2 Oct 2018

ಮಹಿಳೆಯರಿಗೆ ಮನೆಯ ಒಳಗೆ ನಮಾಝ್ ಮಾಡುವುದು ಖೈರ್ ಆಗಿದೆ ಎಂಬ ಹದೀಸಿನ ವಾಸ್ತವವೇನು?

ಮಹಿಳೆಯರನ್ನು ಮಸೀದಿಯಿಂದ ತಡೆಯುವ ಉದ್ದೇಶದಿಂದ ಅವರನ್ನು ತಪ್ಪುಗಳಲ್ಲಿ ಸಿಲುಕಿಸಿ ಪ್ರಚುರಪಡಿಸುವ ಒಂದು ಹದೀಸಾಗಿದೆ "ಮನೆಯಾಗಿದೆ ಉತ್ತಮ " ಎಂಬ ಹದೀಸ್.


ಈ ಹದೀಸಿನ ಬಗ್ಗೆ ಉಲಮಾಗಳ ಅಭಿಪ್ರಾಯವೇನು ಎಂದು ಪರಿಶೀಲಿಸುವ...

ದಿವ್ಯ ಕುರ್'ಆನಿನ ಅಹ್'ಝಾಬಿನ ಸೂಕ್ತವನ್ನು ನೋಡಿ...

 وَقَرْنَ فِي بُيُوتِكُنَّ وَلَا تَبَرَّجْنَ تَبَرُّجَ الْجَاهِلِيَّةِ الْأُولَىٰ ۖ وَأَقِمْنَ الصَّلَاةَ وَآتِينَ الزَّكَاةَ وَأَطِعْنَ اللَّهَ وَرَسُولَهُ ۚ إِنَّمَا يُرِيدُ اللَّهُ لِيُذْهِبَ عَنْكُمُ الرِّجْسَ أَهْلَ الْبَيْتِ وَيُطَهِّرَكُمْ تَطْهِيرًا

ನೀವು ನಿಮ್ಮ ಮನೆಗಳಲ್ಲಿ ತಂಗಿರಿ. ಗತ ಅಜ್ಞಾನ ಕಾಲದ ಸೌಂದರ್ಯ ಪ್ರದರ್ಶನದಂತಿರುವ ಸೌಂದರ್ಯ ಪ್ರದರ್ಶನವನ್ನು ನೀವು ಮಾಡದಿರಿ. ನೀವು ನಮಾಝನ್ನು ಸಂಸ್ಥಾಪಿಸಿರಿ ಮತ್ತು ಝಕಾತ್ ನೀಡಿರಿ. ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು ಅನುಸರಿಸಿರಿ. ಓ (ಪ್ರವಾದಿ) ಮನೆಯವರೇ! ಅಲ್ಲಾಹು ಬಯಸುತ್ತಿರುವುದು ನಿಮ್ಮಿಂದ ಮಾಲಿನ್ಯವನ್ನು ನಿವಾರಿಸಲು ಮತ್ತು ನಿಮ್ಮನ್ನು ಸಂಪೂರ್ಣ ಶುದ್ಧೀಕರಿಸಲು ಮಾತ್ರವಾಗಿದೆ.

➖➖➖➖➖

ಹಿಜಾಬಿನ ಸೂಕ್ತ , ಹಿಜಾಬಿನ ಸೂಕ್ತ ಎಂದು ಮುಸ್ಲಿಯಾರ್'ಗಳು ಯಾವಾಗಲೂ ಹೇಳುತ್ತಾ ಇರುತ್ತಾರೆ ಅಲ್ವಾ...

ಆ ಸೂಕ್ತವಾಗಿದೆ ಮೇಲೆ ಕೊಟ್ಟಿರುವುದು..

ಅಹ್'ಝಾಬಿನ 33ನೇ ಸೂಕ್ತವನ್ನು ವ್ಯಾಖ್ಯಾನಿಸಿದ ಇಬ್ನ್ ಕಸೀರ್ (ರ) ಹೇಳುವುದನ್ನು ನೋಡುವ:


وَقَوْلُهُ : ( وَقَرْنَ فِي بُيُوتِكُنَّ ) أَيِ : الْزَمْنَ بُيُوتَكُنَّ فَلَا تَخْرُجْنَ لِغَيْرِ حَاجَةٍ وَمِنِ الْحَوَائِجِ الشَّرْعِيَّةِ الصَّلَاةُ فِي الْمَسْجِدِ بِشَرْطِهِ ، كَمَا قَالَ رَسُولُ اللَّهِ صَلَّى اللَّهُ عَلَيْهِ وَسَلَّمَ : " لَا تَمْنَعُوا إِمَاءَ اللَّهِ مَسَاجِدَ اللَّهِ ، وَلْيَخْرُجْنَ وَهُنَّ تَفِلَاتٌ " وَفِي رِوَايَةٍ : " وَبُيُوتُهُنَّ خَيْرٌ لَهُنَّ "


ಸ್ತ್ರೀಯರು ಮನೆಯ ಒಳಗೆ ಕೂರುವವರಾಗಬೇಕು. ಅಗತ್ಯವಲ್ಲದ ಕಾರಣಕ್ಕಾಗಿ ಹೊರಗೆ ಹೋಗಬಾರದು.  ನಮಾಝಿಗಾಗಿ ಷರತ್ತುಗಳನ್ನು ಪಾಲಿಸಿಕೊಂಡು ಮಸೀದಿಗೆ ಹೋಗುವುದು ಷರಹ್ ಅಂಗೀಕರಿಸಿದ ಕಾರ್ಯವಾಗಿದೆ.

ಅಲ್ಲಾಹನ ದಾಸಿಯರನ್ನು ಅಲ್ಲಾಹನ ಮಸೀದಿಯಿಂದ ತಡೆಯಬಾರದು . ಅವರು ಆಡಂಬರವಿಲ್ಲದೆ ಹೋಗಲಿ ಎಂದು ಮುಹಮ್ಮದ್ﷺ ರವರು ಹೇಳಿದ ರೀತಿಯಲ್ಲಿ ಹೋಗಲಿ"

 ಇನ್ನೊಂದು ವರದಿಯಲ್ಲಿ ಸ್ತ್ರೀಯರಿಗೆ ಮನೆಯಾಗಿದೆ ಉತ್ತಮ ಎಂಬ ಹದೀಸ್ ವರದಿಯಾಗಿದೆ.

(ತಫ್ಸೀರ್ ಇಬ್ನ್ ಕಸೀರ್)


 ಇಷ್ಟೆಲ್ಲಾ ಪುರಾವೆ ಇದ್ದರೂ ಪುರೋಹಿತರು ಅದನ್ನು ಅಡಗಿಸಿಟ್ಟು ಜನರನ್ನು ಅಂಧಕಾರಕ್ಕೆ ಕೊಂಡೊಯ್ಯುತ್ತಿದ್ದಾರೆ..

ಸತ್ಯ ಬಚ್ಚಿಟ್ಟರೂ , ಸುಳ್ಳು ಹೇಳಿದರೂ ತೊಂದರೆಯಿಲ್ಲ ಸಲಫಿಗಳು ತಲೆಯೆತ್ತಬಾರದೆಂಬ ‌ನಿಲುವಾಗಿದೆ ಮುಸ್ಲಿಯಾರ್'ಗಳನ್ನು ಈ ರೀತಿ ಮಾಡಲು ಪ್ರೇರೇಪಿಸುವುದು..

ಇನ್ನು ಇಬ್ನ್ ಕಸೀರಿನ ತಫ್ಸೀರಿನ ಕೊನೆಯ ಭಾಗದಲ್ಲಿ *_#ಸ್ತ್ರೀಯರಿಗೆ ಮನೆಯಾಗಿದೆ ಉತ್ತಮ_#* ಎಂಬ ಹದೀಸಿನ ಉದ್ದೇಶ ಸ್ತ್ರೀಯರಿಗೆ ಎಲ್ಲಾ ವಿಷಯಗಳು ಮನೆಯಾಗಿದೆ ಖೈರ್ ಎಂಬ ವಿಷಯದಲ್ಲಿ ಅಭಿಪ್ರಾಯ ವ್ಯತ್ಯಾಸವಿಲ್ಲ.

ಇನ್ನು ಚರ್ಚೆಯಿರುವ ವಿಷಯವೇನೆಂದರೆ ಸ್ತ್ರೀಯರಿಗೆ ಮಸೀದಿಗೆ ಹೋಗಬಹುದೇ ಎಂಬುದಾಗಿದೆ..

ಅದಕ್ಕೆ ಇಬ್ನ್ ಕಸೀರಿನ ತಫ್ಸೀರಿನಲ್ಲಿ ಷರತ್ತುಗಳನ್ನು ಮುಂದಿಟ್ಟುಕೊಂಡು ಹೋಗಬಹುದೆಂಬ ಪುರಾವೆ ಲಭಿಸುತ್ತದೆ.

ಒಂದು ಕಾರ್ಯ ಉತ್ತಮವೆಂದಾದರೆ ಉಳಿದವುಗಳು ನಿಷಿದ್ದವಾಗಿದೆ ಎಂಬ ಅರ್ಥ ಬರುವುದಿಲ್ಲ.

ಒಂದು ವಸ್ತ್ರ ಉತ್ತಮವಾಗಿದೆ ಎಂದು ಹೇಳಿದರೆ ಉಳಿದವುಗಳು ಧರಿಸುವುದು ನಿಷಿದ್ದವೆಂದು ಯಾರಾದರೂ ಹೇಳುತ್ತಾರಾ?

ಪುರುಷರಿಗೆ ಮುಂದಿನ ಸ್ವಫ್ ಉತ್ತಮವಾಗಿದೆ ಎಂದು ಹೇಳಿದರೆ ಹಿಂದಿನ ಸ್ವಫ್ ಹರಾಂ ಎಂದು ವಿಧಿಸಬಹುದೇ?

ಹಿಂದಿನ ಸ್ವಫ್ಪಿಗೆ ಪುಣ್ಯವಿಲ್ಲ ಎಂದು ಯಾರಾದರೂ ಹೇಳಿದರೆ ಅದು ಮೂರ್ಖತನವಲ್ಲವೇ?

ಇದಾಗಿದೆ ಸಮಸ್ತ ಮುಸ್ಲಿಯಾರ್'ಗಳ ವಾದ..

ಮನೆಯಲ್ಲಿ ನಮಾಝ್ ಮಾಡುವುದು ಮತ್ತು ಮಸೀದಿಯಲ್ಲಿ ನಮಾಝ್ ಮಾಡುವುದು ಸ್ತ್ರೀಯರಿಗೆ ಅನುಮತಿಸಲಾಗಿದೆ. ಅದರಲ್ಲಿ ಉತ್ತಮ ಮನೆಯಲ್ಲಿ ನಮಾಝ್ ಮಾಡುವುದು ಎಂದಾಗಿದೆ ಇದರಿಂದ ಲಭಿಸುವ ಪಾಠ...



ಆದರೆ ಮನೆಯಲ್ಲಿ ಜುಮುಆ, ಈದ್ ನಮಾಝ್ ನಡೆಯುವುದಿಲ್ಲ.. ಆದರಿಂದ ಮಹಿಳೆಯರು ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮಸೀದಿಗೆ ಹೋಗಬಹುದು..

ಅಲ್ಲಾಹನಿಗಾಗಿ ಮಸೀದಿಯಲ್ಲಿ ನಮಾಝ್ ಮಾಡಿದರೆ ಸಿಗುವ ನೆಮ್ಮದಿ ನಾವು ಅನುಭವಿಸುತ್ತೇವೆ. ಅದರ ಜೊತೆ ಅರ್ಥವಾಗುವ ರೀತಿಯಲ್ಲಿ ಖುತುಬಾ ಕೇಳುತ್ತಿದ್ದೇವೆ. ಪ್ರತಿಯೊಂದು ಜುಮುಆ ಖುತುಬಾದಲ್ಲಿ ಇಸ್ಲಾಮಿನ ಎಲ್ಲಾ ವಿಷಯಗಳ ಬಗ್ಗೆ ಭೋಧನೆ ಲಭಿಸುತ್ತದೆ. ಇದು ಲಭಿಸಿದರೆ ಮನೆಯಲ್ಲಿ ಇಸ್ಲಾಮಿನಲ್ಲಿ ಪ್ರಕಾಶ ಉದಯಿಸಬಹುದು . ಒಂದು ಸ್ತ್ರೀ ದೀನ್ ಕಲಿತರೆ ಶಾಲೆ ತೆರೆದ ಹಾಗೆ ಎಂಬ ಗಾದೆಯ ಮರ್ಮವನ್ನು ಅರಿತ ಮುಸ್ಲಿಯಾರ್'ಗಳು ಅದನ್ನು ತಡೆಯಲು ಶ್ರಮಿಸುತ್ತಾರೆ.

ಸ್ತ್ರೀಯರು ದೀನ್ ಕಲಿತರೆ ಇವರಿಗೆ ದೀನಿನ ಹೆಸರಿನಲ್ಲಿ ಶೋಷಣೆ ಮಾಡಲು ಗಿರಾಕಿ ನಷ್ಟವಾಗಬಹುದೆಂದು ಹೆದರಿದ ಕಾರಣ ಸಲಫಿಗಳ ವಿರುದ್ಧ ನಿರಂತರವಾಗಿ ಎತ್ತಿಕಟ್ಟುತ್ತಿದ್ದಾರೆ.

ಅಲ್ಲಾಹನ ಮಸೀದಿಯನ್ನು ಸ್ತ್ರೀಯರಿಗೆ ನಿಷಿದ್ದಗೊಳಿಸುವ ಉದ್ದೇಶವೇನೆಂದರೆ ಅಲ್ಲಿ ಅನ್ಯ ಪುರುಷರಿದ್ದಾರೆ ಎಂಬ ನೆಪವನ್ನೊಡ್ಡುತ್ತಾರೆ ಪುರೋಹಿತರು..

ನಿಜವಾಗಿಯೂ ಅನ್ಯ ಪುರುಷರೊಂದಿಗೆ ಕಲಬೆರಕೆಯಾಗದೆ ಮಹಿಳೆಯರಿಗೆ ಪ್ರತ್ಯೇಕವಾದ ಸ್ಥಳ ವ್ಯವಸ್ಥೆ ಮಾಡಿಕೊಂಡಾಗಿದೆ ಮಸೀದಿಗೆ ಪ್ರವೇಶವಿರುವುದು.

ಹಾಗಾದರೆ ಇವರು ಮಹಿಳೆಯರನ್ನು ಸೆಳೆಯುತ್ತಿರುವ ದರ್ಗಾಗಳಲ್ಲಿ ??

ಅರ್ಧ ರಾತ್ರಿಯ 'ವಯಳ್'ನಲ್ಲಿ ??

ಸ್ವಲಾತ್' ಮಜ್ಲಿಸ್ ಗಳಲ್ಲಿ ??

ಝಿಕ್ರ್ ಮಜ್ಲಿಸ್ ಗಳಲ್ಲಿ ??

ಮದುವೆ ಸಮಾರಂಭದಲ್ಲಿ ??

ಬಸ್ , ವಾಹನಗಳಲ್ಲಿ??

ಇವುಗಳೆಲ್ಲವೂ ಹಲಾಲ್

ಅಲ್ಲಾಹನ ಮಸೀದಿಗೆ ಹರಾಂ..

ಎಲ್ಲಿಂದ ಅವತೀರ್ಣವಾಯಿತು ಈ ವಹ್ಯ್ ?

ಎಂತಹ ವಿರೋಧಾಭಾಸ!!!!?

 ➖➖➖➖➖➖➖➖
 ಇನ್ನು ಮೇಲೆ ತಿಳಿಸಿದ ಹದೀಸಿನ ಕುರಿತು ಉಲಮಾಗಳ ವೀಕ್ಷಣೆಯೇನು ?

ಇದರ ಬಗ್ಗೆ ಅವಲೋಕಿಸುವ...
-------------------------

حَدَّثَنَا عُثْمَانُ بْنُ أَبِي شَيْبَةَ، حَدَّثَنَا يَزِيدُ بْنُ هَارُونَ، أَخْبَرَنَا الْعَوَّامُ بْنُ حَوْشَبٍ، حَدَّثَنِي حَبِيبُ بْنُ أَبِي ثَابِتٍ، عَنِ ابْنِ عُمَرَ، قَالَ قَالَ رَسُولُ اللَّهِ صلى الله عليه وسلم ‏"‏ لاَ تَمْنَعُوا نِسَاءَكُمُ الْمَسَاجِدَ وَبُيُوتُهُنَّ خَيْرٌ لَهُنَّ ‏"‏ ‏.‏


ಹಬೀಬ್ ಬಿನ್ ಅಬೀ ಸಾಬಿತ್ , ಇಬ್ನ್ ಉಮರ್ (ರ) ರವರಿಂದ ನಿವೇದನೆ  :

ಮುಹಮ್ಮದ್ﷺ ರವರು ಹೇಳಿದರು: ನಿಮ್ಮ ಸ್ತ್ರೀಯರನ್ನು ಅಲ್ಲಾಹನ ಮಸೀದಿಯಿಂದ ತಡೆಯದಿರಿ. ಅವರಿಗೆ ಅವರ ಮನೆಯಾಗಿದೆ ಉತ್ತಮ ”

(ಅಬೂ ದಾವೂದ್)

هذه اللفظة ضعيفة ولم تصح ولم يتلفظ بها النبي
وهي من رواية : حبيب بن أبي ثابت .


ಈ ಹದೀಸಿನ  ಪರಂಪರೆಯು(ಸನದ್) ದುರ್ಬಲವಾಗಿದೆ. ಇದರ ಸರ್ವ ಪರಂಪರೆಯು ಹಬೀಬ್ ಬಿನ್ ಸಾಬಿತ್ ರವರ ಹೆಸರಿನಿಂದಾಗಿದೆ ಉಲ್ಲೇಖವಾಗಿರುವುದು.

ಇದನ್ನು ಉಸೂಲ್ ಅಲ್ ಹದೀಸಿನ ಪ್ರಕಾರ 'ಅನ್ ಅನತ್' ಎಂದು ಹೇಳುತ್ತಾರೆ.

ಹಬೀಬ್ ಬಿನ್ ಸಾಬಿತ್ ಎಂಬ ವ್ಯಕ್ತಿ ಇಬ್ನ್ ಉಮರ್ (ರ)ರವರನ್ನು ನೇರವಾಗಿ ಕಾಣಲಿಲ್ಲ ಹಾಗೂ ಅವರಿಂದ ನೇರವಾಗಿ ಕೇಳಲಿಲ್ಲ..

ತಾನು ಕೇಳದಿರುವುದನ್ನು ಕೇಳಿದ್ದೇನೆ ಎಂದು ಹೇಳುವ ವ್ಯಕ್ತಿಯಾಗಿದ್ದಾರೆ ಹಬೀಬ್ ಬಿನ್ ಸಾಬಿತ್ ಎಂದು ಇಬ್ನ್ ಖುಝೈಮಾ ಮತ್ತು ಇಬ್ನ್ ಹಿಬ್ಬಾನ್ ರಂತಹ ಪ್ರಸಿದ್ಧ ಮುಹದ್ದಿಸ್'ಗಳು ಹೇಳಿದ್ದಾರೆ.


(ತಹ್'ದೀಬ್ 1:185)

ಇಂತಹ ಸ್ವಭಾವವುಳ್ಳವರು ವಿಶ್ವಾಸಕ್ಕೆ ಅರ್ಹರಾದರೂ ಕೂಡ 'ಅನ್' ಎಂಬ ಪ್ರಯೋಗ ಹದೀಸಿನಲ್ಲಿ ಉಲ್ಲೇಖಿಸಿದರೆ ಅದನ್ನು ಸ್ವೀಕರಿಸಬಾರದೆಂದಾಗಿದೆ ಹದೀಸಿನ ನಿಯಮ..
ಆದ್ದರಿಂದ ಈ ಹದೀಸ್ ದುರ್ಬಲವಾದ ಹದೀಸಾಗಿದೆ ಎಂದು ಇಬ್ನ್ ಖುಝೈಮಾ(ರ)ರವರು ತಮ್ಮ ಪ್ರಸಿದ್ಧ ಹದೀಸ್ ಗ್ರಂಥವಾದ ಸ್ವಹೀಹಿನಲ್ಲಿ ಒಂದು ಅಧ್ಯಾಯದಲ್ಲೇ ಘೋಷಿಸಿದ್ದಾರೆ.
 .
ಮಾತ್ರವಲ್ಲದೆ ಸ್ವಹೀಹಾದ ನೂರಕ್ಕಿಂತ ಅಧಿಕ ಹದೀಸ್ ಗಳ ಆಶಯಕ್ಕೆ ವಿರುದ್ದವಾದ ಪುರಾವೆ ಸ್ವೀಕರಿಸಲು ಸಾಧ್ಯವಾಗದ ಶಾದ್(شاذ) ನ ಸಾಲಿನಲ್ಲಿ ಇದನ್ನು ಪರಿಗಣಿಸಲಾಗಿದೆ.

ನೀವು ಸ್ತ್ರೀಯರನ್ನು ಮಸೀದಿಯಿಂದ ತಡೆಯದಿರಿ ಎಂಬ ಹದೀಸನ್ನು ಮಾತ್ರ ವಾಗಿದೆ ಬುಖಾರಿ ಮತ್ತು ಮುಸ್ಲಿಂ ಹದೀಸ್ ವರದಿ ಮಾಡಿರುವುದು.

ನಿಮಗೆ ಮನೆಯಾಗಿದೆ ಉತ್ತಮ ಎಂಬ ಭಾಗವನ್ನು ಬುಖಾರಿ, ಮುಸ್ಲಿಂ ಉಲ್ಲೇಖಿಸಲಿಲ್ಲ.

ಮನೆಯಾಗಿದೆ ಉತ್ತಮ ಎಂದು ಮುಹಮ್ಮದ್ﷺ ರವರಿಂದ ಸ್ವಹಾಬಿಗಳು ಕೇಳಿರುತ್ತಿದ್ದರೆ ಮುಹಾಜಿರ್ ಗಳು ಮತ್ತು ಅನ್ಸಾರ್ ಗಳಾದ ಸ್ವಹಾಬಿ ವನಿತೆಯರು ಉತ್ತಮವಾದ ಕಾರ್ಯವನ್ನು ಬಿಟ್ಟು ಮಸೀದಿಗೆ ಫಜ್ರ್ ನ ವೇಳೆ ನಮಾಝಿಗೆ ಬರುತ್ತಿರಲಿಲ್ಲ.
ಅಳುತ್ತಿದ್ದ ಮಕ್ಕಳೊಂದಿಗೆ ಅವರು ಮಸೀದಿಗೆ ಬರುತ್ತಿರಲಿಲ್ಲ.

ರಾತ್ರಿಯ ಸುಧೀರ್ಘ ನಮಾಝಿನಲ್ಲಿ ದಣಿದಾಗ ನಿಲ್ಲಲು ಹಗ್ಗದ ಆಸರೆಯಿಂದ ನಮಾಝ್ ಮಾಡುವ ಅವಸ್ಥೆ ಝೈನಬಾ (ರ)ರವರಿಗೆ ಬರುತ್ತಿರಲಿಲ್ಲ.

ಮನೆಯಾಗಿದೆ ಉತ್ತಮ ಎಂದು ಅರಿತಿರುತ್ತಿದ್ದರೆ ಮುಹಮ್ಮದ್ﷺ ರವರ ವಫಾತಿನ ಬಳಿಕ ಆಯಿಷಾ(ರ)ರವರು ಮಸೀದಿಯಲ್ಲಿ ಇಅತಿಕಾಫ್ ನಿರ್ವಹಿಸುತ್ತಿರಲಿಲ್ಲ.


ಉಮರ್ (ರ)ರವರ ಜೊತೆ ಪತ್ನಿ ಆತಿಕಾ (ರ)ರವರು ಮಸೀದಿಗೆ ಜಮಾಅತ್ ಗೆ ಬರುತ್ತಿರಲಿಲ್ಲ.

➖➖➖➖➖➖➖➖
ಸ್ತ್ರೀಯರನ್ನು ಮಸೀದಿಯಿಂದ ದೂರಗೊಳಿಸುವ ಇನ್ನೊಂದು ಹದೀಸಾದ ಸ್ತ್ರೀಯರು ಮನೆಯ ಒಳಗೊಳಗೆ ಕೂರಬೇಕು   ಎಂಬ ಉಮ್ಮು ಹುಮೈದ್ ಸ'ಈದಿ (ರ) ರವರ ಹದೀಸಿನ ಬಗ್ಗೆ ಮುಹದ್ದಿಸ್ ಗಳ ಅಭಿಪ್ರಾಯವೇನು?

---------------

ಉಮ್ಮು ಹುಮೈದ್ ಸ'ಈದಿ (ರ)ರವರು ಮುಹಮ್ಮದ್ﷺ ರವರೊಂದಿಗೆ ಹೇಳಿದರು: ನಮಗೆ ನಿಮ್ಮ ಜೊತೆ ನಮಾಝ್ ಮಾಡಲು ಅಭಿಲಾಷೆಯಿದೆ. ಆದರೆ ನಮ್ಮ ಗಂಡಂದಿರರು ನಮ್ಮನ್ನು ತಡೆಯುತ್ತಿದ್ದಾರೆ.
  ಆಗ ಮುಹಮ್ಮದ್ﷺ ರವರು ಹೇಳಿದರು: ನಿಮ್ಮ ಮನೆಯ ಕೊಠಡಿಯಲ್ಲಿ ನಮಾಝ್ ಮಾಡುವುದಾಗಿದೆ ಮಸೀದಿಯಲ್ಲಿ ನಮಾಝ್ ಮಾಡುವುದಕ್ಕಿಂತ ನಿಮಗೆ ಉತ್ತಮವಾದದ್ದು.
 ”
(ಬೈಹಕಿ)


ಇಲ್ಲಿ ನಾವು ಅರ್ಥ ಮಾಡಬೇಕಾದ ವಿಷಯವೇನೆಂದರೆ, ಉಮ್ಮು ಹುಮೈದಿ (ರ)ರವರು ಕೇಳುವ ಪ್ರಶ್ನೆಯಲ್ಲೇ ಗಂಡ ಮಸೀದಿಗೆ ಜಮಾಅತ್ ನಮಾಝ್ ಮಾಡಲು ತಡೆಯುತ್ತಾರೆ ಎಂದು ಸೂಚಿಸಿದ್ದಾರೆ.ಅದಕ್ಕೆ ಪ್ರತಿಯಾಗಿ ಮುಹಮ್ಮದ್ﷺ ರವರು ಪ್ರತಿಕ್ರಿಯೆ ನೀಡಿದ್ದು.

ಗಂಡಂದಿರರ ಅನುಮತಿಯಿಲ್ಲದೆ ಸುನ್ನತಾದ ಕಾರ್ಯವನ್ನು ಮಾಡಬಾರದೆಂದು ಮುಹಮ್ಮದ್ﷺ ರವರು ಹೇಳಿದ್ದಾರೆ. ಸುನ್ನತ್ ಉಪವಾಸವಾದರೂ ಸರಿ..

ಗಂಡ ಅದಕ್ಕೆ ಅನುಮತಿ ನೀಡದಿದ್ದರೆ ನಿರ್ವಹಿಸಬಾರದು ಎಂದಾಗಿದೆ ಮುಹಮ್ಮದ್ﷺ ರವರು ಕಲಿಸಿರುವುದು.

ಅದೇ ರೀತಿ ಹೆಂಡತಿಯರು ಮಸೀದಿಗೆ ಹೋಗಲು ಅನುಮತಿ ಕೇಳಿದರೆ ಅವರನದನು ತಡೆಯದಿರಿ ಎಂದೂ ಮುಹಮ್ಮದ್ﷺ ರವರು ಆಜ್ಞಾಪಿಸಿದ್ದಾರೆ.

ಕೆಲವು ಗಂಡಂದಿರರಿಗೆ ಹೆಂಡತಿಯರು ಮನೆಯಿಂದ ಹೊರಗೆ ಹೋಗುವುದು ಇಷ್ಟವಿರಲಿಕಿಲ್ಲ.

ಆ ಕಾರಣದಿಂದ ಅವರು ಪರಸ್ಪರ ಜಗಳವಾಡದಿರಲಿ ಎಂಬ ಕಾರಣದಿಂದಾಗಿದೆ ಮುಹಮ್ಮದ್ﷺ ರವರು ಮನೆಯ ಒಳಗೆ ನಮಾಝ್ ಮಾಡುವುದು ಉತ್ತಮ ವೆಂದು ಹೇಳುವ ಉದ್ದೇಶ.

ಆದರೂ ಸ್ವಹಾಬಿಗಳು ಅವರ ಪತ್ನಿಯರನ್ನು ಮುಹಮ್ಮದ್ﷺ ರವರ ಆಜ್ಞೆ ಯಾದ " ನಿಮ್ಮ ಹೆಂಗಸರನ್ನು ಅಲ್ಲಾಹನ ಮಸೀಯಿಂದ ತಡೆಯದಿರಿ "ಎಂಬ ಮಾತನ್ನು ಮೀರದೆ ತಮಗೆ ಇಷ್ಟವಿಲ್ಲದಿದ್ದರೂ ಅವರು ಹೆಂಡತಿಯರನ್ನು ಕಳುಹಿಸುತ್ತಿದ್ದರು.

ಅದಾಗಿದೆ ಉಮರ್ (ರ) ರವರು ಸ್ವೀಕರಿಸಿದ ಮಾರ್ಗ.
ಅದಾಗಿದೆ ಮುತ್ತಬಿಉ ಸುನ್ನಃ ಅಬ್ದಲ್ಲಾಹ್ ಬಿನ್ ಉಮರ್ (ರ)ರವರು ಸ್ವೀಕರಿಸಿದ ಮಾರ್ಗ.

 ಅದೇ ಆಗಿದೆ ಶಾಫಿಈ ಮಝ್'ಹಬ್ ರವರ ಮಾರ್ಗ


ಆದರೂ ಈ ಹದೀಸ್ ಇದು ದುರ್ಬಲವಾಗಿದೆ . ಈ ಹದೀಸಿನ ಪರಂಪರೆಯಲ್ಲಿರುವ ಅಬ್ದುಲ್ ಹುಮೈದ್ ಬಿನ್ ಮುಂದಿರ್ ಎಂಬವರು ಅಪರಚಿತರಾಗಿದ್ದಾರೆ.

ನಿವೇದನೆ ಮಾಡುವವರ (ರಾವಿಗಳ) ಬಗ್ಗೆ ವಿವರಿಸುವ ಯಾವ ಗ್ರಂಥದಲ್ಲೂ ಈ ವ್ಯಕ್ತಿಯ ಕುರಿತು ಪರಾಮರ್ಶೆಯಿಲ್ಲ.


 ಇಬ್ನ್ ಹಝಂ (ರ)ರವರು ಅವರ "ಮುಹಲ್ಲ" ದಲ್ಲಿ ಹೇಳಿದ್ದಾರೆ:
 ”( 2175 )

ಈ ಹದೀಸಿನ ಬಗ್ಗೆ ಇನ್ನೊಂದು ಕಡೆಯಲ್ಲೂ ಇಬ್ನ್ ಹಝಂರವರು ಹೇಳಿದ್ದಾರೆ.
(ಮುಹಲ್ಲ: 3115).


ಒಟ್ಟಾರೆಯಾಗಿ ಹೇಳುವುದಾದರೆ ಮುಸ್ಲಿಯಾರ್'ಗಳು ಪುರಾವೆಯಾಗಿ ತೋರಿಸುವ ಅವರಿಗೆ ಪ್ರಸಿದ್ದವಾದ ಹದೀಸಾಗಿದೆ ಮೇಲೆ ಸೂಚಿಸಿದ್ದು..

ಅದರ ಅವಸ್ಥೆ ಬಗ್ಗೆ ಇನ್ನೊಮ್ಮೆ ವಿವರಿಸಬೇಕೆಂದಿಲ್ಲ ಎಂದು ಭಾವಿಸುತ್ತೇನೆ..

ಹದೀಸ್ ದುರ್ಬಲವಾಗಿದೆ ಎಂದು ಹೇಳುವಾಗ ಕೆರಳುವ ಮುಸ್ಲಿಯಾರ್'ಗಳಿದ್ದಾರೆ ,ಅವರೊಂದಿಗೆ ವಿನಯಪೂರ್ವಕವಾಗಿ ಹೇಳುವುದೇನೆಂದರೆ  ಮೇಲೆ ಹೆಸರು ಸೂಚಿಸಿದ ಮುಹದ್ದಿಸ್ ಗಳು ವಹ್ಹಾಬಿಗಳೇ?


ಅವರು ಅದನ್ನು ದುರ್ಬಲಗೊಳಿಸಿಲ್ಲ ಎಂದು ಹೇಳುವ ಪುರಾವೆ ಏನಾದರೂ ನಿಮ್ಮ ಬಳಿಯಿದ್ದರೆ ಹಾಜರುಪಡಿಸಿರಿ...

ಸವಾಲಾಗಿ ಸ್ವೀಕರಿಸುತ್ತೇನೆ..

✍ ಇಬ್ನ್ ಅಬ್ದುರ್ರಹ್ಮಾನ್