ತಾಯತ ಅಥವಾ ಉರ್ಕು...
ಪ್ರವಾದಿ (ಸಅ) ರು ಹೇಳುತ್ತಾರೆ:
عن عقبة بن عامر الجهني أن رسول الله صلى الله عليه وسلم أقبل إليه رهط فبايع تسعة وأمسك عن واحد فقالوا : يا رسول الله بايعتَ تسعة وتركت هذا ، قال : إن عليه تميمة ، فأدخل يده فقطعها فبايعه وقال : من علق تميمة فقد أشرك . رواه أحمد ( 16969 ) .
والحديث : صححه الشيخ الألباني في " السلسلة الصحيحة " ( 492 ) .
ಉಕ್'ಬಾ ಇಬ್ನು ಆಮಿರ್ ಜಹನೀ (ರ) ರಿಂದ ವರದಿ : ಪ್ರವಾದಿ (ಸಅ) ರು ಹೇಳಿದರು ಯಾರು ತಾಯತ (ಉರ್ಕು) ಧರಿಸುತ್ತಾನೋ ಅವನು ಶಿರ್ಕ್ (ದೇವ ಸಹಭಾಗಿತ್ವ) ಮಾಡಿದನು.
(ಮುಸನ್ನದ್ ಅಹ್ಮದ್ :16969)
ಶೈಖ್ ಅಲ್ಬಾನಿಯವರು ತನ್ನ ಸಿಲ್'ಸಿಲತ್ ಸಹೀಹ್ (492) ನಲ್ಲಿ ಸ್ವಹೀಹ್ ಎಂದಿದ್ದಾರೆ.
ಜೀವನದಲ್ಲಿ ಏನಾದರೂ ತೊಂದರೆ ಬಂದರೆ ಅಲ್ಲಾಹನ ಮೇಲೆ ಭರವಸೆ ಇಡುವುದು ಒಬ್ಬ ಮುಸ್ಲಿಮನ ಈಮಾನಿನ ಭಾಗವಾಗಿದೆ. ಈ ಭರವಸೆಯನ್ನು ಇಲ್ಲದಾಗಿಸಲು ಶೈತಾನ್ ಪುರೋಹಿತರ ರೂಪದಲ್ಲಿ ಕಾರ್ಯಾಚರಿಸುತ್ತಾನೆ. ಅದರಲ್ಲಿ ಸೇರಿದ್ದಾಗಿದೆ ತಾಯತ ಅಥವ ತಾವೀಝ್ (ಉರ್ಕು) ಕಟ್ಟುವುದು ಮತ್ತು ನೂಲು ಕಟ್ಟುವುದು. ಇದು ಅಲ್ಲಾಹನ ಮೇಲಿರುವ ವಿಶ್ವಾಸವನ್ನು ದುರ್ಬಲಗೊಳಿಸುತ್ತದೆ ಮಾತ್ರವಲ್ಲ ಅಲ್ಲಾಹನಿಗೆ ಸಹಭಾಗಿತ್ವ (ಶಿರ್ಕ್) ಮಾಡಲು ಬಹು ಮುಖ್ಯ ಪಾತ್ರ ವಹಿಸುತ್ತದೆ.
