28 Dec 2017

ಇಮಾಮ್ ಅಬೂ ಹನೀಫ (ರ) ರವರನ್ನು ಅಂದಾನುಸರಣೆ ಮಾಡುವವರಿಗಾಗಿ.

ಇಮಾಮ್ ಅಬೂ ಹನೀಫ (ರ) ರವರ ಮಾತುಗಳು...

ಇಮಾಮ್ ಅಬೂ ಹನೀಫ [ರ] ಹೇಳುತ್ತಾರೆ;
ನನ್ನ ಮಾತು ಆಧಾರ ಪ್ರಮಾಣಗಳಿಂದ ದೃಡೀಕರಿಸಿಕೊಳ್ಳದ ಹೊರತು ನನ್ನ ಮಾತನ್ನು ಅನುಸರಿಸಿ ಪತ್ವಾ ನೀಡುವುದು ನಿಷಿದ್ದವಾಗಿದೆ.

[ಮೀಝೂನ್ ಶೈರಾನೀ, ಅಕದುಲ್ ಜಯ್ಯಿದ್ ಪುಟ 80]

ನನ್ನ ಮಾತು ಕುರಾನಿಗೆ ವಿರುದ್ದವಾಗಿದ್ದರೆ ಅದನ್ನು ಬಿಟ್ಟುಬಿಡಿ. ಜನರು ವಿಚಾರಿಸಿದರು; ನಿಮ್ಮ ಮಾತು ಹದೀಸಿಗೆ ವಿರುದ್ದವಾಗಿದ್ದರೆ...? ಅವರು ಹೇಳಿದರು? ಹಾಗಿದ್ದರೂ ನನ್ನ ಮಾತನ್ನು ಬಿಟ್ಟುಬಿಡಿರಿ. ಜನರು ಕೇಳಿದರು; ನಿಮ್ಮ ಮಾತು ಸಹಾಬಿಗಳ [ರ] ಮಾತನ್ನು ಮೀರುವುದಾಗಿದ್ದರೆ? ಅವರು ಹೇಳಿದರು; ಆಗಲೂ ನನ್ನ ಮಾತನ್ನು ಬಿಟ್ಟು ಬಿಡಿ.

[ಅಕದುಲ್ ಜಯ್ಯಿದ್ ಪುಟ 53]

"ನಮ್ಮ ಮಾತು ಕುರಾನ್ ಮತ್ತು ಹದೀಸಿಗೆ ವಿರುದ್ದವಾಗಿ ಕಂಡು ಬಂದರೆ ನೀವು ಕುರಾನ್ ಹದೀಸ್'ನ್ನು ಅನುಸರಿಸಿರಿ. ನಮ್ಮ ಮಾತನ್ನು ಗೋಡೆಗೆ ಹೊಡೆದು ಬಿಡಿ."

[ಮೀಝಾನ್ ಶೈರಾನಿ, ಅಕದುಲ್ ಜಯ್ಯಿದ್ ಪುಟ 58]

ಇಮಾಮ್ ಅಬೂ ಹನೀಫ[ರ]ರವರ ಈ ಮಾತು ಸುವರ್ಣಾಕ್ಷರಗಳಲ್ಲಿ ಬರೆದಿಟ್ಟುಕೊಳ್ಳಲು ಅರ್ಹವಾದುದಾಗಿದೆ. ಅವರು ಹೇಳುತ್ತಾರೆ;
"ಸಹೀಹ್ ಆದ ಹದೀಸ್'ಗಳೇ ನನ್ನ ಮದ್ ಹಬ್ ಆಗಿದೆ."

[ಅಕದುಲ್ ಜಯ್ಯಿದ್]

"ನನ್ನನ್ನು ತಕ್ ಲೀದ್ (ಅಂದಾನುಸರಣೆ) ಮಾಡಬೇಡಿರಿ. ಮಾಲೀಕ್ ಇಮಾಮ[ರ]ರನ್ನು ತಕ್ ಲೀದ್ ಮಾಡದಿರಿ ಯಾರನ್ನೂ ತಕ್ ಲೀದ್ ಮಾಡಬೇಡಿರಿ. ಅವರು ಯಾವ ಮೂಲಗಳಿಂದ ಧಾರ್ಮಿಕ ವಿಧಿ-ನಿರ್ದೇಶನಗಳನ್ನು ಪಡೆದರೋ ಅಲ್ಲಿಂದ ಮಾರ್ಗದರ್ಶನ ಪಡೆಯಿರಿ ಅಂದರೆ ಕುರಾನ್ ಮತ್ತು ಹದೀಸ್'ಗಳಿಂದ."

[ತುಹ್'ಫತುಲ್ ಅಖ್ ಯಾರ್ ಅದ್ಸಾಹ್ ಫಿ ಬಯಾನುನಿಲ್ ಅಬ್ರಾರ್]

ಶಾಫಿಈ ಇಮಾಮರನ್ನು ಅಂದಾನುಸರಣೆ ಮಾಡುವವರಿಗಾಗಿ.

ಇಮಾಮ್ ಶಾಫಿಈ ( ರ ) ರವರ ಮಾತುಗಳು...

ﻣﺎ ﻣﻦ ﺃﺣﺪ ﺇﻻ ﻭﺗﺬﻫﺐ ﻋﻠﻴﻪ ﺳﻨﺔ ﻟﺮﺳﻮﻝ ﺍﻟﻠﻪ ﺻﻠﻰ ﺍﻟﻠﻪ ﻋﻠﻴﻪ
ﻭﺳﻠﻢ ﻭﺗﻌﺰﺏ ﻋﻨﻪ ﻓﻤﻬﻤﺎ ﻗﻠﺖ ﻣﻦ ﻗﻮﻝ ﺃﻭ ﺃﺻﻠﺖ ﻣﻦ ﺃﺻﻞ ﻓﻴﻪ ﻋﻦ
ﺭﺳﻮﻝ ﺍﻟﻠﻪ ﺻﻠﻰ ﺍﻟﻠﻪ ﻋﻠﻴﻪ ﻭﺳﻠﻢ ﻟﺨﻼﻑ ﻣﺎ ﻗﻠﺖ ﻓﺎﻟﻘﻮﻝ ﻣﺎ ﻗﺎﻝ
ﺭﺳﻮﻝ ﺍﻟﻠﻪ ﺻﻠﻰ ﺍﻟﻠﻪ ﻋﻠﻴﻪ ﻭﺳﻠﻢ ﻭﻫﻮ ﻗﻮﻟﻲ ‏( /3 /1 ‏( ﺗﺎﺭﻳﺦ
ﺩﻣﺸﻖ ﻻﺑﻦ ﻋﺴﺎﻛﺮ 15

ಇಮಾಮ್ ಶಾಫಿಈ ( ರ ) ರವರು ಹೇಳುತ್ತಾರೆ : ಪ್ರವಾದಿ ﷺ ರ ಸುನ್ನತ್ತ್ ಬಂದು ಮುಟ್ಟಿಯೂ ಮತ್ತು ಅದರಿಂದ ದೂರವಾಗಿಯೂ ಇರದ ಒಬ್ಬನೂ ಇರಲಾರನು. ಆದ್ದರಿಂದ ನಾನು ಒಂದು ಮಾತನ್ನು ಹೇಳಿದರೆ ಮತ್ತು ಒಂದು ತತ್ವವನ್ನು ಆವಿಷ್ಕಾರ ಮಾಡಿದ ನಂತರ ನಾನು ಹೇಳಿರುವುದು ಪ್ರವಾದಿ ﷺ ರಿಗೆ ವಿರುದ್ಧವಾದರೆ ಪ್ರವಾದಿ ﷺ ರು ಹೇಳಿರುವುದು ಮಾತ್ರವಾಗಿದೆ ಸತ್ಯ, ಮತ್ತು ಅದಾಗಿದೆ ನನ್ನ ಮದ್ಹಬ್.
(ಯಾವುದೇ ಅಡಚಣೆಯಿಲ್ಲದೇ ಇಮಾಮ್ ಶಫೀಈ (ರ) ಯವರಲ್ಲಿಗಿರುವ ಪ್ರಮಾಣದೊಂದಿಗೆ ಹಾಕಿಂ ರವರು ವರದಿ ಮಾಡಿದ್ದನ್ನು ಇಬ್ನು ಅಸಾಕೀರ್ (ರ) ರವರು ತನ್ನ ತಾರೀಖ್ ದಮಿಷ್ಕ್ 15:1-3, ಮತ್ತು ಇಹ್ಲಾಮುಲ್ ಮುವಾಕಿಯೀನ್ 2:364, 365

""""""""""""""""""""""

( ﺇﺫﺍ ﻭﺟﺪﺗﻢ ﻓﻲ ﻛﺘﺎﺑﻲ ﺧﻼﻑ ﺳﻨﺔ ﺭﺳﻮﻝ ﺍﻟﻠﻪ ﺻﻠﻰ ﺍﻟﻠﻪ ﻋﻠﻴﻪ
ﻭﺳﻠﻢ ﻓﻘﻮﻟﻮﺍ ﺑﺴﻨﺔ ﺭﺳﻮﻝ ﺍﻟﻠﻪ ﺻﻠﻰ ﺍﻟﻠﻪ ﻋﻠﻴﻪ ﻭﺳﻠﻢ ﻭﺩﻋﻮﺍ ﻣﺎ
ﻗﻠﺖ ‏) . ‏( ﻭﻓﻲ ﺭﻭﺍﻳﺔ ‏( ‏( /63 ﻓﺎﺗﺒﻌﻮﻫﺎ ﻭﻻ ﺗﻠﺘﻔﺘﻮﺍ ﺇﻟﻰ ﻗﻮﻝ
ﺃﺣﺪ ‏) . ‏( ﺍﻟﻨﻮﻭﻱ ﻓﻲ ﺍﻟﻤﺠﻣﻮﻉ 1

ಇಮಾಮ್ ಶಾಫಿಈ ( ರ ) ಹೇಳುತ್ತಾರೆ : ನನ್ನ ಗ್ರಂಥಗಳಿಂದ ಪ್ರವಾದಿ ﷺ ರ ಚರ್ಯೆಗೆ ವಿರುದ್ದವಾಗಿ ಯಾವುದೇ ವಿಷಯ ನಿಮಗೆ ತಲುಪಿದರೆ ಪ್ರವಾದಿ ﷺ ರ ಚರ್ಯೆಯನ್ನು ಪರಿಗಣಿಸಿ ಮಾತನಾಡಿ. ಮತ್ತು ನಾನು ಹೇಳಿರುವುದನ್ನು ಅವಗಣಿಸಿ.

""""""""""""""""""""""

( ﺃﺟﻤﻊ ﺍﻟﻤﺴﻠﻤﻮﻥ ﻋﻠﻰ ﺃﻥ ﻣﻦ ﺍﺳﺘﺒﺎﻥ ﻟﻪ ﺳﻨﺔ ﻋﻦ ﺭﺳﻮﻝ ﺍﻟﻠﻪ
ﺻﻠﻰ ﺍﻟﻠﻪ ﻋﻠﻴﻪ ‏( ﻭﺳﻠﻢ ﻟﻢ ﻳﺤﻞ ﻟﻪ ﺃﻥ ﻳﺪﻋﻬﺎ ﻟﻘﻮﻝ ﺃﺣﺪ ‏) .
‏( ﺍﻟﻔﻼﻧﻲ ﺹ 68

ಇಮಾಮ್ ಶಾಫಿಈ ( ರ ) ಹೇಳುತ್ತಾರೆ : ಪ್ರವಾದಿ ﷺ ರ ಚರ್ಯೆ (ಸುನ್ನತ್) ಧೃಡವಾದ ನಂತರ ಬೇರೆ ಯಾವುದೇ ವ್ಯಕ್ತಿಗಳ ಮಾತುಗಳಿಗಾಗಿ ಪ್ರವಾದಿ ﷺ ರ ಸುನ್ನತ್ತನ್ನು ಉಪೇಕ್ಷಿಸುವುದು ಧರ್ಮ ಸಮ್ಮತವಲ್ಲ ಎಂಬ  ವಿಷಯದಲ್ಲಿ ಮುಸ್ಲಿಮರೆಲ್ಲರೂ ಒಂದಾಗಿದ್ದಾರೆ.

14 Dec 2017

ಮಕ್ಕಾ ಮುಶ್ರಿಕರಿಗೆ ಅಲ್ಲಾಹನ ಮೇಲಿರುವ ವಿಶ್ವಾಸ. 

ಮಕ್ಕಾ ಮುಶ್ರಿಕರಿಗೆ ಅಲ್ಲಾಹನ ಮೇಲಿರುವ ವಿಶ್ವಾಸ.

هُوَ الَّذِي يُسَيِّرُكُمْ فِي الْبَرِّ وَالْبَحْرِ ۖ حَتَّىٰ إِذَا كُنْتُمْ فِي الْفُلْكِ وَجَرَيْنَ بِهِمْ بِرِيحٍ طَيِّبَةٍ وَفَرِحُوا بِهَا جَاءَتْهَا رِيحٌ عَاصِفٌ وَجَاءَهُمُ الْمَوْجُ مِنْ كُلِّ مَكَانٍ وَظَنُّوا أَنَّهُمْ أُحِيطَ بِهِمْ ۙ دَعَوُا اللَّهَ مُخْلِصِينَ لَهُ الدِّينَ لَئِنْ أَنْجَيْتَنَا مِنْ هَٰذِهِ لَنَكُونَنَّ مِنَ الشَّاكِرِينَ

ನೀವು ನೆಲದಲ್ಲಿ ಮತ್ತು ಸಮುದ್ರದಲ್ಲಿ ಸಂಚರಿಸುವಂತೆ ಮಾಡುವವನು ಅವನಾಗಿರುವನು. ಕೊನೆಗೆ ನೀವು ಹಡಗುಗಳಲ್ಲಿರುವಾಗ ಮತ್ತು ಉತ್ತಮವಾದ ಒಂದು ಮಾರುತದಿಂದಾಗಿ ಅವು ಯಾತ್ರಿಕರನ್ನು ಹೊತ್ತು ಚಲಿಸುತ್ತಿರುವಾಗ ಹಾಗೂ ಅದರಲ್ಲಿ ಅವರು ಸಂಭ್ರಮಪಡುತ್ತಿರುವಾಗ ಒಂದು ಭೀಕರ ಬಿರುಗಾಳಿಯು ಅದರೆಡೆಗೆ ಬೀಸಿತು. ಸರ್ವ ದಿಕ್ಕುಗಳಿಂದಲೂ ಅಲೆಗಳು ಅವರೆಡೆಗೆ ಅಪ್ಪಳಿಸಿದವು. ತಾವು ಆವರಿಸಲ್ಪಟ್ಟಿರುವೆವು ಎಂಬುದು ಅವರಿಗೆ ಖಾತ್ರಿಯಾದಾಗ ಶರಣಾಗತಿಯನ್ನು ಅಲ್ಲಾಹುವಿಗೆ ನಿಷ್ಕಳಂಕಗೊಳಿಸಿ ‘ನೀನು ನಮ್ಮನ್ನು ಇದ ರಿಂದ ಪಾರು ಮಾಡಿದರೆ ಖಂಡಿತವಾಗಿಯೂ ನಾವು ಕೃತಜ್ಞತೆ ಸಲ್ಲಿಸುವವರೊಂದಿಗೆ ಸೇರಿದವರಾಗುವೆವು’ ಎಂದು ಅವರು ಅವನೊಂದಿಗೆ ಪ್ರಾರ್ಥಿಸಿದರು.

 ... فَلَمَّا أَنْجَاهُمْ إِذَا هُمْ يَبْغُونَ فِي الْأَرْضِ بِغَيْرِ الْحَقِّ ۗ يَا أَيُّهَا النَّاسُ إِنَّمَا بَغْيُكُمْ عَلَىٰ أَنْفُسِكُمْ ۖ مَتَاعَ الْحَيَاةِ الدُّنْيَا ۖ ثُمَّ إِلَيْنَا مَرْجِعُكُمْ فَنُنَبِّئُكُمْ بِمَا كُنْتُمْ تَعْمَلُونَ

ತರುವಾಯ ಅವನು ಅವರನ್ನು ಪಾರು ಮಾಡಿ ದಾಗ ಅಗೋ ಅವರು ಅನ್ಯಾಯವಾಗಿ ಭೂಮಿಯಲ್ಲಿ ಅತಿಕ್ರಮವೆಸಗುವರು. ಓ ಮನುಷ್ಯರೇ! ನೀವು ಮಾಡು ತ್ತಿರುವ ಅತಿಕ್ರಮವು ಸ್ವತಃ ನಿಮ್ಮ ಮೇಲೆಯೇ ಆಗಿದೆ. (ನೀವು ತನ್ಮೂಲಕ ಪಡೆಯುತ್ತಿರುವುದು) ಐಹಿಕ ಸುಖವನ್ನು ಮಾತ್ರವಾಗಿದೆ. ತರುವಾಯ ನಿಮ್ಮ ಮರಳು ವಿಕೆಯು ನಮ್ಮೆಡೆಗಾಗಿರುವುದು. ಆಗ ನೀವು ಮಾಡಿಕೊಂಡಿ ರುವುದರ ಬಗ್ಗೆ ನಾವು ನಿಮಗೆ ತಿಳಿಸಿಕೊಡುವೆವು.

[ಯೂನುಸ್ : 22 - 23]

قُلْ مَنْ يَرْزُقُكُمْ مِنَ السَّمَاءِ وَالْأَرْضِ أَمَّنْ يَمْلِكُ السَّمْعَ وَالْأَبْصَارَ وَمَنْ يُخْرِجُ الْحَيَّ مِنَ الْمَيِّتِ وَيُخْرِجُ الْمَيِّتَ مِنَ الْحَيِّ وَمَنْ يُدَبِّرُ الْأَمْرَ ۚ فَسَيَقُولُونَ اللَّهُ ۚ فَقُلْ أَفَلَا تَتَّقُونَ

ಹೇಳಿರಿ: ‘ಆಕಾಶದಿಂದ ಮತ್ತು ಭೂಮಿಯಿಂದ ನಿಮಗೆ ಅನ್ನಾಧಾರವನ್ನು ಒದಗಿಸುವವನು ಯಾರು? ಶ್ರವಣವನ್ನೂ ದೃಷ್ಟಿಯನ್ನೂ ಅಧೀನದಲ್ಲಿರಿಸಿದವನು ಯಾರು? ನಿರ್ಜೀವಿಯಿಂದ ಜೀವಿಯನ್ನು ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರತರುವವನು ಯಾರು? ಕಾರ್ಯನಿಯಂತ್ರಣ ಮಾಡುವವನು ಯಾರು?’ ಅವರು ಹೇಳುವರು: ‘ಅಲ್ಲಾಹು’.[305] ಹೇಳಿರಿ: ‘ಆದರೂ ನೀವು ಭಯಭಕ್ತಿ ಪಾಲಿಸಲಾರಿರೇ?’

ಟಿಪ್ಪಣಿಗಳು :
[305] ಜಗತ್ತಿನಲ್ಲಿರುವ ಬಹುದೇವಾರಾಧಕರ ಪೈಕಿ ಹೆಚ್ಚಿನವರು ಏಕೈಕ ಜಗದೊಡೆಯನ ಪ್ರಭುತ್ವವನ್ನು ಅಂಗೀಕರಿಸುವವರಾಗಿದ್ದಾರೆ.

[ಯೂನುಸ್ : 31]

وَلَئِنْ سَأَلْتَهُمْ مَنْ خَلَقَ السَّمَاوَاتِ وَالْأَرْضَ وَسَخَّرَ الشَّمْسَ وَالْقَمَرَ لَيَقُولُنَّ اللَّهُ ۖ فَأَنَّىٰ يُؤْفَكُونَ

‘ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿ ದವನು ಮತ್ತು ಸೂರ್ಯ-ಚಂದ್ರರನ್ನು ಅಧೀನಪಡಿಸಿ ದವನು ಯಾರು?’ ಎಂದು ತಾವು ಅವರೊಂದಿಗೆ (ಬಹು ದೇವಾರಾಧಕರೊಂದಿಗೆ) ಪ್ರಶ್ನಿಸಿದರೆ ಅವರು ಖಂಡಿತ ವಾಗಿಯೂ ‘ಅಲ್ಲಾಹು’ ಎನ್ನುವರು. ಹಾಗಾದರೆ ಅವರು (ಸತ್ಯದಿಂದ) ತಪ್ಪಿಸಲ್ಪಡುತ್ತಿರುವುದಾದರೂ ಹೇಗೆ?

 ... اللَّهُ يَبْسُطُ الرِّزْقَ لِمَنْ يَشَاءُ مِنْ عِبَادِهِ وَيَقْدِرُ لَهُ ۚ إِنَّ اللَّهَ بِكُلِّ شَيْءٍ عَلِيمٌ

ಅಲ್ಲಾಹು ತನ್ನ ದಾಸರ ಪೈಕಿ ತಾನಿಚ್ಛಿಸುವವರಿಗೆ ಅನ್ನಾಧಾರವನ್ನು ವಿಶಾಲಗೊಳಿಸುವನು ಮತ್ತು ತಾನಿಚ್ಛಿ ಸುವವರಿಗೆ ಅದನ್ನು ಸಂಕುಚಿತಗೊಳಿಸುವನು. ಖಂಡಿತ ವಾಗಿಯೂ ಅಲ್ಲಾಹು ಸಕಲ ವಿಷಯಗಳ ಬಗ್ಗೆ ಅರಿವುಳ್ಳವನಾಗಿರುವನು.

 ... وَلَئِنْ سَأَلْتَهُمْ مَنْ نَزَّلَ مِنَ السَّمَاءِ مَاءً فَأَحْيَا بِهِ الْأَرْضَ مِنْ بَعْدِ مَوْتِهَا لَيَقُولُنَّ اللَّهُ ۚ قُلِ الْحَمْدُ لِلَّهِ ۚ بَلْ أَكْثَرُهُمْ لَا يَعْقِلُونَ

‘ಆಕಾಶದಿಂದ (ಮಳೆ)ನೀರನ್ನು ಸುರಿಸಿ ತನ್ಮೂಲಕ ನಿರ್ಜೀವವಾಗಿರುವ ಭೂಮಿಗೆ ಜೀವವನ್ನು ನೀಡಿದವನು ಯಾರು?’ ಎಂದು ತಾವು ಅವರೊಂದಿಗೆ ಕೇಳಿದರೆ ಅವರು ಖಂಡಿತವಾಗಿಯೂ ‘ಅಲ್ಲಾಹು’ ಎನ್ನುವರು. ಹೇಳಿರಿ: ‘ಅಲ್ಲಾಹುವಿಗೆ ಸ್ತುತಿ. ಆದರೆ ಅವರ ಪೈಕಿ ಹೆಚ್ಚಿನವರೂ ಆಲೋಚಿಸುವುದಿಲ್ಲ’.[784]

ಟಿಪ್ಪಣಿಗಳು :
[784] ಬಹುದೇವಾರಾಧಕರ ಪೈಕಿ ಹೆಚ್ಚಿನವರೂ ಎಲ್ಲ ಕಾಲಗಳಲ್ಲೂ ಸೃಷ್ಟಿಕರ್ತನು ಮತ್ತು ಪರಿಪಾಲಕನು ಏಕಮೇವ ಪ್ರಭುವಾಗಿರುವನು ಎಂಬ ವಿಶ್ವಾಸವನ್ನು ಹೊಂದಿದವರಾಗಿದ್ದರು. ಆದರೂ ಈ ವಿಶ್ವಾಸದ ಬೇಡಿಕೆಗೆ ವಿರುದ್ಧವಾಗಿ ಅವರು ಯಾವುದೇ ಅರ್ಹತೆಯಿಲ್ಲದವರನ್ನು ಆರಾಧಿಸುತ್ತಲೂ, ಪ್ರಾರ್ಥಿಸುತ್ತಲೂ ಇರುವರು.

[ಅಲ್-ಅನ್ಕಬೂತ್ : 61 - 63]

وَلَئِنْ سَأَلْتَهُمْ مَنْ خَلَقَ السَّمَاوَاتِ وَالْأَرْضَ لَيَقُولُنَّ اللَّهُ ۚ قُلِ الْحَمْدُ لِلَّهِ ۚ بَلْ أَكْثَرُهُمْ لَا يَعْلَمُونَ

‘ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು ಯಾರು?’ ಎಂದು ತಾವು ಅವರೊಂದಿಗೆ ಕೇಳಿದರೆ ಖಂಡಿತವಾಗಿಯೂ ಅವರು ‘ಅಲ್ಲಾಹು’ ಎನ್ನುವರು. ಹೇಳಿರಿ: ‘ಅಲ್ಲಾಹುವಿಗೆ ಸ್ತುತಿ’. ಆದರೆ ಅವರಲ್ಲಿ ಹೆಚ್ಚಿನವರೂ ಅರ್ಥಮಾಡಿಕೊಳ್ಳಲಾರರು.

[ಲುಕ್ಮಾನ್ : 25]

وَلَئِنْ سَأَلْتَهُمْ مَنْ خَلَقَ السَّمَاوَاتِ وَالْأَرْضَ لَيَقُولُنَّ خَلَقَهُنَّ الْعَزِيزُ الْعَلِيمُ

‘ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು ಯಾರು?’ ಎಂದು ತಾವು ಅವರೊಂದಿಗೆ ಕೇಳಿದರೆ ‘ಅವುಗಳನ್ನು ಸೃಷ್ಟಿಸಿದವನು ಪ್ರತಾಪಶಾಲಿಯೂ ಸರ್ವಜ್ಞನೂ ಆಗಿರುವವನು’ ಎಂದು ಖಂಡಿತವಾಗಿಯೂ ಅವರು ಹೇಳುವರು.

[ಅಝ್ಝುಖ್ರುಫ್ : 9]

وَلَئِنْ سَأَلْتَهُمْ مَنْ خَلَقَهُمْ لَيَقُولُنَّ اللَّهُ ۖ فَأَنَّىٰ يُؤْفَكُونَ

‘ಅವರನ್ನು ಸೃಷ್ಟಿಸಿದ್ದು ಯಾರು?’ ಎಂದು ತಾವು ಅವರೊಂದಿಗೆ ಕೇಳಿದರೆ ಖಂಡಿತವಾಗಿಯೂ ಅವರು ‘ಅಲ್ಲಾಹು’ ಎನ್ನುವರು. ಆದರೂ ಅವರು ತಪ್ಪಿಸಲ್ಪಡುತ್ತಿರುವುದು ಹೇಗೆ?

[ಅಝ್ಝುಖ್ರುಫ್ : 87]

وَلَئِنْ سَأَلْتَهُمْ مَنْ خَلَقَ السَّمَاوَاتِ وَالْأَرْضَ لَيَقُولُنَّ اللَّهُ ۚ قُلْ أَفَرَأَيْتُمْ مَا تَدْعُونَ مِنْ دُونِ اللَّهِ إِنْ أَرَادَنِيَ اللَّهُ بِضُرٍّ هَلْ هُنَّ كَاشِفَاتُ ضُرِّهِ أَوْ أَرَادَنِي بِرَحْمَةٍ هَلْ هُنَّ مُمْسِكَاتُ رَحْمَتِهِ ۚ قُلْ حَسْبِيَ اللَّهُ ۖ عَلَيْهِ يَتَوَكَّلُ الْمُتَوَكِّلُونَ

‘ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು ಯಾರು?’ ಎಂದು ತಾವು ಅವರೊಂದಿಗೆ ಕೇಳಿದರೆ ಖಂಡಿತವಾಗಿಯೂ ಅವರು ‘ಅಲ್ಲಾಹು’[935]ಎನ್ನುವರು. ಹೇಳಿರಿ: ‘ಹಾಗಾದರೆ ಅಲ್ಲಾಹುವಿನ ಹೊರತು ನೀವು ಕರೆದು ಪ್ರಾರ್ಥಿಸುತ್ತಿರುವವುಗಳ ಬಗ್ಗೆ ನೀವು ಆಲೋಚಿಸಿರುವಿರಾ? ಅಲ್ಲಾಹು ನನಗೆ ಏನಾದರೂ ಹಾನಿಯನ್ನು ಬಯಸಿದರೆ ಅವನ ಹಾನಿಯನ್ನು ನಿವಾರಿಸಲು ಅವುಗಳಿಗೆ ಸಾಧ್ಯವೇ? ಅಥವಾ ಅವನು ನನಗೆ ಏನಾದರೂ ಅನುಗ್ರಹವನ್ನು ನೀಡಲು ಬಯಸಿ ದರೆ ಅವನ ಅನುಗ್ರಹವನ್ನು ತಡೆಗಟ್ಟಲು ಅವುಗಳಿಗೆ ಸಾಧ್ಯವೇ?’ ಹೇಳಿರಿ: ‘ನನಗೆ ಅಲ್ಲಾಹು ಸಾಕು. ಭರವಸೆ ಯನ್ನಿಡುವವರು ಅವನ ಮೇಲೆಯೇ ಭರವಸೆಯನ್ನಿಡಲಿ’.

ಟಿಪ್ಪಣಿಗಳು :
[935] ಜಗತ್ತಿನಲ್ಲಿರುವ ಬಹುದೇವಾರಾಧಕರ ಪೈಕಿ ಹೆಚ್ಚಿನವರೂ ಸೃಷ್ಟಿಕರ್ತನ ಏಕತ್ವವನ್ನು ಅಂಗೀಕರಿಸುತ್ತಾರೆ. ಕುರ್‍ಆನ್ ಅವತೀರ್ಣ ಕಾಲದಲ್ಲಿ ಅರೇಬಿಯಾದಲ್ಲಿದ್ದ ಬಹುದೇವಾರಾಧಕರ ಸ್ಥಿತಿಯೂ ಇದ್ದಕ್ಕಿಂತ ಭಿನ್ನವಾಗಿರಲಿಲ್ಲ. ಸರ್ವಲೋಕಗಳ ಪರಿಪಾಲಕ ಎಂಬ ಸ್ಥಾನವನ್ನು ಅವರು ಅಲ್ಲಾಹುವಿನ ಹೊರತು ಇತರ ಯಾರಿಗೂ ನೀಡಿರಲಿಲ್ಲ. ಆದರೆ ಲಾಭವನ್ನು ತರುವ ಮತ್ತು ಹಾನಿಯನ್ನು ತಡೆಯುವ ಶಕ್ತಿಯಿರುವವರೆಂದು ಪರಿಕಲ್ಪಿಸಿ ಅವರು ಅನೇಕ ಆರಾಧ್ಯರನ್ನು ಆರಾಧಿಸುತ್ತಿದ್ದರು ಮತ್ತು ಅವರೊಂದಿಗೆ ಪ್ರಾರ್ಥಿಸುತ್ತಿದ್ದರು. ಅವರು ಮಾಡುತ್ತಿದ್ದ ಶಿರ್ಕ್ ಅಥವಾ ಬಹುದೇವಾರಾಧನೆಯು ಇದಾಗಿತ್ತು.

[ಅಝ್ಝುಮರ್ : 38]

كتاب الحج

The Book of Pilgrimage

Chapter: The Talbiyah, its description and timing

باب التَّلْبِيَةِ وَصِفَتِهَا وَوَقْتِهَا ‏

Ibn 'Abbas (Allah be pleased with them) reported that the polytheists also pronounced (Talbiya) as:

Here I am at Thy service, there is no associate with Thee. The Messenger of Allah (ﷺ) said: Woe be upon them, as they also said: But one associate with Thee, you possess mastery over him, but he does not possess mastery (over you). They used to say this and circumambulate the Ka'ba.

وَحَدَّثَنِي عَبَّاسُ بْنُ عَبْدِ الْعَظِيمِ الْعَنْبَرِيُّ، حَدَّثَنَا النَّضْرُ بْنُ مُحَمَّدٍ الْيَمَامِيُّ، حَدَّثَنَا عِكْرِمَةُ، - يَعْنِي ابْنَ عَمَّارٍ - حَدَّثَنَا أَبُو زُمَيْلٍ، عَنِ ابْنِ عَبَّاسٍ، - رضى الله عنهما - قَالَ كَانَ الْمُشْرِكُونَ يَقُولُونَ لَبَّيْكَ لاَ شَرِيكَ لَكَ - قَالَ - فَيَقُولُ رَسُولُ اللَّهِ صلى الله عليه وسلم ‏ "‏ وَيْلَكُمْ قَدْ قَدْ ‏"‏ ‏.‏ فَيَقُولُونَ إِلاَّ شَرِيكًا هُوَ لَكَ تَمْلِكُهُ وَمَا مَلَكَ ‏.‏ يَقُولُونَ هَذَا وَهُمْ يَطُوفُونَ بِالْبَيْتِ ‏.‏

Reference : Sahih Muslim 1185In-book reference : Book 15, Hadith 25USC-MSA web (English) reference : Book 7, Hadith 2671

1 Dec 2017

ಪ್ರವಾದಿ ಜನ್ಮ ದಿನಾಚರಣೆಯ ಅಸಲಿಯತ್ತು.

ಪ್ರವಾದಿ ಜನ್ಮ ದಿನಾಚರಣೆಯ ಅಸಲಿಯತ್ತು.

ಫತ್ಹುಲ್ ಮುಈನ್ ನ ವ್ಯಾಖ್ಯಾನ ಗ್ರಂಥವಾದ ಇಆನತು ತ್ವಾಲಿಬ್ ನಲ್ಲಿ ಇಮಾಮ್ ಸಖಾವಿ ಹೇಳುತ್ತಾರೆ: ಖಂಡಿತವಾಗಿಯೂ ಈ ಮೌಲಿದ್ ಆಚರಿಸುವ ಸಂಪ್ರದಾಯವು ಹಿಜ್ರಾ ಮೂರನೇ ಶತಮಾನದ ನಂತರ ನೂತನ ಆಚಾರವಾಗಿದೆ.

ರಾಜರುಗಳಿಂದ ಮೊದಲನೆಯದಾಗಿ ಮೌಲಿದ್ ಸಂಪ್ರದಾಯವು ಶುರುವಾಗಿರುವುದು ಫಾತಿಮಿಯ್ಯಾ (ಶಿಯಾ)ಗಳ ಆಡಳಿತ ಕಾಲದ ರಾಜನಾದ ಅಬೂ ಸಈದ್ ಎಂಬ ಹೆಸರಿನಿಂದ ಕರೆಯಲ್ಪಡುವ ಮುಝಫ್ಫರ್ ರಾಜನಾಗಿದ್ದಾನೆ. ಈತ ಹಿರ್ಬಲ್ ರಾಜ್ಯದ ಆಡಳಿತಾಧಿಕಾರಿಯಾಗಿದ್ದ. ಈತನ ಕಾಲದಲ್ಲಿ ಹಾಫಿಲ್ ಇಬ್ನು ದಹಿಯತ್ ಎಂಬ ಹೆಸರಿನಲ್ಲಿ ಒಂದು ಮೌಲಿದ್ ಗ್ರಂಥವನ್ನು ರಚಿಸಿ ಕೊಡಲಾಯಿತು. ಅದಕ್ಕೆ ರಾಜನು ಸಾವಿರ ದೀನಾರನ್ನು ಬಹುಮಾನವಾಗಿ ನೀಡಿದನು.

(ಇಆನತು ತ್ವಾಲಿಬೀನ್ 3/365, 366)

قال امام فكان: لا اعلم لهذا الميلاد أصل في كتاب ولا سنة، ولا ينقل عمله عن أحد من علماء الأمة، الذين هم القدوة في الدين، المتمسكون بآثار المتقدمين، بل هو بِدعة احدث البنطلون و شهوة نفس يعتنا به الأكوان

ಇಮಾಮ್ ಫಾಕಿಹಾನಿ (ರ) ಹೇಳುತ್ತಾರೆ: ಈ ಮೌಲಿದ್ ಆಚರಣೆಯ ಕುರಿತು ಕುರ್'ಆನಿನಲ್ಲಾಗಲೀ ಸುನ್ನತ್ ನಲ್ಲಾಗಲೀ ಯಾವುದೇ ಒಂದು ವಿಷಯವೂ ನಾನು ನೋಡಿಲ್ಲ. ಪೂರ್ವಿಕರ ಚರ್ಯೆಯನ್ನು ಅನುಸರಿಸಿದ ಒಬ್ಬನಿಂದಲೂ ಈ ರೀತಿಯ ಸಂಪ್ರದಾಯ ಉಂಟಾಗಿಲ್ಲ. ಈ ಅನಾಚಾರವು ಕೆಲವು ನೂತನವಾದಿಗಳಾದ ಹೊಟ್ಟೆಬಾಕರು ಹೊಸತಾಗಿ ನಿರ್ಮಿಸಿದ್ದಾಗಿದೆ.

عَنْ عَبْدِ اللَّهِ بن مسعود رَضِيَ اللَّهُ عَنْهُ، عَنِ النَّبِيِّ صَلَّى اللهُ عَلَيْهِ وَسَلَّمَ قَالَ: خَيْرُ النَّاسِ قَرْنِي، ثُمَّ الَّذِينَ يَلُونَهُمْ،

ಪ್ರವಾದಿ ರು ಹೇಳಿದರು: ಆತ್ಯಂತ ಉತ್ತಮರಾದ ಜನರು ನನ್ನೊಂದಿಗೆ ಜೀವಿಸಿದವರಾಗಿದ್ದಾರೆ. ಮತ್ತು ನಂತರದ ಶತಮಾನದವರು ಮತ್ತು ಅದರ ನಂತರದ ಶತಮಾನದವರು.

ಇವರು ಯಾರೂ ಪ್ರವಾದಿ ಜನ್ಮ ದಿನಾಚರಣೆ ಮಾಡಿಲ್ಲ.

قوله صلى الله عليه وسلم : من أحدث في أمرنا هذا ما ليس منه فهو رد

وفي الرواية الثانية : من عمل عملا ليس عليه أمرنا فهو رد

ಪ್ರವಾದಿ ರು ಹೇಳುತ್ತಾರೆ: ಈ ಧರ್ಮದಲ್ಲಿ ನನ್ನ ಕಲ್ಪನೆ ಇಲ್ಲದೆ ಯಾವುದಾದರೂ ಒಂದು ಕರ್ಮವನ್ನು ಯಾರಾದರೂ ಹೊಸದಾಗಿ ನಿರ್ಮಿಸಿದರೆ ಅದು ತಿರಸ್ಕೃತವಾಗಿದೆ.
(ನನ್ನ ಕಾಲದಲ್ಲಿಲ್ಲದ ಯಾವುದಾದರೂಂದು ಕರ್ಮವನ್ನು ನಂತರ ಹೊಸದಾಗಿ ನಿರ್ಮಿಸಿದರೆ ಅದು ತಿರಸ್ಕೃತವಾಗಿದೆ.

26 Jun 2017

ಈದ್ ಉಲ್ ಫಿತ್ರ್ ಹಬ್ಬದ ಶಿಷ್ಟಾಚಾರಗಳು...

ಈದ್ ಉಲ್ ಫಿತ್ರ್ ಹಬ್ಬದ ಶಿಷ್ಟಾಚಾರಗಳು...

ಅಬ್ದುಲ್ಲಾ ತಾಹಿರ್ ಫಲಾಹಿ
ಇಸ್ಲಾಮೀ ಯುನಿವರ್ಸಿಟಿ, ಮದೀನಾ
ಒಳಿತಿನ ಕಾರ್ಯಗಳಲ್ಲಿ ಪರಸ್ಪರ ಪೈಪೋಟಿ ನಡೆಸಲಾಗು ವಂತಹ, ಮನಸ್ಸು ಒಳಿತಿನ ಕಡೆಗೆ ವಾಲಿಕೊಂಡಿರುವಂತಹ, ಎಲ್ಲ ಒಳಿತುಗಳ ಮೇಲೆ ಪ್ರೀತಿ ಮತ್ತು  ಕೆಡುಕುಗಳ ಮೇಲೆ ದ್ವೇಷ ಉಕ್ಕುವಂತಹ, ಪಾಪಗಳ ಆಟಾಟೋಪ ತಣ್ಣಗಾಗಿರು ವಂತಹ ಹಾಗೂ ಸತ್ಕರ್ಮಗಳೇ ಮೇಳೈಸಿರುವಂತಹ ಪರಿಶುದ್ಧ ಮಾಸಕ್ಕೆ  ನಾವು ವಿದಾಯ ಕೋರುತ್ತಿದ್ದೇವೆ. ಈ ಮಾಸದಿಂದ ಸಾದ್ಯಂತ ಪ್ರಯೋಜನ ಪಡೆದ ಮತ್ತು ಇದರ ಸಮೃದ್ಧಿಗಳನ್ನು ತನ್ನ ಬಾಹುಗಳ ತುಂಬಾ ಬಾಚಿ  ಪಡಕೊಂಡವನು ಅತ್ಯಂತ ಅದೃಷ್ಟವಂತನು. ಹಾಗೆಯೇ ಈ ಅಮೂಲ್ಯ ಅವಕಾಶವನ್ನು ಕಳೆದುಕೊಂಡ ಮತ್ತು ಕೇವಲ ತನ್ನ ವಿಶ್ವಾಸದ ದೌರ್ಬಲ್ಯ, ಆಲಸ್ಯ  ಮತ್ತು ಅತ್ಯಾಸೆಯಿಂದಾಗಿ ಈ ಮಾಸದ ಪ್ರಯೋಜನ ಪಡೆಯುವಲ್ಲಿ ವಿಫಲನಾದವನು ಎಂತಹ ಹತಭಾಗಿ! ಪ್ರವಾದಿ ವರ್ಯರು(ಸ) ಹೀಗೆಂದಿರುವರು, “ನನ್ನ  ಬಳಿಗೆ ಜಿಬ್ರೀಲ್(ಅ) ಬಂದು ‘ಯಾರಿಗೆ ರಮಝಾನ್ ತಿಂಗಳು ದೊರೆತೂ ತನ್ನ ಪಾಪ ವಿಮೋಚನೆಗೆ ಪ್ರಯತ್ನಿಸದವನು ನಾಶವಾಗಲಿ’ ಎಂದಾಗ ನಾನು  ಅದಕ್ಕೆ ‘ಆಮೀನ್’ ಹೇಳಿದೆ (ಅಂದರೆ ಓ ಅಲ್ಲಾಹ್ ಈ ಪ್ರಾರ್ಥನೆಯನ್ನು ಸ್ವೀಕರಿಸು)” [ಅಲ್ ಅದಬುಲ್ ಮುಫರ್ರಿದ್ ಲಿಲ್ ಬುಖಾರಿ(ರ): 644, ಸಹೀಹ್]

ಈದ್ ಎಂಬುದು ಸಂತೋಷ ಆಚರಿಸುವ ಸುಸಂದರ್ಭ ವಾಗಿದೆ. ಜಗತ್ತಿನಲ್ಲಿ ಸತ್ಯವಿಶ್ವಾಸಿಗಳಿಗೆ ಎರಡು ರೀತಿಯ ಸಂತೋಷಗಳಿರುವುದು. ಒಂದು ತನ್ನ  ಪ್ರಭುವಿನ ಅನುಸರಣೆಯ ಅವಕಾಶ ದೊರೆತಿರುವುದು, ಇನ್ನೊಂದು ಅದರ ಫಲವಾಗಿ ಪ್ರತಿಫಲದ ವಾಗ್ದಾನ ದೊರೆತಿರುವುದು ಆಗಿರುತ್ತದೆ. “ಓ ಪೈಗಂಬರರೇ,  (ಹೀಗೆ) ಹೇಳಿರಿ: ಇದನ್ನು (ಕುರ್‍ಆನನ್ನು) ಅವತೀರ್ಣಗೊಳಿಸಿದುದು ಅಲ್ಲಾಹನ ಅನುಗ್ರಹ ಮತ್ತು ಕೃಪೆಯಾಗಿರುತ್ತದೆ. ಇದಕ್ಕಾಗಿ ಜನರು  ಸಂತೋಷಪಡಬೇಕು. ಜನರು ಶೇಖರಿಸುತ್ತಿರುವ ಎಲ್ಲ ವಸ್ತುಗಳಿಗಿಂತಲೂ ಇದು ಉತ್ತಮವಾಗಿದೆ.” (ಪವಿತ್ರ ಕುರ್‍ಆನ್: 10: 58)

ಖಂಡಿತವಾಗಿಯೂ ಈದ್‍ನ ದಿನವು ಕೃತಜ್ಞತೆ ಮತ್ತು ಸಂತೋಷ ಪ್ರಕಟನೆಯ ದಿನವಾಗಿದೆ. ಆದರೆ ಈದ್ ಕೇವಲ ಹೊಸ ವಸ್ತ್ರ ಧರಿಸುವ ಮತ್ತು ತನ್ನ  ಪ್ರತಿಷ್ಠೆಯನ್ನು ಮೆರೆಯು ವುದರ ಹೆಸರಲ್ಲ. ಈದ್‍ಗೂ ಕೆಲವು ಶಿಷ್ಟಾಚಾರಗಳಿರುತ್ತವೆ. ಈಗ ನಾವು ಈದುಲ್ ಫಿತ್ರ್‍ನ ನಿರೀಕ್ಷೆಯಲ್ಲಿರುವ ಈ ಸಂದರ್ಭದಲ್ಲಿ,  ಈದ್‍ನ ಆದೇಶ-ಸಿದ್ಧಾಂತಗಳು ಮತ್ತು ಅದರ ಶಿಷ್ಟಾಚಾರ-ಸುನ್ನತ್‍ಗಳ ಕುರಿತು ಚರ್ಚಿಸುವುದು, ಶರೀಅತ್‍ಗೆ ವಿರುದ್ಧವಾದ ಸಂಗತಿಗಳು ಹಾಗೂ  ನವೀನಾಚಾರ(ಬಿದ್‍ಅತ್)ಗಳ ಕುರಿತು ಎಚ್ಚರಿಸುವುದು ಅಗತ್ಯವೆಂದು ತಲೆದೋರುತ್ತಿದೆ.
ಈದ್‍ನ ಶಿಷ್ಟಾಚಾರಗಳು:
1. ಈದ್‍ನಂದು ತಕ್ಬೀರ್ ಹೇಳುವುದು: ಈದ್‍ನ ರಾತ್ರಿ ಸೂರ್ಯಾಸ್ತದ ಬಳಿಕದಿಂದ ಫಜ್ರ್ ನಮಾಝ್‍ನ ವರೆಗೆ ತಕ್ಬೀರ್ ಹೇಳುವುದು ಸುನ್ನತ್ ಆಗಿದೆ.  ಅಲ್ಲಾಹ್ ಹೇಳುತ್ತಾನೆ, “ನೀವು ಉಪವಾಸದ ಸಂಖ್ಯೆಯನ್ನು ಪೂರ್ತಿ ಗೊಳಿಸಲು ಅನುಕೂಲವಾಗುವಂತೆಯೂ ಸನ್ಮಾರ್ಗದರ್ಶನದ ಮೂಲಕ ನಿಮ್ಮನ್ನು  ಪ್ರತಿಷ್ಠಿತ ಗೊಳಿಸಿದ ಅಲ್ಲಾಹನ ಮಹಿಮೆಯನ್ನು ಕೊಂಡಾ ಡುತ್ತಾ ಅವನಿಗೆ ಕೃತಜ್ಞರಾಗಿರಲಿ ಕ್ಕಾಗಿಯೂ ಈ ವಿಧಾನವನ್ನು ತೋರಿಸಿ ಕೊಡಲಾಗಿದೆ.”
(ಪವಿತ್ರ ಕುರ್‍ಆನ್: 2: 185)

ಪುರುಷರು ಮಾರುಕಟ್ಟೆ, ಮನೆ, ದಾರಿ, ಮಸೀದಿ ಮತ್ತು ಸಾಮಾನ್ಯ ಸಭೆಗಳಲ್ಲಿ ಉಚ್ಚ ಸ್ವರದಲ್ಲಿ ತಕ್ಬೀರ್ ಹೇಳುವುದು ಮೆಚ್ಚುಗೆಯ ಕಾರ್ಯವಾಗಿದೆ. ಈ  ಪ್ರಕಾರ ಪ್ರವಾದಿಚರ್ಯೆ ಯನ್ನು ಅನುಸರಿಸಿದಂತೆಯೂ ಆಗುತ್ತದೆ ಮತ್ತು ಸಲಫುಸ್ಸಾಲಿಹೀನ್‍ಗಳ ವಿಧಾನವನ್ನು ಜೀವಂತ ಇರಿಸಿದಂತೆಯೂ ಆಗುತ್ತದೆ. ಅದೇ  ವೇಳೆ ಮಹಿಳೆಯರು ತಮ್ಮ ಸಭೆಯಲ್ಲಿ ಉಚ್ಚ ಸ್ವರದಲ್ಲಿಯೂ ಪರಿಸರದಲ್ಲಿ ಅಪರಿಚಿತ ಪುರುಷರಿದ್ದರೆ ಮೆಲುದನಿಯಲ್ಲೂ ತಕ್ಬೀರ್ ಹೇಳಬೇಕು. ಮೂಲ  ಆದೇಶವು ಎಲ್ಲರೂ ಉಚ್ಚ ಸ್ವರದಲ್ಲಿ ತಕ್ಬೀರ್ ಹೇಳುವುದಾಗಿದೆ. ಈ ಮೂಲಕ ಅಲ್ಲಾಹನ ಮಹಾನತೆಯನ್ನು ಬಹಿರಂಗವಾಗಿ ಘೋಷಿಸುವಂತಾಗಬೇಕು  ಮತ್ತು ತಮ್ಮ ಜೀವನ ಹಾಗೂ ದೇವದಾಸ್ಯತನವನ್ನು ಸುವ್ಯಕ್ತವಾಗಿ ಪ್ರಕಟಿಸುವಂತಾಗಬೇಕು; ಅಂತೆಯೇ ಉಪವಾಸ ಮತ್ತು ತರಾವೀಹ್‍ಗಳ ರೂಪದಲ್ಲಿ  ಅಲ್ಲಾಹನು ದಯಪಾಲಿಸಿರುವ ಅನುಗ್ರಹಗಳಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುವಂತಾಗಬೇಕು ಎಂಬುದೇ ಇದರ ಉದ್ದೇಶವಾಗಿದೆ.

ಇಮಾನ್ ಝಹ್ರೀ(ರ) ಹೇಳುತ್ತಾರೆ, “ಪ್ರವಾದಿವರ್ಯರು(ಸ) ಈದುಲ್ ಫಿತ್ರ್‍ನಂದು ಮನೆಯಿಂದ ತಕ್ಬೀರ್ ಹೇಳುತ್ತಾ ಹೊರಡುತ್ತಿದ್ದರು ಮತ್ತು ಈದ್‍ಗಾಹ್  ತಲುಪಿದ ಮೇಲೆ ನಮಾಝ್ ನಿರ್ವಹಿಸುತ್ತಿದ್ದರು. ನಮಾಝ್‍ನ ಬಳಿಕ ಅವರು(ಸ) ತಕ್ಬೀರ್ ಹೇಳುವುದನ್ನು ನಿಲ್ಲಿಸುತ್ತಿದ್ದರು.” [ಮುಸನ್ನಫ್ ಇಬ್ನು ಅಬೀ  ಶೈಬಾ(ರ): 5621, ಸಹೀಹುಲ್ ಬಾಕೀ(ರ)]
ಈ ಹದೀಸ್‍ನಿಂದ ತಿಳಿದು ಬರುವಂತೆ, ದಾರಿಗಳಲ್ಲಿ ಉಚ್ಚ ಸ್ವರದಲ್ಲಿ ತಕ್ಬೀರ್ ಹೇಳುತ್ತಾ ಈದ್‍ಗಾಹ್ ಹೋಗುವುದು ಸುನ್ನತ್ ಆಗಿದೆ. ಆದರೆ  ದುರದೃಷ್ಟವಶಾತ್ ಇಂದು ಜನರು ಈ ಸುನ್ನತನ್ನು ಮರೆತು ಬಿಟ್ಟಿದ್ದಾರೆ. ಈ ವರ್ತನೆಯನ್ನು ಸುಧಾರಿಸುತ್ತಾ ಉಚ್ಚ ಸ್ವರದಲ್ಲಿ ತಕ್ಬೀರ್ ಹೇಳುವ ಪರಿಪಾಠವನ್ನು  ಬೆಳೆಸುವ ಅಗತ್ಯವಿದೆ.

ಇನ್ನು ಎಲ್ಲರೂ ಏಕಕಾಲದಲ್ಲಿ ತಕ್ಬೀರ್ ಮೊಳಗಿಸುತ್ತಿರಬೇಕು ಎಂಬ ಅಗತ್ಯವೇನೂ ಇಲ್ಲ. ಆದರೆ ಈ ತಕ್ಬೀರ್ ಮತ್ತು ತಹ್ಮೀದ್‍ನ ಉದ್ದೇಶವನ್ನು ತಮ್ಮ  ದೃಷ್ಟಿಗಳ ಮುಂದೆ ಇರಿಸಬೇಕು ಮತ್ತು ಪ್ರವಾದಿ ವರ್ಯರು(ಸ) ಉಚ್ಚರಿಸುತ್ತಿದ್ದ ರೀತಿಯಲ್ಲಿಯೇ ತಕ್ಬೀರ್ ಹೇಳಬೇಕು ಮತ್ತು ಅದರಲ್ಲಿ ಯಾವುದೇ ಹೆಚ್ಚು  ಕಮ್ಮಿ ಮಾಡಬಾರದು. ಅಬ್ದುಲ್ಲಾ ಇಬ್ನು ಮಸ್‍ಊದ್‍ರವರ(ರ) ಕುರಿತು ಹೀಗೆ ಹೇಳಲಾಗುತ್ತದೆ- ಅವರು ಈ ಪದಗಳಲ್ಲಿ ತಕ್ಬೀರ್ ಹೇಳುತ್ತಿದ್ದರು, “ಅಲ್ಲಾಹು  ಅಕ್ಬರ್, ಅಲ್ಲಾಹು ಅಕ್ಬರ್; ಲಾ ಇಲಾಹ ಇಲ್ಲಲ್ಲಾಹು, ವಲ್ಲಾಹು ಅಕ್ಬರ್; ಅಲ್ಲಾಹು ಅಕ್ಬರ್, ವಲಿಲ್ಲಾಹಿಲ್ ಹಮ್ದ್” [ಮುಸನ್ನಫ್ ಇಬ್ನು ಅಬೀ ಶೈಬಾ(ರ):  5697, ಸಹೀಹ್]

ಅಂತೆಯೇ ಅಬ್ದುಲ್ಲಾ ಬಿನ್ ಅಬ್ಬಾಸ್‍ರ(ರ) ಕುರಿತು ಹೀಗೆ ಹೇಳಲಾಗುತ್ತದೆ- ಅವರು ಈ ಪದಗಳೊಂದಿಗೆ ತಕ್ಬೀರ್ ಹೇಳುತ್ತಿದ್ದರು, “ಅಲ್ಲಾಹು ಅಕ್ಬರ್,  ಅಲ್ಲಾಹು ಅಕ್ಬರು, ಅಲ್ಲಾಹು ಅಕ್ಬರು, ವಲಿಲ್ಲಾಹಿಲ್ ಹಮ್ದ್, ಅಲ್ಲಾಹು ಅಕ್ಬರ್ ವ ಅಜಲ್ಲು, ವಲ್ಲಾಹು ಅಕ್ಬರ್ ಅಲಾ ಮಾ ಹದಾನಾ” [ಅಸ್ಸುನನಿಲ್ ಕಿಬ್ರೀ  ಲಿಲ್ ಬೈಹಕೀ(ರ): 6074, ಸಹೀಹ್] ಹಾಗಾಗಿ ಈ ಎರಡು ವಿಧಾನಗಳ ಪೈಕಿ ಯಾವುದನ್ನೂ ಆಯ್ದುಕೊಳ್ಳಬಹುದು.

2. ಈದ್‍ಗಾಹ್‍ಗೆ ಹೋಗುವುದಕ್ಕೆ ಮುಂಚೆ ಏನನ್ನಾದರೂ ಸೇವಿಸುವುದು: ಅನಸ್(ರ) ಹೇಳುತ್ತಾರೆ, “ಪ್ರವಾದಿವರ್ಯರು(ಸ) ಈದುಲ್ ಫಿತ್ರ್‍ನಂದು  ಖರ್ಜೂರಗಳನ್ನು ಸೇವಿಸದೆ ಈದ್‍ಗಾಹ್‍ಗೆ ತೆರಳುತ್ತಿರಲಿಲ್ಲ ಮತ್ತು ಅವರು ಬೆಸ ಸಂಖ್ಯೆಯಲ್ಲಿ ಖರ್ಜೂರ ಗಳನ್ನು ತಿನ್ನುತ್ತಿದ್ದರು.” [ಬುಖಾರಿ: 953]

ಬುರೈದಾ(ರ) ಹೇಳುತ್ತಾರೆ, “ಅಲ್ಲಾಹನ ಸಂದೇಶವಾಹಕರು(ಸ) ಈದುಲ್ ಫಿತ್ರ್‍ನಂದು ಏನನ್ನಾದರೂ ಸೇವಿಸದೆ ಈದ್‍ಗಾಹ್‍ಗೆ ಹೊರಡುತ್ತಿರಲಿಲ್ಲ ಮತ್ತು  ಈದುಲ್ ಅಝ್ಹಾದಂದು ಈದ್ ನಮಾಝ್ ಮುಗಿಸುವ ವರೆಗೂ ಏನನ್ನೂ ಸೇವಿಸುತ್ತಿರಲಿಲ್ಲ.” [ಸುನನ್ ತಿರ್ಮಿದಿ(ರ): 542, ತಸ್ಹೀಹುಲ್ ಬಾಕೀ(ರ)]

3. ಈದ್ ನಮಾಝ್‍ಗಾಗಿ ಶೃಂಗರಿಸುವುದು: ಈದ್‍ನಂದು ಸುಂದರವಾಗಿ ಕಾಣುವುದು, ಅತ್ಯುತ್ತಮ ವಸ್ತ್ರ ಧರಿಸುವುದು, ಅತ್ಯುತ್ತಮ ಸುಗಂಧ ದ್ರವ್ಯವನ್ನು  ಬಳಸುವುದು ಈದ್‍ನ ಐಚ್ಛಿಕ ಕಾರ್ಯ ಮತ್ತು ಶಿಷ್ಟಾಚಾರವಾಗಿದೆ. ಈ ಮೂಲಕ ದಾಸನ ಮೇಲೆ ಇರುವ ಅಲ್ಲಾಹನ ಅನಗ್ರಹಗಳ ಪ್ರಕಟನೆ ಯಾಗುತ್ತದೆ.  ಇದನ್ನು ಅಲ್ಲಾಹ್ ಇಷ್ಟ ಪಡುತ್ತಾನೆ. ಅಲ್ಲಾಹನ ಸಂದೇಶವಾಹಕರು(ಸ) ಹೀಗೆಂದಿದ್ದಾರೆ, “ಅಲ್ಲಾಹನು ತನ್ನ ದಾಸರ ಮೇಲೆ ತನ್ನ ಅನುಗ್ರಹಗಳು  ಪ್ರಕಟವಾಗುವುದನ್ನು ಇಷ್ಟಪಡುತ್ತಾನೆ.” [ಸುನನ್ ಅಬೂದಾವೂದ್(ರ): 4065, ಸುನನ್ ನಸಾಯೀ(ರ): 5224]
ಅಬ್ದುಲ್ಲಾ ಬಿನ್ ಅಬ್ಬಾಸ್(ರ) ಹೇಳುತ್ತಾರೆ, “ಪ್ರವಾದಿ ವರ್ಯರು(ಸ) ಈದ್‍ನಂದು ಕೆಂಪು ಬಣ್ಣದ ಜುಬ್ಬಾ ಧರಿಸು ತ್ತಿದ್ದರು.” [ತಬ್ರಾನೀ(ರ): 7609]

ಇಮಾಮ್ ಬುಖಾರಿಯವರು(ರ) ಈದ್‍ಗೆ ಸಂಬಂಧಿಸಿ ‘ಬಾಬು ಫಿಲ್ ಈದೈನಿ ವಲ್ ತಜ್ಮಲ್ ಫೀಹಾ’ ಎಂಬ ಒಂದು ಅಧ್ಯಾಯವನ್ನೇ ರಚಿಸಿದ್ದಾರೆ.  ಅದರಲ್ಲಿ ಉದ್ಧರಿಸಿರುವ ಹದೀಸ್‍ಗಳಿಂದ ತಿಳಿದು ಬರುವಂತೆ ಪ್ರವಾದಿವರ್ಯರು(ಸ) ಈದ್‍ನಂದು ಶೃಂಗರಿಸುವುದನ್ನು ನಿಷೇಧಿಸಿರಲಿಲ್ಲ. [ಸಹೀಹ್  ಬುಖಾರಿ(ರ): 948]

ನಾಫಿಅï(ರ) ಹೇಳುತ್ತಾರೆ, “ಅಬ್ದುಲ್ಲಾ ಬಿನ್ ಉಮರ್(ರ) ಈದ್‍ನಂದು ಈದ್‍ಗಾಹ್‍ಗೆ ಹೋಗುವುದಕ್ಕೆ ಮುಂಚೆ ಸ್ನಾನ ಮಾಡುತ್ತಿದ್ದರು.” [ಮೂಅತ್ತಾ  ಇಮಾಮ್ ಮಾಲಿಕ್(ರ): 426]
ಇನ್ನೊಂದು ವರದಿಯಲ್ಲಿ ಈ ಹೆಚ್ಚುವರಿ ಪದಗಳಿವೆ, “ಅವರು(ರ) ಇಮಾಮರೊಂದಿಗೆ ಫಜ್ರ್ ನಮಾಝ್ ನಿರ್ವಹಿ ಸುತ್ತಿದ್ದರು, ಬಳಿಕ ಮನೆಗೆ ಮರಳುತ್ತಿದ್ದರು  ಮತ್ತು ಸ್ನಾನ ಮಾಡುತ್ತಿದ್ದರು ಮತ್ತು ಉತ್ತಮ ವಸ್ತ್ರವನ್ನು ಆಯ್ದು ಧರಿಸು ತ್ತಿದ್ದರು. ಬಳಿಕ ಅತ್ಯುತ್ತಮ ಸುಗಂಧವನ್ನು ಹಚ್ಚುತ್ತಿದ್ದರು. ಆನಂತರ ಈದ್‍ಗಾಹ್‍ಗೆ  ತೆರಳುತ್ತಿದ್ದರು.”
[ಮುಸ್ನದುಲ್ ಹಾರಿಸ್(ರ): 206]

ಅಲ್ಲಾಮಾ ಇಬ್ನು ಕುದಾಮಾ(ರ) ಹೇಳುತ್ತಾರೆ, “ಈದ್‍ನಂದು ಸ್ನಾನ ಮಾಡುವುದು ಮೆಚ್ಚುಗೆಯ ಕಾರ್ಯವಾಗಿದೆ. ಅಬ್ದುಲ್ಲಾ ಬಿನ್ ಉಮರ್(ರ) ಈದುಲ್  ಫಿತ್ರ್‍ನಂದು ಸ್ನಾನ ಮಾಡುತ್ತಿದ್ದರು. ಈ ಕಾರ್ಯವು ಅಲೀಯವರಿಂದಲೂ(ರ) ಉದ್ಧರಿಸಲ್ಪಟ್ಟಿದೆ.”
[ಅಲ್ ಮುಗ್ನೀ: 3/256-257]

4. ಈದ್‍ಗಳಲ್ಲಿ ನಮಾಝ್‍ನ ಆದೇಶ: ಈದ್‍ಗಳಲ್ಲಿ ನಮಾಝ್ ಮಾಡುವುದು ವಾಜಿಬುಲ್ ಐನ್ (ಪ್ರತಿಯೋರ್ವನ ಮೇಲೂ ವಾಜಿಬ್) ಆಗಿದೆ.  ಪ್ರವಾದಿವರ್ಯರು(ಸ) ಅದಕ್ಕಾಗಿ ಹೊರಡ ಬೇಕೆಂದು ಜನರಿಗೆ ಆದೇಶಿಸಿದ್ದಾರೆ. ಎಲ್ಲಿಯ ವರೆಗೆಂದರೆ, ಅವರು(ಸ) ಹದಿಹರೆಯದ ಯುವತಿಯರಿಗೂ  ಪರ್ದಾಧಾರಿ ಮಹಿಳೆಯರಿಗೂ ಈದ್‍ಗಾಹ್‍ಗೆ ಬರಲು ಆದೇಶಿಸುತ್ತಿದ್ದರು. ಉಮ್ಮು ಅತಿಯ್ಯ(ರ) ಹೇಳುತ್ತಾರೆ, “ಈದುಲ್ ಫಿತ್ರ್ ಮತ್ತು ಈದುಲ್  ಅಝ್ಹಾದಂದು ಯುವತಿಯರನ್ನು, ಋತುಮತಿಯರನ್ನು ಮತ್ತು ಪರ್ದಾಧಾರಿ ಮಹಿಳೆಯರನ್ನು ಈದ್‍ಗಾಹ್‍ಗೆ ಕರೆ ತನ್ನಿ. ಆದರೆ ಋತುಮತಿಯರು  ನಮಾಝ್ ನಿರ್ವಹಿಸಬಾರದು. ಬದಲಾಗಿ, ಮುಸ್ಲಿಮರ ಜತೆ ಒಳಿತಿನ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳ ಬೇಕು” ಎಂದು ನಮಗೆ ಆದೇಶಿಸಿದರು. ನಾನು ಅರುಹಿದೆ,  “ಅಲ್ಲಾಹನ ಸಂದೇಶ ವಾಹಕರೇ(ಸ)! ನಮ್ಮ ಪೈಕಿ ಯಾರ ಬಳಿ ಯಾದರೂ ಜಿಲ್‍ಬಾಬ್ (ಚದ್ದರ) ಇರದಿ ದ್ದರೆ?” ಅವರೆಂದರು, “ಅವಳ ಗೆಳತಿಯು ತನ್ನ  ಜಿಲ್‍ಬಾಬ್‍ನಲ್ಲಿ ಅವಳನ್ನು ಸೇರಿಸಲಿ.” [ಸಹೀಹ್ ಮುಸ್ಲಿಮ್(ರ): 2093]

5. ಈದ್ ನಮಾಝ್‍ಗಳ ಜತೆಯಲ್ಲಿ ನಫಿಲ್ ನಮಾಝ್: ಈದ್ ನಮಾಝ್‍ಗೆ ಮುಂಚೆ ಅಥವಾ ಅದರ ನಂತರ ಯಾವುದೇ ನಫಿಲ್ ನಮಾಝ್ ನಿರ್ವಹಿ  ಸಲಿಕ್ಕಿಲ್ಲ. ಅಬ್ದುಲ್ಲಾ ಬಿನ್ ಅಬ್ಬಾಸ್(ರ) ಹೇಳುತ್ತಾರೆ, “ಅಲ್ಲಾಹನ ಸಂದೇಶವಾಹ ಕರು(ಸ) ಈದುಲ್ ಅಝ್ಹಾ ಅಥವಾ ಈದುಲ್ ಫಿತ್ರ್‍ನಂದು ಈದ್‍ಗಾಹ್‍ಗೆ  ಬಂದರು ಮತ್ತು ಎರಡು ರಕಅತ್ (ಈದ್‍ನ) ನಮಾಝ್ ನಿರ್ವಹಿಸಿದರು. ಅವರು ಅದಕ್ಕೆ ಮೊದಲು ಮತ್ತು ನಂತರ ಯಾವುದೇ (ನಫಿಲ್) ನಮಾಝ್  ನಿರ್ವಹಿಸಲಿಲ್ಲ.” [ಸಹೀಹ್ ಮುಸ್ಲಿಮ್(ರ): 2096, ಬುಖಾರಿ(ರ): 989]

ಅಲ್ಲಾಮಾ ಇಬ್ನು ಕಯ್ಯಿಮ್(ರ) ಹೇಳುತ್ತಾರೆ, “ಅಲ್ಲಾಹನ ಸಂದೇಶವಾಹ ಕರು(ಸ) ಮತ್ತು ಅವರ ಸಹಾಬಿಗಳು(ರ) ಈದ್‍ಗಾಹ್ ತಲುಪಿದ ಮೇಲೆ ಈದ್  ನಮಾಝ್‍ಗೆ ಮುಂಚೆ ಅಥವಾ ಅದರ ನಂತರ ಯಾವುದೇ ನಮಾಝ್ ನಿರ್ವ ಹಿಸುತ್ತಿರಲಲಿಲ್ಲ.” [ಝಾದುಲ್ ಮುಆದ್: 1/425]

ಅಲ್ಲಾಮಾ ಇಬ್ನು ಹಜರ್(ರ) ಹೇಳು ತ್ತಾರೆ, “ಒಟ್ಟಿನಲ್ಲಿ ಈದ್ ನಮಾಝ್‍ಗೆ ಮುಂಚೆ ಮತ್ತು ಅದರ ಬಳಿಕ ಯಾವುದೇ ಸುನ್ನತ್ ನಮಾಝ್ ಸಾಬೀ  ತಾಗಿಲ್ಲ. ಈ ನಮಾಝನ್ನು ಜುಮಾ ನಮಾಝ್‍ಗೆ ಸಮೀಕರಿಸಿದವರ ಹೊರತು.”
[ಫತ್ಹುಲ್ ಬಾರೀ: 3/418]

6. ಈದುಲ್ ಫಿತ್ರ್ ನಮಾಝ್‍ನ ಸಮಯ: ಸೂರ್ಯ ಒಂದು ಗೇಣಿನಷ್ಟು ಮೇಲಕ್ಕೇರಿದಾಗ ಅದರ ಸಮಯ ಆರಂಭ ವಾಗುತ್ತದೆ ಮತ್ತು ಸೂರ್ಯ  ನಡುನೆತ್ತಿಯ ವರೆಗೆ ತಲುಪಿ ಇಳಿಮುಖವಾಗುವ ವರೆಗೆ ಅದರ ಸಮಯವಿರುತ್ತದೆ. ಅಲ್ಲಾಮಾ ಇಬ್ನು ಕಯ್ಯಿಮ್(ರ) ಹೇಳುತ್ತಾರೆ, “ಅಲ್ಲಾಹನ  ಸಂದೇಶವಾಹಕರು(ಸ) ಈದುಲ್ ಫಿತ್ರ್‍ನ ನಮಾಝನ್ನು ಸ್ವಲ್ಪ ತಡವಾಗಿ ನಿರ್ವಹಿಸುತ್ತಿದ್ದರು ಮತ್ತು ಈದುಲ್ ಅಝ್ಹಾದ ನಮಾಝನ್ನು ಬೇಗ  ನಿರ್ವಹಿಸುತ್ತಿದ್ದರು.” [ಝಾದುಲ್ ಮುಆದ್: 1/425] ಹಾಗಾಗಿ ಫಿತ್ರ್ ಝಕಾತನ್ನು ನೀಡಲು ಅವಕಾಶ ಪಡೆಯ ದವರು ಅದನ್ನು ನೀಡಿ ಬರುವಂತಾಗಲು  ಇಮಾಮರು ಸ್ವಲ್ಪ ತಡವಾಗಿ ಈದ್ ನಮಾಝ್ ನಿರ್ವಹಿಸಬೇಕು.

7. ಈದ್ ನಮಾಝ್‍ನ ವಿಧಾನ: ಅಲ್ಲಾಹನ ಸಂದೇಶವಾಹಕರು(ಸ) ಈದ್ಗಾ ತಲುಪಿದ ಮೇಲೆ ಅದಾನ್ ಮತ್ತು ಇಕಾ ಮತ್ ಇಲ್ಲದೆಯೇ ನಮಾಝ್  ಪ್ರಾರಂಭಿ ಸುತ್ತಿದ್ದರು. ಆದ್ದರಿಂದ ಈದ್ ನಂದು ನಮಾಝ್‍ಗೆ ಅದಾನ್ ಮತ್ತು ಇಕಾಮತ್ ಹೇಳದಿರುವುದೇ ಸುನ್ನತ್ ಆಗಿದೆ.”
[ಝಾದುಲ್ ಮುಆದ್: 1/425]
ಜಾಬಿರ್ ಬಿನ್ ಸಮ್ರಃ(ರ) ಹೇಳು ತ್ತಾರೆ, “ನಾನು ಅಲ್ಲಾಹನ ಸಂದೇಶವಾಹ ಕರ(ಸ) ಜತೆಯಲ್ಲಿ ಹಲವು ಈದ್‍ಗಳಲ್ಲಿ ಅದಾನ್, ಇಕಾಮತ್ ಇಲ್ಲದೆಯೇ  ನಮಾಝ್ ನಿರ್ವಹಿಸಿದ್ದೇನೆ.” [ಸಹೀಹ್ ಮುಸ್ಲಿಮ್(ರ): 2088]

ಈದ್ ನಮಾಝ್‍ನಲ್ಲಿ ಎರಡು ರಕಅತ್‍ಗಳಿರುತ್ತವೆ. ಉಮರ್(ರ) ಹೇಳು ತ್ತಾರೆ, “ಪ್ರಯಾಣದ ನಮಾಝ್ ಎರಡು ರಕಅತ್‍ಗಳಾಗಿವೆ, ಈದುಲ್ ಅಝ್ಹಾದ  ನಮಾಝ್ ಎರಡು ರಕಅತ್‍ಗಳಾಗಿವೆ ಮತ್ತು ಇದುಲ್ ಫಿತ್ರ್‍ನ ನಮಾಝ್ ಎರಡು ರಕಅತ್‍ಗಳಾಗಿವೆ. (ಈ ಎರಡು ರಕಅತ್‍ಗಳು) ಸಂಪೂರ್ಣವಾದವುಗಳು.  ಕಸ್ರ್ ಅಲ್ಲ.” [ಸುನನ್ ಇಬ್ನು ಮಾಜ(ರ): 1063, ತಸ್ಹೀಹುಲ್ ಬಾಕೀ(ರ)]

ಹನಫೀ ಕರ್ಮಶಾಸ್ತ್ರಜ್ಞರ ಪ್ರಕಾರ ಈದ್ ನಮಾಝನ್ನು ಆರು ಹೆಚ್ಚುವರಿ ತಕ್ಬೀರ್‍ಗಳೊಂದಿಗೆ ನಿರ್ವಹಿಸಲಾಗುತ್ತದೆ. ಮೊದಲ ರಕಅತ್‍ನಲ್ಲಿ ತಕ್ಬೀರ್ ತಹ್ರೀಮ  ಮತ್ತು ಸನಾ ಪಠಿಸಿದ ಬಳಿಕ ಕಿರಅತ್‍ಗೆ ಮುಂಚೆ ಮೂರು ಹೆಚ್ಚುವರಿ ತಕ್ಬೀರ್ ಗಳನ್ನು ಹೇಳಲಾಗುತ್ತದೆ. ಹಾಗೆಯೇ ಎರಡನೆಯ ರಕಅತ್‍ನಲ್ಲಿ ಕಿರಅತ್‍ನ  ಬಳಿಕ ರುಕೂಅïಗೆ ಹೋಗುವುದಕ್ಕೆ ಮುಂಚೆ ಮೂರು ಹೆಚ್ಚುವರಿ ತಕ್ಬೀರ್ ಹೇಳಲಾಗು ತ್ತದೆ. ಉಳಿದ ಕರ್ಮಗಳನ್ನು ಸಾಮಾನ್ಯ ನಮಾಝ್‍ಗಳಂತೆಯೇ  ನಿರ್ವಹಿಸ ಲಾಗುತ್ತದೆ.
ಇತರೆಲ್ಲ ವಿದ್ವಾಂಸರ ಪ್ರಕಾರ ಈದ್ ನಮಾಝ್‍ಗಳನ್ನು ಹನ್ನೆರಡು ಹೆಚ್ಚುವರಿ ತಕ್ಬೀರ್‍ಗಳ ಜತೆಯಲ್ಲಿ ನಿರ್ವಹಿಸಲಾಗು ತ್ತದೆ. ಮೊದಲ ರಕಅತ್‍ನಲ್ಲಿ ಕಿರಅತ್‍ಗೆ  ಮುಂಚೆ ಏಳು ಹೆಚ್ಚುವರಿ ತಕ್ಬೀರ್ ಹೇಳಲಾಗುತ್ತದೆ ಮತ್ತು ಎರಡನೆಯ ರಕಅತ್‍ನಲ್ಲಿ ಕಿರಅತ್‍ಗೆ ಮುಂಚೆ ಐದು ಹೆಚ್ಚುವರಿ ತಕ್ಬೀರ್ ಹೇಳಲಾಗುತ್ತದೆ.
8. ನಮಾಝ್‍ನ ಬಳಿಕ ಖುತ್ಬಾ: ಈದ್‍ಗಳ ಖುತ್ಬಾವನ್ನು ನಮಾಝ್‍ನ ಬಳಿಕ ನೀಡುವುದು ಸುನ್ನತ್ ಆಗಿದೆ. ಅಬ್ದುಲ್ಲಾ ಬಿನ್ ಅಬ್ಬಾಸ್(ರ) ಹೇಳುತ್ತಾರೆ,  “ನಾನು ಅಲ್ಲಾಹನ ಸಂದೇಶವಾಹಕರು(ಸ) ಮತ್ತು ಅಬುಬಕರ್(ರ), ಉಮರ್(ರ) ಮತ್ತು ಉಸ್ಮಾನ್‍ರ(ರ) ಜತೆಯಲ್ಲಿ ಈದ್ ನಮಾಝ್ ನಿರ್ವಹಿಸಿದ್ದೇನೆ.  ಇವರೆಲ್ಲರೂ ಖುತ್ಬಕ್ಕಿಂತ ಮುಂಚೆ ನಮಾಝ್ ನಿರ್ವ ಹಿಸುತ್ತಿದ್ದರು.”
[ಸಹೀಹುಲ್ ಬುಖಾರಿ(ರ): 962]
ಅಬ್ದುಲ್ಲಾ ಬಿನ್ ಉಮರ್(ರ) ಹೇಳುತ್ತಾರೆ, “ಅಲ್ಲಾಹನ ಸಂದೇಶವಾಹ ಕರು(ಸ) ಮತ್ತು ಅಬೂಬಕರ್(ರ), ಉಮರ್(ರ) ಇವರೆಲ್ಲ ಈದ್ ನಮಾಝನ್ನು  ಖುತ್ಬಾಕ್ಕಿಂತ ಮುಂಚೆ ನಿರ್ವಹಿಸುತ್ತಿದ್ದರು.” [ಸಹೀಹ್ ಬುಖಾರಿ(ರ): 963]
ಖುತ್ಬಾ ಕೇಳಲು ಕುಳಿತುಕೊಳ್ಳುವುದು ಜನರ ವಿವೇಚನೆಗೆ ಬಿಟ್ಟ ವಿಷಯವಾಗಿದೆ. ಅಬ್ದುಲ್ಲಾ ಬಿನ್ ಸಾಯಿಬ್(ರ) ಹೇಳುತ್ತಾರೆ, “ನಾನು ಅಲ್ಲಾಹನ  ಸಂದೇಶವಾಹಕರ(ಸ) ಜತೆಯಲ್ಲಿ ಈದ್ ನಮಾಝ್‍ಗೆ ನಿಂತೆ. ಅವರು(ಸ) ನಮಾಝ್ ಬಳಿಕ ಹೇಳಿದರು: ನಾನು ಖುತ್ಬಾ (ಪ್ರವಚನ) ನೀಡಲು  ಹೊರಟಿದ್ದೇನೆ. ಖುತ್ಬಕ್ಕೆ ಕುಳಿತುಕೊಳ್ಳಲು ಇಚ್ಛಿಸುವವರು ಕುಳಿತುಕೊಳ್ಳಿರಿ ಮತ್ತು ಹೋಗಲಿಚ್ಛಿಸುವವರು ಹೋಗಬಹುದು.” [ಸುನನ್ ಅಬೂ ದಾವೂದ್(ರ):  1157, ತಸ್ಹೀಹುಲ್ ಬಾಕೀ(ರ)]
9. ಈದ್‍ನ ಶುಭ ಹಾರೈಕೆ: ಈದ್‍ನಂದು ತನ್ನ ಮುಸ್ಲಿಮ್ ಸಹೋದರರಿಗೆ ಶುಭ ಹಾರೈಸುವುದು ಈದ್‍ನ ಶಿಷ್ಟಾಚಾರವಾಗಿದೆ. ಮುಹಮ್ಮದ್ ಬಿನ್  ಝಿಯಾದ್(ರ) ಹೇಳುತ್ತಾರೆ, “ನಾನು ಅಬೂ ಉಮಾಮಾ ಬಾಹಿಲೀ(ರ) ಮತ್ತಿತರ ಸಹಾಬಿಗಳ ಜತೆಗಿದ್ದೆನು. ಇವರು ಈದ್ ನಮಾಝ್ ನಿರ್ವಹಿಸಿ  ಮರಳುವಾಗ ಪರಸ್ಪರರೊಡನೆ ‘ತಕಬ್ಬಲುಲ್ಲಾಹು ಮಿನ್ನಾ ವ ಮಿನ್‍ಕುಮ್’ (ಅಲ್ಲಾಹ್ ನಮ್ಮ ಮತ್ತು ನಿಮ್ಮ ಆರಾಧನೆಗಳನ್ನು ಸ್ವೀಕರಿಸಲಿ) ಎಂದು  ಹೇಳುತ್ತಿದ್ದರು.” [ಸುನನಿಲ್ ಕಿಬ್ರೀ ಲಿಲ್ ಬೈಹಕೀ(ರ), ಮಅ ತಹ್ಸೀನ್ ಇಬ್ನು ಹಜರ್(ರ) ವ ಬಾಕೀ(ರ)]
ಶೈಖುಲ್ ಇಸ್ಲಾಮ್ ಇಬ್ನು ತೀಮಿಯರೊಡನೆ(ರ) ಈದ್‍ನ ಶುಭ ಹಾರೈಸುವುದರ ಬಗ್ಗೆ ವಿಚಾರಿಸಲಾಯಿತು. ಆಗ ಅವರು ಹೇಳಿದರು, “ಈದ್ ನಮಾಝ್‍ನ  ಬಳಿಕ ‘ತಕಬ್ಬಲುಲ್ಲಾಹು ಮಿನ್ನಾ ವಮಿನ್‍ಕುಮ್’ ಮತ್ತು ‘ಅಹಾಲುಲ್ಲಾಹು ಅಲೈಕುಮ್’ (ಅಲ್ಲಾಹ್ ನಿಮ್ಮ ಜೀವನದಲ್ಲಿ ಈ ಸಮೃದ್ಧ ದಿನವನ್ನು ಆಗಾಗ ತರಲಿ)  ಎನ್ನುವ ಮೂಲಕ ಶುಭ ಹಾರೈಸುವುದು ಹಲವು ಸಹಾಬಿಗಳಿಂದ ಉದ್ಧರಿಸಲ್ಪಟ್ಟಿವೆ ಹಾಗೂ ಇಸ್ಲಾಮೀ ವಿದ್ವಾಂಸರು ಅದಕ್ಕೆ ಅನುಮತಿಯನ್ನು ನೀಡಿರುವರು.”  ಈ ಪದಗಳಲ್ಲದೆ ಇನ್ನಿ ತರ ಪ್ರಾರ್ಥನೆಗಳು ಮತ್ತು ವಿಧಾನಗಳಿಂದಲೂ ಶುಭ ಹಾರೈಸ ಬಹುದಾಗಿದೆ. ಅದು ಶರೀಅತ್‍ಗೆ ವಿರುದ್ಧ ಆಗದಿದ್ದರೆ ಸಾಕು.
10. ಈದ್‍ಗಾಹ್‍ಗೆ ಹೋಗುವ ಮತ್ತು ಮರಳುವ ದಾರಿಯನ್ನು ಬದಲಿಸುವುದು: ಜಾಬಿರ್(ರ) ಹೇಳುತ್ತಾರೆ, “ಪ್ರವಾದಿವರ್ಯರು(ಸ) ಈದ್‍ನಂದು  ಈದ್‍ಗಾಹ್‍ಗೆ ಹೋಗುವ ಮತ್ತು ಮರಳುವ ದಾರಿಯನ್ನು ಬದಲಿಸುತ್ತಿದ್ದರು.” [ಸಹೀಹ್ ಬುಖಾರಿ(ರ): 986] ವಿದ್ವಾಂಸರು ಪ್ರವಾದಿವರ್ಯರ(ಸ) ಈ  ಕ್ರಿಯೆಯ ಹಲವು ಯುಕ್ತಿಗಳನ್ನು ಉಲ್ಲೇಖಿಸಿರುವರು. ಆ ಪೈಕಿ ಕೆಲವನ್ನು ಇಲ್ಲಿ ನೀಡುತ್ತಿದ್ದೇವೆ-
ಟ ಇಸ್ಲಾಮಿನ ಗುರುತುಗಳ ಪ್ರಚಾರಕ್ಕಾಗಿ.
ಟ ಆ ಎರಡೂ ದಾರಿಗಳು ಪುನರುತ್ಥಾನ ದಿನದಂದು ಆ ವ್ಯಕ್ತಿಯ ಪರ ಸಾಕ್ಷಿ ನುಡಿಯಲಿಕ್ಕಾಗಿ.
ಟ ದೇವಕೀರ್ತನೆಯನ್ನು ವ್ಯಕ್ತಪಡಿಸಲು.
ಟ ಇಸ್ಲಾಮ್ ಮತ್ತು ಇಸ್ಲಾಮಿಸ್ಟರ ಗೌರವ ಮತ್ತು ಶಕ್ತಿಯು ಕಪಟವಿಶ್ವಾಸಿಗಳು ಹಾಗೂ ಸತ್ಯನಿಷೇಧಿಗಳಿಗೆ ಅರೋಚಕವಾಗಿ ತೋರಲು.
ಟ ಉಭಯ ದಾರಿಗಳಲ್ಲಿರುವ ನಿವಾಸಿ ಗಳಿಗಾಗಿ ಶಾಂತಿ-ಸಮಾಧಾನದ ಪ್ರಾರ್ಥನೆ ಗೈಯಲು ಮತ್ತು ಈದ್‍ಗಳ ತಕ್ಬೀರ್‍ಗಳ ಶಿಕ್ಷಣವನ್ನು ವ್ಯಾಪಕಗೊಳಿಸಲು.
ಟ ಸದಕಾ (ದಾನ) ಮತ್ತು ಸದ್ವರ್ತನೆಗಾಗಿ.
11. ಮೋಡ ಮತ್ತಿತರ ಕಾರಣ ಗಳಿಂದಾಗಿ ಶವ್ವಾಲ್‍ನ ಚಂದ್ರ ಕಾಣದೆ ಉಪವಾಸ ವ್ರತಾಚರಿಸಿದ್ದು, ಬಳಿಕ ಚಂದ್ರ ದರ್ಶನವಾಗಿದೆ ಎಂದು ತಿಳಿದು ಬಂದರೆ  ಉಪವಾಸವನ್ನು ತೊರೆಯಬೇಕು. ಒಂದು ವೇಳೆ ಮಧ್ಯಾಹ್ನ ಸೂರ್ಯ (ಝವಾಲ್) ಇಳಿಮುಖವಾಗುವುದಕ್ಕೆ ಮುಂಚೆ ಚಂದ್ರ ದರ್ಶನದ ವಿಷಯ ತಿಳಿದಾಗ  ತಕ್ಷಣವೇ ಈದ್ ನಮಾಝನ್ನು ನಿರ್ವಹಿಸಬೇಕು. ಝವಾಲ್ ನಂತರ ವಿಷಯ ತಿಳಿದರೆ, ಮುಂದಿನ ದಿನ ಈದ್ ನಮಾಝ್ ನಿರ್ವಹಿಸ ಬೇಕು. ಅಬೂ  ಉಮೈರ್ ಅಬ್ದುಲ್ಲಾ ಬಿನ್ ಅನಸ್ ಬಿನ್ ಮಾಲಿಕ್(ರ) ಹೇಳುತ್ತಾರೆ: ನನಗೆ ನನ್ನ ಅನ್ಸಾರಿ ಸಹಾಬಿ ಚಿಕ್ಕಪ್ಪಂದಿರು ಹೇಳಿದರು, “ನಮಗೆ ಶವ್ವಾಲ್‍ನ ಚಂದ್ರ  (ಮೋಡ ಇತ್ಯಾದಿ ಕಾರಣದಿಂದ) ಕಾಣಲಿಲ್ಲ. ನಾವು ಮರುದಿನ ಉಪವಾಸ ವ್ರತಾಚರಿ ಸಿದೆವು. ದಿನದ ಕೊನೆಯ ಜಾವದಲ್ಲಿ ಒಂದು ಯಾತ್ರಾ ತಂಡವು  ಆಗಮಿಸಿತು. ಅವರು ನಿನ್ನೆ ಚಂದ್ರದರ್ಶನವಾದುದರ ಬಗ್ಗೆ ಪ್ರವಾದಿವರ್ಯರ(ಸ) ಮುಂದೆ ಪ್ರಮಾಣ ಮಾಡಿ ಹೇಳಿದರು. ಆಗ ಪ್ರವಾದಿವರ್ಯರು(ಸ)  ಜನರಿಗೆ, ಅವತ್ತಿನ ಉಪವಾಸವನ್ನು ತೊರೆಯಲು ಮತ್ತು ಮರುದಿನ ಈದ್ ನಮಾಝ್‍ಗಾಗಿ ಈದ್‍ಗಾಹ್‍ನೆಡೆಗೆ ಹೊರ ಡಲು ಆದೇಶಿಸಿದರು. [ಸುನನ್  ಇಬ್ನು ಮಾಜ(ರ): 1653, ತಸ್ಹೀಹುಲ್ ಬಾಕೀ(ರ)]
ಫಿತ್ರ್ ಝಕಾತ್‍ನ ಆದೇಶ:
1. ಫಿತ್ರ್ ಝಕಾತ್ ಕಡ್ಡಾಯ: ಫಿತ್ರ್ ಝಕಾತ್ ನೀಡುವುದು, ತನ್ನ ಮತ್ತು ತನ್ನ ಕುಟುಂಬಿಕರ ಆಹಾರ, ವಸ್ತ್ರ ಮತ್ತು ಮೂಲಭೂತ ಅಗತ್ಯಗಳಿಗಿಂತ ಹೆಚ್ಚು  ಸಂಪತ್ತು ಇರುವ ಪ್ರತಿಯೋರ್ವ ಮುಸ್ಲಿಮನ ಮೇಲೆ ವಾಜಿಬ್ (ಕಡ್ಡಾಯ) ಆಗಿದೆ. ಹಾಗಾಗಿ ಇದು ಹಿರಿಯ-ಕಿರಿಯರು, ಸ್ತ್ರೀ-ಪುರುಷರು ಮತ್ತು  ಸ್ವತಂತ್ರ-ಗುಲಾಮ ಎಲ್ಲರ ಮೇಲೂ ಕಡ್ಡಾಯವಾಗುತ್ತದೆ. ಅಬ್ದುಲ್ಲಾ ಬಿನ್ ಉಮರ್(ರ) ಹೇಳುತ್ತಾರೆ, “ಅಲ್ಲಾಹನ ಸಂದೇಶವಾಹಕರು(ಸ) ರಮಝಾನಿನ  ಫಿತ್ರ್ ಝಕಾತ್ ಆಗಿ ಒಂದು ಸಾಅï ಖರ್ಜೂರ ಅಥವಾ ಒಂದು ಸಾಅï ಜೋಳವನ್ನು ಪ್ರತಿಯೋರ್ವ ಮುಸ್ಲಿಮ್ ಗುಲಾಮ-ಸ್ವತಂತ್ರ, ಸ್ತ್ರೀ-ಪುರುಷ ಮತ್ತು  ಕಿರಿಯ-ಹಿರಿಯರ ಮೇಲೆ ಕಡ್ಡಾಯಗೊಳಿಸಿ ದ್ದಾರೆ.” [ಸಹೀಹ್ ಬುಖಾರಿ(ರ): 1503, ಸಹೀಹ್ ಮುಸ್ಲಿಮ್(ರ): 984]
ತನ್ನ ವತಿಯಿಂದ ಮತ್ತು ತನ್ನ ಪತ್ನಿ-ಮಕ್ಕಳ ಪರವಾಗಿಯೂ ತನ್ನ ಪೆÇೀಷಣೆಯಲ್ಲಿ ರುವವರ (ಅಂದರೆ ಸ್ವಯಂ ತಮ್ಮ ಫಿತ್ರ ನೀಡಲು ಶಕ್ತರಲ್ಲದ ಹೆತ್ತವರ)  ಪರ ವಾಗಿಯೂ ಫಿತ್ರ್ ಝಕಾತನ್ನು ತೆಗೆಯಬೇಕಾದುದು ಮನೆಯ ಹೊಣೆಗಾರ ಪುರು ಷನ ಬಾಧ್ಯತೆಯಾಗಿದೆ. ಮನೆಯ ನೌಕರರ ಪರವಾಗಿ ಫತ್ರ್  ತೆಗೆಯುವುದು ಮಾಲಿಕನ ಹೊಣೆಯಾಗಿರುವುದಿಲ್ಲ. ಅದು ಸ್ವತಃ ನೌಕರರ ಹೊಣೆಯಾಗಿದೆ. ಆದರೆ ಮಾಲಿಕನು ಸ್ವಯಂ ಪ್ರೇರಣೆಯಿಂದ ಮತ್ತು ನೌಕರನ  ಮೇಲೆ ಅನುಕಂಪದಿಂದ ಸ್ವತಃ ಫಿತ್ರ್ ಝಕಾತ್ ನೀಡಿದರೆ ಅದು ಅನುವದನೀಯವಾಗಿದೆ. ನೌಕರನಿಗೆ ಅದರ ಮಾಹಿತಿಯನ್ನು ನೀಡಬೇಕು.
ಯಾರಾದರೂ ಮಹಿಳೆಯ ಸ್ವಂತ ವ್ಯಾಪಾರ ಅಥವಾ ಉದ್ಯೋಗದ ಸಂಬಳ ವಿದ್ದರೆ ಆಕೆಯೂ ಫಿತ್ರ್ ಝಕಾತನ್ನು ತನ್ನ ಗಳಿಕೆಯಿಂದ ನೀಡಬೇಕಾಗುತ್ತದೆ.  ಅದಿಲ್ಲದಿದ್ದರೆ, ಆಕೆಯ ಹೊಣೆಯು ಆಕೆಯ ಹೆತ್ತವರಾಗಿರುತ್ತಾರೆ ಮತ್ತು ಮದು ವೆಯ ಬಳಿಕ ಆಕೆಯ ಪತಿಯಾಗಿರುತ್ತಾನೆ.
ಗರ್ಭದಲ್ಲಿರುವ ಮಕ್ಕಳ ಪರವಾಗಿ ಫಿತ್ರ್ ಝಕಾತ್ ತೆಗೆಯುವ ಅಗತ್ಯವೇನಿಲ್ಲ. ಆದರೆ ತೆಗೆದರೆ ಉತ್ತಮ. ಉಸ್ಮಾನ್(ರ) ಬಿನ್ ಅಫ್ಫಾನ್ ಹಾಗೆ ಮಾಡುತ್ತಿದ್ದರು  ಎಂದು ಹೇಳಲಾಗುತ್ತದೆ. [ಬಿದಾಯತುಲ್ ಮುಜ್ತಹಿದ್, ಇಬ್ನು ರುಶ್ದ್ ಕುರ್ತುಬಿ(ರ): 2/266]
2. ಫಿತ್ರ್ ಝಕಾತ್‍ನ ಯುಕ್ತಿ: ಫಿತ್ರ್ ಝಕಾತ್‍ನ ಒಂದು ಉದ್ದೇಶವು ಉಪವಾಸದಲ್ಲಿ ಆಗಿರಬಹುದಾದ ಪ್ರಮಾದಗಳಿಗೆ ಪ್ರಾಯಶ್ಚಿತ್ತವಾಗಿದೆ. ಎರಡನೆಯದಾಗಿ,  ಬಡವರು ಮತ್ತು ದೀನದಲಿತರನ್ನೂ ಈದ್‍ನ ಸಂತೋಷದಲ್ಲಿ ಶಾಮೀಲುಗೊಳಿಸುವುದಾಗಿದೆ. ಅಬ್ದುಲ್ಲಾ ಬಿನ್ ಅಬ್ಬಾಸ್(ರ) ಹೇಳುತ್ತಾರೆ, “ಅಲ್ಲಾಹನ  ಸಂದೇಶವಾಹಕರು(ಸ) ಫಿತ್ರ್ ಝಕಾತನ್ನು ಕಡ್ಡಾಯವನ್ನಾಗಿ ಮಾಡಿದ್ದಾರೆ. ಏಕೆಂದರೆ ಅದು ಉಪವಾಸದಲ್ಲಾಗಿರ ಬಹುದಾದ ನಿರರ್ಥಕ ಮತ್ತು ಕೆಟ್ಟ ವಿಚಾರ  ಗಳ ಪಾಪವನ್ನು ತೊಳೆಯುತ್ತದೆ ಹಾಗೂ ಹೊಟ್ಟೆಗಿಲ್ಲದವರಿಗೆ ಆಹಾರವೊದಗಿಸುತ್ತದೆ.” [ಸುನನ್ ಅಬೂ ದಾವೂದ್(ರ): 1611, ತಸ್ಹೀಹುಲ್ ಬಾಕೀ(ರ).  ಸುನನ್ ಇಬ್ನು ಮಾಜಃ(ರ): 1826]
3. ಫಿತ್ರ್ ಝಕಾತ್ ತೆಗೆಯುವ ಸಮಯ: ರಮಝಾನಿನ ಕೊನೆಯ ದಿನ ಸೂರ್ಯಾಸ್ತವಾದ ಸಮಯದಿಂದ ಫಿತ್ರ್ ಝಕಾತ್ ಕಡ್ಡಾಯವಾಗುತ್ತದೆ. ಮತ್ತು  ಈದ್ ನಮಾಝ್‍ಗೆ ಮುಂಚೆ ಅದನ್ನು ತೆಗೆಯುವುದು ಅಗತ್ಯವಾಗಿದೆ. ಅಬ್ದುಲ್ಲಾ ಬಿನ್ ಉಮರ್(ರ) ಹೇಳುತ್ತಾರೆ, “ಅಲ್ಲಾಹನ ಸಂದೇಶವಾಹಕರು(ಸ) ಫಿತ್ರ್  ಝಕಾತನ್ನು ಈದ್ ನಮಾಝ್‍ಗೆ ಮುಂಚೆ ನೀಡಲು ಆದೇಶಿಸಿದ್ದಾರೆ.” [ಸಹೀಹ್ ಬುಖಾರಿ(ರ): 1503, ಸಹೀಹ್ ಮುಸ್ಲಿಮ್(ರ): 986]
ಅದೇ ವೇಳೆ, ರಮಝಾನಿನ ಆರಂಭ ದಿಂದಲೇ ಫಿತ್ರ್ ಝಕಾತನ್ನು ತೆಗೆಯ ಬಹುದಾಗಿದೆ. ವಿಶೇಷವಾಗಿ ಫಿತ್ರ್ ಝಕಾ ತನ್ನು ಯಾವುದಾದರೂ ಸಂಸ್ಥೆಗೆ  ನೀಡ ಲಿಕ್ಕಿದ್ದರೆ. ಏಕೆಂದರೆ ನೈಜ ಅವಶ್ಯಾರ್ಥಿ ಗಳಿಗೆ ತಲುಪಿಸುವ ವ್ಯವಸ್ಥೆ ಅದರ ಮೂಲಕ ಆಗುತ್ತದೆ.
ಏನಿದ್ದರೂ ಈದ್ ನಮಾಝ್‍ನ ಬಳಿಕ ಫಿತ್ರ್ ಝಕಾತ್ ತೆಗೆಯುವುದು ಸರಿಯಲ್ಲ. ಒಂದು ವೇಳೆ ಯಾವುದೇ ಸೂಕ್ತ ಕಾರಣ ವಿಲ್ಲದೆ ಈದ್ ನಮಾಝ್‍ನ  ಬಳಿಕ ಅದನ್ನು ನೀಡಿದರೆ ಅದು ಸಾಮಾನ್ಯ ದಾನವಾಗಿ ಪರಿಗಣಿಸಲ್ಪಡುತ್ತದೆ. ಅದು ಫಿತ್ರ್ ಝಕಾತ್ ಆಗಿ ಸ್ವೀಕೃತವಾಗದು. ಅಬ್ದುಲ್ಲಾ ಬಿನ್ ಅಬ್ಬಾಸ್(ರ)  ವರದಿ ಮಾಡಿರುವ ಹದೀಸ್‍ನಲ್ಲಿ ಹೀಗಿದೆ, “ಅದನ್ನು ಈದ್ ನಮಾಝ್‍ಗೆ ಮುಂಚೆ ನೀಡಿದರೆ ಅದು ಸ್ವೀಕೃತ ಝಕಾತ್ (ಅಂದರೆ ಫಿತ್ರ್ ಝಕಾತ್) ಆಗುತ್ತದೆ.  ಅದನ್ನು ಈದ್ ನಮಾಝ್‍ನ ಬಳಿಕ ನೀಡಿದರೆ ಅದು ಇತರ ಸಾಮಾನ್ಯ ದಾನ ದಂತೆ ಪರಿಗಣಿಸಲ್ಪಡುವುದು.” [ಸುನನ್ ಅಬೂದಾವೂದ್(ರ): 1609,  ತಸ್ಹೀಹುಲ್ ಬಾಕೀ(ರ). ಸುನನ್ ಇಬ್ನು ಮಾಜಃ(ರ): 1826]
4. ಫಿತ್ರ್ ಝಕಾತ್‍ನ ಪ್ರಮಾಣ: ಫಿತ್ರ್ ಝಕಾತ್‍ನ ಪ್ರಮಾಣವು ಒಂದು ಸಾಅï ಆಗಿದೆ. ಪ್ರಸಕ್ತ ಅಳತೆಯ ಮಾಪನದಲ್ಲಿ ಸುಮಾರು ಎರಡೂ ವರೆ ಕಿಲೋ  ಗ್ರಾಂ ಆಗುತ್ತದೆ. ಫಿತ್ರ್ ಝಕಾತನ್ನು ಆಯಾ ಪ್ರದೇಶದ ಸಾಮಾನ್ಯ ಬಳಕೆಯ ಹಲಾಲ್ ಆಹಾರದ ರೂಪದಲ್ಲಿ ನೀಡಬೇಕು. ಉದಾ: ಖರ್ಜೂರ, ಜೋಳ,  ಗೋಧಿ, ಅಕ್ಕಿ, ಗೋಧಿಹಿಟ್ಟು, ಬೇಳೆ ಇತ್ಯಾದಿ.
5. ಫಿತ್ರ್ ಝಕಾತನ್ನು ನಗದು ರೂಪದಲ್ಲಿ ನೀಡುವುದು: ಇಮಾಮ್ ಮಾಲಿಕ್(ರ), ಇಮಾಮ್ ಶಾಫಿಈ(ರ) ಮತ್ತು ಇಮಾಮ್ ಅಹ್ಮದ್‍ರ(ರ)  ಅಭಿಪ್ರಾಯದಲ್ಲಿ ಫಿತ್ರ್ ಝಕಾತನ್ನು ನಗದು ರೂಪದಲ್ಲಿ ನೀಡಲಾಗದು. ಏಕೆಂದರೆ ಹದೀಸ್‍ನಲ್ಲಿ ಕೆಲವು ವಿಷಯಗಳನ್ನು ಸುವ್ಯಕ್ತವಾಗಿ ತಿಳಿಸ ಲಾಗಿರುತ್ತದೆ.  ಆದ್ದರಿಂದ ಅವುಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.
ತದ್ವಿರುದ್ಧವಾಗಿ ಇಮಾಮ್ ಅಬೂ ಹನೀಫಾ(ರ) ಮತ್ತವರ ಶಿಷ್ಯರು, ಇಮಾಮ್ ಸೌರೀ(ರ), ಉಮರ್ ಬಿನ್ ಅಬ್ದುಲ್ ಅಝೀಝ್(ರ), ಹಸನ್ ಬಸ್ರೀ(ರ)  ಮತ್ತು ಅತಾಅï(ರ) ಮತ್ತಿತರರ ಪ್ರಕಾರ ನಗದು ರೂಪದಲ್ಲಿಯೂ ನೀಡ ಬಹುದಾಗಿದೆ. ಅವರಿಗೆ “ಈ ದಿನದಂದು (ಬಡವರನ್ನು) ಭಿಕ್ಷೆ ಬೇಡುವುದರಿಂದ  ನಿರಪೇಕ್ಷರನ್ನಾಗಿಸಿರಿ” ಎಂಬ ಪ್ರವಾದಿ ವಚನವೇ ಆಧಾರವಾಗಿದೆ. ಈ ಹದೀಸ್ ನಲ್ಲಿ ಪ್ರಸ್ತುತ ಆದೇಶದ ಬದಲಿ ವ್ಯವಸ್ಥೆ ಯನ್ನು ಉಲ್ಲೇಖಿಸಲಾಗಿದೆ.  ಅದೆಂದರೆ, ಈದ್‍ನಂದು ಬಡವರು ಮತ್ತು ನಿರ್ಗತಿಕ ರನ್ನು ಜನರ ಮುಂದೆ ಕೈಯೊಡ್ಡುವುದ ರಿಂದ ತಡೆಯುವುದಾಗಿದೆ. ಹಾಗೂ ಈ ಉದ್ದೇಶವು ನಗದು  ರೂಪದಲ್ಲಿ ಫಿತ್ರ್ ಝಕಾತ್ ನೀಡುವುದರ ಮೂಲಕವೂ ಸಾಕಾರಗೊಳ್ಳುತ್ತದೆ. ಮಾತ್ರವಲ್ಲ, ಈ ಉದ್ದೇಶವನ್ನು ಈಡೇರಿಸಲು ಪ್ರಸ್ತುತ ವಿಧಾನವು ಹೆಚ್ಚು  ಸೂಕ್ತವಾಗಿ ಕಾಣುತ್ತದೆ. ಏಕೆಂದರೆ, ಈ ರೂಪದಲ್ಲಿ ಬಡವರು ತಮ್ಮ ಆದ್ಯತೆಯಾಧಾರದಲ್ಲಿ ತಮ್ಮ ಅಗತ್ಯದ ವಸ್ತುಗಳನ್ನು ಖರೀದಿಸಬಹುದು. ಅಲ್ಲದೆ,  ಎಲ್ಲೆಡೆಯಿಂದಲೂ ಅವರಿಗೆ ಆಹಾರ ಧಾನ್ಯವೇ ದೊರೆತರೆ ಅವರ ಇತರ ಅಗತ್ಯಗಳು ಈಡೇರದೆ ಹೋಗಬಹುದು. ಹಾಗಾಗಿ ಹದೀಸ್‍ನ ಆದೇಶದಲ್ಲಿ ಬದಲಿ  ವ್ಯವಸ್ಥೆಯ ಸೂಚನೆ ಇರುವಾಗ ಅದನ್ನು ನಗದು ರೂಪದಲ್ಲಿ ನೀಡುವುದರ ಕುರಿತು ನಿಷೇಧಾತ್ಮಕ ಧೋರಣೆ ಇರಿಸುವುದು ಸರಿಯಲ್ಲ.
6. ಫಿತ್ರ್ ಝಕಾತನ್ನು ಬೇರೆ ಪ್ರದೇಶ ಗಳಿಗೆ ವರ್ಗಾಯಿಸುವುದು: ಒಂದು ವೇಳೆ ಇತರ ಪ್ರದೇಶದ ಜನರು ಹೆಚ್ಚು ಅವಶ್ಯಾರ್ಥಿಗಳಿದ್ದರೆ, ಅಲ್ಲಿಗೆ ಫಿತ್ರ್  ಝಕಾತನ್ನು ವರ್ಗಾಯಿಸಬಹುದಾಗಿದೆ. ಅಲ್ಲದೆ ಫಿತ್ರ್ ಝಕಾತ್‍ಗೆ ಅರ್ಹರಾದ ನಿಕಟವರ್ತಿಗಳು ಬೇರೆ ಪ್ರದೇಶದಲ್ಲಿದ್ದರೆ ಮತ್ತು ಅವರು ಅದಕ್ಕೆ ಹೆಚ್ಚು  ಅರ್ಹರಾಗಿದ್ದರೆ, ಅವರ ಬಳಿಗೆ ಅದನ್ನು ತಲುಪಿಸಬಹುದಾಗಿದೆ. ಅದೇ ರೀತಿ ಫಿತ್ರ್ ಝಕಾತನ್ನು ಇತರ ಪ್ರದೇಶಗಳಿಗೆ ತಲುಪಿಸುವುದರಿಂದ ಹೆಚ್ಚಿನ  ಮುಸ್ಲಿಮರಿಗೆ ಪ್ರಯೋಜನವಾಗುವುದಿದ್ದರೆ, ಹಾಗೆ ಮಾಡಬಹುದಾಗಿದೆ.
ಈದ್‍ನಂದು ಆಗಬಹುದಾದ ತಪ್ಪು ಗಳು ಮತ್ತು ನವೀನಾಚಾರಗಳು:
ದುರದೃಷ್ಟವಶಾತ್ ಹೆಚ್ಚಿನ ಮುಸ್ಲಿಮರು ಈದ್ ಆಗಮಿಸುತ್ತಲೇ ಶರಈ ಆದೇಶ ಗಳನ್ನು ಕಡೆಗಣಿಸಿ ಪಾಪಕಾರ್ಯ ಮತ್ತು ನವೀನಾಚಾರಗಳಲ್ಲಿ ತೊಡಗುತ್ತಾರೆ.  ಆದ್ದ ರಿಂದ ಈ ಸಂದರ್ಭದಲ್ಲಿ ಆಗಬಹುದಾದ ಕೆಲವು ದುಷ್ಕøತ್ಯ ಮತ್ತು ನವೀನಾಚಾರಗಳ ಬಗ್ಗೆ ಎಚ್ಚರಿಸುವುದು ಅಗತ್ಯವೆಂದು ತೋರುತ್ತದೆ.
1. ಈದ್‍ನಂದು ಗೋರಿ ಸಂದರ್ಶನ: ಹೆಚ್ಚಿನವರು ಈದ್‍ಗಾಹ್‍ನಿಂದ ಹೊರಟು ಮೊತ್ತಮೊದಲು ಕಬರಸ್ಥಾನಕ್ಕೆ ಹೋಗುವ ರೂಢಿಯನ್ನು ಮಾಡಿರುತ್ತಾರೆ.  ಈ ಕೃತ್ಯಕ್ಕೆ ಯಾವುದೇ ಆಧಾರವಿಲ್ಲ. ಧರ್ಮದ ಭಾಗವೆಂದು ಭಾವಿಸಲಾಗುವ ಪ್ರತಿ ಯೊಂದು ನೂತನ ವಿಷಯವು ಬಿದ್‍ಅತ್ ಆಗಿದೆ. ಅಲ್ಲಾಹನ  ಸಂದೇಶವಾಹಕರು(ಸ) ಹೀಗೆಂದಿದ್ದಾರೆ, “ಯಾರಾದರೂ ನಮ್ಮ ಧರ್ಮದಲ್ಲಿ ಇಲ್ಲದಂತಹ ವಿಷಯವನ್ನು ಸ್ವತಃ ಸೇರಿಸಿದರೆ, ಅದು ತಿರಸ್ಕøತವಾಗಿದೆ.”  [ಸಹೀಹ್ ಬುಖಾರಿ(ರ): 2697, ಸಹೀಹ್ ಮುಸ್ಲಿಮ್(ರ): 4589]
2. ಮಹಿಳೆಯರ ಪರ್ದಾರಾಹಿತ್ಯ: ಈ ಸಂದರ್ಭದಲ್ಲಿ ಮಹಿಳೆಯರು ಪರ್ದಾ ರಹಿತರಾಗಿ ಮಾರುಕಟ್ಟೆ, ಬೀದಿ ಮತ್ತು ಪಾರ್ಕು ಇತ್ಯಾದಿಗಳಲ್ಲಿ  ತಿರುಗಾಡುತ್ತಾರೆ. ಇದು ಶರೀಅತ್ ಪ್ರಕಾರ ನಿಷಿದ್ಧವಾಗಿದೆ. ಅಲ್ಲಾಹ್ ಹೇಳುತ್ತಾನೆ, “ನಿಮ್ಮ ಮನೆಗಳಲ್ಲೇ ಇದ್ದುಕೊಳ್ಳಿರಿ. ಗತ ಅಜ್ಞಾನ ಕಾಲದ ಸೌಂದರ್ಯ  ಪ್ರದರ್ಶನ ಮಾಡುತ್ತ ತಿರುಗಾಡಬೇಡಿರಿ. ನಮಾಝನ್ನು ಸಂಸ್ಥಾಪಿ ಸಿರಿ, ಝಕಾತ್ ಕೊಡಿರಿ, ಅಲ್ಲಾಹ್ ಮತ್ತು ರಸೂಲರನ್ನು ಅನುಸರಿಸಿರಿ.” (ಅಲ್ ಅಹ್ಝಾಬ್:  33)
3. ಮುಹ್ರಿಮ್ ಅಲ್ಲದ ಪರಸ್ತ್ರೀಯರೊಡನೆ ಹಸ್ತಲಾಘವ: ನಮ್ಮ ಸಮಾಜದಲ್ಲಿ ಈ ರೋಗವು ಸಾಂಕ್ರಾಮಿಕವಾಗಿ ಹರಡುತ್ತಿದೆ. ಅಲ್ಲಾಹನ  ಸಂದೇಶವಾಹಕರು(ಸ) ಹೀಗೆಂದಿದ್ದಾರೆ, “ಧರ್ಮಸಮ್ಮತವಲ್ಲದ ಮಹಿಳೆಯನ್ನು ಸ್ಪರ್ಶಿಸುವುದಕ್ಕಿಂತ ನಿಮ್ಮ ತಲೆಗೆ ಲೋಹದ ಮೊಳೆಯನ್ನು  ಹೊಡೆಸಿಕೊಳ್ಳುವುದು ಉತ್ತಮವಾಗಿದೆ.” [ಮುಅïಜಮ್ ಕಬೀರ್ ತಬ್ರಾನೀ(ರ): 20/211, ತಸ್ಹೀಹುಲ್ ಬಾಕೀ(ರ)]
4. ನಮಾಝ್ ತೊರೆಯುವುದು: ಹೆಚ್ಚಿನ ಮಂದಿ ರಮಝಾನ್ ಮುಗಿಯುತ್ತಲೇ ಈದ್‍ನಂದೇ ಯಾವುದೇ ಸೂಕ್ತ ಕಾರಣವಿಲ್ಲದೆ ನಮಾಝನ್ನು  ತೊರೆಯುತ್ತಾರೆ ಮತ್ತು ಈದ್ ನಮಾಝ್‍ನ ಬಳಿಕ ಇಡೀ ದಿನ ಯಾವುದೇ ನಮಾಝನ್ನು ನಿರ್ವಹಿಸುವುದಿಲ್ಲ. ದುರದೃಷ್ಟವಶಾತ್ ಕೆಲವರಲ್ಲಿ ಈ ಗುಣವು  ಮುಂದಿನ ರಮಝಾನ್ ವರೆಗೂ ಜಾರಿಯಲ್ಲಿರುತ್ತದೆ. ಮತ್ತೆ ರಮಝಾನ್ ಆಗಮಿಸುತ್ತಲೇ ಮಳೆಹಾತೆಗಳಂತೆ ಪುನಃ ನಮಾಝ್ ಮತ್ತು ಉಪವಾಸ  ವ್ರತಗಳನ್ನು ಅನುಷ್ಠಾನಿಸಲು ತೊಡಗುತ್ತಾರೆ. ರಮಝಾನ್ ಮುಗಿಯುತ್ತಲೇ ತಮ್ಮ ಹಿಂದಿನ ವರ್ತನೆಯನ್ನು ಪುನರಾವರ್ತಿಸತೊಡಗುತ್ತಾರೆ. ಈ  ವರ್ತನೆಯನ್ನು ತಿದ್ದಬೇಕಾದ ಅಗತ್ಯ ಬಹಳವಿದೆ. ಏಕೆಂದರೆ ಧರ್ಮದಲ್ಲಿ ನಮಾಝ್‍ಗೆ ಇತರೆಲ್ಲ ವಿಷಯಗಳಿಗಿಂತ ಹೆಚ್ಚು ಮಹತ್ವವಿದೆ. ಇದುವೇ ಇಸ್ಲಾಮ್  ಮತ್ತು ಕುಫ್ರನ್ನು ಪ್ರತ್ಯೇಕಿಸುವ ಸಾಧನವಾಗಿದೆ.
5. ಫಕೀರರು ಮತ್ತು ಮಿಸ್ಕೀನರ ಜತೆ ಕಠೋರ ಧೋರಣೆ: ಹೆಚ್ಚಿನ ಮಂದಿ ಸಂತೋಷಾಚರಣೆಯಲ್ಲಿ ಎಷ್ಟು ತಲ್ಲೀನರಾಗಿಬಿಡುತ್ತಾರೆಂದರೆ, ಅವರಲ್ಲಿ  ದೇವಾನುಗ್ರಹಗಳಿಗೆ ಕೃತಜ್ಞತೆ ಮತ್ತು ಬಡವರ ಬಗ್ಗೆ ಮೃದು ಧೋರಣೆ ಹಾಗೂ ಸಹಾನುಭೂತಿಯ ಭಾವನೆಯೇ ಸತ್ತು ಹೋಗಿರುತ್ತದೆ. ಅಲ್ಲಾಹನ  ಸಂದೇಶವಾಹಕರು(ಸ) ಹೀಗೆಂದಿರುವರು, “ನಿಮ್ಮ ಪೈಕಿ ತನಗಾಗಿ ಇಷ್ಟಪಡುವುದನ್ನು ತನ್ನ ದೀನೀ ಸಹೋದರನಿಗೂ ಇಷ್ಟಪಡದ ಹೊರತು  ವಿಶ್ವಾಸಿಯಾಗಲಾರನು.” [ಸಹೀಹ್ ಬುಖಾರಿ(ರ): 13, ಸಹೀಹ್ ಮುಸ್ಲಿಮ್(ರ): 179]
ಈದ್‍ನಂದು ಸತ್ಯವಿಶ್ವಾಸಿಗಳ ವ್ಯವಹಾರ:
ಈದ್ ಸಂತೋಷದ ದಿನವಾಗಿದೆ. ಜನರು ಉತ್ತಮ ವಸ್ತ್ರ ಧರಿಸುತ್ತಾರೆ ಮತ್ತು ಎಲ್ಲ ರೀತಿಯ ಸಂತೋಷವನ್ನು ವ್ಯಕ್ತಪಡಿ ಸುತ್ತಾರೆ. ಈದ್ ವಸ್ತುತಃ  ರಮಝಾನ್ ಮಾಸದ ಅನುಗ್ರಹ ಪಡೆಯುವ ಅವಕಾಶ ದೊರೆತುದಕ್ಕಾಗಿ ಕೃತಜ್ಞತೆ ಅರ್ಪಿಸುವ ದಿನವಾಗಿದೆ. ಆದ್ದರಿಂದ ರಮಝಾನ್‍ನಿಂದ ಪ್ರಯೋಜನ  ಪಡೆ ದವನೇ ಈದ್‍ನ ಸಂತೋಷಕ್ಕೆ ಅರ್ಹನಾಗಿದ್ದಾನೆ. ಅದರೊಂದಿಗೇ ಈದ್ ಪಾರಿತೋಷಕಗಳನ್ನು ವಿತರಿಸುವ ದಿನವಾಗಿದೆ. ರಮ ಝಾನಿನ ಉಪವಾಸ  ವ್ರತವನ್ನು ಈಮಾನ್ ಮತ್ತು ಸದುದ್ದೇಶದೊಂದಿಗೆ ಆಚರಿಸಿದ್ದರೆ ಅದಕ್ಕೆ ಪ್ರತಿಫಲವು ಮಹತ್ಯಶಸ್ಸಾ ಗಿರುವುದು. ಅಂತೆಯೇ ಉಪವಾಸ ವ್ರತಾಚರಿಸದವನಿಗೆ  ಅಥವಾ ಅದರಲ್ಲಿ ಆಲಸ್ಯ ಮತ್ತು ಕೊರತೆಯನ್ನುಂಟು ಮಾಡಿದವನಿಗೆ ವೈಫಲ್ಯ ಮತ್ತು ದೌರ್ಭಾಗ್ಯವೇ ಪ್ರತಿಫಲವಾಗಿರುವುದು. ಆದ್ದ ರಿಂದಲೇ ಅಬ್ದುಲ್ಲಾ ಬಿನ್  ಉಮರ್(ರ) ಹೇಳುತ್ತಾರೆ, “ಈದ್‍ನಂದು ಜನರು ಈದ್‍ಗಾಹ್‍ನಿಂದ ಮರಳುವಾಗ ಅವರಲ್ಲಿ ಕೆಲವರು ಪ್ರತಿಫಲಾರ್ಹರಿರುವರು. ಅವರ ಪ್ರಯತ್ನಗಳೆಲ್ಲವೂ  ಕೃತಜ್ಞಾರ್ಹ ಮತ್ತು ಪ್ರಶಂಸಾರ್ಹವಾಗಿರುತ್ತವೆ. ಇನ್ನು ಕೆಲವರನ್ನು ದೇವಕೃಪೆ ಯಿಂದ ದೂರವಿರಿಸಲಾಗುತ್ತದೆ. ಏಕೆಂದರೆ ಅವರ ಪಾಪಗಳು ಅವರನ್ನು  ದೇವಾನುಗ್ರಹದಿಂದ ವಂಚಿತಗೊಳಿಸಿಬಿಟ್ಟಿರುತ್ತದೆ.”
[ಇಬ್ನು ಅಬೀ ಶೈಬಾ(ರ): 11822]
ಸಂತೋಷ ಪ್ರಕಟಿಸುವಾಗ ಪಾಪಕಾರ್ಯವನ್ನೆಸಗುವುದು ಮತ್ತು ನೈತಿಕ ಮೇರೆಗಳನ್ನು ಮೀರುವುದು ಓರ್ವ ಸತ್ಯವಿಶ್ವಾಸಿಯ ಮಟ್ಟಿಗೆ ಭೂಷಣವಲ್ಲ.  ಮುಸ್ಲಿಮರ ಈದ್‍ಗಳು ಧರ್ಮಶಾಸ್ತ್ರ ಮತ್ತು ನೈತಿಕ ಮೇರೆ ಹಾಗೂ ಶರತ್ತುಗಳ ಪಾಲನೆಯೊಂದಿಗಿ ರಬೇಕು. ಈದ್ ಎಂಬುದು ಸಂಗೀತ-ನೃತ್ಯ, ವಿಹಾರ  ಮತ್ತು ಆಟ-ವಿನೋದದ ಹೆಸರಲ್ಲ. ಬದಲಾಗಿ ನೈಜ ಆರಾಧ್ಯನ ಅನು ಗ್ರಹಗಳಿಗೆ ಕೃತಜ್ಞತೆ ಅರ್ಪಿಸುವ ದಿನವಾಗಿದೆ. ಇಸ್ಲಾಮೀ ಈದ್ ಗಳ ಈ  ವಿಶೇಷತೆಯೇ ಮಿಥ್ಯ ಧರ್ಮಗಳ ಹಬ್ಬ ಮತ್ತು ಜಾತ್ರೆ ಗಳಿಂದ ಪ್ರತ್ಯೇಕಿಸುತ್ತದೆ. ಇದರಲ್ಲಿ ವಿಶ್ವಾಸಪರವಾದ ಸಂತೋಷಗಳು ಮೇಳೈಸಿರುತ್ತವೆ, ಶರೀಅತ್  ಮತ್ತು ನೈತಿಕ ನಿಯಮ-ಮೇರೆಗಳ ಪಾಲನೆಯಾಗುತ್ತದೆ, ಗೌರವ-ಮಾನ್ಯತೆಯ ವಾತಾವರಣ ಇರುತ್ತದೆ. ಓರ್ವ ಪ್ರಜ್ಞಾವಂತ ಸಮುದಾಯವು ಇಂತಹ  ಸಂತೋಷದ ಸಂದರ್ಭದಲ್ಲಿ ತನ್ನ ಸಂಕಷ್ಟ ಮತ್ತು ಕಷ್ಟಪಾಡುಗಳನ್ನು ಸಂಪೂರ್ಣ ಕಡೆಗಣಿಸಬಾರದು. ಇಸ್ಲಾಮೀ ಈದ್‍ಗಳ ಒಂದು ವಿಶೇಷತೆ ಏನೆಂದರೆ  ಅವುಗಳಲ್ಲಿ ಸಮಾಜದ ಹಿಂದುಳಿದ ವರ್ಗಗಳಾದ ಬಡವರು, ನಿರ್ಗತಿಕರು, ಅನಾಥರು ಮತ್ತು ವಿಧವೆಯರ ಯೋಗಕ್ಷೇಮವನ್ನು ವಿಚಾರಿಸಲಾಗುತ್ತದೆ.  ಸಮಾಜದ ಹೆಚ್ಚೆಚ್ಚು ಮಂದಿಯೂ ಈ ಸಂತೋಷದ ಸಂದರ್ಭದಲ್ಲಿ ತಮ್ಮ ಮನೆ-ಮನಗಳನ್ನು ಆನಂದದಿಂದ ತುಂಬಿಕೊಳ್ಳುವಂತಾಗಲು ನಾವು  ಕಾರಣಕರ್ತರಾದರೆ, ಅದುವೇ ಈದ್‍ನ ನೈಜ ಸಂತೋಷವಾಗಿದೆ.
ಪ್ರತಿಯೋರ್ವರೂ ಈದ್‍ನ ದಿನ ಸಹಾನುಭೂತಿ ತೋರಲು, ನೆರೆಕರೆ ಮತ್ತು ಸಂಬಂಧಿಕರನ್ನು ಸಂದರ್ಶಿಸಲು, ಜನರ ಹೃದಯಗಳಲ್ಲಿರಬಹುದಾದ ದ್ವೇಷ  ಮತ್ತು ಅಸೂಯೆಯ ಭಾವನೆಗಳನ್ನು ನೀಗಿಸಲು ಹಾಗೂ ಪರಸ್ಪರ ಆದರಪೂರ್ವಕ ಭೇಟಿಯಾಗಲು ಪ್ರಯತ್ನಿಸಬೇಕು. ಬಡವರು ಮತ್ತು ನಿರ್ಗತಿಕರ ಬಗ್ಗೆ  ಕಾಳಜಿಯನ್ನು ಹೊಂದಬೇಕು, ಅವರೊಡನೆ ಸದ್ವರ್ತನೆ ತೋರಬೇಕು ಮತ್ತು ಅವರನ್ನೂ ಈದ್‍ನ ಸಂತೋಷದಲ್ಲಿ ಭಾಗಿಗೊಳಿಸಬೇಕು. ಅಲ್ಲಾಹ್ ನಮ್ಮ  ಆರಾಧನೆಗಳನ್ನು ಸ್ವೀಕರಿಸಲಿ- ಆಮೀನ್.

ಕೃಪೆ; ಸನ್ಮಾರ್ಗ ವಾರಪತ್ರಿಕೆ

3 Jun 2017

ಇಸ್ಲಾಮಿನಲ್ಲಿ ಹಂದಿಮಾಂಸ ನಿಷಿದ್ಧವೇಕೆ?

ಇಸ್ಲಾಮಿನಲ್ಲಿ ಹಂದಿಮಾಂಸ ನಿಷಿದ್ಧವೇಕೆ?

July 13, 2011 — Satya Sarathi

ಇಸ್ಲಾಮ್ ಹಂದಿ ಮಾಂಸ (Pork) ಸೇವನೆಯನ್ನು ನಿಷಿದ್ಧಗೊಳಿಸಿದೆ ಎಂಬುದು ಎಲ್ಲರೂ ತಿಳಿದಿರುವ ವಿಚಾರವಾಗಿದೆ. ಹಂದಿ ಮಾಂಸವು ತ್ಯಾಜ್ಯ ಯೋಗ್ಯವೇ ಸರಿ ಎಂಬುದನ್ನು ಈ ಕೆಳಗಿನ ಅಂಶಗಳು ಸ್ಪಷ್ಟಪಡಿಸುತ್ತವೆ.

1. ಕುರ್‌ಆನ್‌ನಲ್ಲಿ ಹಂದಿ ಮಾಂಸ ನಿಷೇಧ:
ಕುರ್‌ಆನ್ ನಾಲ್ಕು ಸ್ಥಳಗಳಲ್ಲಿ ಹಂದಿ ಮಾಂಸ ಸೇವನೆಯನ್ನು ನಿಷಿದ್ಧಗೊಳಿಸಿದೆ.
ಶವ, ರಕ್ತ, ಹಂದಿ ಮಾಂಸ ಮತ್ತು ಅಲ್ಲಾಹೇತರರ ಹೆಸರಿನಲ್ಲಿ ಕೊಯ್ಯಲ್ಪಟ್ಟ ಪ್ರಾಣಿ ನಿಮಗೆ ನಿಷಿದ್ಧವಾಗಿದೆ. (5/3)
ಒಬ್ಬ ಮುಸ್ಲಿಮನಿಗೆ ಒಂದು ವಸ್ತು ಅಥವಾ ವಿಷಯವನ್ನು ತೊರೆಯಲು ಕುರ್‌ಆನ್‌ನ ಚಿಕ್ಕದೊಂದು ಸೂಕ್ತಿಯೇ ಧಾರಾಳ ಸಾಕು. ಕುರ್‌ಆನ್ ಹೇಳಿತೆಂದರೆ ಮುಗಿಯಿತು.
ನಿಷೇಧವನ್ನು ವಿಧಿಸುವ ಕುರ್‌ಆನ್‌ನ ಇತರ ಸೂಕ್ತಿಗಳು: 2/173; 6/145; 16/115.

2. ಹಂದಿ ಮಾಂಸವನ್ನು ನಿಷೇಧಿಸುವ ಬೈಬಲ್:
ಈ ಬಗ್ಗೆ ಓರ್ವ ಕ್ರೈಸ್ತನಿಗೆ ಬೈಬಲ್ ಮೂಲಕ ಮನವರಿಕೆ ಮಾಡಿಕೊಟ್ಟರೆ ಅದುವೇ ಧಾರಾಳವಾಗಬಹುದು ಎಂದು ನನ್ನ ಅನಿಸಿಕೆ. ಈ ಕೆಳಗಿನ ಸ್ಥಳಗಳಲ್ಲಿ ಬೈಬಲ್ ಕೂಡಾ ಹಂದಿ ಮಾಂಸವನ್ನು ನಿಷೇಧಿಸುತ್ತದೆ.
ಹಂದಿಯ ಗೊರಸು ಸೀಳಿಯದೆ; ಆದರೂ ಅದು ಮೆಲುಕುಹಾಕುವದಿಲ್ಲವಾದದರಿಂದ ಅದು ನಿಮಗೆ ಅಶುದ್ಧ. ಇವುಗಳ ಮಾಂಸವನ್ನು ನೀವು ತಿನ್ನಬಾರದು; ಇವುಗಳ ಹೆಣವನ್ನು ಮುಟ್ಟಬಾರದು; ಇವುಗಳನ್ನು ಅಶುದ್ಧವೆಂದೆಣಿಸಬೇಕು. (ಯಾಜಕಕಾಂಡ 11/7-8)
ಹಂದಿಯ ಗೊರಸು ಸೀಳಿದ್ದರೂ ಅದು ಮೆಲುಕುಹಾಕುವದಿಲ್ಲವಾದದರಿಂದ ಅದು ನಿಮಗೆ ಅಶುದ್ಧ. ಇವುಗಳ ಮಾಂಸವನ್ನು ನೀವು ತಿನ್ನಕೂಡದು; ಇವುಗಳ ಹೆಣವನ್ನು ಮುಟ್ಟಕೂಡದು. (ಧರ್ಮೋಪದೇಶಕಾಂಡ 14/8)
ಯೆಶಾಯ ಪುಸ್ತಕದ 65ನೇ ಅಧ್ಯಾಯದ 2, 3 ವಚನಗಳಲ್ಲೂ ಹಂದಿ ಮಾಂಸ ನಿಷೇಧಿಸಲ್ಪಟ್ಟಿದೆ.

3. ಹಂದಿ ಮಾಂಸದಿಂದ ಹಲವು ರೋಗಗಳು:
ಇಲ್ಲಿ ತಿಳಿಸಿದ ಕುರ್‌ಆನ್ ಹಾಗೂ ಬೈಬಲ್‌ನ ಸೂಕ್ತಿಗಳು ಮುಸ್ಲಿಮ್ ಹಾಗೂ ಕ್ರೈಸ್ತ ಸಹೋದರರಿಗೆ ಸಾಕಾಗಬಹುದಾದರೂ ಅನ್ಯ ಧರ್ಮೀಯರು ಹಾಗೂ ನಿರೀಶ್ವರವಾದಿಗಳು ಇದನ್ನು ಒಪ್ಪಲಾರರು. ಇವರಿಗೆ ಮನವರಿಕೆ ಮಾಡಬೇಕಾದಲ್ಲಿ ಯುಕ್ತಿ ಹಾಗೂ ವಿಜ್ಞಾನದ ನೆರವು ಬೇಕಾಗುತ್ತದೆ. ಹಂದಿ ಮಾಂಸ ಸೇವನೆಯಿಂದ ಸುಮಾರು ಎಪ್ಪತ್ತು ವಿಧದ ರೋಗಗಳು ಬಾಧಿಸುವ ಸಾಧ್ಯತೆಗಳಿವೆ. ಮನುಷ್ಯ ದೇಹವು Round worm, Pin worm, Hook worm ಮುಂತಾದ ರೋಗಕಾರಕ ಕ್ರಿಮಿಗಳ ತಾಣಗಳಾಗಿ ಮಾರ್ಪಡಬಹುದು. Taenia Solium ಎಂಬುದು ಅತ್ಯಂತ ಅಪಾಯಕಾರಿಯಾಗಿದ್ದು ಇದನ್ನು ಆಡುಭಾಷೆಯಲ್ಲಿ Tape worm ಎನ್ನಲಾಗುತ್ತದೆ. ಅತ್ಯಂತ ಉದ್ದವಾಗಿರುವ ಇದರ ತಾಣವೇ ಕರುಳು. ರಕ್ತಪ್ರವಾಹವನ್ನು ಪ್ರವೇಶಿಸುವ ಇದರ ಮೊಟ್ಟೆಗಳು ದೇಹದ ಎಲ್ಲಾ ಅಂಗಗಳನ್ನೂ ಸೇರಬಲ್ಲುದು. ಇದು ಮೆದುಳನ್ನು ಪ್ರವೇಶಿಸಿದಲ್ಲಿ ಜ್ಞಾಪಕಶಕ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಹೃದಯವನ್ನು ಪ್ರವೇಶಿಸಿದಲ್ಲಿ ಹೃದಯಾಘಾತವೂ, ಕಣ್ಣುಗಳನ್ನು ಪ್ರವೇಶಿಸಿದಲ್ಲಿ ಅಂಧತ್ವ ಮತ್ತು ಪಿತ್ತಕೋಶವನ್ನು ಪ್ರವೇಶಿಸಿದಲ್ಲಿ ಅದನ್ನೂ ಘಾಸಿಗೊಳಿಸುವ ಸಾಧ್ಯತೆಗಳಿವೆ. ಹೀಗೆ ಇದು ದೇಹದ ಎಲ್ಲಾ ಅಂಗಗಳನ್ನೂ ಬಾಧಿಸುವ ಅಪಾಯವಿದೆ.
Trichura tichurasis ಎಂಬುದು ಹಂದಿ ಮಾಂಸದ ಮೂಲಕ ಹರಡುವ ಇನ್ನೊಂದು ಅತ್ಯಂತ ಅಪಾಯಕಾರೀ ಹುಳವಾಗಿದೆ. ಹಂದಿ ಮಾಂಸವನ್ನು ಚೆನ್ನಾಗಿ ಬೇಯಿಸಿದಲ್ಲಿ ಇಂತಹ ಹುಳಗಳಿಂದ ಮುಕ್ತಿ ಹೊಂದಬಹುದು ಎಂದು ಬಹಳಷ್ಟು ಜನರು ಭಾವಿಸಿಕೊಂಡಿರುವರು. ವಾಸ್ತವಿಕವಾಗಿ ಇದೊಂದು ತಪ್ಪು ತಿಳುವಳಿಕೆ ಮಾತ್ರ. ಅಮೇರಿಕಾದ ಸಂಶೋಧನಾ ಶಿಬಿರಗಳಲ್ಲಿ ನಡೆದ ಸಂಶೋಧನೆಗಳು ಬೇಯಿಸಿ ಬಚಾವಾಗುವ ತಂತ್ರಗಳ ಪೊಳ್ಳುತನವನ್ನು ಬಯಲಿಗೆಳೆದಿವೆ. Trichura tichurasis ಪೀಡಿತರಾದ 24 ರೋಗಿಗಳಲ್ಲಿ 20 ಮಂದಿ ಹಂದಿ ಮಾಂಸವನ್ನು ಚೆನ್ನಾಗಿ ಬೇಯಿಸಿಯೇ ತಿಂದಿದ್ದರು. ಇದು ಹಂದಿ ಮಾಂಸದಲ್ಲಿರುವ ರೋಗಾಣು ಮೊಟ್ಟೆಗಳು (ova) ಕುದಿಯುವ ಉಷ್ಣತೆಯಲ್ಲಿ ನಾಶ ಹೊಂದಲಾರವು ಎಂಬುದನ್ನು ಸ್ಪಷ್ಟಪಡಿಸುತ್ತದೆ.

4. ಕೊಬ್ಬು ಶೇಖರಣಾ ಅಂಶ ಹಂದಿ ಮಾಂಸದಲ್ಲಿ ಅತ್ಯಧಿಕ:
ಹಂದಿ ಮಾಂಸದಲ್ಲಿ ಸ್ನಾಯುವರ್ಧಕ ಅಂಶಗಳು ಅತ್ಯಲ್ಪ ಮತ್ತು ಕೊಬ್ಬಿನಾಂಶಗಳು ಅತ್ಯಧಿಕವಾಗಿವೆ. ಕೊಬ್ಬಿನ ಅಂಶಗಳು ರಕ್ತನಾಳಗಳಲ್ಲಿ ಶೇಖರಿಸಲ್ಪಟ್ಟು ಅಧಿಕ ರಕ್ತದೊತ್ತಡ ಹಾಗೂ ಹೃದಯಾಘಾತಕ್ಕೆ ಕಾರಣವಾಗುತ್ತವೆ. ಅಮೇರಿಕಾದ 50 ಶೇಕಡಕ್ಕಿಂತಲೂ ಅಧಿಕ ಮಂದಿಗೆ ಅಧಿಕ ರಕ್ತದೊತ್ತಡ (hypertension) ಇರುವುದರಲ್ಲಿ ಆಶ್ಚರ್ಯಪಡಬೇಕಾಗಿಲ್ಲ.

5. ಹಂದಿ ಪ್ರಾಣಿಗಳಲ್ಲೇ ಅತ್ಯಂತ ಕೊಳಕು:
ಹಂದಿಯು ಜಗತ್ತಿನ ಅತ್ಯಂತ ಕೊಳಕು ಪ್ರಾಣಿಗಳ ಪೈಕಿ ಒಂದಾಗಿದೆ. ಇದು ಕೊಳಕಿನಲ್ಲಿಯೇ ಜೀವಿಸಿ ಬೆಳೆಯುವ ಪ್ರಾಣಿಯಾಗಿದೆ. ನನ್ನ ಅನಿಸಿಕೆಯಂತೆ ಹಂದಿಯು ದೇವನು ಸೃಷ್ಟಿಸಿದ ಅತ್ಯುತ್ತಮ ಜಾಡಮಾಲಿಯಾಗಿದೆ. ಸುಸಜ್ಜಿತ ಪಾಯಿಖಾನೆಗಳಿಲ್ಲದ ಹಳ್ಳಿಗರು ತೆರೆದ ಮೈದಾನದಲ್ಲೇ ಪ್ರಕೃತಿಯ ಕರೆಗೆ ಓಗೊಡುವರು. ಹಂದಿಗಳು ಕ್ಷಣಾರ್ಧದಲ್ಲೇ ಅದನ್ನು ತಿಂದು ಸ್ವಚ್ಛ ಮಾಡುತ್ತವೆ.
ಮುಂದುವರಿದ ರಾಷ್ಟ್ರಗಳಾದ ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ಹಂದಿಗಳನ್ನು ಸುವ್ಯವಸ್ಥಿತ ರೀತಿಯಲ್ಲಿ, ಶುದ್ಧ ಪರಿಸರದಲ್ಲಿ ಸಾಕುತ್ತಾರೆ ಎಂಬ ವಾದ ಕೆಲವರಿಗಿದೆ. ಆದರೆ ಅವುಗಳನ್ನು ಶುದ್ಧವಾಗಿಡಲು ನೀವೆಷ್ಟೇ ಪ್ರಯತ್ನ ಮಾಡಿದರೂ ಅದು ತನ್ನ ಪ್ರಕೃತಿದತ್ತ ಕೊಳಕುತನವನ್ನು ಬಿಡಲಾರದು. ತನ್ನ ಸಂಗಾತಿಯ ಮ್ಲೇಚ್ಛವನ್ನು, ಅದೂ ಸಿಗದಿದ್ದಲ್ಲಿ ತನ್ನ ಸ್ವಂತದ್ದನ್ನೇ ಸ್ವಾಹಾ ಮಾಡಿ ಮುಗಿಸುತ್ತದೆ!

6. ಹಂದಿಯು ಅತ್ಯಂತ ಲಜ್ಜಾಹೀನ ಪ್ರಾಣಿ:
ಹಂದಿಯು ಜಗತ್ತಿನ ಅತ್ಯಂತ ಲಜ್ಜಾಹೀನ ಪ್ರಾಣಿಯೂ ಆಗಿದೆ. ತನ್ನ ಸಂಗಾತಿಯ ಜೊತೆ ಕಾಮಕೇಳಿ ನಡೆಸಲು ತನ್ನ ಗೆಳೆಯರನ್ನೇ ಅಹ್ವಾನಿಸಿ ಖುಷಿಪಡುವ ಏಕೈಕ ಪ್ರಾಣಿಯಾಗಿದೆ. ಅಮೇರಿಕನ್ನರ ಪೈಕಿ ಹೆಚ್ಚಿನವರು ಹಂದಿ ಮಾಂಸ ಪ್ರಿಯರು. ಇವರಲ್ಲಿ ಚಾಲ್ತಿಯಲ್ಲಿರುವ ನೃತ್ಯಕೂಟಗಳ ಬಳಿಕ ಪತ್ನಿಯರ ವಿನಿಮಯ (swapping) ಎಂಬ ಕಾರ್ಯಕ್ರಮವೂ ಇರುತ್ತದೆ. ಈ ರಾತ್ರಿ ನಿನ್ನ ಪತ್ನಿ ನನಗೆ, ನನ್ನ ಪತ್ನಿ ನಿನಗೆ ಎಂದಾಗಿದೆ ಇದು. ಸೇವಿಸುವ ಆಹಾರವು ಸ್ವಭಾವದ ಮೇಲೆ ಪರಿಣಾಮ ಬೀರುತ್ತದೆ ಎಂಬ ಇವರ ಸಂಶೋಧನೆಯು ಇವರಿಗೇ ತಿರುಮಂತ್ರವಾಗಿದೆ. ಹಂದಿ ಮಾಂಸ ತಿನ್ನುವವರಿಗೆ ಅದರದೇ ಸ್ವಭಾವವೂ ಅಂಟಿಕೊಂಡಿದೆ. ಅಮೇರಿಕದವರನ್ನು ಉನ್ನತರೆಂದು ಭ್ರಮಿಸಿಕೊಂಡಿರುವ ಭಾರತೀಯರಾದ ನಾವು ಕೆಲವು ವರ್ಷಗಳ ಬಳಿಕ ಅವರ ಬೆನ್ನು ಹತ್ತುತ್ತೇವೆ. Island Magazine ಒಂದರ ವರದಿಯಂತೆ ಮುಂಬಯಿಯ ಶ್ರೀಮಂತ ವರ್ತುಲಗಳಲ್ಲಿ swapping ಪದ್ಧತಿಯು ಸಾಮಾನ್ಯವಾಗಿದೆ.

30 May 2017

ಕುರ್‌ಆನ್ ಸಂಗ್ರಹದ ಇತಿಹಾಸ.

ಕುರ್‌ಆನ್ ಸಂಗ್ರಹದ ಇತಿಹಾಸ; ಕುರ್‌ಆನಿಗಿಂತ ಹಿಂದೆ ಮಾನವ ಸಮಾಜಕ್ಕೆ ನೀಡಲಾಗಿದ್ದ ದಿವ್ಯ ಗ್ರಂಥಗಳೆಲ್ಲಾ,ಪುರೋಹಿತರು, ಆಡಳಿತಗಾರರು ಮತ್ತಿತರ ಹಲವರ ಇಚ್ಛಾನುಸಾರ, ಹಲವು ಹಸ್ತಕ್ಷೇಪಗಳಿಗೆ ಹಾಗೂ ವಿವಿಧ ವಿಕೃತಿಗಳಿಗೆ ತುತ್ತಾಗಿ, ಕಾಲಕ್ರಮೇಣ ತಮ್ಮ ಮೂಲಸ್ವರೂಪವನ್ನೇ ಕಳೆದುಕೊಂಡವು.ಅದರೆ ಪವಿತ್ರ ಕುರ್‌ಆನ್ ಇಂತಹ ಯಾವುದೇ ದುರಂತಕ್ಕೆ ತುತ್ತಾಗಲಿಲ್ಲ,ಮಾತ್ರವಲ್ಲ, ಅದು ಯಾವ ಕಾಲದಲ್ಲೂ ಅಂತಹ ಯಾವುದೇ ವಿಕೃತಿಗೆ ಒಳಗಾಗುವ ಸಾಧ್ಯತೆ ಕೂಡಾ ಇಲ್ಲ. ಏಕೆಂದರೆ, ಇದು ಮಾನವಕುಲದ ಮಾರ್ಗದರ್ಶನಕ್ಕಿರುವ ಅಂತಿಮ ಮೂಲವಾಗಿದ್ದು, ಇದನ್ನು ಕಳಿಸಿರುವ ಅಲ್ಲಾಹನೇ ಇದನ್ನು ಸಂರಕ್ಷಿಸುವ ಹೊಣೆಹೊತ್ತಿರುವನು. ಪ್ರವಾದಿ ಮುಹಮ್ಮದ್(ಸ)ರಿಗೆ ಅಲ್ಲಾಹನ ಕಡೆಯಿಂದ ಪ್ರಥಮ ದಿವ್ಯ ಸಂದೇಶವು ಕ್ರಿ.ಶ. 610ರಲ್ಲಿ ಪ್ರಾಪ್ತವಾಗಿತ್ತು. ಅನಂತರದ 23 ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ಕುರ್‌ಆನಿನ ಭಾಗಗಳು ಅವರಿಗೆ ಪ್ರಾಪ್ತವಾಗುತ್ತಲೇ ಇದ್ದವು. ಪ್ರವಾದಿವರ್ಯ(ಸ)ರ ನಿಧನಕ್ಕೆ ಕೆಲವೇ ದಿನ ಮುನ್ನ ಕ್ರಿ.ಶ.632ರಲ್ಲಿ ಈ ಸರಣಿ ಪರಿಪೂರ್ಣಗೊಂಡಿತು.

ಈ ರೀತಿ, ಕುರ್‌ಆನಿನ ಅನಾವರಣದ ಪ್ರಕ್ರಿಯೆಯು ಪೂರ್ಣವಾಗುತ್ತಿದ್ದಂತೆಯೇ,ಅದನ್ನು ಸಂರಕ್ಷಿಸುವ ಪ್ರಕ್ರಿಯೆಯ ಒಂದು ನಿರ್ಣಾಯಕ ಹಂತವೂ ಪೂರ್ಣಗೊಂಡಿತ್ತು. ಪ್ರವಾದಿವರ್ಯ(ಸ)ರ ಬದುಕಿನ ಅವಧಿಯಲ್ಲೇ, ಎರಡೆರಡು ವಿಧಾನಗಳಿಂದ ಕುರ್‌ಆನನ್ನು ಸುರಕ್ಷಿತವಾಗಿ ದಾಖಲಿಸಲಾಗಿತ್ತು; 1. ದಿವ್ಯ ಸಂದೇಶವನ್ನು ಕಂಠ ಪಾಠ ಮಾಡುವ ಮೂಲಕ ಮತ್ತು 2.ಅದನ್ನು ಲಿಖಿತವಾಗಿ ದಾಖಲಿಸುವ ಮೂಲಕ. ಅಂದರೆ ಪ್ರಥಮವಾಗಿ, ಮಾನವ ಮಸ್ತಿಷ್ಕಗಳಲ್ಲೇ ಕುರ್‌ಆನನ್ನು ಸಂರಕ್ಷಿಸಲಾಯಿತು. ಸಾಕ್ಷಾತ್ ಪ್ರವಾದಿ ಮುಹಮ್ಮದ್(ಸ) ಪವಿತ್ರ ಕುರ್‌ಆನಿನ ಪ್ರಥಮ ‘ಹಾಫಿಝ್’ ಆಗಿದ್ದರು. (ಹಾಫಿಝ್ ಎಂದರೆ ಸಂರಕ್ಷಕ. ಕುರ್‌ಆನನ್ನು ಸಂಪೂರ್ಣ ಕಂಠಪಾಠ ಮಾಡಿಕೊಂಡವರನ್ನು ಹಾಫಿಝ್‌ಗಳೆಂದು ಗುರುತಿಸಲಾಗುತ್ತದೆ). ಪ್ರವಾದಿವರ್ಯ(ಸ)ರ ಸಂಗಾತಿ (ಸಹಾಬಿ)ಗಳ ಪೈಕಿ, ಅಬೂಬಕರ್(ರ), ಉಮರ್(ರ),ಉಸ್ಮಾನ್(ರ), ಅಲೀ(ರ), ತಲ್ಹಾ (ರ),ಸಅದ್(ರ), ಇಬ್ನು ಮಸ್‌ವೂದ್(ರ), ಅಬೂ ಹುರೈರ(ರ), ಅಬ್ದುಲ್ಲಾಹ್‌ಬಿನ್ ಉಮರ್(ರ),ಇಬ್ನು ಅಬ್ಬಾಸ್(ರ),ಅನಸ್‌ಬಿನ್‌ಮಾಲಿಕ್(ರ)ಮುಂತಾದ ಖ್ಯಾತ ನಾಮರ ಸಹಿತ ನೂರಾರು ಮಂದಿ ಹಾಫಿಝ್‌ಗಳಾಗಿದ್ದರು. ಇದರ ಜೊತೆಗೆ, ದಿವ್ಯ ಸಂದೇಶವನ್ನು ಬರೆದು ದಾಖಲಿಸಿಡುವ ಏರ್ಪಾಡನ್ನೂ ಮಾಡಲಾಗಿತ್ತು. ನಾಲ್ವರು ಖಲೀಫರ ಸಹಿತ ಸುಮಾರು 40 ಸಹಾಬಿಗಳು ಅಧಿಕೃತವಾಗಿ ಪ್ರವಾದಿವರ್ಯ(ಸ)ರ ನಿರ್ದೇಶಾನುಸಾರ ದಿವ್ಯ ಸಂದೇಶವನ್ನು ಬರೆದಿಡುತ್ತಿದ್ದರು. ಪ್ರವಾದಿವರ್ಯ(ಸ)ರಿಗೆ ಕುರ್‌ಆನಿನ ಯಾವುದಾದರೂ ಭಾಗವು ಪ್ರಾಪ್ತವಾದಾಗ ಅವರು ತಮ್ಮ ಸಂಗಾತಿಗಳನ್ನು ಕರೆದು ಆ ಭಾಗವನ್ನು, ಈ ಹಿಂದೆ ದಾಖಲಿಸಲಾದ ಯಾವ ಭಾಗದ ಮುನ್ನ ಅಥವಾ ಯಾವ ಭಾಗದ ನಂತರ ಬರೆದಿಡಬೇಕೆಂದು ಸೂಚಿಸುತ್ತಿದ್ದರು. ಆ ಪ್ರಕಾರ ಸಹಾಬಿಗಳು ಅದನ್ನು ಕಲ್ಲಿನ ಫಲಕಗಳಲ್ಲಿ, ಚರ್ಮದಲ್ಲಿ, ಖರ್ಜೂರದ ಎಲೆಗಳ ಹಾಳೆಗಳಲ್ಲಿ, ಬಿದಿರಿನ ತುಂಡುಗಳಲ್ಲಿ ಹೀಗೆ ವಿವಿಧ ವಸ್ತುಗಳಲ್ಲಿ ಬರೆದಿಡುತ್ತಿದ್ದರು. ಇವರಲ್ಲದೆ ಕುರ್‌ಆನಿನ ಭಾಗಗಳನ್ನು ಕಂಠಪಾಠ ಮಾಡಿಕೊಂಡಿದ್ದ ಇತರ ಅನೇಕ ಸಂಗಾತಿಗಳೂ ತಮಗೆ ನೆನಪಿರುವ ಭಾಗಗಳನ್ನು ಬರೆದಿಡುತ್ತಿದ್ದರು. ಹಾಗೆಯೇ,ಪ್ರತಿದಿನ, ಕಡ್ಡಾಯ ಹಾಗೂ ಐಚ್ಛಿಕ ನಮಾಝ್‌ಗಳಲ್ಲಿ ಕುರ್‌ಆನನ್ನು ಓದುವ ಹಾಗೂ ಮುಸ್ಲಿಮರು ಒಟ್ಟುಸೇರುವ ಸಂದರ್ಭಗಳಲ್ಲೆಲ್ಲಾ ಪರಸ್ಪರರಿಗೆ ಕುರ್‌ಆನನ್ನು ಓದಿ ಕೇಳಿಸುವ ಸಂಪ್ರದಾಯವು ಪ್ರವಾದಿವರ್ಯ(ಸ)ರ ಕಾಲದಿಂದಲೇ ಅನುಷ್ಠಾನದಲ್ಲಿದ್ದು,ಕುರ್‌ಆನಿನ ಸಂರಕ್ಷಣೆಯ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸಿದೆ.

ಪ್ರವಾದಿವರ್ಯ(ಸ)ರ ಕಾಲದಲ್ಲಿ ಪವಿತ್ರ ಕುರ್‌ಆನನ್ನು ಬರೆದಿಡಲಾಗಿದ್ದ ಕೆಲವು ಕೃತಿಗಳು ಪೂರ್ಣವಾಗಿದ್ದರೆ, ಹೆಚ್ಚಿನ ಸಂಗ್ರಹ ಕೃತಿಗಳು ಅಪೂರ್ಣವಾಗಿದ್ದವು. ಕೆಲವರ ಬಳಿ5 ಅಧ್ಯಾಯಗಳಿದ್ದರೆ ಮತ್ತೆ ಕೆಲವರ ಬಳಿ 15ಅಧ್ಯಾಯಗಳಿದ್ದವು. ಕೆಲವರು ಕುರ್‌ಆನಿನ ಮೂಲ ವಾಕ್ಯಗಳ ಜೊತೆಗೆ, ಆ ಕುರಿತು ಟಿಪ್ಪಣಿಗಳನ್ನೂ ಬರೆದಿದ್ದರು. ಆದ್ದರಿಂದ ಪ್ರವಾದಿವರ್ಯ(ಸ)ರ ಬಳಿಕ ಮುಸ್ಲಿಮ್ ಸಮುದಾಯದ ನಾಯಕರಾಗಿ ನಿಯುಕ್ತರಾದ ಅಬೂಬಕರ್ ಸಿದ್ದೀಕ್(ರ)ರ ಆಡಳಿತಾವಧಿಯಲ್ಲಿ ಪ್ರಸ್ತುತ ಭಾಗಗಳನ್ನೆಲ್ಲಾ ಒಂದುಗೂಡಿಸಿ, ಒಂದು ಅಧಿಕೃತ ಪ್ರತಿಯನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಯಿತು.

ಈ ಕಾರ್ಯಾಚರಣೆಯ ಉಸ್ತುವಾರಿಯನ್ನು ಝೈದ್‌ಬಿನ್ ಸಾಬಿತ್(ರ) ರಿಗೆ ವಹಿಸಿ ಕೊಡಲಾಯಿತು. ಅವರು ಸ್ವತಃ ಕುರ್‌ಆನ್ ಕಂಠಪಾಠವಿರುವ ಹಾಫಿಝ್ ಆಗಿದ್ದರು. ಅಲ್ಲದೆ ಪ್ರವಾದಿವರ್ಯ(ಸ)ರ ಕಾಲದಲ್ಲಿ,ಕುರ್‌ಆನಿನ ವಾಕ್ಯಗಳನ್ನು ಬರೆದಿಡುವ ಕಾಯಕದಲ್ಲಿ ಸಕ್ರಿಯವಾಗಿ ಪಾಲುಗೊಂಡ ಅನುಭವವೂ ಅವರಿಗಿತ್ತು. ಅವರು ಕೇವಲ ತಮ್ಮ ನೆನಪಿನ ಆಧಾರದಲ್ಲಿ ಅಥವಾ ಆ ಕಾಲದಲ್ಲಿ ಅವರಿಗೆ ಸುಲಭವಾಗಿ ಲಭ್ಯವಾಗಿದ್ದ ಕುರ್‌ಆನಿನ ಹಲವು ಸಂಪೂರ್ಣ ಲಿಖಿತ ಪ್ರತಿಗಳ ಪೈಕಿ ಯಾವುದಾದರೂ ಒಂದು ಅಥವಾ ಎರಡು ಪ್ರತಿಗಳನ್ನು ಆಧಾರವಾಗಿಟ್ಟು ಈ ಕಾರ್ಯವನ್ನು ನೆರವೇರಿಸಬಹುದಾಗಿತ್ತು. ಆದರೆ ಅವರು ಈ ವಿಷಯದಲ್ಲಿ ಇಂತಹ ಯಾವುದಾದರೂ ಒಂದೆರಡು ಮೂಲಗಳನ್ನು ಮಾತ್ರ ಅವಲಂಬಿಸುವ ಬದಲು, ಬಹಳ ಸಮಗ್ರವಾದ ಹಾಗೂ ಪ್ರಮಾದಗಳಿಗೆ ಅವಕಾಶವೇ ಇಲ್ಲದ ವಿಧಾನವೊಂದನ್ನು ಅನುಸರಿಸಿದರು.

ಈ ನಿಟ್ಟಿನಲ್ಲಿ ಪ್ರಥಮ ಹೆಜ್ಜೆಯಾಗಿ,ಅಬೂಬಕರ್ ಸಿದ್ದೀಕ್(ರ) ಅವರು ಉಮರ್ ಬಿನ್ ಖತ್ತಾಬ್(ರ)ರನ್ನು, ಝೈದ್(ರ)ರ ಸಹಾಯಕರಾಗಿ ನೇಮಿಸಿದರು. ಉಮರ್(ರ) ಸ್ವತಃ ಹಾಫಿಝ್ ಆಗಿದ್ದರು ಹಾಗೂ ಕುರ್‌ಆನಿನ ಒಂದೊಂದು ವಾಕ್ಯದ ಕುರಿತೂ ಸಾಕ್ಷಾತ್ ಪ್ರವಾದಿವರ್ಯ(ಸ)ರ ಜೊತೆ ಚರ್ಚಿಸಿ ಆ ಕುರಿತು ತಿಳುವಳಿಕೆ ಪಡೆದವರಾಗಿದ್ದರು. ಎರಡನೆಯ ಹೆಜ್ಜೆಯಾಗಿ,ಯಾರೆಲ್ಲರ ಬಳಿ ಕುರ್‌ಆನನ್ನು ಬರೆದಿಟ್ಟ ಫಲಕ, ಹಾಳೆ ಇತ್ಯಾದಿಗಳಿವೆಯೋ ಅವರೆಲ್ಲಾ ಅವುಗಳನ್ನು ತಂದೊಪ್ಪಿಸಬೇಕೆಂದು ಸಾರ್ವಜನಿಕರಿಗೆ ಕರೆ ನೀಡಲಾಯಿತು. ಆ ಪ್ರಕಾರ ಜನರು ತಂದು ಕೊಡುತ್ತಿದ್ದ ಪ್ರತಿಗಳನ್ನು ಝೈದ್(ರ) ಹಾಗೂ ಉಮರ್(ರ) ಜಂಟಿಯಾಗಿ ಸ್ವೀಕರಿಸುತ್ತಿದ್ದರು ಹಾಗೂ ಅವರಿಬ್ಬರೂ ಜೊತೆಯಾಗಿ ತಮ್ಮ ನೆನಪಿನ ಹಾಗೂ ಅದಾಗಲೇ ಲಭ್ಯವಿದ್ದ ವಿಶ್ವಸನೀಯ ಪ್ರತಿಗಳ ಆಧಾರದಲ್ಲಿ ಅವುಗಳ ಪರಿಶೀಲನೆ ನಡೆಸುತ್ತಿದ್ದರು. ಮೂರನೆಯದಾಗಿ, ಲಭ್ಯ ಲಿಖಿತ ಪ್ರತಿಗಳನ್ನು ಪರಿಶೀಲನೆಗಾಗಿ ಸ್ವೀಕರಿಸುವ ಮುನ್ನ,ಅವುಗಳ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿತ್ತು. ಅದಕ್ಕಾಗಿ,ಯಾವುದೇ ಪ್ರತಿಯ ಪರವಾಗಿ, ಅದನ್ನು ಪ್ರವಾದಿವರ್ಯ(ಸ)ರ ಬದುಕಿನ ಕೊನೆಯ ವರ್ಷದಲ್ಲಿ ಪ್ರವಾದಿವರ್ಯರ(ಸ) ಮುಂದೆ ಓದಿ ಕೇಳಿಸಲಾಗಿತ್ತು ಹಾಗೂ ಅವರು ಅದನ್ನು ಅನುಮೋದಿಸಿದ್ದರೆಂದು ಇಬ್ಬರು ನಂಬಲರ್ಹ ವ್ಯಕ್ತಿಗಳು ಸಾಕ್ಷಿ ಹೇಳಿದ ಬಳಿಕ ಮಾತ್ರ ಅಂತಹ ಪ್ರತಿಯನ್ನು ಪರಿಶೀಲನೆಗೆ ತೆಗೆದು ಕೊಳ್ಳಲಾಗುತ್ತಿತ್ತು. ನಾಲ್ಕನೆಯದಾಗಿ, ಇಂತಹ ಎಲ್ಲ ಬಿಡಿ ಪ್ರತಿಗಳಲ್ಲಿದ್ದ ಬರಹಗಳನ್ನು,ಸಾಕ್ಷಾತ್ ಪ್ರವಾದಿವರ್ಯ(ಸ)ರ ಸಮಕ್ಷಮ ಅವರ ಸಂಗಾತಿಗಳು ಬರೆದಿಟ್ಟಿದ್ದ ಪೂರ್ಣ ಪ್ರತಿಗಳೊಂದಿಗೆ ಹೋಲಿಸಿ ನೋಡಲಾಗುತ್ತಿತ್ತು. ಇಷ್ಟಾದ ಬಳಿಕ ಪ್ರತಿಯೊಂದು ಅಧ್ಯಾಯವನ್ನು ಪ್ರತ್ಯೇಕ ಕಾಗದಗಳಲ್ಲಿ ಬರೆದು ದಾಖಲಿಸಲಾಯಿತು. ಈ ಸಂಗ್ರಹವನ್ನು ಜನರು ‘ಉಮ್ಮ್’ (ಮಾತೃ ಪ್ರತಿ) ಎಂದು ಕರೆಯುತ್ತಿದ್ದರು. ಈ ಸಂಗ್ರಹದಲ್ಲಿ ಕುರ್‌ಆನಿನ ಎಲ್ಲ ವಚನಗಳನ್ನು ಪ್ರವಾದಿ(ಸ) ಸೂಚಿಸಿದ್ದ ಕ್ರಮಾನುಸಾರವೇ ದಾಖಲಿಸಲಾಗಿತ್ತು. ಆದರೆ ಅಧ್ಯಾಯಗಳನ್ನು ಮಾತ್ರ ಪ್ರತ್ಯ ಪ್ರತ್ಯೇಕ ಹಾಳೆಗಳಲ್ಲಿ ಬರೆಯಲಾಗಿತ್ತು. ಈ ಅಧ್ಯಾಯಗಳ ಸಂಗ್ರಹವು ಅಬೂಬಕರ್(ರ)ರ ಅಧಿಕಾರಾವಧಿಯಲ್ಲಿ ಅವರ ವಶದಲ್ಲಿತ್ತು ಮತ್ತು ಅವರ ನಿಧನಾನಂತರ ಉಮರ್(ರ)ರ ವಶದಲ್ಲಿತ್ತು. ಉಮರ್(ರ) ಹುತಾತ್ಮರಾದಾಗ ಅವರ ಉಪದೇಶಾನುಸಾರ ಅದನ್ನು ಪ್ರವಾದಿಪತ್ನಿ ಹಫ್ಸಾ(ರ)ರ ವಶಕ್ಕೆ ನೀಡಲಾಯಿತು.

ಕುರ್‌ಆನಿನ ಸಂಗ್ರಹ ಹಾಗೂ ಕ್ರೋಡೀಕರಣದ ನಿಟ್ಟಿನಲ್ಲಿ ಅಂತಿಮ ಕಾರ್ಯಾಚರಣೆಯು ತೃತೀಯ ಖಲೀಫಾ ಉಸ್ಮಾನ್ ಬಿನ್ ಅಫ್ಫಾನ್(ರ) ಅವರ ಆಡಳಿತಾವಧಿಯಲ್ಲಿ ನಡೆಯಿತು. ಆ ವೇಳೆಗಾಗಲೇ ಇಸ್ಲಾಮಿನ ಬೆಳಕು ಅರೇಬಿಯಾದ ಗಡಿಗಳನ್ನು ದಾಟಿ, ಇರಾನ್ ಸಹಿತ ದೂರದೂರದ ಹಲವಾರು ನಾಡುಗಳಲ್ಲಿ ಹಬ್ಬಿತ್ತು. ಜನರು ದೊಡ್ಡ ಸಂಖ್ಯೆಯಲ್ಲಿ ಸಾಮೂಹಿಕವಾಗಿ ಇಸ್ಲಾಮ್ ಧರ್ಮ ಸ್ವೀಕರಿಸಿದ್ದ ಈ ನಾಡುಗಳಲ್ಲಿ,ಕುರ್‌ಆನನ್ನು ಯಾವ ಶೈಲಿಯಲ್ಲಿ ಓದಬೇಕೆಂಬ ವಿಷಯದಲ್ಲಿ ಭಿನ್ನಾಭಿಪ್ರಾಯಗಳು ಮೂಡತೊಡಗಿದವು. ಹಲವರಿಗೆ, ಪ್ರವಾದಿವರ್ಯರು(ಸ) ಅನುಮತಿಸಿದ ಕುರ್‌ಆನ್ ಪಠಣದ ಏಳು ವಿಭಿನ್ನ ಶೈಲಿಗಳ ಅರಿವು ಇರಲಿಲ್ಲ. ಆದ್ದರಿಂದ ಕೆಲವರು, ತಾವು ಓದುವ ಶೈಲಿ ಮಾತ್ರ ಸರಿ,ಇತರರ ಶೈಲಿ ಸರಿಯಲ್ಲ ಎಂದು ಪಟ್ಟು ಹಿಡಿಯಲಾರಂಭಿಸಿದರು. ಈ ಸನ್ನಿವೇಶಕ್ಕೆ ಒಂದು ಶಾಶ್ವತ ಪರಿಹಾರ ಒದಗಿಸಲು ನಿರ್ಧರಿಸಿದ ಉಸ್ಮಾನ್(ರ), ಈ ಹಿಂದೆ,ಅಬೂಬಕರ್ ಸಿದ್ದೀಕ್(ರ) ಅವರ ಕಾಲದಲ್ಲಿ ಕ್ರೋಢೀಕರಿಸಲಾಗಿದ್ದ ಕುರ್‌ಆನಿನ ‘ಮಾತೃ ಪ್ರತಿ’ ಯ ನಕಲು ಪ್ರತಿಗಳನ್ನು ತಯಾರಿಸಿ ಅವುಗಳನ್ನು ಎಲ್ಲ ಪ್ರದೇಶಗಳಿಗೆ ರವಾನಿಸಿ ಕೊಡಲು ನಿರ್ಧರಿಸಿದರು. ಈ ನಿಟ್ಟಿನಲ್ಲಿ ಅವರು ಪ್ರಥಮವಾಗಿ, ಹಫ್ಸಾ(ರ)ರಿಗೆ ಸಂದೇಶ ಕಳಿಸಿ ‘ಮಾತೃಪ್ರತಿ’ಯನ್ನು ತಮ್ಮ ಬಳಿಗೆ ತರಿಸಿಕೊಂಡರು.

ಎರಡನೆಯದಾಗಿ, ಈ ಹಿಂದೆ ಅಬೂಬಕರ್(ರ)ರ ಕಾಲದಲ್ಲಿ‘ಮಾತೃಪ್ರತಿ’ಯನ್ನು ಕ್ರೋಡೀಕರಿಸುವ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದ ಝೈದ್ ಬಿನ್ ಸಾಬಿತ್(ರ)ರ ಸಹಿತ ನಾಲ್ವರು ಹಿರಿಯ ಸಹಾಬಿಗಳನ್ನೊಳಗೊಂಡ ಸಮಿತಿಯೊಂದನ್ನು ರಚಿಸಿದರು ಮತ್ತು‘ಮಾತೃಪ್ರತಿ’ಯ ನಕಲು ಪ್ರತಿಗಳನ್ನು ತಯಾರಿಸುವ ಹೊಣೆಗಾರಿಕೆಯನ್ನು ಆ ಸಮಿತಿಗೆ ವಹಿಸಿಕೊಟ್ಟರು. ಜೊತೆಗೆ,ಸುಮಾರು ಹನ್ನೆರಡು ಮಂದಿ ಹಿರಿಯ ಸಹಾಬಿಗಳ ತಂಡವೊಂದನ್ನು ಆ ಸಮಿತಿಯ ನೆರವಿಗಾಗಿ ನೇಮಿಸಿದರು. ಪ್ರಸ್ತುತ ಸಮಿತಿಯು, ಮತ್ತೆ ಅಬೂಬಕರ್ ಸಿದ್ದೀಕ್(ರ)ರ ಕಾಲದಲ್ಲಿ ಅನುಸರಿಸಲಾಗಿದ್ದ ಕ್ರಮವನ್ನೇ ಅನುಸರಿಸಿ, ಜನರ ಬಳಿ ಇದ್ದ ವಿವಿಧ ಲಿಖಿತ ಪ್ರತಿಗಳನ್ನು ತರಿಸಿ ಹೋಲಿಸಿ ನೋಡಿದ ಬಳಿಕ ಮಾತೃಪ್ರತಿಯ ಪರಿಪೂರ್ಣತೆಯನ್ನು ಮತ್ತೆ ಅನುಮೋದಿಸಿ,ಅದರ ನಕಲು ಪ್ರತಿಗಳನ್ನು ರಚಿಸಿತು.

ಈ ಸಮಿತಿಯು ‘ಮಾತೃಪ್ರತಿ’ಯಲ್ಲಿ ಪ್ರತ್ಯ ಪ್ರತ್ಯೇಕವಾಗಿ ಬರೆದಿಡಲಾಗಿದ್ದ ಎಲ್ಲ ಅಧ್ಯಾಯಗಳನ್ನು ಕ್ರಮಬದ್ಧವಾಗಿ ಒಂದೇ ಪ್ರತಿಯಲ್ಲಿ ಕ್ರೋಡೀಕರಿಸಿ, ಅದರ ಹಲವು ನಕಲು ಪ್ರತಿಗಳನ್ನು ರಚಿಸಿತು. ಆ ಪ್ರತಿಗಳನ್ನು ಮಕ್ಕಃ, ಬಹ್ರೈನ್, ಯಮನ್, ಕೂಫಾ,ಸಿರಿಯಾ, ಬಸ್ರಾ ಮುಂತಾದೆಡೆಗಳಿಗೆ ರವಾನಿಸಿ, ಒಂದು ಪ್ರತಿಯನ್ನು ಮದೀನಾದಲ್ಲಿ ಇಟ್ಟುಕೊಳ್ಳಲಾಯಿತು.

 ‘ಮುಸ್‌ಹಫ್ ಉಸ್ಮಾನ್’ ಎಂದು ಗುರುತಿಸಲಾಗುವ ಆ ಪ್ರತಿಗೆ ಸಮುದಾಯದ ಎಲ್ಲ ವಲಯಗಳಿಂದ ವ್ಯಾಪಕ ಮನ್ನಣೆ ದೊರಕಿತು. ಆ ಪೀಳಿಗೆಯ ಹಾಗೂ ಅದರ ಅನಂತರದ ಪೀಳಿಗೆಯ ಎಲ್ಲರೂ ಆ ಪ್ರತಿಗಳನ್ನೇ ಮಾನದಂಡವಾಗಿ ಅಂಗೀಕರಿಸಿ ಅವುಗಳ ನಕಲು ಪ್ರತಿಗಳನ್ನೇ ಬಳಸುತ್ತಿದ್ದರು. ಆದರೆ, ಆ ಪ್ರತಿಗಳಲ್ಲಿನ ಬರಹದಲ್ಲಿ,ಅಕ್ಷರಗಳ ಜೊತೆಗೆ ಚುಕ್ಕೆಗಳಾಗಲಿ, ಅ ಕಾರ,ಈ ಕಾರ, ಉ ಕಾರ ಇತ್ಯಾದಿಗಳನ್ನು ಸೂಚಿಸುವ ಸಂಕೇತಗಳಾಗಲಿ ಇರಲಿಲ್ಲ. ಆ ಸ್ಥಿತಿಯಲ್ಲಿದ್ದ ಬರಹಗಳನ್ನು ಅರಬಿ ಮಾತೃಭಾಷೆಯ ಮಂದಿ ಸುಲಭವಾಗಿ ಓದುತ್ತಿದ್ದರು. ಆದರೆ, ಅರಬಿ ಭಾಷೆಯ ಹೆಚ್ಚಿನ ಜ್ಞಾನ ಇಲ್ಲದವರು ಮಾತ್ರ ಅವುಗಳನ್ನು ಓದಲು ಪ್ರಯಾಸ ಪಡಬೇಕಾಗುತ್ತಿತ್ತು. ಈ ಸಮಸ್ಯೆಗೆ ಪರಿಹಾರವಾಗಿ, ಉಚ್ಚಾರ ಹಾಗೂ ಪಠನಕ್ಕೆ ನೆರವಾಗುವಂತೆ, ಅಕ್ಷರಗಳಿಗೆ ಚುಕ್ಕೆಗಳನ್ನು,ಸ್ವರಸಂಕೇತಗಳನ್ನು ಮತ್ತು ವಾಕ್ಯಗಳ ವಿವಿಧ ನಿಯಮಗಳನ್ನು ಸೂಚಿಸುವ ಲಾಂಛನಗಳನ್ನು ಸೇರಿಸುವ ಪ್ರಕ್ರಿಯೆಯು ಅಲೀ ಬಿನ್ ಅಬೀ ತಾಲಿಬ್(ರ)ರ ಕಾಲಾನಂತರ ಆರಂಭವಾಗಿ, ಹಿಜರಿ ಮೂರನೇ ಶತಮಾನದ ವೇಳೆಗೆ ಪೂರ್ತಿಗೊಂಡಿತು.

ಕೃತಕ ಅವಯವಗಳ ಜೋಡಣೆ ಇಸ್ಲಾಮಿನಲ್ಲಿ.

ಶೈಖ್ ಇಬ್ನ್ ಉಸೈಮೀನ್(ರಹಿಮಹುಲ್ಲಾಹ್) ರೊಂದಿಗೆ ಕೇಳಲಾಯಿತು: ಒಬ್ಬ ವ್ಯಕ್ತಿಯ ನೈಸರ್ಗಿಕವಾದ ಹಲ್ಲುಗಳು ಉದುರಿದ ನಂತರ ಅಲ್ಲಿ ಕೃತಕ ಹಲ್ಲುಗಳ ಜೋಡಣೆ ಇಸ್ಲಾಮಿನಲ್ಲಿ ಸಮ್ಮತಾರ್ಹವೇ..??

ಶೈಖ್: ಇದು ಸಮ್ಮತಾರ್ಹವಾಗಿದೆ. ಒಬ್ಬ ವ್ಯಕ್ತಿಯ ಹಲ್ಲುಗಳು ಉದುರಿದ್ದು, ಆತನಿಗೆ ಕೃತಕ ಹಲ್ಲುಗಳ ಜೋಡಣೆ ಇದು ಆ ವ್ಯಕ್ತಿಯು ಅನುಭವಿಸುತ್ತಿರುವ ತೊಂದರೆಯನ್ನು ದೂರಮಾಡುವ ಸಲುವಾಗಿದೆ. ಅಲ್ಲಾಹನ ಸಂದೇಶವಾಹಕರು(ಸ.ಅ) ಓರ್ವ ಸಹಾಬಿಯ ಮೂಗು ತುಂಡರಿಸಿ ಹೋದಾಗ ಆವ್ಯಕ್ತಿಗೆ ಕೃತಕ ಬೆಳ್ಳಿ ಮೂಗಿನ ಜೋಡಣೆಗೆ ಅನುಮತಿ ನೀಡಿದ್ದರು. ತದನಂತರ ಆ ಮೂಗಿನಿಂದಾಗಿ ಆ ಸಹಾಬಿಗೆ ದುರ್ವಾಸಣೆ ಅನುಭವವಾದಾಗ ಬಂಗಾರದ ಮೂಗಿನ ಜೋಡಣೆಗೆ ಅನುಮತಿಸಿದ್ದರು. ಅದೇ ರೀತಿ ಇಲ್ಲಿ ಒಬ್ಬ ವ್ಯಕ್ತಿಯ ನೈಸರ್ಗಿಕವಾದ ಹಲ್ಲುಗಳು ಉದುರಿಹೋದಾಗ ಅದರ ಬದಲಿಗೆ ಕೃತಕ ಹಲ್ಲಿನ ಜೋಡಣೆ ಸಮ್ಮತಾರ್ಹವಾಗಿದೆ.

[ಫತ್ವ ನೂರ್ ಅಲಾ ಅಲ್ ದರ್ಬ್]

ಸಲಾಮ್ ಹೇಳುವುದು.

ಅಬೂ ಹುರೈರಾ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು: ಕಿರಿಯವನು ಹಿರಿಯವನಿಗೆ,  ನಡೆಯುವವನು ಕೂತವನಿಗೆ ಮತ್ತು ಸಣ್ಣ ತಂಡ ದೊಡ್ಡ ತಂಡಕ್ಕೆ ಸಲಾಮ್ ಹೇಳಬೇಕು.
ಇನ್ನೊಂದು ವರದಿಯಲ್ಲಿ ಅವರು ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು: ವಾಹನದಲ್ಲಿರುವವನು ನಡೆಯುವವನಿಗೆ, ನಡೆಯುವವನು ಕೂತವನಿಗೆ ಮತ್ತು ಸಣ್ಣ ತಂಡ ದೊಡ್ಡ ತಂಡಕ್ಕೆ ಸಲಾಮ್ ಹೇಳಬೇಕು.
[ಸಹೀಹ್ ಬುಖಾರಿ, ಅಧ್ಯಾಯ ಅನುಮತಿ ಕೇಳುವುದು]

ಜ್ಞಾನ ಸಂಪಾದನೆ ಸಲಫುಸ್ಸಾಲಿಹೀಗಳ ಮಾರ್ಗದಲ್ಲಿ.

1.ಇಲ್ಮ್ (ಜ್ಞಾನ)  ಕಲಿಯುವುದು:

ಇದು ಸಲಫುಸ್ಸಾಲಿಹೀನ್'ಗಳಿಗೆ ತುಂಬಾ ಇಷ್ಟವಾದಂತಹ ಕೆಲಸ. ಇದು ಪ್ರತಿಯೊಬ್ಬ ಮುಸ್ಲಿಮನ ಕರ್ತವ್ಯವಾಗಿದೆ. ಜನರ ಪೈಕಿ ಅಲ್ಲಾಹನನ್ನು ಭಯ ಪಡುವವರು ಅರಿವುಳ್ಳವರು ಮಾತ್ರ ಎಂದು ಪ್ರವಾದಿ (ಸ) ಹೇಳಿರುವರು. ಅರಿವುಳ್ಳವರು ಮತ್ತು ಅರಿವಿಲ್ಲದವರು ಸಮಾನರಲ್ಲ ಎಂದು ಅಲ್ಲಾಹ್ ಕುರ್ ಆನ್ ನಲ್ಲಿ ಹೇಳಿದ್ದಾನೆ.

ಇಮಾಮ್ ಇಬ್ನ್ ರಜಬ್  ತಮ್ಮ ಫಲ್'ಳು ಇಲ್ಮ್ ಸಲಫಿಯ್ಯ ಎಂಬ ಗ್ರಂಥದಲ್ಲಿ ಹೇಳಿರುವರು- ಇಲ್ಮ್ ನಲ್ಲಿ ಎರಡು ವಿಧ ಇದೆ.
1.) ಇಲ್ಮ್ ನಾಫಿಅ
2.) ಇಲ್ಮ್ ಗೈರ್ ನಾಫಿಅ

ಇಲ್ಮ್ ನಾಫಿಅ ಅಂದರೆ ಪ್ರವಾದಿ (ಸ) ರು ಹೇಳಿದಂತಹ ವಿಷಯ. ಸಹಾಬಿಗಳು ಕಲಿತಿರುವಂತಹ ವಿಷಯ ತಾಬಿಅ ತಬಿವುತ್ತಾಬಿವೂನ್ ಗಳು ಅರ್ಥ ಮಾಡಿದಂತೆ ಕಲಿಯುವುದು ಇಲ್ಮ್ ನಾಫಿಅ (ಉಪಕಾರ ಕೊಡುವ ಇಲ್ಮ್).

ಇನ್ನೊಂದು ಇಲ್ಮ್ ಗೈರ್ ಇಲ್ಮ್ ನಾಫಿಅ ಅಂದರೆ ಉಪಕಾರವಿಲ್ಲದ ಇಲ್ಮ್.

ಈ ಸಂದರ್ಭ ಕಳೆದ ಶತಮಾನದಲ್ಲಿ ನಮ್ಮ ನಡುವೆ ಜೀವಿಸಿದ್ದ ಶೈಕ್ ನಾಸಿರುದ್ಧೀನ್ ಅಲ್ಬಾನಿ  ರಹಿಮಹುಲ್ಲಾಹ್ ರ ಒಂದು ಸಣ್ಣ ವೃತ್ತಾಂತ ನೆನಪಿಗೆ ಬರುತ್ತೆ. ಶೈಕ್ ಅಲ್ಬಾನಿ ಯವರು ದಿನಕ್ಕೆ 9 ರಿಂದ 10 ಗಂಟೆಗಳಕಾಲ ಓದುತ್ತಿದ್ದರಂತೆ. ಒಮ್ಮೆ ಅವರಿಗೆ ಕಣ್ಣು ನೋವು ಬಾಧಿಸಿದಾಗ ವೈದ್ಯರ ಬಳಿ ಹೋಗುತ್ತಾರೆ. ಕಣ್ಣು ಪರೀಕ್ಷೆ ಮಾಡಿದ ವೈದ್ಯರು ಹೇಳುತ್ತಾರೆ ಇನ್ನು ನೀವು ಮೊದಲಿನ ಹಾಗೆ ಓದು ಮುಂದುವರಿಸಿದರೆ ನಿಮ್ಮ ದೃಷ್ಟಿ ನಷ್ಟಗೊಳ್ಳುವ ಸಾಧ್ಯತೆ ಇದೆ ಎಂದು. ಇದನ್ನು ಕೇಳಿ ನಿರಾಸರಾದ ಶೈಕ್ ಕೊನೆಗೆ ವೈದ್ಯರ ಬಳಿ ದಿನಕ್ಕೆ ಮೂರು ಪುಟವಾದರೂ ಓದಬಹುದೇ ಎಂದು ಅನುಮತಿ ಕೇಳಿದರಂತೆ. ಹೀಗೆ ವೈದ್ಯರ ಅನುಮತಿಯೊಂದಿಗೆ ದಿನಕ್ಕೆ ಮೂರು ಪುಟದಂತೆ ಓದುತ್ತಿದ್ದ ಶೈಕ್ ರಲ್ಲಿ ಒಂದು ದಿನ ಅವರ ಶಿಷ್ಯರೊಬ್ಬರು ಹೇಳುತ್ತಾರೆ ಇಂತಹ ಪುಸ್ತಕದ ಇಂತಹ ಪುಟಗಳು ಕಾಣೆಯಾಗಿದೆ ಎಂದು. ಅದು ಶೈಕ್ ಅವರಿಗೆ ತುಂಬಾ ಮುಖ್ಯವಾದ ಪುಸ್ತಕ ವಾಗಿತ್ತು.  ಪುನಃ ವೈದ್ಯರ ಬಳಿಹೋಗಿ  ನಂಗೇನು ತುಂಬಾ ಮುಖ್ಯವಾದ ವಿಷ್ಯವೊಂದನ್ನು ಗ್ರಂಥಾಲಯದಲ್ಲಿ ಹುಡುಕಬೇಕಾಗಿದೆ ಇದರಿಂದ ನನ್ನ ಕಣ್ಣಿಗೇನಾದರೂ ತೊಂದರೆ ಇದೆಯೇ ಎಂದು ಕೇಳುತ್ತಾರೆ. ವೈದ್ಯರ ಅನುಮತಿಯೊಂದಿಗೆ ಆ ವಿಷಯವನ್ನು ಹುಡುಕಲು  ಹೊರಟ ಶೈಕ್ ಹುಡುಕಿ ಹುಡುಕಿ ಕೊನೆಗಾಗುವಾಗ ಪ್ರಸಿದ್ಧ ಮಖ್ತಬತುಳ್ವಾಹಿರಿಯ್ಯ ಆ ಬಹುದೊಡ್ಡ ಗ್ರಂಥಾಲಯದ ಭಾಗಶಃ ಗ್ರಂಥಗಳನ್ನೆಲ್ಲಾ ಓದಿಮುಗಿಸಿದ್ದರಂತೆ. ಇದಾಗಿದೆ ಇಲ್ಮ್ ಕಲಿಯುವವನ  ಗುಣ. ಆತ ಎಂದಿಗೂ ಹಿಂದೆ ಸರಿಯಲಾರ.

2.ಪಡೆದಂತಹ ಇಲ್ಮನ್ನು ಆರಾಧನೆಯಾಗಿಸುವುದು:

ಅಂದರೆ ಪ್ರವಾದಿ (ಸ) ರು ಈ ರೀತಿ ಮಾಡಿದ್ದಾರೆ ಎಂದು ವಿಸ್ವಸ್ಥ ಮೂಲಗಳಿಂದ ನಮಗೆ ದೊರೆತ ಇಲ್ಮನ್ನು ನಮ್ಮ ಜೀವನದಲ್ಲಿ ಪಾಲಿಸುವುದು.

3.ಆ ಇಲ್ಮನ್ನು ಇತರರಿಗೆ ದಾವಾ ಮಾಡುವುದು:

ಅಂದರೆ ನಾವು ಕಲಿತಂತಹ ಮತ್ತು ನಾವು ನಮ್ಮ ಜೀವನದಲ್ಲಿ ಪಾಲಿಸುತ್ತಿರುವ ಆ ಇಲ್ಮನ್ನು ಇತರರಿಗೆ ದಾವಾ ಮಾಡುವುದು. ಅವರಿಗೂ ಕೂಡ ಅದನ್ನು ಮಾಡಲು ಪ್ರೇರೇಪಿಸುದು. ಮೇಲೆ ವಿವರಿಸಿದ ಎರಡನೇ ಕಾರ್ಯ ನಾವು ಮಾಡಿದರೆ ಮಾತ್ರ ಇದು ಸಾಧ್ಯ. ಅಂದರೆ ನಮ್ಮ ಜೀವನದಲ್ಲಿ  ಆ ಇಲ್ಮನ್ನು ಪಾಲಿಸಿದರೆ ಮಾತ್ರ ನಾವು ಇತರರಿಗೆ ಅದನ್ನು ಹೇಳಬಹುದು.

4.ಸಹನೆ:

ಅಂದರೆ ಈ ಮೇಲೆ ತಿಳಿಸಿದಂತಹ ಮೂರು ಕಾರ್ಯದಲ್ಲೂ ಸಹನೆ ವಹಿಸುವುದು. ಸಹನೆ ಇಲ್ಲದೆ ನಮಗೆ ಏನನ್ನೂ ಕಲಿಯಲು, ಕಲಿಸಲು ಅಥವಾ ಅದನ್ನು ನಮ್ಮ ಜೀವನದಲ್ಲಿ ಪಾಲಿಸಿಕೊಂಡು ಬರಲು ಸಾಧ್ಯವಿಲ್ಲ.

4 May 2017

ಶಅಬಾನ್ 15 ರ ಬರಾಅತ್ ರಾತ್ರಿ ಮತ್ತು ಪ್ರತ್ಯೇಕ ಉಪವಾಸ ಬಿದ್ಅತ್.

ಶಅಬಾನ್ 15 ರ ಬರಾಅತ್ ರಾತ್ರಿ ಮತ್ತು ಪ್ರತ್ಯೇಕ ಉಪವಾಸ ಬಿದ್ಅತ್.

ಬರಾಅತ್ ರಾತ್ರಿ ಎಂಬುದು ಪುರೋಹಿತರು ತಮ್ಮ ಅನುಯಾಯಿಗಳಿಗೆ ಪರಿಚಯಿಸುವಂತಹ ಕೆಲವು ಬಿದ್ಅತ್ ಗಳ ಸಾಲಿಗೆ ಸೇರಿದಂತಹ ಒಂದು ಅನಾಚಾರವಾಗಿದೆ. ಈ ಅನಾಚಾರವನ್ನು  ತಮ್ಮ ಅನುಯಾಯಿಗಳ ಜೇಬು ಲೂಟಿ ಮಾಡಲೆಂದೇ ಜನರಿಗೆ ಪರಿಚಯಿಸುತ್ತಾರೆ ಎಂದರೂ ತಪ್ಪಾಗಲಾರದು.

ಈ ಅನಾಚಾರವನ್ನು ಬಳಸಿ ಏನೂ ಗೊತ್ತಿಲ್ಲದ ಮುಗ್ಧ ಜನರೊಂದಿಗೆ ಆ ರಾತ್ರಿ ಪ್ರತ್ಯೇಕವಾಗಿ ಮೂರು ಯಾಸೀನ್ ಓದಿಸಿ, ಇಲ್ಲದ ನಮಾಝ್ ಮತ್ತು ಇಸ್ಲಾಮ್ ಪರಿಚಯಿಸದ ಕೆಲವೊಂದು ವಿಶ್ವಾಸವನ್ನು ಮುಗ್ದ ಜನರ ಜೀವನದಲ್ಲಿ ತುರುಕಿಸಿ ಶೋಷಣೆ ಮಾಡಿ ಈ ಪುರೋಹಿತರು ಮೆರೆಯುತ್ತಿದ್ದಾರೆ.

ಶಅಬಾನಿನ 15 ನೇ ರಾತ್ರಿ ಕುರ್'ಆನ್ ಅವತೀರ್ಣಗೊಂಡ ಬರ್ಕತ್ ಇರುವ ಬರಾಅತ್ ರಾತ್ರಿ ಎಂದಾಗಿದೆ ಈ ಪುರೋಹಿತರ ವಾದ. ಮಾತ್ರವಲ್ಲ ಆ ರಾತ್ರಿಗೆ ಲೈಲತುಲ್ ಖದ್ರ್ ನ ರಾತ್ರಿಗಿಂತಲೂ ಹೆಚ್ಚಾಗಿ ಪುಣ್ಯವನ್ನು ಈ ಪುರೋಹಿತರು ಕಲ್ಪಿಸುತ್ತಾರೆ. ಅದಕ್ಕಾಗಿ ಇವರು ಪುರಾವೆಯಾಗಿ ತರುವಂತಹ ಸೂಕ್ತವಾಗಿದೆ ಅದ್ದುಖಾನ್ 3 ನೇ ಸೂಕ್ತ. ಆ ಸೂಕ್ತ ದಲ್ಲಿ ಅಲ್ಲಾಹನು ಹೇಳುತ್ತಾನೆ...👇

إِنَّا أَنْزَلْنَاهُ فِي لَيْلَةٍ مُبَارَكَةٍ ۚ

 ಖಂಡಿತವಾಗಿಯೂ ನಾವು ಅದನ್ನು ಒಂದು ಅನುಗ್ರಹೀತ ರಾತ್ರಿಯಲ್ಲಿ ಅವತೀರ್ಣಗೊಳಿಸಿದೆವು.

[ಅದ್ದುಖಾನ್ : 3]

👆ಈ ಮೇಲಿನ ಸೂಕ್ತದಲ್ಲಿ ಕುರ್'ಆನ್ ಅವತೀರ್ಣಗೊಂಡ ಆ ರಾತ್ರಿ ಯಾವುದೆಂದು ವ್ಯಕ್ತವಲ್ಲದಿದ್ದರೂ ಪುರೋಹಿತರು ಅದನ್ನು ಶಅಬಾನ್ 15 ರ ಬರಾಅತ್ ರಾತ್ರಿಗೆ ಸೀಮಿತಗೊಳಿಸುತ್ತಾರೆ. ಆದರೆ ಕುರ್‍ಆನ್ ಅವತೀರ್ಣಗೊಂಡ ರಾತ್ರಿ ರಮದಾನ್ ಆಗಿದೆ ಎಂದು ಅಲ್ಲಾಹನು ಕುರ್‍ಆನ್ ನಲ್ಲಿಯೇ ವಿವರಿಸುತ್ತಾನೆ ನೋಡಿ.👇

إِنَّا أَنْزَلْنَاهُ فِي لَيْلَةِ الْقَدْرِ

ಖಂಡಿತವಾಗಿಯೂ ನಾವು ಇದನ್ನು (ಕುರ್ ಆನನ್ನು) ನಿರ್ಣಯದ ರಾತ್ರಿಯಲ್ಲಿ ಅವತೀರ್ಣ ಗೊಳಿಸಿರುವೆವು.

 ... وَمَا أَدْرَاكَ مَا لَيْلَةُ الْقَدْرِ

ನಿರ್ಣಯದ ರಾತ್ರಿ ಎಂದರೆ ಏನೆಂದು ತಮಗೆ ಗೊತ್ತಿದೆಯೇ?

 ... لَيْلَةُ الْقَدْرِ خَيْرٌ مِنْ أَلْفِ شَهْرٍ

ನಿರ್ಣಯದ ರಾತ್ರಿಯು ಸಾವಿರ ತಿಂಗಳಿಗಿಂತಲೂ ಶ್ರೇಷ್ಠವಾಗಿದೆ.

[ಅಲ್-ಕದ್ರ್ : 1 - 3]

شَهْرُ رَمَضَانَ الَّذِي أُنْزِلَ فِيهِ الْقُرْآنُ هُدًى لِلنَّاسِ وَبَيِّنَاتٍ مِنَ الْهُدَىٰ وَالْفُرْقَانِ ۚ

ಜನರಿಗೆ ಮಾರ್ಗದರ್ಶಿಯಾಗಿಯೂ, ಸನ್ಮಾರ್ಗ ವನ್ನು ತೋರಿಸಿಕೊಡುವ ಮತ್ತು ಸತ್ಯಾಸತ್ಯತೆಗಳನ್ನು ಬೇರ್ಪಡಿಸುವ ಸುಸ್ಪಷ್ಟ ಆಧಾರಪ್ರಮಾಣವಾಗಿಯೂ, ಕುರ್ಆನ್ ಅವತೀರ್ಣಗೊಂಡ ತಿಂಗಳಾಗಿದೆ ರಮದಾನ್.

[ಅಲ್-ಬಕರಃ : 185]

ಅದೇ ರೀತಿ ಪವಿತ್ರ ಕುರ್‍ಆನಿನ ಅವತೀರ್ಣವು ಮಾನವ ಚರಿತ್ರೆಯಲ್ಲೇ ಒಂದು ಪ್ರಮುಖ ತಿರುವಾಗಿದೆ. ಸಂಪೂರ್ಣ ಮಾನವ ಕುಲಕ್ಕೆ ಒಂದು ಮಾರ್ಗದರ್ಶಿಯಾಗಿ ಕುರ್‍ಆನ್ ಅವತೀರ್ಣಗೊಂಡ ರಾತ್ರಿಗೆ ಇತರ ರಾತ್ರಿಗಳಿಗಿಲ್ಲದ ಮಹತ್ವವನ್ನು ಅಲ್ಲಾಹು ನೀಡಿದ್ದಾನೆ. ಈ ರಾತ್ರಿ ರಮದಾನ್ ತಿಂಗಳಲ್ಲಾಗಿದೆಯೆಂದು ಕುರ್‍ಆನಿನ ಅಲ್ ಬಕರ 185 ನೇ ಸೂಕ್ತಿಯಿಂದ ಮನದಟ್ಟು ಮಾಡಬಹುದು. ಅದು ರಮದಾನ್ ತಿಂಗಳ ಕೊನೆಯ ಹತ್ತು ರಾತ್ರಿಗಳಲ್ಲಿ ಒಂದಾಗಿದೆಯೆಂದು ಹದೀಸ್‍ಗಳಲ್ಲಿ ಹೇಳಲಾಗಿದೆ.

ಇಬ್ನು ಕತೀರ್ (ರ) ತನ್ನ ತಫ್ಸೀರ್ ನಲ್ಲಿ ಹೇಳುತ್ತಾರೆ.👇

ಕೆಲವು ಜನರು ಸೂರಃ ಅದ್ದುಖಾನಿನಲ್ಲಿ (44:3) ವಿವರಿಸಲಾದ "ಅನುಗ್ರಹೀತ ರಾತ್ರಿ" (ಲೈಲತುಲ್ ಮುಬಾರಖ)  ಶ'ಅಬಾನ್ 15 ರ ರಾತ್ರಿ ಎಂದು ತಪ್ಪು ತಿಳುವಳಿಕೆ ಬೆಳೆಸಿಕೊಂಡಿದ್ದಾರೆ ಅಥವಾ ಅಪಾರ್ಥ ಮಾಡಿಕೊಂಡಿದ್ದಾರೆ. ಅಂದೇ ಅಲ್ಲಾಹನು ನಮ್ಮ ಆಯುಷ್ಯವನ್ನು ವೃದ್ಧಿಸುತ್ತಾನೆ ಹಾಗೂ ವಿಧಿಯನ್ನು ಬರೆಯುತ್ತಾನೆ ಎಂದೂ ಅವರು ವಿಶ್ವಾಸವಿಡುತ್ತಾರೆ. ಇದಕ್ಕಾಗಿ ಅವರು ಆರು ರಕ'ಅತ್ ನಮಾಝನ್ನೂ ನಿರ್ವಹಿಸುತ್ತಾರೆ. ಇವೆಲ್ಲವೂ ನಿರ್ಮಿತವಾಗಿದೆ.  ಇದೆಲ್ಲವೂ ನವೀನಾಚಾರ ಅಂದರೆ ಬಿದ'ಅತ್ ಆಗಿದೆ. ಇವುಗಳಿಗೆ ಪೂರ್ವಿಕ ಸಲಫುಸ್ಸಾಲಿಹೀನ್'ಗಳ ಮಾದರಿ ಇಲ್ಲ. ಸೂರಃ ಅದ್ದುಖಾನ್ ನಲ್ಲಿ ಹೆಸರಿಸಲಾದ ಆ ರಾತ್ರಿ ರಮದಾನ್ ತಿಂಗಳಲ್ಲಿ ಬರುವ "ಲೈಲತುಲ್ ಕದ್ರ್" ನ ಕುರಿತಾಗಿದೆ.

(ತಫ್ಸೀರ್ ಇಬ್ನ್ ಕತೀರ್,  ಸೂರಃ ಅಲ್ ಕದ್ರ್)

👆ಇದೇ ವಿಶ್ವಾಸವನ್ನು ಪುರೋಹಿತರು ಈಗಲೂ ಕಾರ್ಯ ರೂಪಕ್ಕೆ ತರುತ್ತಿದ್ದಾರೆ. ಅದಕ್ಕಾಗಿ ಮೂರು ಯಾಸೀನ್ ಮತ್ತು ಇಲ್ಲದ ನಮಾಝ್ ಗೆ ಪ್ರೇರಣೆ ನೀಡುತ್ತಾರೆ. ಆ ವಿಶ್ವಾಸಕ್ಕೆ ವಿರುದ್ಧವಾಗಿ ಒಂದು ಹದೀಸನ್ನು ಗಮನಿಸಿ.👇

ಪ್ರವಾದಿ(ಸ.ಅ) ಹೇಳಿದರು: ವೀರ್ಯದ ಹನಿಯು ತಾಯಿಯ ಹೊಟ್ಟೆಯಲ್ಲಿ 40 ದಿನ ಅಥವಾ 40 ರಾತ್ರಿಗಳ ಕಾಲ ಉಳಿದಿರುವಾಗ, ದೇವಚರ(ಮಲಕ್)ರೊಬ್ಬರು ಬಂದು ಕೇಳುತ್ತಾರೆ; ನನ್ನ ಪ್ರಭೂ ಅದು ಒಳ್ಳೆಯದೋ ಅಥವಾ ಕೆಟ್ಟದ್ದೋ..? ಆಗ ಆ ಎರಡನ್ನೂ ಬರೆಯಲಾಗುತ್ತದೆ. ನಂತರ ದೇವಚರ ಕೇಳುತ್ತದೆ; ನನ್ನ ಪ್ರಭೂ ಇದು ಹೆಣ್ಣೋ ಅಥವ ಗಂಡೋ..? ಆಗ ಆ ಎರಡರ ಬಗ್ಗೆಯೂ ಬರೆಯಲಾಗುತ್ತದೆ. ಆ ಮನುಷ್ಯನ ಕರ್ಮಗಳು ಮತ್ತು ಕ್ರಿಯೆಗಳ ಬಗ್ಗೆ ಅವನ ಮರಣದ ಬಗ್ಗೆಯೂ ಬರೆಯಲಾಗುತ್ತದೆ. ಅವನ ಜೀವನಾಧಾರಗಳ ಬಗ್ಗೆಯೂ ಬರೆಯಲಾಗುತ್ತದೆ. ಇದೆಲ್ಲವನ್ನೂ ದಾಖಲು ಮಾಡಿ ಇಡಲಾಗುತ್ತದೆ.

- ಸಹೀಹ್ ಮುಸ್ಲಿಮ್ : 6392

ಶಅಬಾನ್ 15 ರಾತ್ರಿಯ ಬಗ್ಗೆ ಬಂದಿರು ಉಲ್ಲೇಖ ಮತ್ತು ತಾಬಿಯೀನ್ ಕಾಲದ ವಿದ್ವಾಂಸರ ಪ್ರತಿಕ್ರಿಯೆಯನ್ನೂ ಗಮನಿಸಿ.👇

ಝಿಯಾದ್ ಅಲ್ ನುಮೈರೀ ಹೇಳುತ್ತಾರೆ: ನಿಸ್ಸಂದೇಹವಾಗಿಯೂ ಶಅಬಾನ್ 15 ರ ಮಧ್ಯ ರಾತ್ರಿಯ ಪುಣ್ಯವು ಲೈಲತುಲ್ ಖದ್ರ್ ನ ರಾತ್ರಿಯ ಪುಣ್ಯಕ್ಕೆ ಸಮವಾಗಿದೆ. ಇದನ್ನು ತಾಬಿಯೀನ್ ಗಳಲ್ಲಿ ಸೇರಿದವರೂ, ಮದೀನಾದ ಉನ್ನತ ಕರ್ಮಶಾಸ್ತ್ರ ವಿದ್ವಾಂಸರೂ ಆದ ಇಮಾಮ್ ಇಬ್ನು ಅಬೀ ಮಲೈಕ (ರ) ರವರು ಈ ರೀತಿ ಪ್ರತಿಕ್ರಿಯಿಸುತ್ತಾರೆ... "ಝಿಯಾದ್ ಅಲ್ ನುಮೈರೀ ಹಾಗೆ ಹೇಳುವುದನ್ನು ನಾನೇನಾದರೂ ಕೇಳಿದ್ದಿದ್ದರೆ ಮತ್ತು ಆ ಸಂದರ್ಭದಲ್ಲಿ ನನ್ನ ಕೈಯಲ್ಲೊಂದು ಬಡಿಗೆ ಇದ್ದಿದ್ದರೆ ಖಂಡಿತ ನಾನು ಆ ವ್ಯಕ್ತಿಗೆ ಅದರಲ್ಲಿ ಹೊಡೆಯುತ್ತಿದ್ದೆ.

[ಮುಸನ್ನಫ್ ಅಬ್ದುಲ್ ರಝಾಕ್: 7928]

ಪುರೋಹಿತರು ಬರಾಅತ್ ರಾತ್ರಿಯನ್ನು ಸಮರ್ಥಿಸುವ ಮತ್ತೊಂದು ರೀತಿಯನ್ನು ಗಮನಿಸಿ. 👇

ಶಅಬಾನ್ ಹದಿನೈದರ ರಾತ್ರಿ ಸೂರ್ಯನು ಅಸ್ತಮಿಸುವಾಗ ಅಲ್ಲಾಹು ಒಂದನೇ ಆಕಾಶಕ್ಕೆ ಇಳಿದು ಬರುತ್ತಾನೆ. (ಸುನ್ನತ್ ಮಾಸಿಕ 85 ಮೇ/ಸಂಚಿಕೆ 3/ಪುಟ 5)

👆ಇದು ಕೇರಳದ ಸಮಸ್ತ ಪುರೋಹಿತರ ಮಾಸಿಕದಲ್ಲಿ ಬಂದದ್ದಾಗಿದೆ.

ಅಲ್ಲಾಹನು ಒಂದನೇ ಆಕಾಶಕ್ಕೆ ಅವರೋಹಣ(ಇಳಿದು ಬರುವುದು)  ಕೇವಲ 15 ಶಅಬಾನಿನ ರಾತ್ರಿ ಮಾತ್ರವಲ್ಲ, ಬದಲಾಗಿ ಇದು ಎಲ್ಲಾ ರಾತ್ರಿಯೂ ಸಂಭವಿಸುತ್ತದೆ ಎಂದು ಸಹೀಹ್ ಹದೀಸ್'ಗಳಿಂದ ಸಾಬೀತಾಗಿದೆ.

 ಅಲ್ಲಾಹನ ಸಂದೇಶವಾಹಕರು (ಸ.ಅ) ಹೇಳಿದರು;

ಎಲ್ಲಾ ರಾತ್ರಿಯ ಕೊನೆಯ ಮೂರನೇ ಭಾಗದಲ್ಲಿ  ಉನ್ನತನಾದ, ಮಂಗಳಾತ್ಮಕ ನಮ್ಮ ಪ್ರಭು, ಸಮೀಪದ ಆಕಾಶಕ್ಕೆ ಇಳಿದು ಬಂದು ಹೇಳುವನು; ಯಾರಾದರೂ ನನ್ನಲ್ಲಿ ಪ್ರಾರ್ಥಿಸುವವರಿದ್ದಾರಾ..? ನಾನು ಅವರ ಪ್ರಾರ್ಥನೆಗೆ ಉತ್ತರಿಸುವೆನು. ಯಾರಾದರೂ ನನ್ನಲ್ಲಿ ಬೇಡಿಕೊಂಡರೆ ಅವರ ಬೇಡಿಕೆಯನ್ನು ನಾನು ನೆರವೇರಿಸಿ ಕೊಡುವೆನು. ಯಾರಾದರೂ ನನ್ನಲ್ಲಿ ಪಾಪ ವಿಮೋಚನೆಯನ್ನು ಬೇಡುವುದಾದರೆ ನಾನು ಅವರ ಪಾಪಗಳನ್ನು ಕ್ಷಮಿಸುವೆನು.

-ಸಹೀಹ್ ಬುಖಾರಿ : 1145
-ಸಹೀಹ್ ಮುಸ್ಲಿಮ್ : 1261

ಇಲ್ಲಿ ಗಮನಿಸಬೇಕಾಗಿರುವುದು ರಾತ್ರಿಯ ಕೊನೆಯಲ್ಲಿ ಅಲ್ಲಾಹನು ಒಂದನೇ ಆಕಾಶಕ್ಕೆ ಇಳಿದು ಬರುತ್ತಾನೆ ಎಂದು ಸಲಫಿಗಳು ಹೇಳಿದರೆ ಈ ಪುರೋಹಿತರಿಗೆ ಒಂಥರಾ ಅಲರ್ಜಿ. ಸಲಫಿಗಳ ಅಲ್ಲಾಹನು ರಾತ್ರಿ ಇಳಿದು ಬರುತ್ತಾನೆ, ಅವರ ಅಲ್ಲಾಹನೇ ಬೇರೆ ಎಂಬ ರೀತಿಯಲ್ಲಿ ಚಿತ್ರೀಕರಿಸಿ ಸಲಫಿಗಳ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಮುಗ್ಧ ಜನರ ಮನಸ್ಸನ್ನು ಪುರೋಹಿತರೆಡೆಗೆ ತಿರುಗಿಸುತ್ತಾರೆ. ಅದೇ ವಿಷಯವನ್ನು ಪುರೋಹಿತರು ಹೇಳುವಾಗ ಸರಿಯೂ, ಸಲಫಿಗಳು ಹೇಳುವಾಗ ತಪ್ಪೂ ಆಗುವುದಾದರೆ, ಪುರೋಹಿತರಿಗೆ ಇದರ ಹಿಂದೆ ಏನೋ ದುರುದ್ದೇಶ ಇದೆ ಎಂದರ್ಥವಲ್ಲವೇ?

ಇಷ್ಟೆಲ್ಲಾ ಗೊತ್ತಾದ ನಂತರ ಪುರೋಹಿತರು ಜಿಗಿಯುವುದು ಸಲಫಿ ಪಂಡಿತ ಶೈಖ್ ಅಲ್ಬಾನಿ (ರ) ಯವರ ಕಡೆ. ಶಅಬಾನ್ 15 ರಾತ್ರಿ ಅಲ್ಲಾಹನು ಇಳಿದು ಬರುತ್ತಾನೆ ಎಂಬ ಹದೀಸನ್ನು ಶೈಖ್ ಅಲ್ಬಾನಿ (ರ) ಸ್ವಹೀಹ್ ಮಾಡಿದ್ದಾರಂತೆ. ಈ ಪುರೋಹಿತರ ಪ್ರಕಾರ ಯಾರಾದರೂ ಒಬ್ಬರು ಸ್ವಹೀಹ್ ಎಂದು ಹೇಳಿದರೆ ಅದನ್ನು ಅಂಧವಾಗಿ ಸ್ವೀಕರಿಸಬೇಕೋ ಏನೊ? ಆದರೆ ಆ ಹದೀಸನ್ನು ಅನೇಕ ಸಲಫಿ ವಿದ್ವಾಂಸರು ದುರ್ಬಲವೆಂದೂ (ಲಯೀಫ್) ಹೇಳಿದ್ದಾರೆ. ಅದೂ ಅಲ್ಲದೆ ಈ ವಿಷಯದಲ್ಲಿ ಬಂದಿರುವ ಸಹೀಹ್ ಬುಖಾರಿ ಹದೀಸನ್ನು ಉಲ್ಲೇಖಿಸಿ ಅಲ್ಲಾಹನ ಅವರೋಹಣ ಹಾಗೂ ಕ್ಷಮಾಪಣೆ ಪ್ರತಿದಿನ ರಾತ್ರಿಯ ಕೊನೆಯ ಭಾಗದಲ್ಲಿ ಸಂಭವಿಸುತ್ತದೆ ಎಂದೂ ಅದು ಶ'ಅಬಾನ್ 15 ರ ರಾತ್ರಿಯ ಮಾತ್ರ ಪ್ರತ್ಯೇಕತೆ ಅಲ್ಲವೆಂದೂ ಫತ್ವಗಳನ್ನೂ ನೀಡಿದ್ದಾರೆ. ಇದು ಪುರೋಹಿತರ ಕಣ್ಣಿಗೆ ಕಾಣುವುದಿಲ್ಲವೋ ಏನೊ?

ಶೈಖ್ ಅಲ್ಬಾನಿ (ರ) ಯವರ ಶಿಷ್ಯರಾಗಿರುವ ಶೈಖ್ ಅಬ್ದುಲ್ ಖಾದರ್ ಬಿನ್ ಹಬೀಬುಲ್ಲಾಹ್ ಅಲ್ ಸಿಂಧಿ (ರ) ರವರು ಹೇಳುತ್ತಾರೆ:

ಇಮಾಮ್ ಅಬೂ ಹಾತಿಮ್ ರಹಿಮಹುಲ್ಲಾಹ್ ರಿಂದ ಅವರ ಮಗ ಅಬ್ದುರ್ರಹ್ಮಾನ್ ಅಲ್-ಲ್ಲಾಲ್ ರವರು ನಿವೇದನೆ ಮಾಡಿರುವಂತೆ ಈ ಹದೀಸಿನ ಸರಣಿ ಮುಂಕರ್ ಮತ್ತು ಮೌದೂಹ್ ಆಗಿದೆ.

[ಅಲ್ ತಸವ್ವುಫ್ ಫೀ ಮೀಝಾನ್
ಅಲ್ ಬಹೆತ್ ವಲ್ ತಕೀಕ್ 1/555]

ಶೈಖುಲ್ ಇಸ್ಲಾಮ್ ಇಬ್ನ್ ತೈಮೀಯಾರವರು ಶ'ಅಬಾನ್ 15 ರ ರಾತ್ರಿಗೆ ಮಹತ್ವವಿದೆ ಪೂರ್ವಿಕರು ಆ ರಾತ್ರಿ ಪ್ರತ್ಯೇಕ ಇಬಾದತ್ ಮಾಡುತ್ತಿದ್ದರು ಎಂದು ಪುರೋಹಿತರು ಪ್ರಚಾರಮಾಡುತ್ತಿರುವುದು ಬರೀ ಸುಳ್ಳಷ್ಟೆ. ಶೈಖುಲ್ ಇಸ್ಲಾಮ್ ಇಬ್ನ್ ತೈಮೀಯಾ ರಹಿಮಹುಲ್ಲಾಹ್'ರ ಅತ್ಯುನ್ನತ ಶಿಷ್ಯ ಹಾಫಿದ್ ಇಬ್ನ್ ಕಯ್ಯೂಮ್ ಅಲ್ ಜವ್'ಝಿಯಾ ರಹಿಮಹುಲ್ಲಾಹ್ ಹೇಳಿದ್ದಾರೆ;

ಶ'ಅಬಾನ್ 15 ರ ರಾತ್ರಿಯ ವಿಶೇಷತೆಯ ಬಗ್ಗೆ  ಅಂದಿನ ಇಬಾದತ್'ಗಳ ಶ್ರೇಷ್ಟತೆಗಳ ಬಗ್ಗೆ ಯಾವುದೇ ಸಹೀಹ್ ಹದೀಸ್ ವರದಿಯಾಗಿಲ್ಲ.

[ಅಲ್ ಮನಾರ್ ಅಲ್ ಮನೀಫ್ - ಪೇಜ್ ನಂ.99]

ಶೈಖ್ ಇಬ್ನು ಬಾಝ್ (ರ) ಹೇಳುತ್ತಾರೆ

ಶಾಬಾನ್ ತಿಂಗಳ 15 ನೇ ರಾತ್ರಿಯ ಆಚರಣೆ ಬಿದ್ಅತ್ ಆಗಿರುವುದಲ್ಲದೆ ಆ ದಿನದ ಉಪವಾಸವನ್ನು ಪ್ರತ್ಯೇಕಿಸುವುದಕ್ಕೆ ಯಾವುದೇ ದೃಢವಾದ ಪುರಾವೆಗಳಿಲ್ಲ. ಇವುಗಳ ಮಹತ್ವದ ಬಗ್ಗೆ ಬಂದಿರುವ ಹದೀಸ್ ಗಳೆಲ್ಲವೂ ದುರ್ಬಲವಾದವುಗಳು ಮತ್ತು ವಿಶ್ವಾಸಾರ್ಹವಲ್ಲದ ಹದೀಸ್ ಗಳಾಗಿದೆ. ಅಹ್ಲುಲ್ ಇಲ್ಮ್ ನ ಪಂಡಿತರು ಎಚ್ಚರಿಸಿರುವಂತೆ ಆ ರಾತ್ರಿಯ ನಮಾಝ್ ಗಳ ಮಹತ್ವದ ಬಗ್ಗೆ ಬಂದಿರುವ ಹದೀಸ್ ಗಳೆಲ್ಲವೂ ನಿರ್ಮಿತ ಹದೀಸ್ ಗಳಾಗಿವೆ. ಸಲಫಿಗಳಾದ ಅಹ್ಲು ಶಾಮ್ ನ ಬಹು ಪಕ್ಷ ಪಂಡಿತರ ಅಭಿಪ್ರಾಯದಂತೆ ಶಾಬಾನ್ 15 ರ ರಾತ್ರಿಯ ಆಚರಣೆ ಬಿದ್ಅತ್. ಅವುಗಳ ಬಗ್ಗೆ ಬಂದಿರುವ ಹದೀಸ್ ಗಳೆಲ್ಲವೂ ನಿರ್ಮಿತ ಹದೀಸ್ ಗಳಾಗಿವೆ. ಎಚ್ಚರಿಕೆ ಕೊಟ್ಟ ಮಹಾನುಭಾವರಲ್ಲಿ ಇಬ್ನು ರಜಬುಲ್ ಹಂಬಲೀ ತನ್ನ ಗ್ರಂಥವಾದ ಅಲ್ಲತ್ವಾಯಿಫ್ ವಲ್-ಮಅರೀಫ್ ನಲ್ಲೂ ಇತರ ಗ್ರಂಥಗಳಲ್ಲೂ ಬರಾಅತ್ ರಾತ್ರಿಯ ಬಗ್ಗೆ ಬಂದಿರುವ ಹದೀಸ್ ಗಳೆಲ್ಲವೂ ದುರ್ಬಲ ಎಂದು ಹೇಳಿರುವರು. ಇಂತಹ ಆಚರಣೆಗಳಿಗೆ ಸ್ವಹೀಹ್ ಆದ ಪುರಾವೆ ಅಗತ್ಯ. ಆದರೆ ಶಾಅಬಾನ್ ತಿಂಗಳ 15 ರ ರಾತ್ರಿ ಮತ್ತು ಹಗಲು ಮಾಡುವ ಆಚರಣೆ ಉಪವಾಸವೆಲ್ಲವೂ ಆಧಾರ ರಹಿತವಾಗಿದೆ ಅದಕ್ಕೆ ಯಾವುದೇ ಪುರಾವೆಯೂ ಇಲ್ಲ. ಅಲ್ಲದೇ ದುರ್ಬಲವಾದ ಹದೀಸನ್ನು ಸಮರ್ಥಿಸುವಂತಹ ದುರ್ಬಲ ಹದೀಸ್ ಕೂಡಾ ಇಲ್ಲ.

ಇಲ್ಲಿ ನಾವು ತಿಳಿಯಬೇಕಾದ ಪ್ರಮುಖ ವಿಷಯವೇನೆಂದರೆ ಶಅಬಾನ್ 15 ರ ರಾತ್ರಿಗೆ ಮಹತ್ವ ಕಲ್ಪಿಸುವುದಾಗಿ ಕುರ್'ಆನಿನಿಂದ, ಸ್ವಹೀಹ್ ಹದೀಸ್ ನಿಂದ ವ್ಯಕ್ತವಲ್ಲ. ಮಾತ್ರವಲ್ಲ ಈ ವಿಷಯದಲ್ಲಿ ಪಂಡಿತ ಶಿರೋಮಣಿಗಳ ಏಕಾಭಿಪ್ರಾಯವೂ (ಇಜ್ಮಾಅ) ಇಲ್ಲ ಸ್ಪಷ್ಟ. ಎಂದರೆ ಇಸ್ಲಾಮಿನ ನಾಲ್ಕು ಪ್ರಮಾಣದಲ್ಲಿ ಧೃಡಪಟ್ಟಿಲ್ಲ ಎಂದರ್ಥ.

ನಾವು ತಿಳಿಯಬೇಕಾದ ಮತ್ತೊಂದು ವಿಷಯವೇನೆಂದರೆ:
ಪ್ರವಾದಿ (ಸಅ) ರು ರಮದಾನ್ ತಿಂಗಳು ಬಿಟ್ಟು ಅತೀ ಹೆಚ್ಚು ಉಪವಾಸವನ್ನು ಆಚರಿಸಿದ ತಿಂಗಳಾಗಿದೆ ಶಅಬಾನ್ ತಿಂಗಳು ಮಾತ್ರವಲ್ಲ ಹಿಜ್ರಾ ತಿಂಗಳ ಎಲ್ಲಾ ತಿಂಗಳಲ್ಲೂ 13, 14, 15 ನೇ ದಿವಸ ಉಪವಾಸವನ್ನು ಆಚರಿಸುತ್ತಿದ್ದರು. ಈ ರೀತಿ ಬೇರೆ ಯಾವುದೇ ಪ್ರತ್ಯೇಕತೆ ಕಲ್ಪಿಸದೆ ಆಚರಿಸುವುದರಿಂದ ಅಡ್ಡಿಯಿಲ್ಲ. ಆದರೆ ಶಅಬಾನ್ 15 ರ ಉಪವಾಸವನ್ನು ಬರಾಅತ್ ಗೆ ಸೀಮಿತಗೊಳಿಸಿ ಉಪವಾಸ ಆಚರಿಸುವುದು ಬಿದ್ಅತ್ ಆಗಿದೆ.

ಈ ವಿಷಯದಲ್ಲಿ ಕೇರಳ ಮೂಲದ ಸಮಸ್ತದ ಮುಸ್ಲಿಯಾರೊಬ್ಬರ (ಕಣ್ಣೀಯತ್) ಫತ್ವಾವನ್ನು ಗಮನಿಸಿ. ಅದರ ಪ್ರಸಕ್ತ ಭಾಗ ಹೀಗಿದೆ.👇

وأما صوم يومها فهو سنة من حيث كونه من جملة الأيام البيض لا من حيث خصوصه والحديث المذكور عن ابن ماجه ضعيف (الكبير -في فتاويه)

"ಮೇಲಿನ ಉಲ್ಲೇಖದಿಂದ ಬರಾಅತ್ ಉಪವಾಸವು ಅಯ್ಯಾಮುಲ್ ಬಿಲ್ ನಲ್ಲಿ ಒಳಪಟ್ಟಿದ್ದೆಂಬ ನೆಲೆಯಲ್ಲಿ ಸುನ್ನತ್ತಾಗಿದೆಯೇ ಹೊರತು ಬರಾಅತ್ ಉಪವಾಸ ಎಂಬ ನೆಲೆಯಲ್ಲಿ ಅಲ್ಲವೆಂದು ದೃಢಪಟ್ಟಿತು. ಆದರೆ ಇಬ್ನು ಮಾಜದ ಸುನ್ನತ್ತಾಗಿದೆ ಎಂಬ ಹದೀಸ್ ದಯೀಫ್ ಆಗಿದೆ".

(ಶೈಖುನಾ ಕಣ್ಣೀಯತ್ ಸ್ಮರಣ ಸಂಚಿಕೆ, ಪುಟ 104)

ಶಅಬಾನ್ 15 ರ ಉಪವಾಸ ಸುನ್ನತ್ತಲ್ಲ ಎಂದು ಸಮಸ್ತದ ಮುಸ್ಲಿಯಾರೊಬ್ಬರ ಫತ್ವಾದಿಂದ ವ್ಯಕ್ತವಾದರೂ ಕೆಲವು ಪುರೋಹಿತರ ಮಾತಿಗೆ ಮರುಳಾಗಿ ಕುರ್'ಆನ್ ಮತ್ತು ಸುನ್ನತ್ತಿಗೆ ವಿರುದ್ದವಾಗಿ ನಡೆಯುವುದು ಎಷ್ಟು ಸರಿ? ಎಂದು ಆಲೋಚಿಸಬೇಕಾಗಿದೆ.

ಇಂತಹ ಕಪಟ ಪುರೋಹಿತರ ಶರ್ರಿನಿಂದ ಅಲ್ಲಾಹನು ನಮ್ಮನ್ನೂ ನಮ್ಮ ಕುಟುಂಬವನ್ನೂ ರಕ್ಷಿಸಲಿ.

ಆಮೀನ್ ಯಾ ರಬ್ಬಲ್ ಆಲಮೀನ್.....

3 Apr 2017

ರಜಬ್ ತಿಂಗಳು ಮತ್ತು ಅ(ನಾ)ಚಾರಗಳು.

ಮಲಯಾಳಂ ಮೂಲ - ಅಬ್ದುಲ್ಲತೀಫ್ ಸುಲ್ಲಮಿ ಮಾರಾಂಜೇರಿ.
ಕನ್ನಡಾನುವಾದ - ಅಬ್ದುಲ್ ಜಲೀಲ್ ಅರ್ಲ.

ಆಧುನಿಕ ಪುರೋಹಿತ ವರ್ಗವು ಇಸ್ಲಾಮಿನ ನೈಜ ರೂಪವನ್ನು ವಿಕೃತಗೊಳಿಸಿ ಜನಸಾಮಾನ್ಯರಿಗೆ ಕಷ್ಟಕರವಾಗುವ ರೀತಿಯಲ್ಲಿ ಅಂಧವಿಶ್ವಾಸವನ್ನೂ, ಅನಾಚಾರಗಳನ್ನೂ , ಅನ್ಯಧರ್ಮೀಯರ ಸಂಪ್ರದಾಯಗಳನ್ನೂ ಕ್ರೂಢೀಕರಿಸಿ ಸತ್ಕರ್ಮಗಳೆಂಬ ಸುಂದರ ನಾಮವನ್ನಿಟ್ಟು, ಪರಿಶುದ್ಧವಾದ ಇಸ್ಲಾಂ ಧರ್ಮದಲ್ಲಿ ಕಲಬೆರೆಕೆ ಮಾಡಿ ತಮ್ಮ ಸ್ವಾರ್ಥ ಸಿದ್ಧಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಮುಗ್ಧ ಜನರ ಮನವೊಲಿಸಿ ಇಸ್ಲಾಮನ್ನು ಅಧೋಗತಿಗೆ ತಳ್ಳುತ್ತಿರುವ ವಿಷಯವು ಖೇದಕರವಾಗಿದೆ. ಇವರ ಮೊಂಡುವಾದಗಳನ್ನೇ ವೇದವಾಕ್ಯವೆಂದು ನಂಬಿ ಸಾಮಾನ್ಯ ಜನ ಪರಿಶುದ್ಧ ಲಾಹಿಲಾಹ ಇಲ್ಲಲ್ಲಾಹ್ ಎಂಬ ಕಲಿಮತುತ್ತೌಹೀದಿನ ಮಹತ್ವವನ್ನೇ ಅಪಮಾನಿಸುತ್ತಿದ್ದಾರೆ.

 ಸತ್ಕರ್ಮಗಳನ್ನು ಹೇಗೆ ಬೇಕಾದರೂ ನಿರ್ವಹಿಸಬಹುದು, ತಮಗೆ ಇಷ್ಟ ಬಂದ ರೀತಿಯಲ್ಲಿ ಬದಲಿಸಬಹುದೆಂಬ ವಾದವನ್ನು ಇಸ್ಲಾಂ ಯಾವತ್ತೂ ಅಂಗೀಕರಿಸುವುದಿಲ್ಲ. ಆ ರೀತಿ ಪ್ರಚಾರಪಡಿಸುವವರ ಉದ್ದೇಶಗಳು ಮಾತ್ರ ಒಳ್ಳೆಯದಾಗಿದ್ದರೆ ಸಾಲದು. ಪ್ರವರ್ತಿಸುವ ಕಾರ್ಯಗಳು ಇಸ್ಲಾಮಿನ ಮೂಲಭೂತ ಆಧಾರ ಸ್ಥಂಭವಾದ ಪವಿತ್ರ ಖುರ್ ಆನಿನಲ್ಲಾಗಲೀ, ಸಹೀಹಾದ ಹದೀಸ್ ನಲ್ಲಾಗಲೀ ದಾಖಲಿಸಲ್ಪಟ್ಟಿದೆಯೇ ಎಂಬುದನ್ನು ಮೊತ್ತ ಮೊದಲ ಅರಿತಿರಬೇಕು ಅದು ಬಿಟ್ಟು ಪೂರ್ವಿಕರು ಪರಂಪರಾಗತವಾಗಿ ಅನುಸರಿಸಿಕೊಂಡು ಬಂದಂತಹ ಆಚಾರ ಆನಾಚಾರಗಳನ್ನು ಅಂಧವಾಗಿ ಅನುಕರಿಸುವುದು ಬುದ್ಧಿ ಜೀವಿಯಾದ ಸತ್ಯ ವಿಶ್ವಾಸಿಗೆ ಭೂಷಣವಲ್ಲ. ಅಲ್ಲಾಹು ಖುರ್ ಆನಿನಲ್ಲಿ ಹೇಳುತ್ತಾನೆ   "ಯಾರದರೂ ಪರಲೋಕವನ್ನಿಷ್ಟಪಟ್ಟು ಅದಕ್ಕಾಗಿ ಪ್ರಯತ್ನಿಸಬೇಕಾದ ರೀತಿಯಲ್ಲಿ ಪ್ರಯತ್ನಿಸಿದರೆ ಮತ್ತು ಅವನು ಸತ್ಯವಿಶ್ವಾಸಿ ಯಾಗಿದ್ದರೆ ಅಂತಹ ಪ್ರತಿಯೊಬ್ಬನ ಪ್ರಯತ್ನವೂ ಕೃತಾರ್ಥವಾಗುವುದು" (ಅಲ್ ಇಸ್ರಾಅ19). ಆದ್ದರಿಂದ ಪರಲೋಕದ ಉದ್ದೇಶದಿಂದ ನಾವು ಪ್ರವರ್ತಿಸುವ ಯಾವುದೇ ಕಾರ್ಯಗಳಾದರೂ ಸರಿ ಈ ಮೇಲೆ ಹೇಳಿದ ಖುರ್ ಆನಿನಲ್ಲಿರುವ ಸೂಕ್ತದಲ್ಲಿರುವ ನಿಬಂದನೆಗಳಿಗೆ ಬದ್ಧವಾದವುಗಳಾಗಿದೆಯೇ ಎಂಬುದನ್ನು ಅರಿತಿರಬೇಕು. ಅದರ ಹೊರತು ಅವರು ಮಾಡಿದ ಸತ್ಕರ್ಮಗಳೆಲ್ಲವೂ ನಿಷ್ಪ್ರಯೋಜಕವಾಗುವುದು ಎಂದು ಖುರ್ ಆನ್ ತಿಳಿಸುತ್ತದೆ.

 ಅಲ್ಲಾಹು ಪವಿತ್ರ ತಿಂಗಳುಗಳೆಂದು ಪ್ರಖ್ಯಾಪಿಸಲ್ಪಟ್ಟ ನಾಲ್ಕು ತಿಂಗಳುಗಳಲ್ಲಿ ರಜಬ್ ಕೂಡ ಒಂದು ಎಂಬೂದನ್ನು ಖುರ್ ಆನ್ ಸೂಚುಸುತ್ತದೆ "ನಿಶ್ಚಯವಾಗಿಯೂ ಅಲ್ಲಾಹು ಭೂಮಿ ಆಕಾಶಗಳನ್ನು ಸೃಷ್ಟಿಸಿದಂದಿನಿಂದ ಅಲ್ಲಾಹನ ಲಿಖಿತದಲ್ಲಿ ತಿಂಗಳುಗಳ ಸಂಖ್ಯೆ ಹನ್ನೆರಡು ಅವುಗಳಲ್ಲಿ ನಾಲ್ಕು ತಿಂಗಳುಗಳು ಯುದ್ಧ ನಿಷಿದ್ಧವಾದವುಗಳಾಗಿದೆ (ಸೂರತೌಬಾ36) ಆ ನಾಲ್ಕು ತಿಂಗಳು ಯಾವುದು ಎಂಬುದನ್ನು ಹದೀಸ್ ನಲ್ಲಿ ಉಲ್ಲೇಖಿಸಲಾಗಿದೆ, ದುಲ್,ಕ,ಅದ; ದುಲ್ ಹಜ್ಜ್; ಮುಹರ್ರಮ್ ಹೀಗೆ ಪ್ರಾರಂಭವಾದ ಮೂರು ತಿಂಗಳು ಮತ್ತೊಂದು ಜಮಾತುಲ್ ಆಖರ್ ನ ಮತ್ತು ಶಹಬಾನ್ ನ ಮಧ್ಯದಲ್ಲಿ ಬರುವ ರಜಬ್ ತಿಂಗಳಾಗಿದೆ ಅದು. (ಮುತ್ತಫಕ್ಕುನ್ ಅಲೈಹಿ)

 ರಜಬ್ ತಿಂಗಳಲ್ಲಿ ಇಂದಿನ ಕಾಲದಲ್ಲಿ ನಡೆಯುವ ಅನಾಚಾರಗಳು, ಅಸಂಬದ್ಧ ಪ್ರವರ್ತನೆಗಳು ಇಸ್ಲಾಮಿನ ಆಶಯಾದರ್ಶಗಳೀಗೆ ತೀರಾ ವಿರುದ್ಧವಾದವುಗಳಾಗಿದೆ. ಪವಿತ್ರ ಖುರ್ ಅನಿನಲ್ಲಾಗಲೀ ಸ್ವಹೀಹಾದ ಹದೀಸ್ ಗಳಲ್ಲಗಲೀ ಇಂತಹ ಆಚಾರಗಳಿಗೆ ಯಾವುದೇ ಆಧಾರ ಇಲ್ಲ, ಆದರೂ ಪುರೋಹಿತ ವರ್ಗವು ಅವುಗಳನ್ನೆಲ್ಲಾ ಲೆಕ್ಕಿಸದೆ ತಮ್ಮದೇ ಆದ ನೂತನ ಸಿದ್ಧಾಂತಗಳನ್ನು ಸೃಷ್ಟಿಸಿ ಮುಸ್ಲಿಂ ಸಮುದಾಯದಲ್ಲಿ ಪ್ರಚಾರ ಪಡಿಸುತ್ತಿದೆ. ಉದಾಹರಣೆಗೆ ಕೇರಳದಂತಹ ರಾಜ್ಯದಲ್ಲಿ ರಜಬ್ ತಿಂಗಳನ್ನು ಮಿಅರಾಜ್ ತಿಂಗಳೆಂದು ಭಾವಿಸಿ ಆದರಿಸಿ ಕೆಲವು ಅನಾಚಾರಗಳನ್ನು ನಿರ್ವಹಿಸುವುದು ಕಂಡುಬರುತ್ತಿದೆ. ಪ್ರವಾದಿ ಸ.ಅ. ರವರ ಮಿಅರಾಜ್ ಯಾತ್ರೆಯು ಪ್ರಸ್ತುತ ತಿಂಗಳಿನಲ್ಲಿಯೇ ನಡೆದಿದೆ ಎಂಬ ವಿಷಯದಲ್ಲಿ ಚರಿತ್ರೆ ಗಾರರೆಡೆಯಲ್ಲಿ ಒಮ್ಮತಾಭಿಪ್ರಾಯವಿಲ್ಲ, ಆದರೂ ಆ ಸಂಭವವು ಪ್ರಸ್ತುತ ತಿಂಗಳಿನಲ್ಲಿಯೇ ನಡೆದಿದೆ ಎಂದು ತಿಳಿದರೂ ಕೂಡ ಅದಕ್ಕೆ ಸಂಬಂದಿಸಿದ ಯಾವುದೇ ಪ್ರತ್ಯೇಕ ಇಬಾದತ್ ಗಳಾಗಲೀ, ಆಚಾರಗಳಾಗಲೀ ನಿರ್ದೇಶಿಸಲಾಗಿಲ್ಲ. ಮತ್ತು ರಜಬ್ ತಿಂಗಳ ಪ್ರಥಮ ಶುಕ್ರವಾರ ರಾತ್ರಿ ರಗಾಇಬ್ ಎಂಬ ಹೆಸರಿನ ಪ್ರತ್ಯೇಕ ಸುನ್ನತ್ ನಮಾಝ್ ಗಳಿವೆ ಎಂದು ಕಾಣುವ ಎಲ್ಲಾ ಹದೀಸ್ ಗಳೂ ದುರ್ಬಲವಾಗಿರುವುದು ಎಂದು ಇಬ್ನುಅಜರುಲ್ ಅಸ್ಗಲಾನಿ(ರ) ಅವರು ತಮ್ಮ ಲತ್ವಾಇಫ್ ಎಂಬ ಗ್ರಂಥದಲ್ಲಿ ವ್ಯಕ್ತಪಡಿಸಿದ್ದಾರೆ. ಮುಂಗಾಮಿಗಳಲ್ಲಿ ಇಂತಹ ಒಂದು ನಮಾಝ್ ನ ಕುರಿತು ದಾಖಲಿಸದಿರುವುದರಿಂದ ಅದೊಂದು ಬಿದ್ ಅತ್ ಎಂಬ ವಿಷಯದಲ್ಲಿ ಸಂಶಯವಿಲ್ಲ.

 ಹಲವು ಕಡೆ ರಜಬ್ ತಿಂಗಳ 27 ರಂದು ಉಪವಾಸ ವೃತ ಮಾಡುವುದು ಕಂಡುಬರುತ್ತಿದೆ ಇದೂ ಕೂಡ ಆಧಾರ ರಹಿತ ಎಂದು ಇಬ್ನುಅಜರುಲ್ ಅಸ್ಗಲಾನಿ ತಮ್ಮ  "ತಬ್ ಯಿನುಲ್ ಉಜೂದ್ ಫಿ ಮಾ ವರದ ಎಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಮುಹರ್ರಮ್ 9 ಮತ್ತು 10 ಶವ್ವಾಲ್ ನಲ್ಲಿ 6 , ದುಲ್ ಹಜ್ಜ್ 9 ಅದೇ ರೀತಿ ಅದೇ ರೀತಿ ಪ್ರತೀ ತಿಂಗಳ 13,14,15,  ದಿವಸಗಳಲ್ಲಿ ಉಪವಾಸವು ಸುನ್ನತ್ತಾಗಿದೆ ಎಂಬ ವಿಷಯದಲ್ಲಿ ಅಭಿಪ್ರಾಯ ವ್ಯತ್ಯಾಸವಿಲ್ಲ. ಅದು ಪ್ರವಾದಿ ಸ.ಅ. ಚರ್ಯೆ ಆಗಿರುವುದರಿಂದ ಸುನ್ನತ್ತಾಗಿ ಪರಿಗಣಿಸಲ್ಪಡುವುದು ಹೊರತು ಉಳಿದ ಯಾವುದೇ ರೀತಿಯ ಒಳ್ಳೆಯ ಕಾರ್ಯಗಳೇ ಆಗಲಿ ಪ್ರವಾದಿ ಸ.ಅ. ರವರ ಚರ್ಯೆಯಲ್ಲಿಲ್ಲದ್ದು ಬಿದ್ ಅತ್ ಎಂಬ ವಿಷಯವು ಗಮನೀಯ.

 ಅದೇ ರೀತಿ ಪ್ರವಾದಿ ಸ.ಅ. ರವರು ರಜಬ್ ತಿಂಗಳಲ್ಲಿ ಉಮ್ರ ಮಾಡಿರುವುದಾಗಲೀ, ಆ ತಿಂಗಳ ಉಮ್ರಕ್ಕೆ ಪ್ರತ್ಯೇಕ ಪುಣ್ಯವಿದೆ ಎಂದು ಹೇಳಿರುವುದಾಗಲೀ ಯಾವುದೇ ಹದೀಸ್ ನಲ್ಲಿ ಲಿಖಿತವಾಗಿಲ್ಲ. ಪ್ರವಾದಿ ಸ.ಅ. ರವರು ಜೀವಿತ ಕಾಲಾವಧಿಯಲ್ಲಿ ನಾಲ್ಕು ಉಮ್ರ ಮಾಡಿರುವುದಾಗಿ ಸಹೀಹ್ ಆದ ಹದೀಸ್ ಗಳಿಂದ ತಿಳಿದುಬರುತ್ತದೆ. ಅದರಲ್ಲಿ ಮೂರು ಉಮ್ರವು ದುಲ್ ಕ ಅದ ತಿಂಗಳಲ್ಲಿಯೂ ಮತ್ತೊಂದು ತಮ್ಮ ಹಜ್ಜತುಲ್ ವಿದಾಅ ದ ದುಲ್ ಹಜ್ಜ್ ತಿಂಗಳಲ್ಲಾಗಿದೆ. ರಮಳಾನ್ ತಿಂಗಳ ಉಮ್ರಕ್ಕೆ ಹೆಚ್ಚಿನ ಪುಣ್ಯವಿದೆಯೆಂದೂ, ರಮಳಾನಿನಲ್ಲಿ ಉಮ್ರ ಮಾಡಿದವನೀಗೆ ನನ್ನೊಂದಿಗೆ  ಹಜ್ಜ್ ಮಾಡಿದ ಪ್ರತಿಫಲವಿದೆಯೆಂದೂ ಪ್ರವಾದಿ ಸ.ಅ. ಹೇಳಿರುವುದಾಗಿ ಸಹೀಹ್ ಆದ ಹದೀಸ್ ಗಳಲ್ಲಿ ರುಜುವಾತಾಗಿದೆ. ಆದರೆ ರಜಬ್ ತಿಂಗಳ ಉಮ್ರಕ್ಕೆ ಹೆಚ್ಚಿನ ಪುಣ್ಯವಿದೆ ಎಂಬ ವಿಷಯವು ಆಧಾರ ರಹಿತ ಎಂದು ಇಬ್ನು ಖಯ್ಯುಮ್ ಜೌಸಿ(ರ) ತಮ್ಮ ಸಾದುಲ್ ಮ,ಆದ್ ಎಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಆದುದರಿಂದ ರಜಬ್ ತಿಂಗಳಲ್ಲಿ ಯಾವುದೇ ಪ್ರತ್ಯೇಕ ಆರಾಧನೆಗಳಿಲ್ಲ ಎಂದು ಈ ಮೇಲಿನ ಉದ್ಧರಣಿಗಳಿಂದ ಸ್ಪಷ್ಟವಾಗುತ್ತದೆ.
 ಪವಿತ್ರ ಕುರ್ ಆನಿನಲ್ಲಿ ಅಲ್ಲಾಹು ಹೇಳುತ್ತಾನೆ  "ಓ ಪೈಗಂಬರರೇ, ಇವರೊಡನೆ ಹೇಳಿರಿ ತಮ್ಮ ಕರ್ಮಗಳಲ್ಲಿ ಅಧಿಕ ಪರಾಜಿತರು ಯಾರೆಂದು ತಿಳಿಸಲೇ ತಮ್ಮ ಲೌಕಿಕ ಜೀವನದಲ್ಲಿ ಅವರ ಸರ್ವ ಪ್ರಯತ್ನ, ಪರಿಶ್ರಮಗಳೂ ಸನ್ಮಾರ್ಗದಿಂದ ಗುರಿತಪ್ಪಿ ಹೊಗಿದ್ದು ತಾವು ಮಾಡುತ್ತಿರುವುದೆಲ್ಲವೂ ಸರಿಯೇ ಎಂದು ತಿಳಿದು ಕೊಂಡಿದ್ದರೋ ಅವರು ತಮ್ಮ ಪ್ರಭುವಿನ ವಚನಗಳನ್ನೂ, ಅವನ ಮುಂದೆ ಹಾಜರಾಗಲಿಕ್ಕಿದೆ ಎಂಬುದನ್ನು ನಿರಾಕರಿಸಿದವರು. ಆದುದರಿಂದ ಅವರ ಸಕಲ ಕರ್ಮಗಳೂ ವ್ಯರ್ಥವಾಗಿ ಬಿಟ್ಟವು . ನಾವು ಪುನರುತ್ಥಾನ ದಿನ ಅವರೀಗೆ ಯಾವ ಮಹತ್ವ ವನ್ನೂ ನೀಡಲಾರೆವು. ಅವರು ಸತ್ಯವನ್ನು ನಿಷೇಧಿಸಿದುದಕ್ಕಾಗಿಯೂ, ನನ್ನ ವಚನಗಳನ್ನು ಮತ್ತು ನನ್ನ ಸಂದೇಶವಾಹಕರನ್ನು ಪರಿಹಾಸ್ಯ ಮಾಡಿದುದಕ್ಕಾಗಿಯೂ ಅವರ ಪ್ರತಿಫಲ ನರಕವಾಗಿರುತ್ತದೆ. (ಅಲ್ ಕಹ್ಫ್ 103-106)

 ಆದುದರಿಂದ , ಸಹೋದರರೇ ಚಿಂತಿಸಿ ನಾವು ಎಷ್ಟೊಂದು ಕಷ್ಟಪಟ್ಟು ಸತ್ಕರ್ಮಗಳೆಂದು ಭಾವಿಸಿ ಮಾಡಿದ ಕರ್ಮಗಳೆಲ್ಲವೂ ನಿಷ್ಪ್ರಯೋಜಕವೂ ಜಹನ್ನಮ್ ಗೇ ಸೇರುವಂತ ದಾರಿಮಾಡಿ ಕೊಡುವುದೆಂದೂ ಖುರಾಅನ್ ಸೂಚಿಸುತ್ತದೆ. ಆದ್ದರಿಂದ ನಾವು ಮಾಡುವ ಪ್ರತಿಯೊಂದು ಕರ್ಮಗಳಿಗೂ ಖುರ್ ಆನಿನಲ್ಲಾಗಲೀ ಸ್ವಹೀಹಾದ ಹದೀಸ್ ಗಳಲ್ಲಾಗಲೀ ಆಧಾರವಿದೆಯೇ ಎಂದು ಪರೀಕ್ಷಿಸಬೇಕು, ಆಧಾರ ರಹಿತ ವಾದಂತಹ ಯಾವುದೇ ಕರ್ಮಗಳೇ ಆಗಿರಲಿ ಅವುಗಳನ್ನು ಉಪೇಕ್ಷಿಸುವುದೇ ಒಳಿತು. ಅದು ಬಿಟ್ಟು, ಅದು ಒಳ್ಳೆಯದಲ್ಲವೇ ಇದು ಒಳ್ಳೆಯದಲ್ಲವೇ ಎಂಬ ವಾದಗಳಿಗೆ ಇಸ್ಲಾಮಿನಲ್ಲಿ ಸ್ಥಾನವಿಲ್ಲ. ಪ್ರವಾದಿ ಸ.ಅ. ಹೇಳಿರುವರು ಸ್ವರ್ಗ ಪ್ರವೇಶಿಸುವಂತಹ ಹಾಗೂ ನರಕದಿಂದ ರಕ್ಷಣೆ ಹೊಂದುವಂತಹ ಯಾವುದೇ ಒಂದು ಕಾರ್ಯಗಳನ್ನೂ ನಾನು ನಿಮ್ಮಲ್ಲಿ ಹೇಳದೆ ಹೋಗುವುದಿಲ್ಲ ಎಂದು ಆದುದರಿಂದ ಒಬ್ಬ ಸತ್ಯವಿಶ್ವಾಸಿಗೆ ಸ್ವರ್ಗ ಪ್ರವೇಶಿಸುವಂತಹ ಎಲ್ಲಾ ರೀತಿಯ ಅರಾಧನೆಗಳನ್ನೂ, ಸತ್ಕರ್ಮಗಳನ್ನೂ ಪ್ರವಾದಿ ಸ.ಅ. ಕಲಿಸಿಕೊಟ್ಟಿರುತ್ತಾರೆ. ಅವುಗಳನ್ನು ಮಾತ್ರ ಜೀವನದಲ್ಲಿ ಅಳವಡಿಸಿಕೊಂಡು ಪ್ರವಾದಿ ಸ.ಅ. ರನ್ನೂ ಪ್ರೀತಿಸಿ ಸಲಫುಸ್ವಾಲಿಹೀನ್ ಗಳ ಪಾದವನ್ನು ಅನುಸರಿಸಿ ಅಲ್ಲಾಹನ ಪ್ರೀತಿಗೆ ಪಾತ್ರರಾಗಿ ಅವನ ಅಂತಿಮ ದಿನದ ವಿಚಾರಣೆಯಲ್ಲಿ ವಿಜಯಿಗಳಾಗೋಣ. ಅಲ್ಲಾಹು ನಮಗೆಲ್ಲರಿಗೂ ಸತ್ಯವನ್ನು ಸತ್ಯವಾಗಿ ತಿಳಿಯಲು ಹಾಗೂ ಮಿಥ್ಯವನ್ನು ಗುರುತಿಸಿ ಅದರಿಂದ ದೂರ ಉಳಿಯಲು ತೌಫೀಖ್ ನೀಡಲಿ. ಆಮೀನ್.

✍ ಅಬೂ ಹಿಲಾಲ್ ಅರ್ಲ.

------------'---------'''--------

ಬಿದ್ಅತ್ ನ ಬಗ್ಗೆ ತಿಳಿದುಕೊಳ್ಳಲು ಈ ಕೆಳಗಿನ ಲಿಂಕ್ ಸಂಪರ್ಕಿಸಿ.
https://islaminkannada.blogspot.in/2016/12/blog-post.html?m=1

28 Mar 2017

ಅವರು ದೇವರಾಗಲಿಲ್ಲ...

ಅವರು ದೇವರಾಗಲಿಲ್ಲ...

ಭಾರದ್ವಾಜ್ ಕೆ. ಆನಂದತೀರ್ಥ, ಕೊಡಗು.

ಪ್ರವಾದಿ ಮುಹಮ್ಮದ್‍ರವರ(ಸ) ಬಗ್ಗೆ ಒಬ್ಬ ಅನ್ಯ ಧರ್ಮಿಯನಾಗಿ ಬರೆಯಲು ಕುಳಿತಾಗ ಭಯ ಮತ್ತು ಇಂತಹ ಒಂದು ಅವಕಾಶ ಸಿಕ್ಕಿದ್ದಕ್ಕೆ ಆನಂದ ಎರಡೂ ಕೂಡ ಉಂಟಾಗಿ ಏನು ಬರೆಯಬೇಕು ಅನ್ನುವುದೇ ಅರ್ಥವಾಗದೆ ಒಂದೆರಡು ದಿನ ಮೌನವಾಗಿಯೇ ಇರಬೇಕಾಯಿತು. ಕೆಲವರ ಹೆಸರು ಹೇಳುವುದಕ್ಕೆ ಅರ್ಹತೆ ಮತ್ತು ಯೋಗ್ಯತೆ ಎರಡೂ ಬೇಕಾ ಗುತ್ತದೆ. ಇವರ ಬಗ್ಗೆ ಬರೆಯುವ ಅರ್ಹತೆ, ಯೋಗ್ಯತೆ ಎರಡೂ ನನಗೆ ತೃಣ ಮಾತ್ರವೂ ಇಲ್ಲ ಅನ್ನುವುದನ್ನು ಗಮನದಲ್ಲಿ ಇಟ್ಟುಕೊಂಡೇ ನನ್ನಂತಹ ಅಲ್ಪನಿಗೆ ತೋಚಿದ ನಾಲ್ಕೇ ನಾಲ್ಕು ಸಾಲುಗಳನ್ನು ಭಯ ಮತ್ತು ಭಕ್ತಿಯಿಂದಲೇ ಬರೆಯುವ ಪ್ರಯತ್ನ ಮಾಡುತ್ತಿದ್ದೇನೆ.ಮುಹಮ್ಮದ್ ಹೆಸರೇ ಶಾಂತಿ ಮತ್ತು ನೆಮ್ಮದಿಯ ಸೂಚಕ. ಒಬ್ಬ ಅವಿದ್ಯಾವಂತ ಮನುಷ್ಯ ಅಂದುಕೊಂಡು ಇವರ ಜೀವನ ಚರಿತ್ರೆ ಓದಲು ಶುರು ಮಾಡಿದಾಗ ಇದ್ದ ಮನೋಸ್ಥಿತಿಗೂ ಪುಸ್ತಕ ಓದಿದಾಗ, ಓದಿದ ನಂತರ ಉಂಟಾದ ಮನೋಸ್ಥಿತಿಗೂ ಅಜಗಜಾಂತರ ವ್ಯತ್ಯಾಸ ಇತ್ತು. `ದೇವರು ಮನಸ್ಸು ಮಾಡಿದರೆ ಮನುಷ್ಯ ಏನಾಗಬಲ್ಲ’ ಅನ್ನುವುದಕ್ಕೆ ಮುಹಮ್ಮದ್ ಅತ್ಯುತ್ತಮ ಉದಾಹರಣೆ. ದೇವರ ಕೃಪೆಯ ಜೊತೆಗೆ ಮನುಷ್ಯನಲ್ಲಿ ಇರಲೇಬೇಕಾದ ಅತ್ಯುತ್ತಮ ಗುಣಗಳನ್ನು ಒಬ್ಬ ಮನುಷ್ಯ ಹೊಂದಿದ್ದರೆ ಅವುಗಳನ್ನೇ ಬಿಟ್ಟು ಕೊಡಲು ತಯಾರಿರದಿದ್ದರೆ, ತಾನು ನಂಬಿದ ಸಿದ್ಧಾಂತಗಳಿಗೆ ಕೊನೆಯ ಕ್ಷಣದ ತನಕವೂ ಅಂಟಿಕೊಂಡಿದ್ದರೆ, ಈ ಹಾದಿಯಲ್ಲಿ ಬರುವ ಕಷ್ಟ ನಷ್ಟಗಳನ್ನು ಸಮಚಿತ್ತದಿಂದ ಅನುಭವಿಸಲು ಸಿದ್ಧನಾದರೆ, ರಾಜಿ ಮಾಡಿಕೊಳ್ಳದಿದ್ದರೆ ಮುಹಮ್ಮದ್‍ರವರ(ಸ) ಹಾದಿಯಲ್ಲಿ ಸಾಗಬಹುದೋ ಏನೋ.
ಆದರೆ ಎಲ್ಲಿಯೂ ಮುಹಮ್ಮದ್ ಅವರು ನನಗೆ ಒಬ್ಬ ಜೀವಂತ ಮನುಷ್ಯ ಆಗಿದ್ದರು ಅಂತ ಅನಿಸಲೇ ಇಲ್ಲ. ಇವರೊಬ್ಬ ದೇವರ ವಿಶೇಷ ಸೃಷ್ಟಿ ಅನಿಸಿತು. ಮೇಲಿನಿಂದಲೇ ಎಲ್ಲವನ್ನೂ ತೀರ್ಮಾನ ಮಾಡಿ ನೆಪ ಮಾತ್ರಕ್ಕೆ ಇವರಿಗೊಂದು ಮಾನವ ರೂಪ ನೀಡಿ ದೇವರು ಕಳುಹಿಸಿದ ಅಂತ ನನಗೆ ಅನಿಸಿತು. ಒಬ್ಬ ಮನುಷ್ಯ ಮಾತ್ರನಲ್ಲಿ ಇಷ್ಟು ಅತ್ಯುತ್ತಮ ಗುಣಗಳು ಇರುವುದು ಸಾಧ್ಯವೇ ಎಂಬ ಮನುಷ್ಯ ಮಾತ್ರನ ಸಂಶಯ ಸ್ವಭಾವದ ಹಿನ್ನೆಲೆಯಲ್ಲಿ ಇಷ್ಟು ಹೇಳುವುದು ಸಾಧ್ಯವಾಯಿತು.
ಅತ್ಯಂತ ವೈಜ್ಞಾನಿಕವಾದ ಒಂದು ಧರ್ಮವನ್ನು ಬದುಕಿನ ಪ್ರತಿ ಹಂತದಲ್ಲಿ ಪ್ರತಿ ಕ್ಷಣದಲ್ಲಿ ಅನುಸರಿಸಬೇಕಾದ ನೀತಿಯನ್ನು ಯಾವುದೇ ವಿದ್ಯೆ ಇಲ್ಲದ ಒಬ್ಬ ಒಳ್ಳೆಯ ಮನುಷ್ಯ. ಕರಾರುವಕ್ಕಾಗಿ ಹೇಳುತ್ತಾನೆ ಅಂತಾದರೆ ಆ ಮನುಷ್ಯನನ್ನೇ ದೇವರ ಅವತಾರ ಎಂದು ಸುಲಭದಲ್ಲಿ ಕರೆದು ಬಿಡಬಹುದು. `ಪ್ರವಾದಿ’ ಅನ್ನುವ ವಿಶೇಷಣವನ್ನು ಉಪಯೋಗಿಸಲು ಸಿದ್ಧರಿಲ್ಲದ ಮುಹಮ್ಮದ್ ಅವರು ಇನ್ನು ದೇವರ ಅವತಾರ ಅಂದರೆ ಒಪ್ಪಿಕೊಳ್ಳುತ್ತಾರೆಯೇ ಅನ್ನುವ ಪ್ರಶ್ನೆಯೂ ಇದರ ಜೊತೆ ಜೊತೆಯಲ್ಲಿಯೇ ಹುಟ್ಟುವುದರಿಂದ ಇವರನ್ನು ವರ್ಣಿಸುವುದು ಹೇಗೆ ಅನ್ನುವುದು ಅರ್ಥವಾಗದೆ, ಮೌನವೇ ಸರಿ ಅನ್ನುವ ತೀರ್ಮಾ ನಕ್ಕೂ ಬರಬೇಕಾಯಿತು. ಮುಹಮ್ಮದ್(ಸ) ಅವರನ್ನು ಅನುಭವಿಸಬಹುದೇ ಹೊರತು ವರ್ಣಿಸಲಾಗದು. ಇವರಿಗೆ ಒಂದು ಚೌಕಟ್ಟು ಹಾಕಿ ಅದರೊಳಗೆ ಇವರನ್ನೇ ಕೂರಿಸುವುದು ಹೇಗೆ? ಹಾಗೆ ಕೂರಿಸುವ ಪ್ರಯತ್ನ ಕೂಡ ತಪ್ಪು ಅಂತ ಅನಿಸಲಾರಂಭಿಸಿದೆ.

`ಕ್ಷಮೆ’ ಯಾವುದೇ ಧರ್ಮದ ತಳಹದಿ. ಅನ್ಯ ಧರ್ಮಿಯರನ್ನು ಹೇಗೆ ನಡೆಸಿಕೊಳ್ಳಬೇಕು ಅನ್ನುವುದನ್ನು ಪ್ರವಾದಿಯವರ(ಸ) ಮಾತುಗಳಿಂದ ನಾವೆಲ್ಲರೂ ಕಲಿಯಬೇಕಾಗಿದೆ. `ಜಿಹಾದ್’ ಅನ್ನುವ ಪದಕ್ಕೆ ನಾವು ಅದರ ಮೂಲಕ್ಕೆ ತದ್ವಿರುದ್ಧವಾದ ಅರ್ಥದಲ್ಲಿ ಅರ್ಥೈಸಿಕೊಳ್ಳುತ್ತಿದ್ದೇವೆ. ನಿಜವಾದ ಅರ್ಥದಲ್ಲಿ `ಮುಸ್ಲಿಮ್’ ಆಗುವುದು ತುಂಬಾ ಕಷ್ಟ. ಮನುಷ್ಯ ನಿಜವಾದ ಅರ್ಥದಲ್ಲಿ ಹೇಗಿರಬೇಕು ಅನ್ನುವುದನ್ನು ಮುಹಮ್ಮದ್(ಸ) ಹೇಳಿದ್ದಾರೆ. ಅವರು ಆ ಕಾಲದಲ್ಲಿ ಹೇಳಿದ್ದು ಈ ಕಾಲಕ್ಕೂ ಅನ್ವಯವಾಗುತ್ತದೆ. ಇಸ್ಲಾಮ್‍ನಲ್ಲಿ ಬಡ್ಡಿ ವ್ಯವಹಾರ ನಿಷಿದ್ಧ. ಈ ದರಿದ್ರ ವ್ಯವಹಾರವನ್ನೇ ಇಸ್ಲಾಮಿನಷ್ಟು ಉಗ್ರವಾಗಿ ವಿರೋಧಿಸುವ ಇನ್ನೊಂದು ಧರ್ಮದ ಪರಿಚಯ ನನಗೆ ಆಗಿಲ್ಲ. ಬಡ್ಡಿ ವ್ಯವಹಾರ ರಹಿತ ಪ್ರಪಂಚದ ಕಲ್ಪನೆಯಲ್ಲೇ ನಾವು ಇರುವುದು ವಾಸ್ತವಿಕ. ಮುಂದೆ ಒಂದು ದಿನ ಇಂತಹ ವ್ಯಾವಹಾರಿಕ ಪ್ರಪಂಚ ಬರಬಹುದು ಅನ್ನುವ ಆಶಾಭಾವನೆಯೇ ಮೈ-ಮನಗಳಲ್ಲಿ ಹೊಸ ಬಗೆಯ ಹುರುಪನ್ನು ತಂದು ಕೊಡುತ್ತದೆ.

ಮುಹಮ್ಮದ್ ಅವರು ತಾವು ನುಡಿದಂತೆ ನಡೆದವರು. ತಮಗೆ ಇದ್ದ ಅಪರಿಮಿತ ಶಕ್ತಿಯನ್ನು ಅವರು ಉಪಯೋಗಿಸಿ ಪವಾಡ ಪುರುಷನಂತೆ ಮೆರೆಯಬಹುದಿತ್ತು. ಇವರು ಬದುಕಿನಲ್ಲಿ ಪವಾಡಗಳನ್ನು ಮಾಡಿದ್ದು ತುಂಬಾ ಕಡಿಮೆ. ಅಲ್ಲೊಂದು, ಇಲ್ಲೊಂದು ಪವಾಡದಂತಹ ಘಟನೆಗಳು ಇವರ ಬದುಕಿನಲ್ಲಿ ಬಂದು ಹೋಗುತ್ತವೆಯಾದರೂ ಇವರೆಂದೂ ಪವಾಡಗಳಿಂದಲೇ ಜನರನ್ನು ಸೆಳೆಯುವ ತಂತ್ರಗಳನ್ನು ಅನುಸರಿಸಿದವರಲ್ಲ. ಒಬ್ಬ ಸಾಮಾನ್ಯ ಮನುಷ್ಯನಂತೆಯೇ ಬದುಕಿದರು. ಹೀಗಾಗಿ ಅನೇಕ ಪವಾಡ ಪುರುಷರಿಗಿಂತ ಇವರು ಹೆಚ್ಚು ಆಪ್ತವಾಗುತ್ತಾರೆ.

ಪ್ರಕೃತಿ, ಪರಿಸರ, ಜೀವಸಂಕುಲ, ಸ್ತ್ರೀ-ಪುರುಷರ ನಡುವೆ ಇರಬೇಕಾದ ಸಂಬಂಧ ಇವುಗಳ ಬಗ್ಗೆ ಮುಹಮ್ಮದ್ ಅವರು ಹೇಳಿರುವುದು ಅನುಕರಣೀಯ. ಮಾನವ, ಮಾನವನ ನಡುವಣ ಸಂಬಂಧಗಳು ಹೀಗೆ ಯಾವುದೇ ವಿಷಯ ತೆಗೆದುಕೊಳ್ಳಿ. ಇವರು ಹೇಳಿರುವುದು, ಹೇಳಿದಂತೆಯೇ ಬದುಕಿದ್ದು, ಅಂತಿಮ ಕ್ಷಣದವರೆಗೂ ಒಂದಿಂಚು ಆಚೀಚೆ ಸರಿಯದೇ ಇರುವುದು ಇವೆಲ್ಲವನ್ನೂ ಓದಿದಾಗ ಇಂತಹ ಒಬ್ಬರು ಇದ್ದರೆ ಅಥವಾ ಒಂದಷ್ಟು ಜನರು ಸೇರಿ ಇಂತಹ ಒಂದು ವ್ಯಕ್ತಿತ್ವವನ್ನು ಸೃಷ್ಟಿ ಮಾಡಿದರೋ ಎಂಬ ಸಂಶಯವೂ ಬರುತ್ತದೆ.

`ದೇವರು ಒಬ್ಬನೇ’ ಈ ಮಾತನ್ನು ಹಲವು ಧರ್ಮಗಳು ಹೇಳಿವೆಯಾದರೂ ಮುಹಮ್ಮದ್ ಅವರಷ್ಟು ನಿಖರವಾಗಿ, ಕಡಕ್ ಆಗಿ ಹೇಳಿದವರು ಬೇರೆ ಇಲ್ಲ. ಬೇರೆ ಬೇರೆ ಧರ್ಮಗಳಲ್ಲಿ ಈ ಮಾತನ್ನು ಹೇಳಿದವರಿಗೆ ದೇವರ ಪಟ್ಟ ದೊರಕಿಬಿಟ್ಟಿತು. ಇಂತಹ ಅಪಾಯದಿಂದ ಮುಹಮ್ಮದ್‍ರವರು(ಸ) ದೂರ ಉಳಿದರು. ಇದೊಂದು ಪ್ರಜ್ಞಾಪೂರ್ವಕವಾಗಿ ಮಾಡಿದ, ತಳೆದ ನಿಲುವು ಅಂತ ನಾನು ನನ್ನ ತುಂಬಾ ಸೀಮಿತ ಜ್ಞಾನದಿಂದ ಅಂದುಕೊಂಡಿದ್ದೇನೆ. ನಾನು ದೇವರ ಅವತಾರ ಅಂತ ಮುಹಮ್ಮದ್ ಅವರು ಹೇಳಿದ್ದರೆ, ಅಂದಿನ ಜನರು ಅದನ್ನು ನಂಬಲು ತುದಿಗಾಲಿನಲ್ಲಿ ನಿಂತಿದ್ದರು. ಆಗ ಒಂದಷ್ಟು ದೇವರುಗಳ ಜೊತೆಗೆ ಇನ್ನೊಂದು ದೇವರ ಸೇರ್ಪಡೆಯೂ ಆಗುತ್ತಿತ್ತು. ಇಂದು ಅವರ ಕಲ್ಪಿತ ಚಿತ್ರಗಳಿಗೆ ಹೂವಿನ ಹಾರ ಹಾಕಿ ದಿನನಿತ್ಯದ ಪೂಜೆಯೂ ಆಗುತ್ತಿತ್ತು. ಸತ್ಯ ತಿಳಿದಿದ್ದ ಅವರು ಸತ್ಯ ಭ್ರಷ್ಟರಾಗಲಿಲ್ಲ. ವಿಗ್ರಹಗಳ ಪೂಜೆಯ ಜೊತೆಗೆ ತಮ್ಮನ್ನು ಪೂಜಿಸುವುದಕ್ಕೂ ಅವರು ನಿಷೇಧ ಹೇರಿದರು. ಪ್ರಾಯಶಃ ಇದು ಅವರ ಜೀವನದ ಬಲುದೊಡ್ಡ ಸಾಧನೆ. ತಾವೇ ದೇವರಾಗುವುದನ್ನು ಅವರು ತಡೆದರು.

ನನ್ನ ತುಂಬಾ ತುಂಬಾ ಸೀಮಿತವಾದ ಜ್ಞಾನದಲ್ಲಿ ಇಷ್ಟು ಬರೆಯಲು ನನಗೆ ಸಾಧ್ಯವಾಗಿದೆ. ಮುಹಮ್ಮದ್ ಅವರ ಜೀವನ ಮತ್ತು ಸಂದೇಶವನ್ನು ತುಂಬಾ ಸುಲಭವಾಗಿ ಓದಿ ಬಿಡಬಹುದು. ಆದರೆ ಅನುಕರಣೆ ಮಾತ್ರ ತುಂಬಾ ಕಷ್ಟ. ಒಂದು ಧರ್ಮವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಮಾತನಾಡುವುದು ಮತ್ತು ತನ್ನ ಧರ್ಮದಲ್ಲಿ ಹೇಳಿರುವ ಸಂದೇಶಗಳಿಗೆ ತಪ್ಪು ಅರ್ಥ ಕಲ್ಪಿಸಿ ಅನಾಗರಿಕವಾಗಿ, ಅಸಹ್ಯಕವಾಗಿ ವರ್ತಿಸುವುದು ತಪ್ಪು. ಧರ್ಮಗಳನ್ನೇ ಸರಿಯಾಗಿ ಅರ್ಥ ಮಾಡಿಕೊಳ್ಳದೇ ಜನರು ತಮ್ಮ ಮೂಗಿನ ನೇರಕ್ಕೆ ವ್ಯವಹರಿಸಲು ಆರಂಭಿಸಿರುವುದೇ ಇಂದು ಜಗತ್ತು ಎದುರಿಸುತ್ತಿರುವ ಬಲು ದೊಡ್ಡ ಸಮಸ್ಯೆ. ಕಣ್ಣು, ಮುಚ್ಚಿ ವ್ಯವಹರಿಸುವುದನ್ನು ಪ್ರವಾದಿಯವರೇ(ಸ) ತಪ್ಪು ಅಂತ ಹೇಳಿದ್ದಾರೆ. ಇಸ್ಲಾಮನ್ನು ಮುಸಲ್ಮಾನರು, ಮುಸಲ್ಮಾನರಲ್ಲದವರೂ ಗಂಭೀರವಾಗಿ ಅರ್ಥಮಾಡಿಕೊಳ್ಳ ಬೇಕಾಗಿದೆ.

12 Mar 2017

ಅರಿಯಿರಿ ಸೃಷ್ಟಿಕರ್ತನನ್ನು.

ಮನುಷ್ಯನ ಸಂಕುಚಿತ ಚಿಂತನೆಯಿಂದಾಗಿ ಬಹುದೇವಾರಾಧನೆ ಜನ್ಮ ತಾಳುತ್ತದೆ.
ದನವು ಹಾಲು ಕೊಡುತ್ತೆ ಅದರಿಂದ ಹಲವಾರು ಉಪಯೋಗವಿದೆ ನಮಗೆ ಎಂದು ದನವನ್ನು ದೇವರೆನ್ನುವುದು,
ಆಲದ ಮರದಲ್ಲಿ ಔಷಧೀಯ ಗುಣ ಹಾಗೂ ರಾತ್ರಿ ಕೂಡ ಅತೀ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಉತ್ಪತ್ತಿ ಮಾಡುವ ಗುಣ ವಿದೆ ಆದುದರಿಂದ ಅದನ್ನೂ ದೇವರೆನ್ನುವುದು,

ತುಳಸಿ ಗಿಡದಲ್ಲಿ ರುವ ಅಪೂರ್ವ ಔಷಧೀಯ ಗುಣ ನೋಡಿ ಅದನ್ನು ದೇವರೆನ್ನುವುದು,
ಸೂರ್ಯನ ಅತ್ಯುಜ್ವಲ ಕಿರಣ ನೋಡಿ ಅದಕ್ಕೆ ಮಾನವನ ಅವಲಂಬನೆ ನೋಡಿ ಸೂರ್ಯನನ್ನು ದೇವನೆನ್ನುವುದು,
ಸಮುದ್ರದ ವಿಶಾಲತೆಯನ್ನು ಹಾಗೂ ಅದರ ಗರ್ಭದಲ್ಲಿರುವ ವಿಸ್ಮಯಗಳನ್ನು ನೋಡಿ ಅದನ್ನು ದೇವನೆನ್ನುವುದು,
ಹೀಗೆ ವಾಯುವಿನ ಭೀಕರತೆ,
 ಮಳೆಯ ಆರ್ಭಟತೆ,
 ಬೆಂಕಿಯ ತೀಕ್ಷಣತೆ ಇವೆಲ್ಲವನ್ನೂ ನೋಡಿ ಅವುಗಳಿಂದ ನಮಗೆ ಇರುವ ಉಪಯೋಗವನ್ನು ಗಮನಿಸಿ ಅದನ್ನು ದೇವರೆನ್ನುವುದು ಬಹುದೇವಾಧನಾ ಕಲ್ಪನೆಯ ಮೂಲ ತತ್ವವಾಗಿದೆ.

ಅಂದರೆ ಯಾವುದರಲ್ಲಿ ನಮಗೆ ಲಾಭ ಮತ್ತು ನಷ್ಟವಿದೆಯೋ ಅದರಲ್ಲಿ ದೈವತ್ವವನ್ನು ಕಲ್ಪಿಸುವುದು.
ಇಲ್ಲಿ ಒಬ್ಬ ಬಹುಧೇವಾರಾಧಕನು ಹಸುವಿನಲ್ಲಿ ನನಗೆ ಹಾಲು ಲಭಿಸುತ್ತದೆ ಅದರಲ್ಲಿ ನನಗೆ ಇನ್ನೂ ಅನೇಕ ಉಪಯೋಗವಿದೆ ಎಂದಷ್ಟೇ ಯೋಚಿಸುತ್ತಾನೆ.
 ಹಸುವಿನ ಕೆಚ್ಚಲಲ್ಲಿ ಹಾಲು ಎಲ್ಲಿಂದ ಬಂತು...?
 ಹಸು ತಿಂದದ್ದು ಹುಲ್ಲಲ್ವೇ...?

ಬಹುದೇವಾರಾಧಕ ಅದನ್ನು ಯೋಚಿಸಲಾರ ಅಲ್ಲಿಗೇ ಅವನ ಯೋಚನಾ ಮಿತಿಯನ್ನು ಮೊಟಕು ಗೊಳಿಸುತ್ತಾನೆ.
ಆದರೆ ಒಬ್ಬ ನೈಜ ದೇವ ವಿಶ್ವಾಸಿ ಹಾಗೆ ಮಾಡಲು ಸಾಧ್ಯವೇ...?
ಖಂಡಿತಾ ಇಲ್ಲ.
 ಅವನು ನೋಡುತ್ತಾನೆ ಈ ರಕ್ತ ಮತ್ತು ಮಲದ ನಡುವೆ ಸುವಾಸನೆ ಭರಿತ ಹಾಲು ಹೇಗೆ ಬಂತು..?
 ಆಲದ ಮರಕ್ಕೆ ಆ ಗುಣ ಹೇಗೆ ಬಂತು...?
ಸೂರ್ಯನಿಗೆ ಬೆಳಗುವ ಶಕ್ತಿ ಕೊಟ್ಟವರು ಯಾರು..?
ವಾಯು ರಭಸವಾಗಿ ಬೀಸಲು ಕಾರಣ ಯಾರು...?

ಅವನಿಗೆ ಅದರಲ್ಲಿ ದೇವರ ನಿದರ್ಶನ ಮಾತ್ರ ಕಾಣುತ್ತದೆ. ಯಾಕೆ ದೇವರು ಕಾಣಲ್ಲ ಎಂಬುದು ಪ್ರಶ್ನೆ.
 ನೋಡಿ ದೇವರು ಎಂದರೆ ಎಲ್ಲಾ ವಿಷಯದಲ್ಲೂ ಪರಿಪೂರ್ಣನಲ್ಲವೇ...
 ಮಳೆಯಲ್ಲಿರುವ ಉಪಯೋಗ ಗಾಳಿಯಲ್ಲಿಲ್ಲ.
ಗಾಳಿಯಲ್ಲಿರುವ ಉಪಯೋಗ ಮಳೆಯಲ್ಲಿಲ್ಲ.
 ಸಮದ್ರದಲ್ಲಿರುವ ಉಪಯೋಗ ಸೂರ್ಯನಲ್ಲಿಲ್ಲ.
ಹಾಗೆ ಸೂರ್ಯನಲ್ಲಿರುವ ಉಪಯೋಗ ಸಮುದ್ರದಲ್ಲಿಲ್ಲ.
 ಆಲದ ಮರ ಅಥವಾ ತುಳಸೀ ಗಿಡದಲ್ಲಿರುವ ಉಪಯೋಗ ಗುಣ ಪೂಜಿಸುವ ದನದಲ್ಲಿಲ್ಲ. ಯಾಕೆ ಇಲ್ಲ...?
ಕಾರಣ ಇಷ್ಟೇ ಅವರೆಲ್ಲರೂ ಅವರಿಗೆ ಈ ನಿರ್ದಿಷ್ಟ ಗುಣ ನೀಡಿ ಸೃಷ್ಟಿಸಿದ ಆ ಒಂದು ಶಕ್ತಿಯ ಸೃಷ್ಟಿಗಳು ಎಂದು.
 ಹಾಗಾದರೆ ಯಾರು ಆ ಶಕ್ತಿ....?

 ಆ ಶಕ್ತಿಗೇ ಹಾಗಿದೆ ಮುಸ್ಲಿಮರು ಅಲ್ಲಾಹ್ ಎನ್ನುವುದು.
ಅಲ್ಲಾಹ್ ಎಂದರೆ ಕೇವಲ ಮುಸ್ಲಿಮರಿಗೆ ಮಾತ್ರ ಅಲ್ಲ ಅವನೇ ಆಗಿರುವನು ಗಾಡ್, ಈಶ್ವರ, ದೇವರು ಎಲ್ಲವೂ ಆಯಾ ಭಾಷೆಗೆ ಅನುಗುಣವಾಗಿ ಕರೆಯುವುದು ಅವನನ್ನೇ ಆಗಿದೆ.

ಬಹುದೇವ ವಿಶ್ವಾಸ ಕೇವಲ ಗಾಳಿ, ಮಳೆ, ಸಮುದ್ರ, ಸೂರ್ಯ ಮುಂತಾದ ಇಷ್ಟಕ್ಕೇ ಮೀಸಲಾದುದಲ್ಲ.
ತನ್ನದೇ ರೀತಿ ಕೈ ಕಾಲು ಶರೀರ ಹೊಂದಿರುವ ಮನುಷ್ಯರನ್ನು ದೇವರು ಎಂದು ವಿಸ್ವಸಿಸುವವರೂ ಇದ್ದಾರೆ.
ಏಸು ಕ್ರಿಸ್ತ, ಸಾಯಿ ಬಾಬ, ಹಾಗೆ ಕೆಲವು ಮುಸ್ಲಿಮ್ ನಾಮ ಹೊಂದಿರುವವರು ಮಹಾನತೆ ಕಲ್ಪಿಸಿ ಆರಾಧಿಸುವ ತಂಘಲ್ ಗಳು, ಬಾಬಾಗಳು.
ಏಸುಕ್ರಿಸ್ತರು ಮನುಷ್ಯ ರೂಪದಲ್ಲಿ ಬಂದು ಮನುಷ್ಯನ ಪಾಪಗಳನ್ನು ತನ್ನ ಮೇಲೇರಿಸಿ ಕೊಂಡರು ಎಂದು ಕ್ರೈಸ್ತರ ವಿಶ್ವಾಸ ಹಾಗಾದರೆ ಅವರು ಈಗ ಎಲ್ಲಿದ್ದಾರೆ...?

 ಈಗ ಪಾಪ ದಲ್ಲಿ ಮುಳುಗಿರುವ ಮನುಷ್ಯರ ಪಾಪಗಳಿಗೆ ಅವರು ಯಾಕೆ ಹೊಣೆಯಾಗಲು ಬರುತ್ತಿಲ್ಲ...?
ಇದು ಉತ್ತರವಿಲ್ಲದ ಪ್ರಶ್ನೆ.
ಸಾಯಿ ಬಾಬ ಶೂನ್ಯದಿಂದ ಬೂದಿ, ಬಾಯಿ ಯಿಂದ ವಾಚು, ಉಂಗುರ ಸೃಷ್ಟಿಸಿ ದೇವರಾದರಂತೆ ಹಾಗಾದರೆ ಭಾರತದಲ್ಲಿ ಹಸಿವೆಯಿಂದ ಸಾಯುವವರಿಗೆ ಒಂದು ಮೂಟೆ ಅಕ್ಕಿ ಯಾಕೆ ಕೊಟ್ಟಿಲ್ಲ...?
ಮನೆ ಇಲ್ಲದವರಿಗೆ ಮನೆ ಯಾಕೆ ಕೊಟ್ಟಿಲ್ಲ...?
ಇದಕ್ಕೂ ಉತ್ತರವಿಲ್ಲ.

 ದರ್ಗಾಗಳಿಗೆ ಹರಕೆ ಇಟ್ಟರೆ ಆ ಮಹಾ ಪುರುಷರ ಕರಾಮತ್(ಪವಾಡ)ದಿಂದ ಮಕ್ಕಳಿಲ್ಲದ ದಂಪತಿಗೆ ಮಕ್ಕಳಾಯಿತು ಎಂದು ಹೇಳುವ ಮುಸ್ಲಿ ನಾಮ ವಂತರು.
ಹಾಗಾದರೆ ನಾಳೆ ಒಬ್ಬ ವ್ಯಕ್ತಿ ಸತ್ತರೆ ದರ್ಗಾಗೆ ಹರಕೆ ಕೊಟ್ಟು ನೋಡುವ ಮಕ್ಕಳು ನೀಡುವವರು ಸತ್ತ ವ್ಯಕ್ತಿಗೆ ಜೀವ ನೀಡಲೇ ಬೇಕು ಯಾಕೆ ನೀಡಲ್ಲ..?
 ಇದಕ್ಕೂ ಉತ್ತರ ವಿಲ್ಲ.

ನೋಡಿ ಬಹುದೇವ ವಿಶ್ವಾಸದ ಚಿಂತನೆ ಎಷ್ಟು ಸಂಕುಚಿತ ಎಂಬುದಕ್ಕೆ ನಾನು ಕೊಟ್ಟ ಉದಾಹರಣೆಗಳು ಮಾತ್ರ ಅಲ್ಲ..
ಇನ್ನೂ ಅನೇಕ ಸ್ಥರಗಳಿವೆ ಈ ಅಪರಿಪೂರ್ಣ ವಾದಕ್ಕೆ.

ಆದರೆ ಈ ರೀತಿಯ ದೇವ ಕಲ್ಪನೆಯಲ್ಲ ಇಸ್ಲಾಮ್ ಹೇಳುವುದು.
ಇಸ್ಲಾಮ್ ಹೇಳುವುದು ಎಲ್ಲ ವಿಷಯದಲ್ಲಿಯೂ ಶಕ್ತಿ ಸಾಮರ್ಥ್ಯ ಹೊಂದಿರುವ ದೇವನ ಪರಿ ಕಲ್ಪನೆಯನ್ನಾಗಿದೆ. ಅವನಿಗೆ ನ್ಯೂನ್ಯತೆಗಳಿಲ್ಲ.
 ದೌರ್ಬಲ್ಯಗಳಿಲ್ಲ.
ಎಲ್ಲ ವಿಷಯದಲ್ಲೂ ಪರಿಪೂರ್ಣನು ಅವನು.
ಪ್ರಕೃತಿಯು ಅವನನ್ನೇ ಅವಲಂಬಿಸಿದೆ.

ಆಧುನಿಕ ಯುಗದ ಇಂಟರ್ನೆಟ್ ಬಹೂಪಯೋಗಿಯಾಗಿದೆ. ಇದನ್ನು ದೇವರೆನ್ನುವುದಿಲ್ಲ ಯಾಕೆ..?
 ಯಾಕೆಂದರೆ ಅದನ್ನು ಕಂಡು ಹಿಡಿದವನು ಮನುಷ್ಯ ಎಂದು ಎಲ್ಲರಿಗೂ ಗೊತ್ತು.
ಹಾಗಾದರೆ ಮನುಷ್ಯನಿಗೆ ಆ ಮೆದುಳು ಶಕ್ತಿ ಕೊಟ್ಟವರು ಯಾರು...?
ಇದಾಗಿದೆ ಸೃಷ್ಟಿ ಕರ್ತನ ಅನ್ವೇಷಣೆ.

ಪ್ರಕೃತಿಯು ಏಕ ದೇವ ಸಿದ್ಧಾಂತಕ್ಕೆ ಮಾತ್ರ ಒಗ್ಗುತ್ತದೆ.
ನೋಡಿ ನಾನು ಮೇಲೆ ಉದಾಹರಣೆ ರೂಪದಲ್ಲಿ ಕೊಟ್ಟ ಗಾಳಿ, ಮರ, ಸಮುದ್ರ, ಸೂರ್ಯ ಇವೆಲ್ಲ ದೇವರಾದರೆ ಹೇಗಿರಬಹುದು ಪರಿಸ್ಥಿತಿ ಊಹಿಸಿ.
 ಎಷ್ಟು ಭೀಕರ ಅಲ್ಲವೇ... ಒಂದೊಮ್ಮೆ ಗಾಳಿ ಮತ್ತು ಸಮುದ್ರ ಈ ಎರಡೂ ದೇವರುಗಳ ನಡುವೆ ವೈಮನಸ್ಯ ಮೂಡಿತು ಎಂದರೆ ಸಾಕು ಅವುಗಳ ಯುದ್ಧಕ್ಕೆ ಪ್ರಪಂಚ ನಾಶ ಖಂಡಿತ.
ಅದೇ ರೀತಿ ಸೂರ್ಯನು ಮುನಿಸಿದರೆ ಅವನ ಭೀಕರ ಅಲ್ಟ್ರಾವಯೋಲೇಟ್ ಕಿರಣಗಳನ್ನು ಬಿಟ್ಟು ಪ್ರಪಂಚ ನಾಶ ಮಾಡಿ ಬಿಡುವನು.
ಆದರೆ ಹಾಗೆ ಎಂದೂ ಆಗಲಾರದು ಯಾಕೆ...?
 ಯಾಕೆಂದರೆ ಅವುಗಳು ಒಬ್ಬ ಮೇಲ್ವಿಚಾರಕನಾದ ದೇವನ ಆಜ್ಞಾನುಸರಿಸಿ ಕೆಲಸ ನಿರ್ವಹಿಸುತ್ತಿದೆ.
ನೋಡಿ ಪ್ರಕೃತಿಯ ಚಲಣಾ ಕಲ್ಪನೆಯೇ ಏಕ ಮಾತ್ರ ದೇವನ ನಿದರ್ಶನವಾಗಿದೆ.

ಆದುದರಿಂದ ಎಲ್ಲರೂ ಏಕದೇವನಾದ ದೇವನ ದಾಸರೇ ಆಗಿದ್ದಾರೆ.
ಆದುದರಿಂದ ಎಲ್ಲರೂ ಅವನನ್ನೇ ಆರಾಧಿಸಬೇಕು ಎಂಬುದು ಪ್ರಕೃತಿಯ ಬೇಡಿಕೆಯಾಗಿದೆ.

ಇದರ ಬಗ್ಗೆ ಕುರ್ ಆನ್ ಹೇಳುವುದನ್ನು ಗಮನಿಸಿ..

ತಮ್ಮ ಪ್ರಭು ಆದಮ್ ರ ಸಂತತಿಗಳಿಂದ,
ಅವರ ಬೆನ್ನುಗಳಿಂದ ಅವರ ಸಂತತಿಗಳನ್ನು ಹೊರತೆಗೆದು,
ಅವರ ವಿಷಯದಲ್ಲಿ ಅವರನ್ನೇ ಸಾಕ್ಷಿಯಾಗಿ ನಿಲ್ಲಿಸಿದ ಸಂದರ್ಭ(ವನ್ನು ಸ್ಮರಿಸಿರಿ). (ಅವನು ಕೇಳಿದನು): ‘ನಾನು ನಿಮ್ಮ ಪ್ರಭುವಲ್ಲವೇ?’ ಅವರು ಹೇಳಿದರು: ‘ಹೌದು, ನಾವು ಸಾಕ್ಷ್ಯ ವಹಿಸಿರುವೆವು’[225] ಖಂಡಿತವಾಗಿಯೂ ನಾವು ಇದರ ಬಗ್ಗೆ ಅಲಕ್ಷ್ಯರಾಗಿದ್ದೆವು’ ಎಂದು ಪುನರುತ್ಥಾನ ದಿನದಂದು ನೀವು ಹೇಳುವಿರಿ ಎಂಬುದರಿಂದ (ಹೀಗೆ ಮಾಡಲಾಯಿತು).

[ಅಲ್-ಅ'ಅರಾಫ್ : 172]

ನೋಡಿ ಪ್ರವಾದಿ ಮಹಮ್ಮದ್(ಸ.ಅ)ರು ಮಾತ್ರ ಅಲ್ಲ ಅಥವಾ ಮುಸ್ಲಿಮರು ಮಾತ್ರ ಎಂದಲ್ಲ ಎಲ್ಲ ಸಕಲ ಮನುಷ್ಯರೂ ಕೂಡ ನಾವು ಏಕ ದೇವನಾದ ನಿನ್ನನ್ನು ಮಾತ್ರ ಆರಾಧಿಸುವೆವು ಎಂದು ಪ್ರತಿಜ್ಞೆ ಮಾಡಿದ್ದಾರೆ ಎಂದಾಗಿದೆ ಹೇಳಿದ್ದು.
ಆದುದರಿಂದ ಎಲ್ಲರೂ ಏಕ ದೇವಾರಾಧನೆಗೆ ಬಾಧ್ಯಸ್ಥರಾಗಿದ್ದಾರೆ.
 ಮುಖ್ಯವಾಗಿ ಮನುಷ್ಯ ಮನುಷ್ಯರ ನಡುವೆ ತಲೆ ದೂರಿರುವ ಎಲ್ಲಾ ಭಿನ್ನತೆಗಳಿಗೂ ಏಕದೇವಾರಾಧನೆಯೇ ಪರಿಹಾರವಾಗಿದೆ.

✍ ನೌಫಲ್ ಕರೀಂ