16 Jan 2024

ತೌಹೀದ್ ಅಜೇಯವಾಗಿದೆ.

* ತೌಹೀದ್ ಅಜೇಯವಾಗಿದೆ.*


*ಅಲ್ಲಾಹೇತರರೊಂದಿಗೆ ಅಬೌತಿಕವಾದ ಮಧ್ಯಸ್ಥಿಕೆ ಎಲ್ಲವೂ ಶಿರ್ಕ್ ಆಗಿದೆ. ಬೌತಿಕವಾದ ಮಧ್ಯಸ್ಥಿಕೆ ಯಾವುದೂ ಶಿರ್ಕ್ ಅಲ್ಲ.*


*ಅಬೌತಿಕ ಎಂದರೆ ಅಲ್ಲಾಹನಿಗೆ ಮಾತ್ರ ಇರುವ ಮಧ್ಯಸ್ತಿಕೆಯಾಗಿದೆ, ಪ್ರಾರ್ಥನೆ ಆಗಿದೆ.*


*ಬೌತಿಕ ಎಂದರೆ ಅಲ್ಲಾಹನು ಸೃಷ್ಟಿಯೊಂದಿಗೆ ನಿಶ್ಚಯಿಸಿದ ಮಧ್ಯಸ್ತಿಕೆಯಾಗಿದೆ, ಇದರಲ್ಲಿ ಪ್ರಾರ್ಥನೆ ಇಲ್ಲ, ಇದು ಶಿರ್ಕ್ ಅಲ್ಲ.*


*ಒಂದು ವಿಷಯ ಪ್ರಾರ್ಥನೆಯಾಗುವುದು ಅಬೌತಿಕವಾಗಿ ಮಧ್ಯಸ್ತಿಕೆ ವಹಿಸುವುದರೊಂದಿಗೆ ಮಾತ್ರವಾಗಿದೆ.*


*ಒಂದು ವಿಷಯದಲ್ಲಿ ಪ್ರಾರ್ಥನೆ ಇಲ್ಲದಿದ್ದರೆ ಅದು ಅಬೌತಿಕ ಮಧ್ಯಸ್ತಿಕೆ ಅಲ್ಲ, ಅದು ಶಿರ್ಕ್ ನ ಗಣದಲ್ಲಿ ಒಳಪಡುವುದೂ ಇಲ್ಲ.*


*ಶಿರ್ಕ್, ತೌಹೀದ್ ನ ನಡುವೆ ಇರುವ ಮಹಾ ತಡೆಗೋಡೆ ಅಬೌತಿಕತೆಯಾಗಿದೆ.*


*ಶಿರ್ಕ್, ತೌಹೀದ್ ಬೇರೆ ಬೇರೆಯಾಗುವುದೇ ಅಬೌತಿಕತೆಯಿಂದಾಗಿದೆ.*


*👆🏽ಇದನ್ನು ಯಾವಾಗಲೂ ನೆನಪಿನಲ್ಲಿ ಇಟ್ಟರೆ ನಾವೆಲ್ಲರೂ ಯಾವತ್ತೂ ದಾರಿ ತಪ್ಪುವುದಿಲ್ಲ.*


👆🏽ಇದು ಬರೆದಾಗ ಒಂದು ಗ್ರೂಪಿನಲ್ಲಿ ಅಂಧ ವಿಶ್ವಾಸದ ಕುರಿತು ಸಹೋದರರೊಬ್ಬರು ಬರೆದರು.


ಅದಕ್ಕೆ ಪೂರಕವಾಗಿ ಈ ರೀತಿ ಬರೆದೆ👇🏽


ಮೂಡ ವಿಶ್ವಾಸಗಳು ಪ್ರಾರ್ಥನೆಯಲ್ಲಿ ಒಳಪಡುವವುಗಳು ಶಿರ್ಕ್ ಆಗಿದೆ.


ಪ್ರಾರ್ಥನೆಯಲ್ಲಿ ಒಳಪಡದವುಗಳು ವಸೀಲತು ಶಿರ್ಕ್ ಆಗಿದೆ, ಹರಾಮ್ ಆಗಿದೆ.


ಪ್ರಾರ್ಥನೆ ಎಂದರೆ ಅಬೌತಿಕವಾಗಿ ನಾವು ದಿನ ನಿತ್ಯ ನಿರ್ವಹಿಸುವ ಕರ್ಮಗಳಾಗಿವೆ. 

ಅಲ್ಲಾಹನ ವಜ್ಹ್ ಉದ್ದೇಶಿಸಿ ನಾವು ನಿರ್ವಹಿಸುವ ಉಪವಾಸ ಪ್ರಾರ್ಥನೆಯಾಗಿದೆ, ಝಕಾತ್ ಪ್ರಾರ್ಥನೆಯಾಗಿದೆ, ದಾನಧರ್ಮ ಪ್ರಾರ್ಥನೆಯಾಗಿದೆ, ಕೆಟ್ಟ ಕಾರ್ಯಗಳಿಂದ ಅಲ್ಲಾಹನನ್ನು ಭಯಪಟ್ಟು ನಮ್ಮನ್ನು ನಾವು ಸಂರಂಕ್ಷಿಸುವುದು ಪ್ರಾರ್ಥನೆಯಾಗಿದೆ. ಇದೆಲ್ಲವೂ ಪ್ರಾರ್ಥನೆಯ ಪರಧಿಯಲ್ಲಿ ಒಳಪಡುವುದಾಗಿದೆ.


ವಸೀಲತು ಶಿರ್ಕ್ ಎಂದರೆ ಶಿರ್ಕ್ ಗೆ ಇರುವ ದಾರಿಯಾಗಿದೆ. 

ಆದಂ (ಅಸ) ರ 10 ತಲೆಮಾರುಗಳಲ್ಲಿ ಶಿರ್ಕ್ ಸಂಭವಿಸಲಿಲ್ಲ. ಆದರೆ ಪ್ರವಾದಿಗಳಿಲ್ಲದ ಕಾಲಘಟ್ಟದಲ್ಲಿ ಅವರಲ್ಲಿ ಅಂಧವಿಶ್ವಾಸಗಳಿತ್ತು, ಅವರು ಶೈತಾನನ ಆಜ್ಞೆಯಂತೆ ಮೊದಲನೆಯದಾಗಿ ಕುರ್ಆನಿನಲ್ಲಿ ಹಸರಿಸಲ್ಪಟ್ಟ ಐದು ಮಹಾನ್ ವ್ಯಕ್ತಿಗಳ ಕಬರ್ಗಳನ್ನು ಗುರುತಿಸತೊಡಗಿದರು ಆದರೆ ಅವರಲ್ಲಿ ಶಿರ್ಕ್ ಸಂಭವಿಸಲಿಲ್ಲ, ನಂತರ ಶೈತಾನನ ಆಜ್ಞೆಯಂತೆ ಮಹತ್ವೀಕರಿಸಿದರು ಆದರೂ ಶಿರ್ಕ್ ಸಂಭವಿಸಲಿಲ್ಲ, ನಂತರ ಶೈತಾನನ ಆಜ್ಞೆಯಂತೆ ಆ ಐದು ಮಹಾನ್ ವ್ಯಕ್ತಿಗಳ ಕಬರಿನ ಮೇಲೆ ಅವರ ವಿಗ್ರಹವನ್ನು ಸ್ಥಾಪಿಸಿದರು ಆದರೆ ಅವರು ಅದನ್ನು ಆರಾಧಿಸಲಿಲ್ಲ, ಅವರಲ್ಲಿ ಶಿರ್ಕ್ ಸಂಭವಿಸಲಿಲ್ಲ. ಆದರೂ ಆ 10 ತಲೆಮಾರುಗಳು ಶಿರ್ಕ್ ಮಾಡಿರಲಿಲ್ಲ. ಅವರು ಕಬರನ್ನು ಗುರುತಿಸುವುದರಿಂದ ಹಿಡಿದು ವಿಗ್ರಹ ಸ್ಥಾಪಿಸಿರುವುದು ಅಂಧ ವಿಶ್ವಾಸವಾಗಿದೆ, ಅದು ವಸೀಲತು ಶಿರ್ಕ್ ಆಗಿದೆ, ಹರಾಮ್ ಆಗಿದೆ.


 ಶಿರ್ಕ್ ಗಿರುವ ದಾರಿಗಳೆಲ್ಲವೂ ಹರಾಮ್ ಆಗಿದೆ.


ಇದು ಬರೆದಾಗ ಸೂರ *ಅನ್ಆಮ್ 128* ಸೂಕ್ತದ ನೆನಪಾಯಿತು.


*ಇದು ಬರೆಯಲು ಪ್ರೇರೇಪಿಸಿರುವುದು 14/01/2024 ರಂದು ಉಲ್ಲಾಳದಲ್ಲಿ ನಡೆದ  ಕಾರ್ಯಕ್ರಮದ ಕೆಲವೊಂದು ಆರೋಪಣೆಗಳು.*