6 Oct 2016

ಉತುಬಿ ಕಥೆ ಮತ್ತು ಸೂರತ್ ಅನ್ನಿಸಾ 64 ನೇ ಸೂಕ್ತಿ.




ಸೂರ ಅನ್ನಿಸಾ 64 ನೇ ಸೂಕ್ತಿಯನ್ನು ಮುಂದಿಟ್ಟು ತವಸ್ಸುಲ್ ಮತ್ತು ಇಸ್ತಿಗಾಸಕ್ಕೆ ಪುರಾವೆಯನ್ನಾಗಿ ತರುವುದು ಉತಬಿ ಎಂಬ ವ್ಯಕ್ತಿಯನ್ನಾಗಿದೆ. ಆದರೆ ಸೂರ ಅನ್ನಿಸಾ 64 ನೇ ಸೂಕ್ತಿಗೂ ಉತಬಿ ಎಂಬ ವ್ಯಕ್ತಿಗೂ ಯಾವುದೇ ಸಂಭಂಧವಿಲ್ಲ. ಯಾಕೆಂದರೆ  ಒಂದು ಮುನಾಫಿಕ್ (ಕಪಟವಿಶ್ವಾಸಿ) ಆದ ವ್ಯಕ್ತಿಯು ಪ್ರವಾದಿ ﷺ ರು ಜೀವಿಸಿರುವಾಗ ತನ್ನ ಪರವಾಗಿ ತೀರ್ಪು ಲಭಿಸಬಹುದೆಂದು ಭಾವಿಸಿ ಒಬ್ಬ ಯಹೂದಿಯ ಹತ್ತಿರ ಹೋದುದರ ವಿರುದ್ಧ ಅಲ್ಲಾಹನು ಪ್ರವಾದಿ ﷺ ರಿಗೆ ಅವತೀರ್ಣಗಳಿಸಿದ ಸೂಕ್ತವಾಗಿದೆ.
ಈ ಸೂಕ್ತಿಯು ಕಪಟ ವಿಶ್ವಾಸಿಗಳ ವಿರುದ್ಧ ಅವತೀರ್ಣಗೊಂಡ ಸೂಕ್ತವಾಗಿದೆ ಎಂದು ತಫ್ಸೀರ್ ತಬ್ರೀ ಯಲ್ಲಿ ಕಾಣಬಹುದು.

ಇಮಾಮ್ ತಬ್ರಾಣಿ (ರ) ಯವರು ಮತ್ತು ಪ್ರಗಲ್ಬ ವಿದ್ವಾಂಸರಾದ ಝಮಕ್ಸರಿ (ರ) ರವರು ಇದು ಕಪಟ ವಿಶ್ವಾಸಿಗಳ ಕುರಿತಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಉತಬಿಯ ಘಟನೆಯನ್ನು ಇಮಾಮ್ ಅಬ್ದುಲ್ ಹಾದೀ ರವರು ಖಂಡಿಸಿ ಹೇಳುತ್ತಾರೆ. 🔽

ಈ ಸೂಕ್ತಿಯನ್ನು (ಅನ್ನಿಸಾ 64) ಸ್ವಹಾಬಿಗಳು, ತಾಬಿವುಗಳು, ತಾಬಿವುತ್ತಾಬಿವುಗಳು, ಮತ್ತು ಮದ್ಹಬಿನ ನಾಲ್ಕು ಇಮಾಮರು ಅರ್ಥ ಮಾಡಿಕೊಂಡ ರೀತಿಯಲ್ಲಿ ಅರ್ಥೈಸಬೇಕಾಗಿದೆ.
(ಅಸ್ಸರೀಂ ಅಲ್ ಮುಂಕಿ ಫೀ ರದ್ದ್ ಅಲ್ ಸುಬ್ಕೀ :321)

🔸ಇಲ್ಲಿ ತಫ್ಸೀರ್ ಇಬ್ನ್ ಕತೀರ್ ನಲ್ಲಿರುವ ಉತಬಿಯ ಕನಸನ್ನು ಖಂಡಿಸಿ ಹೇಳಿರುವುದರಿಂದ ಇಸ್ತಿಗಾಸಕ್ಕಾಗಲೀ, ಮರಣಾನಂತರದ ತವಸ್ಸಿಲಿಗಾಗಲೀ ಮೇಲೆ ತಿಳಿಸಿದವರು ಯಾರೂ ಈ ಸೂಕ್ತಿಯನ್ನು ಪುರಾವೆಯಾಗಿ  ಕಂಡಿಲ್ಲ ಎಂದು ಸ್ಪಷ್ಟವಾಗುತ್ತದೆ.

ವಿಧ್ವಾಂಸರಾದ, ಅಬುಲ್ ಮುಝಫ್ಫರ್ ಯೂಸುಫ್ ಬಿನ್ ಮುಹಮ್ಮದ್ ಅಲ್ ಹಂಬಲೀ (ರದ್ದ್ ಅಲ್ ವಾಫಿರ್ 1/131), ಮತ್ತು
ಅಬೂ ಅಬ್ದುಲ್ಲಾಹ್ ಮುಹಮ್ಮದ್ ಬಿನ್ ಜಮಾಲುದ್ದೀನ್ ಯೂಸುಫ್ ಅಶ್ಶಾಫಿಈ ಯಮನಿ (ಗಾಯತ್ ಅಲ್ ಯಮನಿ 1/623) ಇವರು ಉತಬಿಯ ಘಟನೆಯನ್ನು ಖಂಡಿಸಿದವರ ಸಾಲಿನಲ್ಲಿ ಸೇರಿದವರಾಗಿದ್ದಾರೆ.

ಇತಿಹಾಸಕಾರರೂ, ಶಾಫಿಈ ಮದ್ಹಬಿನ ವಿಧ್ವಾಂಸರೂ ಆಗಿರುವ ಇಮಾಮ್ ಅದ್ದಹಬಿ (ರ) ರವರು ಹೇಳುವುದು ಉತಬಿ ಒಬ್ಬ ಕವಿಯೂ, ಮದ್ಯಪಾನಿಯೂ ಆಗಿದ್ದಾನೆ ಎಂದು.🔽



العُتْبِيُّ، مُحَمَّدُ بنُ عُبَيْدِ اللهِ بنِ عَمْرِو بنِ مُعَاوِيَةَ

العَلاَّمَةُ، الأَخْبَارِيُّ، الشَّاعِرُ، المُجَوِّدُ، أَبُو عَبْدِ الرَّحْمَنِ مُحَمَّدُ بنُ عُبَيْدِ اللهِ بنِ عَمْرِو بنِ مُعَاوِيَةَ بنِ عَمْرِو بنِ عُتْبَةَ بنِ أَبِي سُفْيَانَ بنِ حَرْبٍ الأُمَوِيُّ، ثُمَّ العُتْبِيُّ، البَصْرِيُّ. رَوَى عَنِ: ابْنِ عُيَيْنَةَ، وَأَبِي مِخْنَفٍ، وَوَالِدِهِ. وَعَنْهُ: أَبُو حَاتِمٍ السِّجِسْتَانِيُّ، وَإِسْحَاقُ بنُ مُحَمَّدٍ النَّخَعِيُّ وَكَانَيَشرَبُ. وَلَهُ تَصَانِيْفُ أَدَبِيَّاتٌ، وَشُهرَةٌ. مَاتَ: سَنَةَ ثَمَانٍ وَعِشْرِيْنَ وَمائَتَيْنِ

(ಸಿಯಾರುಲ್ ಉಲೂಮ್ ಅನ್ನುಬುವ್ವ)


ಇಮಾಮ್ ಇಬ್ನು ಖಿಲ್ಕಾನ್ (ರ) ರವರು ಹೇಳುವುದು ಉತಬಿಯು ಅತೀ ದೊಡ್ಡ ಮದ್ಯಪಾನಿ  ಎಂದಾಗಿದೆ.

المعروف بالعتبي، الشاعر البصري المشهور؛ كان أديبا فاضلا شاعرا مجيدا، وكان يروي الأخبار وأيام العرب، ومات له بنون، فكان يرثيهم، وروى عن أبيه وعن سفيان بن عيينة ولوط بن محنف،وروى عنه أبو حاتم السجستاني وأبو الفضل الرياشي وإسحاق بن محمد النخعي وغيرهم، وقدم بغداد وحدث بها وأخذ عنه أهلها، وكان مستهترا بالشراب، ويقول الشعر في عتبة. وكان هو وأبوه سيدين أديبين فصيحين، وله من التصانيف كتاب الخيل وكتاب أشعار الأعاريب وأشعار النساء اللاتي أحببن ثم أبغضن وكتاب الذبيح وكتاب الأخلاق وغير ذلك.

وقال العتبي المذكور: سمعت أعرابيا يقول لرجل: إن فلانا وإن ضحك لك فإن عقاربه تسري إليك، فإن لم تجعله عدوا في علانيتك فلا تجعله صديقا في سريرتك .

ذكره ابن قتيبة في كتاب المعارف وابن المنجم في كتاب البارع وروى له:

رأين الغواني الشيب لاح بعارضي ... فأعرضن عني بالخدود النواضر

وكن متى أبصرنني أو سمعن بي ... سعين فرقعن الكوى بالمحاجر

فإن عطفت عني أعنة أعين ... نظرن بأحداق المها والجآذر

فإني من قوم كريم ثناؤهم ... لأقدامهم ضيعت رؤوس المنابر

خلائف في الإسلام، في الشرك قادة ... بهم وإليهم فخر كل

(ವಫಿಯ್ಯತುಲ್ ಅಯಾನ್)

ಈ ಸೂಕ್ತಿಯಲ್ಲಿ ನಾಲ್ಕು ಖಲೀಫರಾಗಲೀ, ಸ್ವಹಾಬಿಗಳಾಗಲೀ ಯಾರೂ ಕೂಡಾ ಇಸ್ತಿಗಾಸಕ್ಕಾಗಲೀ, ಮರಣಾನಂತರದ ತವಸ್ಸಿಲಿಗಾಗಲೀ ಪುರಾವೆಯಾಗಿ ಕಂಡಿಲ್ಲ. ಯಾಕೆಂದರೆ ಅವರಲ್ಲಿ ಹಲವರೂ ಪ್ರವಾದಿ ﷺ ರಿಂದ ನೇರವಾಗಿ ಇಸ್ಲಾಮನ್ನು ಕಲಿತವರು. ಆದರೆ ಇಬ್ನು ಕತೀರ್  (ರ) ತನ್ನ ತಫ್ಸೀರ್ ನಲ್ಲಿ ಉಲ್ಲೇಖಿಸಿದ್ದು ಉತಬಿ ಎಂಬ ವ್ಯಕ್ತಿಯ ಘಟನೆಯನ್ನು ಮಾತ್ರವಾಗಿದೆ. ಇದರಿಂದ ಇಸ್ತಿಗಾಸಕ್ಕಾಗಲೀ, ಮರಣಾನಂತರದ ತವಸ್ಸಿಲಿಗಾಗಲೀ ಪುರಾವೆ ಕಂಡುಕೊಳ್ಳಲು ಸಾಧ್ಯವಿಲ್ಲ. ಇನ್ನು ಬೇರೆ ಇಮಾಮರು ತಫ್ಸೀರ್ ಇಬ್ನ್ ಕತೀರ್ ನಲ್ಲಿ ಆ ಘಟನೆ ಇದೆ ಎಂದು ಹೇಳಿದರೆ ಅದು ಇಸ್ತಿಗಾಸಕ್ಕಾಗಲೀ, ಮರಣಾನಂತರದ ತವಸ್ಸಿಲಿಗಾಗಲೀ ಪುರಾವೆಯಾಗಿ ಕಂಡುಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಅದು ಒಂದು ಘಟನೆ ಮಾತ್ರವಾಗಿದೆ.

🔴 ಪ್ರವಾದಿ ﷺ ರನ್ನು ಕಣ್ಣಾರೆ ನೋಡಿದವರು ಪ್ರವಾದಿ ﷺ ರನ್ನು ಕನಸಿನಲ್ಲಿ ಕಂಡಿದ್ದಾಗಿ ಸ್ವಹೀಹ್ ಆಗಿ ಉಲ್ಲೇಖವಿದೆ. ಆದರೆ ಪ್ರವಾದಿ ﷺ ರನ್ನು ಕಣ್ಣಾರೆ ಕಾಣದೆ ಪ್ರವಾದಿ ﷺ ರನ್ನು ಕನಸಿನಲ್ಲಿ ಕಂಡಿದ್ದೇನೆ ಎಂದು ಯಾವುದೇ ವ್ಯಕ್ತಿ ಬಂದು ಹೇಳಿದರೂ ಅದು ತಿರಸ್ಕೃತವಾಗಿದೆ.

ಪ್ರವಾದಿ ﷺ ಕಣ್ಣಾರೆ ಕಂಡಂತಹ ಮುಶ್ರಿಕ್ ಆದ ಯಾವುದೇ ವ್ಯಕ್ತಿಯು ಪ್ರವಾದಿ ﷺ ರ ಕನಸು ಕಂಡರೆ ಆತ ಮಹಾನ್ ವ್ಯಕ್ತಿ ಆಗಲು ಸಾಧ್ಯವಿಲ್ಲ.


ಪ್ರವಾದಿ ﷺ ರನ್ನು ಕಣ್ಣಾರೆ ಕಂಡ ಸ್ವಹಾಬಿಗಳ ಕಾಲದ ನಂತರ ಯಾವುದೇ ವ್ಯಕ್ತಿಯ ಕನಸಿನಲ್ಲಿ ಶೈತಾನನು ಬೇರೆ ಯಾವುದೇ ರೂಪದಲ್ಲಿ ಬಂದು ನಾನು ಪ್ರವಾದಿ ಎಂದು ಕನಸಿನಲ್ಲಿ ಸುಳ್ಳು ಹೇಳಿದರೆ ಅದು ಪ್ರವಾದಿ ﷺ ಆಗಿದ್ದಾರೆ ಎಂದು ಗುರುತಿಸುವುದಾದರೂ ಹೇಗೆ ಸಾಧ್ಯ?

ಅನಸ್ (ರ) ರಿಂದ ವರದಿ : ಪ್ರವಾದಿ ﷺ ರು ಹೇಳಿದರು : ಯಾರಾದರೂ ನನ್ನನ್ನು ಕನಸಿನಲ್ಲಿ ನೋಡಿದರೆ ಅದರಲ್ಲಿ ಸಂದೇಹವಿಲ್ಲ, ನೋಡಿದ್ದು ನನ್ನನೇ ಆಗಿದೆ. ಶೈತಾನನು ನನ್ನ ರೂಪದಲ್ಲಿ ಬರುವುದಿಲ್ಲ.
(ಸ್ವಹೀಹ್ ಬುಖಾರಿ : 87/123)


ಇಲ್ಲಿ ನಮಗೆ ತಿಳಿದು ಬರುವುದು ಅನ್ನಿಸಾ 64 ನೇ ಸೂಕ್ತದ ತಫ್ಸೀರ್ ಇಬ್ನು ಕತೀರ್ ಬರೆದಿರುವ ಆ ಘಟನೆಗೆ ಸಂಭಂದಿಸಿದ ಉತಬಿಯು ಪ್ರವಾದಿ ﷺ ರನ್ನು ಕಂಡಿಲ್ಲ ಎಂಬುದು ವಾಸ್ತವ.

ಉತಬಿಯ ಘಟನೆಗೆ ಇಜ್ಮಾಅ ಮತ್ತು ಖಿಯಾಸ್ ನ ಮೊರೆ ಹೋಗಲು ಸಾಧ್ಯವೇ? 🔽

ಪವಿತ್ರ ಕುರಾನ್, ಸುನ್ನತ್ (ಪ್ರವಾದಿ ಚರ್ಯೆ), “ಇಜ್ಮಾ” ( ಕುರಾನ್ ಮತ್ತು ಹದೀಸ್ ಗಳಲ್ಲಿ ಇತ್ಯರ್ಥವಾಗದ ಯಾವುದೇ ಒಂದು ಸಮಸ್ಯೆಯ ಕುರಿತ ಪರಿಹಾರದ ಸಲುವಾಗಿ ಆ ಕಾಲದ ಪ್ರವಾದಿಯ ಉಮ್ಮತ್ತಿನಲ್ಲಿರುವ ಪಂಡಿತ ಶಿರೋಮಣಿಗಳ ಸಹಮತವನ್ನು “ಇಜ್ಮಾ” ಎನ್ನುತ್ತಾರೆ) ಮತ್ತು “ಕಿಯಾಸ್” (ಕುರಾನ್ ಮತ್ತು ಹದೀಸ್ ಗಳಲ್ಲಿನೇರವಾಗಿ ಉಲ್ಲೇಖಿಸಲ್ಪಡದಿರುವ ಯಾವುದೇ ಒಂದು ಸಮಸ್ಯೆಯ ಕುರಿತ ಪರಿಹಾರದ ಸಲುವಾಗಿ ಕುರಾನ್ ಮತ್ತು ಹದೀಸ್ ಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ ಅದನ್ನು ಹೋಲುವ ಬೇರೊಂದು ಸಮಸ್ಯೆಯಿಂದ ಪರಿಹಾರವನ್ನು ಕಂಡು ಹಿಡಿಯುವುದನ್ನು “ಕಿಯಾಸ್” ಎನ್ನುತ್ತಾರೆ) ಈ ನಾಲ್ಕು ವಿಷಯಗಳು ಇಸ್ಲಾಮೀ ಕರ್ಮ ಶಾಸ್ತ್ರದ ಮೂಲಾಧಾರಗಳಾಗಿವೆ.

🔸 ಇಲ್ಲಿ ಉತಬಿಯ ವಿಷಯದಲ್ಲಿ ಭಿನ್ನಭಿಪ್ರಾಯಗಳು ಇರುವುದರಿಂದ ಇಜ್ಮಾಅ ಮತ್ತು ಖಿಯಾಸ್ ನ  ಮೊರೆ ಹೋಗಲು ಸಾಧ್ಯವೇ ಇಲ್ಲ ಎಂಬುದು ಸ್ಪಷ್ಟ.


🔴 ಇಲ್ಲಿ ನಾವು ಗಮನಿಸಬೇಕಾದ ವಿಷಯವೇನೆಂದರೆ,  ಸೂರ ಅನ್ನಿಸಾ 64 ನೇ ಸೂಕ್ತದ ಅರ್ಥವನ್ನು ಆ ಘಟನೆಯ ವಿಷಯವಾಗಿ ಓದುವಾಗ 61 ರಿಂದ 65 ನೇ ಸೂಕ್ತದ ವರೆಗೆ ಓದುವುದು ಉತ್ತಮ.
ಇಲ್ಲಿ 61 ನೇ ಸೂಕ್ತದಲ್ಲಿ ಕಪಟವಿಶ್ವಾಸಿಗಳ ಬಗ್ಗೆ ವಿವರಿಸಿದೆ. ಮಾತ್ರವಲ್ಲ 65 ನೇ ಸೂಕ್ತದಲ್ಲಿ ತೀರ್ಪಿನ ಬಗ್ಗೆಯೂ, ಪ್ರವಾದಿ ﷺ ರನ್ನು ಅನುಸರಿಸುವ ಬಗ್ಗೆಯೂ ವಿವರಿಸಲಾಗಿದೆ.


ಮತ ಪಂಡಿತರ ವಿಷಯದಲ್ಲಿ ಹೇಳುವದಾದರೆ...

ಅವರರಿಗೆ ಸಿಗುವಂತಹ ಅರಿವನ್ನು ಅವರು ತಮ್ಮ ಗ್ರಂಥದಲ್ಲಿ ಬರೆದಿಡುತ್ತಾರೆ. ಮಾತ್ರವಲ್ಲ ನಂತರ ಅದರಲ್ಲಿ ಏನಾದರೂ ನ್ಯೂನತೆ ಕಂಡು ಬಂದರೆ ಕೂಡಲೇ ಅದನ್ನು ತಿದ್ದುವವರಾಗಿದ್ದಾರೆ (ಮುಜದ್ದಿದ್). ಒಂದು ವೇಳೆ ನ್ಯೂನತೆಗಳಿದ್ದೂ ಕಂಡುಕೊಳ್ಳಲು ಅವರಿಂದ ಸಾಧ್ಯವಾಗದಿದ್ದರೆ ಅದಕ್ಕೆ ಇಮಾರು ಹೊಣೆಗಾರರಲ್ಲ. ಯಾಕೆಂದರೆ ಅವರು ಸಿಗುವಂತಹ ಅರಿವನ್ನು ಮಾತ್ರ ಬರೆದಿಡುತ್ತಾರೆ. ಅದೇ ಅರಿವು ಬೇರೆ ಇಮಾಮರಿಗೆ ಬೇರೆ ರೂಪದಲ್ಲೂ ಸಿಗಬಹುದು. ಅದರಲ್ಲಿ ಕೆಲವೊಂದು ಸರಿ ಆಗಿರಲೂಬಹುದು, ತಪ್ಪು ಆಗಿರಲೂಬಹುದು. ಆ ಸಿಗುವಂತಹ ಅರಿವು ಸರಿಯಾಗಿದ್ದರೆ ಅದನ್ನು ಪ್ರಚಾರ ಪಡಿಸಿದರೆ ಅಲ್ಲಾಹನು ಅದಕ್ಕೆ ತಕ್ಕಂತೆ ಪ್ರತಿಫಲವನ್ನು ಕೊಡುತ್ತಾನೆ.
ನ್ಯೂನತೆಗಳಿದ್ದೂ ಕಂಡುಕೊಳ್ಳಲು ಸಾಧ್ಯವಾಗದಿದ್ದರೆ ಅದು ಇಮಾಮರುಗಳ ತಪ್ಪಲ್ಲ. ಅದು ಅವರಿಗೆ ಸಿಗುವಂತಹ ಅರಿವಿನ ತಪ್ಪು. ಕೆಲವೊಂದು ವಿಷಯಗಳಲ್ಲಿ ನ್ಯೂನತೆಗಳನ್ನು ಕಂಡುಕೊಳ್ಳಲು ಇಮಾಮರಿಗೆ ಸಾಧ್ಯವಾಗದಿದ್ದರೆ ಅವರಿಗೆ ಶಿಕ್ಷೆ ಲಭಿಸುವ ವಿಷಯವೇನೂ ಅಲ್ಲ. ಬದಲಾಗಿ ಅವರ ಶ್ರಮಕ್ಕೆ ತಕ್ಕಂತೆ ಪ್ರತಿಫಲವನ್ನು ಅಲ್ಲಾಹನು ಕೊಡುತ್ತಾನೆ.
ಆದ್ದರಿಂದ ಇಮಾಮರನ್ನು ನಾವು ಅಂಧಾನುಸರಣೆ ಮಾಡುವ ಹಾಗಿಲ್ಲ. ಇಮಾಮರ ಅಭಿಪ್ರಾಯಗಳು ಕುರಾನ್ ಮತ್ತು ಸುನ್ನತ್ತಿಗೆ ಹೊಂದಿಕೊಂಡಿದ್ದರೆ ಮಾತ್ರ ನಾವು ಅವರ ಅಭಿಪ್ರಾಯವನ್ನು ಅನುಸರಿಸಬಹುದು. ಇಮಾಮರ ಅಭಿಪ್ರಾಯಗಳು ಕುರಾನ್ ಮತ್ತು ಸುನ್ನತ್ತಿಗೆ ಹೊಂದಿಕೊಳ್ಳದಿದ್ದರೆ ನಾವು ಅವರಿಗೆ ಕೊಡಬೇಕಾದ ಎಲ್ಲಾ ರೀತಿಯ  ಗೌರವಗಳನ್ನು ಕೊಟ್ಟು ಅವರ ಅಭಿಪ್ರಾಯಗಳನ್ನು ತಳ್ಳುವುದಾಗಿದೆ.

ಯಾವುದಾದರೂ ಒಬ್ಬರು ಇಮಾಮ್ ಒಂದು ಹದೀಸನ್ನು ಸ್ವಹೀಹ್ ಎಂದರೆ, ಅದೇ ಹದೀಸನ್ನು  ಬೇರೆ ಇಮಾಮ್ ಅಥವಾ ಮುಹದ್ದಿಸ್ ಲಹೀಪ್ ಎಂದು ಹೇಳಿದರೆ ಅದರಲ್ಲಿ ಏನಾದರೂ ನ್ಯೂನತೆ ಇದೆ ಎಂದರ್ಥ, ಅದನ್ನು ಸ್ವಹೀಹ್ ಎಂದು ಹೇಳಿದ ಇಮಾಮಿಗೆ ಆ ವಿಷಯ ಗೊತ್ತಾಗಲಿಲ್ಲ ಎಂದರ್ಥ.  ಮತ್ತೆ ಆ ಹದೀಸಿನ ಹಿಂದೆ ಹೋಗುವ ಆವಶ್ಯಕತೆ ಯಾರಿಗೂ ಬರುವುದಿಲ್ಲ. ಯಾಕೆಂದರೆ ಅದನ್ನು ಲಹೀಪ್ ಎಂದು ಫತ್ವಾ ಕೊಡಲು ಏನಾದರೂ ಒಂದು ಕಾರಣ ಇದ್ದೇ ಇರುತ್ತದೆ.

الإسناد من الدين
ದೀನ್ ಗೆ ಪ್ರಮಾಣವು ಮುಖ್ಯವಾಗಿದೆ.

ಪ್ರಮಾಣವೆಂದರೆ ಅದು ಕುರಾನ್ ಮತ್ತು ಸುನ್ನತ್ತಿಗೆ ಹೊಂದಿಕೊಂಡಿರಬೇಕು. ಯಾಕೆಂದರೆ ಅಲ್ಲಾಹನು ಕುರಾನಿನಲ್ಲಿ ಹೇಳುತ್ತಾನೆ 🔽


الْيَوْمَ أَكْمَلْتُ لَكُمْ دِينَكُمْ وَأَتْمَمْتُ عَلَيْكُمْ نِعْمَتِي وَرَضِيتُ لَكُمُ الْإِسْلَامَ دِينًا

ಇಂದು ನಾನು ನಿಮಗೆ ನಿಮ್ಮ ಧರ್ಮವನ್ನು ಪೂರ್ತೀಕರಿಸಿ ಕೊಟ್ಟಿರುವೆನು. ನನ್ನ ಅನುಗ್ರಹವನ್ನು ನಾನು ನಿಮಗೆ ನೆರವೇರಿಸಿಕೊಟ್ಟಿರುವೆನು. ಇಸ್ಲಾಮನ್ನು ಧರ್ಮವಾಗಿ ನಾನು ನಿಮಗೆ ತೃಪ್ತಿಪಟ್ಟಿರುವೆನು.

[ಅಲ್-ಮಾ'ಇದಃ : 3]

ಪ್ರವಾದಿ ﷺ ರ ಕಾಲದ ನಂತರ ಬೇರೆ ಒಂದು ಇಸ್ಲಾಮ್ ಇಲ್ಲ. ಅಲ್ಲಾಹನು ಪ್ರವಾದಿ ﷺ ರ ಕಾಲದಲ್ಲಿಯೇ ಇಸ್ಲಾಮನ್ನು ಪೂರ್ಣಗೊಳಿಸಿದ್ದಾನೆ. ನಂತರ ಉದ್ಭವಿಸುವ ಯಾವುದೇ ಘಟನೆಗಳು ಇಸ್ಲಾಮಿಗೆ ಪುರಾವೆಯಲ್ಲ.

ಪ್ರವಾದಿ ﷺ ರು ಹೇಳುತ್ತಾರೆ : ನನ್ನ ಪೈಕಿ ನನ್ನ ನಂತರ ಜೀವಿಸುವವರು ಬಹಳಷ್ಟು ಭಿನ್ನಾಭಿಪ್ರಾಯವನ್ನು ಕಾಣಲಿರುವರು. ಆ ಸಂಧರ್ಭದಲ್ಲಿ ನೀವು ನನ್ನ ಮತ್ತು ನಾಲ್ವರು ಖಲೀಫರ ಸುನ್ನತ್ತನ್ನು ಬಲವಾಗಿ ಹಿಡಿದುಕೊಳ್ಳಿರಿ. ಯಾವುದೇ ಕಾರಣಕ್ಕೂ ಸುನ್ನತ್ತನ್ನು ಕೈಬಿಡದಿರಿ.
(ಅಬೂ ದಾವೂದ್ : 4607, ತಿರ್ಮಿದಿ :2676)


ಪ್ರವಾದಿ ﷺ ರು ಹೇಳಿದರು : ನನ್ನ ಮತ್ತು ನನ್ನ ಸಹಾಬಿಗಳ ಮಾರ್ಗದಲ್ಲಿ ಯಾರು ಇದ್ದಾರೆಯೇ ಅವರಾಗಿದ್ದಾರೆ ವಿಜಯಿಗಳು.

ಪ್ರವಾದಿ ﷺ ರು ಹೇಳಿದರು : ನಾನು ನಿಮಗೆ ಎರಡು ವಸ್ತುಗಳನ್ನು ಬಿಟ್ಟು ಹೋಗುತ್ತಿದ್ದೇನೆ (ಕುರಾನ್ ಮತ್ತು ಪ್ರವಾದಿ ಚರ್ಯೆ) ಅದನ್ನು ಗಟ್ಟಿಯಾಗಿ ಹಿಡಿಯುವ ವರೆಗೆ ನೀವು ದಾರಿ ತಪ್ಪಲಾರಿರಿ.


ಎಲ್ಲದಕ್ಕೂ ಪರ್ಯಾವಸಾನ ಇಲ್ಲಿದೆ.
 ಅಲ್ಲಾಹನು ಕುರಾನಿನಲ್ಲಿ ಹೇಳುತ್ತಾನೆ 🔽

يَا أَيُّهَا الَّذِينَ آمَنُوا أَطِيعُوا اللَّهَ وَأَطِيعُوا الرَّسُولَ وَأُولِي الْأَمْرِ مِنْكُمْ ۖ فَإِنْ تَنَازَعْتُمْ فِي شَيْءٍ فَرُدُّوهُ إِلَى اللَّهِ وَالرَّسُولِ إِنْ كُنْتُمْ تُؤْمِنُونَ بِاللَّهِ وَالْيَوْمِ الْآخِرِ ۚ ذَٰلِكَ خَيْرٌ وَأَحْسَنُ تَأْوِيلًا

ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವನ್ನು ಅನುಸರಿಸಿರಿ. (ಅವನ) ಸಂದೇಶವಾಹಕರನ್ನೂ ನಿಮ್ಮಿಂದಲೇ ಇರುವ ಕಾರ್ಯನಿರ್ವಾಹಕರನ್ನೂ ಅನುಸರಿಸಿರಿ. ನೀವು ಅಲ್ಲಾಹುವಿನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರಾಗಿದ್ದರೆ ನಿಮ್ಮ ಮಧ್ಯೆ ಯಾವುದೇ ವಿಷಯದಲ್ಲಾದರೂ ಭಿನ್ನಾಭಿಪ್ರಾಯ ತಲೆದೋರಿದರೆ ನೀವದನ್ನು ಅಲ್ಲಾಹುವಿನೆಡೆಗೂ ಸಂದೇಶವಾಹಕರೆಡೆಗೂ ಮರಳಿಸಿರಿ. ಅದು ಅತ್ಯುತ್ತಮವಾದುದೂ ಅತಿಸೂಕ್ತ ಪರ್ಯಾವಸಾನವುಳ್ಳದ್ದೂ ಆಗಿದೆ.

[ಅನ್ನಿಸಾ'ಅ : 59]

ಹೀಗಿರುವಾಗ ನಾವು ಯಾಕೆ ಕವಿಯೂ, ಮದ್ಯಪಾನಿಯೂ ಆದ ಉತಬಿಯ ಕನಸಿನ ಹಿಂದೆ ಹೋಗಬೇಕು?

ಪ್ರವಾದಿ ﷺ ರನ್ನು ಕನಸಿನಲ್ಲಿ ಕಾಣುವುದರ ಕುರಿತು ಕೇರಳದ ಸಮಸ್ಥಾನ ಸುನ್ನೀ ನೇತಾರ ಹೇಳುವುದನ್ನು ತಿಳಿಯಲು ಈ ಕೆಳಗಿನ ಲಿಂಕ್ ನ್ನು ಸಂಪರ್ಕಿಸಿ.
👇
https://youtu.be/CiUCTHqXB20


✍ Abu Muadh


No comments:

Post a Comment