26 Aug 2023

ಮರಣ ಹೊಂದಿದವರು ಆಲಿಸುತ್ತಾರೆಯೇ?

ಪರಿಶುದ್ಧ ಕುರ್’ಆನ್ ಹೇಳುತ್ತದೆ ಮರಣ ಹೊಂದಿದವರು ಆಲಿಸುವುದಿಲ್ಲ ಎಂದು.

ಕುರ್’ಆನಿನ ವಚನವನ್ನು ಗಮನಿಸಿ…

‎إِنَّكَ لَا تُسۡمِعُ ٱلۡمَوۡتَىٰ وَلَا تُسۡمِعُ ٱلصُّمَّ ٱلدُّعَآءَ إِذَا وَلَّوۡاْ مُدۡبِرِينَ

ಮರಣಹೊಂದಿದವರನ್ನು ಆಲಿಸುವಂತೆ ಮಾಡಲು ಖಂಡಿತವಾಗಿಯೂ ತಮಗೆ ಸಾಧ್ಯವಾಗದು. ಕಿವುಡರು ಬೆನ್ನು ತೋರಿಸಿ ವಿಮುಖರಾದರೆ ಅವರಿಗೆ ಕರೆಯನ್ನು ಆಲಿಸುವಂತೆ ಮಾಡಲು ತಮಗೆ ಸಾಧ್ಯವಾಗದು.

ಕುರ್’ಆನ್ :27:80

(ಈ ಸೂಕ್ತದಲ್ಲಿ ಮೃತರು ಎಂದು ಪ್ರಸ್ತಾಪಿಸಲಾಗಿರುವುದು ಹೃದಯದಿಂದ ಸತ್ಯಾನ್ವೇಷಣಾ ತ್ವರೆಯು ಕಳೆದುಹೋದವರ ಅಥವಾ ಹೃದಯ ಸತ್ತವರ ಬಗ್ಗೆಯಾಗಿದೆ. ವಿಷಯವನ್ನು ಆಲಿಸಿ ಅರ್ಥಮಾಡಿಕೊಳ್ಳಲು ಸಿದ್ಧರಾಗದವರನ್ನು ಮೃತರೊಂದಿಗೆ ಹೋಲಿಸಲಾಗಿರುವುದರಿಂದ ಮೃತರು ಸರ್ವಥಾ ಆಲಿಸಲಾರರು ಎಂದು ಸ್ಪಷ್ಟ.) ಇದನ್ನು ಇಬ್ನು ಹಜರ್ ಅಸ್ಕಲಾನಿಯವರು ತನ್ನ ಗ್ರಂಥವಾದ ಫತ್’ಹುಲ್ ಬಾರಿಯಲ್ಲಿ ಬಹಳ ಸ್ಪಷ್ಟವಾಗಿ ವಿವರಿಸಿದ್ದಾರೆ.

ಆದರೆ ಇಸ್ತಿಗಾಸವಾದಿಗಳಾದ ಸಮಸ್ತ ಶಿಯಾ ಮುಸ್ಲಿಯಾರುಗಳ ವಾದ ಮರಣ ಹೊಂದಿದವರು ಆಲಿಸುತ್ತಾರೆ ಎಂದಾಗಿದೆ. ಇದಕ್ಕಾಗಿ ಅವರು ತೋರಿಸುವಂತಹ ಪುರಾವೆ ಬದ್ರ್ ಯುದ್ಧದಲ್ಲಿ ಸತ್ತು ಹೋಗಿ ಅಲ್ಲಿರುವ ಹಾಳು ಬಾವಿಗೆ ಎಸೆಯಲ್ಪಟ್ಟ ಮಕ್ಕಾ ಮುಶ್ರಿಕರ ಅನಾಥ ಶವದೊಂದಿಗೆ ಯುದ್ಧ ನಡೆದ ಮೂರನೇ ದಿವಸ ಪ್ರವಾದಿ (ಸಅ) ಮಾತನಾಡಿದ್ದಾರೆ, ಅದನ್ನು ಸತ್ತು ಹೋದವರು ಆಲಿಸಿದ್ದಾರೆ ಎಂದಾಗಿದೆ. ವಾಸ್ತವವಾಗಿ ಮುಸ್ಲಿಯಾರುಗಳು ಈ ಘಟನೆಯನ್ನು ತೋರಿಸಿ ವಾದಿಸುವುದು ಮರಣ ಹೊಂದಿದ ಔಲಿಯಾ, ಅಂಬಿಯಾಗಳನ್ನು ಕರೆದು ಇಸ್ತಿಗಾಸ (ಸಹಾಯ ಯಾಚನೆ) ಮಾಡಿ ಕಬರಾರಾಧನೆ ಮಾಡುವುದಕ್ಕಾಗಿದೆ. 

ಆ ಹದೀಸ್ ನ ಬಗ್ಗೆ ತಿಳಿಯೋಣ…

‎أَخْبَرَنَا سُوَيْدُ بْنُ نَصْرٍ، قَالَ أَنْبَأَنَا عَبْدُ اللَّهِ، عَنْ حُمَيْدٍ، عَنْ أَنَسٍ، قَالَ سَمِعَ الْمُسْلِمُونَ، مِنَ اللَّيْلِ بِبِئْرِ بَدْرٍ وَرَسُولُ اللَّهِ صلى الله عليه وسلم قَائِمٌ يُنَادِي ‏"‏ يَا أَبَا جَهْلِ بْنَ هِشَامٍ وَيَا شَيْبَةُ بْنَ رَبِيعَةَ وَيَا عُتْبَةُ بْنَ رَبِيعَةَ وَيَا أُمَيَّةُ بْنَ خَلَفٍ هَلْ وَجَدْتُمْ مَا وَعَدَ رَبُّكُمْ حَقًّا فَإِنِّي وَجَدْتُ مَا وَعَدَنِي رَبِّي حَقًّا ‏"‏ ‏.‏ قَالُوا يَا رَسُولَ اللَّهِ أَوَتُنَادِي قَوْمًا قَدْ جَيَّفُوا فَقَالَ ‏"‏ مَا أَنْتُمْ بِأَسْمَعَ لِمَا أَقُولُ مِنْهُمْ وَلَكِنَّهُمْ لاَ يَسْتَطِيعُونَ أَنْ يُجِيبُوا ‏"‏ ‏.‏

ಓ ಅಬೂಜಹಲ್ ಇಬ್ನು ಹಿಶಾಮ್, ಓ ಶೈಬತ್ ಇಬ್ನು ರಬೀಅ, ಓ ಉತ್ಬತ್ ಇಬ್ನು ರಬೀಅ, ಓ ಉಮಯ್ಯತ್ ಇಬ್ನು ಖಲಫ್…

“ನಿಮ್ಮ ಪ್ರಭುವು ನಿಮಗೆ ವಾಗ್ದಾನ ಮಾಡಿದ್ದನ್ನು ನೀವು ನಿಜವೆಂದು ಕಂಡುಕೊಂಡಿದ್ದೀರಾ? ನನ್ನ ಪ್ರಭುವು ನನಗೆ ವಾಗ್ದಾನ ಮಾಡಿದ್ದನ್ನು ನಾನು ನಿಜವೆಂದು ಕಂಡುಕೊಂಡಿರುವೆನು.” (ನಿಮಗೆ ಸಿಗಬೇಕಾದ ಶಿಕ್ಷೆ ಸಿಗುತ್ತಿದೆಯಲ್ಲವೇ? ಎಂಬ ವಾಗ್ದಾನದ ಅರ್ಥದಲ್ಲಿ)

ಉಮರ್ (ರ) ರು (ಆಶ್ಚರ್ಯದಿಂದ) ಕೇಳಿದರು “ಓ ಪ್ರವಾಜಗರೇ ಆತ್ಮಗಳಿಲ್ಲದ (ಸತ್ತು ಹೋದ) ದೇಹಗಳೊಂದಿಗೆ ನೀವು ಮಾತನಾಡುತ್ತಿರುವಿರಾ?' ಪ್ರವಾದಿ (ಸಅ) ಹೇಳಿದರು: 'ನಾನು ಹೇಳುವುದನ್ನು ಅವರಿಗಿಂತ ಉತ್ತಮವಾಗಿ ನೀವು ಆಲಿಸಲಾರಿರಿ ಆದರೆ ಉತ್ತರಿಸಲು ಅವರಿಗೆ ಸಾಧ್ಯವಾಗುವುದಿಲ್ಲ"

Sahih al-Bukhari 4026

Sahih Muslim 2873

Sunan an-Nasa'i 2075


ಇದಾಗಿದೆ ಮೇಲೆ ತಿಳಿಸಿದ ಘಟನೆಯ ಹದೀಸ್…

ಈ ಹದೀಸ್ ನ ಬಗ್ಗೆ ಕತಾದಾ (ರ) ಹೇಳುತ್ತಾರೆ:

‎وَزَادَ الْبُخَارِيُّ: قَالَ قَتَادَةُ: أَحْيَاهُمُ اللَّهُ حَتَّى أَسْمَعَهُمْ قولَه توْبيخاً وتصغيرا ونقمة وحسرة وندما

ಅಲ್ಲಾಹನು ಪ್ರವಾದಿ (ಸಅ) ರ ಮಾತುಗಳನ್ನು ಆಲಿಸುವವರೆಗೆ ಅವರನ್ನು (ಸತ್ತು ಹೋದವರನ್ನು) ಶಿಕ್ಷೆಯ ಭಾಗವಾಗಿ ಜೀವಕ್ಕೆ ತಂದು ನಿಂದನೆ, ಖಂಡನೆ, ಅವಮಾನ, ಸೇಡು ಮತ್ತು ದುಃಖ ಮತ್ತು ಪಶ್ಚಾತ್ತಾಪವನ್ನು ಉಂಟುಮಾಡುವ ಮೂಲಕ ಪ್ರವಾದಿ (ಸಅ) ಹೇಳಿದ ಮಾತನ್ನು ಕೇಳುವಂತೆ ಮಾಡಿದನು. 

‎مُتَّفق عَلَيْهِ   (الألباني)

Mishkat al-Masabih 3967


ಈ ಹದೀಸ್ ನ ಬಗ್ಗೆ ಆಯಿಷಾ (ರ) ಹೇಳುತ್ತಾರೆ:

‎فَذُكِرَ ذَلِكَ لِعَائِشَةَ فَقَالَتْ وَهَلَ ابْنُ عُمَرَ إِنَّمَا قَالَ رَسُولُ اللَّهِ صلى الله عليه وسلم ‏"‏ إِنَّهُمُ الآنَ يَعْلَمُونَ أَنَّ الَّذِي كُنْتُ أَقُولُ لَهُمْ هُوَ الْحَقُّ ‏"‏ ‏.‏ ثُمَّ قَرَأَتْ قَوْلَهُ ‏{‏ إِنَّكَ لاَ تُسْمِعُ الْمَوْتَى ‏}‏ حَتَّى قَرَأَتِ الآيَةَ ‏.‏

ಆಯಿಷಾ (ರ) ರವರು ಉಮರ್ (ರ) ರ ಮಗನೊಂದಿಗೆ ಹೇಳುತ್ತಾರೆ ಪ್ರವಾದಿ (ಸ) ಹೇಳಿರುವುದು "ನಾನು ಅವರಿಗೆ ಹೇಳಿದ್ದು ಸತ್ಯ ಎಂದು ಈಗ ಅವರಿಗೆ ತಿಳಿದಿದೆ ಎಂದಾಗಿದೆ." ನಂತರ ಆಯಿಷಾ (ರ) ರವರು{ إِنَّكَ لاَ تُسْمِعُ الْمَوْتَى}  {ಮರಣಹೊಂದಿದವರನ್ನು ಆಲಿಸುವಂತೆ ಮಾಡಲು ಖಂಡಿತವಾಗಿಯೂ ತಮಗೆ ಸಾಧ್ಯವಾಗದು} ಎಂಬ ಸೂಕ್ತಿಯನ್ನು ಪಠಿಸುತ್ತಾರೆ.

Sahih al-Bukhari 3980, 3981

Sunan an-Nasa'i 2076

⛔️ಇಲ್ಲಿ ನಾವು ತಿಳಿಯಬೇಕಾದ ವಿಷಯ.

ಪ್ರವಾದಿ (ಸಅ) ರು ಆ ಶವಗಳೊಂದಿಗೆ ಮಾತನಾಡುವಾಗ ಉಮರ್ (ರ) ರವರು ಸತ್ತವರು ಕೇಳುವುದೇ ಎಂದು ಆಶ್ಚರ್ಯ ಚಕಿತರಾದರು. ಯಾಕೆಂದರೆ ಉಮರ್ (ರ) ರ ವಿಶ್ವಾಸ ಮರಣ ಹೊಂದಿದವರು ಆಲಿಸಲಾರರು ಎಂದಾಗಿತ್ತು. ಇದೇ ಉದ್ದೇಶದಿಂದಾಗಿದೆ ಆಯಿಷಾ (ರ) {‏ إِنَّكَ لاَ تُسْمِعُ الْمَوْتَى ‏} { ಮರಣಹೊಂದಿದವರನ್ನು ಆಲಿಸುವಂತೆ ಮಾಡಲು ಖಂಡಿತವಾಗಿಯೂ ತಮಗೆ ಸಾಧ್ಯವಾಗದು } ಎಂಬ ಸೂಕ್ತವನ್ನು  ಉಮರ್ (ರ) ರ ಮಗನಿಗೆ ಓದಿ ಕೇಳಿಸಿರುವುದು ಎಂಬುದು ಸ್ಪಷ್ಟವಾಗಿದೆ. ಹದೀಸಿನಲ್ಲಿರುವ ಈಗ (الآنَ) ಎಂಬ ಪದ ಪ್ರಯೋಗ ಆ ಸಮಯಕ್ಕೆ ಮಾತ್ರ ಸೀಮಿತವಾಗಿರುವುದು ಎಂದು ಸ್ಪಷ್ಟವಾಗಿದೆ. ಮಾತ್ರವಲ್ಲ ಈ ಘಟನೆ ಪ್ರವಾದಿ (ಸಅ) ರ ಮುಅಜಿಝತ್ ನ ಭಾಗವೂ ಆಗಿದೆ.

ಮುಸ್ಲಿಯಾರುಗಳೇ ನೆನಪಿರಲಿ… 

ಅಲ್ಲಾಹನ ಹೊರತು ನೀವು ಯಾರೊಂದಿಗೆ ಪ್ರಾರ್ಥಿಸುತ್ತಿರುವಿರೋ ಅವರ ಸ್ವಾಧೀನದಲ್ಲಿ ಖರ್ಜೂರದ ಪೊರೆಯೂ ಇಲ್ಲ. ನೀವು ಅವರೊಂದಿಗೆ ಪ್ರಾರ್ಥಿಸಿದರೆ ಅವರು ನಿಮ್ಮ ಪ್ರಾರ್ಥನೆಯನ್ನು ಆಲಿಸಲಾರರು. ಅವರು ಆಲಿಸಿದರೂ ನಿಮಗೆ ಉತ್ತರವನ್ನು ನೀಡಲಾರರು. ಪುನರುತ್ಥಾನದಿನದಂದು ಅವರು ನಿಮ್ಮ ಸಹಭಾಗಿತ್ವವನ್ನು ನಿಷೇಧಿಸುವರು.

ಕುರ್’ಆನ್ 35 : 13,14


ಸತ್ಯವನ್ನು ಸತ್ಯವಾಗಿ ಮನಗಾಣಲು ಅಲ್ಲಾಹನು ತೌಫೀಕ್ ನೀಡಲಿ.


✍️ Abu Muadh