24 Aug 2018

ಹೊಸ ವಸ್ತ್ರ ಧರಿಸುವಾಗ ಪ್ರಾರ್ಥಿಸಬೇಕಾದ ಪ್ರಾರ್ಥನೆ.

ಹೊಸ ವಸ್ತ್ರ ಧರಿಸುವಾಗ ಪ್ರಾರ್ಥಿಸಬೇಕಾದ ಪ್ರಾರ್ಥನೆ.

اَللّهُمَّ لَكَ الْحَمْدُ أَنْتَ كَسَوْتَنِيهِ ، أَسْأَلُكَ مِنْ خَيْرِهِ وَخَيْرِ مَا صُنِعَ لَهُ، وَأَعُوذُ بِكَ مِنْ شَرِّهِ وَشَرِّ مَا صُنِعَ لَهُ : (صححه الألباني في صحيح سنن أبي داود:٤٠٢٠ وفي صحيح الترمذي:١٨٣٨)

ಹೊಸ ವಸ್ತ್ರ ಧರಿಸಿದವನಿಗೋಸ್ಕರ ಪ್ರಾರ್ಥಿಸಬೇಕಾದ ಪ್ರಾರ್ಥನೆ.

تُبْلِي وَيُخْلِفُ اللهُ تَعَالَى : (صححه الألباني في صحيح الترمذي :١٨٣٨)
〰〰〰〰〰〰〰〰〰

23 Aug 2018

ಶಫಾಅತ್

قُلْ لِلَّهِ الشَّفَاعَةُ جَمِيعًا ۖ لَهُ مُلْكُ السَّمَاوَاتِ وَالْأَرْضِ ۖ ثُمَّ إِلَيْهِ تُرْجَعُونَ

ಹೇಳಿರಿ: ‘ಶಿಫಾರಸು ಸಂಪೂರ್ಣವಾಗಿ ಅಲ್ಲಾಹು ವಿಗಿರುವುದಾಗಿದೆ.[936] ಆಕಾಶಗಳ ಮತ್ತು ಭೂಮಿಯ ಆಧಿಪತ್ಯವು ಅವನಿಗಾಗಿದೆ. ತರುವಾಯ ನಿಮ್ಮನ್ನು ಮರಳಿಸಲಾಗುವುದು ಅವನೆಡೆಗೇ ಆಗಿದೆ’.

ಟಿಪ್ಪಣಿಗಳು :
[936] ಯಾರು ಮಾಡುವ ಶಿಫಾರಸನ್ನು ಸ್ವೀಕರಿಸಬೇಕು ಮತ್ತು ಯಾರಿಗಾಗಿ ಮಾಡುವ ಶಿಫಾರಸನ್ನು ಸ್ವೀಕರಿಸಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವಿರುವುದು ಕೇವಲ ಅಲ್ಲಾಹುವಿಗೆ ಮಾತ್ರವಾಗಿದೆ. ಸೃಷ್ಟಿಗಳ ಇಷ್ಟಾನಿಷ್ಟಗಳಿಗೆ ಈ ವಿಷಯದಲ್ಲಿ ಯಾವುದೇ ಪ್ರಭಾವ ಬೀರಲೂ ಸಾಧ್ಯವಿಲ್ಲ.

[ಅಝ್ಝುಮರ್ : 44]

ಅಲ್ಲಾಹೇತರರನ್ನು ಅವಲಂಭಿಸಿದ ಮೌಲೀದ್ ಕಿತಾಬ್. 


عبدك المسكين يرجو, فضلك الجم الغفير
فيك قد أحسنت ظني, يا بشير يا نذير
أنت غأفر الخطاي,والذنوب الموبقات

ಅರ್ಥ :
ಪ್ರವಾಜಗರೇ ನಿಮ್ಮ ಸಾಧುವಾದ ಈ ದಾಸನ ಪಾಪಗಳೆಲ್ಲವನ್ನೂ ಕ್ಷಮಿಸಿ ಬಿಡಿ, ನಿಮ್ಮ ಔದಾರ್ಯವನ್ನು ನಾನು ಆಗ್ರಹಿಸುವೆನು, ನಾನು ನಿಮ್ಮಲ್ಲಿ ಶುಭ ಪ್ರತೀಕ್ಷೆ ಇಡುವೆನು, ಸಂತೋಷ ವಾರ್ತೆಯನ್ನೂ, ಮುನ್ನೆಚ್ಚರಿಕೆಯನ್ನೂ ನೀಡುವ ನೀವು ಎಲ್ಲಾ ಪಾಪಗಳನ್ನೂ ಕ್ಷಮಿಸುವವರಾಗಿರುವಿರಿ.


ಆದರೆ ಕುರಾನ್ ಹೇಳುವುದನ್ನು ನೋಡಿ.

قُلْ يَا عِبَادِيَ الَّذِينَ أَسْرَفُوا عَلَىٰ أَنْفُسِهِمْ لَا تَقْنَطُوا مِنْ رَحْمَةِ اللَّهِ ۚ إِنَّ اللَّهَ يَغْفِرُ الذُّنُوبَ جَمِيعًا ۚ إِنَّهُ هُوَ الْغَفُورُ الرَّحِيمُ

ಹೇಳಿರಿ: ‘ಸ್ವತಃ ತಮ್ಮ ಮೇಲೆಯೇ ಅತಿಕ್ರಮ ವೆಸಗಿರುವ ಓ ನನ್ನ ದಾಸರೇ! ಅಲ್ಲಾಹುವಿನ ಕಾರುಣ್ಯದ ಬಗ್ಗೆ ನೀವು ನಿರಾಶರಾಗದಿರಿ. ಖಂಡಿತವಾಗಿಯೂ ಅಲ್ಲಾಹು ಪಾಪಗಳೆಲ್ಲವನ್ನೂ ಕ್ಷಮಿಸುವನು. ಖಂಡಿತ ವಾಗಿಯೂ ಅವನು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು’.


[ಅಝ್ಝುಮರ್ : 53]


"ನಾನು ನಿಮ್ಮ ಸಾಧುವಾದ ದಾಸನಾಗಿದ್ದೇನೆ" ಎಂದು ಮೌಲೀದ್ ಕಿತಾಬ್ ಪ್ರವಾದಿ ﷺ ರೊಂದಿಗೆ  ಹೇಳುತ್ತದೆ. ಆದರೆ ಪ್ರವಾದಿ ﷺ ರು ಹೇಳುತ್ತಾರೆ : ನಾನು ಅಲ್ಲಾಹನ ದಾಸನೂ, ದೂತನೂ ಆಗಿದ್ದೇನೆ. ಈಸಾ ಇಬ್ನು ಮರ್ಯಮರನ್ನು ಕ್ರೈಸ್ತರು ಹೊಗಳಿದಂತೆ ನೀವು ನನ್ನನ್ನು ಹೊಗಳಬೇಡಿ.

ಎಲ್ಲಾ ಪಾಪಗಳನ್ನು ವಿಮೋಚನೆ ಗೊಳಿಸುವವನು ಅಲ್ಲಾಹನಾಗಿದ್ದಾನೆ. ಆದರೆ ಮೌಲೀದ್ ಕಿತಾಬ್ ಅಲ್ಲಾಹೇತರರನ್ನು ಅವಲಂಭಿಸಿದೆ.

ಅಲ್ಲಾಹನೊಂದಿಗೆ ಇತರರನ್ನು  ಸಹಭಾಗಿಯನ್ನಾಗಿ ಮಾಡುವ ಈ ಮೌಲೀದ್ ಕಿತಾಬ್ ನಮಗೆ ಬೇಕೇ?

ಚಿಂತಿಸಿ...

ಮಕ್ಕಾ ಮುಶ್ರಿಕರು ಕರೆದು ಪ್ರಾರ್ಥಿಸುತ್ತಿದ್ದ ಲಾತ  ಯಾರು?


ಇಬ್ನ್ ಅಬ್ಬಾಸ್ (ರ), ಮುಜಾಹಿದ್  ಮತ್ತು ಅಬೂ ಸಾಲಿಹ್  ಹೇಳುತ್ತಾರೆ:
ಲಾತ ಹಾಜಿಗಳಿಗಾಗಿ ಗೋಧಿ ರುಬ್ಬುವ ಒಬ್ಬ ವ್ಯಕ್ತಿ ಆಗಿದ್ದರು. ಅವರು ಮರಣ ಹೊಂದಿದಾಗ ಜನರು ಅವರ ಗೋರಿಯಲ್ಲಿ  ಜನ ಜಮಾಯಿಸತೊಡಗಿದರು .......(ತಪ್ಸೀರ್ ಅತ್ತಬರೀ 22/523 ಕುರ್ ಆನ್ 53/19ನೇ ಸೂಕ್ತಿಯ ವ್ಯಾಖ್ಯಾನ ದಲ್ಲಿ)