2 Oct 2018

ಮಹಿಳೆಯರಿಗೆ ಮನೆಯ ಒಳಗೆ ನಮಾಝ್ ಮಾಡುವುದು ಖೈರ್ ಆಗಿದೆ ಎಂಬ ಹದೀಸಿನ ವಾಸ್ತವವೇನು?

ಮಹಿಳೆಯರನ್ನು ಮಸೀದಿಯಿಂದ ತಡೆಯುವ ಉದ್ದೇಶದಿಂದ ಅವರನ್ನು ತಪ್ಪುಗಳಲ್ಲಿ ಸಿಲುಕಿಸಿ ಪ್ರಚುರಪಡಿಸುವ ಒಂದು ಹದೀಸಾಗಿದೆ "ಮನೆಯಾಗಿದೆ ಉತ್ತಮ " ಎಂಬ ಹದೀಸ್.


ಈ ಹದೀಸಿನ ಬಗ್ಗೆ ಉಲಮಾಗಳ ಅಭಿಪ್ರಾಯವೇನು ಎಂದು ಪರಿಶೀಲಿಸುವ...

ದಿವ್ಯ ಕುರ್'ಆನಿನ ಅಹ್'ಝಾಬಿನ ಸೂಕ್ತವನ್ನು ನೋಡಿ...

 وَقَرْنَ فِي بُيُوتِكُنَّ وَلَا تَبَرَّجْنَ تَبَرُّجَ الْجَاهِلِيَّةِ الْأُولَىٰ ۖ وَأَقِمْنَ الصَّلَاةَ وَآتِينَ الزَّكَاةَ وَأَطِعْنَ اللَّهَ وَرَسُولَهُ ۚ إِنَّمَا يُرِيدُ اللَّهُ لِيُذْهِبَ عَنْكُمُ الرِّجْسَ أَهْلَ الْبَيْتِ وَيُطَهِّرَكُمْ تَطْهِيرًا

ನೀವು ನಿಮ್ಮ ಮನೆಗಳಲ್ಲಿ ತಂಗಿರಿ. ಗತ ಅಜ್ಞಾನ ಕಾಲದ ಸೌಂದರ್ಯ ಪ್ರದರ್ಶನದಂತಿರುವ ಸೌಂದರ್ಯ ಪ್ರದರ್ಶನವನ್ನು ನೀವು ಮಾಡದಿರಿ. ನೀವು ನಮಾಝನ್ನು ಸಂಸ್ಥಾಪಿಸಿರಿ ಮತ್ತು ಝಕಾತ್ ನೀಡಿರಿ. ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು ಅನುಸರಿಸಿರಿ. ಓ (ಪ್ರವಾದಿ) ಮನೆಯವರೇ! ಅಲ್ಲಾಹು ಬಯಸುತ್ತಿರುವುದು ನಿಮ್ಮಿಂದ ಮಾಲಿನ್ಯವನ್ನು ನಿವಾರಿಸಲು ಮತ್ತು ನಿಮ್ಮನ್ನು ಸಂಪೂರ್ಣ ಶುದ್ಧೀಕರಿಸಲು ಮಾತ್ರವಾಗಿದೆ.

➖➖➖➖➖

ಹಿಜಾಬಿನ ಸೂಕ್ತ , ಹಿಜಾಬಿನ ಸೂಕ್ತ ಎಂದು ಮುಸ್ಲಿಯಾರ್'ಗಳು ಯಾವಾಗಲೂ ಹೇಳುತ್ತಾ ಇರುತ್ತಾರೆ ಅಲ್ವಾ...

ಆ ಸೂಕ್ತವಾಗಿದೆ ಮೇಲೆ ಕೊಟ್ಟಿರುವುದು..

ಅಹ್'ಝಾಬಿನ 33ನೇ ಸೂಕ್ತವನ್ನು ವ್ಯಾಖ್ಯಾನಿಸಿದ ಇಬ್ನ್ ಕಸೀರ್ (ರ) ಹೇಳುವುದನ್ನು ನೋಡುವ:


وَقَوْلُهُ : ( وَقَرْنَ فِي بُيُوتِكُنَّ ) أَيِ : الْزَمْنَ بُيُوتَكُنَّ فَلَا تَخْرُجْنَ لِغَيْرِ حَاجَةٍ وَمِنِ الْحَوَائِجِ الشَّرْعِيَّةِ الصَّلَاةُ فِي الْمَسْجِدِ بِشَرْطِهِ ، كَمَا قَالَ رَسُولُ اللَّهِ صَلَّى اللَّهُ عَلَيْهِ وَسَلَّمَ : " لَا تَمْنَعُوا إِمَاءَ اللَّهِ مَسَاجِدَ اللَّهِ ، وَلْيَخْرُجْنَ وَهُنَّ تَفِلَاتٌ " وَفِي رِوَايَةٍ : " وَبُيُوتُهُنَّ خَيْرٌ لَهُنَّ "


ಸ್ತ್ರೀಯರು ಮನೆಯ ಒಳಗೆ ಕೂರುವವರಾಗಬೇಕು. ಅಗತ್ಯವಲ್ಲದ ಕಾರಣಕ್ಕಾಗಿ ಹೊರಗೆ ಹೋಗಬಾರದು.  ನಮಾಝಿಗಾಗಿ ಷರತ್ತುಗಳನ್ನು ಪಾಲಿಸಿಕೊಂಡು ಮಸೀದಿಗೆ ಹೋಗುವುದು ಷರಹ್ ಅಂಗೀಕರಿಸಿದ ಕಾರ್ಯವಾಗಿದೆ.

ಅಲ್ಲಾಹನ ದಾಸಿಯರನ್ನು ಅಲ್ಲಾಹನ ಮಸೀದಿಯಿಂದ ತಡೆಯಬಾರದು . ಅವರು ಆಡಂಬರವಿಲ್ಲದೆ ಹೋಗಲಿ ಎಂದು ಮುಹಮ್ಮದ್ﷺ ರವರು ಹೇಳಿದ ರೀತಿಯಲ್ಲಿ ಹೋಗಲಿ"

 ಇನ್ನೊಂದು ವರದಿಯಲ್ಲಿ ಸ್ತ್ರೀಯರಿಗೆ ಮನೆಯಾಗಿದೆ ಉತ್ತಮ ಎಂಬ ಹದೀಸ್ ವರದಿಯಾಗಿದೆ.

(ತಫ್ಸೀರ್ ಇಬ್ನ್ ಕಸೀರ್)


 ಇಷ್ಟೆಲ್ಲಾ ಪುರಾವೆ ಇದ್ದರೂ ಪುರೋಹಿತರು ಅದನ್ನು ಅಡಗಿಸಿಟ್ಟು ಜನರನ್ನು ಅಂಧಕಾರಕ್ಕೆ ಕೊಂಡೊಯ್ಯುತ್ತಿದ್ದಾರೆ..

ಸತ್ಯ ಬಚ್ಚಿಟ್ಟರೂ , ಸುಳ್ಳು ಹೇಳಿದರೂ ತೊಂದರೆಯಿಲ್ಲ ಸಲಫಿಗಳು ತಲೆಯೆತ್ತಬಾರದೆಂಬ ‌ನಿಲುವಾಗಿದೆ ಮುಸ್ಲಿಯಾರ್'ಗಳನ್ನು ಈ ರೀತಿ ಮಾಡಲು ಪ್ರೇರೇಪಿಸುವುದು..

ಇನ್ನು ಇಬ್ನ್ ಕಸೀರಿನ ತಫ್ಸೀರಿನ ಕೊನೆಯ ಭಾಗದಲ್ಲಿ *_#ಸ್ತ್ರೀಯರಿಗೆ ಮನೆಯಾಗಿದೆ ಉತ್ತಮ_#* ಎಂಬ ಹದೀಸಿನ ಉದ್ದೇಶ ಸ್ತ್ರೀಯರಿಗೆ ಎಲ್ಲಾ ವಿಷಯಗಳು ಮನೆಯಾಗಿದೆ ಖೈರ್ ಎಂಬ ವಿಷಯದಲ್ಲಿ ಅಭಿಪ್ರಾಯ ವ್ಯತ್ಯಾಸವಿಲ್ಲ.

ಇನ್ನು ಚರ್ಚೆಯಿರುವ ವಿಷಯವೇನೆಂದರೆ ಸ್ತ್ರೀಯರಿಗೆ ಮಸೀದಿಗೆ ಹೋಗಬಹುದೇ ಎಂಬುದಾಗಿದೆ..

ಅದಕ್ಕೆ ಇಬ್ನ್ ಕಸೀರಿನ ತಫ್ಸೀರಿನಲ್ಲಿ ಷರತ್ತುಗಳನ್ನು ಮುಂದಿಟ್ಟುಕೊಂಡು ಹೋಗಬಹುದೆಂಬ ಪುರಾವೆ ಲಭಿಸುತ್ತದೆ.

ಒಂದು ಕಾರ್ಯ ಉತ್ತಮವೆಂದಾದರೆ ಉಳಿದವುಗಳು ನಿಷಿದ್ದವಾಗಿದೆ ಎಂಬ ಅರ್ಥ ಬರುವುದಿಲ್ಲ.

ಒಂದು ವಸ್ತ್ರ ಉತ್ತಮವಾಗಿದೆ ಎಂದು ಹೇಳಿದರೆ ಉಳಿದವುಗಳು ಧರಿಸುವುದು ನಿಷಿದ್ದವೆಂದು ಯಾರಾದರೂ ಹೇಳುತ್ತಾರಾ?

ಪುರುಷರಿಗೆ ಮುಂದಿನ ಸ್ವಫ್ ಉತ್ತಮವಾಗಿದೆ ಎಂದು ಹೇಳಿದರೆ ಹಿಂದಿನ ಸ್ವಫ್ ಹರಾಂ ಎಂದು ವಿಧಿಸಬಹುದೇ?

ಹಿಂದಿನ ಸ್ವಫ್ಪಿಗೆ ಪುಣ್ಯವಿಲ್ಲ ಎಂದು ಯಾರಾದರೂ ಹೇಳಿದರೆ ಅದು ಮೂರ್ಖತನವಲ್ಲವೇ?

ಇದಾಗಿದೆ ಸಮಸ್ತ ಮುಸ್ಲಿಯಾರ್'ಗಳ ವಾದ..

ಮನೆಯಲ್ಲಿ ನಮಾಝ್ ಮಾಡುವುದು ಮತ್ತು ಮಸೀದಿಯಲ್ಲಿ ನಮಾಝ್ ಮಾಡುವುದು ಸ್ತ್ರೀಯರಿಗೆ ಅನುಮತಿಸಲಾಗಿದೆ. ಅದರಲ್ಲಿ ಉತ್ತಮ ಮನೆಯಲ್ಲಿ ನಮಾಝ್ ಮಾಡುವುದು ಎಂದಾಗಿದೆ ಇದರಿಂದ ಲಭಿಸುವ ಪಾಠ...



ಆದರೆ ಮನೆಯಲ್ಲಿ ಜುಮುಆ, ಈದ್ ನಮಾಝ್ ನಡೆಯುವುದಿಲ್ಲ.. ಆದರಿಂದ ಮಹಿಳೆಯರು ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮಸೀದಿಗೆ ಹೋಗಬಹುದು..

ಅಲ್ಲಾಹನಿಗಾಗಿ ಮಸೀದಿಯಲ್ಲಿ ನಮಾಝ್ ಮಾಡಿದರೆ ಸಿಗುವ ನೆಮ್ಮದಿ ನಾವು ಅನುಭವಿಸುತ್ತೇವೆ. ಅದರ ಜೊತೆ ಅರ್ಥವಾಗುವ ರೀತಿಯಲ್ಲಿ ಖುತುಬಾ ಕೇಳುತ್ತಿದ್ದೇವೆ. ಪ್ರತಿಯೊಂದು ಜುಮುಆ ಖುತುಬಾದಲ್ಲಿ ಇಸ್ಲಾಮಿನ ಎಲ್ಲಾ ವಿಷಯಗಳ ಬಗ್ಗೆ ಭೋಧನೆ ಲಭಿಸುತ್ತದೆ. ಇದು ಲಭಿಸಿದರೆ ಮನೆಯಲ್ಲಿ ಇಸ್ಲಾಮಿನಲ್ಲಿ ಪ್ರಕಾಶ ಉದಯಿಸಬಹುದು . ಒಂದು ಸ್ತ್ರೀ ದೀನ್ ಕಲಿತರೆ ಶಾಲೆ ತೆರೆದ ಹಾಗೆ ಎಂಬ ಗಾದೆಯ ಮರ್ಮವನ್ನು ಅರಿತ ಮುಸ್ಲಿಯಾರ್'ಗಳು ಅದನ್ನು ತಡೆಯಲು ಶ್ರಮಿಸುತ್ತಾರೆ.

ಸ್ತ್ರೀಯರು ದೀನ್ ಕಲಿತರೆ ಇವರಿಗೆ ದೀನಿನ ಹೆಸರಿನಲ್ಲಿ ಶೋಷಣೆ ಮಾಡಲು ಗಿರಾಕಿ ನಷ್ಟವಾಗಬಹುದೆಂದು ಹೆದರಿದ ಕಾರಣ ಸಲಫಿಗಳ ವಿರುದ್ಧ ನಿರಂತರವಾಗಿ ಎತ್ತಿಕಟ್ಟುತ್ತಿದ್ದಾರೆ.

ಅಲ್ಲಾಹನ ಮಸೀದಿಯನ್ನು ಸ್ತ್ರೀಯರಿಗೆ ನಿಷಿದ್ದಗೊಳಿಸುವ ಉದ್ದೇಶವೇನೆಂದರೆ ಅಲ್ಲಿ ಅನ್ಯ ಪುರುಷರಿದ್ದಾರೆ ಎಂಬ ನೆಪವನ್ನೊಡ್ಡುತ್ತಾರೆ ಪುರೋಹಿತರು..

ನಿಜವಾಗಿಯೂ ಅನ್ಯ ಪುರುಷರೊಂದಿಗೆ ಕಲಬೆರಕೆಯಾಗದೆ ಮಹಿಳೆಯರಿಗೆ ಪ್ರತ್ಯೇಕವಾದ ಸ್ಥಳ ವ್ಯವಸ್ಥೆ ಮಾಡಿಕೊಂಡಾಗಿದೆ ಮಸೀದಿಗೆ ಪ್ರವೇಶವಿರುವುದು.

ಹಾಗಾದರೆ ಇವರು ಮಹಿಳೆಯರನ್ನು ಸೆಳೆಯುತ್ತಿರುವ ದರ್ಗಾಗಳಲ್ಲಿ ??

ಅರ್ಧ ರಾತ್ರಿಯ 'ವಯಳ್'ನಲ್ಲಿ ??

ಸ್ವಲಾತ್' ಮಜ್ಲಿಸ್ ಗಳಲ್ಲಿ ??

ಝಿಕ್ರ್ ಮಜ್ಲಿಸ್ ಗಳಲ್ಲಿ ??

ಮದುವೆ ಸಮಾರಂಭದಲ್ಲಿ ??

ಬಸ್ , ವಾಹನಗಳಲ್ಲಿ??

ಇವುಗಳೆಲ್ಲವೂ ಹಲಾಲ್

ಅಲ್ಲಾಹನ ಮಸೀದಿಗೆ ಹರಾಂ..

ಎಲ್ಲಿಂದ ಅವತೀರ್ಣವಾಯಿತು ಈ ವಹ್ಯ್ ?

ಎಂತಹ ವಿರೋಧಾಭಾಸ!!!!?

 ➖➖➖➖➖➖➖➖
 ಇನ್ನು ಮೇಲೆ ತಿಳಿಸಿದ ಹದೀಸಿನ ಕುರಿತು ಉಲಮಾಗಳ ವೀಕ್ಷಣೆಯೇನು ?

ಇದರ ಬಗ್ಗೆ ಅವಲೋಕಿಸುವ...
-------------------------

حَدَّثَنَا عُثْمَانُ بْنُ أَبِي شَيْبَةَ، حَدَّثَنَا يَزِيدُ بْنُ هَارُونَ، أَخْبَرَنَا الْعَوَّامُ بْنُ حَوْشَبٍ، حَدَّثَنِي حَبِيبُ بْنُ أَبِي ثَابِتٍ، عَنِ ابْنِ عُمَرَ، قَالَ قَالَ رَسُولُ اللَّهِ صلى الله عليه وسلم ‏"‏ لاَ تَمْنَعُوا نِسَاءَكُمُ الْمَسَاجِدَ وَبُيُوتُهُنَّ خَيْرٌ لَهُنَّ ‏"‏ ‏.‏


ಹಬೀಬ್ ಬಿನ್ ಅಬೀ ಸಾಬಿತ್ , ಇಬ್ನ್ ಉಮರ್ (ರ) ರವರಿಂದ ನಿವೇದನೆ  :

ಮುಹಮ್ಮದ್ﷺ ರವರು ಹೇಳಿದರು: ನಿಮ್ಮ ಸ್ತ್ರೀಯರನ್ನು ಅಲ್ಲಾಹನ ಮಸೀದಿಯಿಂದ ತಡೆಯದಿರಿ. ಅವರಿಗೆ ಅವರ ಮನೆಯಾಗಿದೆ ಉತ್ತಮ ”

(ಅಬೂ ದಾವೂದ್)

هذه اللفظة ضعيفة ولم تصح ولم يتلفظ بها النبي
وهي من رواية : حبيب بن أبي ثابت .


ಈ ಹದೀಸಿನ  ಪರಂಪರೆಯು(ಸನದ್) ದುರ್ಬಲವಾಗಿದೆ. ಇದರ ಸರ್ವ ಪರಂಪರೆಯು ಹಬೀಬ್ ಬಿನ್ ಸಾಬಿತ್ ರವರ ಹೆಸರಿನಿಂದಾಗಿದೆ ಉಲ್ಲೇಖವಾಗಿರುವುದು.

ಇದನ್ನು ಉಸೂಲ್ ಅಲ್ ಹದೀಸಿನ ಪ್ರಕಾರ 'ಅನ್ ಅನತ್' ಎಂದು ಹೇಳುತ್ತಾರೆ.

ಹಬೀಬ್ ಬಿನ್ ಸಾಬಿತ್ ಎಂಬ ವ್ಯಕ್ತಿ ಇಬ್ನ್ ಉಮರ್ (ರ)ರವರನ್ನು ನೇರವಾಗಿ ಕಾಣಲಿಲ್ಲ ಹಾಗೂ ಅವರಿಂದ ನೇರವಾಗಿ ಕೇಳಲಿಲ್ಲ..

ತಾನು ಕೇಳದಿರುವುದನ್ನು ಕೇಳಿದ್ದೇನೆ ಎಂದು ಹೇಳುವ ವ್ಯಕ್ತಿಯಾಗಿದ್ದಾರೆ ಹಬೀಬ್ ಬಿನ್ ಸಾಬಿತ್ ಎಂದು ಇಬ್ನ್ ಖುಝೈಮಾ ಮತ್ತು ಇಬ್ನ್ ಹಿಬ್ಬಾನ್ ರಂತಹ ಪ್ರಸಿದ್ಧ ಮುಹದ್ದಿಸ್'ಗಳು ಹೇಳಿದ್ದಾರೆ.


(ತಹ್'ದೀಬ್ 1:185)

ಇಂತಹ ಸ್ವಭಾವವುಳ್ಳವರು ವಿಶ್ವಾಸಕ್ಕೆ ಅರ್ಹರಾದರೂ ಕೂಡ 'ಅನ್' ಎಂಬ ಪ್ರಯೋಗ ಹದೀಸಿನಲ್ಲಿ ಉಲ್ಲೇಖಿಸಿದರೆ ಅದನ್ನು ಸ್ವೀಕರಿಸಬಾರದೆಂದಾಗಿದೆ ಹದೀಸಿನ ನಿಯಮ..
ಆದ್ದರಿಂದ ಈ ಹದೀಸ್ ದುರ್ಬಲವಾದ ಹದೀಸಾಗಿದೆ ಎಂದು ಇಬ್ನ್ ಖುಝೈಮಾ(ರ)ರವರು ತಮ್ಮ ಪ್ರಸಿದ್ಧ ಹದೀಸ್ ಗ್ರಂಥವಾದ ಸ್ವಹೀಹಿನಲ್ಲಿ ಒಂದು ಅಧ್ಯಾಯದಲ್ಲೇ ಘೋಷಿಸಿದ್ದಾರೆ.
 .
ಮಾತ್ರವಲ್ಲದೆ ಸ್ವಹೀಹಾದ ನೂರಕ್ಕಿಂತ ಅಧಿಕ ಹದೀಸ್ ಗಳ ಆಶಯಕ್ಕೆ ವಿರುದ್ದವಾದ ಪುರಾವೆ ಸ್ವೀಕರಿಸಲು ಸಾಧ್ಯವಾಗದ ಶಾದ್(شاذ) ನ ಸಾಲಿನಲ್ಲಿ ಇದನ್ನು ಪರಿಗಣಿಸಲಾಗಿದೆ.

ನೀವು ಸ್ತ್ರೀಯರನ್ನು ಮಸೀದಿಯಿಂದ ತಡೆಯದಿರಿ ಎಂಬ ಹದೀಸನ್ನು ಮಾತ್ರ ವಾಗಿದೆ ಬುಖಾರಿ ಮತ್ತು ಮುಸ್ಲಿಂ ಹದೀಸ್ ವರದಿ ಮಾಡಿರುವುದು.

ನಿಮಗೆ ಮನೆಯಾಗಿದೆ ಉತ್ತಮ ಎಂಬ ಭಾಗವನ್ನು ಬುಖಾರಿ, ಮುಸ್ಲಿಂ ಉಲ್ಲೇಖಿಸಲಿಲ್ಲ.

ಮನೆಯಾಗಿದೆ ಉತ್ತಮ ಎಂದು ಮುಹಮ್ಮದ್ﷺ ರವರಿಂದ ಸ್ವಹಾಬಿಗಳು ಕೇಳಿರುತ್ತಿದ್ದರೆ ಮುಹಾಜಿರ್ ಗಳು ಮತ್ತು ಅನ್ಸಾರ್ ಗಳಾದ ಸ್ವಹಾಬಿ ವನಿತೆಯರು ಉತ್ತಮವಾದ ಕಾರ್ಯವನ್ನು ಬಿಟ್ಟು ಮಸೀದಿಗೆ ಫಜ್ರ್ ನ ವೇಳೆ ನಮಾಝಿಗೆ ಬರುತ್ತಿರಲಿಲ್ಲ.
ಅಳುತ್ತಿದ್ದ ಮಕ್ಕಳೊಂದಿಗೆ ಅವರು ಮಸೀದಿಗೆ ಬರುತ್ತಿರಲಿಲ್ಲ.

ರಾತ್ರಿಯ ಸುಧೀರ್ಘ ನಮಾಝಿನಲ್ಲಿ ದಣಿದಾಗ ನಿಲ್ಲಲು ಹಗ್ಗದ ಆಸರೆಯಿಂದ ನಮಾಝ್ ಮಾಡುವ ಅವಸ್ಥೆ ಝೈನಬಾ (ರ)ರವರಿಗೆ ಬರುತ್ತಿರಲಿಲ್ಲ.

ಮನೆಯಾಗಿದೆ ಉತ್ತಮ ಎಂದು ಅರಿತಿರುತ್ತಿದ್ದರೆ ಮುಹಮ್ಮದ್ﷺ ರವರ ವಫಾತಿನ ಬಳಿಕ ಆಯಿಷಾ(ರ)ರವರು ಮಸೀದಿಯಲ್ಲಿ ಇಅತಿಕಾಫ್ ನಿರ್ವಹಿಸುತ್ತಿರಲಿಲ್ಲ.


ಉಮರ್ (ರ)ರವರ ಜೊತೆ ಪತ್ನಿ ಆತಿಕಾ (ರ)ರವರು ಮಸೀದಿಗೆ ಜಮಾಅತ್ ಗೆ ಬರುತ್ತಿರಲಿಲ್ಲ.

➖➖➖➖➖➖➖➖
ಸ್ತ್ರೀಯರನ್ನು ಮಸೀದಿಯಿಂದ ದೂರಗೊಳಿಸುವ ಇನ್ನೊಂದು ಹದೀಸಾದ ಸ್ತ್ರೀಯರು ಮನೆಯ ಒಳಗೊಳಗೆ ಕೂರಬೇಕು   ಎಂಬ ಉಮ್ಮು ಹುಮೈದ್ ಸ'ಈದಿ (ರ) ರವರ ಹದೀಸಿನ ಬಗ್ಗೆ ಮುಹದ್ದಿಸ್ ಗಳ ಅಭಿಪ್ರಾಯವೇನು?

---------------

ಉಮ್ಮು ಹುಮೈದ್ ಸ'ಈದಿ (ರ)ರವರು ಮುಹಮ್ಮದ್ﷺ ರವರೊಂದಿಗೆ ಹೇಳಿದರು: ನಮಗೆ ನಿಮ್ಮ ಜೊತೆ ನಮಾಝ್ ಮಾಡಲು ಅಭಿಲಾಷೆಯಿದೆ. ಆದರೆ ನಮ್ಮ ಗಂಡಂದಿರರು ನಮ್ಮನ್ನು ತಡೆಯುತ್ತಿದ್ದಾರೆ.
  ಆಗ ಮುಹಮ್ಮದ್ﷺ ರವರು ಹೇಳಿದರು: ನಿಮ್ಮ ಮನೆಯ ಕೊಠಡಿಯಲ್ಲಿ ನಮಾಝ್ ಮಾಡುವುದಾಗಿದೆ ಮಸೀದಿಯಲ್ಲಿ ನಮಾಝ್ ಮಾಡುವುದಕ್ಕಿಂತ ನಿಮಗೆ ಉತ್ತಮವಾದದ್ದು.
 ”
(ಬೈಹಕಿ)


ಇಲ್ಲಿ ನಾವು ಅರ್ಥ ಮಾಡಬೇಕಾದ ವಿಷಯವೇನೆಂದರೆ, ಉಮ್ಮು ಹುಮೈದಿ (ರ)ರವರು ಕೇಳುವ ಪ್ರಶ್ನೆಯಲ್ಲೇ ಗಂಡ ಮಸೀದಿಗೆ ಜಮಾಅತ್ ನಮಾಝ್ ಮಾಡಲು ತಡೆಯುತ್ತಾರೆ ಎಂದು ಸೂಚಿಸಿದ್ದಾರೆ.ಅದಕ್ಕೆ ಪ್ರತಿಯಾಗಿ ಮುಹಮ್ಮದ್ﷺ ರವರು ಪ್ರತಿಕ್ರಿಯೆ ನೀಡಿದ್ದು.

ಗಂಡಂದಿರರ ಅನುಮತಿಯಿಲ್ಲದೆ ಸುನ್ನತಾದ ಕಾರ್ಯವನ್ನು ಮಾಡಬಾರದೆಂದು ಮುಹಮ್ಮದ್ﷺ ರವರು ಹೇಳಿದ್ದಾರೆ. ಸುನ್ನತ್ ಉಪವಾಸವಾದರೂ ಸರಿ..

ಗಂಡ ಅದಕ್ಕೆ ಅನುಮತಿ ನೀಡದಿದ್ದರೆ ನಿರ್ವಹಿಸಬಾರದು ಎಂದಾಗಿದೆ ಮುಹಮ್ಮದ್ﷺ ರವರು ಕಲಿಸಿರುವುದು.

ಅದೇ ರೀತಿ ಹೆಂಡತಿಯರು ಮಸೀದಿಗೆ ಹೋಗಲು ಅನುಮತಿ ಕೇಳಿದರೆ ಅವರನದನು ತಡೆಯದಿರಿ ಎಂದೂ ಮುಹಮ್ಮದ್ﷺ ರವರು ಆಜ್ಞಾಪಿಸಿದ್ದಾರೆ.

ಕೆಲವು ಗಂಡಂದಿರರಿಗೆ ಹೆಂಡತಿಯರು ಮನೆಯಿಂದ ಹೊರಗೆ ಹೋಗುವುದು ಇಷ್ಟವಿರಲಿಕಿಲ್ಲ.

ಆ ಕಾರಣದಿಂದ ಅವರು ಪರಸ್ಪರ ಜಗಳವಾಡದಿರಲಿ ಎಂಬ ಕಾರಣದಿಂದಾಗಿದೆ ಮುಹಮ್ಮದ್ﷺ ರವರು ಮನೆಯ ಒಳಗೆ ನಮಾಝ್ ಮಾಡುವುದು ಉತ್ತಮ ವೆಂದು ಹೇಳುವ ಉದ್ದೇಶ.

ಆದರೂ ಸ್ವಹಾಬಿಗಳು ಅವರ ಪತ್ನಿಯರನ್ನು ಮುಹಮ್ಮದ್ﷺ ರವರ ಆಜ್ಞೆ ಯಾದ " ನಿಮ್ಮ ಹೆಂಗಸರನ್ನು ಅಲ್ಲಾಹನ ಮಸೀಯಿಂದ ತಡೆಯದಿರಿ "ಎಂಬ ಮಾತನ್ನು ಮೀರದೆ ತಮಗೆ ಇಷ್ಟವಿಲ್ಲದಿದ್ದರೂ ಅವರು ಹೆಂಡತಿಯರನ್ನು ಕಳುಹಿಸುತ್ತಿದ್ದರು.

ಅದಾಗಿದೆ ಉಮರ್ (ರ) ರವರು ಸ್ವೀಕರಿಸಿದ ಮಾರ್ಗ.
ಅದಾಗಿದೆ ಮುತ್ತಬಿಉ ಸುನ್ನಃ ಅಬ್ದಲ್ಲಾಹ್ ಬಿನ್ ಉಮರ್ (ರ)ರವರು ಸ್ವೀಕರಿಸಿದ ಮಾರ್ಗ.

 ಅದೇ ಆಗಿದೆ ಶಾಫಿಈ ಮಝ್'ಹಬ್ ರವರ ಮಾರ್ಗ


ಆದರೂ ಈ ಹದೀಸ್ ಇದು ದುರ್ಬಲವಾಗಿದೆ . ಈ ಹದೀಸಿನ ಪರಂಪರೆಯಲ್ಲಿರುವ ಅಬ್ದುಲ್ ಹುಮೈದ್ ಬಿನ್ ಮುಂದಿರ್ ಎಂಬವರು ಅಪರಚಿತರಾಗಿದ್ದಾರೆ.

ನಿವೇದನೆ ಮಾಡುವವರ (ರಾವಿಗಳ) ಬಗ್ಗೆ ವಿವರಿಸುವ ಯಾವ ಗ್ರಂಥದಲ್ಲೂ ಈ ವ್ಯಕ್ತಿಯ ಕುರಿತು ಪರಾಮರ್ಶೆಯಿಲ್ಲ.


 ಇಬ್ನ್ ಹಝಂ (ರ)ರವರು ಅವರ "ಮುಹಲ್ಲ" ದಲ್ಲಿ ಹೇಳಿದ್ದಾರೆ:
 ”( 2175 )

ಈ ಹದೀಸಿನ ಬಗ್ಗೆ ಇನ್ನೊಂದು ಕಡೆಯಲ್ಲೂ ಇಬ್ನ್ ಹಝಂರವರು ಹೇಳಿದ್ದಾರೆ.
(ಮುಹಲ್ಲ: 3115).


ಒಟ್ಟಾರೆಯಾಗಿ ಹೇಳುವುದಾದರೆ ಮುಸ್ಲಿಯಾರ್'ಗಳು ಪುರಾವೆಯಾಗಿ ತೋರಿಸುವ ಅವರಿಗೆ ಪ್ರಸಿದ್ದವಾದ ಹದೀಸಾಗಿದೆ ಮೇಲೆ ಸೂಚಿಸಿದ್ದು..

ಅದರ ಅವಸ್ಥೆ ಬಗ್ಗೆ ಇನ್ನೊಮ್ಮೆ ವಿವರಿಸಬೇಕೆಂದಿಲ್ಲ ಎಂದು ಭಾವಿಸುತ್ತೇನೆ..

ಹದೀಸ್ ದುರ್ಬಲವಾಗಿದೆ ಎಂದು ಹೇಳುವಾಗ ಕೆರಳುವ ಮುಸ್ಲಿಯಾರ್'ಗಳಿದ್ದಾರೆ ,ಅವರೊಂದಿಗೆ ವಿನಯಪೂರ್ವಕವಾಗಿ ಹೇಳುವುದೇನೆಂದರೆ  ಮೇಲೆ ಹೆಸರು ಸೂಚಿಸಿದ ಮುಹದ್ದಿಸ್ ಗಳು ವಹ್ಹಾಬಿಗಳೇ?


ಅವರು ಅದನ್ನು ದುರ್ಬಲಗೊಳಿಸಿಲ್ಲ ಎಂದು ಹೇಳುವ ಪುರಾವೆ ಏನಾದರೂ ನಿಮ್ಮ ಬಳಿಯಿದ್ದರೆ ಹಾಜರುಪಡಿಸಿರಿ...

ಸವಾಲಾಗಿ ಸ್ವೀಕರಿಸುತ್ತೇನೆ..

✍ ಇಬ್ನ್ ಅಬ್ದುರ್ರಹ್ಮಾನ್ 

27 Sept 2018

ಉಮರ್ (ರ)ರವರ ಕಾಲದಲ್ಲಿ ಮಳೆಗಾಗಿ ಇಸ್ತಿಗಾಸ ನಡೆಸಿದ ಹದೀಸಿನ ನಿಜಸ್ಥಿತಿ ಏನು?

ಉಮರ್ (ರ)ರವರ ಕಾಲದಲ್ಲಿ ಮಳೆಗಾಗಿ ಇಸ್ತಿಗಾಸ ನಡೆಸಿದ ಹದೀಸಿನ ನಿಜಸ್ಥಿತಿ ಏನು?

ಮರಣ ಹೊಂದಿದ ಅಂಬಿಯಾ ಅವುಲಿಯಾಗಳೊಂದಿಗೆ ಸಹಾಯ ಯಾಚಿಸಬಹುದು ಎಂದು ವಾದಿಸುವ ಪುರೋಹಿತರು ಅವರ ವಾದಕ್ಕೆ  ಪುರಾವೆಯಾಗಿ ತೋರಿಸುವ ಒಂದು ವಾದವಾಗಿದೆ ಉಮರ್ (ರ)ರವರ ಕಾಲದಲ್ಲಿ ಓರ್ವ ಅಜ್ಞಾತ ವ್ಯಕ್ತಿ ಮುಹಮ್ಮದ್ﷺ ರವರ ಕಬರಿನ ಬಳಿ ಬಂದು ಮಳೆಗಾಗಿ ಮುಹಮ್ಮದ್ﷺ ರವರೊಂದಿಗೆ ಬೇಡಿದ ಘಟನೆ...

ಈ ವರದಿಯ ವಾಸ್ತವವೇನೆಂದು ಸತ್ಯಾನ್ವೇಷಿಗಳು ಸವಿವರವಾಗಿ ಅರಿಯುವ ಸಲುವಾಗಿ ಇಲ್ಲಿ ವ್ಯಕ್ತಪಡಿಸಲು ಇಚ್ಛಿಸುತ್ತೇನೆ.

ಸತ್ಯವನ್ನು ಅರಿಯುವ ಒಂದು ಮನಸ್ಸು ಅವರಿಗೆ ನೀಡಿ ಅನುಗ್ರಹಿಸಲಿ .. ಆಮೀನ್

ಇಬ್ನ್ ಹಜರ್ ಅಸ್ಖಲಾನಿ(ರ)ರವರ ಫತ್'ಹುಲ್ ಬಾರಿಯಲ್ಲಾಗಿದೆ ಈ ಘಟನೆ ವರದಿ ಮಾಡಿರುವುದು.

ಅದು ಹೀಗಿದೆ:

وَرَوَى ابْنُ أَبِي شَيْبَةَ بِإِسْنَادٍ صَحِيحٍ مِنْ رِوَايَةِ أَبِي صَالِحٍ السَّمَّانِ عَنْ مَالِكٍ الدَّارِيِّ - وَكَانَ خَازِنُ عُمَرَ - قَالَ : أَصَابَ النَّاسَ قَحْطٌ فِي زَمَنِ عُمَرَ فَجَاءَ رَجُلٌ إِلَى قَبْرِ النَّبِيِّ صَلَّى اللَّهُ عَلَيْهِ وَسَلَّمَ فَقَالَ : يَا رَسُولَ اللَّهِ اسْتَسْقِ لِأُمَّتِكَ فَإِنَّهُمْ قَدْ هَلَكُوا ، فَأَتَى الرَّجُلَ فِي الْمَنَامِ فَقِيلَ لَهُ : ائْتِ عُمَرَ " الْحَدِيثَ . وَقَدْ رَوَى سَيْفٌ فِي الْفُتُوحِ أَنَّ الَّذِي رَأَى الْمَنَامَ الْمَذْكُورَ هُوَ بِلَالُ بْنُ الْحَارِثِ الْمُزَنِيُّ أَحَدُ الصَّحَابَةِ


 :- "ಇಮಾಂ ಇಬ್ನ್ ಅಬೀ ಶೈಬರವರಿಂದ ವರದಿ: ಸ್ವಾಲಿಹ್ ಸಮ್ಮಾನ್ ರಿಂದ ಮಾಲಿಕ್ ದ್ದಾರ್ ರವರೆಗೆ ಇರುವ ಸನದ್ ಸ್ವಹೀಹಾದ ವರದಿ:

 ಅವರು ಹೇಳುತ್ತಾರೆ : ಉಮರ್(ರ) ರವರ ಕಾಲದಲ್ಲಿ ಜಲ ಕ್ಷಾಮದ ಸಂದರ್ಭದಲ್ಲಿ ಓರ್ವ ಅಜ್ಞಾತ ವ್ಯಕ್ತಿ ಬಂದು ಮುಹಮ್ಮದ್ﷺ ರವರ ಕಬರಿನ ಬಳಿ ಬಂದು ಹೀಗೆ ಹೇಳಿದ: ಯಾ ರಸೂಲುಲ್ಲಾಹ್! ಮಳೆಯಿಲ್ಲದೆ ನಿಮ್ಮ ಸಮುದಾಯ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಅವರಿಗಾಗಿ ಮಳೆ ಭರಿಸಲು ಪ್ರಾರ್ಥಿಸಿರಿ ಎಂದು ಹೇಳಿದ ,

  ಮುಹಮ್ಮದ್ﷺ ರವರು ಕನಸಿನಲ್ಲಿ ಬಂದು ಅವರೊಂದಿಗೆ ಹೇಳಿದರು: ನೀನು ಉಮರಿನ ಹತ್ತಿರ ಹೋಗಬೇಕು ಎಂದು..


ಇದನ್ನು ಸೈಫ್ ಎಂಬವರು ತನ್ನ "ಫುತೂಹ್ " ಎಂಬ ಗ್ರಂಥದಲ್ಲಿ
 ಕನಸು ಕಂಡ ವ್ಯಕ್ತಿ  ಸ್ವಹಾಬಿಗಳಲ್ಲಿ ಓರ್ವರಾದ ಬಿಲಾಲ್ ಬಿನ್ ಹಾರಿಸ್ ಮುಝ್ನಿ (ರ)ರವರಾಗಿದ್ದಾರೆ ಎಂದು ಹೇಳಿದ್ದಾರೆ.

 (ಫತ್'ಹುಲ್ ಬಾರಿ‐2:496)


ಮೇಲಿನ ಈ ವರದಿಯ ಬಗ್ಗೆ ಹೇಳುವುದಾದರೆ ಇದು ಪೂರ್ಣವಾಗಿ ಸ್ವಹೀಹಲ್ಲ ಎಂದಾಗಿದೆ.


ಅಬೂ ಸ್ವಾಲಿಹ್ ಸಮ್ಮಾನ್ (ರ)ರವರಿಂದ ಮಾಲಿಕ್ ದ್ದಾರ್ ವರೆಗೆ ಇರುವ ವರದಿ ಮಾತ್ರ ಸ್ವಹೀಹಾಗಿದೆ ಎಂದಾಗಿದೆ ಈ ವರದಿಯಿಂದ ನಮಗೆ ವ್ಯಕ್ತವಾಗುವುದು.

ಹಾಗಾದರೆ ಉಳಿದ ವರದಿಗಾರರು ?

ಈ ಪ್ರಶ್ನೆ ನಮಗೆ ಮೇಲಿನ ಹದೀಸಿನ ವರದಿ ನೋಡುವಾಗ ಉಧ್ಬವಿಸುತ್ತದೆ. ಆದ್ದರಿಂದ ಇದು ಪೂರ್ಣವಾಗಿ ಸ್ವಹೀಹಲ್ಲ..


ಇದಕ್ಕೆ ಕಾರಣವೇನು?


ಈ ಹದೀಸ್ ಪೂರ್ಣವಾಗಿ ಸ್ವಹೀಹಲ್ಲ ಸಲಫಿಗಳ ವತಿಯಿಂದ ಹೇಳುವುದೆಂದು ಭಾವಿಸಬೇಡಿ.

ಈ ಕನಸಿನ ಕಥೆಯಲ್ಲಿ ಅಜ್ಞಾತ ವ್ಯಕ್ತಿಯೊಬ್ಬರು  ಮುಹಮ್ಮದ್ﷺ ರವರ ಕಬರಿನ ಬಳಿ ಬಂದು ಬೇಡಿದರು, ನಂತರ ಅವರು ಕನಸು ಕಾಣುತ್ತಾರೆ.

ಕನಸು ಕಂಡ ವ್ಯಕ್ತಿಯೇ ಹೇಳಬೇಕು ನಾನು ಕನಸು ಕಂಡೆ ಎಂದು. ಇದನ್ನು ವರದಿ ಮಾಡಿದ ಮಾಲಿಕ್ ದ್ದಾರ್ ಘಟನೆಯ ಸಂದರ್ಭದಲ್ಲಿ ಇಲ್ಲ. ಇನ್ನು ಆ ಘಟನೆಯನ್ನು ಮಾಲಿಕ್ ದ್ದಾರ್ ರವರಿಗೆ ತಲುಪಿಸಿದ ವ್ಯಕ್ತಿ ಅಜ್ಞಾತರಾಗಿದ್ದಾರೆ. (ಅಸ್ಪಷ್ಟವಾಗಿದೆ).

ಮಾಲಿಕ್ ದ್ದಾರ್ ರವರು ಉಲ್ಲೇಖಿಸುವ ವರದಿಯಲ್ಲಿ ಅದು ಅವರು ಕಂಡದ್ದು ಅಥವಾ ಕೇಳಿದ್ದು ಎಂದು ಹೇಳುವುದಿಲ್ಲ.

ಇನ್ನು ಆ ಘಟನೆ ಸತ್ಯವೆಂದು ನಂಬಿದರೂ ಕೂಡ ಆ ಕನಸು ಕಂಡ ವ್ಯಕ್ತಿ ಅಜ್ಞಾತರಾಗಿದ್ದಾರೆ. ಇದು ಸ್ಪಷ್ಟವಾಗಿದೆ.

ಆ ಕಾರಣದಿಂದ ಅದರ ಸನದ್ ಮುರಿದು ಬಿದ್ದಿದೆ.

ಆ ಕಾರಣದಿಂದ ಆಗಿರಬಹುದು ವರದಿ ಮಾಡುವಾಗ

" ( بِإِسْنَادٍ صَحِيحٍ مِنْ رِوَايَةِ أَبِي صَالِحٍ السَّمَّانِ )  .


ಅಬೀ ಸ್ವಾಲಿಹ್ ಸಮ್ಮಾನ್ ರವರೆಗೆ ಇರುವ ಸನದ್ ಸ್ವಹೀಹ್ ಎಂದು ಹೇಳಿದ್ದು.

(note the point )



ಆದರೆ ಉಸೂಲುಲ್ ಹದೀಸಿನ ಪ್ರಕಾರ ಇಂತಹ ಪದ ಪ್ರಯೋಗ ಬಂದರೆ ಅದರ ಉದ್ದೇಶದ ಬಗ್ಗೆ ಗೊತ್ತಿಲ್ಲದೆಯೋ ? ಅಥವಾ ಗೊತ್ತಿದೆಯೋ ಅಥವಾ ಜನರನ್ನು ವಂಚಿಸುವ ಸಲುವಾಗಿಯೋ ಈ ಹದೀಸಿನ ಬಗ್ಗೆ ಪುರೋಹಿತರು (ಮುಸ್ಲಿಯಾರ್'ಗಳು) ಜನರೆಡೆಯಲ್ಲಿ ತಪ್ಪು ಕಲ್ಪನೆಯಲ್ಲಿ ಸಿಲುಕಿಸುತ್ತಿದ್ದಾರೆ.  (الله اعلم)  

ನಮ್ಮ ಉಸ್ತಾದರಿಗೆ ಬಹುಶಃ ಮಾಲ ,ಮೌಲಿದ್ ,ಕುತ್ತು ರಾತೀಬ್, ಕುತುಬಿಯ್ಯತ್ ಇದರ ಹಿಂದೆ ಬಿದ್ದಿರುವುದರಿಂದ ಉಸೂಲ್ ಅಲ್ ಹದೀಸ್ ಕಲಿಯಲು ಸಮಯ ಸಿಕ್ಕಿರಲಿಕ್ಕಿಲ್ಲ ಎಂದು ಅನಿಸುತ್ತದೆ.

ಏನಿದ್ದರೂ  “ಇಸ್ನಾದಿನ್ ಸ್ವಹೀಹಿನ್ ” ಎಂದು ಹೇಳಿದರೆ ಅದರ ಉದ್ದೇಶವನ್ನು ಕೂಡ ಉದೇ ಹಜರ್ ಅಸ್ಖಲಾನಿ (ರ)ರವರು ವಿವರಿಸುತ್ತಾರೆ.

 

قلت: لا نسلم أنَّ عدم العلّة هو الأصل إذ لو كان هو الأصل ما اشترط عدمه في شرط الصحيح فإذا كان قولهم: صحيح الإسناد يحتمل أن يكون مع وجود العلّة لم يتحقق عدم العلّة فكيف يحكم له بالصحة.

( النكت علي ابن الصلاح - 1 / 474 )

ಒಬ್ಬರು ವರದಿ ಮಾಡಿದ ಹದೀಸಿನಲ್ಲಿ " ಇಸ್ನಾದಿನ್ ಸ್ವಹೀಹ್ " ಎಂದು ಹೇಳಿದ ಬಳಿಕ ಅದರಲ್ಲಿ ನೂನ್ಯತೆ ಇದೆ ಎಂದು ಹೇಳದಿದ್ದರೆ ಅದು ಸ್ವಹೀಹಾಗಿದೆ ಎಂದು ಇಬ್ನ್ ಸಲಾಂ ಹೇಳಿದನ್ನು ನಾನು ಅಂಗೀಕರಿಸುವುದಿಲ್ಲ.

ಇಲ್ಲತ್ (ನೂನ್ಯತೆ) ಅಲ್ಲಿ ಹೇಳದಿರುವುದು ಅದರ ಮೂಲಭೂತ ವಾದ ವಾಗಿರುತ್ತಿದ್ದರೆ  ಸ್ವಹೀಹಿನ ಷರತ್ತಿನಲ್ಲಿ ಇಲ್ಲತ್ ಹೇಳದಿರುವುದು ಅಥವಾ ಬರೆಯದಿರುವುದು ಅದರ ಷರತ್ತಾಗಿ ಉಲಮಾಗಳು ದಾಖಲಿಸಲ್ಪಡುತ್ತಿದ್ದರು.

ಹಾಗಾದರೆ ಎಲ್ಲಾ ‌ಮುಹದ್ದಿಸ್'ಗಳ ಅಭಿಪ್ರಾಯಕ್ಕೆ ಅನುಸಾರವಾಗಿ ಸ್ವಹೀಹುಲ್ ಇಸ್ನಾದ್ ಎಂದು ಮಾತ್ರ ಹೇಳಿದರೂ ಇಲ್ಲತ್ (ನೂನ್ಯತೆ) ಅಲ್ಲಿ ಇರಬಹುದು (ಅಲ್ಲೆಗೆಳೆಯುವಂತಿಲ್ಲ) ಎಂದಾಗಿದೆ ಇದರಿಂದ ವ್ಯಕ್ತವಾಗುವುದು.

ಅದಲ್ಲದೆ ಅಲ್ಲಿ ಇಸ್ನಾದಿನ್ ಸ್ವಹೀಹ್ ಎಂದು ವರದಿಯಾದ ಕೂಡಲೇ ಅಲ್ಲಿ ಇಲ್ಲತ್ ಇಲ್ಲ ಎಂದು ತೀರ್ಮಾನಿಸುವುದು ಸರಿಯಲ್ಲ ಎಂದಾಗಿದೆ ಮಹಾನರಾದ ಹಾಫಿಳ್ ಇಬ್ನ್ ಹಜರ್ ಅಸ್ಖಲಾನಿ (ರ)ರವರ ವಾದ:


     ಹಾಗಾದರೆ ಅದು ಸ್ವಹೀಹಾಗಿದೆ ಎಂದು ನಾವು ಅರ್ಥ ಮಾಡುವುದು ಹೇಗೆ?



ಇಬ್ನ್ ಹಜರ್ ಅಸ್ಖಲಾನಿ ವಿವರಿಸುತ್ತಾರೆ:

 (ಮುಸ್ಲಿಯಾರ್'ಗಳಿಗೆ )

ಒಂದು ಹದೀಸ್ ಸ್ವಹೀಹಾಗಬೇಕಾದರೆ  ಕೆಳಗೆ ವಿವರಿಸುವ ಐದು  ನಿಬಂಧನೆಗಳನ್ನು ಪಾಲಿಸಬೇಕು.

 1. (اتصال السند )

 ನಿವೇದನೆ ಮಾಡಿದವರ ಪರಂಪರೆ ಆದಿಯಿಂದ ಅಂತಿಮವರೆಗೆ ಬೇರ್ಪಡದ ಒತ್ತು ಸೇರಿರಬೇಕು. ನಡುವಿನಲ್ಲಿ ಯಾರೂ ಬಿಟ್ಟು ಹೋಗಬಾರದು.


2. ( عدالة الراوي )

ಹದೀಸ್ ನಿವೇದನೆ ಮಾಡುವ ಪರಂಪರೆಯಲ್ಲಿರುವವರು ಎಲ್ಲರೂ ನೀತಿವಂತರಾಗಿರಬೇಕು.


3. ( تمام الضبط )  :-

ವರದಿಗಾರರಿಗೆ ತಪ್ಪು ಸಂಭವಿಸದ ಹಾಗೆ ಒಳ್ಳೆಯ ನೆನಪಿನ ಶಕ್ತಿ ಇರುವವರಾಗಿರಬೇಕು.


4. (شاذ )  :-
 ವರದಿಗಾರರಲ್ಲಿ ಅವರಿಗಿಂತ ಪ್ರಾಮಾಣಿಕರೂ ಪರಿಣಿತರೂ ಆದವರಿಗೆ ಎದುರಾಗದ ರೀತಿಯಲ್ಲಿರಬೇಕು.


5. (علة)

ಹದೀಸನ್ನು ಸ್ವೀಕರಿಸುವ ವಿಷಯದಲ್ಲಿ ಅದಕ್ಕೆ ಅಡ್ಡಿಪಡಿಸುವ ನೂನ್ಯತೆ ಗಳು ಇಲ್ಲದಾಗಿರಬೇಕು.





ಇನ್ನು ಆ ವರದಿಯಲ್ಲಿ ಮಾಲಿಕ್ ದ್ದಾರ್ ಎಂಬ ವರದಿಗಾರನ ಕುರಿತು ಉಲಮಾಗಳು ಹೇಳಿದ್ದೇನು ?

ಬನ್ನಿ ಪರಿಶೀಲಿಸುವ.

ಪ್ರಸಿದ್ಧ ಮುಹದ್ದಿಸ್ ಗಳಾದ ಇಮಾಂ ಮುಂದಿರ್ ಹಾಗೂ ಇಮಾಂ ಹೈಸಮಿ ಯವರು ಮಾಲಿಕ್ ದ್ದಾರ್ ಮಜ್'ಹೂಲಾಗಿದ್ದಾರೆ ಎಂದು ಹೇಳಿದ್ದಾರೆ.


قال الهيثمي في المجمع (3/125) والمنذري في الترغيب (2/41) ومالك الدار لا أعرفه


ಹದೀಸಿನ ಉಸೂಲ್ ಪ್ರಕಾರ ಮಜ್'ಹೂಲ್ ಆದ ಒಬ್ಬರ ವರದಿಗಳು ಸ್ವೀಕಾರ್ಹವಲ್ಲ.

ಉಮರ್ (ರ)ರವರ ಖಜಾನೆಯನ್ನು ರಕ್ಷಣೆ ಮಾಡುತ್ತಿದ್ದ ಮಾಲಿಕ್ ದ್ದಾರ್ ಹೇಗೆ ಮಜ್'ಹೂಲ್ ಆದರು ಎಂದು ಹದೀಸಿನ ಉಸೂಲ್ ಗೊತ್ತಿಲ್ಲದ ಕೆಲವು ಮುಸ್ಲಿಯಾರ್'ಗಳು ಕೇಳುತ್ತಾರೆ.

ಅದರಿಂದಲೇ ಗೊತ್ತಾಗುತ್ತದೆ ಇಸ್ಲಾಮಿನ ಬಗ್ಗೆ ಇರುವ ಅವರ ಜ್ಞಾನ..

ಹದೀಸಿನ ಉಸೂಲ್ ಕೇರಳದ ಸಲಫಿ ಮೌಲವಿಗಳು ಮಾಡಿದ ವ್ಯವಸ್ಥೆಯಲ್ಲ ಎಂದು ನೆನಪಿರಲಿ..

ಅದರ ಬದಲು ಪ್ರಸಿದ್ಧ ಅಹ್ಲ್ ಸುನ್ನಃದ ಉಲಮಾಗಳು ಮಾಡಿದ ಒಂದು ವ್ಯವಸ್ಥೆ ಯಾಗಿದೆ. ಒಂದು ಹದೀಸ್ ಸ್ವೀಕಾರ್ಹವಾಗಲು ರಾವಿಗಳಿಗೆ(ವರದಿಗಾರರು) ಕೆಲವು ಪ್ರಾಮಾಣಿಕವಾದ ನಿಬಂಧನೆಗಳನ್ನು ಇಟ್ಟಿದ್ದಾರೆ..

ಆ ನಿಬಂಧನೆಗಳನ್ನು ಪಾಲಿಸದಿದ್ದರೆ ಎಂದಿಗೂ ಆ ಹದೀಸ್ ಗಳು ಸ್ವೀಕೃತವಾಗುವುದಿಲ್ಲ.


ಜಲಕ್ಷಾಮ ಉಂಟಾದಾಗ ಮುಹಮ್ಮದ್ﷺ ರವರ ಕಬರಿನ ಬಳಿ ಯಾರೋ ಒಬ್ಬ ಅಪರಿಚಿತ ವ್ಯಕ್ತಿ  ಬಂದು   ಸಹಾಯ ಯಾಚಿಸಿದರು ಎಂಬ ಘಟನೆ ಅಹ್ಲ್ ಸುನ್ನಃ ದ ಯಾವ ಉಲಮಾಗಳೂ ಸಹ ಇದು ಮರಣ ಹೊಂದಿದ ಅಂಬಿಯಾ ಅವುಲಿಯಾಗಳೊಂದಿಗೆ ಸಹಾಯ ಯಾಚಿಸಲು ಪುರಾವೆ ಎಂದೋ, ಇದರ ಸನದ್ ಸ್ವಹೀಹ್ ಎಂದೋ ‌ಎಲ್ಲೂ ಹೇಳಲಿಲ್ಲ ಎಂದು ಕಳೆದ ಸಂಚಿಕೆಯಲ್ಲಿ ಬರೆದ ಬರಹದಲ್ಲಿ ಸ್ಪಷ್ಟವಾಗಿದೆ..

 ಈ ಹದೀಸಿನಲ್ಲಿ ಮುಸ್ಲಿಯಾರ್'ಗಳು ಇನ್ನೊಂದು ಕುಕೃತ್ಯವನ್ನು ಮಾಡಿದ್ದಾರೆ.

ಅದೇನೆಂದರೆ ಮುಹಮ್ಮದ್ﷺ ರವರ ಕಬರಿನ ಬಳಿ ಬಂದ ವ್ಯಕ್ತಿ  ಓರ್ವ ಸ್ವಹಾಬಿಯವರಾಗಿದ್ದಾರೆ ಎಂದೂ ಅವರ ಹೆಸರು ಬಿಲಾಲ್ ಬಿನ್ ಹಾರಿಸ್ ಮುಝ್ನಿ (ರ)ರವರೆಂದೂ ಹಸಿ ಸುಳ್ಳು ಮಹಾನರಾದ ಸ್ವಹಾಬಿಗಳ ಮೇಲೆ ಆರೋಪ ಹೊರಿಸುತ್ತಾರೆ..


ಇದರ ಬಗ್ಗೆ ಫತಹುಲ್ ಬಾರಿಯಲ್ಲಿರುವುದೇನು ಎಂದು ಪರಿಶೀಲಿಸುವ...

ಫತಹುಲ್ ಬಾರಿಯಲ್ಲಿ ಈ ಕಥೆಯ ಕೊನೆಯ ಭಾಗದಲ್ಲಿ ಹೀಗೆ ಇದೆ:

وَقَدْ رَوَى سَيْفٌ فِي الْفُتُوحِ أَنَّ الَّذِي رَأَى الْمَنَامَ الْمَذْكُورَ هُوَ بِلَالُ بْنُ الْحَارِثِ الْمُزَنِيُّ أَحَدُ الصَّحَابَةِ


 "ಈ ಕನಸು ಕಂಡ ವ್ಯಕ್ತಿ ಸ್ವಹಾಬಿಗಳಲ್ಲೋರ್ವರಾದ  ಬಿಲಾಲ್ ಬಿನ್ ಹಾರಿಸ್ ಮುಝ್ನಿ (ರ)ರವರಾಗಿದ್ದಾರೆ ಎಂದು "ಫುತೂಹ್ " ಎಂಬ ಗ್ರಂಥದಲ್ಲಿ ಸೈಫ್ ರವರು ಉಲ್ಲೇಖಿಸಿದ್ದಾರೆ.

(ಫತ್ ಹುಲ್ ಬಾರಿ‐2:496)


ಮೇಲೆ ತಿಳಿಸಿದ ಈ ಸೈಫ್ ಯಾರು ?

ಸೈಫ್ ಹೇಳುವುದು ಇಸ್ಲಾಮಿ ಲೋಕದಲ್ಲಿ ಸ್ವೀಕಾರ್ಹವೇ?


ಇಮಾಂ ಝಹಬಿ (ರ)ರವರು ಅವರ ಗ್ರಂಥವಾದ
 (  ميزان الاعتدال )
ಎಂಬ ಗ್ರಂಥದಲ್ಲಿ ವಿವರಿಸಿರುವುದು ನೋಡಿ :


قال الحافظ الذهبي، في ميزان الاعتدال /3ـ353/ في ترجمة سيف بن عمر: إن يحيى بن معين، قال فيه: فِلسٌ خيرٌ منه، وقال أبو داود: ليس بشيء، وقال أبو حاتم: متروك، وقال ابن حبان: اتهم بالزندقة، وقال ابن عدي: عامة حديثه منكر، وقال مكحول البيروتي: كان سيف يضع الحديث، وقد اتهم بالزندقة.


ಇಮಾಂ ಇಬ್ನ್ ಜೌಝಿ(ರ) :


وقال ابن الجوزي في كتابه، الضعفاء والمتروكين /2ـ35/ رقم: 1594: سيف بن عمر الضبي، قال

يحيى بن معين: ضعيف الحديث، فِلسٌ خير منه، وقال أبو حاتم الرازي: متروك الحديث،

وقال النسائي والدارقطني: ضعيف، وقال ابن حبان: يروي الموضوعات عن الأثبات، وقال

إنه يضع الحديث. اهـ


ಮೇಲೆ ತಿಳಿಸಿದ ಉಲಮಾಗಳ ಹೆಸರು ಕೇಳುವಾಗ ಕೆಲವು ಮುಸ್ಲಿಯಾರ್'ಗಳು ಹೇಳುವುದು ಇವರು ವಹ್ಹಾಬಿ ಉಲಮಾಗಳಾಗಿದ್ದಾರೆ ಎಂದು..

ಹಾಗಾದರೆ ಈ ಕೆಳಗೆ ಹೇಳುವ ಉಲಮಾಗಳನ್ನು ನೀವು ನಿಷೇಧಿಸುತ್ತೀರಾ?

ضعيف الحديث، فِلسٌ خير منه

"ಇಮಾಂ ಯಹ್ಯಾ ಇಬ್ನ್ ಮ'ಈನ್ (ರ) ಹೇಳುತ್ತಾರೆ: ಸೈಫ್ ದುರ್ಬಲನಾಗಿದ್ದಾನೆ .ಒಂದು ನಯಾ ಪೈಸೆಯಾಗಿದೆ .ಇವನಿಗಿಂತಲೂ ಬೆಲೆಯಿರುವ ವಸ್ತು..

(ನಮ್ಮ ಊರಿನ ಭಾಷೆಯಲ್ಲಿ ಹೇಳುವುದಾದರೆ ಐದು ಪೈಸೆ ಬೆಲೆಯಿಲ್ಲದವ)


و قال أبو داود : ليس بشىء

ಇಮಾಂ ಅಬೂ ದಾವೂದ್: ಒಂದು ವಸ್ತುವಿಗೂ ಅರ್ಹನಲ್ಲದ ವ್ಯಕ್ತಿ.


و قال أبو حاتم : متروك الحديث

ಇಮಾಂ ಅಬೂ ಹಾತಿಂ: ಸೈಫ್ ಯಾವುದಕ್ಕೂ ಪ್ರಯೋಜನ ಇಲ್ಲದವ.

قال ابن حبان: اتهم بالزندقة

ಇಮಾಂ ಇಬ್ನ್ ಹಿಬ್ಬಾನ್ (ರ):ಸೈಫನ್ನು ಧರ್ಮ ನಿಷೇಧಿ ಎಂದು ಸಂಶಯಪಡಬೇಕಾದ ವ್ಯಕ್ತಿ.



قال ابن عدي: عامة حديثه منكر

ಇಮಾಂ ಇಬ್ನ್ ಆದಿಯ್ಯ್ (ರ): ಸೈಫಿನ ಹದೀಸ್ ಗಳು ಒಟ್ಟಿನಲ್ಲಿ ಆಕ್ಷೇಪಾರ್ಹವಾಗಿದೆ.

وقال النسائي والدارقطني: ضعيف

ಇಮಾಂ ನಸಾಈ ಹಾಗೂ ದಾರು ಕುತ್ನೀ  ಒಟ್ಟಾಗಿ ಹೇಳಿದರು: ದುರ್ಬಲನಾಗಿದ್ದಾನೆ.


وقال مكحول البيروتي: كان سيف يضع الحديث، وقد اتهم بالزندقة.

ಇಮಾಂ ಮಕ್'ಹೂಲ್ (ರ) : ಸೈಫ್ ,ಹದೀಸ್ ಗಳನ್ನು ಕೃತಕವಾಗಿ ಸೃಷ್ಟಿಸುವವನಾಗಿದ್ದಾನೆ. ಜೊತೆಗೆ ಧರ್ಮ ನಿಷೇಧಿಯೆಂದು ಸಂಶಯ ಕ್ಕೊಳಪಟ್ಟವನಾಗಿದ್ದಾನೆ.


ಓ ಮುಸ್ಲಿಯಾರ್'ಗಳೇ,

ಇನ್ನು ನೀವೇ ಹೇಳಿ ಈ ಹದೀಸ್ ಹಾಗೂ ಕನಸಿನ ಕಥೆ ಪುರಾವೆಗೆ ಯೋಗ್ಯವೇ ಎಂದು..

ಆಗ ಸೈಫನ್ನು ಬಚಾವು ಮಾಡಲು ಮುಸ್ಲಿಯಾರ್'ಗಳು ಕೆಲವು ನೆಪವನ್ನೊಡ್ಡುತ್ತಾರೆ.

 ಅದೇನೆಂದರೆ

ಸೈಫ್ ಚರಿತ್ರೆಯಲ್ಲಿ ವಿಶ್ವಾಸಾರ್ಹ ನಾಗಿದ್ದಾನೆ ಎಂದು..

ಅಹ್ಲ್ ಸುನ್ನಃ ವಲ್ ಜಮಾಅತ್ ನ ಪ್ರಸಿದ್ಧ ಉಲಮಾಗಳು ಹೇಳಿದ್ದು

ನಯಾ ಪೈಸೆಗೆ ಯೋಗ್ಯವಿಲ್ಲ, ಅವನು ಕಾಪಟ್ಯನು, ಅವನು ಧರ್ಮ ನಿಷೇಧಿಯೆಂದು ಸಂಶಯ ಪಡಬೇಕು, ಕೃತಕ ಹದೀಸ್ ಉಂಟು ಮಾಡುವವ... ಇಷ್ಟೆಲ್ಲಾ ಹೇಳಿದ ಮೇಲೂ ಆಲಿಂಗಳ ಮಾತಿನಲ್ಲಿ ಭರವಸೆಯಿಲ್ಲದ ಮುಸ್ಲಿಯಾರ್ ಪಡೆಗಳು ಯಾವ ಸುನ್ನತ್ ಜಮಾಅತನ್ನು ಇಲ್ಲಿ ಪೋಷಿಸುತ್ತಾರೆ??


✍ ಇಬ್ನ್ ಅಬ್ದುರ್ರಹ್ಮಾನ್.


12 Sept 2018

ತಾಯತ ಅಥವಾ ಉರ್ಕು.


ತಾಯತ ಅಥವಾ ಉರ್ಕು...



ಪ್ರವಾದಿ  (ಸಅ) ರು ಹೇಳುತ್ತಾರೆ:

عن عقبة بن عامر الجهني أن رسول الله صلى الله عليه وسلم أقبل إليه رهط فبايع تسعة وأمسك عن واحد فقالوا : يا رسول الله بايعتَ تسعة وتركت هذا ، قال : إن عليه تميمة ، فأدخل يده فقطعها فبايعه وقال : من علق تميمة فقد أشرك .  رواه أحمد ( 16969 ) .
والحديث : صححه الشيخ الألباني في " السلسلة الصحيحة " ( 492 ) .


ಉಕ್'ಬಾ ಇಬ್ನು ಆಮಿರ್ ಜಹನೀ (ರ) ರಿಂದ ವರದಿ : ಪ್ರವಾದಿ (ಸಅ) ರು ಹೇಳಿದರು ಯಾರು ತಾಯತ (ಉರ್ಕು) ಧರಿಸುತ್ತಾನೋ ಅವನು ಶಿರ್ಕ್ (ದೇವ ಸಹಭಾಗಿತ್ವ) ಮಾಡಿದನು.

(ಮುಸನ್ನದ್ ಅಹ್ಮದ್ :16969)

ಶೈಖ್ ಅಲ್ಬಾನಿಯವರು ತನ್ನ ಸಿಲ್'ಸಿಲತ್ ಸಹೀಹ್ (492) ನಲ್ಲಿ ಸ್ವಹೀಹ್ ಎಂದಿದ್ದಾರೆ.

ಜೀವನದಲ್ಲಿ ಏನಾದರೂ ತೊಂದರೆ ಬಂದರೆ ಅಲ್ಲಾಹನ ಮೇಲೆ ಭರವಸೆ ಇಡುವುದು ಒಬ್ಬ ಮುಸ್ಲಿಮನ ಈಮಾನಿನ ಭಾಗವಾಗಿದೆ. ಈ ಭರವಸೆಯನ್ನು ಇಲ್ಲದಾಗಿಸಲು ಶೈತಾನ್ ಪುರೋಹಿತರ ರೂಪದಲ್ಲಿ ಕಾರ್ಯಾಚರಿಸುತ್ತಾನೆ. ಅದರಲ್ಲಿ ಸೇರಿದ್ದಾಗಿದೆ ತಾಯತ ಅಥವ ತಾವೀಝ್ (ಉರ್ಕು) ಕಟ್ಟುವುದು ಮತ್ತು ನೂಲು ಕಟ್ಟುವುದು. ಇದು ಅಲ್ಲಾಹನ ಮೇಲಿರುವ ವಿಶ್ವಾಸವನ್ನು ದುರ್ಬಲಗೊಳಿಸುತ್ತದೆ ಮಾತ್ರವಲ್ಲ ಅಲ್ಲಾಹನಿಗೆ ಸಹಭಾಗಿತ್ವ (ಶಿರ್ಕ್) ಮಾಡಲು ಬಹು ಮುಖ್ಯ ಪಾತ್ರ ವಹಿಸುತ್ತದೆ.



ಅಲ್ಲಾಹೇತರರನ್ನು ಅವಲಂಭಿಸಿದ ಮೌಲೀದ್ ಕಿತಾಬ್.

ಅಲ್ಲಾಹೇತರರನ್ನು ಅವಲಂಭಿಸಿದ ಮೌಲೀದ್ ಕಿತಾಬ್.


عبدك المسكين يرجو, فضلك الجم الغفير
فيك قد أحسنت ظني, يا بشير يا نذير
أنت غأفر الخطاي,والذنوب الموبقات

ಅರ್ಥ :
ಪ್ರವಾಜಗರೇ ನಿಮ್ಮ ಸಾಧುವಾದ ಈ ದಾಸನ ಪಾಪಗಳೆಲ್ಲವನ್ನೂ ಕ್ಷಮಿಸಿ ಬಿಡಿ, ನಿಮ್ಮ ಔದಾರ್ಯವನ್ನು ನಾನು ಆಗ್ರಹಿಸುವೆನು, ನಾನು ನಿಮ್ಮಲ್ಲಿ ಶುಭ ಪ್ರತೀಕ್ಷೆ ಇಡುವೆನು, ಸಂತೋಷ ವಾರ್ತೆಯನ್ನೂ, ಮುನ್ನೆಚ್ಚರಿಕೆಯನ್ನೂ ನೀಡುವ ನೀವು ಎಲ್ಲಾ ಪಾಪಗಳನ್ನೂ ಕ್ಷಮಿಸುವವರಾಗಿರುವಿರಿ.


ಆದರೆ ಕುರಾನ್ ಹೇಳುವುದನ್ನು ನೋಡಿ.

قُلْ يَا عِبَادِيَ الَّذِينَ أَسْرَفُوا عَلَىٰ أَنْفُسِهِمْ لَا تَقْنَطُوا مِنْ رَحْمَةِ اللَّهِ ۚ إِنَّ اللَّهَ يَغْفِرُ الذُّنُوبَ جَمِيعًا ۚ إِنَّهُ هُوَ الْغَفُورُ الرَّحِيمُ

ಹೇಳಿರಿ: ‘ಸ್ವತಃ ತಮ್ಮ ಮೇಲೆಯೇ ಅತಿಕ್ರಮ ವೆಸಗಿರುವ ಓ ನನ್ನ ದಾಸರೇ! ಅಲ್ಲಾಹುವಿನ ಕಾರುಣ್ಯದ ಬಗ್ಗೆ ನೀವು ನಿರಾಶರಾಗದಿರಿ. ಖಂಡಿತವಾಗಿಯೂ ಅಲ್ಲಾಹು ಪಾಪಗಳೆಲ್ಲವನ್ನೂ ಕ್ಷಮಿಸುವನು. ಖಂಡಿತ ವಾಗಿಯೂ ಅವನು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು’.


[ಅಝ್ಝುಮರ್ : 53]


"ನಾನು ನಿಮ್ಮ ಸಾಧುವಾದ ದಾಸನಾಗಿದ್ದೇನೆ" ಎಂದು ಮೌಲೀದ್ ಕಿತಾಬ್ ಪ್ರವಾದಿ ﷺ ರೊಂದಿಗೆ  ಹೇಳುತ್ತದೆ. ಆದರೆ ಪ್ರವಾದಿ ﷺ ರು ಹೇಳುತ್ತಾರೆ : ನಾನು ಅಲ್ಲಾಹನ ದಾಸನೂ, ದೂತನೂ ಆಗಿದ್ದೇನೆ. ಈಸಾ ಇಬ್ನು ಮರ್ಯಮರನ್ನು ಕ್ರೈಸ್ತರು ಹೊಗಳಿದಂತೆ ನೀವು ನನ್ನನ್ನು ಹೊಗಳಬೇಡಿ.

ಎಲ್ಲಾ ಪಾಪಗಳನ್ನು ವಿಮೋಚನೆ ಗೊಳಿಸುವವನು ಅಲ್ಲಾಹನಾಗಿದ್ದಾನೆ. ಆದರೆ ಮೌಲೀದ್ ಕಿತಾಬ್ ಅಲ್ಲಾಹೇತರರನ್ನು ಅವಲಂಭಿಸಿದೆ.

ಅಲ್ಲಾಹನೊಂದಿಗೆ ಇತರರನ್ನು  ಸಹಭಾಗಿಯನ್ನಾಗಿ ಮಾಡುವ ಈ ಮೌಲೀದ್ ಕಿತಾಬ್ ನಮಗೆ ಬೇಕೇ?

ಚಿಂತಿಸಿ...

ಇಸ್ತಿಗಾಸದ ಬಗ್ಗೆ ಇಮಾಮ್ ಸುಯೂತಿ (ರ) ರ 'ಅಲ್ ಅಂರು ಬಿಲ್ ಇತ್ತಿಬಾಅ್' ಗ್ರಂಥದಲ್ಲೇನಿದೆ?

ಪ್ರಖ್ಯಾತ ಇಮಾಮರಾದ ಹಾಫಿಳ್ ಜಲಾಲುದ್ದೀನ್ ಸುಯೂತಿ (ರ)ರವರು ತಮ್ಮ ಗ್ರಂಥವಾದ ಅಲ್ ಅಂರ್ ಬಿಲ್ ಇತ್ತಿಬಾಅ್ ಎಂಬ ಗ್ರಂಥದಲ್ಲಿ  ಮುಹಮ್ಮದ್ﷺ ರವರ ಕಬರಿನ ಬಳಿ ಯಾವ ಸ್ವಹಾಬಿಯೂ ಕೂಡ ಇಸ್ತಿಗಾಸ ನಡೆಸಲಿಲ್ಲ ಎಂಬ ಪುರಾವೆಯನ್ನು ಅವರ ಗ್ರಂಥದಿಂದಲೇ ಸಾಬಿತು ಪಡಿಸಿದಾಗ ಇದನ್ನು ಅರಗಿಸಿಕೊಳ್ಳಲಾರದೇ ಮುಸ್ಲಿಯಾರ್'ಗಳು ಅಲ್ಲಾಹೇತರರೊಂದಿಗೆ ಸಹಾಯ ಯಾಚಿಸಲು ಎಂಬ ಹೆಸರಿನ ಮರೆಯಲ್ಲಿ  ದರ್ಗಾ ವ್ಯಾಪಾರಕ್ಕೆ ಧಕ್ಕೆಯಾಗಬಹುದೆಂದು ಹೆದರಿ ಇಮಾಂ ಸುಯೂತಿ ರವರಿಗೆ ಅಂತಹ ಕಿತಾಬೇ ಇಲ್ಲ ಎಂದು ಅವರನ್ನೇ ಸುಳ್ಳಾಗಿಸಿ   ಬಿಟ್ಟರು..

ಆದರೆ ಈ ಮುಸ್ಲಿಯಾರ್ ಪಡೆಗಳು ಎಡವಿ ಬಿದ್ದದ್ದೇ ಅಲ್ಲಿ..
ಹೇಗೆಂದರೆ ಇವರ ಮುಫ್ತಿಯಾಗಿದ್ದ ಯೂಸುಫ್ ಇಸ್ಮಾಯಿಲ್ ನಬ್'ಹಾನಿ ಎಂಬವರು ಹಾಫಿಳ್ ಜಲಾಲುದ್ದೀನ್ ರವರಿಗೆ ಅಲ್ ಅಂರ್ ಬಿಲ್ ಇತ್ತಿಬಾಅ್... ಎಂಬ ಗ್ರಂಥ ಇದೆ ಎಂದು ನಬ್'ಹಾನಿಯವರ ಗ್ರಂಥದಲ್ಲೇ ಉಲ್ಲೇಖಿಸಿದ್ದಾರೆ.

دليل التجار إلى الأخلاق ألاحيار

ಎಂಬ ಗ್ರಂಥದಲ್ಲಿ ಹಾಫಿಳ್ ಜಲಾಲುದ್ದೀನ್ ಸುಯೂತಿ ರವರಿಗೆ ಇಂತಹ ಗ್ರಂಥವಿದೆ ಎಂದು ಸ್ಪಷ್ಟವಾಗಿ ಯೂಸುಫ್ ಇಸ್ಮಾಯಿಲ್ ನಬ್'ಹಾನಿ ಹೇಳಿದ ಮುಸ್ಲಿಯಾರ್ ಗಳು ಇಂಗು ತಿಂದ ಮಂಗರಂತಾಗಿದೆ..

ಇನ್ನು‌ ಆ ಗ್ರಂಥದಲ್ಲಿ ಸುಯೂತಿ ಹೇಳುತ್ತಾರೆ:

وان الصحابة وقد أجدبوا مرات

ಸ್ವಹಾಬಿಗಳಿಗೆ ಹಲವು ಬಾರಿ ಕ್ಷಾಮವನ್ನು  ಎದುರಿಸಿದರು
ودهتهم نواءب

 ಹಲವು ರೀತಿಯ ಸಂಕಷ್ಟಗಳನ್ನು ಎದುರಿಸಿದರು

بعد موته  ﷺ

ಮುಹಮ್ಮದ್ﷺ ರವರ ವಫಾತಿನ ಬಳಿಕ

فهلا جاءوا

ಅವರು(ಸ್ವಹಾಬಿಗಳು) ಯಾರೂ ಕೂಡ ಬರಲಿಲ್ಲ
فاستسقوا

ಮಳೆಯನ್ನು ಕೇಳಲಿಲ್ಲ

أو استغاثوا

ಇಸ್ತಿಗಾಸ (ಸಹಾಯ ಯಾಚನೆ)ಕೇಳಲಿಲ್ಲ

عند قبره

ಮುಹಮ್ಮದ್ﷺ ರವರ ಕಬರಿನ‌ ಬಳಿ


➖➖➖➖➖➖➖
ಮೊದ ಮೊದಲು ಸುಯೂತಿಗೆ ಇಂತಹ ಗ್ರಂಥವೇ ಇಲ್ಲ ಎಂದು ವಾದಿಸುತ್ತಿದ್ದ ಮುಸ್ಲಿಯಾರ್ ಗಳು ನಂತರ ನಬ್'ಹಾನಿಯ ಕಿತಾಬಿನಿಂದ ಕಿತಾಬ್ ಇದೆ ಎಂದು ಸಾಬೀತು ಪಡಿಸಿದಾಗ ರಾಗ ಬದಲಾಯಿಸ ತೊಡಗಿದರು.

ಮೇಲಿನ ಸುಯೂತಿ ಯವರ ಈ ಇಬಾರತನ್ನು ನೋಡಿ ಸಹಿಸಲಾರದೆ ಮುಸ್ಲಿಯಾರ್ ಗಳು ಹೊಸ ಆರೋಪವನ್ನು ಸಲಫಿಗಳ ಮೇಲೆ ಆರೋಪಿಸಿದರು.
ಅದೇನೆಂದರೆ ಮೇಲಿನ ಈ ಭಾಗವು ಪ್ರಖ್ಯಾತ ಇಸ್ಲಾಮಿನ ವಿದ್ವಾಂಸರಾದ ಇಬ್ನ್ ತೈಮಿಯಾ (ರ)ರವರ ಗ್ರಂಥವಾದ ಇಖ್ತಿಳಾವ್ ಸ್ವಿರಾತಲ್ ಮುಸ್ತಕೀಮಿನ ಭಾಗವಾಗಿದೆ. ಅದು ಸಲಫಿಗಳು ಅದರ ಪ್ರತಿಯನ್ನು ಸುಯೂತಿ ಯವರ ಹೆಸರಿನಲ್ಲಿ ತುರುಕಿದ್ದಾರೆ ಎಂದು ರಾಗ ಬದಲಾಯಿಸಿದರು.

ಹೌದು  ಇಬ್ನ್ ತೈಮಿಯಾ ರವರ ಗ್ರಂಥದಿಂದ ಈ ಭಾಗವನ್ನು ಸುಯೂತಿ ಯವರ ಗ್ರಂಥದಲ್ಲಿ ಅಳವಡಿಸಿದ್ದಾರೆ .

ಅಳವಡಿಸಿದ್ದು ಯಾರು?

ಸ್ವತಃ ಹಾಫಿಳ್ ಜಲಾಲುದ್ದೀನ್ ಸುಯೂತಿರವರೇ ಆಗಿದ್ದಾರೆ..

ಇದು ಮಾತ್ರವಲ್ಲ ಇಬ್ನ್ ತೈಮಿಯಾ ರವರ ಗ್ರಂಥದಿಂದ ಹಲವು ವಿಷಯಗಳನ್ನು ಅವರ ಗ್ರಂಥಗಳಲ್ಲಿ ಇನ್ನೂ ಹಲವಾರು ವಿಷಯಗಳನ್ನು ಇಬ್ನ್ ತೈಮಿಯಾ ರವರ ಗ್ರಂಥಗಳ ಆಧಾರದಿಂದ ಸುಯೂತಿ ಬರೆದಿದ್ದಾರೆ...

ಇಬ್ನ್ ತೈಮಿಯಾ ರವರ ಹೆಸರು ಕೇಳುವಾಗಲೇ ಕೋಪ ನೆತ್ತಿಗೇರಿಸುವ ವಿಭಾಗವಾಗಿದ್ದಾರೆ  ಶಿಯಾಗಳು.

ಶಿಯಾಗಳ ವಿರುದ್ಧ ಪುರಾವೆ ಸಮೇತ ಅವರ ಎಲ್ಲಾ ವಿಶ್ವಾಸಗಳನ್ನು ಇಬ್ನ್ ತೈಮಿಯಾ(ರ) ಬುಡ ಸಮೇತ ಕಿತ್ತು ಬಿಸಾಡಿದ್ದಾರೆ..

ಅಂತಹ ವಿದ್ವಾಂಸರ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಶಿಯಾಗಳು ನಿರಂತರವಾಗಿ ಆರೋಪಿಸುತ್ತಾ ಬಂದಿದ್ದಾರೆ..

ಇಬ್ನ್ ತೈಮಿಯಾ ರವರನ್ನು ಹಿಯಾಳಿಸುವ ಇನ್ನೊಂದು ಭಾಗವೆಂದರೆ ಅದು ಸಮಸ್ತ ವಿಭಾಗ:-

ಇವರ ಆದರ್ಶವನ್ನು ಕುರ್'ಆನ್ ಮತ್ತು ಹದೀಸಿನ ಆಧಾರದಲ್ಲಿ ನೆಲಸಮ ಮಾಡಿದ ಕೀರ್ತಿ ಇಬ್ನ್ ತೈಮಿಯಾ ರವರಿಗೆ ಸಲ್ಲುತ್ತದೆ..

ಅವರ ವಾದದ ಮುಂದೆ ‌ನೆಲ ನಿಲ್ಲಲಾರದೇ ಅವರ ಬಗ್ಗೆ ಕೀಳುಮಟ್ಟದ ಮಾತನ್ನಾಡುತ್ತಾರೆ ಸಮಸ್ತ ವಿಭಾಗದವರು...

ಆದರೆ ಸಮಸ್ತ ವಿಭಾಗದವರು ದೊಡ್ಡ ಶೈಖ್ ಎಂದು ಕೊಂಡಾಡುತ್ತಿರುವ ಇದೇ ಜಲಾಲುದ್ದೀನ್ ಸುಯೂತಿ ರವರು ಇಬ್ನ್ ತೈಮಿಯಾ ರವರ ಬಗ್ಗೆ ಏನು ಹೇಳುತ್ತಾರೆ ಎಂದು ನೋಡುವ:

وقال الحافظ جلال الدين السيوطي – رحمه الله - :
ابن تيمية ، الشيخ ، الإمام ، العلامة ، الحافظ ، الناقد ، الفقيه ، المجتهد ، المفسر البارع ، شيخ الإسلام ، علَم الزهاد ، نادرة العصر ، تقي الدين أبو العباس أحمد المفتي شهاب الدين عبد الحليم بن الإمام المجتهد شيخ الإسلام مجد الدين عبد السلام بن عبد الله بن أبي القاسم الحراني .
أحد الأعلام ، ولد في ربيع الأول سنة إحدى وستين وستمائة ، وسمع ابن أبي اليسر ، وابن عبد الدائم ، وعدّة .
وعني بالحديث ، وخرَّج ، وانتقى ، وبرع في الرجال ، وعلل الحديث ، وفقهه ، وفي علوم الإسلام ، وعلم الكلام ، وغير ذلك .
وكان من بحور العلم ، ومن الأذكياء المعدودين ، والزهاد ، والأفراد ، ألَّف ثلاثمائة مجلدة ، وامتحن وأوذي مراراً .
مات في العشرين من ذي القعدة سنة ثمان وعشرين وسبعمائة .
" طبقات الحفاظ " ( ص 516 ، 517 ) .


ಇಬ್ನ್ ತೈಮಿಯಾ ರವರು ಇಸ್ಲಾಮಿನ ಶೈಖ್ ಆಗಿದ್ದಾರೆ, ದೊಡ್ಡ ಅಲ್ಲಾಮಾ ಆಗಿದ್ದಾರೆ, ನಮ್ಮ ಇಮಾಮಾರಾಗಿದ್ದಾರೆ, ಹಾಫಿಳ್ ಆಗಿದ್ದಾರೆ, ಮುಜ್ತಹಿದ್ ಆಗಿದ್ದಾರೆ


ಹೀಗೆ ಹಲವು ಗುಣಗಳನ್ನು ಸುಯೂತಿ ರವರೇ ಕೊಂಡಾಡುತ್ತಿದ್ದಾರೆ...

ಮಾತ್ರವಲ್ಲ ಶಾಫಿಈ ಮಝ್'ಹಬ್ ನ ದೊಡ್ಡ ವಿದ್ವಾಂಸರಾದ ,ಸಮಸ್ತ ಮುಸ್ಲಿಯಾರ್ ಗಳು ಅಂಗೀಕರಿಸುವ ಮುಲ್ಲಾ ಅಲಿಯ್ ಅಲ್ ಖಾರೀ (ರ)ರವರು ಇಬ್ನ್ ತೈಮಿಯಾ ರವರ ಬಗ್ಗೆ ಹೇಳುವುದು:

ಇಬ್ನ್ ತೈಮಿಯಾ ಹಾಗೂ ಇಬ್ನ್ ಖಯ್ಯಿಂ (ರ)ರವರು ಮುಸ್ಲಿಂ ಉಮ್ಮತ್ತಿನ ವಲಿಯ್ಯ್ ಆಗಿದ್ದಾರೆ ...
ಫಿತ್ನಾ ಮಾಡುವವರಿಂದ ಅಲ್ಲಾಹನು ಈ ಮಹಾತ್ಮರು ಗಳನ್ನು ರಕ್ಷಿಸಲಿ ಎಂದು.


ಇಬ್ನ್ ಅಬ್ದುರ್ರಹ್ಮಾನ್.

26 Aug 2018

ಅಸರ್ ನಮಾಝ್ ನಷ್ಟವಾದರೆ...


حَدَّثَنَا هِشَامُ بْنُ عَمَّارٍ، حَدَّثَنَا سُفْيَانُ بْنُ عُيَيْنَةَ، عَنِ الزُّهْرِيِّ، عَنْ سَالِمٍ، عَنِ ابْنِ عُمَرَ، ‏.‏ أَنَّ رَسُولَ اللَّهِ ـ صلى الله عليه وسلم ـ قَالَ ‏ "‏ إِنَّ الَّذِي تَفُوتُهُ صَلاَةُ الْعَصْرِ فَكَأَنَّمَا وُتِرَ أَهْلُهُ وَمَالُهُ ‏"‏ ‏.

ಇಬ್ನು ಉಮರ್ (ರ) ರಿಂದ ವರದಿ : ಅಲ್ಲಾಹನ ಸಂದೇಶವಾಹಕರು (ﷺ) ಹೇಳಿದರು :  "ಯಾರ ಅಸರ್ ನಮಾಝ್ ನಷ್ಟವಾಯಿತೋ, ಅವನಿಗೆ ಅವನ ಕುಟುಂಬ ಮತ್ತು ಸಂಪತ್ತು ನಷ್ಟವಾಯಿತು."

Grade : Sahih

Hadith Classification :Darussalam

Reference  : Sunan Ibn Majah 685

ಆಶುರಾ ದಿನದ ಉಪವಾಸ.

ಆಶುರಾ ದಿನದ ಉಪವಾಸ.

ಪ್ರವಾದಿ (ಸ) ಹೇಳಿದರು: ದುಲ್ ಹಜ್ಜ್ ತಿಂಗಳ ಮೊದಲ ಹತ್ತು ದಿವಸ ಉಪವಾಸ ವೃತ ಮಾಡಿರಿ. ಮತ್ತು ಆಶುರಾ ದಿವಸ ಮತ್ತು ಎಲ್ಲಾ ತಿಂಗಳಲ್ಲಿ ಮೂರು ದಿವಸ, ತಿಂಗಳ ಮೊದಲ ಸೋಮವಾರ ಮತ್ತು ಎರಡು ಗುರುವಾರ.

[ಅಬೂ ದಾವೂದ್ - 2/462]

ಪ್ರವಾದಿ (ಸ) ರು ಹೇಳಿದರು: ಅರಫಾ ದಿನ ಉಪವಾಸ ವೃತ ಕೈಗೊಂಡರೆ 2 ವರ್ಷ ಗಳ ಪಾಪಗಳು ಅಳಿಸಲ್ಪಡುವುದು. ಕಳೆದು ಹೋದ ಒಂದು ವರ್ಷ ಮತ್ತು ಬರಲಿರುವ ಒಂದು ವರ್ಷದ ಪಾಪಗಳು. ಮತ್ತು ಆಶುರಾ ದಿವಸ ಉಪವಾಸ ಕೈಗೊಂಡವನ ಕಳೆದು ಹೋದ ಎಲ್ಲಾ ಪಾಪಗಳು ಅಳಿಸಲ್ಪಡುವುದು.


[ಸಹೀಹ್ ಮುಸ್ಲಿಮ್]

24 Aug 2018

ಹೊಸ ವಸ್ತ್ರ ಧರಿಸುವಾಗ ಪ್ರಾರ್ಥಿಸಬೇಕಾದ ಪ್ರಾರ್ಥನೆ.

ಹೊಸ ವಸ್ತ್ರ ಧರಿಸುವಾಗ ಪ್ರಾರ್ಥಿಸಬೇಕಾದ ಪ್ರಾರ್ಥನೆ.

اَللّهُمَّ لَكَ الْحَمْدُ أَنْتَ كَسَوْتَنِيهِ ، أَسْأَلُكَ مِنْ خَيْرِهِ وَخَيْرِ مَا صُنِعَ لَهُ، وَأَعُوذُ بِكَ مِنْ شَرِّهِ وَشَرِّ مَا صُنِعَ لَهُ : (صححه الألباني في صحيح سنن أبي داود:٤٠٢٠ وفي صحيح الترمذي:١٨٣٨)

ಹೊಸ ವಸ್ತ್ರ ಧರಿಸಿದವನಿಗೋಸ್ಕರ ಪ್ರಾರ್ಥಿಸಬೇಕಾದ ಪ್ರಾರ್ಥನೆ.

تُبْلِي وَيُخْلِفُ اللهُ تَعَالَى : (صححه الألباني في صحيح الترمذي :١٨٣٨)
〰〰〰〰〰〰〰〰〰

23 Aug 2018

ಶಫಾಅತ್

قُلْ لِلَّهِ الشَّفَاعَةُ جَمِيعًا ۖ لَهُ مُلْكُ السَّمَاوَاتِ وَالْأَرْضِ ۖ ثُمَّ إِلَيْهِ تُرْجَعُونَ

ಹೇಳಿರಿ: ‘ಶಿಫಾರಸು ಸಂಪೂರ್ಣವಾಗಿ ಅಲ್ಲಾಹು ವಿಗಿರುವುದಾಗಿದೆ.[936] ಆಕಾಶಗಳ ಮತ್ತು ಭೂಮಿಯ ಆಧಿಪತ್ಯವು ಅವನಿಗಾಗಿದೆ. ತರುವಾಯ ನಿಮ್ಮನ್ನು ಮರಳಿಸಲಾಗುವುದು ಅವನೆಡೆಗೇ ಆಗಿದೆ’.

ಟಿಪ್ಪಣಿಗಳು :
[936] ಯಾರು ಮಾಡುವ ಶಿಫಾರಸನ್ನು ಸ್ವೀಕರಿಸಬೇಕು ಮತ್ತು ಯಾರಿಗಾಗಿ ಮಾಡುವ ಶಿಫಾರಸನ್ನು ಸ್ವೀಕರಿಸಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವಿರುವುದು ಕೇವಲ ಅಲ್ಲಾಹುವಿಗೆ ಮಾತ್ರವಾಗಿದೆ. ಸೃಷ್ಟಿಗಳ ಇಷ್ಟಾನಿಷ್ಟಗಳಿಗೆ ಈ ವಿಷಯದಲ್ಲಿ ಯಾವುದೇ ಪ್ರಭಾವ ಬೀರಲೂ ಸಾಧ್ಯವಿಲ್ಲ.

[ಅಝ್ಝುಮರ್ : 44]

ಅಲ್ಲಾಹೇತರರನ್ನು ಅವಲಂಭಿಸಿದ ಮೌಲೀದ್ ಕಿತಾಬ್. 


عبدك المسكين يرجو, فضلك الجم الغفير
فيك قد أحسنت ظني, يا بشير يا نذير
أنت غأفر الخطاي,والذنوب الموبقات

ಅರ್ಥ :
ಪ್ರವಾಜಗರೇ ನಿಮ್ಮ ಸಾಧುವಾದ ಈ ದಾಸನ ಪಾಪಗಳೆಲ್ಲವನ್ನೂ ಕ್ಷಮಿಸಿ ಬಿಡಿ, ನಿಮ್ಮ ಔದಾರ್ಯವನ್ನು ನಾನು ಆಗ್ರಹಿಸುವೆನು, ನಾನು ನಿಮ್ಮಲ್ಲಿ ಶುಭ ಪ್ರತೀಕ್ಷೆ ಇಡುವೆನು, ಸಂತೋಷ ವಾರ್ತೆಯನ್ನೂ, ಮುನ್ನೆಚ್ಚರಿಕೆಯನ್ನೂ ನೀಡುವ ನೀವು ಎಲ್ಲಾ ಪಾಪಗಳನ್ನೂ ಕ್ಷಮಿಸುವವರಾಗಿರುವಿರಿ.


ಆದರೆ ಕುರಾನ್ ಹೇಳುವುದನ್ನು ನೋಡಿ.

قُلْ يَا عِبَادِيَ الَّذِينَ أَسْرَفُوا عَلَىٰ أَنْفُسِهِمْ لَا تَقْنَطُوا مِنْ رَحْمَةِ اللَّهِ ۚ إِنَّ اللَّهَ يَغْفِرُ الذُّنُوبَ جَمِيعًا ۚ إِنَّهُ هُوَ الْغَفُورُ الرَّحِيمُ

ಹೇಳಿರಿ: ‘ಸ್ವತಃ ತಮ್ಮ ಮೇಲೆಯೇ ಅತಿಕ್ರಮ ವೆಸಗಿರುವ ಓ ನನ್ನ ದಾಸರೇ! ಅಲ್ಲಾಹುವಿನ ಕಾರುಣ್ಯದ ಬಗ್ಗೆ ನೀವು ನಿರಾಶರಾಗದಿರಿ. ಖಂಡಿತವಾಗಿಯೂ ಅಲ್ಲಾಹು ಪಾಪಗಳೆಲ್ಲವನ್ನೂ ಕ್ಷಮಿಸುವನು. ಖಂಡಿತ ವಾಗಿಯೂ ಅವನು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು’.


[ಅಝ್ಝುಮರ್ : 53]


"ನಾನು ನಿಮ್ಮ ಸಾಧುವಾದ ದಾಸನಾಗಿದ್ದೇನೆ" ಎಂದು ಮೌಲೀದ್ ಕಿತಾಬ್ ಪ್ರವಾದಿ ﷺ ರೊಂದಿಗೆ  ಹೇಳುತ್ತದೆ. ಆದರೆ ಪ್ರವಾದಿ ﷺ ರು ಹೇಳುತ್ತಾರೆ : ನಾನು ಅಲ್ಲಾಹನ ದಾಸನೂ, ದೂತನೂ ಆಗಿದ್ದೇನೆ. ಈಸಾ ಇಬ್ನು ಮರ್ಯಮರನ್ನು ಕ್ರೈಸ್ತರು ಹೊಗಳಿದಂತೆ ನೀವು ನನ್ನನ್ನು ಹೊಗಳಬೇಡಿ.

ಎಲ್ಲಾ ಪಾಪಗಳನ್ನು ವಿಮೋಚನೆ ಗೊಳಿಸುವವನು ಅಲ್ಲಾಹನಾಗಿದ್ದಾನೆ. ಆದರೆ ಮೌಲೀದ್ ಕಿತಾಬ್ ಅಲ್ಲಾಹೇತರರನ್ನು ಅವಲಂಭಿಸಿದೆ.

ಅಲ್ಲಾಹನೊಂದಿಗೆ ಇತರರನ್ನು  ಸಹಭಾಗಿಯನ್ನಾಗಿ ಮಾಡುವ ಈ ಮೌಲೀದ್ ಕಿತಾಬ್ ನಮಗೆ ಬೇಕೇ?

ಚಿಂತಿಸಿ...

ಮಕ್ಕಾ ಮುಶ್ರಿಕರು ಕರೆದು ಪ್ರಾರ್ಥಿಸುತ್ತಿದ್ದ ಲಾತ  ಯಾರು?


ಇಬ್ನ್ ಅಬ್ಬಾಸ್ (ರ), ಮುಜಾಹಿದ್  ಮತ್ತು ಅಬೂ ಸಾಲಿಹ್  ಹೇಳುತ್ತಾರೆ:
ಲಾತ ಹಾಜಿಗಳಿಗಾಗಿ ಗೋಧಿ ರುಬ್ಬುವ ಒಬ್ಬ ವ್ಯಕ್ತಿ ಆಗಿದ್ದರು. ಅವರು ಮರಣ ಹೊಂದಿದಾಗ ಜನರು ಅವರ ಗೋರಿಯಲ್ಲಿ  ಜನ ಜಮಾಯಿಸತೊಡಗಿದರು .......(ತಪ್ಸೀರ್ ಅತ್ತಬರೀ 22/523 ಕುರ್ ಆನ್ 53/19ನೇ ಸೂಕ್ತಿಯ ವ್ಯಾಖ್ಯಾನ ದಲ್ಲಿ)

1 May 2018

ಯಾರು ಶೈಖುಲ್ ಇಸ್ಲಾಮ್ ಇಬ್ನ್ ತೈಮೀಯಾ ರಹಿಮಹುಲ್ಲಾಹ್..?

ಯಾರು ಶೈಖುಲ್ ಇಸ್ಲಾಮ್ ಇಬ್ನ್ ತೈಮೀಯಾ ರಹಿಮಹುಲ್ಲಾಹ್..?


ಅಲ್ಲಾಹನು ತನ್ನ ದೀನನ್ನು ಸಂರಕ್ಷಿಸಲು ಕಾಲಕಾಲಕ್ಕೆ ಕೆಲವು ಕುತುಬುಝ್ಝಮಾನ್ ಗಳನ್ನು ಕಳುಹಿಸುತ್ತಾನೆ. ಅಂತಹ ಅನೇಕ ವ್ಯಕ್ತಿತ್ವಗಳನ್ನು ಇತಿಹಾಸದ ಪುಟಗಳಲ್ಲಿ ಕಾಣಬಹುದಾಗಿದೆ. ಅಂತಹ ವ್ಯಕ್ತಿತ್ವಗಳ ಸಾಲಿನಲ್ಲಿ ಶೈಖುಲ್ ಇಸ್ಲಾಮ್ ಇಬ್ನ್ ತೈಮೀಯಾ ರಹಿಮಹುಲ್ಲಾಹ್ ಪ್ರಮುಖರು. ಹಿಜಿರ 661 ರಲ್ಲಿ ಈಗ ಟರ್ಕಿ ದೇಶದಲ್ಲಿರುವ ಹರ್ರಾನ್ ನಲ್ಲಿ ಅಲ್ಲಿಯ ಖಾಝಿ ಹಾಗೂ ಇಮಾಮ್ ಆಗಿದ್ದ ಅಬ್ದುಲ್ ಹಲೀಮ್ ಎಂಬವರ ಮಗನಾಗಿ ಜನಿಸಿದರು. ಇವರ ನಸದ್ ಪ್ರಕಾರ ಪೂರ್ಣ ಹೆಸರು ಅಬುಲ್ ಅಬ್ಬಾಸ್ ಅಹ್ಮದ್ ಇಬ್ನ್ ಅಬ್ದುಲ್ ಹಲೀಮ್ ಇಬ್ನ್ ಅಬ್ದುಸ್ಸಲಾಮ್ ಇಬ್ನ್ ಅಬ್ದುಲ್ಲಾಹ್ ಇಬ್ನ್ ಖಲ್'ರ್ ಇಬ್ನ್ ಮುಹಮ್ಮದ್ ಇಬ್ನ್ ತೈಮೀಯತುಲ್ ಹರ್ರಾನ್ ಎಂದಾಗಿತ್ತು. ಇವರು ಜನಿಸಿದ ಕುಟುಂಬ ವಿದ್ವಾಂಸರ ಕುಟುಂಬವಾಗಿತ್ತು. ಇವರ ತಾತ ಇಮಾಮ್ ಮಜ್ದುದ್ಧೀನ್ ಅಬ್ದುಲ್ ಸಲಾಮ್ ಇಬ್ನ್ ತೈಮೀಯಾ ಓರ್ವ ಪ್ರಗಲ್ಬ ಹಂಬಲೀ ಮದ್ಹಬಿನ ವಿದ್ವಾಂಸರಾಗಿದ್ದರು. ಇವರ ತಾಯಿ ಸಿತ್ತುನಿಅಮ್ ಬಿಂತ್ ಅಬ್ದುಲ್ ರಹ್ಮಾನ್ ಇವರೂ ಕೂಡ ಓರ್ವ ಆಲಿಮಾ ವನಿತೆಯಾಗಿದ್ದರು. ಇಮಾಮ್ ಇಬ್ನ್ ತೈಮೀಯಾ ರವರು ಕಿಶೋರ ಪ್ರಾಯದಲ್ಲೇ ಇಮಾಮ್ ಹುಮೈದಿಯವರ ಮುತ್ತಫಕುನ್ ಅಲೈಹಿ ಹದೀಸ್ ಗಳ "ಅಲ್ ಜಂಹು ಬಯ್ಯಿನ ಸ್ವಹೀಹೈನ್" ಎಂಬ ಗ್ರಂಥವನ್ನು ಕಂಠಪಾಠ ಮಾಡಿದ್ದರು. ಆ ಕಾಲದಲ್ಲಿ ಪ್ರಗಲ್ಬರಾಗಿದ್ದ ಸುಮಾರು 200 ವಿದ್ವಾಂಸರ ಬಳಿ ಇಮಾಮ್ ತೈಮೀಯಾ ರವರು ಧಾರ್ಮಿಕ ಶಿಕ್ಷಣ ಪಡೆದಿದ್ದರು.
"ಫತುಹುಲ್ ಬಾರಿ"ಯ ಕರ್ತೃ ಇಮಾಮ್ ಇಬ್ನ್ ಹಜರ್ ಅಲ್ ಅಸ್ಕಲಾನಿ ಯವರು ತಮ್ಮ "ಅದ್ದುರುರುಲ್ ಕಾಮಿನ" ಎಂಬ ಗ್ರಂಥದಲ್ಲಿ ಹೇಳುತ್ತಾರೆ "ಶೈಖುಲ್ ಇಸ್ಲಾಮರು ಒಂದು ಗ್ರಂಥವನ್ನು ಒಂದು ಬಾರಿ ಪಠಿಸಿದರೆ ಅದರ ಅರ್ಥ ಮತ್ತು ಪದವನ್ನು ತಪ್ಪದೇ ವಿವರಿಸಿಕೊಡುತ್ತಿದ್ದರು."
ಶೈಖುಲ್ ಇಸ್ಲಾಮರು ತಮ್ಮ 17ನೇ ವಯಸ್ಸಿನಲ್ಲಿಯೇ ಫತ್ವ ಕೊಡುತ್ತಿದ್ದರು. ಆ ಕಾಲದ ಶಾಫೀ ಮದ್ ಹಬಿನ ಪ್ರಸಿದ್ಧ ವಿದ್ವಾಂಸರೂ ಇಮಾಮ್ ಇಬ್ನ್ ತೈಮೀಯಾರೊಡನೆ ವಾದ ಪ್ರತಿವಾದವನ್ನೂ ನಡೆಸುತ್ತಿದ್ದ ಇಮಾಮ್ ಸಮ್ಲಕ್ ಹೇಳುತ್ತಾರೆ " ಎಲ್ಲಾ ಶಾಸ್ತ್ರ ದಲ್ಲೂ ಅವರಿಗೆ ಪಾಂಡಿತ್ಯವಿತ್ತು ಕರ್ಮಶಾಸ್ತ್ರಕ್ಕೆ ಸಂಬಂಧಪಟ್ಟ 4 ಮದ್ಹಬ್ ಗಳಲ್ಲಿ ಕೂಡ ಅವರು ಪಾಂಡಿತ್ಯವನ್ನು ಹೊಂದಿದ್ದರು. ಮದ್ಹಬಿಗೆ ಸಂಭಂಧಪಟ್ಟ ಚರ್ಚೆಯಲ್ಲಿ ಭಾಗವಹಿಸುವ ಮದ್ಹಬಿನ ವಿದ್ವಾಂಸರಿಗೆ ತಿಳಿದಿರದಂತಹ ಕೆಲವು ವಿಷಯಗಳನ್ನು ಅವರು ಶೈಖುಲ್ ಇಸ್ಲಾಮ್ ರಿಂದ ಕಲಿಯುತ್ತಿದ್ದರು." ಇನ್ನು ಅವರು ಪ್ರಸಿದ್ಧ ಕುರ್ ಆನ್ ವ್ಯಾಖ್ಯಾನ ಕಾರರೂ ಆಗಿದ್ದರು. ಶೈಖುಲ್ ಇಸ್ಲಾಮ್ ಮರಣ ಹೊಂದಿದಾಗ ಅವರ ಗಾಯಿಬ್ ಆದ ಜನಾಝ ನಮಾಝ್ ಗಾಗಿ ಚೈನಾದಲ್ಲಿ ಕುರ್ಆನ್ ವ್ಯಾಖ್ಯಾನ ಕಾರನ ಜನಾಝ ನಮಾಝ್ ನಿರ್ವಹಿಸಿ ಎಂದು ಕರೆ ನೀಡಲಾಗಿತ್ತು ಎಂಬುದನ್ನು ಯಾತ್ರಿಕರು ಕಂಡಿದ್ದಾರೆ. ಶೈಖುಲ್ ಇಸ್ಲಾಮ್ ರ ಪಾಂಡಿತ್ಯ ಅಷ್ಟು ಸುಪ್ರಸಿದ್ಧವಾಗಿತ್ತು. ಇನ್ನು ಹದೀಸ್ ಬಗ್ಗೆ ಅವರ ಜ್ಞಾನ ಅದ್ಭುತ. ಅವರ ಶಿಷ್ಯರಾದ ಇಮಾಮ್ ಸಂಶುದ್ಧೀನ್ ಝಹಬಿ ಹೇಳುತ್ತಾರೆ, ಶೈಖುಲ್ ಇಸ್ಲಾಮರು ಒಂದು ಹದೀಸ್ ಕಲಿಯಬೇಕಾದರೆ ಅದರ ವರದಿಗಾರರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಿದ್ದರು. ಎಷ್ಟರವರೆಗೆಂದರೆ ಅವರಿಗೆ ತಿಳಿದಿರದ ಹದೀಸೇ ಇಲ್ಲ ಅನ್ನುವಷ್ಟರ ಮಟ್ಟಿಗೆ.
ಶೈಖುಲ್ ಇಸ್ಲಾಮರು ಕುಟುಂಬ ಮೂಲತಃ ಹಂಬಲೀ ಮದ್ಹಬ್ ಗಾರನಾದರೂ, ಕೆಲವು ವಿಷಯಗಳಲ್ಲಿ ಅವರು ಪುರಾವೆಗಳ ಆಧಾರದಲ್ಲಿ ಹಂಬಲೀ ಸಹಿತ ಇತರ ಮದ್ಹಬ್ ಗಳಲ್ಲಿರುವ ನ್ಯೂನ್ಯತೆಗಳನ್ನು ಎತ್ತಿ ತೋರಿಸುತ್ತಿದ್ದರು. ಇದರಿಂದಾಗಿ ಅವರಿಗೆ ಶತ್ರುಗಳು ಹುಟ್ಟಿಕೊಂಡರು. ಕೆಲವು ವಿಷಯಗಳಲ್ಲಿ ಅವರಿಗೆ ಜೈಲು ವಾಸವೂ ಅನುಭವಿಸಬೇಕಾಗಿ ಬಂತು. ಅವರು ಯಾರನ್ನೂ ಅಂಧವಾಗಿ ಅನುಸರಿಸುತ್ತಿರಲಿಲ್ಲ, ಉದಾಹರಣೆಗೆ ಆಗಿನ ಕಾಲದಲ್ಲಿ ಹಲವು ವಿದ್ವಾಂಸರು ಬರೆದಿಟ್ಟಿದ್ದ ಪ್ರವಾದಿ(ಸ.ಅ)ರ ಕಬರ್ ಸಂದರ್ಶನಕ್ಕಾಗಿ (ಝಿಯಾರತ್) ಯಾತ್ರೆ ಮಾಡಬಹುದು ಎಂದು. ಆದರೆ ಶೈಖುಲ್ ಇಸ್ಲಾಮರು ಪುರಾವೆಗಳ ಆಧಾರದಲ್ಲಿ ಪ್ರವಾದಿ(ಸ.ಅ) ಕಬರ್ ಸಂದರ್ಶನ ಮಾಡಬಹುದು, ಆದರೆ ಅದಕ್ಕಾಗಿ ಪ್ರತ್ಯೇಕವಾಗಿ ಯಾತ್ರೆ ಮಾಡಬಾರದು ಎಂದು ಫತ್ವ ಕೊಟ್ಟರು. ಇನ್ನು ಮೂರು ತ್ವಲಾಖ್ ಗಳನ್ನು ಒಟ್ಟಿಗೆ ಹೇಳಿದರೆ ಮೂರೂ ಕೂಡ ಸ್ವೀಕಾರವೇ ಎಂಬ ವಿಷಯದಲ್ಲೂ ಫತ್ವ ಕೊಟ್ಟರು. ಹೀಗೆ ಮುಂಗಾಮಿಗಳಾದ ಸಲಫುಸ್ಸಾಲಿಹೀನ್ ಗಳ ಅಹ್ಲುಸ್ಸುನ್ನತಿ ವಲ್ ಜಮಾಅದ ಆದರ್ಶಕ್ಕೆ ಸಾಲವಾಗಿದ್ದ ಮುತಝಿಲಿಗಳ, ಸೂಫಿಗಳ,  ಶಿಯಾಗಳ ಸವಾಲನ್ನು ಸಂದಾಯಮಾಡಿದ್ದು ಶೈಖುಲ್ ಇಸ್ಲಾಮ್ ಇಬ್ನು ತೈಮಿಯಾರವರಾಗಿದ್ದಾರೆ.
ಇನ್ನು ಆ ಕಾಲದಲ್ಲಿ ಅಹ್ಲುಸ್ಸುನ್ನದ ಆದರ್ಶದವರು ಎಂದು ಸ್ವಯಂ ಹೇಳಿಕೊಳ್ಳುತ್ತಿದ್ದ ಅಶ್'ಹರಿಗಳ ವಿರುದ್ಧ ವಿಮರ್ಶಾಣಾತ್ಮಕ ಪ್ರಬಂಧ ಬರೆದಿದ್ದಾರೆ ಶೈಖುಲ್ ಇಸ್ಲಾಮರು. ಬುದ್ಧಿ ಮತ್ತು ಪ್ರಮಾಣದಲ್ಲಿ ವೈರುದ್ಧ್ಯ ಮೂಡಿದಾಗ ಬುದ್ಧಿಗೆ ಪ್ರಾಧಾನ್ಯತೆ ನೀಡಬೇಕು ಎಂಬುದು ಅಶ್'ಹರಿಗಳ ವಾದವಾಗಿತ್ತು. ಇದಕ್ಕೆ ಅಶ್'ಹರಿಗಳ ಶೈಖ್ ಇಮಾಮ್ ಫಕ್ರುದ್ಧೀನ್ ರಾಝಿ ಆಧಾರಗಳನ್ನು ಸಂಗ್ರಹಿಸಿ ಗ್ರಂಥ ಬರೆದಿದ್ದರು. ಇದನ್ನು ವಿಮರ್ಶಿಸಿ "ದರ್ ತ'ಆ ಅರುದ್ ಅಲ್ ಅಕ್'ಲ್ ವನ್ನಕ್'ಲ್" ಎಂಬ ಮಹಾ ಪ್ರಂಬಂಧವನ್ನು ಬರೆದರು. ಶೈಖ್ ಅಬ್ದುಲ್ ಕರೀಂ ಝಹೈರ್ ಹೇಳುತ್ತಾರೆ, ಹೆಚ್ಚಿನ ಎಲ್ಲಾ ವಿದ್ವಾಂಸರು ಈ ಗ್ರಂಥವನ್ನು 100 ಪುಟಗಳಿಗಿಂತ ಅಧಿಕ ಓದಿದವರಲ್ಲ ಅಷ್ಟೊಂದು ಕ್ಲಿಷ್ಟಕರವಾದ ಪ್ರಬಂಧಗಳ ಸರಮಾಲೆ ಇದಾಗಿದೆ. ಇಮಾಮ್ ಇಬ್ನ್ ಖಯ್ಯಿಮ್ ತಮ್ಮ "ನೂನಿಯ್ಯ್" ಎಂಬ ಗ್ರಂಥದಲ್ಲಿ ಹೇಳುತ್ತಾರೆ, "ದರ್ ತ'ಆ ಅರುದ್ ಅಲ್ ಅಕ್'ಲ್ ವನ್ನಕ್'ಲ್" ಎಂಬ ಗ್ರಂಥವನ್ನು ಓದಿದರೆ ಶೈಖುಲ್ ಇಸ್ಲಾಮ್ ಯಾರು, ಅವರ ಅರಿವಿನ ಅಗಾಧತೆ ಏನು ಎಂಬುದನ್ನು ಅರ್ಥೈಸಬಹುದು ಎಂದು. ಹಾಗೆ "ಮನ್ಹಜುಸ್ಸುನ್ನ ಅನ್ನಬವಿಯ್ಯ" ಎಂಬ ಗ್ರಂಥದ ಮೂಲಕ ಶಿಯಾಗಳ ಧಿಕ್ಕಾರಕ್ಕೆ ಮರುತ್ತರ ನೀಡಿದ್ದಾರೆ. ಬರ್ತ್ ಡೇ ಹಾಗೂ ಹೊಸವರ್ಷ ಆಚರಣೆಯ ವಿಚಾರದಲ್ಲಿ ಕ್ರೈಸ್ತರಿಗೂ ಉತ್ತರನೀಡಿದ್ದಾರೆ.
ಈ ರೀತಿ ಎಲ್ಲಾ ರೀತಿಯ ಧಿಕ್ಕಾರಿಗಳಿಗೂ ತಮ್ಮ ಫತ್ವದ ಮೂಲಕ ವಿಮರ್ಶೆಯ ಮೂಲಕ ಕೃತಿಗಳ ಮೂಲಕ ಶಕ್ತವಾದ ಉತ್ತರ ನೀಡುತ್ತಾ ಬಂದ ಶೈಖುಲ್ ಇಸ್ಲಾಮರನ್ನು ಅವರೊಂದಿಗೆ ತಾತ್ವಿಕ, ಸೈದ್ಧಾಂತಿಕ ಮತ್ತು ಆದರ್ಶಪರವಾದ ಭಿನ್ನಮತಗಳಿರುವ ಕೆಲವು ವಿದ್ವಾಂಸರು ಅವರನ್ನು ಕುಫ್ರ್ ಪ್ರಚಾರಕನೆಂದೂ, ಕಾಫಿರ್ ಎಂದೂ ಕರೆದರು. ಈ ಸಾಲಿನಲ್ಲಿ ಹಿಜರ 8 ನೇ ಶತಮಾನದಲ್ಲಿ ಬಂದ ಹನಫೀ ಸೂಫಿ ವಿದ್ವಾಂಸ "ಅಲ್ಲಾವುದ್ಧೀನ್ ಬುಖಾರಿ" ಎಂಬವರು ಇಬ್ನ್ ತೈಮೀಯಾರನ್ನು ಶೈಖುಲ್ ಇಸ್ಲಾಮ್ ಎಂದು ಕರೆದವರು ಕಾಫಿರ್ ಎಂದು ಫತ್ವ ಕೊಟ್ಟರು. ಇದಕ್ಕೆ ಇಮಾಮ್ ಇಬ್ನ್ ಹಜರ್ ಅಸ್ಕಲಾನಿಯವರ ಸ್ನೇಹಿತರೂ ಪ್ರಖ್ಯಾತ ವಿದ್ವಾಂಸರೂ ಆದ "ಇಮಾಮ್ ಇಬ್ನ್ ನಾಸಿರ್ ತಿಮಷ್ಕಿ" ಯವರು "ಅರ್ರದ್ದುಲ್ ವಾಫಿಲ್ ಅಲಾ ಮನ್ ಝಲಿಮ ಅನ್ನಹುಸ್ಸನ್ನ ಇಬ್ನ್ ತೈಮೀಯತ ಶೈಖುಲ್ ಇಸ್ಲಾಮ್ ಕಾಫಿರ್" ಎಂಬ ಗ್ರಂಥವನ್ನು ಬರೆದರು. ಇದರಲ್ಲಿ ಸುಮಾರು 90 ಕ್ಕಿಂತಲೂ ಹೆಚ್ಚಿನ ಪ್ರಖ್ಯಾತ ಶೈಖ್ ಗಳ ಸಾಕ್ಷ್ಯದೊಂದಿಗೆ ಅವರೆಲ್ಲರ ಅಭಿಪ್ರಾಯದೊಂದಿಗೆ ಇಮಾಮ್ ಇಬ್ನ್ ತೈಮೀಯ ಶೈಖುಲ್ ಇಸ್ಲಾಮ್ ಎಂಬುದಕ್ಕೆ ಸಾಕ್ಷ್ಯ ನೀಡಲಾಗಿತ್ತು.
ಶೈಖುಲ್ ಇಸ್ಲಾಮರು ಅನೇಕ ಶಿಷ್ಯರನ್ನು ಹೊಂದಿದ್ದರು, ಅವರಲ್ಲಿ ಅತ್ಯಂತ ಪ್ರಮುಖರಾದ ಖ್ಯಾತ ಕುರ್'ಆನ್ ವ್ಯಾಖ್ಯಾನವಾದ ಇಬ್ನ್ ಕಸೀರ್ ನ ಕರ್ತೃ ಇಮಾಮ್ ಇಬ್ನ್ ಕಸೀರ್ ಅವರು ಹೇಳುವ ಪ್ರಕಾರ ನನ್ನ ಜೀವಿತಾವಧಿಯಲ್ಲಿ ಅಷ್ಟೊಂದು ಪಾಂಡಿತ್ಯವಿರುವ ವಿದ್ವಾಂಸನನ್ನು ನಾನು ಕಂಡೇ ಇಲ್ಲ ಎಂದಾಗಿದೆ.
ಹಿಜಿರ 728 ರಲ್ಲಿ ತಮ್ಮ 67 ನೇ ವರ್ಷದಲ್ಲಿ ಶೈಖುಲ್ ಇಸ್ಲಾಮರು ಮರಣಹೊಂದುತ್ತಾರೆ. ಈ 67 ವರ್ಷಗಳ ಆಯುಷ್ಯದಲ್ಲಿ ಅವರು ಬಿದ'ಇ ಗಳ ವಿರುದ್ಧ ಶಿರ್ಕ್ ವಾದಿಗಳ ವಿರುದ್ಧ 1 ಸಾವಿರಕ್ಕಿಂತಲೂ ಅಧಿಕ ಪತ್ವಗಳನ್ನು ಕೃತಿಗಳನ್ನು ರಚಿಸಿದ್ದಾರೆ. ಕೆಲವು ವಿದ್ವಾಂಸರು ಹೇಳುವ ಪ್ರಕಾರ ಪವಿತ್ರ ಹರಮೈನನ್ನು ಹೊಂದಿರುವ ಸೌದಿ ಅರೇಬಿಯಾ ದೇಶದಲ್ಲಿ ಶೈಖುಲ್ ಇಸ್ಲಾಮರ ಗ್ರಂಥಗಳು ದೊರೆಯದ ಗ್ರಂಥಾಲಯಗಳೇ ಇಲ್ಲವಂತೆ. ಆದರೆ ತಮ್ಮ ದಾರಿತಪ್ಪಿದ ವಾದಗಳ ವಿರುದ್ಧ ಫತ್ವ ಕೊಟ್ಟು ಇಂದಿಗೂ ತಮಗೆ ತಲೆನೋವಾಗಿಯೇ ಇರುವ ಶೈಖುಲ್ ಇಸ್ಲಾಮರ ವಿರುದ್ಧ ಕೆಲವು ಬಿದ'ಅತ್ ನ ಕಕ್ಷಿಗಳು ಹಿಗ್ಗಾ ಮುಗ್ಗ ಅಪಪ್ರಚಾರಮಾಡುವುದು ಅವರ ಕಬರ್ ಎತ್ತರವಿದೆ ಎಂದು ಸುಳ್ಳು ಪೋಟೋ ತೋರಿಸಿ ಅವರನ್ನು ಹಣಿಯಲು ನಡೆಸುತ್ತಿರುವ ಪ್ರಯತ್ನಗಳು ಜಾರಿಯಲ್ಲಿದೆ.

📝 ಯಾತ್ರಿಕ.


ಅದೇ ರೀತಿ ನಿರಂತರವಾಗಿ ಸಲಫಿಗಳ ಮೇಲೆ ಸುಳ್ಳಾರೋಪ ಹೊರಿಸುತ್ತಿರುವುದು ಸಮಸ್ತದವರಿಗೆ ಮಾಮೂಲಾಗಿ ಬಿಟ್ಟಿದೆ.
ಶೈಖುಲ್ ಇಸ್ಲಾಂ ಎಂದೇ ಪ್ರಖ್ಯಾತ ರಾದ ಇಬ್ನ್ ತ್ಯೇಮಿಯ (ರ) ರವರು ಶೈಖುಲ್ ಇಸ್ಲಾಂ ಎಂಬುದಕ್ಕೆ ಸಮಸ್ತದವರು ಅಂಗೀಕರಿಸುವ,ಕೊಂಡಾಡುತ್ತಿರುವ,ಇಮಾಂ ಎಂದು ಅಂಗೀಕರಿಸುವ ಹಾಗೂ ಅವರ ಶೈಖ್ ಎಂದು ಪರಿಚಯಿಸುವ ಸಾಕ್ಷಾತ್  ಜಲಾಲುದ್ದೀನ್ ಸುಯೂತಿ ರವರು ಹೇಳುವುದನ್ನು  ನೋಡಿ.👇
ابن تيمية ، الشيخ ، الإمام ، العلامة ، الحافظ ، الناقد ، الفقيه ، المجتهد ، المفسر البارع ، شيخ الإسلام ، علَم الزهاد ، نادرة العصر ، تقي الدين أبو العباس أحمد المفتي شهاب الدين عبد الحليم بن الإمام المجتهد شيخ الإسلام مجد الدين عبد السلام بن عبد الله بن أبي القاسم الحراني .
أحد الأعلام ، ولد في ربيع الأول سنة إحدى وستين وستمائة ، وسمع ابن أبي اليسر ، وابن عبد الدائم ، وعدّة .
وعني بالحديث ، وخرَّج ، وانتقى ، وبرع في الرجال ، وعلل الحديث ، وفقهه ، وفي علوم الإسلام ، وعلم الكلام ، وغير ذلك .
وكان من بحور العلم ، ومن الأذكياء المعدودين ، والزهاد ، والأفراد ، ألَّف ثلاثمائة مجلدة ، وامتحن وأوذي مراراً .
مات في العشرين من ذي القعدة سنة ثمان وعشرين وسبعمائة .
الحافض جلال الدين السيوطي
" طبقات الحفاظ " ( ص 516 ، 517
ಮಹಾನರಾದ ಇಬ್ನು ತೈಮಿಯಾ (ರ) ರವರು ಓರ್ವ ಮಹಾನ್ ವಿದ್ವಾಂಸ, ಇಮಾಮ್, ಅಲ್ಲಾಮ,
*ಶೈಖುಲ್ ಇಸ್ಲಾಂ ಆಗಿದ್ದರು.
*ಹಾಫಿಲ್ ಆಗಿದ್ದರು
*ಕರ್ಮ ಶಾಸ್ತ್ರ ವಿದ್ವಾಂಸರಾಗಿದ್ದರು.
*ಅತೀ ದೊಡ್ಡ ಮುಫಸ್ಸಿರಾಗಿದ್ದರು.
*ಬೌತಿಕ ವಿಷಯದಲ್ಲು ಜ್ಞಾನವಿರುವ ವಿದ್ವಾಂಸರಾಗಿದ್ದರು.
*ದೀನಿನಲ್ಲಿ ತಕ್ವಾ ಇರುವ ಆಲಿಮ್ ಆಗಿದ್ದರು.
*ಹದೀಸ್'ನ ವಿಷಯದಲ್ಲಿ ತಖ್'ರೀಜ್ ನಡೆಸಿದ ಆಲಿಮ್ ಆಗಿದ್ದರು
*ಹದೀಸ್ ನಿವೇದನೆ ಮಾಡಿದವರನ್ನು ತಖ್'ರೀಜ್ ಮಾಡಿದ ಆಲಿಮ್
*ಅತೀ ಬುದ್ಧಿವಂತರಾಗಿದ್ದರು
*ನ್ಯೂನತೆ ಇರುವ ಹದೀಸ್'ನ ನ್ಯೂನತೆಯನ್ನು ವ್ಯಕ್ತಪಡಿಸಿದ ಮಹಾನುಭಾವರಾಗಿದ್ದರು.
ಇನ್ನು
ಶಾಫಿಈ ಮಝ್'ಬಹಬಿನ ಇಮಾಮಾದ ಇಬ್ನ್ ಹಜರ್ ಹೈತಮಿಯ ಶಿಷ್ಯರಾದ ಮುಲ್ಲಾ ಅಲಿಯ್ಯ್ ಖಾರೀ(ರ) ಹೇಳುತ್ತಾರೆ.
ಸಲಫಿ ನೇತಾರ ಇಬ್ನ್ ತ್ಯೆಮಿಯಾ (ರ)ರವರು ಮುಸ್ಲಿಂ ಉಮ್ಮತಿನ ವಲಿಯ್ಯ್ ಆಗಿದ್ದಾರೆ.
أَقُولُ: صَانَهُمَا اللَّهُ عَنْ هَذِهِ السِّمَةِ الشَّنِيعَةِ وَالنِّسْبَةِ الْفَظِيعَةِ، وَمَنْ طَالَعَ شَرْحَ مَنَازِلِ السَّائِرِينَ لِنَدِيمٍ الْبَارِيِّ الشَّيْخُ عَبْدُ اللَّهِ الْأَنْصَارِيُّ الْحَنْبَلِيُّ - قَدَّسَ اللَّهُ تَعَالَى سِرَّهُ الْجَلِيَّ - وَهُوَ شَيْخُ الْإِسْلَامِ عِنْدَ الصُّوفِيَّةِ حَالَ الْإِطْلَاقِ بِالِاتِّفَاقِ، تَبَيَّنَ لَهُ أَنَّهُمَا كَانَا مِنْ أَهْلِ السُّنَّةِ وَالْجَمَاعَةِ، بَلْ وَمِنْ أَوْلِيَاءِ هَذِهِ الْأُمَّةِ،

ಅದೇ ರೀತಿ
ಮಕ್ಕಾ ಹಾಗೂ ಮದೀನಾದ ವಿದ್ವಾಂಸರನ್ನು (ಶಿಯಾ ,ಕಾದಿಯಾನಿ,ಸೂಫಿಗಳ ಹೊರತು) ಇವತ್ತು ಮುಸ್ಲಿಂ ಉಮ್ಮತ್ ಅಂಗೀಕರಿಸುತ್ತಾರೆ.
ಹಜ್ಜ್ ತಿಂಗಳು ಅರಫಾ ಮೈದಾನದಲ್ಲಿ ಲಕ್ಷಗಟ್ಟಲೆ  ಮುಸ್ಲಿಂ ಹಾಜಿಗಳ ಮುಂದೆ ಪ್ರಬಾಷಣೆ ನಡೆಸುವುದು ಈಗಿನ ಸಲಫೀ ವಿದ್ವಾಂಸ ಮುಸ್ಲಿಂ ಜಗತ್ತಿನ ಗ್ರಾಂಡ್ ಮುಫ್ತಿ ಸೌದಿ ಅರೇಬಿಯಾದ ರ'ಈಸ್ ಆದ ಶೈಖ್ ಸ್ವಾಲಿಹ್ ಆಲು ಶೈಖ್ (ಹ)ರವರಾಗಿದ್ದಾರೆ.
ಈಗ ಹೇಳಿ ಇವರು ಮಾಸಿಕ ನೋಡಿ ಪುಸ್ತಕ ಓದಿ ದೀನ್ ಕಲಿತವರೇ?
ಸಲಫೀ ವಿದ್ವಾಂಸರ ಕುರಿತು ಆಕ್ಷೇಪಾರ್ಹ ನಿಲುವು ವ್ಯಕ್ತಪಡಿಸುವ ಕಾಂತಪುರಂ ,ಪೇರೋಡ್,ಅಹ್ಸನಿ,ಸಖಾಫಿಗಳು  ಕೂಡ  ಅರಫಾ ಮೈದಾನಕ್ಕೆ ಬಂದು ಸಲಫೀ ವಿದ್ವಾಂಸರ ಪ್ರಬಾಷಣೆ ಕೇಳುತ್ತಾರೆ.
ಊರಲ್ಲಿ ಬಂದರೆ ಅವರ ಪ್ರಬಾಷಣೆ ಕೇಳ್ಬೇಡಿ‌ ಎಂದು ಹೇಳ್ತಾರೆ.
ಮುಸ್ಲಿಂ ಸಮುದಾಯವನ್ನು ವಂಚಿಸುವವರು ಯಾರೆಂದು ತಿಳಿಯಲು ಇದಕ್ಕಿಂತ ಉದಾಹರಣೆ ಬೇರೆ ಬೇಕೆ?
ಚಿಂತಿಸಿರಿ ಸಮಸ್ತದವರೇ
ನೈಜ ಆಲಿಂಗಳು ಯಾರೆಂದು ತಿಳಿಯಿರಿ
ಅಲ್ಲಾಹನು ಹಿದಾಯತ್ ನೀಡಲಿ


ಇಬ್ನ್ ಅಬ್ದುರ್ರಹ್ಮಾನ್✍🏻🌹

18 Feb 2018

ಮಯ್ಯತ್ ನಮಾಝ್.

ಮಯ್ಯತ್ ನಮಾಝ್.


الحمد الله
الصلاة والسلام على الرسول الله

ಮುಹಮ್ಮದ್ﷺ ರವರ ಸಮುದಾಯವೇ,

ಮರಣವೆಂಬುದು ಖಚಿತವಾಗಿದೆ ಎಂದು ಎಲ್ಲರೂ ತಿಳಿದಿರುವ ಸತ್ಯವಾಗಿದೆ.

ಎಲ್ಲರೂ ಮರಣದ ಸವಿಯನ್ನು ಅನುಭವಿಸಲಿದೆ.

كُلُّ نَفْسٍ ذَائِقَةُ الْمَوْتِ

ಎಂದು ಕುರ್'ಆನಿನ ಸೂಕ್ತವನ್ನು ನಾವು ಕಲಿತಿದ್ದೇವೆ.

ಆದರೆ ನಮ್ಮ ಆತ್ಮೀಯರ ಮರಣದ ಬಳಿಕ ಅವರಿಗಾಗಿ ನಾವು ಏನೆಲ್ಲ ಮಾಡಬೇಕೆಂಬ ವಿಷಯದಲ್ಲಿ ನಾವು ಅಶ್ರಧ್ದರಾಗಿದ್ದೇವೆ.

ಎಲ್ಲಿಯವರೆಗೆ ಎಂದರೆ ಯಾರಾದರೂ ತೀರಿ ಹೋದಾಗ  ಮಯ್ಯತ್ ನಮಾಝ್ ಮಾಡುವ ವಿಧಾನ ಹೇಗೆ ಎಂಬುದನ್ನು ಅರಿಯಲು ಪರದಾಡುತ್ತಿರುವುದು ನಾವು ಕಾಣುತ್ತಿರುವುದು ನಿಜಕ್ಕೂ ಖೇದಕರವಾಗಿದೆ.

ಅಂತಹ ಪರಿಸ್ಥಿತಿ ಬರದಿರಲಿ ಎಂಬ ದೃಷ್ಟಿಯಿಂದ ಸಾಮಾಜಿಕ ತಾಣಗಳಲ್ಲಿ ಕಾಲ ಕಳೆಯುತ್ತಿರುವ ನಮ್ಮ ಸಮುದಾಯಕ್ಕೆ ಈ ತಾಣಗಳು ಇದರ ಪ್ರಯೋಜನವಾದರೂ ಲಭಿಸಲಿ ಎಂದು ಮಯ್ಯತ್ ನಮಾಝ್ ನಿರ್ವಹಿಸುವ ವಿಧಾನವನ್ನು ತಿಳಿಸುತ್ತಾ ಇದ್ದೇನೆ.

ಇದರ ಪ್ರಯೋಜನ ಎಲ್ಲರೂ ಪಡೆಯಲಿ.

ಅಲ್ಲಾಹನು ಅನುಗ್ರಹಿಸಲಿ..


ಮಯ್ಯಿತ್ ನಮಾಝಿನಲ್ಲಿ ಹೇಳಬೇಕಾದ ಪ್ರಾರ್ಥನೆ  .

ಮೊದಲನೇ ತಕ್ಬೀರಿನ ನಂತರ ಸೂರಃ ಅಲ್ ಫಾತಿಹಾ  ಓದಬೇಕು

بِسْمِ اللَّهِ الرَّحْمَـٰنِ الرَّحِيمِ
الْحَمْدُ لِلَّهِ رَبِّ الْعَالَمِينَ
الرَّحْمَـٰنِ الرَّحِيمِ
مَالِكِ يَوْمِ الدِّينِ
إِيَّاكَ نَعْبُدُ وَإِيَّاكَ نَسْتَعِينُ
اهْدِنَا الصِّرَاطَ الْمُسْتَقِيمَ
صِرَاطَ الَّذِينَ أَنْعَمْتَ عَلَيْهِمْ غَيْرِ الْمَغْضُوبِ عَلَيْهِمْ وَلَا الضَّالِّينَ

ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹುವಿನ ನಾಮದಿಂದ.

ಸರ್ವಲೋಕಗಳ ಪರಿಪಾಲಕನಾಗಿರುವ ಅಲ್ಲಾಹುವಿಗೆ ಸ್ತುತಿ.

ಪರಮ ದಯಾಮಯನೂ, ಕರುಣಾನಿಧಿಯೂ, ಪ್ರತಿಫಲ ದಿನದ ಒಡೆಯನೂ ಆಗಿರುವ (ಅಲ್ಲಾಹುವಿಗೆ).

ನಾವು ನಿನ್ನನ್ನು ಮಾತ್ರ ಆರಾಧಿಸುವೆವು. ನಾವು ನಿನ್ನೊಂದಿಗೆ ಮಾತ್ರ ಸಹಾಯವನ್ನು ಬೇಡುವೆವು.

ನಮ್ಮನ್ನು ನೇರವಾದ ಮಾರ್ಗದಲ್ಲಿ ಮುನ್ನಡೆಸು. ನೀನು ಅನುಗ್ರಹಿಸಿದವರ ಮಾರ್ಗದಲ್ಲಿ; ಕ್ರೋಧಕ್ಕೆ ಪಾತ್ರರಾದವರ ಮಾರ್ಗದಲ್ಲಲ್ಲ.ಪಥಭ್ರಷ್ಟರಾದವರ ಮಾರ್ಗದಲ್ಲೂ ಅಲ್ಲ.

ಎರಡನೇ ತಕ್ಬೀರಿನ ನಂತರ ಮುಹಮ್ಮದ್ﷺ ರವರ ಮೇಲೆ  ಸ್ವಲಾತ್ (ಇಬ್ರಾಹಿಮಿಯಾ) ನಾವು ಎಲ್ಲಾ ನಮಾಝಿನಲ್ಲಿ ಹೇಳುವ ಅದೇ ಸ್ವಲಾತ್

اللهم صل على محمد وعلى آل محمد كما صليت على إبراهيم وعلى آل إبراهيم
إنك حميد مجيد اللهم بارك على محمد وعلى آل محمد كما باركت على إبراهيم وعلى آل إبراهيم فى العالمين إنك حميد مجيد

ಮೂರನೇ ತಕ್ಬೀರಿನ ನಂತರ ಮಯ್ಯಿತಿಗೆ ಬೇಕಾಗಿ ಪ್ರಾರ್ಥಿಸಬೇಕು

اللهُـمِّ اغْفِـرْ لَهُ ، وَارْحَمْـه ، وَعافِهِ ، وَاعْفُ عَنْـه ، وَأَكْـرِمْ نُزُلَـه ، وَوَسِّـعْ مُدْخَـلَه ، وَاغْسِلْـهُ بِالْمـاءِ وَالثَّـلْجِ وَالْبَـرَدْ ، وَنَقِّـهِ مِنَ الْخطـايا كَما نَـقّيْتَ الـثَّوْبُ الأَبْيَـضُ مِنَ الدَّنَـسْ ، وَأَبْـدِلْهُ داراً خَـيْراً مِنْ دارِه ، وَأَهْلاً خَـيْراً مِنْ أَهْلِـه ، وَزَوْجَـاً خَـيْراً مِنْ زَوْجِه ، وَأَدْخِـلْهُ الْجَـنَّة ، وَأَعِـذْهُ مِنْ عَذابِ القَـبْر وَعَذابِ النّـار

( مسلم:٩٦٣)

ಓ ಅಲ್ಲಾಹನೇ ! ನೀನು ಇವರಿಗೆ   (ಹೆಸರು ಹೇಳಬೇಕು) ಕ್ಷಮೆ ನೀಡು, ಅವರಿಗೆ ಒಳಿತನ್ನು ದಯಪಾಲಿಸು.  ಕರುಣೆ ತೋರು  . ಇವರ  (ಪರಕೋಕ) ಪ್ರವೇಶ ಒಳ್ಳೆಯ ರೀತಿಯಲ್ಲಿ ಮಾಡು .ನೀರು ,ಮಂಜು, ಹಿಮ ಮುಂತಾದವುಗಳಿಂದ  ಇವರ ಪಾಪವನ್ನು ಶುದ್ದೀಕರಣ ಮಾಡು. ಬಿಳಿ ವಸ್ತ್ರಗಳನ್ನು ಮಾಲಿನ್ಯದಿಂದ ಶುದ್ದೀಕರಣ ಮಾಡುವ ಹಾಗೆ ಇವರ ಪಾಪವನ್ನು ಶುದ್ದೀಕರಿಸು.ಇವರ ಮನೆಗಿಂತಲೂ ಉತ್ತಮವಾದ ಮನೆ, ಇವರ ಕುಟುಂಬಕ್ಕಿಂತಲೂ ಉತ್ತಮವಾದ ಕುಟುಂಬವನ್ನೂ ಇವರಿಗೆ ದಯಪಾಲಿಸು.  ಇವರನ್ನು ಸ್ವರ್ಗದಲ್ಲಿ ಪ್ರವೇಶಿಸು. ಗೋರಿ ಶಿಕ್ಷೆ ಹಾಗೂ ನರಕ ಶಿಕ್ಷೆಯಿಂದ ಇವರನ್ನು ರಕ್ಷಿಸು .

ನಾಲ್ಕನೇ ತಕ್ಬೀರಿನ ನಂತರ  ಸಲಾಂ ಹೇಳುವುದು.

✍🏻 ಇಬ್ನ್ ಅಬ್ದುರ್ರಹ್ಮಾನ್