವಿಗಳನ್ನು ನೀಡುತ್ತಾನೆ. ಕೆಲವರಿಗೆ ಲೌಕಿಕ ಸ್ಥಾನಮಾನಗಳನ್ನೂ ಸಮೃದ್ಧಿಯನ್ನೂ ನೀಡುತ್ತಾನೆ. ಕೆಲವರಿಗೆ ಏನನ್ನೂ ನೀಡುವುದಿಲ್ಲ. ಇವೆಲ್ಲವನ್ನೂ ಅಲ್ಲಾಹು ತನ್ನ ಯುಕ್ತಿಗನುಗುಣವಾಗಿಯೇ ಮಾಡುತ್ತಿದ್ದಾನೆ. ಅದನ್ನು ಅರ್ಥಮಾಡಿಕೊಂಡು ಕೃತಜ್ಞತಾಪೂರ್ವಕವಾಗಿ ಪ್ರತಿಕ್ರಿಯಿಸಲು ಮತ್ತು ಸಂಕಷ್ಟಗಳನ್ನು ತಾಳ್ಮೆಯೊಂದಿಗೆ ಎದುರಿಸಲು ಯಾರಿಗೆ ಸಾಧ್ಯವಾಗುತ್ತದೆ ಎಂದು ಅವನು ಪರೀಕ್ಷಿಸುತ್ತಾನೆ. ಪ್ರವಾದಿಯನ್ನು ಕಳುಹಿಸಿ ಅವರ ಬಗ್ಗೆ ನಿಮ್ಮ ನಿಲುವನ್ನೂ ಪರೀಕ್ಷಿಸುತ್ತಾನೆ. ನಿಮ್ಮ ವಿರೋಧಕ್ಕೆ ಪ್ರವಾದಿಯ ಪ್ರತಿಕ್ರಿಯೆ ಹೇಗಿರುತ್ತದೆಂಬುದನ್ನೂ ಪರೀಕ್ಷಿಸುತ್ತಾನೆ.

[ಅಲ್-ಫುರ್ಕಾನ್ : 20]

وَلَقَدْ أَرْسَلْنَا رُسُلًا مِنْ قَبْلِكَ وَجَعَلْنَا لَهُمْ أَزْوَاجًا وَذُرِّيَّةً ۚ وَمَا كَانَ لِرَسُولٍ أَنْ يَأْتِيَ بِآيَةٍ إِلَّا بِإِذْنِ اللَّهِ ۗ لِكُلِّ أَجَلٍ كِتَابٌ

ತಮಗಿಂತ ಮುಂಚೆಯೂ ನಾವು ಸಂದೇಶ ವಾಹಕರನ್ನು ಕಳುಹಿಸಿರುವೆವು. ಅವರಿಗೆ ನಾವು ಪತ್ನಿಯರನ್ನೂ ಸಂತತಿಗಳನ್ನೂ ಮಾಡಿಕೊಟ್ಟಿರುವೆವು. ಅಲ್ಲಾಹುವಿನ ಅನುಮತಿಯ ವಿನಾ ಯಾವುದೇ ಒಂದು ದೃಷ್ಟಾಂತವನ್ನು ತರಲು ಯಾವುದೇ ಸಂದೇಶವಾಹಕನಿಗೂ ಸಾಧ್ಯವಾಗಲಾರದು. ಪ್ರತಿಯೊಂದು ಕಾಲಕ್ಕೂ ಒಂದು (ಆಧಾರಪ್ರಮಾಣ) ಗ್ರಂಥವಿರುವುದು.

[ಅರ್ರ'ಅದ್ : 38]

ಪ್ರಮಾಣಗಳು ಪ್ರವಾದಿ ﷺ ರನ್ನು ಮೇಲಿನಂತೆ ಪರಿಚಯಿಸುತ್ತದೆ ಎನ್ನುವುದು ವ್ಯಕ್ತವಿದೆ. ಆದರೆ ಇಂದು ಸಮುದಾಯವು ಪ್ರವಾದಿ ﷺ ರ ಕುರಿತು ಇಸ್ಲಾಂ ಕಲಿಸದ ಕೆಲವು ವಿಶ್ವಾಸಗಳನ್ನು ಇಟ್ಟುಕೊಂಡಿರುವುದನ್ನು ನಾವು ನೋಡಬಹುದು.

ಉದಾ :- ಪ್ರವಾದಿಯವರಿಗೆ ನೆರಳಿಲ್ಲ, ಪ್ರವಾದಿಯವರ ಮೂತ್ರ ಶುದ್ದಿಯಾಗಿದೆ, ಅವರು ಆಧ್ಯಾತ್ಮಿಕವಾಗಿ ಮಲಕ್ ಆಗಿದ್ದಾರೆ, ಮುಂತಾದ ವಿಶ್ವಾಸಗಳು! ಇಂತಹ ಹಲವು ವಿಶ್ವಾಸಗಳನ್ನು ಸಮಸ್ತದವರು ಅವರ ಮದ್ರಸಾಗಳಲ್ಲಿ ಕೂಡಾ ಕಲಿಸಿ ಕೊಡುತ್ತಿದ್ದಾರೆ! ಆದರೆ ಇವುಗಳಿಗೆ ಇಸ್ಲಾಂನ ಪ್ರಮಾಣಗಳಲ್ಲಿ ಯಾವುದೇ ಆಧಾರಗಳಿಲ್ಲ.

ಸಂಕ್ಷಿಪ್ತವಾಗಿ ಹೇಳುವುದಾದರೆ ಪ್ರವಾದಿ ﷺ ರಿಗೆ ಧಾರಾಳ ವೈಶಿಷ್ಟತೆ ಇದ್ದರೂ ಮನುಷ್ಯ ಪ್ರಕೃತಿಯಲ್ಲಿ ಅವರು (ಹಸಿವು, ಬಾಯಾರಿಕೆ, ನೋವು, ದುಃಖ, ಭಾವನೆ, ವಿಚಾರ, ಮುಂತಾದ ಕಾರ್ಯಗಳಲ್ಲಿ) ನಮ್ಮಂತೆ ಓರ್ವ ಮನುಷ್ಯರಾಗಿದ್ದರು. ಅದೇ ಸಮಯ ನುಬುವತ್ ನ ಎಲ್ಲಾ ವೈಶಿಷ್ಟತೆಗಳು ಪ್ರವಾದಿ ﷺ ರಲ್ಲಿ ಮೇಳೈಸಿತ್ತು. ಆದರೆ ಅವರು ಇಚ್ಛಿಸುವಾಗ ಅತಿಮಾನುಷ ದೃಷ್ಟಾಂತಗಳನ್ನು ಪ್ರಕಟಿಸಲು, ಹಾಗೂ ಅಗೋಚರ ಕಾರ್ಯಗಳನ್ನು ತಿಳಿಯಲು ಅವರಿಗೆ ಸಾಧ್ಯವಿರಲಿಲ್ಲವೆಂದು ನಾವು ತಿಳಿದುಕೊಂಡೆವು. ಇದು ಈ ವಿಷಯದಲ್ಲಿ ಇಸ್ಲಾಂನ ನೈಜ ದೃಷ್ಟಿಕೋನವಾಗಿದೆ.

ಸಲಫಿಗಗಳು ಇದಕ್ಕಿಂತ ಭಿನ್ನವಾದ ವಿಶ್ವಾಸವನ್ನು ಯಾವತ್ತೂ ಇರಿಸಿಕೊಂಡವರಲ್ಲ. ಸಲಫಿಗಳ ಮಟ್ಟಿಗೆ ಹೇಳುವುದಾದರೆ ಕುರಾನ್ ಮತ್ತು ಸ್ವಹೀಹ್ ಆದ ಹದೀಸ್'ಗಳಲ್ಲಿ ಪ್ರವಾದಿ ﷺ ಹಾಗೂ ಇತರ ಪ್ರವಾದಿಗಳ ಕುರಿತು ಯಾವ ವೈಶಿಷ್ಟತೆಗಳನ್ನು ವಿವರಿಸಲಾಗಿದೆಯೋ ಅದರಲ್ಲಿ ಯಾವುದನ್ನೂ ನಿಷೇಧಿಸದೆ ಪ್ರತಿಯೊಂದನ್ನು ಯಥಾಪ್ರಕಾರ ಅಂಗೀಕರಿಸಿ ಪ್ರಚುರಪಡಿಸುವುದಾಗಿದೆ.

ಕರಾಮತ್ ಮುಅ್'ಜಿಝತ್ ಗಿಂತ ಮಿಗಿಲೇ?

ಕರಾಮತ್ ಮುಅ್'ಜಿಝತ್ ಗಿಂತಲೂ ಮಿಗಿಲೇ?

ಅಲ್ಲಾಹನು ಪರಿಶುದ್ಧ ಕುರ್'ಆನಿನಲ್ಲಿ ವಿವರಿಸುವುದನ್ನು ಗಮನಿಸಿ...

قَالُوا يَا مُوسَىٰ إِمَّا أَنْ تُلْقِيَ وَإِمَّا أَنْ نَكُونَ أَوَّلَ مَنْ أَلْقَىٰ

ಅವರು (ಮಾಂತ್ರಿಕರು) ಹೇಳಿದರು: ‘ಓ ಮೂಸಾ! ಒಂದೋ ತಾವು ಹಾಕಿರಿ ಅಥವಾ ಮೊದಲು ಹಾಕುವವರು ನಾವಾಗುವೆವು’.

 ... قَالَ بَلْ أَلْقُوا ۖ فَإِذَا حِبَالُهُمْ وَعِصِيُّهُمْ يُخَيَّلُ إِلَيْهِ مِنْ سِحْرِهِمْ أَنَّهَا تَسْعَىٰ

ಅವರು (ಮೂಸಾ) ಹೇಳಿದರು: ‘ಅಲ್ಲ, ನೀವು ಹಾಕಿರಿ’. ಆಗ ಅಗೋ! ಅವರ ಮಾಂತ್ರಿಕತೆಯಿಂದಾಗಿ ಅವರ ಹಗ್ಗಗಳು ಮತ್ತು ಬೆತ್ತಗಳು ಚಲಿಸುತ್ತಿರುವುದಾಗಿ ಅವರಿಗೆ ಭಾಸವಾಯಿತು.

 ... فَأَوْجَسَ فِي نَفْسِهِ خِيفَةً مُوسَىٰ

ಆಗ ಮೂಸಾರಿಗೆ ತಮ್ಮ ಮನದಲ್ಲಿ ಭಯ ಮೂಡಿತು.

 ... قُلْنَا لَا تَخَفْ إِنَّكَ أَنْتَ الْأَعْلَىٰ

ನಾವು ಹೇಳಿದೆವು: ‘ಭಯಪಡದಿರಿ. ಖಂಡಿತವಾ ಗಿಯೂ ಮೇಲುಗೈ ಸಾಧಿಸುವವರು ತಾವೇ ಆಗಿರುವಿರಿ.

 ... وَأَلْقِ مَا فِي يَمِينِكَ تَلْقَفْ مَا صَنَعُوا ۖ إِنَّمَا صَنَعُوا كَيْدُ سَاحِرٍ ۖ وَلَا يُفْلِحُ السَّاحِرُ حَيْثُ أَتَىٰ

ತಾವು ತಮ್ಮ ಬಲಗೈಯ್ಯಲ್ಲಿರುವುದನ್ನು (ಬೆತ್ತವನ್ನು) ಹಾಕಿರಿ. ಅವರು ನಿರ್ಮಿಸಿದ್ದೆಲ್ಲವನ್ನೂ ಅದು ನುಂಗುವುದು’. ಅವರು ಮಾಡಿರುವುದು ಮಾಂತ್ರಿಕನ ತಂತ್ರ ಮಾತ್ರವಾಗಿದೆ. ಮಾಂತ್ರಿಕನು ಎಲ್ಲೇ ಹೋದರೂ ಯಶಸ್ವಿಯಾಗಲಾರನು.

[ತ್ವಾಹಾ : 65 - 69]

 ಔಲಿಯಾಗಳು ಸ್ವಂತ ಇಚ್ಛೆಯಂತೆ ಕರಾಮತ್ ತೋರಿಸುತ್ತಾರೆ ಎಂದು ಅಲ್ಲಾಹನ ವಿಧಿ ವಿಶ್ವಾಸದ ನಿಯಮಗಳನ್ನು ಉಲ್ಲಂಘಿಸಿ ಇಮಾಮರ ಅಭಿಪ್ರಾಯಗಳನ್ನು, ಹದೀಸ್ ಗಳನ್ನು, ಕುರಾನಿನ ಸೂಕ್ತಿಗಳನ್ನು ತನ್ನ ವಾದವನ್ನು ಜಯಿಸಲು ಬೇಕಾಬಿಟ್ಟಿ ದುರ್ವ್ಯಾಖ್ಯಾನ ಮಾಡುವವರ ಗಮನಕ್ಕೆ.🔽

ಸೂರ ತ್ವಾಹಾ 67 ನೇ ವಚನದಲ್ಲಿ  ಮೂಸಾ  (ಅಸ)ರು ಹೆದರಿದ ಘಟನೆ ನಮಗೆ ತಿಳಿದು ಬರುತ್ತದೆ. ಮತ್ತು 68, 69 ನೇ ವಚನದಲ್ಲಿ ಅಲ್ಲಾಹನ ವಹೀಹ್ ನ ಬಗ್ಗೆ ವಿವರಿಸಿದ್ದನ್ನು ನೋಡಬಹುದು.

ಇಲ್ಲಿ ಯಾವುದೇ ಪ್ರವಾದಿಗಳಿಗೂ ಅಲ್ಲಾಹನ ವಹೀಹ್ ಇಲ್ಲದೇ ಸ್ವಂತ ಇಚ್ಛೆಯಂತೆ ಮುಅ್'ಜಿಝತನ್ನು ಪ್ರಕಟಿಸಲು ಸಾಧ್ಯವಿಲ್ಲ ಎಂದು ತಿಳಿದು ಬರುತ್ತದೆ. ಒಂದು ವೇಳೆ ಸ್ವಂತ ಇಚ್ಛೆಯಂತೆ ಪ್ರಕಟಿಸಲು ಸಾಮರ್ಥ್ಯವಿದೆ ಎಂದು ವಾದಿಸುವುದಾದರೆ ಮೇಲಿನ 67 ನೇ ಸೂಕ್ತಿಯಲ್ಲಿ ಇರುವಂತೆ ಮೂಸಾ (ಅಸ)ರು ಹೆದರುವ ಆವಶ್ಯಕತೆಯಾದರೂ ಏನು?...
ಮುಅ್'ಜಿಝತ್ ದಅವತ್ತಿನ ಭಾಗವಾಗಿದೆ ಎಂದ ಮಾತ್ರಕ್ಕೆ ಅಲ್ಲಾಹನ ವಹೀಹ್ ಇಲ್ಲದೇ ಸ್ವಂತ ಇಚ್ಛೆಯಂತೆ ಮುಅ್'ಜಿಝತನ್ನು ಪ್ರಕಟಿಸಲು ಸಾಧ್ಯವಿಲ್ಲ.

🔹ಕರಾಮತ್ ಔಲಿಯಾಗಳ  ಸ್ವಂತ ಸಾಮರ್ಥ್ಯದಿಂದ ಎಂದು ವಾದಿಸುವವರೇ... ಸ್ವಲ್ಪವಾದರೂ ಚಿಂತಿಸಿ...

ಅಲ್ಲಾಹನು ಅನುಗ್ರಹಿಸಲಿ...

✍ Abu Muadh.

ಸಮಸ್ತ ಸುನ್ನಿಗಳು ಓದುತ್ತಿರುವ ಖುತುಬ ಪ್ರವಾದಿ (ಸಅ)ರು ಓದಿದ್ದೇ ಆಗಿದೆಯೇ?

ಸಮಸ್ತ ಸುನ್ನಿಗಳು ಓದುತ್ತಿರುವ ಖುತುಬಾ ಪ್ರವಾದಿ (ಸಅ)ರು ಓದಿದ್ದೇ ಆಗಿದೆಯೇ?


ಸುನ್ನೀ ಮಸೀದಿಗಳಲ್ಲಿ ಓದುವ ನಬಾತಿ ಖುತುಬವು ಹಿಜ್ರ 335 ರಲ್ಲಿ ಜನಿಸಿ ಹಿಜ್ರ 374 ರಲ್ಲಿ ಮರಣ ಹೊಂದಿದ ಈಜಿಪ್ಟ್ ನ ಪಂಡಿತರಲ್ಲಿ ಒಬ್ಬರಾದ ಇಬ್ನು ನಬಾತತ್ ಅಲ್ ಮಿಸ್ರೀ ರವರು ಒಂದು ಕಾಲದಲ್ಲಿ ಪಾರಾಯಣ ಮಾಡಿದಂತಹ ಕುತುಬವಾಗಿದೆ. ಇದನ್ನು ಸುನ್ನೀ ಮಸೀದಿಗಳಲ್ಲಿ ಹುಟ್ಟಿನಿಂದ ಸಾಯುವ ವರೆಗೆ ಪುನರಾವರ್ತಿಸಿ ಪ್ರತೀ ವರ್ಷ ಓದಿದ್ದನ್ನೇ ಓದಲಾಗುತ್ತಿದೆ. ಈ ನಬಾತಿ ಖುತುಬವನ್ನು ಕೆ.ವಿ ಮೊಹಮ್ಮದ್ ಮುಸ್ಲಿಯಾರ್ ರವರು ಭಾಷಾಂತರಿಸಿದ 'ನಬಾತಿ ಖುತುಬ ಪರಿಭಾಷ ವಿವರ್ತನಂ' ಎಂಬ ಮಲಯಾಳಂ ಭಾಷಾಂತರ ಲಭ್ಯವಿದೆ. ಆದರೆ ಇತ್ತೀಚೆಗೆ ಎ.ಪಿ ಸುನ್ನಿಗಳು ಹೊಸತಾಗಿ ಖುತುಬದ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಒಟ್ಟಿನಲ್ಲಿ ಸುನ್ನಿಗಳ ವಾದವೇನೆಂದರೆ, ಪ್ರವಾದಿ (ﷺ) ರ ಖುತುಬಾದ ಭಾಷೆ ಅರಬಿಯಾಗಿದೆ ಎಂದಾಗಿದೆ.

ಪ್ರವಾದಿ (ಸಅ) ರು ಅರಬಿಯಲ್ಲಿ ಕುತುಬ ನಿರ್ವಹಿಸಿದ್ದರಿಂದ ಕುತುಬ ಅರಬಿಯಲ್ಲೇ ಆಗಬೇಕೆಂದು ವಾದಿಸುವವರು ಈಗ ಓದುತ್ತಿರುವ ಕುತುಬ ಪ್ರವಾದಿ (ಸಅ) ಓದಿದ್ದೇ ಆಗಿದೆಯೇ ಎಂದು ಪರಿಶೀಲಿಸಬೇಕಾಗಿದೆ.


ಆದರೆ ಪ್ರಸ್ತುತ ತೌಹೀದ್ ನ ಅಥವಾ ಸಲಫಿ ಮಸೀದಿಗಳಲ್ಲಿ ನಿರ್ವಹಿಸುತ್ತಿರುವ ಖುತುಬಾ ಪ್ರವಾದಿ  (ﷺ) ರ ಚರ್ಯೆಯಂತಿದೆ.


وَحَدَّثَنَا يَحْيَى بْنُ يَحْيَى، وَحَسَنُ بْنُ الرَّبِيعِ، وَأَبُو بَكْرِ بْنُ أَبِي شَيْبَةَ قَالَ يَحْيَى أَخْبَرَنَا وَقَالَ الآخَرَانِ، حَدَّثَنَا أَبُو الأَحْوَصِ، عَنْ سِمَاكٍ، عَنْ جَابِرِ بْنِ سَمُرَةَ، قَالَ كَانَتْ لِلنَّبِيِّ صلى الله عليه وسلم خُطْبَتَانِ يَجْلِسُ بَيْنَهُمَا يَقْرَأُ الْقُرْآنَ وَيُذَكِّرُ النَّاسَ ‏.‏


ಜಾಬಿರ್ ಇಬ್ನು ಸಮ್ರಾ (ರ) ಹೇಳುತ್ತಾರೆ: ಪ್ರವಾದಿ (ﷺ) ರಿಗೆ ಎರಡು ಖುತುಬಗಳಿದ್ದವು, ಆ ಎರಡು ಖುತುಬಗಳ ಮಧ್ಯೆ ಕುಳಿತುಕೊಳ್ಳುತ್ತಿದ್ದರು, ಕುರ್'ಆನ್ ಓದುತ್ತಿದ್ದರು ಮತ್ತು ಜನರಿಗೆ ಪ್ರಚೋದಿಸುತ್ತಿದ್ದರು ಅಥವಾ ಉಪದೇಶಿಸುತ್ತಿದ್ದರು.


(ಸಹೀಹ್ ಮುಸ್ಲಿಮ್ 862)


ಈ ಮೇಲಿನ ಪುರಾವೆಯಲ್ಲಿ ತಿಳಿಯುವುದೇನೆಂದರೆ ಅರಬೇತರ ರಾಷ್ಟ್ರಗಳಲ್ಲಿ ಕುರ್'ಆನ್ ಓದಿ ಜನರಿಗೆ ಉಪದೇಶ ಮಾಡಬೇಕಾದರೆ ಅರಬಿ ಅಲ್ಲದ ಭಾಷೆಯನ್ನೇ ಬಳಸಬೇಕಾಗುತ್ತದೆ. ಆದ್ದರಿಂದಲೇ ತೌಹೀದ್ ಅಥವಾ ಸಲಫಿ ಮಸೀದಿಗಳಲ್ಲಿ ನಿರ್ವಹಿಸುತ್ತಿರುವ ಖುತುಬಗಳು ಪ್ರವಾದಿ  (ﷺ) ರ ಖುತುಬಕ್ಕೆ ಸಮಾನವಾಗುತ್ತದೆ.

✍ Abu Muadh.

ಮಕ್ಕಾ ಮುಶ್ರಿಕರು ಮತ್ತು ಮುಸ್ಲಿಮರ ನಡುವೆ ಇದ್ದ ತರ್ಕ.

ಮಕ್ಕಾ ಮುಶ್ರಿಕರು ಮತ್ತು ಮುಸ್ಲಿಮರ ನಡುವೆ ಇದ್ದ ತರ್ಕ.

ಮಕ್ಕಾ ಮುಶ್ರಿಕರು ಮತ್ತು ಮುಸ್ಲಿಮರ ನಡುವೆ ಇದ್ದ ತರ್ಕ ಅಲ್ಲಾಹನ ವಹದಾನಿಯತ್ (ಅಲ್ಲಾಹನ ಏಕತ್ವ) ವಿಷಯದಲ್ಲಾಗಿದೆ.

ಅಬ್ರಹತ್ ನ ಸೈನ್ಯವು ಕಅಬಾಲಯವನ್ನು ಒಡೆದು ಹಾಕಲು ಬರುವಾಗ ಕಅಬಾಲಯದ ಆಧಿಪತ್ಯವು ಮುಶ್ರಿಕ್ ಆದ ಅಬ್ದುಲ್ ಮುತ್ತಲಿಬ್ ನ ಕೈಯಲ್ಲಾಗಿತ್ತು. ಆ ಸಂಧರ್ಭದಲ್ಲಿ ಅಬ್ದುಲ್ ಮುತ್ತಲಿಬ್ ನ ಪ್ರಾರ್ಥನೆ ಈ ರೀತಿಯಾಗಿದೆ.

اللهم يا رب هاذ البيت
 "ಈ ಮನೆಯ (ಕಅಬಾಲಯ) ಪರಿಪಾಲಕನಾದ ಓ ಅಲ್ಲಾಹನೇ" ಎಂದಾಗಿತ್ತು.

ಕಅಬಾಲಯವು ಅಲ್ಲಾಹನ ಭವನ ಇದನ್ನು ಅಲ್ಲಾಹನು ಸಂರಕ್ಷಿಸುತ್ತಾನೆ ಎಂದು ಮಕ್ಕಾ ಮುಶ್ರಿಕರಿಗೆ ಧೃಡ ವಿಶ್ವಾಸವಿತ್ತು. ಆದ್ದರಿಂದಲೇ ಅಬ್ದುಲ್ ಮುತ್ತಲಿಬ್ ಅಲ್ಲಾಹನನ್ನು ಕರೆದು ಪ್ರಾರ್ಥಿಸಿದ್ದು.

ಬದ್ರ್ ಯುದ್ಧದ ಸಂಧರ್ಭದಲ್ಲಿ ಅಬೂ ಜಹಲ್ ಕೂಡ ಯುದ್ಧಕ್ಕೆ ಹೊರಡುವ ಮುನ್ನ ಪವಿತ್ರ ಕ'ಅಬಾಲಯದ ಬಟ್ಟೆ ಹಿಡಿದು ಈ ಎರಡು ಗುಂಪುಗಳಲ್ಲಿ ಸತ್ಯ ಎಲ್ಲಿದೆಯೋ ಅಲ್ಲಿಗೇ ವಿಜಯ ಒಲಿದುಬರಲಿ ಎಂದು ಅಲ್ಲಾಹನಲ್ಲಿ ಪ್ರಾರ್ಥಿಸಿರುವುದಾಗಿ ನಮಗೆ ಚರಿತ್ರೆಗಳಲ್ಲಿ ಕಾಣಬಹುದಾಗಿದೆ.

ಇನ್ನು ಮಕ್ಕಾ ಮುಶ್ರಿಕರ ವಿಶ್ವಾಸ ಮತ್ತು ನಾಮಧಾರಿ ಮುಸ್ಲಿಯಾರುಗಳ ವಿಶ್ವಾಸವನ್ನು ಪರಿಶೀಲಿಸೋಣ...

ಸ್ವಹೀಹ್ ಮುಸ್ಲಿಮ್ ನಲ್ಲಿರುವ ಒಂದು ಹದೀಸನ್ನು ಗಮನಿಸಿ. 🔽

كتاب الحج
باب التَّلْبِيَةِ وَصِفَتِهَا وَوَقْتِهَا ‏

وَحَدَّثَنِي عَبَّاسُ بْنُ عَبْدِ الْعَظِيمِ الْعَنْبَرِيُّ، حَدَّثَنَا النَّضْرُ بْنُ مُحَمَّدٍ الْيَمَامِيُّ، حَدَّثَنَا عِكْرِمَةُ، - يَعْنِي ابْنَ عَمَّارٍ - حَدَّثَنَا أَبُو زُمَيْلٍ، عَنِ ابْنِ عَبَّاسٍ، - رضى الله عنهما - قَالَ كَانَ الْمُشْرِكُونَ يَقُولُونَ لَبَّيْكَ لاَ شَرِيكَ لَكَ - قَالَ - فَيَقُولُ رَسُولُ اللَّهِ صلى الله عليه وسلم ‏ "‏ وَيْلَكُمْ قَدْ قَدْ ‏"‏ ‏.‏ فَيَقُولُونَ إِلاَّ شَرِيكًا هُوَ لَكَ تَمْلِكُهُ وَمَا مَلَكَ ‏.‏ يَقُولُونَ هَذَا وَهُمْ يَطُوفُونَ بِالْبَيْتِ ‏.‏

Sahih Muslim 1185

ಮಕ್ಕಾ ಮುಶ್ರಿಕರು ಹಜ್ಜ್ ನಿರ್ವಹಿಸುವ ವೇಳೆ ಲಬ್ಬೈಕಲ್ಲಾಹುಮ್ಮ ಲಬ್ಬೈಕ್ ಎಂಬ ತಲ್ಬೀಯತ್ ಹೇಳುವ ಸಂಧರ್ಭದಲ್ಲಿ  "ಲಬ್ಬೈಕ ಲಾ ಶರೀಕ ಲಕ" ಎಂಬಲ್ಲಿಗೆ ಮುಟ್ಟುವಾಗ ಪ್ರವಾದಿ ﷺ ರು ಮಕ್ಕಾ ಮುಶ್ರಿಕರನ್ನು "ನಿಲ್ಲಿಸಿ, ಸಾಕು ಸಾಕು ನಿಮಗೆ ನಾಶ" ಎಂದು ತಡೆಯುತ್ತಾರೆ. ಆದರೆ ಮಕ್ಕಾ ಮುಶ್ರಿಕರು ಅದನ್ನು ಲೆಕ್ಕಿಸದೆ ಅವರು ಶಿರ್ಕ್ ನ ಘೋಷಣೆಯನ್ನು ಮುಂದುವರಿಸುತ್ತಾರೆ. ಅದು ಈ ಕೆಳಗಿನ ರೀತಿಯಲ್ಲಾಗಿದೆ.

فَيَقُولُونَ إِلاَّ شَرِيكًا هُوَ لَكَ تَمْلِكُهُ وَمَا مَلَكَ

"ನಿನಗೆ (ಅಲ್ಲಾಹನಿಗೆ) ಕೆಲವು ಸಹಭಾಗಿಗಳಿದ್ದಾರೆ (ಆರಾಧ್ಯರು). ಅವರು ನೀನು (ಅಲ್ಲಾಹನು) ಕೊಟ್ಟಂತಹ ಸಾಮರ್ಥ್ಯ ದಿಂದಲ್ಲದೆ ಅವರಿಗೆ ಎನೂ ಮಾಡಲು ಸಾಧ್ಯವಿಲ್ಲ". ಇದಾಗಿದೆ ಮಕ್ಕಾ ಮುಶ್ರಿಕರ ವಿಶ್ವಾಸ.

ವಿಪರ್ಯಾಸವೇನೆಂದರೆ ಮುಸ್ಲಿಂ ನಾಮಧಾರಿ ಮುಸ್ಲಿಯಾರುಗಳು ಇದೇ ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ. ಮುಸ್ಲಿಯಾರುಗಳ ವಿಶ್ವಾಸ ಮರಣ ಹೊಂದಿದ ಔಲಿಯಾ, ಅಂಬಿಯಾ, ಶುಹದಾಗಳು ಅಲ್ಲಾಹನು ಕೊಟ್ಟಂತಹ ಸಾಮರ್ಥ್ಯದಿಂದ ಸಹಾಯವನ್ನು ಮಾಡುತ್ತಾರೆ ಎಂದಾಗಿದೆ. ಇದೇ ವಿಶ್ವಾಸವನ್ನು ಇಟ್ಟುಕೊಂಡ ಮಕ್ಕಾ ಮುಶ್ರಿಕರು ಇಸ್ಲಾಮಿನಿಂದ ಹೊರಗೂ ಮತ್ತು ಮುಸ್ಲಿಯಾರುಗಳು ಇಸ್ಲಾಮಿನ ಒಳಗೂ ಆಗುವುದಾದರೂ ಹೇಗೆ? ಎಂಬುವುದನ್ನು ಚಿಂತಿಸಬೇಕಾಗಿದೆ.

ಇಲ್ಲಿ ನಮಗೆ ತಿಳಿದು ಬರುವ ವ್ಯತ್ಯಾಸವೇನೆಂದರೆ ಸಮಸ್ತ ಮುಸ್ಲಿಯಾರುಗಳು ಅಲ್ಲಾಹನಿಗೆ ಸಹಭಾಗಿ ಇಲ್ಲ ಅಂತ ಹೇಳಿ ಮಹಾತ್ಮರನ್ನು ಕರೆದು ಇಸ್ತಿಗಾಸ ಮಾಡುತ್ತಾರೆ. ಮಕ್ಕಾ ಮುಶ್ರಿಕರು ಅಲ್ಲಾಹನಿಗೆ ಸಹಭಾಗಿ ಇದ್ದಾರೆ ಎಂದು ಹೇಳಿ ಮಹಾತ್ಮರನ್ನು ಕರೆದು ಇಸ್ತಿಗಾಸ ಮಾಡುತ್ತಾರೆ. ಎಂದರೆ ಮಕ್ಕಾ ಮುಶ್ರಿಕರ ವಿಶ್ವಾದಲ್ಲಿ ಸ್ಥಿರತೆ ಇದೆ. ಮುಸ್ಲಿಯಾರುಗಳ ವಿಶ್ವಾಸದಲ್ಲಿ ಸ್ಥಿರತೆ ಇಲ್ಲ ಎಂಬುವುದು ಸ್ಪಷ್ಟವಾಗುತ್ತಿದೆ.

ಇನ್ನು ಮಕ್ಕಾ ಮುಶ್ರಿಕ್ ಗಳು ತಮ್ಮ ಕಷ್ಟಕಾಲದಲ್ಲಿ ಅಲ್ಲಾಹನೊಂದಿಗೆ ಮಾತ್ರ ಸಹಾಯ ಯಾಚಿಸಿದ್ದಾಗಿಯೂ ಆನಂತರ ಆ ಕಷ್ಟಗಳು ದೂರವಾಗಿ ಸುಖ ಬಂದಾಗ ತಮ್ಮ ಆರಾಧ್ಯರೆಡೆಗೆ ಮರಳಿದ್ದಾಗಿಯೂ ಕುರ್ ಆನ್ ಹೇಳುತ್ತೆ.

ಆದರೆ ಇಂದು ಈ ಮಕ್ಕಾ ಮುಶ್ರಿಕ್ ಗಳಿಗಿಂತಲೂ ಭೀಕರವಾದ ವಿಶ್ವಾಸವಿಟ್ಟು ನಮ್ಮ ನಡುವೆ ಮುಸ್ಲಿಮ್ ನಾಮಧಾರಿ ಮುಸ್ಲಿಯಾರುಗಳು ಬದುಕುತ್ತಿದ್ದಾರೆ. ನೀವೇ ಗಮನಿಸಿ ತಾಯಿಯು ತೊಟ್ಟಿಲು ತೂಗುವಾಗ "ಲಾಹಿಲಾಹ ಇಲ್ಲಲ್ಲಾಹು ಲಾಹಿಲಾಹ ಇಲ್ಲಲ್ಲಾ" ಎಂಬ ಹಾಡನ್ನು ಹಾಡುವುದಾದರೆ ಅದೇ ಮಗು ತೊಟ್ಟಿಲಿನಿಂದ ಕೆಳಗೆ ಬೀಳುವಾಗ ಕರೆಯುವುದು "ಯಾ ಬದರಿಂಙಳೇ, ಯಾ ಮುಹಿಯ್ಯದ್ಧಿ ಶೈಖೇ ಎಂದು. ಇದಾಗಿದೆ ಮುಸ್ಲಿಯಾರುಗಳು ತಮ್ಮ ಅನುಯಾಯಿಗಳಿಗೆ ಕಲಿಸಿ ಕೊಡುತ್ತಿರುವುದು. ಎಲ್ಲಿ ಹೋಯಿತು ವಿಶ್ವಾಸ...? ಇವರಾಗಿದ್ದಾರೆಯೇ "ಲಾಹಿಲಾಹ ಇಲ್ಲಲಾಹ್" ನಲ್ಲಿ ವಿಶ್ವಾಸವಿಡುವ ಮುಸಲ್ಮಾನರು...?

ಇಂತಹ ನಾಮಧಾರಿ ಪುರೋಹಿತರ ಕೆಡುಕಿನಿಂದ ನಮ್ಮನ್ನೂ ನಮ್ಮ ಕುಟುಂಬವನ್ನೂ ಅಲ್ಲಾಹನು ರಕ್ಷಿಸಲಿ.


✍🏼 Abu Muadh

ದಿಕ್ರ್ ಹಲ್ಕಾ ಪ್ರಮಾಣಗಳಿಗೆ ವಿರುದ್ಧವೂ ಅನಿಸ್ಲಾಮಿಕವೂ ಆಗಿದೆ.

ದಿಕ್ರ್ ಹಲ್ಕಾ ಪ್ರಮಾಣಗಳಿಗೆ ವಿರುದ್ಧವೂ ಅನಿಸ್ಲಾಮಿಕವೂ ಆಗಿದೆ.

ನಾವು ಫಜ್ರ್ ನಮಾಝ್'ಗೆ ತೆರಳುವ ಮುಂಚೆ ಇಬ್ನ್ ಮಸ್'ಹೂದ್(ರ) ರೊಡನೆ ಸೇರಿ ಮಸೀದಿಗೆ ಹೋಗಲು ಅವರ ಮನೆಯ ಜಗಲಿಯ ಮೇಲೆ ಕುಳಿತಿದ್ದೆವು. ಅಷ್ಟರಲ್ಲಿ ಅಬೂ ಮೂಸ ಅಲ್ ಅಶಹರೀ(ರ) ಯವರು ಅಲ್ಲಿಗೆ ಬಂದು "ಅಬೂ ಅಬ್ದುರಹ್ಮಾನ್(ಇಬ್ನ್ ಮಸ್'ಹೂದ್) ಇನ್ನೂ ಮಸೀದಿಗೆ ಹೊರಟಿಲ್ವ ಎಂದು ಕೇಳಿದರು.

ನಾವು "ಇಲ್ಲ" ಎಂದು ಉತ್ತರಿಸಿದೆವು.

ಅಬೂ ಮೂಸ ಅಲ್ ಅಶಹರಿ(ರ) ರವರು  ನಮ್ಮೊಂದಿಗೆ ಸೇರಿ ಇಬ್ನ್ ಮಸ್'ಹೂದ್(ರ)ರ ದಾರಿ ಕಾಯ ತೊಡಗಿದರು. ಸ್ವಲ್ಪ ಸಮಯದ ನಂತರ ಇಬ್ನ್ ಮಸ್'ಹೂದ್(ರ) ರವರು ಮನೆಯಿಂದ ಹೊರ ಬಂದಾಗ ಅಬುಲ್ ಮೂಸಾ ಅಲ್ ಅಶ್'ಹರಿ(ರ) ಯವರು ಇಬ್ನ್ ಮಸ್'ಹೂದ್'ರಲ್ಲಿ ಹೇಳಿದರು;

"ಓ, ಅಬೂ ಅಬ್ದುರಹ್ಮಾನ್(ಇಬ್ನ್ ಮಸ್'ಹೂದ್)! ಅನುವದನೀಯವಲ್ಲದ್ದನ್ನು ನಾನು ಮಸೀದಿಯಲ್ಲಿ ಕಂಡೆನು."

ಇಬ್ನ್ ಮಸ್'ಹೂದ್(ರ) ಕೇಳಿದರು: "ಏನದು?"

ಅಬೂ ಮೂಸಾ ಅಲ್ ಅಶಹರಿ(ರ) ರವರು ಹೇಳಿದರು; "ಮಸೀದಿಯಲ್ಲಿ ಜನರು ಗುಂಪು ಗುಂಪಾಗಿ  ವೃತ್ತಾಕಾರದಲ್ಲಿ ಕುಳಿತು ನಮಾಝ್'ಗಾಗಿ ಕಾಯುತ್ತಿರುವುದನ್ನು ನಾನು ಕಂಡೆ, ಅದರಲ್ಲಿ ಪ್ರತೀ ಗುಂಪಿಗೂ ಒಬ್ಬ ನಾಯಕನಿದ್ದ. ಮತ್ತು ಅಲ್ಲಿ ಕುಳಿತಿದ್ದ ಪ್ರತೀ ವ್ಯಕ್ತಿಯ ಬಳಿಯೂ ಚಿಕ್ಕ ಚಿಕ್ಕ ಕಲ್ಲುಗಳಿದ್ದವು."

ಗುಂಪಿನ ನಾಯಕ ಇತರರಲ್ಲಿ ಹೇಳುತ್ತಿದ್ದ "ಅಲ್ಲಾಹು ಅಕ್ಬರ್ ಎಂದು ನೂರು ಬಾರಿ ಹೇಳಿರಿ." ಆಗ ಅವರು ಅಲ್ಲಾಹು ಅಕ್ಬರ್ ಎಂದು ನೂರು ಬಾರಿ ಹೇಳುತ್ತಿದ್ದರು. ಅದೇ ರೀತಿ "ಲಾಹಿಲಾಹ ಇಲ್ಲಲ್ಲಾಹ್" ಹಾಗೂ "ಸುಬ್'ಹಾನಲ್ಲಹ್" ಎಂದು ನೂರು ಬಾರಿ ಹೇಳಲು ಗುಂಪಿನ ನಾಯಕ ಕರೆ ನೀಡುತ್ತಿದ್ದ , ಅವರು ನೂರು ಬಾರಿ ಹೇಳುತ್ತಿದ್ದರು.

ನಂತರ ಇಬ್ನ್ ಮಸ್'ಹೂದ್(ರ) ಕೇಳಿದರು; "ನೀನು ಅವರಿಗೆ ಏನು ಹೇಳಿದೆ?"

ಅಬುಲ್ ಮೂಸಾ ಅಲ್ ಅಶಹರಿ(ರ) ಹೇಳಿದರು; "ನಾನು ಏನನ್ನೂ ಹೇಳಲಿಲ್ಲ, ನಾನು ನಿಮ್ಮ ಅಭಿಪ್ರಾಯಕ್ಕಾಗಿ ಕಾಯುತ್ತಿರುವೆನು."

ಅಬ್ದುಲ್ಲಾಹ್ ಇಬ್ನ್ ಮಸ್'ಹೂದ್(ರ) ಕೋಪದಿಂದ ಹೇಳಿದರು: "ನೀನು ಯಾಕೆ ಅವರಿಗೆ ಅವರ ಪಾಪಗಳನ್ನು ಎಣಿಕೆ ಮಾಡಲು ಆಜ್ಞಾಪಿಸಲಿಲ್ಲ..?

ನಂತರ, ಅಬ್ದುಲ್ಲಾಹ್ ಇಬ್ನ್ ಮಸ್'ಹೂದ್(ರ) ರವರು ಮುಂದೆ ನಡೆದು ಹೋದರು, ನಾವು ಅವರನ್ನು ಹಿಂಬಾಲಿಸಿದೆವು. ಮಸೀದಿಯಲ್ಲಿ ಆ ಗುಂಪು ಜನರ ಒಂದು ತಂಡವನ್ನು ಎದುರುಗೊಂಡು ಅವರಲ್ಲಿ ಕೇಳಿದರು; " ಏನಿದು... ನೀವು ಮಾಡುತ್ತಿರುವುದು...?

ಆ ಜನರು ಹೇಳಿದರು; "ಓ! ಅಬೂ ಅಬ್ದುರಹ್ಮಾನ್, ಇವು ಕಲ್ಲುಗಳಾಗಿವೆ. ನಾವು ಅಲ್ಲಾಹು ಅಕ್ಬರ್, ಲಾಹಿಲಾಹ ಇಲ್ಲಲ್ಲಾ ಮತ್ತು ಸುಬ್'ಹಾನಲ್ಲಹ್ ಎಂದು ಹೇಳಿ ಇದರ ಮೂಲಕ ಎಣಿಕೆ ಮಾಡುತ್ತಿದ್ದೇವೆ."

ಇಬ್ನ್ ಮಸ್'ಹೂದ್(ರ) ಹೇಳಿದರು, ನಿಮ್ಮ ಪಾಪಗಳನ್ನು ಎಣಿಕೆ ಮಾಡಿರಿ. ನಿಮ್ಮ ಮೇಲೆ ಸಂಕಟವೆರಗಲಿ, ಓ ಉಮ್ಮತೇ ಮುಹಮ್ಮದ್(ಸ.ಅ), ಎಷ್ಟು ಬೇಗ ನೀವು ಪಥಭ್ರಷ್ಟರಾಗಿ ಬಿಟ್ಟಿರಲ್ಲವೇ...ನಿಮ್ಮ ಪ್ರವಾದಿ(ಸ.ಅ) ರ ಸಹಾಬಿಗಳು ಇನ್ನೂ ಜೀವಂತವಿದ್ದಾರೆ, ರಸೂಲುಲ್ಲಾಹ್(ಸ.ಅ) ರು ಧರಿಸಿದ ಬಟ್ಟೆ ಬರೆಗಳು ಇನ್ನೂ ನಾಶವಾಗಿಲ್ಲ,  ರಸೂಲುಲ್ಲಾಹ್(ಸ.ಅ)ರು ಉಪಯೋಗಿಸಿದ ಮಡಿಕೆಗಳು ಇನ್ನೂ ಒಡೆದು ಹೋಗಿಲ್ಲ. ನನ್ನ ಪ್ರಾಣ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ, ಅಲ್ಲಾಹನ ಸಂದೇಶವಾಹಕರ(ಸ.ಅ) ರ ಧರ್ಮಕ್ಕಿಂತ ಉತ್ತಮವಾದುದನ್ನು ನೀವು ಅನುಸರಿಸುತ್ತಿರುವಿರಾ..?? ಅಥವಾ ನೀವು ಪಥನದ ಬಾಗಿಲನ್ನು ತಟ್ಟುತ್ತಿರುವಿರಾ..???

ಆ ಗುಂಪಿನ ಜನರು ಹೇಳಿದರು; "ಅಲ್ಲಾಹನ ಮೇಲಾಣೆ, ಓ, ಅಬು ಅಬ್ದುರಹ್ಮಾನ್, ನಾವು ಇದರಿಂದ ಉತ್ತಮವಾದುದನ್ನಲ್ಲದೆ ಬೇರೇನನ್ನೂ ನಿರೀಕ್ಷಿಸಿಲ್ಲ."

ಇಬ್ನ್ ಮಸ್'ಹೂದ್(ರ) ಹೇಳಿದರು; "ಎಷ್ಟು ಜನರು ಉತ್ತಮ ಕರ್ಮಗಳನ್ನು ಮಾಡಲು ಪ್ರಯತ್ನಿಸುತ್ತಾರೆ ಆದರೆ ಅವರೆಂದಿಗೂ ಅದನ್ನು ತಲುಪಲಾರರು. ಅಲ್ಲಾಹನ ಸಂದೇಶವಾಹಕರು (ಸ.ಅ) ನಮಗೆ ಕುರ್'ಆನ್ ಓದುವವರ ಬಗ್ಗೆ ಹೇಳಿದ್ದರು, ಅವರು ಕುರ್'ಆನ್ ಪಾರಾಯಣ ಮಾಡುತ್ತಾರೆ ಆದರೆ ಅದು ಅವರ ಗಂಟಲ ಮೂಲಕ ಹಾದು ಹೋಗುವುದಲ್ಲದೆ ಬೇರೇನೂ ಅವರಿಗೆ ಅದರಿಂದ ಉಪಯೋಗವಾಗಲಾರದು. ನಿಮ್ಮಲ್ಲಿ ಹೆಚ್ಚಿನವರು ಅದೇ ರೀತಿಯ ಜನರು ಎಂದು ನಾನು ನಂಬುತ್ತೇನೆ."

ನಂತರ ಇಬ್ನ್ ಮಸ್'ಹೂದ್(ರ) ರವರು ಆ ಜನತೆಯನ್ನು ಬಿಟ್ಟು ತೆರಳಿದರು.

ಅಮ್ರ್ ಇಬ್ನ್ ಸಲಾಮಃ(ರ) ಹೇಳುತ್ತಾರೆ: "ಅನ್ನಹ್ರವಾನ್ ಯುದ್ಧದಲ್ಲಿ ಆ ಗುಂಪಿನಲ್ಲಿದ್ದ ಬಹುತೇಕ ಮುಖಗಳು ಖವಾರಿಜ್'ಗಳೊಟ್ಟಿಗೆ ಸೇರಿ ನಮ್ಮೊಂದಿಗೆ ಯುದ್ಧ ಮಾಡುವುದನ್ನು ನಾವು ಕಂಡಿರುವೆವು."

[ಅದ್ದಾರಿಮೀ - 204, ಅಲ್ ಹೈತಮೀ - ಅಲ್ ಮಜ್ಮಾ, 1/181, 189, ಅಲ್ಬಾನಿಯರು ಸಹೀಹ್ ಎಂದಿದ್ದಾರೆ - ಅಸ್ಸಹೀಹ್, 2005; ಅರ್ರದ್ದ್ ಅಲಲ್ - ಅಬಶೀ, ಪುಟ. 45-47]

ಆದರ್ಶದ ವಿಷಯದಲ್ಲಿ ತಂದೆ ತಾಯಿಯೊಂದಿಗೆ ಇರಬೇಕಾದ ಹಕ್ಕು.

ಆದರ್ಶದ ವಿಷಯದಲ್ಲಿ ತಂದೆ ತಾಯಿಯೊಂದಿಗೆ ಇರಬೇಕಾದ ಹಕ್ಕು.

ಸ'ಅದ್ ಬಿನ್ ಅಬೀ ವಕ್ಕಾಸ್(ರ) ತಾಯಿ ಉಮ್ಮು ಸ'ಅದ್ ರವರು ತನ್ನ ಮಗ ಸ'ಅದ್ ಬಿನ್ ಅಬೀ ವಕ್ಕಾಸ್(ರ) ಇಸ್ಲಾಮ್ ಸ್ವೀಕರಿಸಿ ಮುಸ್ಲಿಮರಾದಾಗ ಆಹಾರ ಪಾನೀಯವನ್ನು ತ್ಯಜಿಸಿ ಇಸ್ಲಾಮನ್ನು ತ್ಯಜಿಸುವಂತೆ ಒತ್ತಾಯಿಸಿದರು.

ಆಕೆ (ಸ'ಅದ್'ರ ತಾಯಿ) ಸ'ಅದ್(ರ) ರನ್ನು ಕರೆದು ನಿನ್ನ ಅಲ್ಲಾಹು ಹೆತ್ತವರನ್ನು ಅನುಸರಿಸುವಂತೆ ನಿನ್ನಲ್ಲಿ ಆಜ್ಞೆ ಮಾಡಿದ್ದಾನಲ್ಲವೇ... ನಾನು ನಿನ್ನ ತಾಯಿ ನಾನು ಹೇಳುತ್ತೇನೆ ನೀನು ಈ ಆದರ್ಶ(ಇಸ್ಲಾಮ್) ದಿಂದ ಹಿಂತಿರುಗು.

ಆಕೆ ಮೂರು ದಿನದಿಂದ ಅನ್ನ ಪಾನೀಯವನ್ನು ತ್ಯಜಿಸಿ ಹಸಿವಿನಿಂದ ನಿಶ್ಶಕ್ತಳಾಗುತ್ತಾಳೆ. ಆದರೆ ಸ'ಅದ್ ಬಿನ್ ಅಬೀ ವಕ್ಕಾಸ್(ರ) ರವರು ತನ್ನ ತಾಯಿಯ ಯಾವುದೇ ಭಾವನಾತ್ಮಕ ಬೆದರಿಕೆಗೂ ಜಗ್ಗದೆ ತಾನು ಸ್ವೀಕರಿಸಿದ ಆದರ್ಶದಲ್ಲೇ ಅಚಲವಾಗಿ ನಿಲ್ಲುತ್ತಾರೆ.

ನಂತರ ಆಕೆಯ ಇನ್ನೊಬ್ಬ ಮಗ ಉಮರಾ ಎಂಬವರು ಆಕೆಗೆ ಕುಡಿಯಲು ನೀರು ಕೊಡುತ್ತಾರೆ. ತದನಂತರ ಆಕೆ ಸ'ಅದ್(ರ) ರ ವಿರುದ್ಧ ಶಪಿಸುತ್ತಾಳೆ. ಆಗ ಅಲ್ಲಾಹನು ಈ ಆಯತನ್ನು ಅವತೀರ್ಣಗೊಳಿಸುತ್ತಾನೆ;

وَوَصَّيْنَا الْإِنْسَانَ بِوَالِدَيْهِ حُسْنًا ۖ وَإِنْ جَاهَدَاكَ لِتُشْرِكَ بِي مَا لَيْسَ لَكَ بِهِ عِلْمٌ فَلَا تُطِعْهُمَا ۚ إِلَيَّ مَرْجِعُكُمْ فَأُنَبِّئُكُمْ بِمَا كُنْتُمْ تَعْمَلُونَ

ತನ್ನ ಮಾತಾಪಿತರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಲು ನಾವು ಮನುಷ್ಯನಿಗೆ ಉಪದೇಶ ಮಾಡಿರು ವೆವು. ನಿನಗೆ ಯಾವುದೇ ಅರಿವಿಲ್ಲದಿರುವುದನ್ನು ನನ್ನೊಂದಿಗೆ ಸಹಭಾಗಿಯನ್ನಾಗಿ ಮಾಡಲು ಅವರು (ಮಾತಾಪಿತರು) ನಿನ್ನನ್ನು ಬಲವಂತಪಡಿಸಿದರೆ ಅವರನ್ನು ಅನುಸರಿಸದಿರು. ನಿಮ್ಮ ಮರಳುವಿಕೆಯು ನನ್ನ ಬಳಿಗಾಗಿದೆ. ಆಗ ನೀವು ಮಾಡಿಕೊಂಡಿರುವುದರ ಬಗ್ಗೆ ನಾನು ನಿಮಗೆ ತಿಳಿಸಿಕೊಡುವೆನು.

[ಅಲ್-ಅನ್ಕಬೂತ್ : 8]
via ಪವಿತ್ರ ಕುರ್ ಆನ್ (Pavitra Qur'aan)
 http://bit.ly/KanQuraan

ಈ ಇತಿಹಾಸದ ಘಟನೆಯಲ್ಲಿ ಇವತ್ತು ಶಿರ್ಕ್ ಬಿದ'ಅತ್ ಮೇಳೈಸಿರುವ ಸಮಾಜದಲ್ಲಿ ಬದುಕುತ್ತಿರುವ ನಮಗೆ ಸಿಗುವ ಪಾಠವೇನೆಂದರೆ, ಇವತ್ತು ಹಳೆಯಕಾಲದ ಪುರೋಹಿತ ಶಾಹಿ ಮಾಲೆ ಮೌಲೂದ್ ದರ್ಗಾ ಶಿರ್ಕ್ ಬಿದ'ಅತ್ ಆದರ್ಶದಿಂದ ಹೊರ ಬಂದು ನೈಜ ಇಸ್ಲಾಮಿನ ಆದರ್ಶದಲ್ಲಿ ಬದುಕುತ್ತಿರುವ ಅದೆಷ್ಟೋ ಮಂದಿ ಯುವಕರ ತಾಯಂದಿರು ಅಥವಾ ಮನೆಯವರು ಅದೇ ಹಳೆಯ ಅಜ್ಜಂದಿರ ಕಾಲದ ಮಾಲೆ ಮೌಲೂದ್ ಆದರ್ಶದವರಾಗಿದ್ದು ಪ್ರವಾದಿ(ಸ.ಅ) ಸುನ್ನತ್ ಆದ ಗಡ್ಡ ಬೆಳೆಸಲು ಈ ಯುವಕರಿಗೆ ಅಡ್ಡಿ ಪಡಿಸುತ್ತಾರೆ. ತಾವೇ ನೋಡಿದ ಶಿರ್ಕ್ ಬಿದ'ಅತ್ ಆಚಾರದ ಹೆಣ್ಣನ್ನು ವರಿಸುವಂತೆ ಒತ್ತಾಯಿಸುತ್ತಾರೆ. ಈ ರೀತಿಯ ಒತ್ತಡಕ್ಕೆ ಸಿಲುಕಿ ಅದೆಷ್ಟೋ ಮುವಹ್ಹಿದ್ ಯುವಕರು ಕೊರಗುತ್ತಿದ್ದಾರೆ. ಕೆಲವರಂತೂ ಮನೆಯವರಲ್ಲಿ ಅವರ ಹಳೆಯ ಕಾಲದ ಶಿರ್ಕ್ ಬಿದ'ಅತ್ ಆಚಾರದವರಾಗಿ ನಟಿಸಿ ಹೊರಗಡೆ ಬಂದಾಗ ತೌಹೀದ್ ಆದರ್ಶದವರಾಗಿ ಎರಡು ಮುಖ ಹೊತ್ತು ಜೀವಿಸುವವರೂ ಇದ್ದಾರೆ.

ಗಲ್ಫ್ ನಾಡಿನಲ್ಲಿ ದುಡಿಯಲು ಹೋಗಿ ಶಿರ್ಕ್ ಮತ್ತು ತೌಹೀದಿನ ಮಧ್ಯೆ ಇರುವ ವ್ಯತ್ಯಾಸವನ್ನು ಅರ್ಥೈಸಿಕೊಂಡ ಪ್ರವಾಸಿ ಯುವಕರ ಕಥೆಯೂ ಇಷ್ಟೆ. ಪ್ರವಾಸಿ ಜೀವನದಲ್ಲಿ ತೌಹೀದ್ ಆಗಿಯೂ ಊರಿಗೆ ಬಂದಾಗ ಮನೆ ಮಂದಿ ಆಚರಿಸುವ ಅದೇ ಅಜ್ಜಂದಿರ ಕಾಲದ ನೂತನವಾದಕ್ಕೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ.

ಇದೆಲ್ಲ ನಮ್ಮ ಈಮಾನಿನ ದೌರ್ಬಲ್ಯತೆಯನ್ನು ಸಾರುತ್ತದೆ. ಈ ನಿಟ್ಟಿನಲ್ಲಿ ಸ'ಅದ್ ಬಿನ್ ಅಬೀ ವಕ್ಕಾಸ್(ರ)ರವರ ಚರಿತ್ರೆ ಅಂತಹ ಯುವಕರಿಗೆ ಸ್ಫೋರ್ತಿದಾಯಕವಾಗಿದೆ.

ಈ ಪೇಜನ್ನು ಲೈಕ್ ಮಾಡಲು ಈ ಲಿಂಕ್ ಬಳಸಿ👇🏽
https://m.facebook.com/QuranmatthuHadeesVchanagalu/

---------------------------------

وَوَصَّيْنَا الْإِنْسَانَ بِوَالِدَيْهِ حَمَلَتْهُ أُمُّهُ وَهْنًا عَلَىٰ وَهْنٍ وَفِصَالُهُ فِي عَامَيْنِ أَنِ اشْكُرْ لِي وَلِوَالِدَيْكَ إِلَيَّ الْمَصِيرُ

ಮಾನವರಿಗೆ ಅವರ ಮಾತಾಪಿತರ ವಿಷಯದಲ್ಲಿ ನಾವು ಉಪದೇಶ ಮಾಡಿರುವೆವು. ಅವನ ತಾಯಿಯು ಬಲಹೀನತೆಯ ಮೇಲೆ ಬಲಹೀನತೆಯನ್ನು ಸಹಿಸಿ ಅವನನ್ನು ಗರ್ಭ ಧರಿಸಿರುವಳು. ಅವನ ಸ್ತನಪಾನವನ್ನು ನಿಲ್ಲಿಸಲಾಗುವುದು ಎರಡು ವರ್ಷದೊಂದಿಗಾಗಿದೆ. ನನಗೂ, ನಿನ್ನ ಮಾತಾಪಿತರಿಗೂ ಕೃತಜ್ಞನಾಗಿರು. (ನಿನ್ನ) ಮರಳುವಿಕೆಯು ನನ್ನ ಬಳಿಗೇ ಆಗಿದೆ.


 ... وَإِنْ جَاهَدَاكَ عَلَىٰ أَنْ تُشْرِكَ بِي مَا لَيْسَ لَكَ بِهِ عِلْمٌ فَلَا تُطِعْهُمَا ۖ وَصَاحِبْهُمَا فِي الدُّنْيَا مَعْرُوفًا ۖ وَاتَّبِعْ سَبِيلَ مَنْ أَنَابَ إِلَيَّ ۚ ثُمَّ إِلَيَّ مَرْجِعُكُمْ فَأُنَبِّئُكُمْ بِمَا كُنْتُمْ تَعْمَلُونَ

ನಿನಗೆ ಯಾವುದೇ ಜ್ಞಾನವಿಲ್ಲದ ಏನನ್ನಾದರೂ ನನ್ನೊಂದಿಗೆ ಸಹಭಾಗಿಯನ್ನಾಗಿ ಮಾಡುವಂತೆ ಅವರಿ ಬ್ಬರೂ ನಿನ್ನನ್ನು ಬಲವಂತಪಡಿಸಿದರೆ, ಆಗ ಅವರನ್ನು ಅನುಸರಿಸಬಾರದು. ಐಹಿಕ ಜೀವನದಲ್ಲಿ ಅವರೊಂದಿಗೆ ಉತ್ತಮವಾಗಿ ವರ್ತಿಸು. ನನ್ನೆಡೆಗೆ ಮರಳಿದವರ ಮಾರ್ಗ ವನ್ನು ಹಿಂಬಾಲಿಸು. ತರುವಾಯ ನಿಮ್ಮ ಮರಳುವಿಕೆಯು ನನ್ನ ಬಳಿಗೇ ಆಗಿದೆ. ನೀವು ಮಾಡುತ್ತಿರುವುದರ ಬಗ್ಗೆ ಆಗ ನಾನು ನಿಮಗೆ ತಿಳಿಸಿಕೊಡುವೆನು.


[ಲುಕ್ಮಾನ್ : 14 - 15]

ಆದಂ (ಅ)ರು ಮಹಮ್ಮದ್ ನೆಬಿ ﷺ ರೊಂದಿಗೆ ತವಸ್ಸುಲ್ ಮಾಡಿದರು ಎನ್ನುವುದು ಸರಿಯೇ?

ಆದಂ (ಅ)ರು ಮಹಮ್ಮದ್ ನೆಬಿ ﷺ ರೊಂದಿಗೆ ತವಸ್ಸುಲ್ ಮಾಡಿದರು ಎಂಬ ನಿರ್ಮಿತ ಹದೀಸಿನ ಬಗ್ಗೆ ಇಮಾಮ್ ಬೈಹಕಿ (ರ) ರವರುಹೇಳುತ್ತಾರೆ:

وقال البيهقي : تفرد به عبد الرحمن بن زيد بن أسلم، من هذا الوجه، وهو ضعيف اهـ . وأقره ابن كثير في البداية والنهاية (2/323)
ಈ ಹದೀಸಿನ ಪರಂಪರೆ ವರದಿಯಾಗಿದ್ದು, ಅಬ್ದುಲ್ ರೆಹಮಾನ್ ಇಬ್ನು ಝೈದ್ ಬಿನ್ ಅಸ್ಲಂ ರಿಂದಾಗಿದೆ. ಮತ್ತು ಇವರು ದುರ್ಬಲರಾಗಿದ್ದಾರೆ.

ಇದನ್ನು ಇಬ್ನು ಕತೀರ್ (ರ) ರವರು ತನ್ನ (ಅಲ್ ಬಿದಾಯಾಹ್ ವಲ್ ನಿಹಾಯಾಹ್ 2/323) ನಲ್ಲಿ ಒಪ್ಪಿಕೊಂಡಿದ್ದಾರೆ.

ಉತುಬಿ ಕಥೆ ಮತ್ತು ಸೂರತ್ ಅನ್ನಿಸಾ 64 ನೇ ಸೂಕ್ತಿ.




ಸೂರ ಅನ್ನಿಸಾ 64 ನೇ ಸೂಕ್ತಿಯನ್ನು ಮುಂದಿಟ್ಟು ತವಸ್ಸುಲ್ ಮತ್ತು ಇಸ್ತಿಗಾಸಕ್ಕೆ ಪುರಾವೆಯನ್ನಾಗಿ ತರುವುದು ಉತಬಿ ಎಂಬ ವ್ಯಕ್ತಿಯನ್ನಾಗಿದೆ. ಆದರೆ ಸೂರ ಅನ್ನಿಸಾ 64 ನೇ ಸೂಕ್ತಿಗೂ ಉತಬಿ ಎಂಬ ವ್ಯಕ್ತಿಗೂ ಯಾವುದೇ ಸಂಭಂಧವಿಲ್ಲ. ಯಾಕೆಂದರೆ  ಒಂದು ಮುನಾಫಿಕ್ (ಕಪಟವಿಶ್ವಾಸಿ) ಆದ ವ್ಯಕ್ತಿಯು ಪ್ರವಾದಿ ﷺ ರು ಜೀವಿಸಿರುವಾಗ ತನ್ನ ಪರವಾಗಿ ತೀರ್ಪು ಲಭಿಸಬಹುದೆಂದು ಭಾವಿಸಿ ಒಬ್ಬ ಯಹೂದಿಯ ಹತ್ತಿರ ಹೋದುದರ ವಿರುದ್ಧ ಅಲ್ಲಾಹನು ಪ್ರವಾದಿ ﷺ ರಿಗೆ ಅವತೀರ್ಣಗಳಿಸಿದ ಸೂಕ್ತವಾಗಿದೆ.
ಈ ಸೂಕ್ತಿಯು ಕಪಟ ವಿಶ್ವಾಸಿಗಳ ವಿರುದ್ಧ ಅವತೀರ್ಣಗೊಂಡ ಸೂಕ್ತವಾಗಿದೆ ಎಂದು ತಫ್ಸೀರ್ ತಬ್ರೀ ಯಲ್ಲಿ ಕಾಣಬಹುದು.

ಇಮಾಮ್ ತಬ್ರಾಣಿ (ರ) ಯವರು ಮತ್ತು ಪ್ರಗಲ್ಬ ವಿದ್ವಾಂಸರಾದ ಝಮಕ್ಸರಿ (ರ) ರವರು ಇದು ಕಪಟ ವಿಶ್ವಾಸಿಗಳ ಕುರಿತಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಉತಬಿಯ ಘಟನೆಯನ್ನು ಇಮಾಮ್ ಅಬ್ದುಲ್ ಹಾದೀ ರವರು ಖಂಡಿಸಿ ಹೇಳುತ್ತಾರೆ. 🔽

ಈ ಸೂಕ್ತಿಯನ್ನು (ಅನ್ನಿಸಾ 64) ಸ್ವಹಾಬಿಗಳು, ತಾಬಿವುಗಳು, ತಾಬಿವುತ್ತಾಬಿವುಗಳು, ಮತ್ತು ಮದ್ಹಬಿನ ನಾಲ್ಕು ಇಮಾಮರು ಅರ್ಥ ಮಾಡಿಕೊಂಡ ರೀತಿಯಲ್ಲಿ ಅರ್ಥೈಸಬೇಕಾಗಿದೆ.
(ಅಸ್ಸರೀಂ ಅಲ್ ಮುಂಕಿ ಫೀ ರದ್ದ್ ಅಲ್ ಸುಬ್ಕೀ :321)

🔸ಇಲ್ಲಿ ತಫ್ಸೀರ್ ಇಬ್ನ್ ಕತೀರ್ ನಲ್ಲಿರುವ ಉತಬಿಯ ಕನಸನ್ನು ಖಂಡಿಸಿ ಹೇಳಿರುವುದರಿಂದ ಇಸ್ತಿಗಾಸಕ್ಕಾಗಲೀ, ಮರಣಾನಂತರದ ತವಸ್ಸಿಲಿಗಾಗಲೀ ಮೇಲೆ ತಿಳಿಸಿದವರು ಯಾರೂ ಈ ಸೂಕ್ತಿಯನ್ನು ಪುರಾವೆಯಾಗಿ  ಕಂಡಿಲ್ಲ ಎಂದು ಸ್ಪಷ್ಟವಾಗುತ್ತದೆ.

ವಿಧ್ವಾಂಸರಾದ, ಅಬುಲ್ ಮುಝಫ್ಫರ್ ಯೂಸುಫ್ ಬಿನ್ ಮುಹಮ್ಮದ್ ಅಲ್ ಹಂಬಲೀ (ರದ್ದ್ ಅಲ್ ವಾಫಿರ್ 1/131), ಮತ್ತು
ಅಬೂ ಅಬ್ದುಲ್ಲಾಹ್ ಮುಹಮ್ಮದ್ ಬಿನ್ ಜಮಾಲುದ್ದೀನ್ ಯೂಸುಫ್ ಅಶ್ಶಾಫಿಈ ಯಮನಿ (ಗಾಯತ್ ಅಲ್ ಯಮನಿ 1/623) ಇವರು ಉತಬಿಯ ಘಟನೆಯನ್ನು ಖಂಡಿಸಿದವರ ಸಾಲಿನಲ್ಲಿ ಸೇರಿದವರಾಗಿದ್ದಾರೆ.

ಇತಿಹಾಸಕಾರರೂ, ಶಾಫಿಈ ಮದ್ಹಬಿನ ವಿಧ್ವಾಂಸರೂ ಆಗಿರುವ ಇಮಾಮ್ ಅದ್ದಹಬಿ (ರ) ರವರು ಹೇಳುವುದು ಉತಬಿ ಒಬ್ಬ ಕವಿಯೂ, ಮದ್ಯಪಾನಿಯೂ ಆಗಿದ್ದಾನೆ ಎಂದು.🔽



العُتْبِيُّ، مُحَمَّدُ بنُ عُبَيْدِ اللهِ بنِ عَمْرِو بنِ مُعَاوِيَةَ

العَلاَّمَةُ، الأَخْبَارِيُّ، الشَّاعِرُ، المُجَوِّدُ، أَبُو عَبْدِ الرَّحْمَنِ مُحَمَّدُ بنُ عُبَيْدِ اللهِ بنِ عَمْرِو بنِ مُعَاوِيَةَ بنِ عَمْرِو بنِ عُتْبَةَ بنِ أَبِي سُفْيَانَ بنِ حَرْبٍ الأُمَوِيُّ، ثُمَّ العُتْبِيُّ، البَصْرِيُّ. رَوَى عَنِ: ابْنِ عُيَيْنَةَ، وَأَبِي مِخْنَفٍ، وَوَالِدِهِ. وَعَنْهُ: أَبُو حَاتِمٍ السِّجِسْتَانِيُّ، وَإِسْحَاقُ بنُ مُحَمَّدٍ النَّخَعِيُّ وَكَانَيَشرَبُ. وَلَهُ تَصَانِيْفُ أَدَبِيَّاتٌ، وَشُهرَةٌ. مَاتَ: سَنَةَ ثَمَانٍ وَعِشْرِيْنَ وَمائَتَيْنِ

(ಸಿಯಾರುಲ್ ಉಲೂಮ್ ಅನ್ನುಬುವ್ವ)


ಇಮಾಮ್ ಇಬ್ನು ಖಿಲ್ಕಾನ್ (ರ) ರವರು ಹೇಳುವುದು ಉತಬಿಯು ಅತೀ ದೊಡ್ಡ ಮದ್ಯಪಾನಿ  ಎಂದಾಗಿದೆ.

المعروف بالعتبي، الشاعر البصري المشهور؛ كان أديبا فاضلا شاعرا مجيدا، وكان يروي الأخبار وأيام العرب، ومات له بنون، فكان يرثيهم، وروى عن أبيه وعن سفيان بن عيينة ولوط بن محنف،وروى عنه أبو حاتم السجستاني وأبو الفضل الرياشي وإسحاق بن محمد النخعي وغيرهم، وقدم بغداد وحدث بها وأخذ عنه أهلها، وكان مستهترا بالشراب، ويقول الشعر في عتبة. وكان هو وأبوه سيدين أديبين فصيحين، وله من التصانيف كتاب الخيل وكتاب أشعار الأعاريب وأشعار النساء اللاتي أحببن ثم أبغضن وكتاب الذبيح وكتاب الأخلاق وغير ذلك.

وقال العتبي المذكور: سمعت أعرابيا يقول لرجل: إن فلانا وإن ضحك لك فإن عقاربه تسري إليك، فإن لم تجعله عدوا في علانيتك فلا تجعله صديقا في سريرتك .

ذكره ابن قتيبة في كتاب المعارف وابن المنجم في كتاب البارع وروى له:

رأين الغواني الشيب لاح بعارضي ... فأعرضن عني بالخدود النواضر

وكن متى أبصرنني أو سمعن بي ... سعين فرقعن الكوى بالمحاجر

فإن عطفت عني أعنة أعين ... نظرن بأحداق المها والجآذر

فإني من قوم كريم ثناؤهم ... لأقدامهم ضيعت رؤوس المنابر

خلائف في الإسلام، في الشرك قادة ... بهم وإليهم فخر كل

(ವಫಿಯ್ಯತುಲ್ ಅಯಾನ್)

ಈ ಸೂಕ್ತಿಯಲ್ಲಿ ನಾಲ್ಕು ಖಲೀಫರಾಗಲೀ, ಸ್ವಹಾಬಿಗಳಾಗಲೀ ಯಾರೂ ಕೂಡಾ ಇಸ್ತಿಗಾಸಕ್ಕಾಗಲೀ, ಮರಣಾನಂತರದ ತವಸ್ಸಿಲಿಗಾಗಲೀ ಪುರಾವೆಯಾಗಿ ಕಂಡಿಲ್ಲ. ಯಾಕೆಂದರೆ ಅವರಲ್ಲಿ ಹಲವರೂ ಪ್ರವಾದಿ ﷺ ರಿಂದ ನೇರವಾಗಿ ಇಸ್ಲಾಮನ್ನು ಕಲಿತವರು. ಆದರೆ ಇಬ್ನು ಕತೀರ್  (ರ) ತನ್ನ ತಫ್ಸೀರ್ ನಲ್ಲಿ ಉಲ್ಲೇಖಿಸಿದ್ದು ಉತಬಿ ಎಂಬ ವ್ಯಕ್ತಿಯ ಘಟನೆಯನ್ನು ಮಾತ್ರವಾಗಿದೆ. ಇದರಿಂದ ಇಸ್ತಿಗಾಸಕ್ಕಾಗಲೀ, ಮರಣಾನಂತರದ ತವಸ್ಸಿಲಿಗಾಗಲೀ ಪುರಾವೆ ಕಂಡುಕೊಳ್ಳಲು ಸಾಧ್ಯವಿಲ್ಲ. ಇನ್ನು ಬೇರೆ ಇಮಾಮರು ತಫ್ಸೀರ್ ಇಬ್ನ್ ಕತೀರ್ ನಲ್ಲಿ ಆ ಘಟನೆ ಇದೆ ಎಂದು ಹೇಳಿದರೆ ಅದು ಇಸ್ತಿಗಾಸಕ್ಕಾಗಲೀ, ಮರಣಾನಂತರದ ತವಸ್ಸಿಲಿಗಾಗಲೀ ಪುರಾವೆಯಾಗಿ ಕಂಡುಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಅದು ಒಂದು ಘಟನೆ ಮಾತ್ರವಾಗಿದೆ.

🔴 ಪ್ರವಾದಿ ﷺ ರನ್ನು ಕಣ್ಣಾರೆ ನೋಡಿದವರು ಪ್ರವಾದಿ ﷺ ರನ್ನು ಕನಸಿನಲ್ಲಿ ಕಂಡಿದ್ದಾಗಿ ಸ್ವಹೀಹ್ ಆಗಿ ಉಲ್ಲೇಖವಿದೆ. ಆದರೆ ಪ್ರವಾದಿ ﷺ ರನ್ನು ಕಣ್ಣಾರೆ ಕಾಣದೆ ಪ್ರವಾದಿ ﷺ ರನ್ನು ಕನಸಿನಲ್ಲಿ ಕಂಡಿದ್ದೇನೆ ಎಂದು ಯಾವುದೇ ವ್ಯಕ್ತಿ ಬಂದು ಹೇಳಿದರೂ ಅದು ತಿರಸ್ಕೃತವಾಗಿದೆ.

ಪ್ರವಾದಿ ﷺ ಕಣ್ಣಾರೆ ಕಂಡಂತಹ ಮುಶ್ರಿಕ್ ಆದ ಯಾವುದೇ ವ್ಯಕ್ತಿಯು ಪ್ರವಾದಿ ﷺ ರ ಕನಸು ಕಂಡರೆ ಆತ ಮಹಾನ್ ವ್ಯಕ್ತಿ ಆಗಲು ಸಾಧ್ಯವಿಲ್ಲ.


ಪ್ರವಾದಿ ﷺ ರನ್ನು ಕಣ್ಣಾರೆ ಕಂಡ ಸ್ವಹಾಬಿಗಳ ಕಾಲದ ನಂತರ ಯಾವುದೇ ವ್ಯಕ್ತಿಯ ಕನಸಿನಲ್ಲಿ ಶೈತಾನನು ಬೇರೆ ಯಾವುದೇ ರೂಪದಲ್ಲಿ ಬಂದು ನಾನು ಪ್ರವಾದಿ ಎಂದು ಕನಸಿನಲ್ಲಿ ಸುಳ್ಳು ಹೇಳಿದರೆ ಅದು ಪ್ರವಾದಿ ﷺ ಆಗಿದ್ದಾರೆ ಎಂದು ಗುರುತಿಸುವುದಾದರೂ ಹೇಗೆ ಸಾಧ್ಯ?

ಅನಸ್ (ರ) ರಿಂದ ವರದಿ : ಪ್ರವಾದಿ ﷺ ರು ಹೇಳಿದರು : ಯಾರಾದರೂ ನನ್ನನ್ನು ಕನಸಿನಲ್ಲಿ ನೋಡಿದರೆ ಅದರಲ್ಲಿ ಸಂದೇಹವಿಲ್ಲ, ನೋಡಿದ್ದು ನನ್ನನೇ ಆಗಿದೆ. ಶೈತಾನನು ನನ್ನ ರೂಪದಲ್ಲಿ ಬರುವುದಿಲ್ಲ.
(ಸ್ವಹೀಹ್ ಬುಖಾರಿ : 87/123)


ಇಲ್ಲಿ ನಮಗೆ ತಿಳಿದು ಬರುವುದು ಅನ್ನಿಸಾ 64 ನೇ ಸೂಕ್ತದ ತಫ್ಸೀರ್ ಇಬ್ನು ಕತೀರ್ ಬರೆದಿರುವ ಆ ಘಟನೆಗೆ ಸಂಭಂದಿಸಿದ ಉತಬಿಯು ಪ್ರವಾದಿ ﷺ ರನ್ನು ಕಂಡಿಲ್ಲ ಎಂಬುದು ವಾಸ್ತವ.

ಉತಬಿಯ ಘಟನೆಗೆ ಇಜ್ಮಾಅ ಮತ್ತು ಖಿಯಾಸ್ ನ ಮೊರೆ ಹೋಗಲು ಸಾಧ್ಯವೇ? 🔽

ಪವಿತ್ರ ಕುರಾನ್, ಸುನ್ನತ್ (ಪ್ರವಾದಿ ಚರ್ಯೆ), “ಇಜ್ಮಾ” ( ಕುರಾನ್ ಮತ್ತು ಹದೀಸ್ ಗಳಲ್ಲಿ ಇತ್ಯರ್ಥವಾಗದ ಯಾವುದೇ ಒಂದು ಸಮಸ್ಯೆಯ ಕುರಿತ ಪರಿಹಾರದ ಸಲುವಾಗಿ ಆ ಕಾಲದ ಪ್ರವಾದಿಯ ಉಮ್ಮತ್ತಿನಲ್ಲಿರುವ ಪಂಡಿತ ಶಿರೋಮಣಿಗಳ ಸಹಮತವನ್ನು “ಇಜ್ಮಾ” ಎನ್ನುತ್ತಾರೆ) ಮತ್ತು “ಕಿಯಾಸ್” (ಕುರಾನ್ ಮತ್ತು ಹದೀಸ್ ಗಳಲ್ಲಿನೇರವಾಗಿ ಉಲ್ಲೇಖಿಸಲ್ಪಡದಿರುವ ಯಾವುದೇ ಒಂದು ಸಮಸ್ಯೆಯ ಕುರಿತ ಪರಿಹಾರದ ಸಲುವಾಗಿ ಕುರಾನ್ ಮತ್ತು ಹದೀಸ್ ಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ ಅದನ್ನು ಹೋಲುವ ಬೇರೊಂದು ಸಮಸ್ಯೆಯಿಂದ ಪರಿಹಾರವನ್ನು ಕಂಡು ಹಿಡಿಯುವುದನ್ನು “ಕಿಯಾಸ್” ಎನ್ನುತ್ತಾರೆ) ಈ ನಾಲ್ಕು ವಿಷಯಗಳು ಇಸ್ಲಾಮೀ ಕರ್ಮ ಶಾಸ್ತ್ರದ ಮೂಲಾಧಾರಗಳಾಗಿವೆ.

🔸 ಇಲ್ಲಿ ಉತಬಿಯ ವಿಷಯದಲ್ಲಿ ಭಿನ್ನಭಿಪ್ರಾಯಗಳು ಇರುವುದರಿಂದ ಇಜ್ಮಾಅ ಮತ್ತು ಖಿಯಾಸ್ ನ  ಮೊರೆ ಹೋಗಲು ಸಾಧ್ಯವೇ ಇಲ್ಲ ಎಂಬುದು ಸ್ಪಷ್ಟ.


🔴 ಇಲ್ಲಿ ನಾವು ಗಮನಿಸಬೇಕಾದ ವಿಷಯವೇನೆಂದರೆ,  ಸೂರ ಅನ್ನಿಸಾ 64 ನೇ ಸೂಕ್ತದ ಅರ್ಥವನ್ನು ಆ ಘಟನೆಯ ವಿಷಯವಾಗಿ ಓದುವಾಗ 61 ರಿಂದ 65 ನೇ ಸೂಕ್ತದ ವರೆಗೆ ಓದುವುದು ಉತ್ತಮ.
ಇಲ್ಲಿ 61 ನೇ ಸೂಕ್ತದಲ್ಲಿ ಕಪಟವಿಶ್ವಾಸಿಗಳ ಬಗ್ಗೆ ವಿವರಿಸಿದೆ. ಮಾತ್ರವಲ್ಲ 65 ನೇ ಸೂಕ್ತದಲ್ಲಿ ತೀರ್ಪಿನ ಬಗ್ಗೆಯೂ, ಪ್ರವಾದಿ ﷺ ರನ್ನು ಅನುಸರಿಸುವ ಬಗ್ಗೆಯೂ ವಿವರಿಸಲಾಗಿದೆ.


ಮತ ಪಂಡಿತರ ವಿಷಯದಲ್ಲಿ ಹೇಳುವದಾದರೆ...

ಅವರರಿಗೆ ಸಿಗುವಂತಹ ಅರಿವನ್ನು ಅವರು ತಮ್ಮ ಗ್ರಂಥದಲ್ಲಿ ಬರೆದಿಡುತ್ತಾರೆ. ಮಾತ್ರವಲ್ಲ ನಂತರ ಅದರಲ್ಲಿ ಏನಾದರೂ ನ್ಯೂನತೆ ಕಂಡು ಬಂದರೆ ಕೂಡಲೇ ಅದನ್ನು ತಿದ್ದುವವರಾಗಿದ್ದಾರೆ (ಮುಜದ್ದಿದ್). ಒಂದು ವೇಳೆ ನ್ಯೂನತೆಗಳಿದ್ದೂ ಕಂಡುಕೊಳ್ಳಲು ಅವರಿಂದ ಸಾಧ್ಯವಾಗದಿದ್ದರೆ ಅದಕ್ಕೆ ಇಮಾರು ಹೊಣೆಗಾರರಲ್ಲ. ಯಾಕೆಂದರೆ ಅವರು ಸಿಗುವಂತಹ ಅರಿವನ್ನು ಮಾತ್ರ ಬರೆದಿಡುತ್ತಾರೆ. ಅದೇ ಅರಿವು ಬೇರೆ ಇಮಾಮರಿಗೆ ಬೇರೆ ರೂಪದಲ್ಲೂ ಸಿಗಬಹುದು. ಅದರಲ್ಲಿ ಕೆಲವೊಂದು ಸರಿ ಆಗಿರಲೂಬಹುದು, ತಪ್ಪು ಆಗಿರಲೂಬಹುದು. ಆ ಸಿಗುವಂತಹ ಅರಿವು ಸರಿಯಾಗಿದ್ದರೆ ಅದನ್ನು ಪ್ರಚಾರ ಪಡಿಸಿದರೆ ಅಲ್ಲಾಹನು ಅದಕ್ಕೆ ತಕ್ಕಂತೆ ಪ್ರತಿಫಲವನ್ನು ಕೊಡುತ್ತಾನೆ.
ನ್ಯೂನತೆಗಳಿದ್ದೂ ಕಂಡುಕೊಳ್ಳಲು ಸಾಧ್ಯವಾಗದಿದ್ದರೆ ಅದು ಇಮಾಮರುಗಳ ತಪ್ಪಲ್ಲ. ಅದು ಅವರಿಗೆ ಸಿಗುವಂತಹ ಅರಿವಿನ ತಪ್ಪು. ಕೆಲವೊಂದು ವಿಷಯಗಳಲ್ಲಿ ನ್ಯೂನತೆಗಳನ್ನು ಕಂಡುಕೊಳ್ಳಲು ಇಮಾಮರಿಗೆ ಸಾಧ್ಯವಾಗದಿದ್ದರೆ ಅವರಿಗೆ ಶಿಕ್ಷೆ ಲಭಿಸುವ ವಿಷಯವೇನೂ ಅಲ್ಲ. ಬದಲಾಗಿ ಅವರ ಶ್ರಮಕ್ಕೆ ತಕ್ಕಂತೆ ಪ್ರತಿಫಲವನ್ನು ಅಲ್ಲಾಹನು ಕೊಡುತ್ತಾನೆ.
ಆದ್ದರಿಂದ ಇಮಾಮರನ್ನು ನಾವು ಅಂಧಾನುಸರಣೆ ಮಾಡುವ ಹಾಗಿಲ್ಲ. ಇಮಾಮರ ಅಭಿಪ್ರಾಯಗಳು ಕುರಾನ್ ಮತ್ತು ಸುನ್ನತ್ತಿಗೆ ಹೊಂದಿಕೊಂಡಿದ್ದರೆ ಮಾತ್ರ ನಾವು ಅವರ ಅಭಿಪ್ರಾಯವನ್ನು ಅನುಸರಿಸಬಹುದು. ಇಮಾಮರ ಅಭಿಪ್ರಾಯಗಳು ಕುರಾನ್ ಮತ್ತು ಸುನ್ನತ್ತಿಗೆ ಹೊಂದಿಕೊಳ್ಳದಿದ್ದರೆ ನಾವು ಅವರಿಗೆ ಕೊಡಬೇಕಾದ ಎಲ್ಲಾ ರೀತಿಯ  ಗೌರವಗಳನ್ನು ಕೊಟ್ಟು ಅವರ ಅಭಿಪ್ರಾಯಗಳನ್ನು ತಳ್ಳುವುದಾಗಿದೆ.

ಯಾವುದಾದರೂ ಒಬ್ಬರು ಇಮಾಮ್ ಒಂದು ಹದೀಸನ್ನು ಸ್ವಹೀಹ್ ಎಂದರೆ, ಅದೇ ಹದೀಸನ್ನು  ಬೇರೆ ಇಮಾಮ್ ಅಥವಾ ಮುಹದ್ದಿಸ್ ಲಹೀಪ್ ಎಂದು ಹೇಳಿದರೆ ಅದರಲ್ಲಿ ಏನಾದರೂ ನ್ಯೂನತೆ ಇದೆ ಎಂದರ್ಥ, ಅದನ್ನು ಸ್ವಹೀಹ್ ಎಂದು ಹೇಳಿದ ಇಮಾಮಿಗೆ ಆ ವಿಷಯ ಗೊತ್ತಾಗಲಿಲ್ಲ ಎಂದರ್ಥ.  ಮತ್ತೆ ಆ ಹದೀಸಿನ ಹಿಂದೆ ಹೋಗುವ ಆವಶ್ಯಕತೆ ಯಾರಿಗೂ ಬರುವುದಿಲ್ಲ. ಯಾಕೆಂದರೆ ಅದನ್ನು ಲಹೀಪ್ ಎಂದು ಫತ್ವಾ ಕೊಡಲು ಏನಾದರೂ ಒಂದು ಕಾರಣ ಇದ್ದೇ ಇರುತ್ತದೆ.

الإسناد من الدين
ದೀನ್ ಗೆ ಪ್ರಮಾಣವು ಮುಖ್ಯವಾಗಿದೆ.

ಪ್ರಮಾಣವೆಂದರೆ ಅದು ಕುರಾನ್ ಮತ್ತು ಸುನ್ನತ್ತಿಗೆ ಹೊಂದಿಕೊಂಡಿರಬೇಕು. ಯಾಕೆಂದರೆ ಅಲ್ಲಾಹನು ಕುರಾನಿನಲ್ಲಿ ಹೇಳುತ್ತಾನೆ 🔽


الْيَوْمَ أَكْمَلْتُ لَكُمْ دِينَكُمْ وَأَتْمَمْتُ عَلَيْكُمْ نِعْمَتِي وَرَضِيتُ لَكُمُ الْإِسْلَامَ دِينًا

ಇಂದು ನಾನು ನಿಮಗೆ ನಿಮ್ಮ ಧರ್ಮವನ್ನು ಪೂರ್ತೀಕರಿಸಿ ಕೊಟ್ಟಿರುವೆನು. ನನ್ನ ಅನುಗ್ರಹವನ್ನು ನಾನು ನಿಮಗೆ ನೆರವೇರಿಸಿಕೊಟ್ಟಿರುವೆನು. ಇಸ್ಲಾಮನ್ನು ಧರ್ಮವಾಗಿ ನಾನು ನಿಮಗೆ ತೃಪ್ತಿಪಟ್ಟಿರುವೆನು.

[ಅಲ್-ಮಾ'ಇದಃ : 3]

ಪ್ರವಾದಿ ﷺ ರ ಕಾಲದ ನಂತರ ಬೇರೆ ಒಂದು ಇಸ್ಲಾಮ್ ಇಲ್ಲ. ಅಲ್ಲಾಹನು ಪ್ರವಾದಿ ﷺ ರ ಕಾಲದಲ್ಲಿಯೇ ಇಸ್ಲಾಮನ್ನು ಪೂರ್ಣಗೊಳಿಸಿದ್ದಾನೆ. ನಂತರ ಉದ್ಭವಿಸುವ ಯಾವುದೇ ಘಟನೆಗಳು ಇಸ್ಲಾಮಿಗೆ ಪುರಾವೆಯಲ್ಲ.

ಪ್ರವಾದಿ ﷺ ರು ಹೇಳುತ್ತಾರೆ : ನನ್ನ ಪೈಕಿ ನನ್ನ ನಂತರ ಜೀವಿಸುವವರು ಬಹಳಷ್ಟು ಭಿನ್ನಾಭಿಪ್ರಾಯವನ್ನು ಕಾಣಲಿರುವರು. ಆ ಸಂಧರ್ಭದಲ್ಲಿ ನೀವು ನನ್ನ ಮತ್ತು ನಾಲ್ವರು ಖಲೀಫರ ಸುನ್ನತ್ತನ್ನು ಬಲವಾಗಿ ಹಿಡಿದುಕೊಳ್ಳಿರಿ. ಯಾವುದೇ ಕಾರಣಕ್ಕೂ ಸುನ್ನತ್ತನ್ನು ಕೈಬಿಡದಿರಿ.
(ಅಬೂ ದಾವೂದ್ : 4607, ತಿರ್ಮಿದಿ :2676)


ಪ್ರವಾದಿ ﷺ ರು ಹೇಳಿದರು : ನನ್ನ ಮತ್ತು ನನ್ನ ಸಹಾಬಿಗಳ ಮಾರ್ಗದಲ್ಲಿ ಯಾರು ಇದ್ದಾರೆಯೇ ಅವರಾಗಿದ್ದಾರೆ ವಿಜಯಿಗಳು.

ಪ್ರವಾದಿ ﷺ ರು ಹೇಳಿದರು : ನಾನು ನಿಮಗೆ ಎರಡು ವಸ್ತುಗಳನ್ನು ಬಿಟ್ಟು ಹೋಗುತ್ತಿದ್ದೇನೆ (ಕುರಾನ್ ಮತ್ತು ಪ್ರವಾದಿ ಚರ್ಯೆ) ಅದನ್ನು ಗಟ್ಟಿಯಾಗಿ ಹಿಡಿಯುವ ವರೆಗೆ ನೀವು ದಾರಿ ತಪ್ಪಲಾರಿರಿ.


ಎಲ್ಲದಕ್ಕೂ ಪರ್ಯಾವಸಾನ ಇಲ್ಲಿದೆ.
 ಅಲ್ಲಾಹನು ಕುರಾನಿನಲ್ಲಿ ಹೇಳುತ್ತಾನೆ 🔽

يَا أَيُّهَا الَّذِينَ آمَنُوا أَطِيعُوا اللَّهَ وَأَطِيعُوا الرَّسُولَ وَأُولِي الْأَمْرِ مِنْكُمْ ۖ فَإِنْ تَنَازَعْتُمْ فِي شَيْءٍ فَرُدُّوهُ إِلَى اللَّهِ وَالرَّسُولِ إِنْ كُنْتُمْ تُؤْمِنُونَ بِاللَّهِ وَالْيَوْمِ الْآخِرِ ۚ ذَٰلِكَ خَيْرٌ وَأَحْسَنُ تَأْوِيلًا

ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವನ್ನು ಅನುಸರಿಸಿರಿ. (ಅವನ) ಸಂದೇಶವಾಹಕರನ್ನೂ ನಿಮ್ಮಿಂದಲೇ ಇರುವ ಕಾರ್ಯನಿರ್ವಾಹಕರನ್ನೂ ಅನುಸರಿಸಿರಿ. ನೀವು ಅಲ್ಲಾಹುವಿನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರಾಗಿದ್ದರೆ ನಿಮ್ಮ ಮಧ್ಯೆ ಯಾವುದೇ ವಿಷಯದಲ್ಲಾದರೂ ಭಿನ್ನಾಭಿಪ್ರಾಯ ತಲೆದೋರಿದರೆ ನೀವದನ್ನು ಅಲ್ಲಾಹುವಿನೆಡೆಗೂ ಸಂದೇಶವಾಹಕರೆಡೆಗೂ ಮರಳಿಸಿರಿ. ಅದು ಅತ್ಯುತ್ತಮವಾದುದೂ ಅತಿಸೂಕ್ತ ಪರ್ಯಾವಸಾನವುಳ್ಳದ್ದೂ ಆಗಿದೆ.

[ಅನ್ನಿಸಾ'ಅ : 59]

ಹೀಗಿರುವಾಗ ನಾವು ಯಾಕೆ ಕವಿಯೂ, ಮದ್ಯಪಾನಿಯೂ ಆದ ಉತಬಿಯ ಕನಸಿನ ಹಿಂದೆ ಹೋಗಬೇಕು?

ಪ್ರವಾದಿ ﷺ ರನ್ನು ಕನಸಿನಲ್ಲಿ ಕಾಣುವುದರ ಕುರಿತು ಕೇರಳದ ಸಮಸ್ಥಾನ ಸುನ್ನೀ ನೇತಾರ ಹೇಳುವುದನ್ನು ತಿಳಿಯಲು ಈ ಕೆಳಗಿನ ಲಿಂಕ್ ನ್ನು ಸಂಪರ್ಕಿಸಿ.
👇
https://youtu.be/CiUCTHqXB20


✍ Abu Muadh


ಕಬರ್ ಎತ್ತರಿಸಿ ಕಟ್ಟುವುದು ಇಸ್ಲಾಮಿನಲ್ಲಿ ನಿಷಿದ್ಧವಾಗಿದೆ.

ಕಬರ್ ಎತ್ತರಿಸಿ ಕಟ್ಟುವುದು ಇಸ್ಲಾಮಿನಲ್ಲಿ ನಿಷಿದ್ಧವಾಗಿದೆ.

حَدَّثَنَا يَحْيَى بْنُ يَحْيَى، وَأَبُو بَكْرِ بْنُ أَبِي شَيْبَةَ وَزُهَيْرُ بْنُ حَرْبٍ قَالَ يَحْيَى أَخْبَرَنَا وَقَالَ الآخَرَانِ، حَدَّثَنَا وَكِيعٌ، عَنْ سُفْيَانَ، عَنْ حَبِيبِ بْنِ أَبِي ثَابِتٍ، عَنْ أَبِي وَائِلٍ، عَنْ أَبِي، الْهَيَّاجِ الأَسَدِيِّ قَالَ قَالَ لِي عَلِيُّ بْنُ أَبِي طَالِبٍ أَلاَّ أَبْعَثُكَ عَلَى مَا بَعَثَنِي عَلَيْهِ رَسُولُ اللَّهِ صلى الله عليه وسلم أَنْ لاَ تَدَعَ تِمْثَالاً إِلاَّ طَمَسْتَهُ وَلاَ قَبْرًا مُشْرِفًا إِلاَّ سَوَّيْتَهُ ‏.‏ وَحَدَّثَنِيهِ أَبُو بَكْرِ بْنُ خَلاَّدٍ الْبَاهِلِيُّ، حَدَّثَنَا يَحْيَى، - وَهُوَ الْقَطَّانُ - حَدَّثَنَا سُفْيَانُ، حَدَّثَنِي حَبِيبٌ، بِهَذَا الإِسْنَادِ وَقَالَ وَلاَ صُورَةً إِلاَّ طَمَسْتَهَا ‏.‏

ಅಬು ಹಯ್ಯಾಜ್ (ರ)ರಿಂದ ವರದಿ :
ಅಲೀ (ರ) ನನ್ನಲ್ಲಿ ಹೇಳಿದರು: "ಪ್ರವಾದಿ ﷺ ರು ನನ್ನಲ್ಲಿ ನಿಯೋಗಿಸಿದ ಅದೇ ಕಾರ್ಯವನ್ನು ನಾನು ನಿಮಗೆ ನಿಯೋಗಿಸಲೇ? ಒಂದು ಚಿತ್ರವನ್ನೂ ನಾಶಗೊಳಿಸದೆ ಬಿಡಬಾರದು, ಎತ್ತರಿಸಿ ಕಟ್ಟಿರುವ ಒಂದು ಕಬರನ್ನೂ ನಾಶಗೊಳಿಸದೆ ಬಿಡಬಾರದು.

Reference : Sahih Muslim 969 a, 969 b
In-book reference : Book 11, Hadith 120

--------------------------------------

ಆದರೆ ಕಬರನ್ನು ಎತ್ತರಿಸಕೂಡದು ಎಂಬ ಪ್ರವಾದಿ ವಚನಗಳು ಕಾಫಿರರುಗಳ(ಅವಿಸ್ವಾಸಿಗಳ) ಕಬರ್'ನ ಕುರಿತಾಗಿದೆ ಎಂದು ಕೆಲವರು ದುರ್ವ್ಯಾಖ್ಯಾನಿಸುತ್ತಾರೆ. ಆದರೆ ಮುಸ್ಲಿಮರ ಗೋರಿಯಾದರೂ ಹೊಡೆದುರುಳಿಸಬೇಕೆಂಬ ನಿಯಮದಿಂದ ಹೊರಗಿಲ್ಲ ಎಂದು ಹದೀಸ್'ಗಳನ್ನು ಕೂಲಂಕುಷವಾಗಿ ಪರೀಕ್ಷಿಸಿದರೆ ಕಾಣಲು ಸಾಧ್ಯ. ಪೂರ್ವಿಕರು ತಿಳಿದ ರೀತಿಯೂ ಅದುವೇ. ಈ ಹದೀಸ್ ಗಮನವಿಟ್ಟು ಓದಿ:

عَنْ عَلِيًّ لِأَبِي الْحَيَّاجِ : أَبْعَثُكَ عَلَى مَا بَعَثَنِي عَلَيْهِ رَسُولُ اللَّهِ صَلَّى اللَّهُ عَلَيْهِ وَ سَلَّمَ لاَ تَدَعَ قَبْرًا مُشْرِفًا إِلَّا سَوَّيْتَهُ يَعْنِي قُبُورَ الْمُسْلِمِينَ وَلَا تِمْثَالًا فِي بَيْتٍ إِلَّا طَمَسْتَهُ (المصنف لعبد الرزاق رقم 6487)

ಅಬುಲ್ ಹಯ್ಯಾಝ್(ರ) ರವರಿಂದ ವರದಿ: ಅಲೀ(ರ) ರವರು ನನ್ನಲ್ಲಿ ಹೇಳಿದರು: "ಪ್ರವಾದಿ(ಸ.ಅ) ರವರು ನನ್ನನ್ನು ನಿಯೋಗಿಸಿದ ಅದೇ ಕಾರ್ಯದೆಡೆಗೆ ನಿನ್ನನ್ನು ನಿಯೋಗಿಸಲೇ? ಎತ್ತರಿಸಲ್ಪಟ್ಟ ಯಾವ ಕಬರನ್ನೂ ಕೆಡವದೆ ಬಿಡಬಾರದು. ಅಂದರೆ ಮುಸ್ಲಿಮರ ಕಬರ್ ಗಳನ್ನು. ಮನೆಯೊಳಗಿರುವ ಯಾವ ವಿಗ್ರಹವನ್ನೂ ನಾಶಗೊಳಿಸದೆ ಬಿಡಬಾರದು."
(ಮುಸನ್ನಫ್ ಅಬ್ದುರ್ರಝ್ಝಾಕ್ - 6487)



ಇಲ್ಲಿ ಮುಸ್ಲಿಮರ ಕಬರ್ ಎಂದು ಪ್ರತ್ಯೇಕವಾಗಿ ಹೇಳಲಾಗಿದೆ. ಹಾಗೆಯೇ ಎತ್ತರಿಸಲ್ಪಟ್ಟ ಕಬರನ್ನು ಕೆಡವಿ ಸಮತಟ್ಟುಗೊಳಿಸಲು ಉಸ್ಮಾನ್(ರ) ರವರು ಆಜ್ಞಾಪಿಸಿರುವುದು ಮತ್ತು ಕಾರ್ಯ ರೂಪಕ್ಕೆ ತಂದಿರುವುದನ್ನು ಮುಸನ್ನಫ್ ಅಬ್ದುರ್ರಝ್ಝಾಕ್, ಹದೀಸ್ - 6489 ರಲ್ಲಿ ಮತ್ತು ಫುದಾಲತ್ (ರ) ರವರು ಕಾರ್ಯರೂಪಕ್ಕೆ ತಂದಿರುವುದನ್ನು ಸಹೀಹ್ ಮುಸ್ಲಿಮ್ ಹದಿಸ್ - 968 ರಲ್ಲಿಯೂ ಕಾಣಬಹುದು.

ಎತ್ತರಿಸಲ್ಪಟ್ಟ ಗೊರಿಗಳನ್ನೆಲ್ಲವನ್ನೂ ನೆಲಸಮಗೊಳಿಸಬೇಕು ಎಂಬ ಪ್ರವಾದಿ(ಸ) ರವರ ವಚನ ವನ್ನು ವ್ಯಾಖ್ಯಾನಿಸುತ್ತಾ ಇಮಾಮ್ ಶೌಕಾನಿ(ರ) ಬರೆಯುತ್ತಾರೆ:

"ಗೋರಿಯನ್ನು ಹೆಚ್ಚು ಎತ್ತರವಾಗಿ ಎತ್ತರಿಸಿ  ಕಟ್ಟಬಾರದು ಎಂಬುವುದಾಗಿದೆ ಸುನ್ನತ್ ‌.ಇದರಲ್ಲಿ ಮಹಾತ್ಮ ರು ಅಥವಾ ಸಾದಾರಣ ಜನರು ಎಂಬ ವ್ಯತ್ಯಾಸವಿಲ್ಲ...."
( ನೈಲುಲ್ ಔತಾರ್ 4/95)

ಮಾತ್ರವಲ್ಲ, ಪ್ರವಾದಿ(ಸ.ಅ) ರವರ ಕಬರ್ ಭೂಮಿಯಿಂದ ಒಂದು ಗೇಣಿನಷ್ಟು ಮಾತ್ರ ಎತ್ತರಿಸಿರುವುದು ಎಂದು ಹದಿಸ್'ಗಳಲ್ಲಿ ಪ್ರತ್ಯೇಕವಾಗಿ ಹೇಳಲಾಗಿದೆ.

عَنْ جَابِرٍ قَالَ : وَرُفِعَ قَبْرُهُ مِنَ الْأَرْضِ نَحْوًا مِنْ شِبْرٍ (ابن حبان رقم : 2160, 6635)

ಜಾಬಿರ್(ರ) ರವರಿಂದ ವರದಿ: "ಪ್ರವಾದಿ(ಸ.ಅ) ರವರ ಕಬರ್ ಭೂಮಿಯಿಂದ ಸರಿಸುಮಾರು ಒಂದು ಗೇಣಿನಷ್ಟು ಎತ್ತರಿಸಲ್ಪಟ್ಟಿದೆ."
(ಇಬ್ನ್ ಹಿಬ್ಬಾನ್ ಹದೀಸ್ - 2160,6635)

ಇನ್ನು ನಮ್ಮ ಊರಿನಲ್ಲಿ ಅತೀ ಹೆಚ್ಚು ಜನರು ಅನುಸರಿಸುತ್ತಿದ್ದೇವೆ ಅನ್ನುವ ಶಾಫಿಈ ಮದ್'ಹಬ್ ಕೂಡ ಕಬರ್ ಎತ್ತರಿಸಿ ಕಟ್ಟುವುದನ್ನು ಪ್ರಬಲವಾಗಿ ವಿರೋಧಿಸುತ್ತದೆ. ಇಮಾಮ್ ಶಾಫಿಈ(ರ) ರವರು ಹೇಳಿದ್ದು ಈ ಪ್ರಕಾರವಾಗಿದೆ:

وَإِنَّمَا أُحِبُّ أَنْ يُشَخَّصَ عَلَى وَجْهِ الأَرْضِ شِبْرًا أَوْ نَحْوَهُ وَأُحِبُّ أَنْ لَا يُبْنَيى وَلَا يُجَصَّصَ فَإِنَّ ذَلِكَ يُشْبِهُ الزَّينَةَ وَالْخُيَلَاعَ وَلَيْسَ الْمَوْتُ مَوْضِعَ وَاحِدٍ مِنْهُمَا وَلَمْ أَرَ قُبُورَ الْمُهَاجِرينَ وَالْأَنْصَارِ مُجَصَّصَةً....(قَالَ الْشَّافِعِيُّ) وَقَدْ رَأَيْتُ مِنَ الْوُلَاةِ مَنْ يَهْدِمُ بِمَكَّةَ مَايُبْنَي فِيهَا فَلَمْ أَرَ الْفُقَهَاءَ يَعِيبُونَ ذَلِكَ

"ಕಬರನ್ನು ಭೂಮಿಯಿಂದ ಒಂದು ಗೇಣು ಅಥವಾ ಅದಕ್ಕೆ ಸಮಾನವಾಗಿ ಎತ್ತರಿಸುವುದನ್ನು ಮಾತ್ರ ನಾನು(ಇಮಾಮ್ ಶಾಫಿಈ) ಇಷ್ಟಪಡುತ್ತೇನೆ. ಕಬರಿನ ಮೇಲೆ ಏನಾನನ್ನಾದರೂ ಕಟ್ಟಿ ಎತ್ತರಿಸುವುದನ್ನು ಕಟ್ಟಿ ಎತ್ತರಿಸದಿರುವುದನ್ನು ಮತ್ತು ಗಾರೆ ಹಚ್ಚದಿರುವುದನ್ನು ನಾನು ಇಷ್ಟಪಡುತ್ತೇನೆ. ಯಾಕೆಂದರೆ ಅದು ಅಲಂಕಾರ ಮತ್ತು ಅಹಂಭಾವವನ್ನು ಹೋಲುತ್ತದೆ. ಆದರೆ ಮರಣವು ಅಲಂಕಾರ ಮತ್ತು ಅಹಂಭಾವದ ಸ್ಥಳವಲ್ಲ. ಮುಹಾಜಿರ್ ಮತ್ತು ಅನ್ಸಾರ್'ಗಳಾದ ಸಹಾಬಿಗಳ ಕಬರ್'ಗಳಿಗೆ ಗಾರೆ ಹಚ್ಚಿರುವುದಾಗಿ ನಾನು ಕಂಡಿಲ್ಲ. (ಇಮಾಮ್ ಶಾಫಿಈ ರವರು ಹೇಳುತ್ತಾರೆ:) ಮಕ್ಕಾದ ಆಡಳಿತಾಧಿಕಾರಿಗಳು ಅಲ್ಲಿ ಕಬರ್'ಗಳ ಮೇಲೆ ನಿರ್ಮಿಸಲಾದ ಕಟ್ಟಡಗಲನ್ನು ಕೆಡವುದನ್ನು ನಾನು ಕಂಡಿದ್ದೇನೆ. ಮಕ್ಕಾದ ಯಾವುದೇ ವಿದ್ವಾಂಸರು ಅದನ್ನು ಆಕ್ಷೇಪಿಸುವುದಾಗಿ ನಾನು ಕಂಡಿಲ್ಲ."
ನೋಡಿರಿ! ಇಲ್ಲಿ ಜಗತ್ತು ಕಂಡ ಅತಿದೊಡ್ಡ ಔಲಿಯಾಗಳೆಂದು ವಿಶ್ಲೇಷಿಸುವ ಪ್ರವಾದಿ(ಸ.ಅ) ರವರ ಸಹಾಬಿಗಳಾದ, ಅನ್ಸಾರ್ ಮತ್ತು ಮುಹಾಜಿರ್'ಗಳ ಕಬರ್'ಗಳನ್ನು ಕೂಡ ಎತ್ತರಿಸಲ್ಪಟ್ಟಿರಲಿಲ್ಲ ಮತ್ತು ಗಾರೆ ಹಚ್ಚಿರಲಿಲ್ಲ ಎಂದು ಸಾಕ್ಷಾತ್ ಇಮಾಮ್ ಶಾಫಿಈ (ರ) ರವರೇ ಸ್ಪಷ್ಟಪಡಿಸುತ್ತಾರೆ.
ಮೇಲಿನ ಇಮಾಮ್ ಶಾಫಿಈ(ರ) ರವರ ಮಾತಿನಲ್ಲಿ ಇನ್ನೊಂದು ಮುಖ್ಯವಾದ ವಿಷಯವನ್ನು ಗಮನಿಸಿ,
"ಕಬರ್'ಗಳನ್ನು ಕಟ್ಟಿ ಎತ್ತರಿಸದಿರುವುದನ್ನು ಮತ್ತು ಗಾರೆ ಹಚ್ಚದಿರುವುದನ್ನು ನಾನು ಇಷ್ಟಪಡುತ್ತೇನೆ. ಯಾಕೆಂದರೆ ಅದು ಅಲಂಕಾರ ಮತ್ತು ಅಹಂಭಾವವನ್ನು ಹೋಲುತ್ತದೆ. ಆದರೆ ಮರಣವು ಅಲಂಕಾರ ಮತ್ತು ಅಹಂಭಾವದ ಸ್ಥಳವಲ್ಲ."
ಕಬರ್ ಝಿಯಾರತ್ ಎರಡು ಉದ್ದೇಶಗಳಿಗೆ ಮಾತ್ರ ಒಂದು ನಮ್ಮ ಮರಣವನ್ನು ನೆನಪಿಸಲು, ಇನ್ನು ಎರಡನೇಯದು ಮರಣಹೊಂದಿದವರಿಗಾಗಿ ಅಲ್ಲಾಹನಲ್ಲಿ ಕ್ಷಮೆ ಬೇಡಲು.
ಹಾಗಾದರೆ ಮದುಮಗಳ ರೀತಿ ಶೃಂಗರಿಸ್ಪಟ್ಟ ದರ್ಗಾಗಳನ್ನು ನೋಡುವಾಗ ಮರಣದ ನೆನಪು ಮೂಡಲು ಸಾಧ್ಯವೇ...? ಖಂಡಿತಾ ಇಲ್ಲ.

ಎರಡನೇ ಶಾಫಿಈ ಎಂದೇ ಖ್ಯಾತರಾದ ಇಮಾಮ್ ನವವಿ(ರ) ಹೇಳುತ್ತಾರೆ:

فِيهِ أَنَّ سُنَّةَ أَنَّ الْقَبْرَ لَا يُرْفَعُ عَلَى الْأَرْضِ رَفْعًا كَثِيرًا وَلَا يُسَنَّمُ بَلْ يُرْفَعُ نَحْوَ شِبْرٍ وَيُسَطَّحُ وَهَذَا مَذْهَبُ الشَّافِعِيِّ وَمَنْ وَافَقَهُ

"ಪ್ರವಾದಿ(ಸ.ಅ) ರವರ ಚರ್ಯೆಯ ಪ್ರಕಾರ, ಕಬರನ್ನು ಭೂಮಿಯಿಂದ ಹೆಚ್ಚು ಎತ್ತರಿಸಬಾರದು. ಮೇಲ್ಭಾಗವನ್ನು ವೃತ್ತಾಕಾರಗೊಳಿಸಬಾರದು. ಒಂದು ಗೇಣು ಎತ್ತರಿಸಿದ ಬಳಿಕ ಸಮಗೊಳಿಸಬೇಕು. ಇಮಾಮ್ ಶಾಫಿಈ(ರ) ರವರ ಮತ್ತು ಅವರೊಂದಿಗೆ ಸಹಮತಿರುವವರ ಅಭಿಪ್ರಾಯ ಇದಾಗಿದೆ."
(ಶರಹ್ ಮುಸ್ಲಿಮ್: 4/42)

ಶಾಫಿಈ ಮದ್ ಹಬ್ ನ ಇನ್ನೊಬ್ಬ ಪ್ರಮುಖ ವಿದ್ವಾಂಸರಾದ ಇಬ್ನ್ ಹಜರುಲ್ ಹೈತಮಿ ಹೇಳುತ್ತಾರೆ:

وَتَجِبُ الْمُبَادَرَةُ لِهَدْمِهَا وَهَدْمِ الْقِبَابِ الَّتِي عَلَى الْقُبُورِ إِذْهِيَ أَضَرُّ مِنْ مَسْجِدِ الْضِّرَارِ لِأَنَّهَا أُسِّسَتْ عَلَى مَعْصِيَةِ رَسُولِ اللَّهِ صَلَّى اللَّهُ عَلَيْهِ وَسَلَّمَ لِأَنَّهُ نَهَي عَنْ ذَلِكَ

"ಎತ್ತರಿಸಿ ಕಟ್ಟಿರುವ ಕಬರ್'ಗಳನ್ನು ಮತ್ತು ಅದರ ಮೇಲಿರುವ ಗುಮ್ಮಟಗಳನ್ನು ಕೆಡವಲು ಮುನ್ನುಗ್ಗುವುದು ಕಡ್ಡಾಯವಾಗಿದೆ. ಕಾರಣವೇನೆಂದರೆ, ಅದು ಮುಸ್ಜಿದುಲ್ ದ್ದಿರಾರ್'ಗಿಂತಲೂ (ಕಪಟ ವಿಶ್ವಾಸಿಗಳು ನಿರ್ಮಿಸಿದ ಮಸೀದಿ) ಹೆಚ್ಚು ಅಪಾಯಕಾರಿಯಾಗಿದೆ. ಯಾಕೆಂದರೆ ಇವುಗಳು (ಇಂತಹ ದರ್ಗಾಗಳು ಮತ್ತು ಗುಮ್ಮಟಗಳು ನಿರ್ಮಿಸಲ್ಪಟ್ಟಿರುವುದು ಪ್ರವಾದಿ(ಸ.ಅ) ರವರ ಆಜ್ಞೆ ಉಲ್ಲಂಘನೆಯ ಮೇಲೆಯಾಗಿದೆ. ಕಾರಣ, ಪ್ರವಾದಿ(ಸ.ಅ) ರವರು ಅದನ್ನು ವಿರೋಧಿಸಿದ್ದಾರೆ."
(ಅಝ್ಝುವಾಜಿರ್ : 1/149)
ಒಟ್ಟಿನಲ್ಲಿ ಕಬರ್ ಎಷ್ಟೊಂದು ಮಹಾನ್ ವ್ಯಕ್ತಿಯದ್ದಾಗಿದ್ದರೂ, ಭೂಮಿಯ ಮೇಲೆ ಮೇಲ್ಭಾಗದಿಂದ ಒಂದು ಗೇಣು ಮಾತ್ರವೇ ಎತ್ತರಿಸಲು ಅನುಮತಿಯಿರುವುದು. ಅದಕ್ಕಿಂತ ಹೆಚ್ಚು ಎತ್ತರಿಸಿರುವ ಕಬರ್ ಗಳನ್ನು ಕೆಡವಿ ಸಮತಟ್ಟು ಗೊಳಿಸಬೇಕೆಂಬುವುದು ಸ್ವಹಾಬಿಗಳ ಆಹ್ವಾನವೂ ಆಗಿದೆ. ಶಾಫಿಈ ಮದ್ ಹಬ್ ಕೂಡ ಅದನ್ನೇ ಹೇಳಿದೆ. ಆದರೆ ವಿಪರ್ಯಾಸವೇನೆಂದರೆ ಈ ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳಿದವರು ನಮ್ಮ ಸಮಾಜದಲ್ಲಿ ನೂತನವಾದಿಯಾಗಿಯೂ, ಇನ್ನು ಇಲ್ಲದ್ದನ್ನು ಸೇರಿಸಿ ಅಥವಾ ಇರುವುದನ್ನು ದುರ್ವ್ಯಾಖ್ಯಾನಿಸಿ ಹೇಳುವವರು ಪುರಾತನವಾದಿಯಾಗಿಯೂ ತಮ್ಮನ್ನು ಹೆಸರಿಸುತ್ತಿರುವುದು ತುಂಬಾ ಖೇದಕರ ಸಂಗತಿ.

ರಬೀಅ ಬಿನ್ ಕಅಬ್ (ರ)ರವರು ಪ್ರವಾದಿ(ಸ) ರವರಲ್ಲಿ ಸ್ವರ್ಗ ಕೇಳಿದ್ದಾರೆಯೇ?

ರಬೀಅ (ರ)ರವರು ಪ್ರವಾದಿ(ಸ) ರವರಲ್ಲಿ ಸ್ವರ್ಗ ಕೇಳಿದ್ದಾರೆಯೇ?

ವಾಸ್ತವವೇನು?

*ಸಮಸ್ತ ಕುಬೂರಿಗಳ ದುರ್ವ್ಯಾಖ್ಯಾನ ಕ್ಕೆ ನೈಜ್ಯ ಸುನ್ನತ್ ಜಮಾ'ಅತಿನ ದಿಟ್ಟ ಉತ್ತರ...*

📌
قَالَ: كُنْتُ أَخْدُمُ النَّبِيَّ نَهَارِي، فَإذَا كَانَ اللَّيْلُ آوَيْتُ  إلَى بَابِ رَسُولِ اللَّهِ فَبِتُّ عِنْدَهُ فَلاَ أَزَالُ أَسْمَعُهُ يَقُولُ: «سُبْحَانَ اللَّهِ، سُبْحَانَ اللَّهِ، سُبْحَانَ رَبِّي» حَتَّى أَمَلَّ أَوْ تَغْلِبَنِي عَيْنِي فَأَنَامُ، فَقَالَ يَوْماً: «يَا رَبِيعَةَ سَلْنِي فَأُعْطِيَكَ؟» فَقُلْتُ: أَنْظِرْنِي حَتَّى أَنْظُرَ، وَتَذَكَّرْتُ أَنَّ الدُّنْيَا فَانِيَةٌ مُنْقَطِعَةٌ، فَقُلْتُ: يَا رَسُولَ اللَّهِ أَسْأَلُكَ أَنْ تَدْعُوَ اللَّهَ أَنْ يُنَجِّيَنِي مِنَ النَّارِ، وَيُدْخِلَنِي الْجَنَّةَ، فَسَكَتَ رَسُولُ اللَّهِ، ثُمَّ قَالَ: «مَنْ أَمَرَكَ بِهٰذَا؟» قُلْتُ: مَا أَمَرَنِي بِهِ أَحَدٌ، وَلٰكِنِّي عَلِمْتُ أَنَّ الدُّنْيَا مُنْقَطِعَةٌ فَانِيَةٌ، وَأَنْتَ مِنَ اللَّهِ بِٱلْمَكَانِ الَّذِي أَنْتَ مِنْهُ فَأَحْبَبْتُ أَنْ تَدْعُوَ اللَّهَ لِي، قَالَ: «إنِّي فَاعِلٌ فَأَعِنِّي عَلَى نَفْسِكَ بِكَثْرَةِ السُّجُودِ». رواه الطبراني في الكبير من رواية ابن إسحاق واللفظ له،
ورواه مسلم وأبو داود مختصراً،


*ಇಮಾಂ ಮುಸ್ಲಿಂ ಉದ್ದರಿಸಿದ  ಈ ಹದೀಸ್ ಮಕ್ತಸರ್(ಸಂಕ್ಷಿಪ್ತ) ಆಗಿದೆ .ಇದರ ಪೂರ್ಣ ರೂಪವು *ಇಮಾಂ ಅಹ್ಮದ್ ಹಾಗೂ ತ್ವಬ್ರಾನಿ* ವರದಿಮಾಡಿದ್ದಾರೆ.

17030- قال حدثنا عبد الله حدثنى أبى حدثنا يعقوب قال حدثنا أبى عن ابن إسحاق قال حدثنى محمد بن عمرو بن عطاء عن نعيم بن مجمر عن ربيعة بن كعب قال كنت أخدم رسول الله -صلى الله عليه وسلم- وأقوم له فى حوائجه نهارى أجمع حتى يصلى رسول الله -صلى الله عليه وسلم- العشاء الآخرة فأجلس ببابه إذا دخل بيته أقول لعلها أن تحدث لرسول الله -صلى الله عليه وسلم- حاجة فما أزال أسمعه يقول رسول الله -صلى الله عليه وسلم- « سبحان الله سبحان الله سبحان الله وبحمده ». حتى أمل فأرجع أو تغلبنى عينى فأرقد. قال فقال لى يوما لما يرى من خفتى له وخدمتى إياه « سلنى يا ربيعة أعطك ». قال فقلت نظر فى أمرى يا رسول الله ثم أعلمك ذلك - قال - ففكرت فى نفسى فعرفت أن الدنيا منقطعة زائلة وأن لى فيها رزقا سيكفينى ويأتينى - قال - فقلت أسأل رسول الله -صلى الله عليه وسلم- لآخرتى فإنه من الله عز وجل بالمنزل الذى هو به - قال - فجئته فقال « ما فعلت يا ربيعة ». فقلت عم يا رسول الله أسألك أن تشفع لى إلى ربك فيعتقنى من النار. قال فقال « من أمرك بهذا يا ربيعة ». قال فقلت لا والله الذى بعثك بالحق ما أمرنى به أحد ولكنك لما قلت سلنى أعطك وكنت من الله بالمنزل الذى أنت به نظرت فى أمرى وعرفت أن الدنيا منقطعة وزائلة وأن لى فيها رزقا سيأتينى فقلت أسأل رسول الله -صلى الله عليه وسلم- لآخرتى - قال - فصمت رسول الله -صلى الله عليه وسلم- طويلا ثم قال لى « إنى فاعل فأعنى على نفسك بكثرة السجود ».
مسند احمد

4576 - حَدَّثَنَا مُحَمَّدُ بْنُ النَّضْرِ الْأَزْدِيُّ، ثنا أَحْمَدُ بْنُ عَبْدِ الْمَلِكِ بْنِ وَاقِدٍ الْحَرَّانِيُّ، ثنا مُحَمَّدُ بْنُ سَلَمَةَ، عَنْ مُحَمَّدِ بْنِ إِسْحَاقَ، عَنْ مُحَمَّدِ بْنِ عَمْرِو بْنِ عَطَاءٍ، عَنْ نُعَيْمٍ الْمُجْمِرِ، عَنْ رَبِيعَةَ بْنِ كَعْبٍ، قَالَ: كُنْتُ أَخْدُمُ رَسُولَ اللهِ صَلَّى اللهُ عَلَيْهِ وَسَلَّمَ نَهَارِي فَإِذَا كَانَ اللَّيْلُ أَوَيْتُ إِلَى بَابِ رَسُولِ اللهِ صَلَّى اللهُ عَلَيْهِ وَسَلَّمَ فَبَتُّ عِنْدَهُ، فَلَا أَزَالُ أَسْمَعُهُ يَقُولُ: «سُبْحَانَ اللهِ سُبْحَانَ رَبِّي» حَتَّى أَمَلُّ أَوْ تَغْلِبَنِي عَيْنِي فَأَنَامُ، فَقَالَ ذَاتَ يَوْمٍ: «يَا رَبِيعَةُ سَلْنِي فَأُعْطِيَكَ» قُلْتُ: أَنْظِرْنِي حَتَّى أَنْظُرَ، وتَذَكَرْتُ أَنَّ الدُّنْيَا فَانِيَةٌ مُنْقَطِعَةٌ فَقُلْتُ: يَا رَسُولَ اللهِ، أَسْأَلُكَ أنْ تَدْعُوَ اللهَ أَنْ يُجَنِّبَنِي مِنَ النَّارِ وَيُدْخِلَنِي الْجَنَّةَ، فَسَكَتَ رَسُولُ اللهِ صَلَّى اللهُ عَلَيْهِ وَسَلَّمَ، ثُمَّ قَالَ: «مَنْ أَمَرَكَ بِهَذَا؟» قُلْتُ: مَا أَمَرَنِي بِهِ أَحَدٌ، وَلَكِنِّي عَلِمْتُ أَنَّ الدُّنْيَا مُنْقَطِعَةٌ فَانِيَةٌ وَأَنْتَ مِنَ اللهِ بِالْمَكَانِ الَّذِي أَنْتَ بِهِ أَحْبَبْتُ أنْ تَدْعُوَ اللهَ قَالَ: «إِنِّي فَاعِلٌ، فَأَعِنِّي بِكَثْرَةِ السُّجُودِ»
المجمع الكبير للطبراني*


ಮೇಲೆ  *ತ್ವಬ್ರಾನಿ ಹಾಗೂ ಮುಸ್ನದ್ ಅಹ್ಮದ್*  ಉದ್ದರಿಸಿದ ಹದೀಸ್ ಗಳಲ್ಲಿ ವ್ಯಕ್ತವಾಗುವುದೇನೆಂದರೆ
 *ರಬೀಅ* (ರ)ರು *ಪ್ರವಾದಿ*(ಸ) ರವರಲ್ಲಿ ಸ್ವರ್ಗ ಕೇಳುವ ಸಂಭವ ಎಲ್ಲಿಯೂ ಕಾಣಲಿಕ್ಕೆ ಸಾಧ್ಯವಾಗುವುದಿಲ್ಲ.ಅದರ ಬದಲು *ಪ್ರವಾದಿ*(ಸ)ರಲ್ಲಿ ಸ್ವರ್ಗ ಸಿಗಲಿಕ್ಕೆ ತಾವು ದುವಾ ಮಾಡಿ ಎಂದು ಉಲ್ಲೇಖಿಸಲ್ಪಟ್ಟಿದೆ.

 *ರಬೀಅ* (ರ)ರವರು ಕೇಳಿದಕ್ಕೆ ಪ್ರತಿಯಾಗಿ *ಪ್ರವಾದಿ*(ಸ)ರ ಉತ್ತರ ಏನಾಗಿತ್ತೆಂದು ತಿಳಿದರೆ  ಸಹಾಬಿಯವರು ಉದ್ದೇಶಿಸಿದ್ದೇನೆಂದು ಸ್ಪಷ್ಟವಾಗುತ್ತದೆ.

*ಪ್ರವಾದಿ(ಸ)ರವರು ಹೇಳಿದರು: ರಬೀಅ ನೀನು ಅಲ್ಲಾಹನಿಗೆ ಸುಜೂದ್ ವರ್ಧಿಸು ಅದು ನಿನಗೆ ಸ್ವರ್ಗ ಸಿಗಲಿಕ್ಕೆ ಕಾರಣವಾಗಬಹುದು*..

ಇದಾಗಿದೆ ಈ ಹಧೀಸ್ ಗಳ ಸಾರಾಂಶ. ಇಂತಹ ಹದೀಸ್ ಗಳಿಗೆ  ಸಮಸ್ತದವರ ವ್ಯಾಖ್ಯಾನ ನೀಡಿ  ದುರ್ವ್ಯಾಖ್ಯಾನ ಮಾಡಿ ತಮ್ಮ ಲೌಕಿಕ ಲಾಭಕೋಸ್ಕರ ಜನರನ್ನು ಸನ್ಮಾರ್ಗದಿಂದ ತಡೆಯುತ್ತಾರೆ.




📌
..ಇನ್ನು ಈ ಹದೀಸಿನ ಆಧಾರದಲ್ಲಿ ನಮಗೆ ಮರಣ ಹೊಂದಿದ ಮಹಾತ್ಮರಲ್ಲಿ ಸಹಾಯ ಯಾಚಿಸಬಹುದೆಂದು ಹೇಳಿದ ಸಹಾಬಿಗಳ ಹೆಸರು ಹೇಳಬಹುದೇ?


ಹದೀಸಿಗೆ ವ್ಯಾಖ್ಯಾನ ನೀಡಿದ ಮುಹದ್ದಿಸ್ ಗಳು ಯಾರಾದರೂ  ಮರಣ ಹೊಂದಿದವರಲ್ಲಿ ಸಹಾಯ ಯಾಚಿಸಬಹುದೆಂದು ಹೇಳಿದ್ದಾರೆಯೇ?

ಸಮಸ್ತದವರ ವ್ಯಾಖ್ಯಾನ ಇಸ್ಲಾಮಿಗೆ ಪ್ರಮಾಣವಲ್ಲ


📌


ಎಲ್ಲಾ ಮಹಾತ್ಮರೂ ,ವಿದ್ವಾಂಸರೂ ಈ ಹದೀಸ್ ಸುಜೂದಿನ ಮಹತ್ವ ನಮಗೆ ಕಲಿಸಿ ಕೊಡುತ್ತದೆ ಎಂದು ಹೇಳದ್ದಾರೆ .ಅದರ ಹೊರತು ಮರಣ ಹೊಂದಿದವರಲ್ಲಿ ಬೇಡಬಹುದೆಂದು ಇವರ *ಶಿಯಾ* ಜಮಾ'ಅತಲ್ಲದೆ ಬೇರೆ ಯಾರೂ ಕೂಡ ಹೇಳಲಿಲ್ಲ.




📌
ಮಾತ್ರವಲ್ಲ ಇವರು ದುರ್ವ್ಯಾಖ್ಯಾನ ಮಾಡುವ *ಸಹೀಹ್ ಮುಸ್ಲಿಂ* ಗೆ ಶರಹ್ ನೀಡಿದ  *ಇಮಾಂ ನವವಿ(ರ)ರವರು* ಕೂಡ ಈ ಹದೀಸಿನ ಆಧಾರದಲ್ಲಿ ಮರಣ ಹೊಂದಿದ ಮಹಾತ್ಮ ರಲ್ಲಿ ಸಹಾಯಾಚಿಸಬಹುದೆಂದು ಹೇಳಲಿಲ್ಲ.
ಸಮಸ್ತದವರು ಪ್ರಚಾರ ಮಾಡುವ ಇನ್ನೊಂದು ಸುಳ್ಳಾಗಿದೆ ಸಲಫಿಗಳು ಕುರ್'ಆನ್ ಮತ್ತು ಹದೀಸಿಗೆ ಸ್ವಂತ ವ್ಯಾಖ್ಯಾನ ನೀಡಿ ಜನರನ್ನು ವಂಚಿಸುತ್ತಾರೆಂದು, ಆದರೆ ಮೇಲಿನ ಹದೀಸ್ ಸಮಸ್ತದವರೇ ದುರ್ವ್ಯಾಖ್ಯಾನಿಗಳೆಂಬುದಕ್ಕೆ(ಪುರಾವೆಯಾಗಿದೆ) ಸಾಕ್ಷಿಯಾಗಿದೆ.
 *ಇಮಾಂ ನವವಿ* (ರ)ರವರು ಸುಜೂದಿನ ಮಹತ್ವ ವಿವರಿಸುವ ಅಧ್ಯಾಯದ ಲ್ಲಾಗಿದೆ ಮೇಲಿನ ಹದೀಸ್ ಉಲ್ಲೇಖಿಸುವುದೆಂಬುದು ಗಮನಾರ್ಹ.

⤵⤵⤵⤵
2: الكتب » صحيح مسلم » كتاب الصلاة » باب فضل السجود والحث عليه


: فيه الحث على كثرة السجود والترغيب فيه، والمراد به السجود في الصلاة. انتهى
شرح مسلم


...ಇದರಿಂದ ವ್ಯಕ್ತವಾಗುವುದೇನೆಂದರೆ  ಈ ಹದೀಸನ್ನು ಸಮಸ್ತದವರ ವ್ಯಾಖ್ಯಾನ ದ ಹಾಗೆ ಯಾವ ಮುಹದ್ಸಿಸ್'ಗಳು, ಇಮಾಮರು ,ವಿದ್ವಾಂಸರು ಕೂಡ ಹಾಗೆ ವ್ಯಾಖ್ಯಾನ ನೀಡಲಿಲ್ಲ ಎಂದು


📌
ರಸೂಲ್ (ಸ) ರಿಗೆ ಯಾರಿಗೂ ಸ್ವರ್ಗ ಕೊಡಲು ಸಾಧ್ಯವಿಲ್ಲ. ಹಾಗೆ ಕೊಡುತಿದ್ದರೆ ಪ್ರವಾದಿ(ಸ)ರವರ ಕಣ್ಮಣಿಯಾದ ಫಾತಿಮಾ (ರ)ಕೊಡುತಿದ್ದರು.


قَامَ رَسُولُ اللَّهِ - صلى الله عليه وسلم - حِينَ أَنْزَلَ اللَّهُعَزَّ وَجَلَّ ( وَأَنْذِرْ عَشِيرَتَكَ الأَقْرَبِينَ ) قَالَ : ( يَا مَعْشَرَ قُرَيْشٍ - أَوْ كَلِمَةً نَحْوَهَا - اشْتَرُوا أَنْفُسَكُمْ ، لاَ أُغْنِي عَنْكُمْ مِنَ اللَّهِ شَيْئًا ، يَا بَنِي عَبْدِ مَنَافٍ لاَ أُغْنِي عَنْكُمْ مِنَ اللَّهِ شَيْئًا ، يَا عَبَّاسُ بْنَ عَبْدِ الْمُطَّلِبِ لاَ أُغْنِي عَنْكَ مِنَ اللَّهِ شَيْئًا ، وَيَا صَفِيَّةُ عَمَّةَ رَسُولِ اللَّهِ لاَ أُغْنِي عَنْكِ مِنَ اللَّهِ شَيْئًا ، وَيَا فَاطِمَةُ بِنْتَ مُحَمَّدٍ سَلِينِي مَا شِئْتِ مِنْ مَالِي لاَ أُغْنِي عَنْكِ مِنَ اللَّهِ شَيْئًا ) رواه البخاري (2753) ومسلم (206


*ಬುಖಾರಿ* ಹಾಗೂ *ಮುಸ್ಲಿಂ* ನಲ್ಲಿ ಕೂಡ ಉಧ್ದರಿಸಿದ ಹದೀಸನ್ನು ನೋಡಿ . ..ಪ್ರವಾದಿ(ಸ )ರು ಖುರೈಶಿ ಸಮುದಾಯವನ್ನು ಕರೆದು ಹೇಳುತ್ತಾರೆ, ನಿಮಗೆ ಅಲ್ಲಾಹುವಿನಿಂದ  ಏನಾನ್ನಾದರೂ ಗಳಿಸಿ ಕೊಡಲು ನನಗೆ ಸಾಧ್ಯವಿಲ್ಲ.ನಂತರ ಫಾತಿಮಾ (ರ)ರವರಲ್ಲಿ ಹೇಳುತ್ತಾರೆ: ನನ್ನ ಸಂಪತ್ತಿನಿಂದ  ಏನು ಬೇಕಾದರೂ ಕೇಳು ನಾನು ಕೊಡುತ್ತೇನೆ ಆದರೆ ಅಲ್ಲಾಹನಿಂದ ಏನಾದರು ಬೇಕೆಂದು ನನಲ್ಲಿ ಕೇಳಿದರೆ ಅದನ್ನು ಕೊಡಲು ನನಗೆ ಸಾಧ್ಯವಿಲ್ಲ.

ನೋಡಿ ವಿಶ್ವಾಸಿಗಳೇ ಪ್ರವಾದಿ (ಸ)ರು ತಮ್ಮ ಮಗಳಲ್ಲಿ ಹೇಳಿದ ಮಾತನ್ನು



📌ಇನ್ನು ಈ ದುರ್ವ್ಯಾಖ್ಯಾನ *ವೀರರಿಗೆ*ಅವರು ಅಂಗೀಕರಿಸುವ ಇಸ್ತಿಗಾಸವಾದಿಯಾದ ಇವರ *ಇಮಾಂ ಸುಬುಕಿ*ಕೂಡ ಇದನ್ನು ಇಸ್ತಿಗಾಸಕ್ಕೆ ಪುರಾವೆಯಾಗಿ ಉಲ್ಲೇಖಿಸಲಿಲ್ಲ.ಸುಬುಕಿ ಹೇಳುವುದನ್ನೂ ನೋಡಿ⤵

النوع الثالث من التوسل : ان يُطلبَ منه ذلك الأمر المقصود ، بمعنى أنه صلى الله عليه وسلم قادرٌ على التَّسبُّب فيه ؛ بسؤاله ربه وشفاعته إليه ، فيعود إلى « النوع الثاني » في المعنى ، وإن كانت العبارة مختلفة ، ومن هذا قول القائل للنبي صلى الله عليه وسلم : أسألك مُرافقتكَ في الجنة ، قال : « أَعِنِّي على نفسك بكثرة السجود » .والآثار في ذلك كثيرة أيضاً ، ولا يَقصدُ الناس بسؤالهم ذلك إلَّا كون النبي صلى الله عليه وسلم سبباً وشافعاً ، وكذلك جَوابُ النبي صلى الله عليه وسلم


شفاء السقام
امام سبكي

ಸಹೋದರರೇ ಇನ್ನಾದರೂ‌ ಸಮಸ್ತದವರ ದುರ್ವ್ಯಾಖ್ಯಾನ ಗಳನ್ನು ಅರ್ಥಮಾಡ್ಕೊಳ್ಳಿರಿ

ಅಲ್ಲಾಹನು ಇವರ ಫಿತ್ನಗಳಿಂದ ನಮ್ಮನ್ನು ರಕ್ಷಿಸಲಿ

ಆಮೀನ್

*ಮುಷ್ತಾಕಅಬ್ದುರ್ರಹ್ಮಾನ್🌹🌹🖊*🖊

ವಫಾತಾದ ಪ್ರವಾದಿ(ಸ)ರವರಲ್ಲಿ ಸಿದ್ದೀಕ್,(ರ)ರವರ ಜನಾಝ ದಫನ ಮಾಡಲಿಕ್ಕೆ ಅನುಮತಿ ಕೇಳಿದ್ದಾರೆಯೇ?

ವಫಾತಾದ ಪ್ರವಾದಿ(ಸ)ರವರಲ್ಲಿ ಸಿದ್ದೀಕ್,(ರ)ರವರ ಜನಾಝ ದಫನ ಮಾಡಲಿಕ್ಕೆ ಅನುಮತಿ ಕೇಳಿದ್ದಾರೆಯೇ?

ಅಲ್ಲಾಹೇತರರನ್ನು ಪ್ರಾರ್ಥಿಸಲಿಕ್ಕೂ ಸಹಾಯ ಯಾಚಿಸಲಿಕ್ಕೂ ನಾನಾ ರೀತಿಯ ಪುರಾವೆಗಳನ್ನು ಕುರ್'ಆನ್ ಮತ್ತು ಹದೀಸಿನಿಂದ ಕಂಡು ಹಿಡಿದು ದುರ್ವ್ಯಾಖ್ಯಾನ ಮಾಡಿ ಮುಗ್ಧ ಜನರನ್ನು ವಂಚಿಸುತ್ತಿರುವ ಈ ಸಂದರ್ಭ ದಲ್ಲಿ ಇಂತಹ ಲೇಖನಗಳು ಓದುಗರಿಗೆ ಪ್ರಯೋಜನವಾಗಲಿ ಎಂಬ ಉದ್ದೇಶ ದಿಂದ ಬರೆಯುತಿದ್ದೇನೆ.


👉🏾ಅಬೂ ಬಕರ್ ಸಿದ್ದೀಕ್ (ರ)ರು ಮರಣ ಹೊಂದುವ ಮುನ್ನ ಪ್ರವಾದಿ(ಸ)ರ ಹತ್ತಿರ ದಫನ ಮಾಡಲಿಕ್ಕೆ ಅನುಮತಿ ಕೇಳಿದ ಕಥೆ.


ವಫಾತಾದ ಪ್ರವಾದಿ(ಸ) ಕಬರಿನ ಹತ್ತಿರ  ಬಂದು ಸಮ್ಮತಿ ಕೇಳಿದಾಗ ಪ್ರವಾದಿ(ಸ)ರವರು ಅದಕ್ಕೆ ಅನುಮತಿ ಕೊಟ್ಟ ವಿಷಯವನ್ನು ವಿವರಿಸುತ್ತೇನೆ.
..
"ತನ್ನ ಮರಣ ಆಸನ್ನವಾದ ಸಮಯದಲ್ಲಿ ಅಬೂಬಕರ್ ಸಿದ್ದೀಕ್(ರ)ರು ಜೊತೆಯಲ್ಲಿದ್ದವ ರಲ್ಲಿ ಹೀಗೆ ಹೇಳಿದರು:ನಾನು ಮರಣಹೊಂದಿದರೆ ನನ್ನ ಮಯ್ಯಿತನ್ನು ಪ್ರವಾದಿ(ಸ)ರ ಕಬರಿನ ಹತ್ತಿರ ಕೊಂಡು ಹೋಗಿ ಅಲ್ಲಿ ನೀವು ಹೀಗೆ ಹೇಳಿ:

 السلام عليك يا الرسول   الله."

 ಇದು ನಿಮ್ಮ ಆತ್ಮೀಯ ಸ್ನೇಹಿತ ಅಬೂಬಕರಿನ (ರ) ಜನಾಝಾಗಿದೆ.
..ಇವರನ್ನು ಇಲ್ಲಿ ದಫನ ಮಾಡಲಿಕ್ಕೆ ಅನುಮತಿ ಕೇಳುತಿದ್ದಾರೆ." ಅದರ ನಂತರ ಪ್ರವಾದಿ (ಸ)ರ ಅನುಮತಿ ಸಿಕ್ಕಿದರೆ ನನ್ನನ್ನು ಪ್ರವಾದಿ(ಸ)ರ ಹತ್ತಿರ ದಫನ ಮಾಡಿ ..

ಆ ಸಂದರ್ಭದಲ್ಲಿ ಒಳಗಿನಿಂದ ಅಶರೀರ ವಾಣಿ(ಪ್ರವಾದಿ ಸ)  ಕೇಳಿಸಿತು. (ನವೂಝು ಬಿಲ್ಲಾಹ್)
"ನನ್ನ ಸ್ನೇಹಿತನನ್ನು ಇಲ್ಲಿ ದಫನ ಮಾಡಿ " ಎಂದು

⬇⬇⬇⬇⬇⬇⬇

أخرج ابن عساكر في تاريخه قال: روي أن أبا بكر رضي الله عنه لما حضرته


الوفاة قال لمن حضره: إذا أنا مت وفرغتم من جهازي فاحملوني حتى تقفوا
بباب البيت الذي فيه قبر النبي صلى الله عليه وسلم فقفوا بالباب وقولوا:
السلام عليك يا رسول الله! هذا أبو بكر يستأذن. فإن أذن لكم بأن فتح
الباب وكان الباب مغلقا بقفل فادخلوني وادفنوني، وإن لم يفتح الباب
فأخرجوني إلى البقيع وادفنوني به، فلما وقفوا على الباب وقالوا ما ذكر
سقط القفل وانفتح الباب وإذا بهاتف يهتف من القبر: ادخلوا الحبيب إلى
الحبيب فإن الحبيب إلى الحبيب مشتاق.
وذكره الرازي في تفسيره 5 ص 378،

⤴⤴ಇದಾಗಿದೆ ಸಮಸ್ತದವರ ಇಸ್ತಿಗಾಸಕ್ಕೆ ಪುರಾವೆ

ಇನ್ನು ವಿಷಯಕ್ಕೆ ಬರೋಣ....

ಮುಸ್ಲಿಮರು ಎಂಬ ಕಾರಣಕ್ಕೆ ಕೇಳಿದನ್ನೆಲ್ಲಾ ಕಣ್ಣುಮುಚ್ಚಿ ವಿಶ್ವಾಸವಿಡಲಿಕ್ಕೆ ಅಲ್ಲಾಹು ಆಜ್ಞಾಪಿಸಲಿಲ್ಲ ಅದರ ಬದಲು ಅಲ್ಲಾಹನು ಹಾಗೂ ಪ್ರವಾದಿ (ಸ)ರು  ಏನೆಲ್ಲಾ ಕಲಿಸಿ ಕೊಡುತ್ತಾರೆ ಅದನೆಲ್ಲಾ ಕಣ್ಣು ಮುಚ್ಚಿ ವಿಶ್ವಾಸವಿಡಲಿಕ್ಕೆ ಅಲ್ಲಾಹನು ಆಜ್ಞಾಪಿಸುತ್ತಾನೆ..

ಕುರ್'ಆನ್  ಅದಕ್ಕೆ ಪುರಾವೆಯಾಗಿದೆ⬇

وَمَا آتَاكُمُ الرَّسُولُ فَخُذُوهُ وَمَا نَهَاكُمْ عَنْهُ فَانْتَهُوا ۚ وَاتَّقُوا اللَّهَ ۖ إِنَّ اللَّهَ شَدِيدُ الْعِقَابِ


ಸಂದೇಶವಾಹಕರು ನಿಮಗೆ ಏನನ್ನು ನೀಡುವರೋ ಅದನ್ನು ಸ್ವೀಕರಿಸಿರಿ ಮತ್ತು ಅವರು
 ಯಾವುದರಿಂದ ವಿರೋಧಿಸುವರೋ ಅದರಿಂದ ದೂರಸರಿಯಿರಿ. ಅಲ್ಲಾಹುವನ್ನು ಭಯಪಡಿರಿ. ಖಂಡಿತವಾಗಿಯೂ ಅಲ್ಲಾಹು ಕಠಿಣವಾಗಿ ಶಿಕ್ಷಿಸುವವ ನಾಗಿರುವನು.

ಹಶ್ರ್ -7

*ಮೇಲಿನ ಇಬಾರತಿನಲ್ಲಿ*
*ಇಬ್ನ್ ಅಸಾಕಿರ್ ಹೇಳಿದ್ದೇನು*?


نا عبد الله بن الصقر نا الحسن بن موسى نا محمد بن عبد الله الطحان حدثني
أبو طاهر المقدسي عن عبد الجليل المزني عن حبة العرني عن علي بن أبي طالب
قال لما حضرت أبا (4) بكر الوفاة أقعدني عند رأسه وقال لي يا علي إذا أنا
مت فغسلني بالكف الذي غسلت به رسول الله (صلى الله عليه وسلم) وحنطوني
واذهبوا بي إلى البيت الذي فيه رسول الله (صلى الله عليه وسلم) فاستأذنوا
فإن رأيتم الباب قد يفتح فادخلوا بي وإلا فردوني إلى مقابر المسلمين حتى
يحكم الله بين عباده قال فغسل وكفن وكنت أول من يأذن إلى الباب فقلت يا
رسول الله هذا أبو بكر مستأذن فرأيت الباب قد تفتح وسمعت قائلا يقول
ادخلوا الحبيب إلى حبيبه فإن الحبيب إلى الحبيب مشتاق


هذا منكر وراويه أبو الطاهر موسى بن محمد بن عطاء المقدسي وعبد الجليل
مجهول والمحفوظ أن الذي غسل أبا بكر امرأته أسماء بنت عميس


ತಫ್ಸೀರುಗಳಲ್ಲಿ ಕೆಲವು ರೀತಿಯ  ಕಟ್ಟುಕಥೆ ಗಳು ಹಾಗೂ ಕಥೆಗಳನ್ನು  ಉಲ್ಲೇಖಿಸಿದನ್ನು ಹಿಂದೆ ಮುಂದೆ ನೋಡದೆ ವಿಶ್ವಾಸವಿರಿಸಲೇಬೇಕೆಂದಿಲ್ಲ. ಅದು ಸನದಿರುವ ವಿಷಯವೂ ಕೂಡ ಅಲ್ಲ. ಸಹೀಹಾದ ವರದಿಯಲ್ಲ‌ ಅಲ್ಲ. ಇದು منكر حديث ಆಗಿದೆ. ಇಂತಹ ಕಟ್ಟು ಕತೆಗಳೇ ಇಸ್ಲಾಮಿಗೆ ಪುರಾವೆ !!?

ಅದೂ ಅಲ್ಲದೇ ಈ ರಿಪೋರ್ಟಿನ ಕುರಿತು ಇಬ್ನ್ ಹಜರ್ (ರ) ತನ್ನ ಲಿಸಾನುಲ್ ಮೀಝಾನಿನಲ್ಲಿಯೂ
ಇಮಾಂ ಸುಯೂತಿ  (ರ) ರು ಖಸ್ವಾಯಿಸಿಯಿಲ್ಲೂ,ಇಬ್ನ್ ಅಸಾಕಿರ್ ತಾರೀಖ್ ದಿಮಷ್ಕಲ್ಲಿ ಹೇಳುವುದೇನೆಂದರೆ:

 ಈ ಕಥೆಯಲ್ಲಿರುವ ರಾವಿ(ವರದಿಗಾರ)ಗಳು  ಮಜ್ಹೂಲ್ (ಅಪರಿಚಿತರು) ಗಳಾಗಿದ್ದಾರೆಂದೂ,ಕಝ್ಝಾಬ್ (ಸುಳ್ಳುಗಾರ)ರೆಂದು ಎಂದಾಗಿದೆ

باب قد فتح فسمعت قائلا يقول ادخلوا الحبيب إلى حبيبه فإن الحبيب إلى الحبيبمشتاق


وقال ابن عساكر هذا حديث منكر *وفي إسناده أبو الطاهر موسى بن محمد بن
عطاء المقدسي كذاب *عن عبد الجليل المري وهو مجهول


ادخلوا الحبيب إلى حبيبه فإن الحبيب إلى الحبيب مشتاق وقال بن عساكر هذا
منكر وأبو طاهر هو موسى بن محمد بن عطاء كذاب وعبد الجليل مجهول

♻♻♻♻♻♻♻♻♻


ಇಂತಹ ಸನದ್ ಗಳಿಲ್ಲದ ,ದುರ್ಬಲವಾದ,ಕಟ್ಟು ಕಥೆಗಳನ್ನು ಇಸ್ಲಾಮಿಗೆ ತುರುಕಿಸಲಿಕ್ಕೆ ಹವಣಿಸುತ್ತಿರುವ ಪುರೋಹಿತಶಾಹಿಗಳು ಎಲ್ಲಾ ಕಾಲಘಟ್ಟದಲ್ಲಿಯೂ ಇದ್ದರು.

يَا أَيُّهَا الَّذِينَ آمَنُوا إِنَّ كَثِيرًا مِنَ الْأَحْبَارِ وَالرُّهْبَانِ لَيَأْكُلُونَ أَمْوَالَ النَّاسِ بِالْبَاطِلِ وَيَصُدُّونَ عَنْ سَبِيلِ اللَّهِ ۗ وَالَّذِينَ يَكْنِزُونَ الذَّهَبَ وَالْفِضَّةَ وَلَا يُنْفِقُونَهَا فِي سَبِيلِ اللَّهِ فَبَشِّرْهُمْ بِعَذَابٍ أَلِيمٍ

ಓ ಸತ್ಯವಿಶ್ವಾಸಿಗಳೇ! ಖಂಡಿತವಾಗಿಯೂ ವಿದ್ವಾಂಸರು ಮತ್ತು ಪುರೋಹಿತರ ಪೈಕಿ ಹೆಚ್ಚಿನವರು ಅನ್ಯಾಯವಾಗಿ ಜನರ ಸಂಪತ್ತನ್ನು ತಿನ್ನುವವರೂ, ಅಲ್ಲಾಹುವಿನ ಮಾರ್ಗದಿಂದ (ಜನರನ್ನು) ತಡೆಯುವ ವರೂ ಆಗಿರುವರು.270 ಚಿನ್ನ ಮತ್ತು ಬೆಳ್ಳಿಯನ್ನು ನಿಕ್ಷೇಪ ಮಾಡಿಡುವವರು ಮತ್ತು ಅಲ್ಲಾಹುವಿನ ಮಾರ್ಗದಲ್ಲಿ ಅದನ್ನು ವ್ಯಯಿಸದಿರುವವರು ಯಾರೋ ಅವರಿಗೆ ಯಾತನಾಮಯವಾದ ಶಿಕ್ಷೆಯಿದೆಯೆಂಬ ಶುಭವಾರ್ತೆ ಯನ್ನು ತಿಳಿಸಿರಿ.

👆🏻👆🏻👆🏻ಅಲ್ಲಾಹನ ವಚನಗಳು ಎಷ್ಟು ಸತ್ಯ

ತಮ್ಮ ಲಾಭಕೋಸ್ಕರ ಅಲ್ಲಾಹನ ವಚನಗಳನ್ನು ತಿದ್ದುಪಡಿ ಮಾಡುತ್ತಿರುವ,ಪ್ರವಾದಿ(ಸ)ರ ಚರ್ಯೆಯನ್ನು ಕಳಂಕಮಾಡುವವರ ಫಿತ್ನಗಳಿಂದ ನಮ್ಮೆಲ್ಲರನ್ನು ಸರ್ವಶಕ್ತನಾದ ಅಲ್ಲಾಹನು ರಕ್ಷಿಸಲಿ

ಆಮೀನ್

ಮುಷ್ತಾಕ್ ಬಿನ್ ಅಬ್ದುರ್ರಹ್ಮಾನ್🖊🌹🌹

ನಜ್ದ್'ನ ಹದೀಸ್ ಸತ್ಯ ಯಾವುದು...? ಮಿಥ್ಯ ಯಾವುದು...?

ನಜ್ದ್'ನ ಹದೀಸ್ ಸತ್ಯ ಯಾವುದು...? ಮಿಥ್ಯ ಯಾವುದು...?

ಕೇರಳ ಮೂಲದ ಸಮಸ್ತ ಎಂಬ ಹೆಸರಲ್ಲಿ ಕಾರ್ಯಾಚರಿಸುತ್ತಿರುವ ವ್ಯಾಜ್ಯ  ಸುನ್ನತ್ ಜಮಾಅತ್, ನೈಜ ಸುನ್ನತ್ ಜಮಾಅತ್ ನ ವಿರುದ್ಧ ನಿರಂತರವಾಗಿ ಸುಳ್ಳಾರೋಪಗಳು ಹೊರಿಸುತ್ತಾ ಬಂದಿದೆ. ಅದರಲ್ಲಿ ಈಗ ಚಾಲ್ತಿಯಲ್ಲಿ ಇರುವ ರೀಲೆಂದರೆ ಪ್ರವಾದಿ (ಸ)ರು ಹೇಳಿದ ನಜ್ದ್ ಕಡೆಯಿಂದ ಶೈತಾನನ ಕೊಂಬು ಅದು  ಸಲಫೀ ನೇತಾರರಾದ ಶೈಖ್ ಮುಹಮ್ಮದ್ ಬಿನ್ ಅಬ್ದುಲ್ ವಹ್ಹಾಬ್ (ರ)ರವರ ಬಗ್ಗೆ ಹೇಳಿದ ಮಾತಾಗಿದೆ ಎಂದು.

ಸಮಸ್ತದವರು ಹೇಳಿದ ಹದೀಸ್ ಸಹೀಹಾಗಿದೆ.ಆದರೆ ಅದನ್ನು ದುರ್ವ್ಯಾಖ್ಯಾನಿಸಿ ವಿಶ್ವಾಸಿಗಳನ್ನು ವಂಚಿಸುತಿದ್ದಾರೆ.

 ಹದೀಸ್ ಹೀಗಿದೆ👇🏻

ಇಬ್ನ್ ಉಮರ್ (ರ) ರಿಂದ ನಿವೇದನೆ
ಪ್ರವಾದಿ (ಸ)ರು ಪೂರ್ವ ದಿಕ್ಕಿಗೆ ತಿರುಗಿ ನಿಂತು ಇಲ್ಲಿಂದಾಗಿದೆ ಸೈತಾನನ ಕೊಂಬು ಪ್ರತ್ಯಕ್ಷವಾಗುವುದು.
ಸಹೀಹುಲ್ ಬುಖಾರಿ 7092,7093

ಅದೇ ರೀತಿ ಬುಖಾರಿ  5167,5169,5171,5172

ಇಮಾಮ ಅಹ್ಮದ್ (ರ) ತನ್ನ ಮುಸ್ನದ್ ನಲ್ಲಿ
4738,5152,5401,5758,5968,6020

ಇಮಾಮ ಮಾಲಿಕ್ (ರ) ತನ್ನ ಮುವತ್ತು ದಲ್ಲಿಯೂ( 1544) ಉಲ್ಲೇಖಿಸಿದ್ದಾರೆ.

ಕುಫ್ರ್ ನ ಕೇಂದ್ರ ಪೂರ್ವ ದಿಕ್ಕಾಗಿದೆ.(ಬುಖಾರಿ 3501,ಮುಸ್ಲಿಂ  75)

ಪ್ರವಾದಿ (ಸ)ರು ಇದು ಹೇಳಿದ ಸಂದರ್ಭದಲ್ಲಿ ಅವರು ಮದೀನಾ ಮಿಂಬರಲ್ಲಿದ್ದರು.(ಬುಖಾರಿ 3511,ಅಹ್ಮದ್5758,5968)

ಸಾಲಿಂ ಬಿನ್ ಅಬ್ದುಲ್ಲಾಹ್ (ರ):
ಓ ಇರಾಕಿಗಳೇ, ನಿಮ್ಮ ವಿಷಯದಲ್ಲಿ ನನ್ನ ತಂದೆ (ಅಬ್ದುಲ್ಲಾಹ್ ಬಿನ್ ಉಮರ್(ರ)) ಪೂರ್ವ ದಿಕ್ಕಿನ ಕಡೆಗೆ  ತೋರಿಸಿ ಇಲ್ಲಿಂದಾಗಿದೆ ಶೈತಾನಿನ ಕೊಂಬು ಪ್ರತ್ಯಕ್ಷವಾಗುವುದೆಂದು ಹೇಳಿದ್ದರು.(ಮುಸ್ಲಿಂ 5172)

ಇಬ್ನ್ ಅಬೀ ನುಐಂ(ರ): ನಾನು ಇಬ್ನ್ ಉಮರ್(ರ)ರ ಜೊತೆ ಇರುವಾಗ ಓರ್ವ(ಇರಾಕಿ )ವ್ಯಕ್ತಿ ಬಂದು ಇಬ್ನ್ ಉಮರ್(ರ)ರಲ್ಲಿ  ಸೊಳ್ಳೆಯನ್ನು ಕೊಲ್ಲುವ ವಿಷಯದಲ್ಲಿ ವಿಧಿ ಕೇಳಿದರು.
ಆಗ ಬಂದ ವ್ಯಕ್ತಿಯಲ್ಲಿ ಇಬ್ನ್ ಉಮರ್(ರ)ರು:ಪ್ರವಾದಿ(ಸ)ರ ಮೊಮ್ಮಗನನ್ನು ಕೊಂದವರಾದ ಇರಾಕಿಗಳು ಸೊಳ್ಳೆ ಯ ವಿಷಯದಲ್ಲಿ ವಿಧಿ ಕೇಳ್ತಾರೆ ಎಂದು ಹೇಳಿದರು.(ಬುಖಾರಿ 5994,ತಿರ್ಮಿದಿ 3703,ಅಹ್ಮದ್ 5417)

ಇನ್ನು ಬುಖಾರಿ ಉದ್ಧರಿಸಿದ 7094 ಹದೀಸನ್ನು ವ್ಯಾಖ್ಯಾನಿಸಿದ ಹಾಫಿಝ್ ಇಬ್ನ್ನ್ ಹಜರ್ ಅಸ್ಕಲಾನಿ (ರ)ರು ಹೇಳುತ್ತಾರೆ:ಮದೀನದ ಪೂರ್ವ ಭಾಗ ಅಂದರೆ ಅದು ಇರಾಕಾಗಿದೆ
ಎಂದು.

ಇಬ್ನ್ ಅಬ್ದು ಬರ್ರ್  (ರ) ರವರು ಹೇಳುತ್ತಾರೆ
قال ابن عبد البر في التمهيد : (1/279) :

[ وبها يطلع قرن الشيطان قال أبو عمر دعاؤه صلى الله عليه وسلم للشام يعني لأهلها كتوقيته لأهل الشام الجحفة ولأهل اليمن يلملم علما منه بأن الشام سينتقل إليها الإسلام وكذلك وقت لأهل نجد قرنا يعني علما منه بأن العراق ستكون كذلك وهذا من أعلام نبوته صلى الله عليه وسلم]. أ. هـ.

وقال ايضا: 017/12):
[ في هذا الحديث علم من أعلام نبوة رسول الله صلى الله عليه وسلم لإخباره بالغيب عما يكون بعده والفتنة ههنا بمعنى الفتن ... فأخبر صلى الله عليه وسلم عن إقبال الفتن من ناحية المشرق وكذلك أكثر الفتن من المشرق انبعثت وبها كانت نحو الجمل وصفين وقتل الحسين وغير ذلك مما المطلوب ذكره مما كان بعد ذلك من الفتن بالعراق وخراسان إلى اليوم ]

ಪ್ರವಾದಿ(ಸ) ರವರು  ಕೊಟ್ಟದ್ದು ಅದು ಇರಾಕಿನ ಕಡೆಗಾಗಿದೆ.ಅದೇ ರೀತಿ ಜಮಲ್ ಹಾಗೂ ಸಿಫ್ಪೀನ್ ಯುದ್ಧಗಳ ಬಗ್ಗೆ ಸೂಚನೆ ಕೊಟ್ಟದ್ದಾಗಿದೆ ಎಂದು..

قال الكرماني في شرحه للبخاري : (24/168) :
[ ومن كان بالمدينة الطيبة -صلى الله على ساكنها وسلم - كان نجده بادية العراق وهي مشرق أهلها ]

ಖತ್ತಾಬಿ (ರ) ಹೇಳುತ್ತಾರೆ
ಅದು ಇರಾಕಾಗಿದೆ

قال الخطابي :

[ نجد من جهة المشرق ومن كان.   كان نجده بادية العراق ونواحيها وهي مشرق أهلها

ನಜ್ದ್ ನ ಕುರಿತು ಬಂದ ಹದೀಸ್ ಅದು ಇರಾಕಾಗಿದೆ.

ﺃﻥ ﺍﻟﻨﺒﻲ ﺻﻠﻰ ﺍﻟﻠﻪ ﻋﻠﻴﻪ ﻭﺳﻠﻢ ﻗﺎﻝ :
ﺍﻓﺘﺮﻗﺖ ﺍﻟﻴﻬﻮﺩ ﻋﻠﻰ ﺇﺣﺪﻯ ﻭﺳﺒﻌﻴﻦ ﻓﺮﻗﺔ، ﻭﺍﻓﺘﺮﻗﺖ ﺍﻟﻨﺼﺎﺭﻯ ﻋﻠﻰ ﺍﺛﻨﺘﻴﻦ ﻭﺳﺒﻌﻴﻦ ﻓﺮﻗﺔ، ﻭﺳﺘﻔﺘﺮﻕ ﻫﺬﻩ ﺍﻷﻣﺔ ﻋﻠﻰ ﺛﻼﺙ ﻭﺳﺒﻌﻴﻦ ﻓﺮﻗﺔ ﻛﻠﻬﺎ ﻓﻲ ﺍﻟﻨﺎﺭ ﺇﻻ ﻭﺍﺣﺪﺓ، ﻗﻴﻞ : ﻣﻦ ﻫﻲ ﻳﺎ ﺭﺳﻮﻝ ﺍﻟﻠﻪ؟ ﻗﺎﻝ : ﻣﻦ ﻛﺎﻥ ﻋﻠﻰ ﻣﺜﻞ ﻣﺎ ﺃﻧﺎ ﻋﻠﻴﻪ ﻭﺃﺻﺤﺎﺑﻲ . ﻭﻓﻲ ﺑﻌﺾ ﺍﻟﺮﻭﺍﻳﺎﺕ : ﻫﻲ ﺍﻟﺠﻤﺎﻋﺔ .
ﺭﻭﺍﻩ ﺃﺑﻮ ﺩﺍﻭﺩ ﻭﺍﻟﺘﺮﻣﺬﻱ ﻭﺍﺑﻦ ﻣﺎﺟﻪ ﻭﺍﻟﺤﺎﻛﻢ ،

 ನನ್ನ ಸಮುದಾಯ ಎಪ್ಪತ್ತ  ಮೂರು ವಿಭಾಗವಾಗಲಿದೆ

ಅದರಲ್ಲಿ ಎಪ್ಪತ್ತೆರಡು ನರಕಕ್ಕೆ ಒಂದು ಸ್ವರ್ಗಕ್ಕೆ

👆🏻
ಈ ಹದೀಸನ್ನು ವ್ಯಾಖ್ಯಾನಿಸಿದ ಮುಲ್ಲಾ ಅಲೀ ಖಾರಿ(ರ) ಹೇಳುತ್ತಾರೆ:
ಬಿದಈ ಪಂಗಡದವರ ಮೂಲ ಏಳು ವಿಭಾಗವಾಗಿದೆ.

1. ಖವಾರಿಜ್
2.ಮುತಝಿಲೀ
3.ನಜ್ಜಾರಿಯ
4.ಜಬ್ರಿಯಾ
5.ಮುಶಬ್ಬಿಹಾ
6.ಹುಲೂಲಿಯ
7.ಶಿಯಾ
ಕ್ರಮೇಣ ಇವರು 20,22,20,3,1,5,1 ಆಗಿ  ಬೇರ್ಪಟ್ಟರು.

ಈ ವಿಭಾಗದವರ ನೇತಾರರೆಲ್ಲರೂ ಇರಾಕಿಗಳಾಗಿದ್ದಾರೆ ಎಂಬುದು ಗಮನಾರ್ಹ. ಇಂದು ಇರಾಕಲ್ಲಿ ರಕ್ತಪಾತಗೆಯ್ಯುವ ಐಸಿಸ್ ಕೂಡ ಇದೇ ಸಂತತಿಯಾಗಿದ್ದಾರೆ.

ಇದರಿಂದ ಗೊತ್ತಾಗುವುದೇನೆಂದರೆ ಹದೀಸಲ್ಲಿ ಉಲ್ಲೇಖಿಸಿದ ನಜ್ದ್ ಅದು ಇರಾಕ್ ಎಂದು.
ಇನ್ನು ವಿಷಯಕ್ಕೆ ಬರೋಣ

ಮುಹಮ್ಮದ್ ಬಿನ್ ಅಬ್ದುಲ್ ವಹ್ಹಾಬ(ರ)ರು  ಸೌದಿ ಅರೇಬಿಯಾದ ನಜ್ದಲ್ಲಿ ಜನಿಸಿದವರಾಗಿದ್ದಾರೆ.
ಈ ನಜ್ದನ ವಿರುದ್ದ ಪ್ರವಾದಿ (ಸ) ರ ಒಂದು ಹದೀಸ್ ಕೂಡ ಉಲ್ಲೇಖಿಸಲ್ಪಟ್ಟಿಲ್ಲ.

ಕೊನೆಯದಾಗಿ

ಶೈಖ್ ಮುಹಮ್ಮದ್ ಬಿನ್ ಅಬ್ದುಲ್ ವಹ್ಹಾಬ್(ರ)ರು ಇಸ್ಲಾಮಿಗೆ ವಿರುದ್ಧವಾದ ಏನಾದರೂ ವಾದವನ್ನು ಉಲ್ಲೇಖಿಸಿದ್ದಾರಯೇ??

 ಇಸ್ಲಾಮಿಗೆ ವಿರುದ್ದವಾದ ಯಾವುದಾದರೂ ಒಂದು ವಾದ ತೋರಿಸಲಿಕ್ಕೆ ಧೈರ್ಯ ತೋರಿಸುವ ಮುಸ್ಲಿಯಾರ್ ಗಳಿದ್ದರೆ ಅದು ಸಾಬೀತು ಮಾಡಲಿ.

ಕುರ್ ಆನ್ ಹಾಗೂ ಹದೀಸನ್ನು ತಮಗೆ ತೋರಿದ  ರೀತಿಯಲ್ಲಿ ಗೀಚಿದರೆ ಆಗುವ ಪರಿಣಾಮ ಇದೇ ಆಗಿದೆ.

ಅಲ್ಲಾಹನು ಇಂತಹ ಫಿತ್ನ ಮಾಡಿ ಮುಸ್ಲಿಂ ಸಮುದಾಯದಲ್ಲಿ ಒಡಕನ್ನು ಉಂಟು ಮಾಡುವವರಿಂದ ಈ ಸಮುದಾಯವನ್ನು ರಕ್ಷಿಸಲಿ.

✍🏽 ಮುಷ್ತಾಕ್ ಅಬ್ದುರ್ರಹ್ಮಾನ್ ಪುತ್ತೂರು

•••
ಈ ಪೇಜನ್ನು LIKE ಮಾಡಲು ಈ LINK ಬಳಸಿ 👇🏿
https://www.facebook.com/QuranmatthuHadeesVchanagalu/

5 Oct 2016

ಉಸ್ಮಾನ್ ಬಿನ್ ಮಳ್'ಊನ್ (ರ)ರವರ ಕಬರ್ ಎತ್ತರಿಸಿ ಕಟ್ಟಿದ್ದಾರೆಯೇ??

ಉಸ್ಮಾನ್ ಬಿನ್  ಮಳ್'ಊನ್ (ರ)ರವರ ಕಬರ್ ಎತ್ತರಿಸಿ ಕಟ್ಟಿದ್ದಾರೆಯೇ??

ಕಬರ್ ಎತ್ತರಿಸಲಿಕ್ಕೆ ಸಹೀಹುಲ್  ಬುಖಾರಿಯಲ್ಲಿ ಪುರಾವೆಯೇ??
ಗೋಡೆಯ ಹಾಗೆ ಕಬರನ್ನು ಎತ್ತರಿಸುವ ಸಮಸ್ತದವರಿಗೆ ಕಬರಿನ ಮೇಲೆ ಕೇವಲ ಗುರುತಿಗೆ ಕಲ್ಲು ಇಟ್ಟದ್ದು ಪುರಾವೆಯೇ??

 ವಿಚಿತ್ರ ವಾದಿಗಳಾದ ಸಮಸ್ತದವರಿಗೆ ನೈಜ್ಯ  ಅಹ್ಲು ಸುನ್ನತಿನ ದಿಟ್ಟ ಉತ್ತರ

ಕಬರ್ ಎತ್ತರಿಸಿ ಕಟ್ಟಲಿಕ್ಕೆ ಮುಸ್ಲಿಯಾರ್ 'ಗಳು ದುರ್ವ್ಯಾಖ್ಯಾನಿಸುವ ಸಂಭವವಾಗಿದೆ  ಉಸ್ಮಾನ್  ಬಿನ್  ಮಳ್,ಊನ್ (ರ)ರವರ ವಿಷಯ

 ವಾಸ್ತವದಲ್ಲಿ ಕಬರ್ ಎತ್ತರಿಸಲಿಕ್ಕೆ ಬುಖಾರಿಯಲ್ಲಿ  ಯಾವ ಪುರಾವೆ ಕೂಡ ಇಲ್ಲ. ಉಸ್ಮಾನ್ ಬಿನ್ ಮಳ್'ಊನ್  (ರ)ರವರ ಕಬರ್ ನ ಮೇಲೆ ಯಾರಾದರೂ ಜಿಗಿದರೆ ಅವನನ್ನು ದೊಡ್ಡ ಜಿಗಿತಗಾರ ಎಂದು ಹೇಳುತಿದ್ದೆವು ಎಂಬುದಾಗಿದೆ ಸಮಸ್ತದವರಿಗೆ ಇಲ್ಲಿ ಗೋಡೆ ಕಟ್ಟುವ ರೀತಿಯಲ್ಲಿ ಕಬರನ್ನು ಎತ್ತರಿಸಿ ಕಟ್ಟಲಿಕ್ಕೆ ಪುರಾವೆ.
ವಾಸ್ತವ ದಲ್ಲಿ ಹದೀಸ್ ,ಅದರ ವ್ಯಾಖ್ಯಾನ ಹಾಗೂ ಚರಿತ್ರೆ ಯನ್ನು ಪರಿಶೋದಿಸಿದರೆ ನಮಗೆ ನೈಜಾಂಶವೇನೆಂದು ಅರ್ಥವಾಗುತ್ತದೆ.

ಬನ್ನಿ ನಾವು ಪರಿಶೋದಿಸುವ

باب الجريد على القبر

وأوصى بريدة الأسلمي أن يجعل في قبره جريدان ورأى ابن عمر رضي الله عنهما فسطاطا على قبر عبد الرحمن فقال انزعه يا غلام فإنما يظله عمله وقال خارجة بن زيد رأيتني ونحن شبان في زمن عثمان رضي الله عنه وإن أشدنا وثبة الذي يثب قبر عثمان بن مظعون حتى يجاوزه وقال عثمان بن حكيم أخذ بيدي خارجة فأجلسني على قبر وأخبرني عن عمه يزيد بن ثابت قال إنما كره ذلك لمن أحدث عليه وقال نافع كان ابن عمر رضي الله عنهما يجلس على القبور
(صحيح البخاري)

ಇಬ್ನ್ ಉಮರ್  (ರ ) ರವರು ಖಬರಿನ ಮೇಲ್ಬಾಗದಲ್ಲಿ ನೆರಳಿಗೋಸ್ಕರ ಕಟ್ಟಿದ ಒಂದು ಚಾದರವನ್ನು ಕಂಡರು.ಕೂಡಲೇ  ಅವರು ಅದನ್ನು  ಅಲ್ಲಿಂದ ತೆಗೆಯಲಿಕ್ಕೆ ಮಗನಿಗೆ ಆದೇಶಿಸಿದರು.ಬಳಿಕ ಉಮರ್(ರ) ರವರು  ಹೀಗೆಂದರು ಅವನ ಕರ್ಮಗಳು ನೆರಳಾಗಿ ನಿಲ್ಲಲಿದೆ ಎಂದು.

ಈ ವಿಷಯದ ನಂತರವಾಗಿದೆ   ಇಮಾಂ ಬುಖಾರಿಯವರು  ಈ ಮೇಲಿನ  ವಿಷಯವನ್ನು ಪ್ರಸ್ತಾಪಿಸುವುದು.

ಇಮಾಂ ಬುಖಾರಿಯವರು ಈ ವಿಷಯವನ್ನು ಸನದ್ ಇಲ್ಲದೆ ರಿಪೋರ್ಟ್ ಮಾಡುತ್ತಾರೆ ಎಂಬುದು ಗಮನಾರ್ಹವಾಗಿದೆ.

ಹಾರಿಜತ್ ಬಿನ್ ಝೈದ್ ( ರ ) ರವರು ಹೇಳಿದ್ದಾರೆಂದು ರಿಪೋರ್ಟ್  ಮಾಡಿದನ್ನು ಕೆಲವರು ತಪ್ಪಾಗಿ  ಹದೀಸ್ ಎಂದು ಭಾವಿಸಿದ್ದಾರೆ..

ವಾಸ್ತವ ದಲ್ಲಿ ಅದು ಹದೀಸ್ ಅಲ್ಲ. ಸಹೀಹಾಗಿ ಬಂದ ಹದೀಸ್ ನೊಂದಿಗೆ ಇರುವ ತ'ಅಲೀಖ್ ಆಗಿದೆ.
ಹದೀಸ್ ಎಂದರೆ
قال الرسول الله
ಪ್ರವಾದಿ(ಸ)ಹೇಳಿದರು
ಅಥವಾ
سمعت الرسول الله
ಪ್ರವಾದಿ(ಸ) ರವರು ಹೇಳಿದನ್ನು ನಾನು ಕೇಳಿದ್ದೇನೆ
👆
ಹೀಗೆ  ಬರಬೇಕು

ಅದನ್ನು ಸನದುನೊಂದಿಗೆ  ತಾರೀಖ್ ಇಬ್ನ್ ಅಸಾಕಿರ್ ಸಹೀಹಲ್ಲ ಎಂದು ಸಮರ್ಥಿಸುತ್ತಾರೆ.⤵

قال البخاري رحمه الله في صحيحه :
" وَقَالَ خَارِجَةُ بْنُ زَيْدٍ : رَأَيْتُنِي وَنَحْنُ شُبَّانٌ فِي زَمَنِ عُثْمَانَ رَضِيَ اللَّهُ عَنْهُ وَإِنَّ أَشَدَّنَا وَثْبَةً الَّذِي يَثِبُ قَبْرَ عُثْمَانَ بْنِ مَظْعُونٍ حَتَّى يُجَاوِزَهُ " انتهى .
ووصله رحمه الله في "التاريخ الصغير" (1 /67) وكذا ابن عساكر في "تاريخه" (15/396) من طريق ابن إسحاق حدثني يحيى بن عبد الله بن عبد الرحمن بن أبي عمرة الأنصاري قال سمعت خارجة بن زيد بن ثابت .. فذكره .
وهذا إسناد ضعيف ، يحيى بن عبد الله الأنصاري هذا مجهول ، لا نعلم له راويا غير ابن إسحاق ، ذكره البخاري في "التاريخ الكبير" (8/284) وابن أبي حاتم في "الجرح والتعديل" (9/162) وابن حبان في "الثقات" (7/603) برواية ابن إسحاق فقط عنه ، ولم يوثقه أحد ، وذِكر ابن حبان إياه في الثقات لا يعد توثيقا معتبرا ؛ لأنه يذكر فيه المجهولين ومن يصرح بنفسه أنه لا يعرف من هو ولا من أبوه .
انظر كتاب "الثقات" له : (4/146) ، (6/418) .
فالرجل مجهول ، لا يُعتد بروايته .

ಇದು ಎರಡು ಕೂಡ ಬಲಹೀನವಾದ ಸನದುಗಳಾಗಿವೆ.

ಹಾರಿಜಃ (ರ ) ಹೇಳುತ್ತಾರೆ.
ಉಸ್ಮಾನ್ ಬಿನ್ ಮಳ್'ಊನ್ (ರ) ರವರ ಖಬರಿನ ಮೇಲೆ ಯಾರು ಜಿಗಿಯುತ್ತಾರೋ ಅವರಾಗಿದ್ದಾರೆ ಅತೀ ದೊಡ್ಡ ಜಿಗಿತಗಾರ.

ಇದನ್ನು ಮುಸ್ಲಿಯಾರ್ ಗಳು ತಲೆಯಲ್ಲಿಟ್ಟು , ಖಬರ್ ನ್ನು ಎತ್ತರಿಸಿ ಕಟ್ಟಲಿಕ್ಕೆ ಪುರಾವೆ ಇದೆಯೆಂದು ವಾದಿಸುತ್ತಾರೆ.

" ವಾಸ್ತವದಲ್ಲಿ , ಕಬರನ್ನು  ಎತ್ತರಿಸಿ ಕಟ್ಟಿದೆ ಎಂದು ಅದರಲ್ಲಿ ಇಲ್ಲ.

ಉಸ್ಮಾನ್ ಬಿನ್ ಮಳ್'ಊನ್
( ರ) ರವರ ಕಬರಿನ ಕುರಿತು ಸ್ವಹೀಹಾಗಿ ಬಂದ ಹದೀಸ್ ಇದಾಗಿದೆ ⤵

لمَّا ماتَ عُثمانُ بنُ مظعونٍ أُخْرِجَ بجَنازتِهِ فُدِفنَ أمرَ النَّبيُّ صلَّى اللَّهُ علَيهِ وسلَّمَ رجلًا أن يأتيَهُ بحَجرٍ فلم يستَطِع حملَهُ فقامَ إليها رسولُ اللَّهِ صلَّى اللَّهُ علَيهِ وسلَّمَ وحسرَ عَن ذراعيهِ قالَ كثيرٌ قالَ المطَّلبُ قالَ الَّذي يخبرُني ذلِكَ عَن رسولِ اللَّهِ صلَّى اللَّهُ علَيهِ وسلَّمَ قالَ كأنِّي أنظرُ إلى بياضِ ذراعَي رسولِ اللَّهِ صلَّى اللَّهُ علَيهِ وسلَّمَ حينَ حَسرَ عنهُما ثمَّ حَملَها فوضعَها عندَ رأسِهِ وقالَ أتعلَّمُ بِها قبرَ أَخي وأَدفِنُ إليهِ مَن ماتَ من أَهْلي
الراوي: المطلب بن عبدالله بن حنطب

صحيح أبي داود - الصفحة أو الرقم: 3206

ಬಖೀ'ಉಲ್ ಅರ್ಕದಲ್ಲಿ ಮೊತ್ತ ಮೊದಲು ದಫನಗೈಯ್ಯಲ್ಪಟ್ಟ ಸಹಾಬಿಯಾಗಿದ್ದಾರೆ ಉಸ್ಮಾನ್ ಬಿನ್ ಮಳ್'ಊನ್ ( ರ ).
ಅವರ ಜನಾಝನ್ನು ದಫನಗೈದ ನಂತರ ಪ್ರವಾದಿ ( ಸ) ಒಂದು ಕಲ್ಲನ್ನು ತೆಗೊಂಡು  ಬರಲು ಸಹಾಬಿಯೋರ್ವರಲ್ಲಿ ಆಜ್ಞಾಪಿಸುತ್ತಾರೆ.  ರಸೂಲ್ (ಸ)ರವರು ಕಲ್ಲನ್ನು ಕಬರಿನ ತಲೆಯ ಭಾಗದಲ್ಲಿ ಇಟ್ಟು ಹೇಳಿದರು; ಇದು ಕಬರೆಂದು ಗೊತ್ತಾಗಲಿಕ್ಕೂ ,ತನ್ನ ಬಂಧುಗಳನ್ನು ಇಲ್ಲಿಯೇ ದಫನ ಮಾಡಲಿಕ್ಕೂ  ,ಇದು ಕಬರೆಂದು ಗುರುತಿಸಿ ಕೊಳ್ಳಲಿಕ್ಕಾಗಿದೆ. ಒಂದು ವೇಳೆ ರಸೂಲ್(ಸ) ರವರು ಕಬರನ್ನು  ಎತ್ತರಿಸಿ ಕಟ್ಟಲಿಕ್ಕಾಗಿದ್ದರೆ ಆ ರೀತಿ ಅವರು ಕಾರಣಗಳು ಹೇಳುತ್ತಿರಲಿಲ್ಲ.

ಚರಿತ್ರೆ ಯನ್ನು  ಪರಶೀಲಿಸಿದರೆ ಹಾರಿಜತ್ ಬಿನ್ ಝೈದ್ ( ರ ) ರವರ ಜನನವು ಹಿ: 29ಕ್ಕಾಗಿದೆ . ಅವರು ಮರಣ ಹೊಂದುವಾಗ ಅವರಿಗೆ70 ವರ್ಷ . ಅಂದರೆ ಹಿ: 99

ಇನ್ನು  , ಇವರು ಜಿಗಿಯುತಿದ್ದಾರೆಂದು ಎಂದು ಹೇಳುವುದು ಉಸ್ಮಾನ್ (ರ(ರವರ ಕಾಲದಲ್ಲಾಗಿದೆ.

ಉಸ್ಮಾನ್ (ರ)ರವರು ಮರಣ ಹೊಂದಿದ್ದು  ಹಿ : 35 ಲ್ಲಾಗಿದೆ.

ಹಿ: 29 ರಲ್ಲಿ ಜೀವಿಸಿದ ಒಬ್ಬರು ಹಿ: 35 ರೊಳಗೆ  ಜಿಗಿಯುತಿದ್ದರೆಂದು ಹೇಳುವಾಗ ಹಾರಿಜ (ರ) 5 ವರ್ಷ ಪ್ರಾಯದ ಮಕ್ಕಳು ಜಿಗಿಯುತಿದ್ದ ವಿಷಯವಾಗಿದೆ  ಹೇಳಿದ್ದೆಂದು ಸ್ಪಷ್ಟವಾಗುತ್ತದೆ.

ಇನ್ನು
ಇನ್ನೊಂದು ದುರ್ವ್ಯಖ್ಯಾನವಾಗಿದೆ  ಬುಖಾರಿಯ ವ್ಯಾಖ್ಯಾನವಾದ ಇಬ್ನ್ ಹಜರ್ ಅಸ್ಕಲಾನಿ(ರ) ರವರ ಫತುಹಲ್ ಬಾರಿಯಲ್ಲಿ ಕಬರನ್ನು  ಎತ್ತರಿಸಿ ಕಟ್ಟಲು ಪುರಾವೆ ಇದೆ ಎಂದು ಮುಸ್ಲಿಯಾರ್'ಗಳು ವಾದಿಸುತ್ತಾರೆ..

وقال خارجة بن زيد ) أي ابن ثابت الأنصاري أحد ثقات التابعين ، وهو أحد السبعة الفقهاء من أهل المدينة إلخ . وصله المصنف في " التاريخ الصغير " من طريق ابن إسحاق " حدثني يحيى بن عبد الرحمن بن أبي عمرة الأنصاري سمعت خارجة بن زيد " . فذكره ، وفيه جواز تعلية القبر ورفعه عن وجه الأرض
.( فتح الباري )

ಮದೀನದಲ್ಲಿದ್ದ ಏಳು ವಿದ್ವಾಂಸರಲ್ಲಿ ಓರ್ವರಾಗಿರಾಗಿದ್ದರು ಹಾರಿಜತ್ ಬಿನ್ ಝೈದ್. ನಂತರ ಇಮಾಂ ಹೇಳುತ್ತಾರೆ; ಕಬರ್  ಭೂಮಿ ಯಿಂದ ಸ್ವಲ್ಪ ಎತ್ತರಿಸುವುದು ಅನುವದನೀಯ ಎಂಬುದು ಇದೆ.
 
ಇದಾಗಿದೆ ಫತುಹುಲ್ ಬಾರಿಯಲ್ಲಿರುವುದು.

 ಇಂದು ನಮ್ಮ ಊರಿನಲ್ಲಿ ಕಾಣುವ ಗೋಡೆಯ ಹಾಗೆ ಕಬರನ್ನು  ಎತ್ತರಿಸಿ ಕಟ್ಟಲಿಕ್ಕೆ ಅಸ್ಕಲಾನಿ(ರ) ರವರು ಹೇಳಲಿಲ್ಲ.
ಭೂಮಿ ಯಿಂದ ಸ್ವಲ್ಪ ಎತ್ತರ ಇಂದು ಸಲಫಿಗಳ ಕಬರನ್ನು  ಕೂಡ ಎತ್ತರಿಸುತ್ತೇವೆ.  

ಮಾತ್ರವಲ್ಲ; ಅಸ್ಕಲಾನಿ(ರ) ಕಬರ್  ಎತ್ತರಿಸಿ ಕಟ್ಟಬಾರದೆಂಬ ಪ್ರವಾದಿ(ಸ)ರವರ  ಆದೇಶ ಗಳನ್ನು ಮೀರಿ ನಡೆಯಯದವರಾಗಿದ್ದಾರೆ.

ಮುಸ್ಲಿಯಾರ್'ಗಳ ಪಳ್ಳಿ ದರ್ಸ್ ಗಳಲ್ಲಿ ಕಲಿಸುತ್ತಿರುವ ಕಿತಾಬಾದ ಫತಾವ ಕುಬ್ರಾ ದಲ್ಲಿ ಇವರ ಆದರ್ಶ ಕ್ಕೆ ವಿರುದ್ಧ ವಾದ ಆಶಯವಿದೆ.ಅದನ್ನು ಜನರಿಂದ ಮುಚ್ಚಿಡುತ್ತಾರೆ.

الْمَنْقُولُ الْمُعْتَمَدُ كَمَا جَزَمَ بِهِ النَّوَوِيُّ فِي شَرْحِ الْمُهَذَّبِ حُرْمَةُ الْبِنَاءِ فِي الْمَقْبَرَةِ الْمُسَبَّلَةِ فَإِنْ بُنِيَ فِيهَا هُدِمَ وَلَا فَرْقَ فِي ذَلِكَ بَيْنَ قُبُورِ الصَّالِحِينَ وَالْعُلَمَاءِ وَغَيْرِهِمْ وَمَا فِي الْخَادِمِ مِمَّا يُخَالِفُ ذَلِكَ ضَعِيفٌ لَا يُلْتَفَتُ إلَيْهِ وَكَمْ أَنْكَرَ الْعُلَمَاءُ عَلَى بَانِي قُبَّةِ الْإِمَامِ الشَّافِعِيِّ - رَضِيَ اللَّهُ عَنْهُ - وَغَيْرِهَا وَكَفَى بِتَصْرِيحِهِمْ فِي كُتُبِهِمْ إنْكَارًا.

الفتاوى الفقهية الكبرى ١٧/٢

"ಇಮಾಂ ನವವಿ (ರ)ರವರು ಶರಹ್ ಮುಹಝ್ಝಬಲ್ಲಿ ಒತ್ತಿ ಹೇಳಿದ ಹಾಗೆ  ಅವಲಂಬಿತವಾದ,ಪುರಾವೆಗೊಂಡ. ಅಭಿಪ್ರಾಯ ಸಾದಾರಣ ಖಬರ್ಸ್ತಾನದಲ್ಲಿ   ಕಬರ್ ಎತ್ತರಿಸಿ ಕಟ್ಟುವುದು ಹರಾಂ ಎಂದಾಗಿದೆ.     ಹಾಗೆ ಎತ್ತರಿಸಿ ಕಟ್ಟಿದ್ದರೆ ಅದು ಒಡೆದು ಉರುಳಿಸಿ ಬೇಕಾಗಿದೆ. ಈ ವಿಷಯದಲ್ಲಿ ಸ್ವಾಲಿಹೀನ್'ಗಳ,ಉಲಮಾಗಳ ಸಾದಾರಣ ಜನರ ಎಂಬ ವ್ಯತ್ಯಾಸವಿಲ್ಲ. ಇಲ್ಲಿ ಅಲ್ ಖಾದಿಂ ಎಂಬ ಕಿತಾಬಲ್ಲಿ ಇದಕ್ಕೆ ವಿರುದ್ಧವಾಗಿ ಬಂದಿದ್ದರೆ ಅದೆಲ್ಲವೂ ದುರ್ಬಲವಾಗಿರುತ್ತದೆ.ಅದರ ಕಡೆಗೆ ತಿರುಗಿ ನೋಡಲು ಬಾರದು.ಇಮಾಂ ಶಾಫೀ (ರ)ರವರ ಕಬರಿನ ಮೇಲೆ ಕುಬ್ಬಾ ನಿರ್ಮಿಸಿದ ವ್ಯಕ್ತಿಗೆ ವಿರುದ್ಧವಾಗಿ ಉಲಮಾಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಅವರ ಗ್ರಂಥಗಳಲ್ಲಿ ಇದರ ಬಗ್ಗೆ ಸಾಕಷ್ಟು
ಆಕ್ಷೇಪ ವ್ಯಕ್ತಪಡಿಸಿದ್ದ ಭಾಗಗಳು ಕಾಣಬಹುದು.ಮಾತ್ರವಲ್ಲ ಇಮಾಂ ಶಾಫಿಈ (ರ)ರವರ ಕಬರ್ ನ ಮೇಲೆಯಲ್ಲದ ಕುಬ್ಬಾದ ಕುರಿತೂ ಉಲಮಾಗಳು ಚಕಾರವೆತ್ತಿದ್ದಾರೆ.ಇದರ ಬಗ್ಗೆಯೂ ಅವರ ಗ್ರಂಥಗಳಲ್ಲಿ ಕಾಣಬಹುದು.
الفتاوى الفقهية الكبرى ١٧/٢

ಕಬರನ್ನು ಭೂಮಿಯಿಂದ ಸ್ವಲ್ಪ ಮೇಲೆ ಎತ್ತರಿಸುವ ವಿಷಯದಲ್ಲಿ  ಇಂದಿನವರೆಗೂ ಯಾರಿಗೂ ತರ್ಕವಿಲ್ಲ.

ಮಾನ್ಯ ಸಮಸ್ತದವರೇ

 ಮನದಲ್ಲಿ ಬಂದದನ್ನೆಲ್ಲಾ ಗೀಚುತ್ತಾ ಹೋದರೆ ಅದು ಇಸ್ಲಾಮಿಗೆ ಆಧಾರವಾಗುವುದಿಲ್ಲ.

ಸಹೀಹುಲ್ ಬುಖಾರಿಯಲ್ಲಿ ಕಬರಿನ ಮೇಲೆ ಹೈ ಜಂಪ್ ಮಾಡಲು ಪುರಾವೆ ಇದೆ ಎಂದಾದರೆ ನೀವು ಯಾಕೆ ಮಕ್ಬರಗಳ ಮೇಲೆ ಹೈ ಜಂಪ್ ಮಾಡುವುದಿಲ್ಲ. ಇವತ್ತೇ ಎಲ್ಲಾ ದರ್ಗಾಗಳಿಗೆ ಬೇಟಿ ಕೊಟ್ಟು  ಅದರ ಮೇಲೆ ಹೈ ಜಂಪ್ ಮಾಡಿರಿ.ಯಾರಾದರೂ ತಡೆಯಲು ಬಂದರೆ ಹೇಳಿ ಬುಖಾರಿಯಲ್ಲಿದೆ ಎಂದು .
ಕುರ್'ಆನನ್ನು ಹಾಗೂ ಹದೀಸ್'ಗಳನ್ನು ಸ್ವಂತ ನಿಮ್ಮ ವತಿಯಿಂದ ವ್ಯಾಖ್ಯಾನ ಮಾಡಲು,   ಊಹೆಯಲ್ಲಿ ಸಂಶೋಧನೆ ಮಾಡಲು ಹೊರಟರೆ ಆಗುವ ಗತಿ ಇದುವೇ ಆಗಿದೆ.
ನೀವು ಎಷ್ಟು ದುರ್ವ್ಯಾಖ್ಯಾನ ಮಾಡುತ್ತೀರಿ ಅದನ್ನು ನಮಗೆ ಜನರಿಗೆ ತೋರಿಸಲು ಸುಲಭವಾಗುತ್ತದೆ. ನೀವು ಮುಂದುವರೆಸಿ ನಾವು ಕೂಡ ಮುಂದುವಿಸುತ್ತೇನೆ

ಇತೀ
مشتاق عبد الرحمان🌹🌹

ಗೋರಿಗಳ ಮಹತ್ವೀಕರಣದ ಬಗ್ಗೆ ತಪ್ಸೀರ್ ರಾಝಿಯಲ್ಲಿ ಏನಿದೆ?

ತಪ್ಸೀರ್ ರಾಝಿ ಯಲ್ಲಿ ವ್ಯಕ್ತಪಡಿಸುವ ಒಂದು ವ್ಯಾಖ್ಯಾನ ನೊಡಿ⬇⬇⬇⬇


وَيَعْبُدُونَ مِنْ دُونِ اللَّهِ مَا لَا يَضُرُّهُمْ وَلَا يَنْفَعُهُمْ وَيَقُولُونَ هَٰؤُلَاءِ شُفَعَاؤُنَا عِنْدَ اللَّهِ ۚ قُلْ أَتُنَبِّئُونَ اللَّهَ بِمَا لَا يَعْلَمُ فِي السَّمَاوَاتِ وَلَا فِي الْأَرْضِ ۚ سُبْحَانَهُ وَتَعَالَىٰ عَمَّا يُشْرِكُونَ

ಅಲ್ಲಾಹುವಿನ ಹೊರತು ತಮಗೆ ಹಾನಿಯೋ, ಲಾಭವೋ ಮಾಡದವುಗಳನ್ನು ಅವರು ಆರಾಧಿಸು ತ್ತಿರುವರು. ‘ಇವರು (ಆರಾಧ್ಯರು) ಅಲ್ಲಾಹುವಿನ ಬಳಿ ನಮ್ಮ ಶಿಫಾರಸುಗಾರರಾಗಿರುವರು’ ಎಂದು ಅವರು ಹೇಳುವರು. (ಓ ಪ್ರವಾದಿಯವರೇ!) ಕೇಳಿರಿ: ‘ಆಕಾಶ ಗಳಲ್ಲಾಗಲಿ, ಭೂಮಿಯಲ್ಲಾಗಲಿ ಅಲ್ಲಾಹು ಅರಿಯದಿರು ವುದನ್ನು ನೀವು ಅವನಿಗೆ ತಿಳಿಸಿಕೊಡುತ್ತಿರುವಿರಾ?’[300] ಅವರು ಸಹಭಾಗಿತ್ವ ಮಾಡುವುದರಿಂದ ಅವನು ಎಷ್ಟೋ ಪರಿಪಾವನನೂ ಅತ್ಯುನ್ನತನೂ ಆಗಿರುವನು.

ಟಿಪ್ಪಣಿಗಳು :
[300] ಅಲ್ಲಾಹುವಿನ ಬಳಿ ಶಿಫಾರಸು ಮಾಡಿ ಬೇಡಿಕೆಯನ್ನು ಈಡೇರಿಸಿಕೊಡುವವರು ಯಾರಾದರೂ ಇರುವುದಾದರೆ ಅದನ್ನು ಅಲ್ಲಾಹು ತಿಳಿದಿರಲೇಬೇಕಾಗಿದೆ. ಆ ಶಿಫಾರಸುಗಾರರೊಂದಿಗೆ ಪ್ರಾರ್ಥಿಸಬೇಕು ಎಂದಾಗಿದ್ದರೆ ಅಲ್ಲಾಹು ಅದನ್ನು ನಮಗೆ ತಿಳಿಸಿಕೊಡುತ್ತಿದ್ದನು. ಆದರೆ ಬಹುದೇವಾರಾಧಕರ ಸಮರ್ಥನೆಯು ಪ್ರಮಾಣಬದ್ದವಲ್ಲ, ಬದಲಾಗಿ ಅಂಧಾನುಕರಣೆ ಮಾತ್ರವಾಗಿದೆ.

[ಯೂನುಸ್ : 18]

قال الرازي رحمه الله في تفسير آية يونس السابقة ، مبينا وجه عبادة المشركين للأصنام : " ورابعها : أنهم وضعوا هذه الأصنام والأوثان على صور أنبيائهم وأكابرهم ، وزعموا أنهم متى اشتغلوا بعبادة هذه التماثيل ، فإن أولئك الأكابر تكون شفعاء لهم عند الله تعالى . ونظيره في هذا الزمان اشتغال كثير من الخلق بتعظيم قبور الأكابر ، على اعتقاد أنهم إذا عظموا قبورهم فإنهم يكونون شفعاء لهم عند الله " انتهى من "مفاتيح الغيب" (17/ 49).


ನಾಲ್ಕನೆಯದಾಗಿ,: ಅವರು ಈ ವಿಗ್ರಹಗಳನ್ನೂ ಮೂರ್ತಿಗಳನ್ನು ತಮ್ಮ ಪ್ರವಾದಿಗಳ  ಮತ್ತು ಮಹಾತ್ಮರ  ರೂಪಗಳಲ್ಲಿ ಪ್ರತಿಷ್ಠಾಪಿಸಿದರು ಮತ್ತು ಅವರು ಈ ಮೂರ್ತಿಗಳನ್ನು ಆರಾದಿಸುವುದರಲ್ಲಿ  ಮಗ್ನರಾದರೆ (ಆ ಮೂರ್ತಿಗಳನ್ನು ಪ್ರತಿನಿಧೀಕರಿಸುವ). ಮಹಾತ್ಮ ರು ಅಲ್ಲಾಹನ ಬಳಿ ಅವರಿಗಾಗಿ ಶಿಪಾರಸ್ಸು ಮಾಡುವರು ಎಂದು ಅವರು ವಾದಿಸುತ್ತಿದ್ದರು .ಇದಕ್ಕೆ ಸಮಾನವಾದ ರೀತಿಯಲ್ಲಿ ಈ ಕಾಲದಲ್ಲಿ ಜನರಲ್ಲಿ ಹೆಚ್ಚಿನವರೂ  ಗೋರಿಗಳನ್ನು  ಮಹತ್ವೀಕರಿಸಿದರೆ  (ಅವುಗಳನ್ನು ಪ್ರತಿನಿಧೀಕರಿಸುವ ) ಮಹಾತ್ಮ ರು ಅಲ್ಲಾಹನ ಬಳಿ ನಮಗೆ ಶಿಪಾರಸ್ಸು ಮಾಡುವರು ಎಂಬ ನಂಬಿಕೆಯಿಂದ ಗೋರಿಗಳನ್ನು ಮಹತ್ವೀಕರಿಸುವುದರಲ್ಲೇ ತಲ್ಲೀನರಾಗಿದ್ದಾರೆ
(ತಪ್ಸೀರ್  ರಾಝಿ 17/49)
(ಕುರ್'ಆನ್ 10/18 ನ ವ್ಯಾಖ್ಯಾನ ದಲ್ಲಿ)

ಮದೀನಾದಲ್ಲಿರುವ ಹಸಿರು ಕುಬ್ಬ.

ಮದೀನಾದಲ್ಲಿರುವ ಹಸಿರು ಕುಬ್ಬ.

ಕುಬ್ಬ ರಚಿಸಲು ಪ್ರಾರಂಭವಾಗಿರುವುದು ಪ್ರಥಮವಾಗಿ ಯಮನಿನಲ್ಲಿರುವ ಕುಬೂರಿಗಳು ಪ್ರಥಮ ಗುಂಭಜ್ ನಿರ್ಮಿಸಿದ್ದು ಯಮನಿನಲ್ಲಿ ಹಿಜ್ರಾ 647 ರಲ್ಲಿ. ನಂತರ ಅಯ್ಯೂಬಿ ಸುಲ್ತಾನತ್ ಪ್ರಾರಂಭವಾದಾಗ ಅವರ ಮೃತರನ್ನು ಗುಂಭಜ್ ಗಳಲ್ಲಿ ದಫನ ಮಾಡಲಾಗುತಿತ್ತು. ಕುಬ್ಬಾ ಇಮಾಮ್ ಝೈದೀನ್ ಮತ್ತು ಸುಲ್ತಾನ್ ರವರಿಗೆ ಮಾತ್ರ ಪ್ರತ್ಯೇಖವಾಗಿತ್ತು. ಕುಬೂರಿಗಳಾದ ಸೂಫಿ ಸಂತರ ಕಾಲವಾಗಿತ್ತು ಅಂದು. ಹಿಜ್ರಾ 617 ರಿಂದ ಇವರು ಸಿರಿಯಾ ಮತ್ತು ಮಿಸ್ರ್ ನಲ್ಲಿ ಇವರ ರಾಜಾದಿಕಾರ ಇರುವಲ್ಲೆಲ್ಲಾ ಇವರ ಮಹಾತ್ಮಾರ ಕಬರ್ ಗಳಿಗೆ ಕುಬ್ಬ ಗಳನ್ನು ರಚಿಸುತಿದ್ದರು.


عن سعيد بن المسيب : أنه أنكر إدخال حجرة عائشة في المسجد، كأنه خشي أن يتخذ مسجداً(11).

ಪ್ರವಾದಿ ﷺ ರವರ ಕಬರನ್ನು ಜನರು ಅಲ್ಲಿ ಅರಾಧನೆ ಪ್ರಾರಂಭಿಸಬಹುದೆಂದು ಹೆದರಿ ಮಸೀಗೆ ಸೇರಿಸುವುದನ್ನು ಆಯಿಶಾ (ರ) ವಿರೋಧಿಸುತಿದ್ದರು.


ಇನ್ನು ಕುಬ್ಬ ವನ್ನು ರಚಿಸದವರು ಯಾರೆಂದು ತಿಳಿಯಬೇಕಲ್ಲವೊ. ಕೇಳಿ ನಾಸಿರ್ ಹಸನ್ ಬಿನ್ ಮಹಮ್ಮದ್ ಕಲವೂನ್ ರ ಕಾಲ ಹಿಜ್ರಾ 678 ರಲ್ಲಿ ಪ್ರಥಮವಾಗಿ ರಸೂಲ್ ﷺ ರ ಹಿಜ್ರ್ ನಲ್ಲಿ ಕುಬ್ಬವನ್ನು ನಿರ್ಮಿಸಲಾಯಿತು. ಮೊದಲು ಕಲ್ಲನ್ನು ನಾಲ್ಕು ಬದಿಯಲ್ಲಿ ಕಟ್ಟಿ ನಂತರ ಒಳಗೆ ಬೆಳಕು ಚೆಲ್ಲುವ ಹಾಗಿ ಮರದಿಂದ ನಾಲ್ಕು ಬದಿ ಕಟ್ಟಿ ಎತ್ತರಿಸಿ ನಂತರ ಬಟ್ಟೆಯಿಂದ ಕುಬ್ಬ ವನ್ನು ರಚಿಸಲಾಯಿತು.ಇದು ಮಳೆಯಿಂದ ನಾಶವಾಯಿತು. ನಂತರ ಪುನಃ ರಚಿಸಲಾಯಿತು ಅದು ಬೆಂಕಿಯಿಂದ ಸುಟ್ಟುಹೋಯಿತು. ನಂತರ ಸುಲ್ತಾನ ಶಬಾನ್ ಬಿನ್ ಹಸನ್ ಬಿನ್ ಮಹಮ್ಮದ್ 765 ರಲ್ಲಿ ಪುನಃ ಇದನ್ನು ನವೀಕರಿಸುತ್ತಾರೆ ಇದರ ಬಗ್ಗೆ ಶೈಕ್ ಕನ್ ಆನಿ ಹೇಳುತ್ತಾರೆ.

وقال العلاّمة الصنعاني في الجواب عن هذه الشبهة: (فإن قلت: هذا قبر رسول الله قد عمرت عليه قبة عظيمة، أنفقت فيها الأموال. قلت: هذا جهل عظيم بحقيقة الحال: فإن هذه القبة ليس بناؤها منه، ولا من الصحابة، ولا من تابعيهم، ولا تابعي التابعين، ولا من علماء أمته وأئمة ملته، بل هذه القبة المعمولة على قبره -صلى الله عليه وسلم-، من أبنية بعض ملوك مصر المتأخرين، وهو قلاوون الصالحي المعروف بالملك المنصور في سنة 678هـ، ذكره في تحقيق النصرة بتلخيص معالم دار الهجرة،

ಈ ಕುಬ್ಬ ವನ್ನು ರಚಿಸಿದವರು ಸ್ವಹಾಬತ್ತಲ್ಲ ಅಥವಾ ತಾಬಿವುಗಳು ಯಾರೂ ಅಲ್ಲ ಇನ್ನು ತಬವುತ್ತಾಬಿವುಗಳು ಯಾರೂ ಅಲ್ಲ ಮತ್ತು ಇಮಾಮರು ಯಾರೂ ಅಲ್ಲ. ಕಾಲಗಳ ಅಂತರದಲ್ಲಿ ಕಳೆದು ಹೋದ ಕೆಲ ಮಿಸ್ರೀ ರಾಜ ವಂಶಜರು ಹಿಜ್ರಿ 678 ರಲ್ಲಿ ಇದನ್ನು ನಿರ್ಮಿಸಿದರು.

 ಈ ಕುಬ್ಬ ಪುನಃ 886 ರಲ್ಲಿ ಸುಟ್ಟು ಹೋಯಿತು. ಅದನ್ನು ಹಿಜ್ರ 887 ರಲ್ಲಿ ಪುನಃ
ನವೀಕರಿಸಲಾಯಿತು. ಆದರೆ ಈ ಸಲ ಬಹಳ ಎತ್ತರದಲ್ಲಿ ರಾಜ ಕಾಯತ್ ಬಾಯ್ ಇದನ್ನು ನಿರ್ಮಿಸಿದರು. ಹಿಜ್ರಾ 892  ರಲ್ಲಿ ಇದನ್ನು ಬಿಳಿ ಬಣ್ಣದಿಂದ ವರ್ಣಸಲಾಯಿತು. 361 ವರ್ಷ ಇದು ಬಿಳಿ ಬಣ್ಣದಿಂದ ರಾರಾಜಿಸುತ್ತಿತ್ತು.
ಪ್ರಪ್ರಥಮವಾಗಿ ಹಿಜ್ರಾ 1253 ರಲ್ಲಿ  ಸುಲ್ತಾನ್ ಅಬ್ದುಲ್ ಹಮೀದ್ ಅಲ್ ಉಸ್ಮಾನಿ ಹಸಿರು ಬಣ್ಣ ಬಳಿಯಲು ಆಜ್ಞೆ ಹೊರಡಿಸಿದರು. ಈಗ ಇರುವ ಹಸಿರು ಗೊಮ್ಮಟವು (ಗ್ರೆಗೋರಿಯನ್ ಕ್ಯಾಲೆಂಡರ್ 2016 ಕ್ಕೆ) ಬರೇ 197 ವರ್ಷಗಳಿಂದ ಬಂದಂತಹಾ ಹಸಿರು ಕುಬ್ಬ. ಇದನ್ನು ಸುಲ್ತಾನ್ ಮಹ್ಮೂದ್ ರವರು 1818 ರಲ್ಲಿ ನಿರ್ಮಿಸಿದರು. ಇದನ್ನು ಕುಬೂರಿಗಳು ಜನರಿಗೆ ಪರಿಚಯಿಸುತ್ತಿರುವ ಶೈಲಿ ಯಹೂದಿಗಳು ಕುಬ್ಬತ್ ಸಖ್ರಾ ವನ್ನು ಬೈತುಲ್ ಮುಕದ್ದಸೆಂದು ಯಾವ ರೀತಿ ಪ್ರಚಾರ ಪಡಿಸುತ್ತಾರೋ ಹಾಗೆ.


ಗೊಮ್ಮಟ ರೂಪದಲ್ಲಿ ಶಿಲಾನ್ಯಾಸ ಮಾಡುವ ಉದ್ದೇಶವನ್ನು ಈ ಲಿಂಕ್ ನ ಮೂಲಕ ಇನ್ನಷ್ಟು ತಿಳಿಯಿರಿ.
Watch ""Pacha kubba" by Dr.Ashraf moulavi madeenah" on YouTube - https://youtu.be/K7aucUPsxE8

4 Oct 2016

ರಿಫಾಯಿ ಮಾಲೆ

ರಿಫಾಯಿ ಮಾಲೆ
___________________

*ಅಹ್ಮದುಲ್ ಕಬೀರ್ ಅರ್ ರೀಫಾಯಿ(ರ) ಜನನ ಇರಾಖಿನಲ್ಲಿ (ಹಿಜ್ರಾ: 500 - 578 ಕ್ರೀ: 1106 - 1182)*

ರಿಫಾಯೀ ಶೇಖ್ (ರ.) ರವರ ಹೆಸರಿನಲ್ಲಿ ಬ೦ದ ರೀಫಾಯೀ ತ್ವರೀಖತ್ತಿನ ಹಿ೦ಬಾಲಕರ ರಚನೆಯಾಗಿದೆ ಈ ರೀಫಾಯೀ ಮಾಲ.

ಈ ಕಾವ್ಯ ರಚನೆಯನ್ನು ರಚಿಸಿದವರು ಯಾರು ಎ೦ದು ಕೂಡ ವ್ಯಕ್ತವಲ್ಲ.

*ಬಿಸ್ಮೀಯು೦ ತಿರುಪೇರು೦ ಸ್ಥುದಿಯು೦ ಸ್ವಲಾತು೦ ವೇದಾ೦ಬರ್ ಕಾಕಿ ಅದಿನಾಲ್ ತುಡ೦ಗ್ನುವಾನ್* ಎ೦ದು ಆರ೦ಭವಾಗುವ ರೀಫಾಯಿ ಮಾಲ
*"ಕೀರ್ತಿಯಿಲ್ ಎನ್ನು೦ ಗುಣ೦ ಚೆಯ್ಯು೦ ನಾಯನೇ ಕೊಡುಮ್ಮಾ ಮೌತೀನಿಲ್ ಈಮಾನ್ ಬಷಲ್ಲಾಹಃ"* ಎ೦ದು ಕೊನೆಗಾಣುತ್ತದೆ.

ಮೊಯ್ಯದ್ದೀನ್ ಶೇಖ್ (ರ) ರವರ ಮಹತ್ವಕ್ಕಿ೦ತ ಒ೦ದಿ೦ಚು ಎತ್ತರದ ಮಹತ್ವವನ್ನು ನೀಡಲು ರೀಫಾಯಿ ಮಾಲ ರಚಿಸಿದ ವ್ಯಕ್ತಿ ಶತಪ್ರಯತ್ನವನ್ನು ಮಾಡಿದ್ದಾರೆ ಎ೦ದು ಕಾಣಲು ಸಾಧ್ಯವಾಗಬಹುದು.

ಮೊಯ್ಯದ್ದೀನ್ ಮಾಲದಲ್ಲಿ *ಆಲ೦ ಉಡಯೋವನ್ ಎಗನ್ ಆರುಲಾಲೇ ಆಯೇ ಮುಹಮ್ಮದ್ ಅವರ್ ಕಿಲಾಯೇವರ್* ಎ೦ದು ಮಹತ್ವವನ್ನು ಹಾಡುವಾಗ, ರೀಫಾಯಿ ಮಾಲ ರಚಿಸಿದವರು *ಆಸಕ್ಕುಡಯೋವನ್ ಏಗನ್ ಅರುಲಾಲೇ ಹಾಸೀ೦ ಬನೀ ಕಿಲ್ ತನ್ನಿಲ್ ಪಿರನ್ನೋಬರ್* ಎ೦ದು ತನ್ನ ಗುರುವಿನ ಮಹತ್ವವನ್ನು ವಿವರಿಸುತ್ತಿರುವುದನ್ನು ಕಾಣಬಹುದು.

ರೀಫಾಯೀ ಮಾಲ ಹೇಳುತ್ತಿದೆ:
*ಖ್ವಾಜಾ ಮೊಯ್ಯದ್ದೀನ್ ತಾನು೦ ಕಳಿಕ್ಕು೦ಬೋಳ್ ಕಣ್ಣೀನ್ ಪಿರಿಯತ್ತಿನ್ ಮೇಲ್ ಒಳಿಚ್ಚೋವರ್. ಕಣ್ಣೀಲ್ ಕರಿಮಸೀ ಮಹಾಮೀಲ್ ಚೊಲ್ಲಿಯಾರ್ ಕ೦ಡಿಲ್ಲ ಉ೦ಗಳ್ ವರುವಿನ್ ಅದೆನ್ನೋವರ್*

ಕಣ್ಣಿನ ರೆಪ್ಪೆಯಲ್ಲಿ ಅಡಗಿ ಕುಳಿತ ರೀಫಾಯಿ ಶೇಖ್ (ರ) ರವರನ್ನು ಕ೦ಡುಹಿಡಿಯಲು ಶೇಖ್ ಮುಯ್ಯದ್ದೀನ್ (ರ) ರವರಿಗೆ ಸಾಧ್ಯವಾಗಲಿಲ್ಲವೆ೦ದಾಗಿದೆ ಅದರ ಸಾರ.

ಇಬ್ಬರು ಆಟವಾಡುತ್ತಿರುವಾಗ ಒಬ್ಬರು ಮತ್ತೊಬ್ಬರ ಕಣ್ಣರೆಪ್ಪೆಯ ಮೇಲೆ ಹತ್ತಿ ಅಡಗಿ ಕುಳಿತುಕೊಳ್ಳುವುದು!! (ಕಣ್ಣಿನ ರೆಪ್ಪೆಯ ಮೇಲೆ ಅದೇಗೆ ಒಬ್ಬರಿಗೆ ಕುಳಿತುಕೊಳ್ಳಲು ಸಾಧ್ಯ ಎ೦ಬ ಪ್ರಶ್ನೆಗೆ ಕಥೆಯಲ್ಲಿ ಪ್ರಾಧಾನ್ಯವಿಲ್ಲ.)

ತನ್ನ ಕಣ್ಣ ರೆಪ್ಪೆಯನ್ನು ಒಬ್ಬರು ಹತ್ತುವುದು ದೂರದ ಮಾತು. ಒ೦ದು ನೊಣ ಹಾರಿದರೂ ತಿಳಿಯದವರು ನಮ್ಮಲ್ಲಿ ಯಾರಾದರೂ ಇದ್ದಾರ? ತಕ್ಷಣ ಪ್ರತಿಕರಿಸಲ್ಲವೇ ನಮ್ಮ ಕಣ್ಣು??

ಈ ಗೀತೆ ರಚನೆಗಾರನ ಅಭಿಪ್ರಾಯ ಪ್ರಕಾರ

*ಕುಪ್ಪಿಯಗತುಲ್ಲ ವಸ್ತುವಿನೇ ಪೋಲೆ ಕಾಣು೦ ಞ್ ನ್ ನಿ೦ಙಳೇ ಕಲ್ ಬಗ೦ ಎನ್ನೋವರ್* ಎ೦ದು ಹೇಳುತ್ತಾ ಮತ್ತೊಬ್ಬರ ಮನಸ್ಸಿನಲ್ಲಿರುವುದನ್ನು ಕೂಡ ಕಾಣಲು ಸಾಧ್ಯವಾಗುವ ಮೊಯ್ಯದ್ದೀನ್ ಶೇಖ್ ಎ೦ಬ ಮಹಾನುಭಾವರು!!

ಆದರೂ ಕೂಡ ತನ್ನ ಸ್ವ೦ತಃ ಕಣ್ಣಿನ ರೆಪ್ಪೆಯಲ್ಲಿ ಅಡಗಿ ಕುಳಿತ ರೀಫಾಯಿ ಶೇಖ್ ರವರನ್ನು ಕ೦ಡು ಹಿಡಿಯಲು ಸಾಧ್ಯವಾಗಲಿಲ್ಲ!!  *ಹೇಗಿದೆ ಕರಾಮತ್ತು??!!!*

ತಾಯಿಯವರ ಉದರದಲ್ಲಿ ಮಲಗಿ ಅಲ್ಲಾಹನಲ್ಲಿ ಚಾಲೆ೦ಜ್ ಮಾಡಿದವರಾಗಿದ್ದಾರೆ ರೀಫಾಯಿ ಶೇಖ್ ಎ೦ದು ಅವರ ಕುರಿತಿರುವ ಗೀತೆ ರಚನೆಗಾರನು.....

*ಅಡಿಮೆಯೇ ದುನಿಯಾವಿಲ್ ಇರಗ್ನುವಾನಾಯಿಟ್ಟಿ ಅಲ್ಲಾಹೆಯೆಡುಕ್ಕಲ್ ಕೇಟಾರೆ ಮುಸೀ೦ದವರ್ ಸ್ವರ್ಗ೦ ಯನಿಕ್ಕು೦ ಯನ್ ಬಯಲ್ ತುಡರ್'ನ್ನವರ್ಕು೦ ಸುಗತ್ತೋಡೆ ತನ್ನಾಲ್ ಇರಗ್ನು೦ ಞ್ ನ್ ಎನ್ನೋವರ್. ಅವರ್'ಕನ್ನು ನಾಲ್ ಸ್ವರ್ಗ೦ ಕೊಡುತ್ತಾರೆ ಉಡನ್ ದುನಿಯಾವಿಲ್ ಪಿರನ್ ವಳರ್ನ್ನೋವರ್*

ತಾಯಿಯವರ ಉದರದಿ೦ದ ಭೂಮಿಯತ್ತ ಬರಲು ಸಮಯವಾದಾಗ ಅಲ್ಲಾಹನು ಹೇಳಿದನು ಹೋ ರೀಪಾಯೀ ನಿಮ್ಮ ಸಮಯವಾಯಿತು.. ಇನ್ನು ತಾಯಿಯ ಹೊಟ್ಟೆಯಿ೦ದ ಹೊರಬನ್ನಿ... ಆದರೆ ರೀಪಾಯೀ ಶೇಖ್ ಹೋರಬರಲು ಸಮ್ಮತ್ತಿಸಲಿಲ್ಲ...!!! ಆಗೆಲ್ಲಾ ನಾನು ಹೊರಬರಲಾರೆ ಅಲ್ಲಾಹನೇ... ನಾನು ಭೂಮಿಯನ್ನು ಸ್ಪರ್ಶಿಸಬೇಕಾದರೆ ನನ್ನ ಷರತ್ತನ್ನು ನೀನು ಅ೦ಗೀಕರಿಸಬೇಕು.. ಹೀಗೆ ಅವರು ಅಲ್ಲಾಹನ ಬಳಿಯಲ್ಲಿ ತನ್ನ ಕ೦ಡೀಷನನ್ನು ಇಟ್ಟರು.. ನನಗೂ ನನ್ನನ್ನು ಹಿ೦ಬಾಲಿಸುವವರಿಗೂ ಸ೦ತೋಷದಿ೦ದ ಬಾಳಲು ಸ್ವರ್ಗವನ್ನು ನೀಡಬೇಕು. ಅಲ್ಲಾಹನು ಆ ತಕ್ಷಣ ಅವರಿಗೆ ನಾಲ್ಕು ಸ್ವರ್ಗವನ್ನು ನೀಡಿದ್ದಾಗಿ ತಿಳಿಸಿದರು. ಆ ನ೦ತರ ರೀಪಾಯಿ ಶೇಖ್ ತನ್ನ ತಾಯಿಯ ಉದರದಿ೦ದ ಹೊರಬ೦ದರು.
ಇದಾಗಿದೆ ಕಥೆ..!!

ಜನನದ ಸಮಯವು ಹತ್ತಿರವಾದಾಗ ಯಾರಲ್ಲಾದರೂ ನೀವು ಭೂಮಿಯತ್ತ ತೆರಳುತ್ತಿರುವಿರಿ ಎ೦ದು ಅಲ್ಲಾಹನು ಹೇಳುತ್ತಿದ್ದಾನೆಯೇ?
ಅಲ್ಲಾಹನ ಒಬ್ಬ ದಾಸ ಹೀಗೆ ಹೇಳುವನಾ? ಸ್ವರ್ಗವನ್ನು ನೀಡಿದರೆ ಮಾತ್ರ ನಾನು ಭೂಮಿಯತ್ತ ತೆರಳುವೆನೆ೦ದು?

ಈ ಪ್ರಪ೦ಚಕ್ಕೆ ಕಾರುಣ್ಯವಾಗಿ ಬ೦ದ ಈ ಪ್ರಪ೦ಚದ ಕಣ್ಮಣಿ, ಲೋಕ ಮುಸಲ್ಮಾನರ ಹೃದಯದ ಮಿಡಿತವಾದ ಅ೦ತಿಮ ಪ್ರವಾದಿ ಸಲ್ಲಲ್ಲಾಹು ಅಲೈವಸ್ಸಲ್ಲಮರು ಕೂಡ ಹೇಳಿದ್ದು. *ಮಹಳುಲ್ ಪಳೀಲ್*  ನಿ೦ದ    ನಾನು ಸ್ವರ್ಗವನ್ನು ಪ್ರವೇಶಿಸುವೆನು ಎ೦ದಲ್ಲವೇ?

ಇರುವ ಸ್ವರ್ಗಗಳಿ೦ದ ನಾಲ್ಕು ಸ್ವರ್ಗವನ್ನು ಮು೦ದೆ ವಲೀಯಾಗಿ ಬರಲಿಕ್ಕಿರುವ ರೀಫಾಯೀ ಶೇಖ್ ರವರಿಗೆ ನೀಡಿರುವುದಾದರೆ, ಮುಹಮ್ಮದ್ ನೆಬಿ ಸಲ್ಲಲ್ಲಾಹು ಅಲೈವಸಲ್ಲಮ ಮತ್ತು ಇನ್ನುಳಿದ ನೈಜ್ಯ ಸತ್ಯವಿಶ್ವಾಸಿಗಳಿಗೆ ಎನನ್ನಾಗಿದೆ ನೀಡಲಿಕ್ಕಿರಿರುವುದು.?

ಅ೦ತ್ಯ ಪ್ರವಾದಿ ಮುಹಮ್ಮದ್ ನೆಬಿ ಸಲ್ಲಲ್ಲಾಹು ಅಲೈವಸಲಮರ ವಫಾತಿನ ನ೦ತರವೂ ಬಾನಲೋಕದಿ೦ದ ಅಲ್ಲಾಹನ ಸ೦ದೇಶವು ಇಳಿದು ಬರುತ್ತಿದೆಯಾ? ಅಲ್ಲಾಹನ ಆಲಿ೦ಗಿನವಾದ ವಿಧಿಯನ್ನು ಪ್ರಶ್ನೆ ಮಾಡುವ ಜನರುಗಳಿಗೆ ಹೇಳುವ ಹೆಸರಾಗಿದೆಯಾ ವಲೀಯ್ಯ್??

ಈ ಪ್ರಶ್ನೆಗಳಿಗೆ ಉತ್ತರಿಸದೆ ಇ೦ತಹ ಮಾಲಗಳನ್ನು ಹಾಡುವುದಾಗಲಿ, ಪಾರಾಯಣ ಮಾಡುವುದಾಗಲಿ ಮಾಡಕೂಡದು.

ಇದು ಇಸ್ಲಾಮಿನ ಹೆಸರಲ್ಲಿ ಅದರ ಶತ್ರುಗಳು ಕಟ್ಟಿ ಬೆಳೆಸಿದ ಕಟ್ಟುಕಥೆಗಳಾಗಿದೆ.

ಪಾಪ ಕೆಲವರು ಇದನ್ನು ಹಾಡುತ್ತಿರುವುದು ನಾಳೆ ಪರಲೋಕದಲ್ಲಿನ ಪ್ರತಿಫಲವನ್ನು ಆಗ್ರಹಿಸಿ!!!
____________________________
ಮುಯ್ಯದ್ದೀನ್ ಗೀತೆ ರಚಿಸಿದವರ ಬಡಾಯಿ ನೋಡುವ:
__________________________

*ಕಅಬಾನೆ ಚುಟ್ಟುವಾರ್ ಕುತುಬನ್ನೋರೆಲ್ಲಾರು೦ ಕಅಬಾ ತವಾಪ್ಪಿನ್ನ್ ತಾನ್ ಚೆಯ್ಯು೦ ಚೆನ್ನೋವರ್*
ಸಾರ೦ಶ: ಔಲಿಯಾಗಳೆಲ್ಲಾ ಪ್ರದಕ್ಷಿಣೆ ಮಾಡುವಾಗ ಕಾಬಾಲಯವು ನನ್ನನ್ನು ಪ್ರಧಕ್ಷಿಣೆ ಮಾಡುತ್ತಿರುವುದಾಗಿ ನಾನು ಕಾಣುತ್ತಿದ್ದೇನೆ.

ಇದಕ್ಕೆ ಇನ್ನೂ ಸ್ವಲ್ಪ ಮಸಾಲೆ ಬೆರೆಸಿ ರೀಫಾಯಿ ಗೀತೆಯನ್ನು ರಚಿಸಿದವನ ಬಡಾಯಿಯನ್ನು ನೋಡುವ:

*ಮುನ್ನಾ೦ ತುಡಿಮುಟ್ಟಿ ಕಅಬಾನೇ ಚುಟ್ಟು೦ಬೋಳ್. ಮಾಕೀಗಳ್ ಇ೦ಬೀದಿ ವ್ಯಾ೦ಡೆನ್ನ್ ಚೆನ್ನೋವರ್. ಚೆನ್ನ ರೀಫಾಯಿ ಮದಿಲುಮ್ಮೇಲ್ ಕುಳತ್ತಿಯಾನ್. ಅಪ್ಪೋಲ್ ಕಅಬಾ ತವಾಪ್ಪೆನ್ನ್ ಚೆನ್ನೋವರ್. ಇಳಕ್ಕಿ ಕಅಬಾ ತುಳಕುನ್ನ ನೇರತ್ತ್. ಒಳಿವರ್ ರೀಫಾಯಿ ಎನ್ನಲ್ಲಾಹ ವಿಳಿಚ್ಚೋವರ್. ಎಯ್ ಆಕಾಶ೦ ಬಾದಿಲ್ ಒಕ್ಕೇ ತುರನ್ನೇರ ಇಳಕ್ಕಿ ಮಲಕ್ಕುಗಳ ಒಕ್ಕೇ ವಿಳಿಚ್ಚೋವರ್.*

ಕಥೆಯ ಸಾರಾ೦ಶ: ಹಿರ್ರಾಮಿನೊ೦ದಿಗೆ   ಕಬಾಲಯದ ತವ್ವಾಪಿಗೆ ಹೋದ ರೀಫಾಯಿ ಶೇಖ್ ರನ್ನು ಮಕ್ಕಾದವರು ತಡೆದವರು.... ಇದರಿ೦ದ ಕುಪಿತರಾದ ರೀಫಾಯೀ ಶೇಖ್ ತಮ್ಮ ಹಿರ್ರಾಮಿನ ಬಟ್ಟೆಯೊ೦ದನ್ನು ಕಾಬಾಲಯದ ಮೇಲೆ ಹಾಕಿ ಹೇಳಿದರು. *ಇನ್ನು ನಾನು ಕಾಬಾಲಯಕ್ಕೆ ಸುತ್ತು ಬರಲಾರೆ ಬೇಕಾದರೆ ಕಾಬಾಲವೇ ನನ್ನನ್ನು ತವಾಫ್ ಮಾಡಲಿ. ಅದ್ಭುತ್ತ !! ಜನರುಗಳು ನೋಡುತ್ತಿದ್ದ೦ತೆ  ಕಾಬಾಲಯವು ಅಲುಗಾಡಲು ಆರ೦ಭಿಸಿತು. ಹೀಗೇ ರೀಫಾಯೀಯವರನ್ನು ಕಾಬಾಲಯವು ತವಾಫ್ ಮಾಡಲು ಆರ೦ಭಿಸಿತು. ಇದನ್ನು ಕ೦ಡು ಅಸ್ವಸ್ಥನಾದ(ಇನ್ನಾಲಿಲ್ಲಾಹಿ....) ಅಲ್ಲಾಹನು ಕೂಡಲೇ ಕೂಗಿ ಹೇಳಿದ  "ಹೋ ರೀಫಾಯೀ ಒಮ್ಮೆ ನಿಲ್ಲಿಸಿ" ಮಾತ್ರವಲ್ಲಾ.. ಏಳು ಆಕಾಶವೂ ತೆರೆದುಕೊ೦ಡು ಸರ್ವ ಮಲಕುಗಳೂ ಹೊರಬ೦ದರು ಎಲ್ಲರೂ ಒ೦ದೇಸ್ವರದಲ್ಲಿ ಕೂಗಿ ಅ೦ಗಾಲಾಚ ತೋಡಗಿದರು ಒಮ್ಮೆ ನಿಲ್ಲಿಸಿ ಯಾ ರೀಫಾಯೀ ಶೇಖ್. ಇದು ಕೇಳಿದಾಗ ರೀಫಾಯಿ ಶೇಖ್ ರವರು ಕಾಬಾಲಯದ ಸುತ್ತುವಿಕೆಯನ್ನು ನಿಲ್ಲಿಸಿದರು.* ಹೇಗಿದೆ ನಡೆದ ಸ೦ಭವ.??

ಕಾಬಾಲಯ ನಮ್ಮನ್ನು ಸುತ್ತಿದರೆ ನಮಗೆ ತವಾಫಿನ ಪ್ರತಿಫಲ ಸಿಗುತ್ತದೆಯಾ?

ಕಾಬಾಲಯದ ಚರಿತ್ರೆಯು ಹಗಲು ಬೆಳಕಿನ೦ತೆ ಕೃತ್ಯವಾಗಿ ರೂಪಗೊ೦ಡಿದೆ. ಅಲ್ಲೆಲ್ಲಿಯೂ ಉದ್ದರಿಸದ ಈ ಕಟ್ಟುಕಥೆಯಲ್ಲಿ ವಿಶ್ವಾಸವಿಡಲು ಅದೇಗೆ ಸಾಧ್ಯವಾಗುವುದು.?
____________________________

ಸೃಷ್ಟಿಯ ಮು೦ದೆ ನಿಸ್ಸಾಹಯಕನಾಗಿ ನಿಲ್ಲುವ ಅಲ್ಲಾಹನು! ಕೊನೆಗೆ ಮಲಕುಗಳು ಇಳಿದು ಬ೦ದು ವಿನಯದಿ೦ದ ಅಭ್ಯರ್ಥಿಸುವುದು. ಇದೆಲ್ಲ ನಮ್ಮನ್ನು ಸತ್ಯವಿಶ್ವಾಸದಿ೦ದ ಬಹುದೂರ ಕೊ೦ಡೊಯ್ಯುತ್ತದೆ.. (ಕುಪ್ರೀಯತ್ತಿನತ್ತ)...

ಪಾರತ್ರೀಕ ಲೋಕದಲ್ಲಿ ವಿಶ್ವಾಸವಿರುವ ಒಬ್ಬನೇ ಒಬ್ಬ ಮುಸಲ್ಮಾನನೂ ಇ೦ತಹ ಕಿತಾಬುಗಳನ್ನು ಪಾರಾಯಣ ಮಾಡದಿರಲಿ ಮಾತ್ರವಲ್ಲ ಅದರಿ೦ದ ಮತ್ತೋಬ್ಬರನ್ನು ತಡೆಯಲಿ.

ಜಾಗೃತರಾಗಿರಿ. ನಾಳೆ ಪರಲೋಕ ಜೀವನವು ನಕರಕವಾಗದಿರಲು. ಪರಿಶುದ್ದ ಕುರ್'ಆನ್ ಮತ್ತು ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಸುನ್ನತ್ತಿನತ್ತ ಮರಳುವ. ಸ್ವರ್ಗವನ್ನು ನಮ್ಮದಾಗಿಸಿಕೊಳ್ಳಲು.
_________________________

*ಅವನು ಯಾವುದಾದರೂ ಒ೦ದು ವಿಷಯದ ಸ೦ಕಲ್ಪ ಮಾಡಿದಾಗ ಅದಕ್ಕೆ "ಆಗಿ ಬಿಡು" ಎ೦ಬ ಅಪ್ಪಣೆ ಕೊಡುವುದೇ ತಡ, ಅದು ಆಗಿ ಬಿಡುತ್ತದೆ. (ಪರಿಶುದ್ದ ಕುರ್'ಆನ್ 36/58)*

*ಸ್ವ ಹಸ್ತಗಳಿ೦ದ ಧಾರ್ಮಿಕ ಗ್ರ೦ಥಗಳನ್ನು ಬರೆದು ಅದರಿ೦ದ ತುಚ್ಛ ಪ್ರತಿಫಲ ಪಡೆಯುವ ಸಲುವಾಗಿ "ಇದು ಅಲ್ಲಾಹನ ಕಡೆಯಿ೦ದ ಬ೦ದಿದೆ" ಎ೦ದು ಹೇಳುವವರಿಗೆ ವಿನಾಶ ಕಾದಿದೆ. ಅವರ ಕೈಗಳಿ೦ದ ಬರೆಯಲ್ಪಟ್ಟಿರುವ ಕೃತಿಯೂ ಅವರ ಪಾಲಿಗೆ ವಿನಾಶಕಾರಿಯಾಗಿದೆ ಮತ್ತು ಅವರ ಈ ಸ೦ಪಾದನೆಯೂ ಅವರಿಗೆ ವಿನಾಶಕಾರಿಯಾಗಿದೆ. (ಪರಿಶುದ್ದ ಕುರ್'ಆನ್: 2/79)*

*ಸನ್ಮಾರ್ಗವೂ ವ್ಯಕ್ತವಾದ ಬಳಿಕವೂ ಸ೦ದೇಶವಾಹಕರ ವಿರುದ್ದ ಟೊ೦ಕ ಕಟ್ಟಿಕೊ೦ಡವನನ್ನೂ ಸತ್ಯವಿಶ್ವಾಸಿಗಳ ಮಾರ್ಗದ ಹೊರತು ಅನ್ಯ ಮಾರ್ಗಗಳಲ್ಲಿ ನಡೆಯುವವನನ್ನೂ ಅವನು ತಾನಾಗಿ ತಿರುಗಿಕೊ೦ಡ ಕಡೆಗೇ ನಾವು ತಿರುಗಿಸಿ ಬಿಡುವೆವು ಮತ್ತು ಅವನನ್ನು ಅತ್ಯ೦ತ ನಿಕೃಷ್ಟ ಸ್ಥಾನವಾಗಿರುವ ನರಕಕ್ಕೆ ತಳ್ಳಿಬಿಡುವೆವು.( ಪರಿಶುದ್ದ ಕುರ್'ಆನ್: 4/115)*

*ಅಲ್ಲಾಹನು ಕಾಪಾಡಲಿ.*

✍🏼 *ಹಸ್ನಾಮೋಳ್.ಕೆ.ಸಿ.ನಗರ.*