17 Jan 2026

ರಜಬ್ 27 ರ ಉಪವಾಸದ ಹದೀಸಿನ ನಿಜಸ್ಥಿತಿ.

ರಜಬ್ 27 ರ ಉಪವಾಸದ ಹದೀಸಿನ ನಿಜಸ್ಥಿತಿ. 

*عن أبي هريرة رضي الله عنه  قال قال رسول الله صلى الله عليه وسلم : من صام يوم سبع وعشرين من رجبٍ كتب الله له صيام ستين شهرا* 

(إحياء علوم الدين: ١: ٣٢٨


*ನಬಿ ﷺ ರವರು ಹೇಳಿದರು..*

ಯಾರಾದರೂ ರಜಬ್ ಇಪ್ಪತ್ತ ಏಳರಂದು ಉಪವಾಸ ಹಿಡಿದರೆ ಅರುವತ್ತು ತಿಂಗಳ ಉಪವಾಸದ ಪ್ರತಿಫಲ ಅವನಿಗೆ ಅಲ್ಲಾಹನು ನೀಡುವನು. [ಇಹ್ಯಾ 1/328]

    ಈ ಹದೀಸ್ ಶೈಖ್ ಅಬೂ ಮೂಸಲ್ ಮದೀನೀ [ರ.ಅ] ರವರು   فضائل الأيام والأشهر ಎಂಬ ಗ್ರಂಥದಲ್ಲಿ ವರದಿ ಉಲ್ಲೇಖಿಸಿದ್ದಾರೆ. [ಹಾಶಿಯತುಲ್ ಇಹ್ಯಾ]


ಈ ಹದೀಸ್ ಬಗ್ಗೆ ಮುಹದ್ದಿಥ್‌ಗಳ ತೀರ್ಪು: ಇದರಲ್ಲಿ ಸಮಸ್ತ ಸುನ್ನಿಗಳು ಅಂಗೀಕರಿಸುವ ಇಮಾಮರೂ ಇದ್ದಾರೆ.


ಇಮಾಮ್ ಇಬ್ನ್ ಜೌಝೀ

ಮೌದೂʼ (ಕಟ್ಟಕಥೆ)


ಇಮಾಮ್ ಧಹಬೀ

باطل (ಅಸತ್ಯ)

ಇಬ್ನ್ ಹಜರ್ ಅಲ್ ಅಸ್ಖಲಾನೀ

لا يصح (ಸಹೀಹ್ ಅಲ್ಲ)

ಶೌಕಾನೀ

موضوع

ಅಲ್-ಅಲ್ಬಾನೀ

موضوع / ضعيف جدا


📌 ಇಹ್ಯಾ ಉಲೂಮ್ ಅದ್ದೀನ್‌ನಲ್ಲಿ ಹದೀಸ್ ಇರುವುದರಿಂದ ಮಾತ್ರ ಅದು ಸಹೀಹ್ ಆಗುವುದಿಲ್ಲ.


*ಇಮಾಮ್ ಗಝ್ಝಾಲಿ (ರ) ಸ್ವತಃ ಹೇಳುತ್ತಾರೆ: “ಇಹ್ಯಾದಲ್ಲಿರುವ ಎಲ್ಲಾ ಹದೀಸ್‌ಗಳು ಸಹೀಹ್ ಅಲ್ಲ.”*


ಇಮಾಮ್ ಗಝ್ಝಾಲಿ (ರ) ಅವರ ಸ್ಪಷ್ಟ ಹೇಳಿಕೆಗಳು. 


«فَإِنْ قُلْتَ: هَذِهِ الأَحَادِيثُ الَّتِي أَوْرَدْتَهَا فِي هَذَا الْكِتَابِ هَلْ هِيَ صَحِيحَةٌ؟

فَاعْلَمْ أَنِّي لَمْ أَلْتَزِمْ فِيهَا الصِّحَّةَ،

بَلْ أَوْرَدْتُ مَا اشْتَهَرَ عَلَى أَلْسِنَةِ أَهْلِ الْعِلْمِ وَالتَّصْوِيفِ.»


“ಈ ಪುಸ್ತಕದಲ್ಲಿ ನಾನು ಉಲ್ಲೇಖಿಸಿದ ಹದೀಸ್‌ಗಳು ಸಹೀಹ್‌ವೇ ಎಂದು ಕೇಳಿದರೆ – ನಾನು ಅವುಗಳ ಸಹೀಹ್ ಆಗಿರುವುದನ್ನು ಶರತ್ತಾಗಿ ತೆಗೆದುಕೊಂಡಿಲ್ಲ. ಪಂಡಿತರು ಮತ್ತು ಸೂಫಿಗಳಲ್ಲಿ ಪ್ರಸಿದ್ಧವಾಗಿದ್ದವುಗಳನ್ನು ಮಾತ್ರ ಉಲ್ಲೇಖಿಸಿದ್ದೇನೆ.”


«مَا ذَكَرْتُهُ فِي هَذَا الْكِتَابِ مِنَ الأَخْبَارِ فَلَمْ أَلْتَزِمْ فِيهِ الصِّحَّةَ،

فَمَا كَانَ ضَعِيفًا فَقَدْ بَيَّنَهُ أَهْلُ الْحَدِيثِ.»


“ಈ ಗ್ರಂಥದಲ್ಲಿ ಉಲ್ಲೇಖಿಸಿದ ವರದಿಗಳಲ್ಲಿ ನಾನು ಸಹೀಹ್ ಆಗಿರಬೇಕೆಂದು ಬದ್ಧನಾಗಿಲ್ಲ; ದುರ್ಬಲವಾದವುಗಳನ್ನು ಹದೀಸ್ ಪಂಡಿತರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.”



ಇಮಾಮ್ ಅಲ್-ಇರಾಖೀ (رحمه الله)

 تخريج أحاديث الإحياء – (ಇಹ್ಯಾ ಹದೀಸ್ ತಖ್ರೀಜ್)


«أَوْدَعَ أَبُو حَامِدٍ الْغَزَالِيُّ كِتَابَهُ الإِحْيَاءَ أَحَادِيثَ كَثِيرَةً،

صَحِيحَةً وَحَسَنَةً وَضَعِيفَةً،

وَفِيهِ مَوْضُوعَاتٌ قَلِيلَةٌ.»

 (تخريج أحاديث الإحياء – المقدمة)


“ಇಮಾಮ್ ಅಬೂ ಹಾಮಿದ್ ಅಲ್-ಗಝ್ಝಾಲಿ ಅವರು ತಮ್ಮ ಇಹ್ಯಾ ಗ್ರಂಥದಲ್ಲಿ

ಸಹೀಹ್, ಹಸನ್, ದುರ್ಬಲ ಹದೀಸ್‌ಗಳನ್ನು ಸೇರಿಸಿದ್ದಾರೆ;

ಅದರಲ್ಲಿ ಕೆಲವೇ ಕೆಲವು ನಿರ್ಮಿತ (ಮೌದುಊ) ವರದಿಗಳೂ ಇವೆ.”


ಇಮಾಮ್ ಮುರ್ತದಾ ಅಲ್-ಜುಬೈದಿ (رحمه الله)

 إتحاف السادة المتقين بشرح إحياء علوم الدين


«وَاعْلَمْ أَنَّ الأَحَادِيثَ الَّتِي فِي الإِحْيَاءِ

لَيْسَتْ كُلُّهَا صَحِيحَةً،

بَلْ فِيهَا الصَّحِيحُ وَالْحَسَنُ وَالضَّعِيفُ،

وَقَلِيلٌ مِنَ الْمَوْضُوعِ،

كَمَا بَيَّنَهُ الْحَافِظُ الْعِرَاقِيُّ فِي تَخْرِيجِهِ.»

 (إتحاف السادة المتقين ١/٣٨)


“ಇಹ್ಯಾದಲ್ಲಿರುವ ಹದೀಸ್‌ಗಳೆಲ್ಲವೂ ಸಹೀಹ್ ಅಲ್ಲ.

ಅದರಲ್ಲಿ ಸಹೀಹ್, ಹಸನ್, ದುರ್ಬಲ ಮತ್ತು ಸ್ವಲ್ಪ ನಿರ್ಮಿತ ವರದಿಗಳಿವೆ.

ಇದನ್ನು ಹಾಫಿಝ್ ಇರಾಖೀ ಅವರು ತಮ್ಮ ತಖ್ರೀಜ್‌ನಲ್ಲಿ ವಿವರಿಸಿದ್ದಾರೆ.”


ಜುಬೈದಿ (ರ) ಅವರ ಮತ್ತೊಂದು ಸ್ಪಷ್ಟ ಮಾತು:


«وَأَبُو حَامِدٍ لَمْ يَشْتَرِطِ الصِّحَّةَ فِيمَا أَوْرَدَهُ،

وَإِنَّمَا أَرَادَ التَّرْغِيبَ وَالتَّرْهِيبَ.»

 (إتحاف السادة المتقين)


“ಇಮಾಮ್ ಗಝ್ಝಾಲಿ ಅವರು ಉಲ್ಲೇಖಿಸಿದ ವರದಿಗಳಲ್ಲಿ ಸಹೀಹ್ ಎಂಬ ಷರತ್ತು ಹಾಕಿಲ್ಲ.


ಆತೂರು ಇಬ್ರಾಹಿಂ ಸಖಾಫಿ ಉಲ್ಲೇಖಿಸಿದ:

ಹಾಶಿಯತುಲ್ ಬರ್ಮಾವಿ

ಇಆನತು ತ್ವಾಲಿಬೀನ್

ಹಾಶಿಯತುಲ್ ಬಾಜೂರಿ

ಹಾಶಿಯತುಲ್ ಜಮಲ್

 ಇವುಗಳು “ಹಾಶಿಯಾ” ಗ್ರಂಥಗಳು (commentary)

 ಇವುಗಳ ಆಧಾರ ಹದೀಸ್ ಅಲ್ಲ, ಫಿಖ್ಹಿ ಇಜ್ತಿಹಾದ್ ಅಥವಾ ಪ್ರಚಲಿತ ಅಭ್ಯಾಸ.


*ಇಮಾಮ್ ನವವಿ (رحمه الله)* – ರಜಬ್ ಉಪವಾಸ ಕುರಿತು ಸ್ಪಷ್ಟ ಹೇಳಿಕೆ

 الْمَجْمُوع شرح المهذب


«لَمْ يَثْبُتْ فِي صَوْمِ رَجَبَ حَدِيثٌ صَحِيحٌ،

وَلَا فِي صِيَامِ شَيْءٍ مِنْهُ مُعَيَّنٍ،

وَالْأَحَادِيثُ فِيهِ كُلُّهَا ضَعِيفَةٌ،

بَلْ مَوْضُوعَةٌ.»

 (المجموع شرح المهذب ٦ / ٤٤٧)


“ರಜಬ್ ತಿಂಗಳ ಉಪವಾಸದ ಬಗ್ಗೆ ಯಾವುದೇ ಸಹೀಹ್ ಹದೀಸ್ ಸಾಬೀತಾಗಿಲ್ಲ.

ಅದರಲ್ಲಿಯೂ ನಿರ್ದಿಷ್ಟ ದಿನದ ಉಪವಾಸದ ಕುರಿತು ಏನೂ ಸಾಬೀತಾಗಿಲ್ಲ. ಈ ವಿಷಯದ ಎಲ್ಲಾ ಹದೀಸ್‌ಗಳು ದುರ್ಬಲ – ಕೆಲವಂತೂ ನಿರ್ಮಿತವಾದ ಹದೀಸ್ ಆಗಿದೆ.”


*ಇಮಾಮ್ ನವವಿ (ರ)* – ನಿರ್ದಿಷ್ಟ ದಿನವನ್ನು ವಿಶೇಷಗೊಳಿಸುವ ಬಗ್ಗೆ

«الصَّوْمُ فِي شَهْرِ رَجَبَ لَا فَضْلَ لَهُ عَلَى غَيْرِهِ،

وَلَا خُصُوصَ لِشَيْءٍ مِنْ أَيَّامِهِ،

وَتَخْصِيصُ بَعْضِ أَيَّامِهِ بِالصَّوْمِ مَكْرُوهٌ

إِذَا اعْتَقَدَ فِيهِ فَضِيلَةً خَاصَّةً.»

 (فتاوى النووي ص ٥٤)


“ರಜಬ್ ತಿಂಗಳ ಉಪವಾಸಕ್ಕೆ ಬೇರೆ ತಿಂಗಳುಗಳಿಗಿಂತ ವಿಶೇಷ ಶ್ರೇಷ್ಟತೆ ಇಲ್ಲ. ಅದರ ಯಾವುದೇ ದಿನಕ್ಕೂ ವಿಶೇಷತೆ ಇಲ್ಲ.

ಅದರಲ್ಲಿ ಕೆಲವು ದಿನಗಳನ್ನು ವಿಶೇಷವೆಂದು ನಂಬಿ ಉಪವಾಸ ಮಾಡುವುದು ಮಕರೂಹ್.”


ಇಮಾಮ್ ನವವಿ (ರ) ಹೇಳುತ್ತಾರೆ:

«تَخْصِيصُ يَوْمٍ بِعِبَادَةٍ

يَحْتَاجُ إِلَى دَلِيلٍ صَحِيحٍ صَرِيحٍ.»

(شرح مسلم – قواعد عامة)


“ಯಾವುದೇ ಒಂದು ದಿನವನ್ನು ವಿಶೇಷ ಇಬಾದತ್‌ಗೆ ಮೀಸಲು ಮಾಡುವುದಕ್ಕೆ ಸ್ಪಷ್ಟ ಮತ್ತು ಸಹೀಹ್ ಪುರಾವೆ ಅಗತ್ಯ.”


*ಇಬ್ನ್ ಹಜರ್ ಅಲ್-ಹೈತಮಿ (ر)* – ರಜಬ್ ಉಪವಾಸದ ಹದೀಸ್‌ಗಳ ಸ್ಥಿತಿ. 

«لَمْ يَرِدْ فِي فَضْلِ شَهْرِ رَجَبَ،

وَلَا فِي صَوْمِ شَيْءٍ مِنْهُ خَاصَّةً،

حَدِيثٌ صَحِيحٌ وَلَا حَسَنٌ،

وَجَمِيعُ مَا وَرَدَ فِيهِ ضَعِيفٌ،

بَلْ كَثِيرٌ مِنْهُ مَوْضُوعٌ.»

 (الفتاوى الحديثية، ص ١١٩)


“ರಜಬ್ ತಿಂಗಳ ಶ್ರೇಷ್ಟತೆಗೂ

ಅದರಲ್ಲಿನ ಯಾವುದಾದರೂ ನಿರ್ದಿಷ್ಟ ಉಪವಾಸಕ್ಕೂ

ಸಹೀಹ್ ಅಥವಾ ಹಸನ್ ಹದೀಸ್ ಯಾವುದೂ ಬಂದಿಲ್ಲ.

ಈ ವಿಷಯದ ಎಲ್ಲಾ ವರದಿಗಳು ದುರ್ಬಲವಾಗಿವೆ;

ಬಹುಪಾಲು ನಿರ್ಮಿತವಾಗಿದೆ.”


ಇಬ್ನ್ ಹಜರ್ ಅಲ್-ಹೈತಮಿ ರಜಬ್ 27 / ಮಿಅರಾಜ್ ದಿನವನ್ನು ವಿಶೇಷಗೊಳಿಸುವ ಕುರಿತು


«وَتَخْصِيصُ يَوْمِ السَّابِعِ وَالْعِشْرِينَ مِنْ رَجَبَ

بِصَوْمٍ أَوْ عِبَادَةٍ خَاصَّةٍ

لَا أَصْلَ لَهُ فِي الشَّرْعِ،

وَلَمْ يَثْبُتْ فِيهِ شَيْءٌ عَنِ النَّبِيِّ ﷺ.»

 (الفتاوى الفقهية الكبرى ٢ / ٥٣)


“ರಜಬ್ 27ನೇ ದಿನವನ್ನು

ವಿಶೇಷ ಉಪವಾಸ ಅಥವಾ ಇಬಾದತ್‌ಗೆ ಮೀಸಲು ಮಾಡುವುದು ಶರೀಅತ್‌ನಲ್ಲಿ ಮೂಲವಿಲ್ಲ.

ಈ ಕುರಿತು ನಬಿ ﷺ ರಿಂದ ಏನೂ ಸಾಬೀತಾಗಿಲ್ಲ.”


ಇಬ್ನ್ ಹಜರ್ ಅಲ್-ಹೈತಮಿ ದುರ್ಬಲ ಹದೀಸ್ ಆಧಾರವಾಗಿ “ಸುನ್ನತ್” ಎಂದು ಘೋಷಿಸುವುದರ ಬಗ್ಗೆ


«لَا يَجُوزُ أَنْ يُجْعَلَ الضَّعِيفُ

أَصْلًا فِي إِثْبَاتِ سُنَّةٍ،

وَلَا فِي تَخْصِيصِ زَمَانٍ أَوْ عِبَادَةٍ.»

 (الفتاوى الحديثية)

“ದುರ್ಬಲ ಹದೀಸನ್ನು ಸುನ್ನತ್ ಸಾಬೀತುಪಡಿಸುವ ಆಧಾರವಾಗಿಯೂ ಅಥವಾ ಇಬಾದತ್‌ಗಳನ್ನು ವಿಶೇಷಗೊಳಿಸಲು ಬಳಸಲು ಅನುಮತಿ ಇಲ್ಲ.”


*ಶೈಖ್ ಅಬ್ದುಲ್ ಖಾದಿರ್ ಜೀಲಾನಿ (ರ) ಹೇಳುತ್ತಾರೆ:*


«اتَّبِعِ السُّنَّةَ وَلَا تَبْتَدِعْ، فَإِنَّ السُّنَّةَ طَرِيقُ النَّجَاةِ، وَالْبِدْعَةَ طَرِيقُ الْهَلَاكِ.»

 الغنية (باب اتباع السنة)


“ಸುನ್ನತನ್ನು ಅನುಸರಿಸು; ಹೊಸದನ್ನು (ಬಿದ್‌ಅತ್) ದೀನಿನಲ್ಲಿ ಸೇರಿಸಬೇಡ. ಏಕೆಂದರೆ ಸುನ್ನತ್ತಾಗಿದೆ ರಕ್ಷಣೆಗಾಗಿ ದಾರಿ,

ಬಿದ್‌ಅತ್ ನಾಶದ ದಾರಿ.”


«وَكُلُّ عِبَادَةٍ لَمْ يَفْعَلْهَا رَسُولُ اللهِ ﷺ فَاتْرُكْهَا،وَلَا تَتَقَرَّبْ إِلَى اللهِ بِهَا.»

 الغنية (كتاب الأمر بالمعروف)


“ನಬಿ ﷺ ಮಾಡದೇ ಇರುವ ಪ್ರತಿಯೊಂದು ಇಬಾದತ್‌ನ್ನು ನೀನು ಬಿಟ್ಟುಬಿಡು; ಅದನ್ನು ಅಲ್ಲಾಹನ ಹತ್ತಿರ ಹೋಗುವ ಮಾರ್ಗವೆಂದು ಪರಿಗಣಿಸಬೇಡ.”



«تَعْظِيمُ الْأَزْمِنَةِ وَالْأَمْكِنَةِ إِنَّمَا يَكُونُ بِمَا عَظَّمَهُ الشَّرْعُ، لَا بِالْهَوَى وَالِاخْتِرَاعِ.»

الغنية (باب الأدب مع الشرع)


“ಕಾಲಗಳಿಗೂ ಸ್ಥಳಗಳಿಗೂ ಗೌರವ ನೀಡುವುದು

ಶರೀಅತ್ ಗೌರವಿಸಿದ ಮಟ್ಟದಲ್ಲೇ ಇರಬೇಕು;

ವೈಯಕ್ತಿಕ ಆಸೆ ಅಥವಾ ಕಲ್ಪನೆಗಳ ಆಧಾರದ ಮೇಲೆ ಅಲ್ಲ.”


ಮಿಅರಾಜ್ ದಿನಾಂಕವೇ ಖಚಿತವಲ್ಲ.


ರಜಬ್ 27 ಎನ್ನುವುದು ಹಲವು ಇಮಾಮರ ಅಭಿಪ್ರಾಯ ದುರ್ಬಲ ಎಂದಾಗಿದೆ. 


ಇಬ್ನ್ ಹಜರ್ (ರ) ಇಸ್ರಾ ಮಿಅರಾಜ್ ರಮದಾನಿನಲ್ಲಿ ಎಂದಿದ್ದಾರೆ.


 ಹಲವರು ರಬೀಉಲ್ ಅವ್ವಲ್


ಬಹುಮತ ಅಥವಾ ಇಜ್ಮಾಅ ಇರುವುದು ಇಸ್ರಾ ಮಿಅರಾಜ್ ದಿನಾಂಕ ಖಚಿತವಲ್ಲ, ಉಪವಾಸದ ಕುರಿತು ಬಂದಿರುವ ಹದೀಸ್ ದುರ್ಬಲವಾಗಿದೆ ಎಂದಾಗಿದೆ.


✍🏾Abu Muadh

24 Sept 2024

ಭೌತಿಕ ಮತ್ತು ಅಭೌತಿಕ ಸಾಮರ್ಥ್ಯದ ಪರಿಕಲ್ಪನೆ ಜಿನ್ನ್ ಮತ್ತು ಇತರ ಸೃಷ್ಟಿಗಳಲ್ಲಿ.

 ಭೌತಿಕ ಮತ್ತು ಅಭೌತಿಕ ಸಾಮರ್ಥ್ಯದ ಪರಿಕಲ್ಪನೆ ಜಿನ್ನ್ ಮತ್ತು ಇತರ ಸೃಷ್ಟಿಗಳಲ್ಲಿ.

24 September 2024


ಭೌತಿಕ :

ಭೌತಿಕ ಎಂದರೆ ಪ್ರಾಪಂಚಿಕಐಹಿಕಲೌಕಿಕ ಎಂದಾಗಿದೆ.


ಭೌತಿಕವು ನೆಲಜಲಗಾಳಿಗುಡ್ಡಹೊಳೆಕಾಡುಸರೋವರಖನಿಜಗ್ರಹ, ನಕ್ಷತ್ರಮನುಷ್ಯ ವರ್ಗ, ಜಿನ್ನ್ ವರ್ಗಮಲಕ್ ವರ್ಗ ಸೇರಿದಂತೆ ಹಲವಾರು ಜೀವ ಜಂತುಗಳನ್ನು ಒಳಗೊಂಡಿದೆ.


ಅಭೌತಿಕ :

ಭೌತಿಕ ಎಂಬ ಪದದ ವಿಪರೀತ ಪದವಾಗಿದೆ ಅಭೌತಿಕ ಎನ್ನುವುದು. ಅಭೌತಿಕ ಎಂದರೆ ಯಾವುದೇ ಸೃಷ್ಟಿಯೊಂದಿಗೆ ಹೊಂದಾಣಿಕೆಯಾಗದಪ್ರಾಪಂಚಿಕವಲ್ಲದ ವಿಷಯಗಳಾಗಿದೆ.


ಅಭೌತಿಕವಾದ (ಪ್ರಾಪಂಚಿಕವಲ್ಲದಎಲ್ಲಾ ಮಧ್ಯಸ್ಥಿಕೆಯು ಅಲ್ಲಾಹನಿಗೆ ಮಾತ್ರ ಇರುವುದಾಗಿದೆಇದು ಅಲ್ಲಾಹನ ಸಾಮರ್ಥ್ಯವಾಗಿದೆಅಲ್ಲಾಹನಿಗೆ ಮಾತ್ರ ಇರುವ ಸಾಮರ್ಥ್ಯವನ್ನು ಜಿನ್ನಿನೊಂದಿಗೆ ಅಥವಾ ಸೃಷ್ಟಿಗಳೊಂದಿಗೆ ಕಾಣುವುದು ಬಹುದೇವ ವಿಶ್ವಾಸವಾಗಿದೆ.


ಅದೇ ರೀತಿ ಜಿನ್ನ್  ಸಾಮರ್ಥ್ಯವನ್ನು ಅಭೌತಿಕ ಎಂದು ವ್ಯಾಖ್ಯಾನಿಸಿ ಎಲ್ಲವೂ ಶಿರ್ಕ್ (ಮುತಲಕನ್ ಶಿರ್ಕ್ಎಂದು ಹುಕುಮ್ ನೀಡುವುದು ಅಲ್ಲಾಹನ ಸಾಮರ್ಥ್ಯಕ್ಕೆ ಹೋಲಿಸಿದಂತೆ ಅಲ್ಲವೆ?


ಅಭೌತಿಕ ಎಂದರೆ ಪಂಚೇಂದ್ರಿಯಗಳಿಗೆ ನಿಲುಕದ ಎಂಬ ಮಡವೂರಿಗಳ ತಪ್ಪಾದ ಕೆಟ್ಟ ವಾದ ಅರ್ಥಹೀನವಾಗಿದೆಇಲ್ಲಿಂದಾಗಿದೆ ಮಡವೂರಿಗಳ ಆದರ್ಶದ ವ್ಯತಿಚಲನಇದನ್ನೇ ಆಗಿದೆ 2012  ನಂತರದ KNM ಪುನರಾವರ್ತಿಸಿರುವುದು


ಪಂಚೇಂದ್ರಿಯಗಳಿಗೆ ನಿಲುಕದ ಎನ್ನುವುದಕ್ಕೆ ಅಗೋಚರ ಎಂದು ಅರ್ಥ ಕಲ್ಪಿಸಬಹುದೇ ಹೊರತು ಅಭೌತಿಕ ಎನ್ನುವ ಅರ್ಥ ಕಲ್ಪಿಸುವುದು ಅಜ್ಞಾನವೆ ಸರಿ.


KNM  ವಾದ ಪ್ರಕಾರ ಜಿನ್ನ್  ಸಾಮರ್ಥ್ಯದೊಂದಿಗೆ ಇರುವ ಎಲ್ಲಾ ಮಧ್ಯಸ್ಥಿಕೆಯು ಶಿರ್ಕ್ ಎನ್ನುವುದಾದರೆ KNM  ವಾದ ಪ್ರಕಾರ ಜಿನ್ನ್ ಪ್ರಾಪಂಚಿಕವಲ್ಲ ಎಂದಾಗಬೇಕಲ್ಲವೇ?


KNM  ಮೊಂಡು ವಾದದ ಪ್ರಕಾರ ಮನುಷ್ಯನ ಸಂಭಂದಿಸಿ ಜಿನ್ನ್  ಸಾಮರ್ಥ್ಯ ಅಭೌತಿಕ (ಪ್ರಾಪಂಚಿಕವಲ್ಲಎಂದಾದರೆಆಕಾಶದಲ್ಲಿ ಮನುಷ್ಯನಿಗೆ ಕಾಣದಂತಹ ಲೆಕ್ಕಕ್ಕೆ ನಿಲುಕದಷ್ಟು ನಕ್ಷತ್ರಗಳಿವೆ ನಕ್ಷತ್ರಗಳು ಪ್ರಾಪಂಚಿಕವಲ್ಲ (ಅಭೌತಿಕಎಂದರ್ಥವೇ?


ಪ್ರಕಾಶವು ಕೆಡುವಂತದ್ದಾಗಿದೆ ಅದು ಬೌತಿಕವಾಗಿದೆ. ಇದೇ ಪ್ರಕಾಶದಿಂದ ಅಲ್ಲವೆ ಮಲಕ್ ಗಳನ್ನು ಅಲ್ಲಾಹನು ಸೃಷ್ಟಿಸಿರುವುದು. ಅದೇ ರೀತಿ ಜಿನ್ನ್ ಗಳನ್ನು ಸೃಷ್ಟಿಸಿರುವುದು ಅಗ್ನಿಯಿಂದಲ್ಲವೆ? ಅಗ್ನಿ ಬೌತಿಕವಲ್ಲವೆ? ಬೌತಿಕವಾದ ವಸ್ತುಗಳಿಂದ ಸೃಷ್ಟಿಸಿದ ಜಿನ್ನ್ ಮತ್ತು ಮಲಕ್ ಅಬೌತಿಕ ಆಗುವುದಾದರೂ ಹೇಗೆ?


ಅಬೌತಿಕವಾದ ಪ್ರಕಾಶ ಇದೆ. ಅದು ಅಲ್ಲಾಹನ ಪ್ರಕಾಶವಾಗಿದೆ. ಅದನ್ನು ಕೆಡಿಸಲು ಖಂಡಿತವಾಗಿಯೂ ಯಾರಿಂದಲೂ  ಸಾಧ್ಯವಿಲ್ಲ. ಇದಾಗಿದೆ ಬೌತಿಕ ಮತ್ತು ಅಬೌತಿಕ ಬೇರ್ಪಡುವ ರೀತಿ.


ಮರಣ ಹೊಂದಿದವರಲ್ಲಿ ಅಭೌತಿಕ ಪರಿಕಲ್ಪನೆ.


ಮುಹಿಯುದ್ದೀನ್ ಶೈಖ್ ರನ್ನು ಉದಾಹರಣೆಯಾಗಿ ಹೇಳುವುದಾದರೆ ಅವರು ಪ್ರಸ್ತುತ ಪ್ರಾಪಂಚಿಕವಲ್ಲದ (ಅಭೌತಿಕವಾದಬರ್ಝಕಿ ಲೋಕದಲ್ಲಿದ್ದಾರೆ ಎಂಬ ಕಾರಣಕ್ಕೆ ಅವರಲ್ಲಿರುವ ಎಲ್ಲಾ ಮಧ್ಯಸ್ಥಿಕೆಯು ಶಿರ್ಕಾಗಿಕುತ್ತದೆಯಾಕೆಂದರೆ ಶಿರ್ಕ್ ಮತ್ತು ತೌಹೀದ್ ಬೇರ್ಪಡುವುದು ಅಭೌತಿಕವಾದ (ಪ್ರಾಪಂಚಿಕವಲ್ಲದಮಧ್ಯಸ್ಥಿಕೆಯಿಂದಾಗಿದೆ


ಮುಹಿಯುದ್ದೀನ್ ಶೈಖ್ ರನ್ನು ಕರೆಯುವುದು ಶಿರ್ಕ್ ಎನ್ನುವ ಮಾನದಂಡ ಸಮಸ್ತ ಪುರೋಹಿತರು ಅಲ್ಲಾಹನಿಗೆ ಮಾತ್ರವಿರುವ ಅಭೌತಿಕತೆಯನ್ನು ಮುಹಿಯುದ್ದೀನ್ಶೈಖ್ ರಲ್ಲಿ ಕಾಣುವುದರಿಂದಾಗಿದೆ


ಅದೇ ರೀತಿ ಅಲ್ಲಾಹನಿಗೆ ಮಾತ್ರ ಇರುವ ಅಭೌತಿಕತೆ ಮುಹಿಯುದ್ದೀನ್ ಶೈಖ್ ಗೆ ಕಲ್ಪಿಸುವುದು ಬಹು ದೈವ ವಿಶ್ವಾಸವಾದರೆಜಿನ್ನ್ ನೊಂದಿಗೆ ಇರುವಮಧ್ಯಸ್ಥಿಕೆ ಎಲ್ಲವೂ ಶಿರ್ಕ್ ಎಂದು ಹೇಳುವುದುಜಿನ್ನ್ ಗೆ ಪ್ರಾಪಂಚಿಕವಾಗಿ (ಭೌತಿಕವಾಗಿಯಾವುದೇ ಮಧ್ಯಸ್ಥಿಕೆ ಇಲ್ಲ ಎಂದು ಹೇಳಿದಂತೆ ಅಲ್ಲವೆಇದುಜಿನ್ನ್  ಸಾಮರ್ಥ್ಯ ಪ್ರಪಂಚಾತೀಥ ಎಂದು ವಿಶ್ವಾಸ ಇಟ್ಟಂತೆ ಅಲ್ಲವೆ? ಪ್ರಪಂಚಾತೀಥ ಸಾಮರ್ಥ್ಯ ಅಲ್ಲಾಹನಿಗೆ ಮಾತ್ರ ಇರುವುದಲ್ಲವೆKNM ನ ಈ ವಾದವು ಬಹುದೈವ ವಿಶ್ವಾಸಕ್ಕೆ ಹೋಲಿಕೆಯಾಗುವುದಿಲ್ಲವೆ?


ಒಂದು ವೇಳೆ ಭೌತಿಕವಾದ (ಪ್ರಾಪಂಚಿಕಮಧ್ಯಸ್ಥಿಕೆ ಜಿನ್ನ್ ನೊಂದಿಗೆ ಇದೆ ಎಂದು ಒಪ್ಪುವವರಾಗಿದ್ದರೆ WISDOM ನ ವಾದವನ್ನು ಅಂಗೀಕರಿಸಬಹುದಲ್ಲವೆ? ನೀವು KNM ಅಥವಾ SKSM ನಲ್ಲಿ ಇದ್ದು ಏನು ಪ್ರಯೋಜನ? KNM  ವಿಶ್ವಾಸವೇ ಜಿನ್ನ್  ಸಾಮರ್ಥ್ಯ ಅಭೌತಿಕ ಎಂದಾಗಿದೆ.

19 Sept 2024

ಸಮಸ್ತ ಮುಸ್ಲಿಯಾರರ ಕಿವಿ ಹಿಂಡಿದ ಇಮಾಂ ಇಬ್ನ್ ಹಜರ್ ಹೈತಮೀ (ರ)


*ಮಹಾತ್ಮರಾಗಲಿ ಉಲಮಾಗಳಾಗಲಿ ಎತ್ತರಿಸಿ ಕಟ್ಟಿದ ಗೋರಿಗಳನ್ನು ನೆಲಸಮ ಮಾಡಬೇಕು:*


📌  ಇಬ್ನ್ ಹಜರ್ ಹೈತಮಿ ( ರ'ಈಸುಲ್ ಮುಹಕ್ಕಿಕೀನ್)


ಇಬ್ನ್ ಹಜರ್ ರೊಂದಿಗೆ ಕೇಳಿದ ಪ್ರಶ್ನೆಗೆ  ಹೀಗೆ ಉತ್ತರಿಸುತ್ತಾರೆ:


(فَأَجَابَ) بِقَوْلِهِ الْمَنْقُولُ الْمُعْتَمَدُ كَمَا جَزَمَ بِهِ النَّوَوِيُّ فِي شَرْحِ الْمُهَذَّبِ حُرْمَةُ الْبِنَاءِ فِي الْمَقْبَرَةِ الْمُسَبَّلَةِ 


ಇಮಾಂ ನವವಿ (ರ)ರವರು ತಮ್ಮ ಷರಹುಲ್ ಮುಹಝಬಿನಲ್ಲಿ ಹೇಳಿದ ಹಾಗೆ ಸಾರ್ವಜನಿಕ ಸ್ಥಳಗಳಲ್ಲಿ ಮಕ್ಬರಗಳನ್ನು ಎತ್ತರಿಸಿ ಕಟ್ಟುವುದು ಹರಾಂ ಆಗಿದೆ, ನಿಷಿದ್ದವಾಗಿದೆ ಎಂಬುದು ಶಾಫಿಈ ಮಝ್'ಹಬಿನ ಮುಅತಮಾದ ಅಭಿಪ್ರಾಯವಾಗಿದೆ (ವೀಕ್ಷಣೆಯಾಗಿದೆ).


فَإِنْ بُنِيَ 

 هُدِمَ

ಹಾಗೆ ಏನಾದರೂ ಮಕ್ಬರಗಳನ್ನು ಎತ್ತರಿಸಿ ಕಟ್ಟಿದರೆ ಅದನ್ನು ದ್ವಂಸಗೊಳಿಸಬೇಕಾಗಿದೆ.

 وَلَا فَرْقَ فِي ذَلِكَ بَيْنَ قُبُورِ الصَّالِحِينَ وَالْعُلَمَاءِ وَغَيْرِهِمْ 


ಇದರಲ್ಲಿ ಸ್ವಾಲಿಹ್ ಗಳು, ಉಲಮಾಗಳು ಹಾಗೂ ಇತರರು ಎಂಬ ವ್ಯತ್ಯಾಸವಿಲ್ಲ.( ಎಲ್ಲಾ ಮಕ್ಬರಗಳನ್ನು ಹೊಡೆದುರುಳಿಸಬೇಕಾಗಿದೆ.)

وَمَا فِي الْخَادِمِ مِمَّا يُخَالِفُ ذَلِكَ ضَعِيفٌ 


ಅಲ್ ಖಾದಿಂ ನಲ್ಲಿ ಮಹಾತ್ಮರ ,ಉಲಮಾಗಳ ಕಬರ್ ಎತ್ತರಿಸಿ ಕಟ್ಟಬೇಕೆಂದು ವರದಿಯಾಗಿದ್ದರೂ ಅವೆಲ್ಲವೂ ದುರ್ಬಲವಾಗಿದೆ.

لَا يُلْتَفَتُ إلَيْهِ 

ಅದಕ್ಕೆ ತಿರುಗಿಯೂ ನೋಡಬಾರದು..

وَكَمْ أَنْكَرَ الْعُلَمَاءُ عَلَى بَانِي قُبَّةِ الْإِمَامِ الشَّافِعِيِّ - رَضِيَ اللَّهُ عَنْهُ - وَغَيْرِهَا 


ಅಂದರೆ ಇಮಾಂ ಶಾಫಿಈ ಯಂತಹ ಇಮಾಮರ ಕಬರಿನ ಮೇಲೆ ಕೆಲವರು ಕುಬ್ಬ ನಿರ್ಮಿಸಿದ್ದರು.ಅದನ್ನು ಉಲಮಾಗಳು ತೀರಾ ವಿರೋಧ ವ್ಯಕ್ತಪಡಿಸಿದ್ದಾರೆ.


وَكَفَى بِتَصْرِيحِهِمْ فِي كُتُبِهِمْ إنْكَارًا 

ಅದರ ವಿರುದ್ಧವಾಗಿ ( ಮಕ್ಬರ ವಿರುದ್ಧವಾಗಿ)  ಅಧಿಕ ಸಂಖ್ಯೆಯಲ್ಲಿ ಕಿತಾಬ್ ರಚಿಸಿದೆ. ಈ ವಿಷಯದಲ್ಲಿ ಅದೇ ಸಾಕು..


وَالْمُرَادُ بِالْمُسَبَّلَةِ كَمَا قَالَهُ الْإِسْنَوِيُّ وَغَيْرُهُ الَّتِي اعْتَادَ أَهْلُ الْبَلَدِ الدَّفْنَ فِيهَا 


ಅಂದರೆ ಸಾಧಾರಣವಾಗಿ ಮಯ್ಯಿತನ್ನು ದಫನ ಮಾಡುವ ಸ್ಥಳವನ್ನು ಸಾರ್ವಜನಿಕ ಸ್ಮಶಾನ , ಮುಸಬ್ಬತಾದ ಮಕ್ಬರ ಎಂದು ಉದ್ದೇಶಿಸುವುದು..


أَمَّا الْمَوْقُوفَةُ وَالْمَمْلُوكَةُ بِغَيْرِ إذْنِ مَالِكِهَا فَيَحْرُمُ الْبِنَاءُ فِيهِمَا مُطْلَقًا قَطْعًا


ವಕ್ಫ್ ಮಾಡಿದ ಕಬರನ್ನು ಎತ್ತರಿಸಿ ಕಟ್ಟಬಾರದು.ಅದು ಆಕ್ಷೇಪಾರ್ಹವಾಗಿದೆ.


 إذَا تَقَرَّرَ ذَلِكَ فَالْمَقْبَرَةُ الَّتِي ذَكَرَهَا السَّائِلُ يَحْرُمُ الْبِنَاءُ فِيهَا 


ಪ್ರಶ್ನೆಗಾರ ಉಲ್ಲೇಖಿಸಿದ  ಮಕ್ಬರಗಳನ್ನು ಎತ್ತರಿಸಿ ಕಟ್ಟಬಾರದು.ಅದರ ಮೇಲೆ ಕಟ್ಟಡ ನಿರ್ಮಿಸಿಬಾರದು.


وَيُهْدَمُ مَا بُنِيَ فِيهَا 


ಇನ್ನು ಅದರ ಮೇಲೆ ಕುಬ್ಬಗಳು ,ಕಟ್ಟಡ, ಎತ್ತರಿಸಿದ್ದರೆ ಅದನ್ನು ದ್ವಂಸಗೈಯ್ಯಬೇಕು.

وَإِنْ كَانَ عَلَى صَالِحٍ أَوْ عَالِمٍ 


ಅದರಲ್ಲಿ ಉಲಮಾಗಳ ಕಬರ್ , ಔಲಿಯಾಗಳ ಕಬರ್ ಎಂಬ ವ್ಯತ್ಯಾಸ ಇಲ್ಲ.(ಎಲ್ಲವನ್ನೂ ನೆಲಸಮಗೊಳಿಸಬೇಕು)

فَاعْتَمِدْ ذَلِكَ 

ಈ ಅಭಿಪ್ರಾಯವನ್ನು ಅವಲಂಬಿಸಬೇಕಾಗಿದೆ.


وَلَا تَغْتَرَّ بِمَا يُخَالِفُهُ.

ಅದಕ್ಕೆ ವಿರೋಧವಿರುವ ಅಭಿಪ್ರಾಯವನ್ನು ಸ್ವೀಕರಿಸಬಾರದು...


الكتاب: الفتاوى الفقهية الكبرى (2/17)

ابن حجر الهيتمي (909 - 974 هـ = 1504 - 1567 م)

 


📌📌📌📌


*ಇದು ಇಂದಿನ ಕೂರ ತಂಙಳ್, ಉಳ್ಳಾಲ ತಂಙಳ್ ಇವರಂತಹ ಅನೇಕ ದರ್ಗಾಗಳಿಗೂ ಅನ್ವಯವಾಗಿದೆ ಎಂದು ವಿಶೇಷವಾಗಿ ಹೇಳಬೇಕೆಂದಿಲ್ಲ..* ನಮ್ಮ ಇಮಾಂ ನಮ್ಮ  ಇಮಾಂ ಎಂದು ನಾಲಗೆಯಲ್ಲಿ ಹೇಳಿದರೆ ಸಾಲದು. ನಿಮ್ಮ ಮಝ್'ಹಬಿನ ಶ್ರೇಷ್ಠ ಇಮಾಮರ ಈ ವಾದವನ್ನು ಜೀವನದಲ್ಲಿ ಅಳವಡಿಸಿ..

ದರ್ಗಾ ದ್ವಂಸ ಮಾಡಲು ಪ್ರೇರೇಪಿಸಿದ್ದು ವಹಾಬಿಗಳು ಎಂದು ಇನ್ನು ಮುಂದೆ ಹೇಳದಿರಿ.

ಅಲ್ಲಾಹನಿಗೆ ಎರಡು ಕೈಗಳಿವೆ ಎಂದು ವಿಶ್ವಾಸವಿಡದವನು ಕಾಫಿರ್ - ಇಮಾಂ ಶಾಫಿಈ (ರ)


*ಅಲ್ಲಾಹನ ಮೇಲೆ ನಂಬಿಕೆಯಿಡದ ಸ್ವಯಂ ಘೋಷಿತ ಸುನ್ನಿಗಳು*


ಈಮಾನಿನ ಒಂದನೇ ಕಾರ್ಯ ಯಾವುದೆಂದು ಕೇಳಿದರೆ ಹಿಂದು ಮುಂದೆ ನೋಡದೆ *"ಅಲ್ಲಾಹನ ಮೇಲೆ ನಂಬಿಕೆಯಿಡುವುದು"* ಎಂದು ಸುನ್ನಿ ಸಮೂಹವು ಒಕ್ಕೊರಲಿನಿಂದ ಹೇಳಬಹುದು. ಆದರೆ ನಿಜವಾಗಿಯೂ ಅವರಿಗೆ ಅಲ್ಲಾಹನ ಮೇಲೆ ನಂಬಿಕೆಯಿದೆಯೇ ಎಂಬ ಸಂಶಯ ಮೂಡುವ ವಾದಗಳನ್ನು ಮಂಡಿಸುತ್ತಿದ್ದಾರೆ.

ಸಲಫಿಗಳ ಮೇಲಿರುವ ದ್ವೇಷ ಅವರನ್ನು ಅಲ್ಲಾಹನನ್ನು ಅಪಹಾಸ್ಯ ಮಾಡುವಂತಹ ಭಯಾನಕ ಸಾಹಸಕ್ಕೆ ಕೈಹಾಕಿದ್ದಾರೆ. ಅಲ್ಲಾಹನಿಗೆ ಮುಖ , 

ಎರಡು ಕೈಗಳು

ಕಣ್ಣು

ಕಾಲು

ಹೀಗೆ ಮುಂತಾದ ಸಿಫತ್ ಗಳ ಬಗ್ಗೆ ಸಲಫಿಗಳು ಪ್ರಭಾಷಣಗೈದರೆ ಅದನ್ನು ತಮಾಷೆ ಮಾಡುತ್ತಿರುವ ಮುಸ್ಲಿಯಾರರ ಧೈರ್ಯ ನೋಡಿ ನಿಬ್ಬೆರಗಾಗಿ ಬಿಟ್ಟೆ. ಯಾಕೆಂದರೆ ಇವರು ನಾಸ್ತಿಕವಾದಿಗಳಾಗಿ ಪರಿವರ್ತನೆಗೊಂಡಿದ್ದಾರೆಯೇ ಎಂದು ಅನುಮಾನ ವ್ಯಕ್ತಪಡಿಸಬೇಕಾಗಿದೆ. 


ಇವರು ಇದಕ್ಕಾಗಿ ಸಲಫಿಗಳ ಅಲ್ಲಾಹ್ ಎಂಬ ಹೆಸರಿನಲ್ಲಿ

 ಎಂಬ ಹೆಸರಿನಲ್ಲಿ ಹಲವಾರು ಮತ ಪ್ರಭಾಷಣ ಮಾಡಿದ್ದಾರೆ. ವಾಟ್ಸಪ್ ಎಂಬ ಜಾಲತಾಣದಲ್ಲಿ ಹಲವು ಬಾಡಿಗೆ ಬರಹಗಾರರಿಂದ ಸಲಫಿಗಳ ವಿರುದ್ಧ ಜನರನ್ನು ಎತ್ತಿ ಕಟ್ಟಲು *ಅಲ್ಲಾಹನನ್ನು ಅಪಹಾಸ್ಯ* ಮಾಡುತ್ತಿರುವುದು ಸರ್ವ ಸಾಧಾರಣವಾಗಿ ಹೋಗಿದೆ.


*ಯಾ ಅಲ್ಲಾಹ್!!* ಈ ಉಮ್ಮತನ್ನು ಮುಸ್ಲಿಯಾರರ ಕೆಡುಕಿನಿಂದ ರಕ್ಷಿಸು..


ಮುಸ್ಲಿಯಾರರಿಗೆ ಸತ್ಯ ಗೊತ್ತಿದ್ದರೂ ಜನರನ್ನು ವಂಚಿಸುತ್ತಿದ್ದಾರೆ. *ಅಹ್ಲ್ ಸುನ್ನತ್ ವಲ್ ಜಮಾಅತಿನ* ವೇಷ ಧರಿಸಿ ಜನರನ್ನು ನಾಸ್ತಿಕವಾದಕ್ಕೆ ಕೊಂಡೊಯ್ದು ನರಕದ ಆಹಾರವಾಗುವ ಗುತ್ತಿಗೆ ಪಡೆದಿದ್ದಾರೆ ಎಂದು ಹೇಳದಿರಲು ಸಾಧ್ಯವಿಲ್ಲ. ಅಷ್ಟಕ್ಕೂ ಮುಸ್ಲಿಯಾರರ ವರ್ತನೆ ಮಿತಿಮೀರಿದೆ. ಸುಳ್ಳೇ ಇವರ ಬಂಡವಾಳ..


*ಅಲ್ಲಾಹನ ಸಿಫಾತ್ ಗಳ ಬಗ್ಗೆ ಸುನ್ನತ್ ಜಮಾಅತಿನ ನಿಲುವೇನು???*

ಬನ್ನಿ ಸಹೋದರರೇ ಅಲ್ಲಾಹನ ಬಗ್ಗೆ ಕಲಿಯೋಣ..


ನಾವು ಅಲ್ಲಾಹನನ್ನು ಸುನ್ನಿ ಉಸ್ತಾದರ ಉಸ್ತಾದರುಗಳಿಂದ ಕಲಿಯೋಣ..ಯಾಕೆಂದರೆ ಸಲಫಿಗಳು ಹೇಳಿದ ಯಾವ ಮಾತನ್ನೂ ಇವರ ಹಠಮಾರಿತನದಿಂದ ಕೇಳುವುದಿಲ್ಲ.. ಆದ್ದರಿಂದ ಇವರ ಇಮಾಮರು ಈ ವಿಷಯದಲ್ಲಿ ಏನು ಹೇಳಿದ್ದಾರೆ ಎಂಬುದನ್ನು ಅರಿತರೆ ಬಹುಶಃ ಮುಸ್ಲಿಯಾರರ ಅನುಯಾಯಿಗಳು ಒಂದೊಮ್ಮೆ ಇವರ ಕಾಪಟ್ಯವನ್ನು ಅರಿಯಬಹುದು ಎಂದು ಆಶಿಸುತ್ತೇನೆ.


*♦️ಇಮಾಂ ಅಬುಲ್ ಹಸನ್ ಅಲ್ ಅಷ್'ಅರಿ :-*

➖➖➖➖➖➖➖➖


*ಇಮಾಂ ಅಬುಲ್ ಹಸನ್ ಅಲ್ ಅಶ್'ಅರಿ ರವರು الإبانة عن أصول الديانة  ಎಂಬ ಗ್ರಂಥದಲ್ಲಿ ಹೇಳುತ್ತಾರೆ:*


ಅಲ್ಲಾಹನ ಮುಖ,ಎರಡು ಕೈಗಳು, ಎರಡು ಕಣ್ಣು ದೃಢೀಕರಣ ಗೊಂಡಿದೆ.ಆದರೆ ಅದರ ರೂಪ ನಮಗೆ ತಿಳಿದಿಲ್ಲ.


*ಇಮಾಂ ‌ಅಶ್'ಅರಿ ಮುಂದುವರೆಯುತ್ತಾ :*


ಅಲ್ಲಾಹನು ಆಕಾಶಕ್ಕೆ ಇಳಿದು ಬರುತ್ತಾನೆ.

ينزل ربنا تبارك وتعالى.....


ಈ ಹದೀಸಿನ ಆಧಾರದಲ್ಲಿ ಶೈಖ್ ರವರು ಹೇಳುತ್ತಾರೆ:

ونصدق بجميع الروايات التي يثبتها أهل النقل ، من النزول إلى سماء الدنيا

ಒಂದನೇ ಆಕಾಶಕ್ಕೆ ಇಳಿದು ಬರುತ್ತಾನೆ ಎಂಬ ವಿಷಯದಲ್ಲಿ ವರದಿಯಾದ ಎಲ್ಲಾ ಹದೀಸ್ ಗಳನ್ನು ನಾವು ಸ್ವೀಕರಿಸುವುದರೊಂದಿಗೆ ಎಲ್ಲವನ್ನೂ ದೃಢೀಕರಿಸುತ್ತೇವೆ.


ಇದರ  ಜೊತೆಗೆ ಇಮಾಂ ಅಷ್'ಅರಿ ರವರು ಒಂದು ಅಧ್ಯಾಯವನ್ನೇ ತರುತ್ತಾರೆ..


 ಅದು ಹೀಗಿದೆ: 

( " الإجماء الإثبات الصفات الوجه)

*ಅಲ್ಲಾಹನಿಗೆ ಮುಖವಿದೆ ಎಂಬ ಸಿಫತನ್ನು ಉಲಮಾಗಳ ಲೋಕದಲ್ಲಿ  ದೃಢೀಕರಿಸುವ ಇಜ್ಮಾಅ್ (ಒಮ್ಮತಾಭಿಪ್ರಾಯ)*


*♦️ಇಮಾಂ ಇಬ್ನ್ ಖುಝೈಮಾ (ರ)*

➖➖➖➖➖➖➖


ಹಿಜಿರಾ 220 ರ ವೇಳೆ ಜನಿಸಿದ ಪ್ರಸಿದ್ಧ ಮುಹದ್ದಿಸ್ ರವರಾದ

ಇಬ್ನ್ ಖುಝೈಮಾ (ರ)ರವರು ಅಲ್ಲಾಹನ ಸಿಫಾತ್ ಗಳನ್ನು ದೃಢಪಡಿಸುವ ಹಾಗೂ ಸ್ಥಾಪಿಸಲು  *ಕಿತಾಬು ತ್ತೌಹೀದ್* ಎಂಬ ಗ್ರಂಥವನ್ನೇ ರಚಿಸಿದ್ದಾರೆ.

( ಇಬ್ನ್ ಅಬ್ದುಲ್ ವಹಾಬ್ ರವರ ಕಿತಾಬ್ ತೌಹೀದಲ್ಲ)


ಅದರಲ್ಲಿ ಕಣ್ಣು, ಕಿವಿ, ಕೈ,ಕಾಲು ಮುಂತಾದ ಸಿಫಾತ್ ಗಳನ್ನು  ಅಧ್ಯಾಯವನ್ನು ಒಂದೊಂದಾಗಿ ಬರೆದಿದ್ದಾರೆ...



📚باب ذكر إثبات وجه الله


📚باب ذكر إثبات يدين الله


📚باب ذكر إثبات عينين الله


ಹೀಗೆ ಕಾಣಬಹುದು..


ಇಲ್ಲಿ ನಾವು ಅರ್ಥ ಮಾಡಬೇಕಾದ ವಿಷಯವೇನೆಂದರೆ ಅಲ್ಲಾಹನ ಸಿಫಾತ್'ಗಳಾದ ಕೈ ,ಮುಖ ಇವುಗಳ ಬಗ್ಗೆ ಅರಿಯುವಾಗ 


♦️تكييف - 

♦️تعطيل

♦️تمثيل

♦️تشبيه

ಇವುಗಳು ಮನಸ್ಸಿನಲ್ಲಿ ಓಡಾಡಬಾರದು.ಅಂದರೆ

ಅಲ್ಲಾಹನ ಸಿಫಾತ್ ಗಳಿಗೆ ಊಹೆಯಲ್ಲಿ ರೂಪ ನೀಡುವುದು,  ಮನುಷ್ಯರಿಗೆ ಹೋಲಿಕೆ ಮಾಡುವುದು ಕುಫ್ರ್ ಆಗಿದೆ. ಅಲ್ಲಾಹನ ಸಿಫಾತ್ ಬಗ್ಗೆ ಹೇಳುವಾಗ ಅದಕ್ಕೆ

ರೂಪವನ್ನು ಮಾಡಲು ಶ್ರಮಿಸುತ್ತಾರೆ.ಹಾಗೆ ಚಿಂತಿಸಿದಾಗ ಅದು ಅವರ .

ತಲೆಗೆ ನಿಲುಕುವುದಿಲ್ಲ.ಹಾಗೆ ಅವರು ಅದನ್ನು  ನಿಷೇಧಿಸುತ್ತಾರೆ.


*♦️ಇಮಾಂ ಶಾಫಿಈ (ರ)*


ಇನ್ನು ಸಾಕ್ಷಾತ್ ಇಮಾಂ ಶಾಫಿಈ (ರ) ರವರು ಸಿಫಾತ್ ಗಳ ಬಗ್ಗೆ ಹೇಳುವುದೇನೆಂದು ಅರಿಯೋಣ...


📚طبقات الحنابلة 

ಎಂಬ ಗ್ರಂಥದಲ್ಲಿ

 ಸನದ್ ಗಳೊಂದಿಗೆ ಇಮಾಂ ಶಾಫಿಈ ರವರು ಹೇಳಿದನ್ನು ಇಲ್ಲಿ ವರದಿ ಮಾಡುತ್ತೇನೆ..



قرأت على المبارك. قلت له: أخبرك محمد بن على بن الفتح. قال: أخبرنا على بن مردك. قال: أخبرنا عبد الرحمن بن أبى حاتم. قال: حدثنا يونس ابن عبد الأعلى المصرى قال: سمعت أبا عبد الله محمد بن إدريس الشافعى يقول

ಇಮಾಂ ಶಾಫಿಈ ರವರು ಹೇಳುವುದಾಗಿ ನಾನು ಕೇಳಿದ್ದೇನೆ..


 - وقد سئل عن صفات الله، وما ينبغى أن يؤمن به -؟


ಅಲ್ಲಾಹನ ಸಿಫಾತ್ ಗಳ ಬಗ್ಗೆ ಕೇಳಲ್ಪಟ್ಟಾಗ ಆ ವಿಷಯದಲ್ಲಿ ಹೇಗೆ ವಿಶ್ವಾಸವಿಡಬೇಕೆಂದು ಕೇಳಲ್ಪಟ್ಟಾಗ: 

 فقال:

 *ಇಮಾಂ ಶಾಫಿಈ ರವರು ಹೇಳಿದರು:*


لله تبارك وتعالى 

 وصفات جاء بها كتابه


ಅಲ್ಲಾಹನಿಗೆ ಹಲವು ನಾಮ ವಿಶೇಷಣಗಳಿವೆ.ಅವುಗಳನ್ನು ಕುರ್'ಆನಿನಲ್ಲಿ ವಿವರಿಸಲಾಗಿದೆ. 


. وأخبر بها نبيه صلّى الله عليه وسلم أمته،


ಅದನ್ನು ಮುಹಮ್ಮದ್ (ಸ) ರವರು ತಮ್ಮ ಉಮ್ಮತ್ ಗೆ ಕಲಿಸಿ ಕೊಟ್ಟಿದ್ದಾರೆ.



 

  .. أنَّه سميعٌ، -

 ಅಲ್ಲಾಹನು 

ಎಲ್ಲವನ್ನೂ ಕೇಳುವವನು.


.وأنَّ له يَدينِ، 

ಅಲ್ಲಾಹನಿಗೆ ಎರಡು ಕೈಗಳಿವೆ.


ಪುರಾವೆ:- 👇🏻

بقَولِه:📚


 *بَلْ يَدَاهُ مَبْسُوطَتَانِ،   (5:64)*


وأنَّ له يمينًا،

ಎರಡು ಕೈಗಳು ಕೂಡ ಬಲಗೈಯಾಗಿದೆ.


ಪುರಾವೆ:- 👇🏻

 *بقَولِه: 📚*

*وَالسَّمَوَاتُ مَطْوِيَّاتٌ بِيَمِينِهِ...  (39:67)*


ನಂತರ *ಇಮಾಂ ಶಾಫಿಈ ರವರು* ಹೇಳುವುದು ಗಮನವಿಟ್ಟು ಕೇಳಿ::🔈


*🚫. فإن خالف ذلك بعد ثبوت الحجة عليه فهو بالله كافر.* 


ಪ್ರಮಾಣ ವ್ಯಕ್ತವಾದ ಬಳಿಕ ಯಾರಾದರೂ ಅಲ್ಲಾಹನ ಮೇಲೆ ತಿಳಿಸಿದ ಸಿಫಾತ್ ಗಳನ್ನು ನಿಷೇಧಿಸಿದರೆ ಅವನು *ಕಾಫಿರ್* ಆಗಿರುವನು..


(ಅಂದರೆ ಸುನ್ನಿ ಉಸ್ತಾದರುಗಳಾದ ಎಪಿ ಕಾಂತಪುರಂ, ಪೇರೋಡ್, ಫಾರೂಕ್ ನ'ಈಮಿ, ಅಲವಿ ಸಖಾಫಿ ಮುಂತಾದವರು ಇಮಾಂ ಶಾಫಿಈ ರವರ ಪ್ರಕಾರ 

*ಕಾಫಿರ್....*)


ಇನ್ನೊಮ್ಮೆ ಪುನರಾವರ್ತಿಸುತ್ತೇನೆ.


♦️١ - أتانا أنه سميع


، 

*ಅಲ್ಲಾಹನಿಗೆ ಕಿವಿಗಳಿವೆ..*


♦️٢ - وأن له يدين بقوله (٦٤:٥ {بَلْ يَداهُ مَبْسُوطَتانِ}) وأن له يمينا بقوله (٦٧:٣٩ {وَالسَّماواتُ مَطْوِيّاتٌ بِيَمِينِهِ}) 


*ಅಲ್ಲಾಹನಿಗೆ ಕೈಗಳಿವೆ..*


♦️٣ - وأن له وجها بقوله (٨٨:٢٨ {كُلُّ شَيْءٍ هالِكٌ إِلاّ وَجْهَهُ}) وقوله (٢٧:٥٥ {وَيَبْقى وَجْهُ رَبِّكَ ذُو الْجَلالِ وَالْإِكْرامِ}) 


*ಅಲ್ಲಾಹನಿಗೆ ಮುಖವಿದೆ.*


♦️٤ - وأن له قدما بقول النبى صلّى الله عليه وسلم «حتى يضع الرب فيها قدمه» يعنى جهنم، 


*ಅಲ್ಲಾಹನಿಗೆ ಕಾಲುಗಳಿವೆ.*


♦️٥ - وأنه يضحك من عبده المؤمن بقول النبى صلّى الله عليه وسلم - للذى قتل فى سبيل الله -: «إنه لقى الله وهو يضحك إليه» 


*ಅಲ್ಲಾಹನು ನಗುತ್ತಾನೆ.*


♦️٦ - وأنه يهبط كل ليلة إلى سماء الدنيا بخبر رسول الله صلّى الله عليه وسلم بذلك. 



*ಎಲ್ಲಾ ರಾತ್ರಿಯಲ್ಲಿ ಅಲ್ಲಾಹನು ಇಳಿದು ಬರುತ್ತಾನೆ...*



♦️٧ - وأنه ليس بأعور بقول النبى صلّى الله عليه وسلم إذ ذكر الدجال فقال «إنه أعور، وإن ربكم ليس بأعور» وأن المؤمنين يرون ربهم يوم القيامة بأبصارهم، كما يرون القمر ليلة البدر، 


*ಅಲ್ಲಾಹನು ಕಣ್ಣುಗಳಿವೆ...*


♦️٨ - وأن له إصبعا بقول النبى صلّى الله عليه وسلم «ما من قلب إلا وهو بين إصبعين من أصابع الرحمن عزّ وجل»


*ಅಲ್ಲಾಹನಿಗೆ ಬೆರಳುಗಳಿವೆ..*



*ಓ ಸಮಸ್ತ*

*ಮುಸ್ಲಿಯಾರರೇ! ಪಶ್ಚಾತ್ತಾಪ ಪಟ್ಟು ಮರಳಿರಿ*!! ನಿಮ್ಮನ್ನು ನಿಮ್ಮ ಇಮಾಂ ಶಾಫಿಈ ರವರು ಕಾಫಿರ್ ಮಾಡಿದ್ದಾರೆ...



➖➖➖➖➖➖➖➖➖


*ಇಬ್ನ್ ಅಬ್ದುರ್ರಹ್ಮಾನ್🖊️*

ತೌಹೀದ್ ಮತ್ತು ತೌಹೀದ್‍ನ ವಿಧಗಳು.


*ಶಾಬ್ಧಿಕವಾಗಿ 'ತೌಹೀದ್ ಎಂದರೆ ಏಕೀಕರಿಸುವುದು ಅರ್ಥಾತ್ ಏಕತ್ವವನ್ನು ದೃಢೀಕರಿಸುವುದು ಎಂದಾಗಿದೆ.* ಇದು ಅರಬಿ ಪದವಾದ *“ವಹ್ಹದ'* ಎಂಬ ಕ್ರಿಯೆಯಿಂದ ಬಂದುದಾಗಿದೆ. ಇದರರ್ಥ: *ಏಕೀಕರಿಸುವುದು,* *ಒಂದಾಗಿಸುವುದು,* *ಕ್ರೋಢೀಕರಿಸುವುದು,* *ಒಗ್ಗೂಡಿಸುವುದು* ಎಂದಾಗಿದೆ.


*ತೌಹೀದ್ (ಏಕದೇವವಿಶ್ವಾಸ) ಅಂದರೆ ಅಲ್ಲಾಹನ ಪಾಲಕ ಪ್ರಭುತ್ವದಲ್ಲೂ, ಆರಾಧನೆಯು ಅವನಿಗೇ ಸಲ್ಲಬೇಕು ಎಂಬುದರಲ್ಲೂ ಅವನಿಗಿರುವಂತಹ ನಾಮಗಳಲ್ಲೂ, ಉನ್ನತ ಗುಣ ವಿಶೇಷಣಗಳಲ್ಲೂ ಅವನು ಏಕೈಕನೆಂದು ಒಪ್ಪಿಕೊಳ್ಳುವುದಾಗಿರುತ್ತದೆ.* ಈ ತೌಹೀದ್‌ನಲ್ಲಿ ಮೂರು ವಿಧಗಳಿವೆ.


ತೌಹೀದ್‌ನ ಮೂರು ವಿಧಗಳು:

1) *ತೌಹೀದ್ ಅರ್ರುಬೂಬಿಯ್ಯಃ* 

2) *ತೌಹೀದ್ ಅಲ್-ಉಲೂಹಿಯ್ಯಃ* 

3) *ತೌಹೀದ್ ಅಲ್-ಅಸ್ಮಾಇ ವಸ್ಸಿಫಾತ್*


ಮೊದಲನೆಯದು : *ತೌಹೀದ್ ಅರ್ರುಬೂಬಿಯ್ಯಃ (ಅಂದರೆ) ಅಲ್ಲಾಹು ಸೃಷ್ಟಿಕರ್ತನಾಗಿರುವನು ಹಾಗೂ ಅನ್ನಧಾರ ಒದಗಿಸುವವನಾಗಿರುವನು, ಎಲ್ಲವನ್ನೂ ಸೃಷ್ಟಿಸಿದವನು ಅವನೇ ಆಗಿರುವನು, ಅವನು ಎಲ್ಲದರ ಸೃಷ್ಟಿಕರ್ತನೂ ಅರಿಯುವವನೂ ಆಗಿರುವನು, ಅವನು ಭೂಮಿಯನ್ನು ಹಾಗೂ ಆಕಾಶವನ್ನು ಸೃಷ್ಟಿಸಿರುವನು, ಅವನು ಜಿನ್ನ್‌ಗಳನ್ನೂ ಮನುಷ್ಯರನ್ನೂ ಹಾಗೂ ಸಕಲ ವಸ್ತುಗಳನ್ನೂ ಸೃಷ್ಟಿಸಿರುವನು ಎಂದು ಓರ್ವ ವ್ಯಕ್ತಿಯು ವಿಶ್ವಾಸವಿಡುವುದಾಗಿದೆ.*


*اللَّهُ خَالِقُ كُلِّ شَيْءٍ ۖ وَهُوَ عَلَىٰ كُلِّ شَيْءٍ وَكِيلٌ*


*ಅಲ್ಲಾಹು ಎಲ್ಲ ವಸ್ತುಗಳ ಸೃಷ್ಟಿಕರ್ತನಾಗಿರುವನು. ಅವನು ಎಲ್ಲ ವಸ್ತುಗಳ ಮೇಲೂ ಕಾರ್ಯನಿರ್ವಾಹಕ ನಾಗಿರುವನು.*

[ಅಝ್ಝುಮರ್ : 62]


*وَمَا مِنْ دَابَّةٍ فِي الْأَرْضِ إِلَّا عَلَى اللَّهِ رِزْقُهَا*


*ಭೂಮಿಯಲ್ಲಿ ಯಾವುದೇ ಜೀವಿಯೂ ಇಲ್ಲ, ಅದಕ್ಕೆ ಅನ್ನಾಧಾರ ನೀಡುವ ಹೊಣೆಯನ್ನು ಅಲ್ಲಾಹು ವಹಿಸಿಕೊಂಡಿರುವ ಹೊರತು.*

[ಹೂದ್ : 6]


*قُلِ اللَّهُمَّ مَالِكَ الْمُلْكِ تُؤْتِي الْمُلْكَ مَنْ تَشَاءُ وَتَنْزِعُ الْمُلْكَ مِمَّنْ تَشَاءُ وَتُعِزُّ مَنْ تَشَاءُ وَتُذِلُّ مَنْ تَشَاءُ ۖ بِيَدِكَ الْخَيْرُ ۖ إِنَّكَ عَلَىٰ كُلِّ شَيْءٍ قَدِيرٌ*

*تُولِجُ اللَّيْلَ فِي النَّهَارِ وَتُولِجُ النَّهَارَ فِي اللَّيْلِ ۖ وَتُخْرِجُ الْحَيَّ مِنَ الْمَيِّتِ وَتُخْرِجُ الْمَيِّتَ مِنَ الْحَيِّ ۖ وَتَرْزُقُ مَنْ تَشَاءُ بِغَيْرِ حِسَابٍ*


*ಹೇಳಿರಿ: ‘ಓ ಆಧಿಪತ್ಯದ ಒಡೆಯನಾಗಿರುವ ಅಲ್ಲಾಹುವೇ! ನೀನಿಚ್ಛಿಸುವವರಿಗೆ ನೀನು ಆಧಿಪತ್ಯವನ್ನು ನೀಡುವೆ ಮತ್ತು ನೀನಿಚ್ಛಿಸುವವರಿಂದ ನೀನು ಆಧಿಪತ್ಯ ವನ್ನು ತೆಗೆದುಬಿಡುವೆ. ನೀನಿಚ್ಛಿಸುವವರನ್ನು ನೀನು ಗೌರವಿಸುವೆ ಮತ್ತು ನೀನಿಚ್ಛಿಸುವವರನ್ನು ನೀನು ಅವಮಾನ ಮಾಡುವೆ. ಒಳಿತಿರುವುದು ನಿನ್ನ ಕೈಯಲ್ಲಾಗಿದೆ. ಖಂಡಿತವಾಗಿಯೂ ನೀನು ಸಕಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವೆ.*

*ನೀನು ರಾತ್ರಿಯನ್ನು ಹಗಲಿನಲ್ಲಿ ನುಸುಳಿಸುವೆ ಮತ್ತು ಹಗಲನ್ನು ರಾತ್ರಿಯಲ್ಲಿ ನುಸುಳಿಸುವೆ. ನಿರ್ಜೀವಿ ಯಿಂದ ಜೀವವಿರುವುದನ್ನು ಹೊರತರುವೆ ಮತ್ತು ಜೀವವಿರುವುದರಿಂದ ನಿರ್ಜೀವಿಯನ್ನು ಹೊರತರುವೆ. ನೀನಿಚ್ಛಿಸುವವರಿಗೆ  ನೀನು ಲೆಕ್ಕವಿಲ್ಲದೆ ನೀಡುವೆ’.*

[ಆಲಿ 'ಇಮ್ರಾನ್ : 26 - 27]



ಎರಡನೆಯದು : *ತೌಹೀದ್ ಅಲ್-ಉಲೂಹಿಯ್ಯಃ (ಅಂದರೆ) ಅಲ್ಲಾಹುವಿನ ಹೊರತು ಆರಾಧನೆಗೆ ನೈಜವಾಗಿ ಅರ್ಹತೆಯುಳ್ಳವನು ಯಾರೂ ಇಲ್ಲವೆಂದು ವಿಶ್ವಾಸವಿಡುವುದಾಗಿದೆ. ಅಲ್ಲಾಹು ಹೇಳಿದನು:*


*فَاعْلَمْ أَنَّهُ لا إِلَهَ إِلَّا اللَّهُ وَاسْتَغْفِرْ لِذَنْبِكَ*


*“ಆದ್ದರಿಂದ ಖಂಡಿತವಾಗಿಯೂ ಅಲ್ಲಾಹುವಿನ ಹೊರತು ಆರಾಧಿಸಲ್ಪಡಲು ನೈಜ ಹಕ್ಕುದಾರರು ಯಾರೂ ಇಲ್ಲ ಎಂಬುದನ್ನು ತಾವು ಅರಿತುಕೊಳ್ಳಿರಿ ಹಾಗೂ ತಮ್ಮ ಪಾಪಕ್ಕಾಗಿ ಕ್ಷಮೆಯನ್ನು ಬೇಡಿರಿ.”* 

(ಕುರ್‌‍ಆನ್ 47 : 19)


*يَا أَيُّهَا النَّاسُ اعْبُدُوا رَبَّكُمُ الَّذِي خَلَقَكُمْ وَالَّذِينَ مِنْ قَبْلِكُمْ لَعَلَّكُمْ تَتَّقُونَ*

*الَّذِي جَعَلَ لَكُمُ الْأَرْضَ فِرَاشًا وَالسَّمَاءَ بِنَاءً وَأَنْزَلَ مِنَ السَّمَاءِ مَاءً فَأَخْرَجَ بِهِ مِنَ الثَّمَرَاتِ رِزْقًا لَكُمْ ۖ فَلَا تَجْعَلُوا لِلَّهِ أَنْدَادًا وَأَنْتُمْ تَعْلَمُونَ*


*ಓ ಮನುಷ್ಯರೇ! ನೀವು ನಿಮ್ಮನ್ನು ಮತ್ತು ನಿಮ್ಮ ಪೂರ್ವಿಕರನ್ನು ಸೃಷ್ಟಿಸಿದ ನಿಮ್ಮ ಪ್ರಭುವನ್ನು ಆರಾಧಿಸಿರಿ. ನೀವು ಭಯಭಕ್ತಿ ಪಾಲಿಸುವವರಾಗುವ ಸಲುವಾಗಿ.*

*ನಿಮಗೋಸ್ಕರ ಭೂಮಿಯನ್ನು ಹಾಸನ್ನಾಗಿ ಮತ್ತು ಆಕಾಶವನ್ನು ಮೇಲ್ಛಾವಣಿಯನ್ನಾಗಿ ಮಾಡಿಕೊಟ್ಟಿ ರುವ, ಹಾಗೂ ಆಕಾಶದಿಂದ ನೀರನ್ನು ಇಳಿಸಿ ತನ್ಮೂಲಕ ನಿಮಗೆ ಭಕ್ಷ್ಯಯೋಗ್ಯ ಫಲಗಳನ್ನು ಉತ್ಪಾದಿಸಿಕೊಟ್ಟಿರುವ (ಪ್ರಭುವನ್ನು ಆರಾಧಿಸಿರಿ). ಆದ್ದರಿಂದ (ಇವೆಲ್ಲವನ್ನೂ) ಅರಿತವರಾಗಿದ್ದೂ ಸಹ ನೀವು ಅಲ್ಲಾಹುವಿಗೆ ಪ್ರತಿಸ್ಪರ್ಧಿ ಗಳನ್ನು ಮಾಡದಿರಿ.*

[ಅಲ್-ಬಕರಃ : 21 - 22]


*وَمَا خَلَقْتُ الْجِنَّ وَالْإِنْسَ إِلَّا لِيَعْبُدُونِ*


*ನನ್ನನ್ನು ಆರಾಧಿಸುವುದಕ್ಕಾಗಿಯೇ ವಿನಾ ನಾನು ಜಿನ್ ಗಳನ್ನು ಮತ್ತು ಮನುಷ್ಯರನ್ನು ಸೃಷ್ಟಿಸಿಲ್ಲ.*

[ಅದ್ಝಾರಿಯಾತ್ : 56]




ಮೂರನೆಯದು : *ತೌಹೀದ್ ಅಲ್-ಅಸ್ಮಾಇ ವಸ್ಸಿಫಾತ್ (ಅಂದರೆ) ಅಲ್ಲಾಹು ತನ್ನ ನಾಮ ಹಾಗೂ ಗುಣ ವಿಶೇಷಣಗಳ ಬಗ್ಗೆ ಸ್ವತಃ ಅಲ್ಲಾಹು ಮತ್ತು ಅವನ ರಸೂಲ್(ﷺ) ಯಾವುದನ್ನೆಲ್ಲಾ ಹೇಳಿಕೊಟ್ಟಿರುವರೋ ಅವೆಲ್ಲವುಗಳಲ್ಲಿ ವಿಶ್ವಾಸವನ್ನು ಹೊಂದುವುದಾಗಿದೆ. ಅವನಿಗೆ ಅತ್ಯುತ್ತಮ ನಾಮಗಳು ಹಾಗೂ ಗುಣವಿಶೇಷಣಗಳಿವೆ, ಅವನಿಗೆ ಯಾವುದೇ ಹೋಲಿಕೆಯಿಲ್ಲ, ಅವನಿಗೆ ಯಾವುದೇ ಸರಿಸಾಟಿ ಇಲ್ಲ ಹಾಗೂ ಅವನಿಗೆ ಯಾವುದೇ ಪ್ರತಿಸ್ಪರ್ಧಿ ಇಲ್ಲ.*


*وَلِلَّهِ الأَسْمَاءُ الْحُسْنَى فَادْعُوهُ بِهَا*


*“ಅತ್ಯುತ್ತಮ ನಾಮಗಳಿರುವುದು ಅಲ್ಲಾಹುವಿಗಾಗಿದೆ. ಆದ್ದರಿಂದ ನೀವು ಅವನನ್ನು ಅವುಗಳಿಂದ (ಅವನ ಅತ್ಯುತ್ತಮ ನಾಮಗಳಿಂದ) ಕರೆಯಿರಿ.”* 

(ಕುರ್‌‍ಆನ್ 7 : 180)


*هُوَ اللَّهُ الَّذِي لَا إِلَٰهَ إِلَّا هُوَ ۖ عَالِمُ الْغَيْبِ وَالشَّهَادَةِ ۖ هُوَ الرَّحْمَٰنُ الرَّحِيمُ*

*هُوَ اللَّهُ الَّذِي لَا إِلَٰهَ إِلَّا هُوَ الْمَلِكُ الْقُدُّوسُ السَّلَامُ الْمُؤْمِنُ الْمُهَيْمِنُ الْعَزِيزُ الْجَبَّارُ الْمُتَكَبِّرُ ۚ سُبْحَانَ اللَّهِ عَمَّا يُشْرِكُونَ*

 *هُوَ اللَّهُ الْخَالِقُ الْبَارِئُ الْمُصَوِّرُ ۖ لَهُ الْأَسْمَاءُ الْحُسْنَىٰ ۚ يُسَبِّحُ لَهُ مَا فِي السَّمَاوَاتِ وَالْأَرْضِ ۖ وَهُوَ الْعَزِيزُ الْحَكِيمُ*


*ಅವನಾಗಿರುವನು ಅಲ್ಲಾಹು! ಅವನ ಹೊರತು ಅನ್ಯ ಆರಾಧ್ಯರಿಲ್ಲ. ಅವನು ಅಗೋಚರವಾಗಿರುವುದನ್ನು ಮತ್ತು ಗೋಚರವಾಗಿರುವುದನ್ನು ಅರಿಯುವವನಾಗಿರುವನು. ಅವನು ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವನು.*

*ಅವನಾಗಿರುವನು ಅಲ್ಲಾಹು! ಅವನ ಹೊರತು ಅನ್ಯ ಆರಾಧ್ಯರಿಲ್ಲ. ಅವನು ಸಾಮ್ರಾಟನೂ, ಪರಮ ಪಾವನನೂ, ಶಾಂತಿ ನೀಡುವವನೂ, ಅಭಯ ನೀಡುವವನೂ, ಮೇಲ್ನೋಟ ವಹಿಸುವವನೂ, ಪ್ರತಾಪಶಾಲಿಯೂ, ಸರ್ವಾಧಿಕಾರಿಯೂ ಮತ್ತು ಮಹತ್ವವುಳ್ಳವನೂ ಆಗಿರುವನು. ಅವರು ಸಹಭಾಗಿತ್ವ ಮಾಡುವುದರಿಂದ ಅಲ್ಲಾಹು ಪರಮ ಪಾವನನಾಗಿರುವನು.*

*ಅವನಾಗಿರುವನು ಅಲ್ಲಾಹು! ಅವನು ಸೃಷ್ಟಿ ಕರ್ತನೂ, ನಿರ್ಮಾತೃನೂ, ರೂಪ ನೀಡುವವನೂ ಆಗಿರುವನು. ಅವನಿಗೆ ಅತ್ಯುತ್ತಮವಾದ ನಾಮಗಳಿವೆ. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅವನ ಮಹಾತ್ಮೆಯನ್ನು ಕೊಂಡಾಡುತ್ತಿವೆ. ಅವನು ಪ್ರತಾಪ ಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.*

[ಅಲ್-ಹಶ್ರ್ : 22 - 24]



ಟಿಪ್ಪಣಿ : ತೌಹೀದ್ ಅಲ್ ಅಸ್ಮಾಅ್ ವಸ್ಸಿಫಾತ್ ಅಂದರೆ ಅವನು (ಅಲ್ಲಾಹು) ತನ್ನನ್ನು ತಾನೇ ಹೇಗೆ ಹೆಸರಿಸಿರುವನೋ ಮತ್ತು ವಿವರಿಸಿರುವನೋ, ಹಾಗೂ ಸಹೀಹ್ (ಅಧಿಕೃತ) ಹದೀಸ್ ವಚನಗಳಲ್ಲಿ ಹೇಗೆ ಅವನ ಸಂದೇಶವಾಹಕರು(ﷺ) ಅವನನ್ನು ವಿವರಿಸಿರುವರೋ ಮತ್ತು ಹೆಸರಿಸಿರುವರೋ ಅದೇ ರೀತಿ ಅಲ್ಲಾಹುವನ್ನು ಹೆಸರಿಸುವುದು ಮತ್ತು ವಿವರಿಸುವುದಾಗಿದೆ.


ಉದಾಹರಣೆಗೆ ಅಲ್ಲಾಹು العليم ಆಗಿರುವನು ಅರ್ಥಾತ್ ಎಲ್ಲದರ ಕುರಿತು ಅರಿವುಳ್ಳವನಾಗಿರುವನು. ಅಲ್ಲಾಹುವಿನ ಈ ಅತ್ಯುತ್ತಮ ನಾಮವು ಅವನ ಅತ್ಯುನ್ನತ ಹಾಗೂ ಸಮಗ್ರ ಗುಣವಿಶೇಷಣವಾದ ಪರಿಪೂರ್ಣ ಅರಿವು ಮತ್ತು ಜ್ಞಾನವನ್ನು ಸೂಚಿಸುತ್ತದೆ.


ಹೀಗೆ ಅವನ ಅತ್ಯುತ್ತಮ ನಾಮ ಹಾಗೂ ಅವನ ಅತ್ಯುನ್ನತ ಹಾಗೂ ಸಮಗ್ರ ಗುಣವಿಶೇಷಣಗಳನ್ನು (ಯಾವುದೇ ಸೃಷ್ಟಿಗಳಿಗೆ) ಹೋಲಿಸದೇ ಹಾಗೂ (ಯಾವುದೇ ಸೃಷ್ಟಿಗಳಿಗೆ) ಸಮಾನಗೊಳಿಸದೇ, ಹಾಗೂ (ಅವುಗಳಾವುದನ್ನೂ ಬಾಹ್ಯ ಅರ್ಥದಿಂದ ಸರಿಸಿ ತಪ್ಪಾಗಿ) ವ್ಯಾಖ್ಯಾನಿಸದೇ ಅಥವಾ (ಅವುಗಳಾವುದನ್ನೂ) ನಿರಾಕರಿಸದೇ ಅಲ್ಲಾಹುವಿಗೆ ದೃಢೀಕರಿಸುವುದಾಗಿದೆ.

ಲಾ ಇಲಾಹ ಇಲ್ಲಲ್ಲಾಹ್ ಹಾಗೂ ಅದರ ಶರತ್ತುಗಳು ಮತ್ತು ಪುರಾವೆಗಳು.


ಲಾ ಇಲಾಹ ಇಲ್ಲಲ್ಲಾಹ್ ಹಾಗೂ ಅದರ ಶರತ್ತುಗಳು ಮತ್ತು ಪುರಾವೆಗಳು.

ಲೇಖಕರು : ಅಶ್ಶೈಖ್ ಮುಹಮ್ಮದ್ ಬಿನ್ ಝೈದ್ ಅಲ್-ಮದ್‍ಖಲೀ (رحمة الله) 

ಪ್ರಶ್ನೆ: ಲಾ ಇಲಾಹ ಇಲ್ಲಲ್ಲಾಹ್ ಎಂಬುದರ ಅರ್ಥವೇನು?* ಅದರ ಮೂಲಭೂತ ಸ್ತಂಭಗಳು ಹಾಗೂ ಶರತ್ತುಗಳೇನು? ತಾವು ಹೇಳುವ ಉತ್ತರಕ್ಕೆ ಪುರಾವೆಗಳನ್ನು ನೀಡಿರಿ.

ಅಶ್ಶೈಖ್ ಮುಹಮ್ಮದ್ ಬಿನ್ ಝೈದ್ ಅಲ್-ಮದ್‍ಖಲೀ (رحمة الله) ರವರು ಉತ್ತರಿಸುತ್ತಾರೆ: 

ಲಾ ಇಲಾಹ ಇಲ್ಲಲ್ಲಾಹ್ ಎಂದರೆ, ಅಲ್ಲಾಹುವಿನ ಹೊರತು ಆರಾಧನೆಗೆ ನೈಜ ಹಕ್ಕುದಾರನು ಯಾರೂ/ಯಾವುದೂ ಇಲ್ಲ ಎಂದಾಗಿದೆ. ಅದಕ್ಕೆ ಎರಡು ಮೂಲಭೂತ ಸ್ತಂಭಗಳಿವೆ. ಅವುಗಳೆಂದರೆ:

1) النَّفْيُ

ಅನ್-ನಫ್‌ಯು - ಸಂಪೂರ್ಣ ನಿರಾಕರಣೆ.

2) الإِثْبَاتُ

ಅಲ್-ಇಸ್‌ಬಾತ್ -ಖಚಿತವಾಗಿ ಧೃಡೀಕರಣ.

‘ಲಾ ಇಲಾಹ’ ಎಂಬ ವಚನವು ಅಲ್ಲಾಹುವಿನ ಹೊರತು ಆರಾಧಿಸಲ್ಪಡುವ ಸರ್ವವನ್ನೂ ಸಂಪೂರ್ಣವಾಗಿ ನಿರಾಕರಣೆ ಮಾಡುವುದಾಗಿದೆ. ‘ಇಲ್ಲಲ್ಲಾಹ್’ ಎಂಬ ವಚನವು ಅಲ್ಲಾಹುವಿಗೆ ಏಕಮಾತ್ರವಾಗಿ ಯಾವುದೇ ಸಹಭಾಗಿಗಳಿಲ್ಲದೆ ಆರಾಧನೆಯನ್ನು ಅರ್ಪಿಸುವುದನ್ನು ಖಚಿತವಾಗಿ ಧೃಡೀಕರಿಸುವುದಾಗಿದೆ. 

ಮಹೋನ್ನತನಾದ ಅಲ್ಲಾಹು ಹೇಳಿದನು:

﴿فَمَن يَكْفُرْ بِالطَّاغُوتِ وَيُؤْمِن بِاللَّهِ فَقَدِ اسْتَمْسَكَ بِالْعُرْوَةِ الْوُثْقَىٰ لَا انفِصَامَ لَهَا ۗ وَاللَّهُ سَمِيعٌ عَلِيمٌ ‎٢٥٦﴾‏

“ಯಾರು ತಾಗೂತ್ಅನ್ನು (ಮಿಥ್ಯಾರಾಧ್ಯರನ್ನು) ಸಂಪೂರ್ಣವಾಗಿ ನಿರಾಕರಿಸುವನೋ ಮತ್ತು ಅಲ್ಲಾಹುವಿನಲ್ಲಿ ಖಚಿತವಾಗಿ ವಿಶ್ವಾಸವಿಡುವನೋ, ಅವನು ಮುರಿದುಹೋಗದ (ಅತ್ಯಂತ ಸುಭದ್ರವಾದ) ಪಾಶವೊಂದನ್ನು ಹಿಡಿದುಕೊಂಡಿರುವನು. ಅಲ್ಲಾಹು ಸರ್ವವನ್ನು ಆಲಿಸುವವನೂ, ಸರ್ವ-ಅರಿವುಳ್ಳವನೂ ಆಗಿರುವನು.” 

(ಸೂರಃ ಅಲ್-ಬಕರಃ 2:256)

(ಲಾ ಇಲಾಹ ಇಲ್ಲಲ್ಲಾಹ್) ಅದರ ಶರತ್ತುಗಳು ಏಳು ಆಗಿವೆ, ಅವುಗಳೆಂದರೆ:

1). العِلْمُ

ಅಲ್-ಇಲ್ಮ್ (ಅರಿವು):

ಅಂದರೆ ಅದರ ಅರ್ಥದ ಕುರಿತು ಹಾಗೂ ಆ (ಲಾ ಇಲಾಹ ಇಲ್ಲಲ್ಲಾಹ್) ಸಾಕ್ಷ್ಯವಚನವು ಯಾವುದನ್ನು ನಿರಾಕರಿಸುವುದೋ ಮತ್ತು ಧೃಡೀಕರಿಸುವುದೋ ಅದರ ಕುರಿತು ಅರಿವು ಹೊಂದಿರುವುದು. ಮಹೋನ್ನತನಾದ ಅಲ್ಲಾಹು ಹೇಳಿದನು :

إِلَّا مَن شَهِدَ بِالْحَقِّ وَهُمْ يَعْلَمُونَ ‎٨٦﴾‏

“ಅರಿತುಕೊಂಡು ಯಾರು ಸತ್ಯಕ್ಕೆ (ಅರ್ಥಾತ್ ಅಲ್ಲಾಹುವಿನ ಏಕತ್ವ, ಪ್ರವಾದಿತ್ವ ಹಾಗೂ ಅವನ ಸಂದೇಶವಾಹಕರುಗಳು ಯಾವ ಸಂದೇಶಗಳನ್ನು ತಂದಿರುವರೋ ಅವೆಲ್ಲವನ್ನೂ ಸತ್ಯವೆಂದು ತಮ್ಮ ನಾಲಗೆಯಲ್ಲಿ ಉಚ್ಛರಿಸಿ, ಹೃದಯದಲ್ಲಿ ಅಂಗೀಕರಿಸಿ ಅದರ ಅರಿವನ್ನು ಹೊಂದಿರುತ್ತಾ) ಸಾಕ್ಷ ವಹಿಸುವರೋ ಅವರ ಹೊರತು.”

(ಸೂರಃ ಅಝ್ಝುಖ್‌ರುಫ್ 43:86)

ಅರ್ಥಾತ್, ಅವರ ನಾಲಿಗೆಗಳು ಯಾವುದಕ್ಕೆ ಸಾಕ್ಷ್ಯ ವಹಿಸಿದೆಯೋ ಅದರ ಕುರಿತು ಅವರು ತಮ್ಮ ಹೃದಯದಿಂದ ಅರಿವು ಹೊಂದಿರುವರು.

2). اليَقِينُ

ಅಲ್-ಯಕೀನ್ (ದೃಢವಿಶ್ವಾಸ):

(ದೃಢವಿಶ್ವಾಸವನ್ನು ಹೊಂದುವುದು -ಇದು ಸಂಶಯಗಳನ್ನು ಹೋಗಲಾಡಿಸುವುದು ಅಥವಾ ಇಲ್ಲದಾಗಿಸುವುದು). ಯಾವುದನ್ನು ಅದು (ಲಾ ಇಲಾಹ ಇಲ್ಲಲ್ಲಾಹ್) ಸೂಚಿಸುವುದೋ ಅದರ ಕುರಿತು ಸಾಕ್ಷ್ಯವಹಿಸುವವನು -ಯಾವುದೇ ಸಂಶಯಗಳಿಲ್ಲದೇ- ಖಚಿತತೆಯನ್ನು ಹೊಂದಿರಬೇಕಾಗಿದೆ. ಯಾಕೆಂದರೆ ಖಂಡಿತವಾಗಿಯೂ, ಒಂದುವೇಳೆ ಅದನ್ನು ಹೇಳುವವನು ಯಾವುದನ್ನು ಅದು ಸೂಚಿಸುವುದೋ ಅದರ ಕುರಿತು ಸಂಶಯಪಡುವುದಾದರೆ, ಅದು ಅವನಿಗೆ ಯಾವುದೇ ಉಪಕಾರ ನೀಡದು. ಮಹೋನ್ನತನಾದ ಅಲ್ಲಾಹು ಹೇಳಿದನು :

﴿إِنَّمَا الْمُؤْمِنُونَ الَّذِينَ آمَنُوا بِاللَّهِ وَرَسُولِهِ ثُمَّ لَمْ يَرْتَابُوا﴾‏

“ಖಂಡಿತವಾಗಿಯೂ ಸತ್ಯವಿಶ್ವಾಸಿಗಳು ಅವರೇ, -ಯಾರೆಂದರೆ- ಅಲ್ಲಾಹುವಿನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ಖಚಿತವಾಗಿ ವಿಶ್ವಾಸವಿಟ್ಟು, ಅದರಲ್ಲಿ ಯಾವುದೇ ಸಂಶಯಪಡದವರು.”

(ಸೂರಃ ಅಲ್-ಹುಜರಾತ್ 49:15)

3). القَبُولُ

ಅಲ್-ಕಬೂಲ್ (ಸಂಪೂರ್ಣ ಅಂಗೀಕಾರ):

ಇದು ತಿರಸ್ಕಾರಕ್ಕೆ ವಿರುದ್ಧವಾಗಿದೆ. ಅಲ್ಲಾಹುವನ್ನು ಏಕಮಾತ್ರವಾಗಿ ಆರಾಧಿಸುವುದು ಮತ್ತು ಅವನ ಹೊರತು ಆರಾಧಿಸಲ್ಪಡುವ ಸರ್ವವನ್ನೂ ತ್ಯಜಿಸುವುದು – ಎಂಬ ಈ ಸಾಕ್ಷ್ಯವಚನವು ಅಗತ್ಯಗೊಳಿಸುವುದನ್ನು ಸಂಪೂರ್ಣವಾಗಿ ಅಂಗೀಕರಿಸುವುದು ಕಡ್ಡಾಯವಾದುದಾಗಿದೆ. ಯಾರು ಇದನ್ನು ಹೇಳಿ, ಸ್ವೀಕಾರವನ್ನು ಮಾಡದೆ, ಇದರಲ್ಲಿ ದೃಢವಾಗಿರುವುದಿಲ್ಲವೋ, -ಅವನು ಯಾರ ಕುರಿತು ಅಲ್ಲಾಹು (ಈ ಕೆಳಗಿನ ಆಯತ್‌ನಲ್ಲಿ) ಹೇಳಿರುವನೋ ಅವರ ಪೈಕಿ ಸೇರಿದವನಾಗಿರುವನು:

﴿إِنَّهُمْ كَانُوا إِذَا قِيلَ لَهُمْ لَا إِلَٰهَ إِلَّا اللَّهُ يَسْتَكْبِرُونَ ‎٣٥‏ وَيَقُولُونَ أَئِنَّا لَتَارِكُو آلِهَتِنَا لِشَاعِرٍ مَّجْنُونٍ ‎٣٦﴾‏

“ಖಂಡಿತವಾಗಿಯೂ, ಅವರೊಂದಿಗೆ ‘ಲಾ ಇಲಾಹ ಇಲ್ಲಲ್ಲಾಹ್ (ಅರ್ಥಾತ್ ಅಲ್ಲಾಹುವಿನ ಹೊರತು ಆರಾಧನೆಗೆ ನೈಜ ಹಕ್ಕುದಾರನು ಯಾರೂ ಇಲ್ಲ) ಎಂದು ಹೇಳಲಾದರೆ, ಅವರು ಅಹಂಕಾರ ಪಡುತ್ತಿದ್ದರು (ಅದನ್ನು ಸ್ವೀಕಾರ ಮಾಡದೆ ತಿರಸ್ಕರಿಸುತ್ತಿದ್ದರು). ಮತ್ತು “ಹುಚ್ಚನಾದ ಓರ್ವ ಕವಿಗಾಗಿ ನಾವು ನಮ್ಮ (ಮಿಥ್ಯ) ಆರಾಧ್ಯರುಗಳನ್ನು ಬಿಟ್ಟುಬಿಡಬೇಕೇ? ಎಂದು ಹೇಳುತ್ತಿದ್ದರು.”

(ಸೂರಃ ಅಸ್ಸಾಫಾತ್ 37:35-36)

4). الاِنْقِيَادُ

ಅಲ್-ಇನ್‌ಕಿಯಾದ್ (ಸಂಪೂರ್ಣ ಶರಣಾಗತಿ ಅಥವಾ ವಿಧೇಯತೆ):

 ಇದು ತೊರೆಯುವಿಕೆ ಅಥವಾ ತ್ಯಜಿಸುವಿಕೆಗೆ ವಿರುದ್ಧವಾಗಿದೆ.

ಈ ಸಾಕ್ಷ್ಯವಚನವು ಯಾವುದನ್ನು ಸೂಚಿಸುವುದೋ ಅದಕ್ಕೆ ಸಂಪೂರ್ಣವಾಗಿ ಶರಣಾಗುವುದು (ವಿಧೇಯತೆ ತೋರುವುದು) ಕಡ್ಡಾಯವಾಗಿದೆ. ಮಹೋನ್ನತನಾದ ಅಲ್ಲಾಹು ಹೇಳಿದನು:

﴿وَمَن يُسْلِمْ وَجْهَهُ إِلَى اللَّهِ وَهُوَ مُحْسِنٌ فَقَدِ اسْتَمْسَكَ بِالْعُرْوَةِ الْوُثْقَىٰ﴾‏

*“ಸತ್ಕರ್ಮವನ್ನು ಮಾಡುವವನಾಗಿದ್ದುಕೊಂಡು ತನ್ನ ಮುಖವನ್ನು (ಸ್ವತಃ ತನ್ನನ್ನು) ಅಲ್ಲಾಹುವಿಗೆ ಶರಣಾಗಿಸುವನೋ (ಅರ್ಥಾತ್ – ಅಲ್ಲಾಹುವಿಗಾಗಿ ನಿಷ್ಕಳಂಕತೆಯಿಂದ ಸತ್ಕಾರ್ಯವನ್ನೆಸಗಿ ಅವನ ಆಜ್ಞೆಗಳಿಗೆ ವಿಧೇಯನಾಗಿ ಅನುಸರಿಸುವನೋ) ಅವನು ಅತ್ಯಂತ ಸುಭದ್ರವಾದ ಪಾಶವೊಂದನ್ನು ಬಿಗಿಹಿಡಿದಿರುವನು.”* 

(ಸೂರಃ ಅಲ್-ಲುಕ್‌ಮಾನ್ 31:22)

ಅತ್ಯಂತ ಸುಭದ್ರವಾದ ಪಾಶವೆಂದರೆ: “ಅಲ್ಲಾಹುವಿನ ಹೊರತು ಆರಾಧನೆಗೆ ನೈಜ ಹಕ್ಕುದಾರನು ಯಾರೂ ಇಲ್ಲ” ಎಂಬ ಸಾಕ್ಷ್ಯವಚನವಾಗಿದೆ. ಮತ್ತು ‘ಶರಣಾಗತಿ’ ಎಂಬ ಪದದ ಅರ್ಥವು ಅವನು ಅಲ್ಲಾಹುವನ್ನು ನಿಷ್ಕಕಳಂಕದೊಂದಿಗೆ (ಪರಿಪೂರ್ಣ ಪ್ರಾಮಾಣಿಕತೆಯಿಂದ) ಅನುಸರಿಸುವನು ಎಂದಾಗಿದೆ.

5). الصِّدْقُ

ಅಸ್ಸಿದ್‌ಕ್ (ಸತ್ಯಸಂಧತೆ):

ಇದು ಸುಳ್ಳು ನುಡಿಗೆ ವಿರುಧ್ಧವಾಗಿದೆ. “ಅಲ್ಲಾಹುವಿನ ಹೊರತು ಆರಾಧನೆಗೆ ನೈಜ ಹಕ್ಕುದಾರನು ಯಾರೂ ಇಲ್ಲ” ಎಂದು ಓರ್ವನು ತನ್ನ ಹೃದಯಾಂತರಾಳದಿಂದ ಸತ್ಯಸಂಧನಾಗಿ ಹೇಳುವುದು ಅನಿವಾರ್ಯವಾಗಿದೆ. ಅವನೊಂದುವೇಳೆ ಅದನ್ನು (ಸಾಕ್ಷ್ಯವಚನವನ್ನು) ತನ್ನ ನಾಲಗೆಯಲ್ಲಿ ಉಚ್ಚರಿಸಿದರೂ ತನ್ನ ಹೃದಯದಲ್ಲಿ ಅದರ ( ಅರ್ಥಾತ್ – ಸಾಕ್ಷ್ಯವಚನದಲ್ಲಿ) ವಿಶ್ವಾಸವನ್ನು ಹೊಂದಿಲ್ಲವಾದರೆ ಅವನೋರ್ವ ಕಪಟವಿಶ್ವಾಸಿ ಹಾಗೂ ಸುಳ್ಳುಗಾರನಾಗಿರುವನು. ಮಹೋನ್ನತನಾದ ಅಲ್ಲಾಹು ಹೇಳಿದನು:

﴿وَمِنَ النَّاسِ مَن يَقُولُ آمَنَّا بِاللَّهِ وَبِالْيَوْمِ الْآخِرِ وَمَا هُم بِمُؤْمِنِينَ ٨‏ يُخَادِعُونَ اللَّهَ وَالَّذِينَ آمَنُوا وَمَا يَخْدَعُونَ إِلَّا أَنفُسَهُمْ وَمَا يَشْعُرُونَ ‎٩﴾‏

“ಜನರ ಪೈಕಿಯಿರುವ ಕೆಲವರು (ಅರ್ಥಾತ್ ಕಪಟವಿಶ್ವಾಸಿಗಳು) ಹೇಳುತ್ತಾರೆ : ನಾವು ಅಲ್ಲಾಹುವಿನ ಮೇಲೆ ಮತ್ತು ಅಂತ್ಯದಿನದ ಮೇಲೆ ವಿಶ್ವಾಸವಿಟ್ಟಿರುವೆವು. ಆದರೆ (ವಾಸ್ತವವಾಗಿ) ಅವರು ಸತ್ಯವಿಶ್ವಾಸಿಗಳಲ್ಲ. ಅವರು (ತಮ್ಮ ಕಪಟವಿಶ್ವಾಸದ ಮೂಲಕ) ಅಲ್ಲಾಹುನ್ನು ಹಾಗೂ ಸತ್ಯವಿಶ್ವಾಸಿಗಳನ್ನು ವಂಚಿಸಬಹುದೆಂದು ಭಾವಿಸಿರುವರು. ಆದರೆ ಅವರು ವಂಚಿಸುತ್ತಿರುವುದು ಸ್ವತಃ ತಮ್ಮನ್ನೇ ಆಗಿದೆ, ಅವರದನ್ನು ಗ್ರಹಿಸುವುದಿಲ್ಲ.”

(ಸೂರಃ ಅಲ್-ಬಕರಃ 2:8-9)

6). الإِخْلَاصُ

ಅಲ್-ಇಖ್‌ಲಾಸ್ (ನಿಷ್ಕಳಂಕತೆ ಮತ್ತು ಪ್ರಾಮಾಣಿಕತೆ): 

ಇದು ಶಿರ್ಕ್‌ಗೆ (ಅಲ್ಲಾಹುವಿನೊಂದಿಗೆ ಇತರರನ್ನು ಸಹಭಾಗಿಗಳನ್ನಾಗಿ ಮಾಡುವುದಕ್ಕೆ) ವಿರುದ್ಧವಾಗಿದೆ. ಇದು ಶಿರ್ಕ್‌ನ ಸರ್ವ ಕಳಂಕಗಳಿಂದಲೂ ಕರ್ಮಗಳನ್ನು ಶುದ್ಧೀಕರಿಸುವುದಾಗಿದೆ.

ಅಂದರೆ ಓರ್ವನು ಈ ವಚನವನ್ನು ಉಚ್ಚರಿಸುವುದು ಯಾವುದೇ ಐಹಿಕ ಲಾಭಗಳಿಸುವುದಕ್ಕಾಗಿ ಆಗಬಾರದು, ಅಥವಾ (ಜನರ ಮಧ್ಯೆ) ತೋರ್ಪಡಿಸುವಿಕೆಗಾಗಿಯೋ ಖ್ಯಾತಿಯನ್ನು ಗಳಿಸುವುದಕ್ಕಾಗಿಯೋ ಅವನು ಉದ್ದೇಶವನ್ನು ಹೊಂದಬಾರದಾಗಿದೆ. ಮಹೋನ್ನತನಾದ ಅಲ್ಲಾಹು ಹೇಳಿದನು:

﴿وَمَا أُمِرُوا إِلَّا لِيَعْبُدُوا اللَّهَ مُخْلِصِينَ لَهُ الدِّينَ حُنَفَاءَ﴾

“(ಅವರ ಗ್ರಂಥಗಳಲ್ಲಿ) ಅವರೊಡನೆ ಅಲ್ಲಾಹುವನ್ನು (ಏಕಮಾತ್ರವಾಗಿ) -ಶರಣಾಗತಿಯನ್ನು ಸಂಪೂರ್ಣವಾಗಿ ಅವನಿಗೆ ಮೀಸಲಿಟ್ಟು (ಅವನನ್ನು ತೌಹೀದ್‌ನೊಂದಿಗೆ)- ಆರಾಧಿಸುವಂತೆಯೇ ಹೊರತು ಇನ್ನೇನನ್ನೂ ಅವರಿಗೆ ಆದೇಶಿಸಲಾಗಿಲ್ಲ.”

(ಸೂರಃ ಅಲ್-ಬಯ್ಯಿನಃ 98:5)

ಸಹೀಹ್ಆದ ಹದೀಸ್‌ನಲ್ಲಿ, ಉತ್‌ಬಾನ್ (ರ) ರವರು ವರದಿಮಾಡುತ್ತಾರೆ, ಪ್ರವಾದಿ(ﷺ) ರವರು ಹೇಳಿದರು:

«إِنَّ اللَّهَ قَدْ حَرَّمَ عَلَى النَّارِ مَنْ قَالَ لاَ إِلَهَ إِلاَّ اللَّهُ، يَبْتَغِي بِذَلِكَ وَجْهَ اللَّهِ عَزَّ وَجَلَّ»

“ಯಾರು ಅಲ್ಲಾಹುವಿನ ಮುಖವನ್ನು ಅರಸಿಕೊಂಡು “ಅಲ್ಲಾಹುವಿನ ಹೊರತು ಆರಾಧನೆಗೆ ನೈಜ ಹಕ್ಕುದಾರನು ಯಾರೂ ಇಲ್ಲ” ಎಂದು (ಅದನ್ನು ಸಂಪೂರ್ಣವಾಗಿ ಅಂಗೀಕಾರದೊಂದಿಗೆ) ಹೇಳುತ್ತಾನೋ, ಖಂಡಿತವಾಗಿಯೂ ಅಲ್ಲಾಹು ಅವನಿಗೆ ನರಕಾಗ್ನಿಯನ್ನು ನಿಷಿದ್ಧಗೊಳಿಸಿರುವನು.”

(ಸಹೀಹ್ ಅಲ್-ಬುಖಾರಿ)

7). المَحَبَّةُ

ಅಲ್-ಮಹಬ್ಬಃ (ಪ್ರೀತಿ):

ಇದು ದ್ವೇಷಕ್ಕೆ ವಿರುಧ್ಧವಾಗಿದೆ. ಹಾಗಾಗಿ, ಈ (ಶಹಾದತ್‌ನ) ವಚನವು ಯಾವುದನ್ನು ಸೂಚಿಸುವುದೋ ಅದನ್ನು ಪ್ರೀತಿಸುವುದು (ಅರ್ಥಾತ್ – ಅಲ್ಲಾಹು, ಅವನ ರಸೂಲ್(ﷺ) ಇಸ್ಲಾಮ್ ದೀನ್ ಹಾಗೂ ಅಲ್ಲಾಹುವಿನ ಆಜ್ಞೆ ಮತ್ತು ನಿಷೇಧಗಳನ್ನು ಪಾಲಿಸುವ ಮುಸ್ಲಿಮರನ್ನು ಪ್ರೀತಿಸುವುದು) ಓರ್ವನ ಮೇಲೆ ಕಡ್ಡಾಯವಾದುದಾಗಿದೆ. ಅದು ಏನನ್ನು ಸೂಚಿಸುವುದೋ ಅದರಂತೆ ಕರ್ಮವೆಸಗುವ ಜನರನ್ನು ಅವನು ಪ್ರೀತಿಸಬೇಕಾಗಿದೆ. ಮಹೋನ್ನತನಾದ ಅಲ್ಲಾಹು ಹೇಳಿದನು:

﴿وَالَّذِينَ آمَنُوا أَشَدُّ حُبًّا لِّلَّهِ ۗ﴾

“ಆದರೆ ಯಾರು ಅಲ್ಲಾಹುವಿನ ಮೇಲೆ ಖಚಿತವಾಗಿ ವಿಶ್ವಾಸವಿಡುತ್ತಾರೋ ಅವರು ಅಲ್ಲಾಹುವನ್ನು (ಎಲ್ಲಕ್ಕಿಂತಲೂ) ಹೆಚ್ಚಾಗಿ ಪ್ರೀತಿಸುತ್ತಾರೆ.”

(ಸೂರಃ ಅಲ್-ಬಕರಃ 2:165)

ಹಾಗಾಗಿ ‘ಲಾ ಇಲಾಹ ಇಲ್ಲಲ್ಲಾಹ್’ ಅನ್ನು ಅಂಗೀಕರಿಸುವ ಜನರು ಅಲ್ಲಾಹುವನ್ನು ನಿಷ್ಕಳಂಕವಾಗಿ ಪ್ರೀತಿಸುತ್ತಾರೆ.

ಕೆಲವು ಉಲಮಾಗಳು ಎಂಟನೆಯದೊಂದು ಶರತ್ತನ್ನು ಸೇರಿಸಿದ್ದಾರೆ, ಅದೇನೆಂದರೆ:

8). الكُفْرُ

*ಅಲ್-ಕುಫ್ರ್ (ಅವಿಶ್ವಾಸ):* ಅಂದರೆ ಅಲ್ಲಾಹುವಿನ ಹೊರತು ಆರಾಧಿಸಲ್ಪಡುವ (ಸರ್ವ) ಮಿಥ್ಯಾರಾಧ್ಯರುಗಳನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕಾಗಿದೆ (ಅರ್ಥಾತ್ ಅವಿಶ್ವಾಸವಿಡಬೇಕಾಗಿದೆ ). ಮಹೋನ್ನತನಾದ ಅಲ್ಲಾಹು ಹೇಳಿದನು:

﴿فَمَن يَكْفُرْ بِالطَّاغُوتِ وَيُؤْمِن بِاللَّهِ فَقَدِ اسْتَمْسَكَ بِالْعُرْوَةِ الْوُثْقَىٰ لَا انفِصَامَ لَهَا ۗ وَاللَّهُ سَمِيعٌ عَلِيمٌ ٢٥٦﴾‏

“ಯಾರು ತಾಗೂತ್ಅನ್ನು (ಮಿಥ್ಯಾರಾಧ್ಯರನ್ನು) ಸಂಪೂರ್ಣವಾಗಿ ನಿರಾಕರಿಸುವನೋ ಮತ್ತು ಅಲ್ಲಾಹುವಿನಲ್ಲಿ ಖಚಿತವಾಗಿ ವಿಶ್ವಾಸವಿಡುವನೋ, ಅವನು ಮುರಿದುಹೋಗದ (ಅತ್ಯಂತ ಸುಭದ್ರವಾದ) ಪಾಶವೊಂದನ್ನು ಹಿಡಿದುಕೊಂಡಿರುವನು. ಅಲ್ಲಾಹು ಸರ್ವವನ್ನು ಆಲಿಸುವವನೂ, ಸರ್ವ-ಅರಿವುಳ್ಳವನೂ ಆಗಿರುವನು.”

(ಸೂರಃ ಅಲ್-ಬಕರಃ 2:256)

ಈ (ಶಹಾದತ್) ವಚನದ ಸಾಕ್ಷಾತ್ಕಾರವೇನೆಂದರೆ ಓರ್ವನು ಅಲ್ಲಾಹುವಿನ ಹೊರತು ಏನಲ್ಲಾ ಆರಾಧಿಸಲ್ಪಡುವುದೋ ಅವುಗಳೆಲ್ಲವನ್ನೂ ಎಲ್ಲಾ ವಿಧದಲ್ಲೂ ಸಂಪೂರ್ಣವಾಗಿ ನಿರಾಕರಿಸಬೇಕಾಗಿದೆ. ಅದರಂತೆಯೇ, ಅಲ್ಲಾಹುವನ್ನು ಏಕಮಾತ್ರವಾಗಿ -(ಅವನಿಗೆ) ಯಾವುದೇ ಸಹಭಾಗಿಗಳನ್ನು ಮಾಡದೆ- ಆರಾಧಿಸಬೇಕಾಗಿದೆ.


ಈ ವಚನದ ಮೂಲಕ (ಓರ್ವನ ಮೇಲಿರುವ) ಹೊಣೆಗಾರಿಕೆಯೇನೆಂದರೆ: ಓರ್ವನು (ಅಲ್ಲಾಹುವಿನ ಎಲ್ಲಾ) ಆಜ್ಞೆಗಳನ್ನು ಪಾಲಿಸುವುದಾಗಿದೆ ಹಾಗೂ (ಅಲ್ಲಾಹು ನಿರ್ದೇಶಿಸಿದ ಎಲ್ಲಾ) ನಿಷೇಧಿತ ಕಾರ್ಯಗಳಿಂದ ದೂರವುಳಿಯುವುದಾಗಿದೆ.

17 Apr 2024

ಹದೀಸ್‌ ನಿಷೇಧ 3.

 ಹದೀಸ್‌ ನಿಷೇಧ: ದೇಹದಿಂದ ಕತ್ತನ್ನು ಕೊಯ್ದು ಬೇರ್ಪಡಿಸುವ ವಿಕೃತವಾದವದು!


ಮದ್‌ಹಬ್‌ ಇಮಾಮ್‌ಗಳು ಇಸ್ಲಾಮೀ ಜಗತ್ತಿಗೆ ನೀಡಿದ ಕೊಡುಗೆಯೂ ಅನನ್ಯವಾದುದು. ಅಸಾಮಾನ್ಯವಾದುದು. ಹದೀಸ್‌ ಕ್ರೋಡೀಕರಣವಿಲ್ಲದ ಕಾಲದಲ್ಲಿ ಅವರು ಸಮಕಾಲೀನ ಮನುಷ್ಯರ ಸಮಸ್ಯೆಗಳಿಗೆ ದೈವಿಕ ಶಿಕ್ಷಣದ ಬೆಳಕಿನಲ್ಲಿ ಪರಿಹಾರ ಸೂಚಿಸುತ್ತಿದ್ದರು. ಜನರಿಗೆ ಬದುಕುವ ಕಲೆ ಮತ್ತು ಇಸ್ಲಾಮೀ ಶರೀಅತನ್ನು ಹಸ್ತಾಂತರಿಸುತ್ತಿದ್ದರು. ಧಾರಾಳ ಸವಾಲುಗಳನ್ನು ಎದುರಿಸಿದ ವಿದ್ವಾಂಸರವರು. ವಿಶೇಷತೆ ಏನೆಂದರೆ, ಅವರಲ್ಲಿ ಯಾರೂ ಕೂಡಾ ತಮ್ಮ ಅಭಿಪ್ರಾಯಗಳನ್ನು "ಮದ್‌ಹಬ್‌" ಎಂದು ಘೋಷಿಸಿ ಸಮಾಜದ ಮೇಲೆ ಹೇರಿಲ್ಲ. ಅಂಧಾನುಕರಣೆಗೆ ಅವಕಾಶ ನೀಡಲಿಲ್ಲ. ಬದಲಾಗಿ *ಮದ್‌ಹಬ್‌ ಇಮಾಮರುಗಳು ಎಷ್ಟು ಸೂಕ್ಷ್ಮತೆ, ಪ್ರಾಮಾಣಿಕತೆ ಪಾಲಿಸಿದರೆಂದರೆ:* "ನಾವು ಹೇಳಿದ್ದಕ್ಕೆ ವಿರುದ್ಧವಾಗಿ ನೀವು ಪ್ರವಾದಿವರ್ಯ(ಸ)ರ ಹದೀಸನ್ನು ಕಂಡರೆ, ನಮ್ಮ ಅಭಿಪ್ರಾಯಗಳನ್ನು ಬದಿಗಿಟ್ಟು ಪ್ರವಾದಿಚರ್ಯೆಗೆ ಹಿಂತಿರುಗಿರಿ ಮತ್ತು ನಮ್ಮ ಅಭಿಪ್ರಾಯವನ್ನು ತಿರಸ್ಕರಿಸಿರೆಂದು" ಅವರು ಸ್ವತಃ ಅವರ ಬಗ್ಗೆಯೇ ಹೇಳಿದ್ದಾರೆ. *ಆಧುನಿಕ ಹದೀಸ್‌ ನಿಷೇಧಿಗಳಂತೆ, ಅಲ್ಲಾಹನಿಗೇ ದೀನ್‌ ಕಲಿಸಲು ಹೊರಟಲಿಲ್ಲ. ಗೊತ್ತಿಲ್ಲದ್ದನ್ನು ಗೊತ್ತಿದೆ ಎಂಬ ಅಹಂಕಾರ ಮೆರೆಯಲಿಲ್ಲ.* (ಶಾಂತಂಪಾಪಂ)

*إذا صَحَّ الحَدِيثُ فَهُوَ مَذْهَبِي*

"ಹದೀಸ್‌ ದೃಢಪಟ್ಟರೆ ಅದುವೇ ನನ್ನ ಮದ್‌ಹಬ್‌ ಆಗಿದೆ" ಎಂಬುದು ಅವರೆಲ್ಲರ ಒಕ್ಕೊರಲಿನ ಘೋಷಣೆಯಾಗಿತ್ತು. ಅಂದರೆ ಇಸ್ಲಾಮಿನ ಧಾರ್ಮಿಕ ವಿಶ್ವಾಸ, ಆಚಾರ-ವಿಚಾರ, ಆರಾಧನೆ ಮತ್ತು ಜೀವನ ಶೈಲಿಗೆ ಕುರ್‌ಆನ್‌ ಮತ್ತು ಪ್ರವಾದಿಚರ್ಯೆಯೇ ಪುರಾವೆಯಾಗಿರಬೇಕು. ಇದು ಸತ್ಯವಿಶ್ವಾಸಿಗಳ ಮೇಲಿನ ಬಾಧ್ಯತೆಯಾಗಿದೆ. ಅದರ ಹೊರತು ಒಬ್ಬೊಬ್ಬ ಕಛೇರಿ ತೆರೆದು ಅವನವನಿಗೆ ತೋಚಿದಂತೆ ವ್ಯಾಖ್ಯಾನಿಸಿ ಹದೀಸ್‌ ಬೇಡವೆಂದರೆ ಈ ಸಮುದಾಯ ಎಲ್ಲೆಲ್ಲೋ ಅಲೆದಾಡಬೇಕಾಗುತ್ತದೆ.

*وَمَا كَانَ لِمُؤْمِنٍ وَلَا مُؤْمِنَةٍ إِذَا قَضَى اللَّهُ وَرَسُولُهُ أَمْرًا أَنْ يَكُونَ لَهُمُ الْخِيَرَةُ مِنْ أَمْرِهِمْ ۗ وَمَنْ يَعْصِ اللَّهَ وَرَسُولَهُ فَقَدْ ضَلَّ ضَلَالًا مُبِينًا*


"ಅಲ್ಲಾಹ್ ಮತ್ತು ಅವನ ಸಂದೇಶವಾಹಕರು ಯಾವುದಾದರೊಂದು ವಿಷಯದ ತೀರ್ಮಾನ ಮಾಡಿಬಿಟ್ಟರೆ ಆ ವಿಷಯದಲ್ಲಿ ಸ್ವತಃ ತೀರ್ಮಾನ ಕೈಗೊಳ್ಳುವ ಹಕ್ಕು (ಸತ್ಯವಿಶ್ವಾಸಿಗಳಾದ) ಯಾವ ಸ್ತ್ರೀ-ಪುರುಷರಿಗೂ ಇಲ್ಲ. ಯಾರಾದರೂ ಅಲ್ಲಾಹ್ ಮತ್ತು ಅವನ ಸಂದೇಶವಾಹಕರ ಆಜ್ಞೋಲ್ಲಂಘನೆ ಮಾಡಿದರೆ, ಅವನು ಸುವ್ಯಕ್ತ ಪಥಭ್ರಷ್ಟತೆಯಲ್ಲಿ ಬಿದ್ದುಬಿಟ್ಟನು."

*[ಪವಿತ್ರ ಕುರ್‌ಆನ್‌, 33:36]*


ವಾಸ್ತವದಲ್ಲಿ ಹದೀಸ್‌ನ ಪಾವನ ಆಶಯಗಳೇ ಕುರ್‌ಆನಿನ ವ್ಯಾಖ್ಯಾನ. ಇಸ್ಲಾಮೀ ಇತಿಹಾಸದುದ್ದಕ್ಕೂ ಉಲೆಮಾಗಳು ಅಂಗೀಕರಿಸಿದ ಸತ್ಯವದು. ಅವೆರೆಡನ್ನೂ ಬೇರ್ಪಡಿಸಿ ನನಗೆ ಕುರ್‌ಆನ್‌ ಮಾತ್ರ ಸಾಕು, ಹದೀಸ್‌ ಬೇಡ ಎಂಬ ಮೊಂಡುವಾದ, ದೇಹದಿಂದ ಕತ್ತನ್ನು ಕೊಯ್ದು ಬೇರ್ಪಡಿಸಿದಂತೆ. ಅದು ಕುರ್‌ಆನಿನ ಮೂಲ ಆಶಯಕ್ಕೇ ಕೊಡಲಿಯೇಟು ನೀಡಿದಂತೆ.

*مَنْ يُطِعِ الرَّسُولَ فَقَدْ أَطَاعَ اللَّهَ ۖ*

"ಯಾರು ರಸೂಲರನ್ನು ಅನುಸರಿಸುವನೋ ಖಂಡಿತವಾಗಿಯೂ ಅವನು ಅಲ್ಲಾಹನನ್ನು ಅನುಸರಿಸಿದನು."

*[ಪವಿತ್ರ ಕುರ್‌ಆನ್‌, 4:80]* ನೀವೇ ಯೋಚಿಸಿ. ಹದೀಸ್‌ ನಿಷೇಧಿಗಳಿಂದ ಕುರ್‌ಆನಿನ ಅರ್ಥ ಕಲಿಯಲು ಅಥವಾ ಗ್ರಾಮರ್‌ ಕಲಿಯಲು ಹೋದರೆ ನಮ್ಮ ಈಮಾನ್‌ ಎಲ್ಲಿಗೆ ತಲುಪಬಹುದು? ಧರ್ಮದ ವಿಷಯದಲ್ಲಿ ಆಧುನಿಕ ಹದೀಸ್‌ ನಿಷೇಧಿಗಳ ದುರ್ವ್ಯಾಖ್ಯಾನ ಅತ್ಯಂತ ಅಪಾಯಕರದ್ದು. ಹದೀಸ್‌ ಬೇಡವೆಂಬ ಸಿದ್ಧಾಂತವೇ ಮಾದಕ ವ್ಯಸನದಂತೆ. ಜನ ಬಹಳ ಬೇಗನೆ ಅದರತ್ತ ಆಕರ್ಷಿತರಾಗುತ್ತಾರೆ. ಏಕೆಂದರೆ ಅದು ಮೆಲ್ಲಮೆಲ್ಲನೆ ನಮಾಝ್, ಉಪವಾಸ... ಮತ್ತಿತರ ಆರಾಧನೆಗಳಿಂದ ಮುಕ್ತಿ ನೀಡುತ್ತದೆ. ಕೊನೆಗೆ ತಲುಪುವುದು ಮಾತ್ರ ನಾಸ್ತಿಕತೆಯತ್ತ. ಮತ್ತೆ ಅಲ್ಲಿಂದ ಹೊರಬರಲು ಸಾಧ್ಯವೇ ಇಲ್ಲ. ಆದ್ದರಿಂದ ಜಾಗೃತರಾಗೋಣ. ಈಮಾನ್‌ ಸಲಾಮತ್‌ಗಾಗಿ ದುಆ ಮಾಡೋಣ...


*✍️ ಮುಹಮ್ಮದ್ ಸಿದ್ದೀಕ್‌, ಜಕ್ರಿಬೆಟ್ಟು*

ಹದೀಸ್‌ ನಿಷೇಧ 2.

 ಹದೀಸ್‌ ನಿಷೇಧ: ದಾರ ಕಡಿದ ಗಾಳಿಪಟವದು!


 ಹೌದು, ಹದೀಸ್‌ ನಿಷೇಧಿಗಳಿಗೆ ಸರಿಯಾದ ತೀರ್ಮಾನಗಳಿಲ್ಲ. ನಿರ್ದಿಷ್ಟ ಗುರಿಯಿಲ್ಲ. ನೀವೇ ನೋಡಿ. "ಜುಮುಆ ನಮಾಝ್‌ಗಾಗಿ ಕರೆಯಲಾದಾಗ ನೀವು ವ್ಯಾಪಾರ ವಹಿವಾಟುಗಳನ್ನು ತೊರೆದು ಅಲ್ಲಾಹನ ಝಿಕ್‌ರ್‌ನೆಡೆಗೆ ಧಾವಿಸಿರಿ" ಎಂದು ಪವಿತ್ರ ಕುರ್‌ಆನ್‌ನಲ್ಲಿ ಹೇಳಲಾಗಿದೆ. *ಓ ಹದೀಸ್‌‌ ನಿಷೇಧಿಗಳೇ ಪ್ರಶ್ನೆಯೇನೆಂದರೆ,* ಜುಮುಆದ ದಿನ ಯಾವ ಸಮಯದಲ್ಲಿ ಕರೆಕೊಡಬೇಕು? ಯಾವ ನಮಾಝ್‌ಗಾಗಿ ಕರೆಯಬೇಕು ಮತ್ತು ಯಾವ ರೀತಿ ಕರೆ ನೀಡಬೇಕು? ಯಾವ ನಮಾಝ್‌ಗಾಗಿ ಕರೆಯಲಾಗುತ್ತಿದೆಯೋ, ಆ ನಮಾಝ್ ಎಷ್ಟು ರಕ‌ಅತ್‌ ಮತ್ತು ಹೇಗೆ ನಿರ್ವಹಿಸ ಬೇಕು? ಎಂಬಿತ್ಯಾದಿ ಪ್ರಶ್ನೆಗಳನ್ನು ಕುರ್‌ಆನಿನ ಬೆಳಕಿನಲ್ಲಿ ಪರಿಹರಿಸಿ ಕೊಡಲು "ಅಹ್ಲೆಕುರ್‌ಆನ್‌‌" ಎಂಬ ಮುದ್ದಾದ ವೇಷ ತೊಟ್ಟಿರುವ ನಿಮಗೆ ಕುರ್‌ಆನಿನ ಸೂಕ್ತಗಳ ಮೂಲಕ ಉತ್ತರಿಸಲು ಸಾಧ್ಯವೇ? ಈ ಫಿತ್ನವಾದಿಗಳಲ್ಲೇ ಹಲವು ವಿಭಾಗಗಳು. ಮೂರು ಹೊತ್ತಿನ ನಮಾಝಿಗಳೂ ಐದು ಹೊತ್ತಿನ ನಮಾಝಿಗಳೂ ಮತ್ತು ಇದ್ಯಾವುದೂ ಇಲ್ಲವೆಂದೂ ಮನಸ್ಸು ಶಾಂತವಾಗಿದ್ದರೆ, 'ಅದುವೇ ನಮಾಝ್‌, ಅದುವೇ ಉಪವಾಸ, ಅದುವೇ ಹಜ್ಜ್‌' ಎನ್ನುವಷ್ಟೂ ಮಾನಸಿಕ ಅಸ್ವಸ್ಥಕ್ಕೊಳಗಾಗಿದ್ದಾರೆ. ವಾಹನ ಚಲಾಯಿಸುತ್ತಿದ್ದಂತೆಯೇ ನಮಾಝ್‌ ನಿರ್ವಹಿಸುವವರೂ, ರಮಝಾನ್‌ನ ಹಗಲಲ್ಲಿ ಹೊಟ್ಟೆತುಂಬಾ ಮುಕ್ಕುವವರೂ, ಪವಿತ್ರ ಹಜ್ಜ್‌ನ್ನೇ ಅಣಕಿಸುವವರೂ ಅವರಲ್ಲಿದ್ದಾರೆ. ಐದು ಹೊತ್ತಿನ ನಮಾಝ್‌ನಲ್ಲಿ ಕಾಣದವರು ಜುಮಾ ನಮಾಝ್‌ನಲ್ಲಿ ಮಾತ್ರ ಇಣುಕಿ ಹೋಗುವುದರ ಮರ್ಮವೇನು? ಹದೀಸ್‌ ಬೇಡವೆನ್ನುವವರು ನಮಾಝ್‌ ನಿರ್ವಹಿಸಲು ಹೇಗೆ ತಾನೆ ಸಾಧ್ಯ? ಅದೇ ಹೇಳಿದ್ದು. ಹದೀಸ್‌ ನಿಷೇಧಿಗಳಿಗೆ ಸರಿಯಾದ ತೀರ್ಮಾನಗಳಿಲ್ಲ. *ದಾರ ಕಡಿದ ಗಾಳಿಪಟವದು. ಗುರಿಯಿಲ್ಲದ ಅಡ್ಡಾದಿಡ್ಡಿ ಅಲೆದಾಟ.*


ಏಕೆಂದರೆ, ನಮಾಝ್‌ನ ರಕ‌ಅತ್‌, ಅದರ ಕ್ರಮ, ಅದರಲ್ಲಿ ಪಠಿಸುವ ಝಿಕ್‌ರ್‌, ದುಆಗಳು ಮತ್ತು ಉಪವಾಸ ಹಾಗೂ ಹಜ್ಜ್‌ನ ವಿಧಿವಿಧಾನಗಳು ಇದ್ಯಾವುದೂ ಕುರ್‌ಆನಿನಲ್ಲಿಲ್ಲ, ಎಲ್ಲವೂ ಹದೀಸಲ್ಲಿದೆ. ನಿಜವಾಗಿ, ಹದೀಸ್‌ಗಳು ಕುರ್‌ಆನಿನ ವ್ಯಾಖ್ಯಾನಗಳಾಗಿವೆ. *ಆದ್ದರಿಂದ ಈ ಸ್ವ ಘೋಷಿತ ಯುಕ್ತಿವಾದಿಗಳು ಬರೀ ಹದೀಸ್‌ ನಿಷೇಧಿಗಳಲ್ಲ. ಕುರ್‌ಆನ್‌ ನಿಷೇಧಿಗಳು ಕೂಡಾ. ಅಂತಹವರನ್ನು "ಅಹ್ಲೆಕುರ್‌ಆನ್‌" ಎಂದು ಗುರುತಿಸುವುದೇ ತಪ್ಪು. ಕುರ್‌ಆನನ್ನೇ ನಿಷೇಧಿಸುವವರು "ಅಹ್ಲೆಕುರ್‌ಆನ್‌" ಆಗುವುದಾದರೂ ಹೇಗೆ?* (ಶಾಂತಂಪಾಪಂ) ನೀವು ಪವಿತ್ರ ಕುರ್‌ಆನನ್ನು ತೆರೆದು ನೋಡಿ. *ಸ್ವರ್ಗದವರು ನರಕದ ಹೊಂಡದಲ್ಲಿ ಬಿದ್ದು ಚಡಪಡಿಸುವವರೊಂದಿಗೆ ಕೇಳುವ ಪ್ರಶ್ನೆಯೊಂದನ್ನು ಕುರ್‌ಆನ್‌ ಉಲ್ಲೇಖಿಸಿದೆ.* ಮಾ ಸಲಕಕುಮ್ ಫೀ ಸಖರ್‌? ಅಂದರೆ, ಯಾವ ಕಾರಣಕ್ಕಾಗಿ ನೀವು ನರಕ ಯಾತನೆಗೆ ಬಿದ್ದಿರಿ? ಅಲ್ಲಾಹನ ಶಾಪ-ಕ್ರೋಧಕ್ಕೆ ಪಾತ್ರವಾದ ಆ ಅಪರಾಧಿಗಳು ನೀಡುವ ಮೊದಲ ಕಾರಣ, *لَمْ نَكُ مِنَ الْمُصَلِّينَ*

"ನಾವು ನಮಾಝ್ ಮಾಡುವವರಾಗಿರಲಿಲ್ಲ" ಎಂದಾಗಿತ್ತು. ನಮಾಝ್ ಎಂಬುದು ಬಹಳ ಮಹತ್ವದ ಆರಾಧನಾ ಕರ್ಮ. ಅದನ್ನು ಸಮಯಪಾಲನೆಯೊಂದಿಗೆ ಮತ್ತು ಪ್ರವಾದಿವರ್ಯ(ಸ)ರು ಕಲಿಸಿಕೊಟ್ಟ ಕ್ರಮದಂತೆ ನಿರ್ವಹಿಸ ಬೇಕೆಂದು ಸತ್ಯವಿಶ್ವಾಸಿಗಳಿಗೆ ತಾಕೀತು ನೀಡಲಾಗಿದೆ. ಒಟ್ಟಿನಲ್ಲಿ ಕುರ್‌ಆನ್‌ ಮತ್ತು ಹದೀಸ್‌ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದನ್ನು ಹಿಡಿದು ಮತ್ತೊಂದನ್ನು ತೊರೆಯುವಂತಿಲ್ಲ...

* يَوْمَ تُقَلَّبُ وُجُوهُهُمْ فِي النَّارِ يَقُولُونَ يَا لَيْتَنَا أَطَعْنَا اللَّهَ وَأَطَعْنَا الرَّسُولَا*

ಅವರ ಮುಖಗಳು ನರಕಾಗ್ನಿಯಲ್ಲಿ ಹೊರಳಾಡಿಸಲ್ಪಡುವ ದಿನ ಅವರು, "ಅಯ್ಯೋ! ನಾವು ಅಲ್ಲಾಹ್ ಮತ್ತು ಅವನ ರಸೂಲರ ಅನುಸರಣೆ ಮಾಡುತ್ತಿದ್ದರೆ!" ಎನ್ನುವರು. *[ಪವಿತ್ರ ಕುರ್‌ಆನ್‌]*

*وَأَطِيعُوا اللَّهَ وَالرَّسُولَ لَعَلَّكُمْ  تُرْحَمُونَ*


ಮತ್ತು ಅಲ್ಲಾಹನ ಹಾಗೂ ಸಂದೇಶವಾಹಕರ ಆಜ್ಞೆಯನ್ನು ಪಾಲಿಸಿರಿ. ನೀವು ಕೃಪಾರ್ಹರಾಗುವಿರೆಂದು ನಿರೀಕ್ಷಿಸಬಹುದು.

*[ಪವಿತ್ರ ಕುರ್‌ಆನ್‌]*

 *وَمَنْ يُطِعِ اللَّهَ وَالرَّسُولَ فَأُولَٰئِكَ مَعَ الَّذِينَ أَنْعَمَ اللَّهُ عَلَيْهِمْ مِنَ النَّبِيِّينَ وَالصِّدِّيقِينَ وَالشُّهَدَاءِ وَالصَّالِحِينَ ۚ وَحَسُنَ أُولَٰئِكَ رَفِيقًا*


ಅಲ್ಲಾಹ್ ಮತ್ತು ಸಂದೇಶವಾಹಕರನ್ನು ಅನುಸರಿಸುವವರು ಅಲ್ಲಾಹನಿಂದ ಸಕಲ ಸೌಭಾಗ್ಯಗಳನ್ನು ಹೊಂದಿದ ಪ್ರವಾದಿಗಳ, ಸತ್ಯಸಂಧರ, ಹುತಾತ್ಮರ ಮತ್ತು ಸಜ್ಜನರ ಸಹವಾಸದಲ್ಲಿರುವರು. ಅದೆಂತಹ ಉತ್ತಮ ಸಂಗಾತಿಗಳವರು! *[ಪವಿತ್ರ ಕುರ್‌ಆನ್‌]*


*✍️ ಮುಹಮ್ಮದ್‌ ಸಿದ್ದೀಕ್‌, ಜಕ್ರಿಬೆಟ್ಟು*

ಹದೀಸ್‌ ನಿಷೇಧ 1.

 ಹದೀಸ್‌ ನಿಷೇಧ:  ಈಮಾನನ್ನೇ ಕೊಳ್ಳೆ ಹೊಡೆಯುವ ಟೀಮ್‌ ಅದು!

ಪವಿತ್ರ ಕುರ್‌ಆನಿನ ಅನೇಕ ಕಡೆಗಳಲ್ಲಿ "ಯಾ ಅಯ್ಯುಹಲ್ಲಝೀನ ಆಮನೂ" ಓ ಸತ್ಯವಿಶ್ವಾಸಿಗಳೇ, ಎಂದು ಮುಅ್‌ಮಿನರನ್ನು ಅಭಿಸಂಬೋಧಿಸಲಾಗಿದೆ. ಓ ಹದೀಸ್‌ ನಿಷೇಧಿಗಳೇ... ಇಲ್ಲಿ ಈಮಾನ್‌ ಎಂದರೇನು? ಮುಅ್‌ಮಿನ್‌ ಅಂದರೆ ಯಾರು? ಆತ ಯಾರ ಮೇಲೆಲ್ಲ ಮತ್ತು ಯಾವುದರ ಮೇಲೆಲ್ಲ ವಿಶ್ವಾಸವಿಡಬೇಕು? ವಾಸ್ತವದಲ್ಲಿ, ಪ್ರವಾದಿವರ್ಯ(ಸ)ರ ಆಜ್ಞಾಪಾಲನೆ ಮಾಡಬೇಕೆಂದು ಪವಿತ್ರ ಕುರ್‌ಆನಿನ ಅನೇಕ ಕಡೆಗಳಲ್ಲಿ ಪದೇಪದೇ ಆದೇಶಿಸಲಾಗಿದೆ. ಹದೀಸ್‌ ನಿಷೇಧಿಗಳ ವಾದದಂತೆ, ಅದೆಲ್ಲವೂ ರಸೂಲರ ಜೀವನ ಕಾಲದಲ್ಲಿ ಮಾತ್ರ ಆಜ್ಞಾಪಾಲನೆ ಮಾಡಿದರೆ ಸಾಕೆಂಬುದು ಕುಫ್ರ್‌ನತ್ತ ಎಳೆದೊಯ್ಯುವ ಸಿದ್ಧಾಂತವಷ್ಟೇ. ವಾಸ್ತವದಲ್ಲಿ ಕುರ್‌ಆನ್‌ ಅಂತಹ ಯಾವುದೇ ಷರತ್ತನ್ನು ನೀಡಿಲ್ಲ. ಬದಲಾಗಿ,
*قُلْ أَطِيعُوا اللَّهَ وَالرَّسُولَ ۖ فَإِنْ تَوَلَّوْا فَإِنَّ اللَّهَ لَا يُحِبُّ الْكَافِرِينَ*
"ಹೇಳಿರಿ: ನೀವು ಅಲ್ಲಾಹ್ ಮತ್ತು ಸಂದೇಶವಾಹಕರನ್ನು ಅನುಸರಿಸಿರಿ. ಅವರೇನಾದರೂ ವಿಮುಖರಾಗುವುದಾದರೆ ಖಂಡಿತವಾಗಿಯೂ ಅಲ್ಲಾಹು ಸತ್ಯನಿಷೇಧಿಗಳನ್ನು ಪ್ರೀತಿಸಲಾರನು." *[ಪವಿತ್ರ ಕುರ್‌ಆನ್‌, 3:32]* ಎಂದು ಎಚ್ಚರಿಸಲಾಗಿದೆ. *ಇಲ್ಲಿ ಅಲ್ಲಾಹ್‌ ಮತ್ತು ರಸೂಲರ ಆಜ್ಞಾಪಾಲನೆಯನ್ನು ಪ್ರತ್ಯೇಕವಾಗಿ ಪ್ರಸ್ತಾಪಿಸದೆ, ಜತೆಜತೆಯಾಗಿ ಪ್ರಸ್ತಾಪಿಸಲಾಗಿದೆ. ಸಾಲದ್ದಕ್ಕೆ ರಸೂಲರ ಆಜ್ಞಾಪಾಲನೆ ಮಾಡದವರನ್ನು ಕಾಫಿರರೆನ್ನಲಾಗಿದೆ. ಹದೀಸ್‌ ನಿಷೇಧಿಗಳು ಕಾಫಿರ್‌ಗಳು ಎಂದರ್ಥವಲ್ಲವೇ?* ಒಂದು ವೇಳೆ ರಸೂಲರು ಜನರಿಗೆ ಅಲ್ಲಾಹನ ಆದೇಶಕ್ಕೆ ವಿರುದ್ಧವಾದ ಆದೇಶಗಳನ್ನು ಕೊಡುವ ಸಾಧ್ಯತೆ ಇರುತ್ತಿದ್ದರೆ, ಖಂಡಿತವಾಗಿಯೂ ಅಲ್ಲಾಹನು ಆ ಬಗ್ಗೆ ಜನರಿಗೆ ಮುನ್ನೆಚ್ಚರಿಕೆ ನೀಡುತ್ತಿದ್ದನು. ಆದರೆ ಕುರ್‌ಆನ್‌ನಲ್ಲೆಲ್ಲೂ ರಸೂಲರ ಕುರಿತು ಅಂತಹ ಯಾವುದೇ ಸಂಶಯವಾಗಲೀ ಗೊಂದಲಗಳಾಗಲೀ ಇಲ್ಲ. ರಸೂಲರ ವಿರುದ್ಧ ಗೊಂದಲ ಹರಡುವ ಅರ್ಬುದ ರೋಗ ಹದೀಸ್‌ ನಿಷೇಧಿಗಳಿಗೆ ಮಾತ್ರವಿದೆ. ಇದಕ್ಕೆ ತದ್ವಿರುದ್ಧವಾಗಿ ಕುರ್‌ಆನ್‌ನಲ್ಲಿ ಪ್ರವಾದಿ ಮುಹಮ್ಮದ್(ಸ)ರ ಕುರಿತು, "
*وَمَا يَنْطِقُ عَنِ الْهَوَىٰ إِنْ هُوَ إِلَّا وَحْيٌ يُوحَىٰ*
"ಅವರು ತಮ್ಮಿಷ್ಟದಂತೆ ಮಾತನಾಡುವುದಿಲ್ಲ. ಅದು ಅವರಿಗೆ ನೀಡಲಾಗುವ ವಹ್ಯ್‌(ದಿವ್ಯವಾಣಿ) ಆಗಿದೆ" ಎಂದು ಹೇಳಲಾಗಿದೆ. *[ಪವಿತ್ರ ಕುರ್‌ಆನ್‌, 53:3,4]*
ಇಲ್ಲಿನ ಹದೀಸ್‌ ನಿಷೇಧಿಗಳಂತೆ ಸುಳ್ಳುಗಳನ್ನು ಹರಡಿ, ಕುರ್‌ಆನನ್ನು ತಮಗೆ ತೋಚಿದಂತೆ ದುರ್ವ್ಯಾಖ್ಯಾನಿಸಿ ಜನಸಾಮಾನ್ಯರ ಈಮಾನ್‌ ನಾಶಮಾಡುವ ಪಾಪಕೃತ್ಯವನ್ನು ಪ್ರವಾದಿಗಳೆಂದೂ ಮಾಡಿಲ್ಲ. (ಶಾಂತಂಪಾಪಂ) ಒಟ್ಟಿನಲ್ಲಿ *"ರಸೂಲರ ಆಜ್ಞಾಪಾಲನೆ ಮಾಡಿದವನು, ಅಲ್ಲಾಹನ ಆಜ್ಞಾಪಾಲನೆ ಮಾಡಿದಂತೆ" ಮತ್ತು ಇದಕ್ಕೆ ಸಮಾನವಾದ ಮತ್ತಿತರ ಕುರ್‌ಆನಿನ ಸಂದೇಶಗಳನ್ನು "ಅಹ್ಲೆ ಕುರ್‌ಆನ್‌" ಎಂಬ ವೇಷತೊಟ್ಟಿರುವ ಹದೀಸ್‌ ನಿಷೇಧಿಗಳು ಕಂಡೂ ಕಾಣದಂತೆ ನಟಿಸುತ್ತಿದ್ದಾರೆ. ಜನರನ್ನು ದಾರಿ ತಪ್ಪಿಸಲು "ಅಹ್ಲೆ ಕುರ್‌ಆನ್‌" ಎಂಬ ಚಂದದ ಮುಖವಾಡ ಧರಿಸಿ ಬಲೆ ಬೀಸುತ್ತಿದ್ದಾರೆ.* ಒಟ್ಟಿನಲ್ಲಿ ಅಲ್ಲಾಹನು ತನ್ನ ಸಂದೇಶವಾಹಕರನ್ನು ಮಾದರೀ ಪುರುಷರೆಂದು ಘೋಷಿಸಿ, ಅವರ ಬದುಕನ್ನು ಅನುಕರಣಾಯೋಗ್ಯವೆಂದು ಸಾರಿದ್ದಾನೆ. ಅಲ್ಲಾಹನ ಸಂತೃಪ್ತಿ ಹಾಗೂ ಪರಲೋಕ ಮೋಕ್ಷ ಸಂಪಾದಿಸಲು ಹಾತೊರೆಯುವವರ ಮೇಲೆ ಪ್ರವಾದಿವರ್ಯ(ಸ)ರ ಅನುಸರಣೆಯನ್ನು ಕಡ್ಡಾಯಗೊಳಿಸಿದ್ದಾನೆ ಮತ್ತು ಅದರಿಂದ ಮುಖ ತಿರುಗಿಸುವುದು ಕುಫ್ರ್‌ ಎಂದೂ ಮುನ್ನೆಚ್ಚರಿಕೆ ನೀಡಿದ್ದಾನೆ. ಅಲ್ಲಾಹನ ವತಿಯಿಂದ ಅವತೀರ್ಣಗೊಂಡಿರುವ ಆದೇಶಗಳು ಮತ್ತು ನಿಷೇಧಗಳು ಬರೀ ಕುರ್‌ಆನ್‌ನಲ್ಲಿರುವುದು ಮಾತ್ರವಾಗಿರದೆ, ಸ್ವತಃ ಪ್ರವಾದಿವರ್ಯ(ಸ)ರು ಆದೇಶಿಸುವ ಮತ್ತು ಅವರು ನಿಷೇಧಿಸುವ ಕಾರ್ಯಗಳೂ ದೀನುಲ್‌ ಇಸ್ಲಾಮ್‌ನ ಬುನಾದಿಗಳಾಗಿವೆ. ಪವಿತ್ರ ಕುರ್‌ಆನ್‌ ಅದನ್ನೂ ಬೊಟ್ಟು ಮಾಡಿ ಹೇಳಿದೆ:

*وَمَا آتَاكُمُ الرَّسُولُ فَخُذُوهُ وَمَا نَهَاكُمْ عَنْهُ فَانْتَهُوا ۚ وَاتَّقُوا اللَّهَ ۖ إِنَّ اللَّهَ شَدِيدُ الْعِقَابِ*
"ರಸೂಲರು ನಿಮಗೆ ಏನು ಕೊಡುವರೋ ಅದನ್ನು ಸ್ವೀಕರಿಸಿಕೊಳ್ಳಿರಿ ಮತ್ತು ಯಾವುದರಿಂದ ಅವರು ನಿಮ್ಮನ್ನು ತಡೆಯುವರೋ ಅದರಿಂದ ದೂರವಿರಿ. ಅಲ್ಲಾಹನನ್ನು ಭಯಪಡಿರಿ. ಅಲ್ಲಾಹನು ಕಠಿಣವಾಗಿ ಶಿಕ್ಷಿಸುವವನಾಗಿರುತ್ತಾನೆ." *ಪ್ರವಾದಿವರ್ಯ(ಸ)ರಿಗೆ ನೀಡಲಾಗಿರುವ ಈ ಒಂದು ಉತ್ಕೃಷ್ಟ ಸ್ಥಾನಮಾನವನ್ನು ಒಪ್ಪಿಕೊಳ್ಳುವುದು ತಕ್ವಾ(ದೇವಭಯ)ದ ಮಾನದಂಡವಾಗಿದೆ ಮತ್ತು ಅದರಿಂದ ಹಿಂಜರಿಯುವುದು ಅಥವಾ ಅದನ್ನು ನಿರಾಕರಿಸುವುದು ಕಠಿಣ ಶಿಕ್ಷೆಗೆ ಹೇತುವಾಗಲಿದೆಯೆಂದೂ ಎಚ್ಚರಿಕೆ ನೀಡಲಾಗಿದೆ.* ಆದ್ದರಿಂದ ಅಲ್ಲಾಹನ ಧರ್ಮಕ್ಕಾಗಿ ಪ್ರಾಮಾಣಿಕವಾದ ತ್ಯಾಗ ಬಲಿದಾನಗಳನ್ನು ಅರ್ಪಿಸಿ ಹದೀಸನ್ನು ಕ್ರೋಡೀಕರಿಸಿ ಹಸ್ತಾಂತರಿಸಿದ ಜಗದ್ವಿಖ್ಯಾತ ಅಗ್ರಗಣ್ಯ ಮಹದ್ದಿಸ್‌ಗಳಿಗೂ ಕಾಲಘಟ್ಟದ ಕುರ್‌ಆನ್‌ ವ್ಯಾಖ್ಯಾನಕಾರರಿಗೂ ಪರಿಚಯವಿಲ್ಲದ, ಆಧುನಿಕ ಹದೀಸ್ ನಿಷೇಧಿಗಳ ಮೊಂಡುವಾದಗಳು ಅತ್ಯಂತ ಅಪಾಯಕರದ್ದು. ಆದ್ದರಿಂದ ಸಮುದಾಯವೇ, ಹದೀಸ್‌ ನಿಷೇಧಿಗಳ ಶರ್ರ್ ನಿಂದ ಜಾಗರೂಕರಾಗಿರಿ. ಈಮಾನ್‌ ಕಳೆದುಕೊಂಡು ಅಂತಹವರಿಂದ ಕುರ್‌ಆನಿನ ಅರ್ಥ ಅಥವಾ ಗ್ರಾಮರ್‌ ಕಲಿತು ಏನಾಗಲಿಕ್ಕಿದೆ?

*✍️ ಮುಹಮ್ಮದ್ ಸಿದ್ದೀಕ್‌, ಜಕ್ರಿಬೆಟ್ಟು*

16 Jan 2024

ತೌಹೀದ್ ಅಜೇಯವಾಗಿದೆ.

* ತೌಹೀದ್ ಅಜೇಯವಾಗಿದೆ.*


*ಅಲ್ಲಾಹೇತರರೊಂದಿಗೆ ಅಬೌತಿಕವಾದ ಮಧ್ಯಸ್ಥಿಕೆ ಎಲ್ಲವೂ ಶಿರ್ಕ್ ಆಗಿದೆ. ಬೌತಿಕವಾದ ಮಧ್ಯಸ್ಥಿಕೆ ಯಾವುದೂ ಶಿರ್ಕ್ ಅಲ್ಲ.*


*ಅಬೌತಿಕ ಎಂದರೆ ಅಲ್ಲಾಹನಿಗೆ ಮಾತ್ರ ಇರುವ ಮಧ್ಯಸ್ತಿಕೆಯಾಗಿದೆ, ಪ್ರಾರ್ಥನೆ ಆಗಿದೆ.*


*ಬೌತಿಕ ಎಂದರೆ ಅಲ್ಲಾಹನು ಸೃಷ್ಟಿಯೊಂದಿಗೆ ನಿಶ್ಚಯಿಸಿದ ಮಧ್ಯಸ್ತಿಕೆಯಾಗಿದೆ, ಇದರಲ್ಲಿ ಪ್ರಾರ್ಥನೆ ಇಲ್ಲ, ಇದು ಶಿರ್ಕ್ ಅಲ್ಲ.*


*ಒಂದು ವಿಷಯ ಪ್ರಾರ್ಥನೆಯಾಗುವುದು ಅಬೌತಿಕವಾಗಿ ಮಧ್ಯಸ್ತಿಕೆ ವಹಿಸುವುದರೊಂದಿಗೆ ಮಾತ್ರವಾಗಿದೆ.*


*ಒಂದು ವಿಷಯದಲ್ಲಿ ಪ್ರಾರ್ಥನೆ ಇಲ್ಲದಿದ್ದರೆ ಅದು ಅಬೌತಿಕ ಮಧ್ಯಸ್ತಿಕೆ ಅಲ್ಲ, ಅದು ಶಿರ್ಕ್ ನ ಗಣದಲ್ಲಿ ಒಳಪಡುವುದೂ ಇಲ್ಲ.*


*ಶಿರ್ಕ್, ತೌಹೀದ್ ನ ನಡುವೆ ಇರುವ ಮಹಾ ತಡೆಗೋಡೆ ಅಬೌತಿಕತೆಯಾಗಿದೆ.*


*ಶಿರ್ಕ್, ತೌಹೀದ್ ಬೇರೆ ಬೇರೆಯಾಗುವುದೇ ಅಬೌತಿಕತೆಯಿಂದಾಗಿದೆ.*


*👆🏽ಇದನ್ನು ಯಾವಾಗಲೂ ನೆನಪಿನಲ್ಲಿ ಇಟ್ಟರೆ ನಾವೆಲ್ಲರೂ ಯಾವತ್ತೂ ದಾರಿ ತಪ್ಪುವುದಿಲ್ಲ.*


👆🏽ಇದು ಬರೆದಾಗ ಒಂದು ಗ್ರೂಪಿನಲ್ಲಿ ಅಂಧ ವಿಶ್ವಾಸದ ಕುರಿತು ಸಹೋದರರೊಬ್ಬರು ಬರೆದರು.


ಅದಕ್ಕೆ ಪೂರಕವಾಗಿ ಈ ರೀತಿ ಬರೆದೆ👇🏽


ಮೂಡ ವಿಶ್ವಾಸಗಳು ಪ್ರಾರ್ಥನೆಯಲ್ಲಿ ಒಳಪಡುವವುಗಳು ಶಿರ್ಕ್ ಆಗಿದೆ.


ಪ್ರಾರ್ಥನೆಯಲ್ಲಿ ಒಳಪಡದವುಗಳು ವಸೀಲತು ಶಿರ್ಕ್ ಆಗಿದೆ, ಹರಾಮ್ ಆಗಿದೆ.


ಪ್ರಾರ್ಥನೆ ಎಂದರೆ ಅಬೌತಿಕವಾಗಿ ನಾವು ದಿನ ನಿತ್ಯ ನಿರ್ವಹಿಸುವ ಕರ್ಮಗಳಾಗಿವೆ. 

ಅಲ್ಲಾಹನ ವಜ್ಹ್ ಉದ್ದೇಶಿಸಿ ನಾವು ನಿರ್ವಹಿಸುವ ಉಪವಾಸ ಪ್ರಾರ್ಥನೆಯಾಗಿದೆ, ಝಕಾತ್ ಪ್ರಾರ್ಥನೆಯಾಗಿದೆ, ದಾನಧರ್ಮ ಪ್ರಾರ್ಥನೆಯಾಗಿದೆ, ಕೆಟ್ಟ ಕಾರ್ಯಗಳಿಂದ ಅಲ್ಲಾಹನನ್ನು ಭಯಪಟ್ಟು ನಮ್ಮನ್ನು ನಾವು ಸಂರಂಕ್ಷಿಸುವುದು ಪ್ರಾರ್ಥನೆಯಾಗಿದೆ. ಇದೆಲ್ಲವೂ ಪ್ರಾರ್ಥನೆಯ ಪರಧಿಯಲ್ಲಿ ಒಳಪಡುವುದಾಗಿದೆ.


ವಸೀಲತು ಶಿರ್ಕ್ ಎಂದರೆ ಶಿರ್ಕ್ ಗೆ ಇರುವ ದಾರಿಯಾಗಿದೆ. 

ಆದಂ (ಅಸ) ರ 10 ತಲೆಮಾರುಗಳಲ್ಲಿ ಶಿರ್ಕ್ ಸಂಭವಿಸಲಿಲ್ಲ. ಆದರೆ ಪ್ರವಾದಿಗಳಿಲ್ಲದ ಕಾಲಘಟ್ಟದಲ್ಲಿ ಅವರಲ್ಲಿ ಅಂಧವಿಶ್ವಾಸಗಳಿತ್ತು, ಅವರು ಶೈತಾನನ ಆಜ್ಞೆಯಂತೆ ಮೊದಲನೆಯದಾಗಿ ಕುರ್ಆನಿನಲ್ಲಿ ಹಸರಿಸಲ್ಪಟ್ಟ ಐದು ಮಹಾನ್ ವ್ಯಕ್ತಿಗಳ ಕಬರ್ಗಳನ್ನು ಗುರುತಿಸತೊಡಗಿದರು ಆದರೆ ಅವರಲ್ಲಿ ಶಿರ್ಕ್ ಸಂಭವಿಸಲಿಲ್ಲ, ನಂತರ ಶೈತಾನನ ಆಜ್ಞೆಯಂತೆ ಮಹತ್ವೀಕರಿಸಿದರು ಆದರೂ ಶಿರ್ಕ್ ಸಂಭವಿಸಲಿಲ್ಲ, ನಂತರ ಶೈತಾನನ ಆಜ್ಞೆಯಂತೆ ಆ ಐದು ಮಹಾನ್ ವ್ಯಕ್ತಿಗಳ ಕಬರಿನ ಮೇಲೆ ಅವರ ವಿಗ್ರಹವನ್ನು ಸ್ಥಾಪಿಸಿದರು ಆದರೆ ಅವರು ಅದನ್ನು ಆರಾಧಿಸಲಿಲ್ಲ, ಅವರಲ್ಲಿ ಶಿರ್ಕ್ ಸಂಭವಿಸಲಿಲ್ಲ. ಆದರೂ ಆ 10 ತಲೆಮಾರುಗಳು ಶಿರ್ಕ್ ಮಾಡಿರಲಿಲ್ಲ. ಅವರು ಕಬರನ್ನು ಗುರುತಿಸುವುದರಿಂದ ಹಿಡಿದು ವಿಗ್ರಹ ಸ್ಥಾಪಿಸಿರುವುದು ಅಂಧ ವಿಶ್ವಾಸವಾಗಿದೆ, ಅದು ವಸೀಲತು ಶಿರ್ಕ್ ಆಗಿದೆ, ಹರಾಮ್ ಆಗಿದೆ.


 ಶಿರ್ಕ್ ಗಿರುವ ದಾರಿಗಳೆಲ್ಲವೂ ಹರಾಮ್ ಆಗಿದೆ.


ಇದು ಬರೆದಾಗ ಸೂರ *ಅನ್ಆಮ್ 128* ಸೂಕ್ತದ ನೆನಪಾಯಿತು.


*ಇದು ಬರೆಯಲು ಪ್ರೇರೇಪಿಸಿರುವುದು 14/01/2024 ರಂದು ಉಲ್ಲಾಳದಲ್ಲಿ ನಡೆದ  ಕಾರ್ಯಕ್ರಮದ ಕೆಲವೊಂದು ಆರೋಪಣೆಗಳು.*

13 Sept 2023

ಶೈಖುಲ್ ಇಸ್ಲಾಂ ಇಬ್ನು ತೈಮಿಯ್ಯಾ (ರ) ರವರು ಪ್ರವಾದಿ (ಸಅ) ರ ಜನ್ಮದಿನವನ್ನು ಆಚರಿಸಬಹುದೆಂದು ಹೇಳಿದ್ದಾರೆಯೇ?



ಸಲಫಿ ಪಂಡಿತರಾದ ಇಬ್ನು ತೈಮಿಯ್ಯಾ ( ಹೆಸರಿನಲ್ಲಿ ಸಮಸ್ತ ಮುಸ್ಲಿಯಾರುಗಳು ಹಲವಾರು ವರ್ಷಗಳಿಂದ ಇಬ್ನು ತೈಮಿಯ (ರವರು ಪ್ರವಾದಿ (ಸಅ ಜನ್ಮದಿನವನ್ನು ಆಚರಿಸಿದರೆ ದೊಡ್ಡ ಪ್ರತಿಫಲ ಸಿಗುತ್ತದೆ ಎಂದು ಹೇಳಿದ್ದಾರೆ ಎಂಬ ಸುಳ್ಳನ್ನು ಪ್ರಚಾರಪಡಿಸಿ ಮುಗ್ದ ಸುನ್ನಿಗಳನ್ನು ಅನಾಚಾರದಲ್ಲಿಮುಳುಗಿಸುವ ಕೆಲಸದಲ್ಲಿ ತೊಡಗಿದ್ದಾರೆ.


 ವಿಷಯದಲ್ಲಿ ಇಬ್ನು ತೈಮಿಯ್ಯಾ (ರವರ ನಿಲುವನ್ನು ಪರಿಶೀಲಿಸಿ ಸಮಸ್ತ ಮುಸ್ಲಿಯಾರುಗಳ ಅಪಪ್ರಚಾರವನ್ನು ಕಸದ ಬುಟ್ಟಿಗೆ ಎಸೆಯೋಣ….


ಇಬ್ನು ತೈಮಿಯ್ಯಾ (ರವರು ಇಖ್ತಿದಾಉ ಸಿರಾತಲ್ ಮುಸ್ತಖೀಮ್ ಎಂಬ ತನ್ನ ಗ್ರಂಥದಲ್ಲಿ ವಿವರಿಸುವುದು  ಕೆಳಗಿನಂತಾಗಿದೆ….


قد تقدم أن العيد يكون اسماً لنفس المكان، ولنفس الزمان، ولنفس الاجتماعوهذه الثلاثة قد أحدث منها أشياء .

ಈದ್ ಅಥವಾ ಆಚರಣೆಗಳನ್ನು ಇಬ್ನು ತೈಮಿಯ (ರವರು 1.ಸ್ಥಳ, 2.ಕಾಲ, 3.ಸಂಗಮ ಎಂಬಂತೆ ಮೂರಾಗಿ ವಿಂಗಡಿಸಿದ್ದಾರೆ.


أما الزمان فثلاثة أنواع

ಇದರಲ್ಲಿರುವ ಝಮಾನ್ (ಕಾಲಮೂರು ವಿಧಗಳು.


 أحدها : يوم لم تعظمه الشريعة أصلاً ، ولم يكن له ذكر في السلف، ولا جرى فيه ما يوجب تعظيمه 


ಮೊದಲನೆಯದಾಗಿ

1.ಶರೀಅತ್ ನಲ್ಲಿ ಯಾವುದೇ ಗೌರವವೂಪ್ರತ್ಯೇಕತೆಯೂ ಇಲ್ಲದ ದಿವಸಗಳು.

2.ಸಲಪ್ ಗಳ (ಪೂರ್ವಿಕರಕಾಲದಲ್ಲಿ ಯಾವುದೇ ಉಲ್ಲೇಖವೂ ಇಲ್ಲದ ದಿವಸಗಳು.

3.ಯಾವುದೇ ಗೌರವವೂಪ್ರತ್ಯೇಕತೆಯೂ ಸಂಭವಿಸದ ದಿವಸಗಳು.


ಉದಾಹರಣೆ:-

مثل أول خميس من رجب، وليلة تلك الجمعة التي تسمى الرغائب

ಇಬ್ನು ತೈಮಿಯ (ಕಾಲದಲ್ಲಿ ಇದ್ದಂತಹ ರಜಬ್ ತಿಂಗಳ ಮೊದಲ ಗುರವಾರ ಮತ್ತು ಮೊದಲ ಶುಕ್ರವಾರ ರಾತ್ರಿಯ ಅನಾಚಾರ.


ಎರಡನೆಯದಾಗಿ

النوع الثاني : ما جرى فيه حادثة كما كان يجري في غيره، من غير أن يوجب ذلك جعله موسماً، ولا كان السلف يعظمونه، كثامن عشر ذي الحجة الذي خطب النبي اللهفيه بغدير خم مرجعه من حجة الوداع، فإنه  خطب فيه خطبة وصى فيها باتباع كتاب الله، ووصى فيها بأهل بيته كما روى ذلك مسلم في صحيحه


ಕೆಲವು ಘಟನೆಗಳು ಸಂಭವಿಸಿದ ಯಾವುದೇ ಗೌರವವೂ ಪ್ರತ್ಯೇಕತೆಯೂ ಆಧರಣೆಯೂ ಇಲ್ಲದ ದಿವಸಉದಾಹರಣೆಯಾಗಿ ದುಲ್ ಹಜ್ಜ್ ತಿಂಗಳ 18 ರಂದುಪ್ರವಾದಿ ಪ್ರಭಾಷಣ ಮಾಡಿದ ದಿವಸ


ಅದೇ ರೀತಿ ಬದ್ರ್ಹುನೈನ್ಖಂದಕ್ಮೆಕ್ಕಾ ವಿಜಯದ ದಿನಹಿಜ್ರಮದೀನಾ ಪ್ರವೇಶ ದಿನಇದೇ ಸಾಲಿನಲ್ಲಾಗಿದೆ ಪ್ರವಾದಿ (ಸಅಜನಿಸಿದ ದಿನವನ್ನುಇಬ್ನು ತೈಮಿಯ (ಸೇರಿಸಿರುವುದು.


وكذلك ما يحدثه بعض الناس، إما مضاهاة للنصارى في ميلاد عيسى عليه السلام، وإما محبة للنبي  وتعظيماًوالله قد يثيبهم (4) على هذه المحبة والاجتهاد، لاعلى البدع من اتخاذ مولد النبي  عيداًمع اختلاف الناس في مولدهفإن هذا لم يفعله السلف مع قيام المقتضي له وعدم المانع منه لو كان خيراًولو كان هذا خيراً (٥محضاً، أو راجحاً لكان السلف رضي الله عنهم أحق به منا، فإنهم كانوا أشد محبة الرسول الله ، وتعظيماً له منا، وهم على الخير أحرصوإنما كمال محبته وتعظيمه فيمتابعته وطاعته واتباع أمره، وإحياء سنته باطناً وظاهراً، ونشر ما بعث به، والجهاد على ذلك بالقلب واليد واللسانفإن هذه (1) طريقة السابقين الأولين من المهاجرينوالأنصار، والذين اتبعوهم بإحسان


ಅದೇ ರೀತಿ ಕೆಲವರು (ಈದ್ ಮೀಲಾದನ್ನುಕ್ರೈಸ್ತರು ಈಸಾ (ಅಸ ಜನ್ಮ ದಿನವನ್ನು ಆಚರಿಸುವುದನ್ನು ಅನುಕರಿಸಿ ಆಚರಿಸುತ್ತಿದ್ದರೆಇನ್ನು ಕೆಲವರು ಪ್ರವಾದಿ(ಸಅರೊಂದಿಗೆ ಇರುವ ಅಪಾರವಾದ ಪ್ರೀತಿಯಿಂದ ಆಚರಿಸುತ್ತಾರೆಪ್ರವಾದಿ (ಸಅರಲ್ಲಿರುವ ಪ್ರೀತಿ ಮತ್ತು ಪರಿಶ್ರಮಕ್ಕೆ ಅಲ್ಲಾಹನಿಂದ ಕೆಲವೊಮ್ಮೆ ಪುಣ್ಯಸಿಗಲೂ ಬಹುದು (ಸಿಗುತ್ತದೆ ಎಂದಿಲ್ಲ), ಆದರೆ ಪ್ರವಾದಿ (ಸಅ ಜನ್ಮ ದಿನಾಚರಣೆ ಎಂಬ ಬಿದ್ಅತ್  ಗೆ (ಅನಾಚಾರಕ್ಕೆ ಪುಣ್ಯವಿಲ್ಲಮಾತ್ರವಲ್ಲ ಪ್ರವಾದಿ(ಸಅರು ಜನಿಸಿದ ದಿನದಲ್ಲಿ ಬಿನ್ನಾಭಿಪ್ರಾಯಗಳಿವೆಪ್ರವಾದಿ (ಸಅ ಜನ್ಮ ದಿನವನ್ನು ಆಚರಿಸಲು ಯಾವುದೇ ಕೊರತೆಗಳು ಇಲ್ಲದಿದ್ದರೂ ಸ್ವಹಾಬಿಗಳುಅಥವಾ ಮುಂಗಾಮಿಗಳು ಯಾರೂ ಆಚರಿಸಲಿಲ್ಲಇದೊಂದು ಒಳ್ಳೆಯ ಕಾರ್ಯವಾಗಿರುತಿದ್ದರೆ ನಮಗಿಂತಲೂ ಹೆಚ್ಚಾಗಿ ಸ್ವಹಾಬಿಗಳು ಆಚರಿಸುತ್ತಿದ್ದರುನಮಗಿಂತೂ ಹೆಚ್ಚಾಗಿ ಪ್ರವಾದಿ (ಸಅ)ರನ್ನು ಪ್ರೀತಿಸಿದವರು ಅವರಾಗಿದ್ದಾರೆನಮಗಿಂತಲೂ ಹೆಚ್ಚಾಗಿ ಆಧರಿಸಿದವರೂ ಅವರಾಗಿದ್ದಾರೆಅವರು ಎಲಾ ಒಳ್ಳೆಕಾರ್ಯಗಳಲ್ಲಿ ಅಪಾರವಾದ ಆಸಕ್ತಿ ಇರುವವರಾಗಿದ್ದರುಪ್ರವಾದಿ (ಸಅಮೇಲಿರುವ ನಿಜವಾದ ಪ್ರೀತಿ ಎಂದರೆ ಅವರ ಚರ್ಯೆಯನ್ನು ಅನುಸರಿಸುವುದಾಗಿದೆಸುನ್ನತ್ತನ್ನು ಪ್ರತ್ಯಕ್ಷವಾಗಿಯೂ ಅಪ್ರತ್ಯಕ್ಷವಾಗಿಯೂ ಸಜೀವಗೊಳಿಸುವುದಾಗಿದೆಪ್ರವಾದಿ (ಸಅರು ಯಾವ  ಆಶಯಗಳಿಂದ ನಿಯೋಗಿಸಿದರೋ ಆಶಯವನ್ನು ಕೈಯಿಂದಲೂನಾಲಗೆಯಿಂದಲೂಹೃದಯದಿಂದಲೂ (ಜಿಹಾದ್ಪ್ರಚಾರ ಮಾಡುವುದಾಗಿದೆ ನಿಜವಾದ ಪ್ರೀತಿಇದಾಗಿದೆ ಮುಹಾಜಿರುಗಳೂಅನ್ಸಾರಿಗಳೂಮುಂಗಾಮಿಗಳಾದ ತಾಬಿವುಗಳ ಮಾರ್ಗ.


وأكثر هؤلاء الذين تجدهم حرصاً (۲على أمثال هذه البدع، مع ما لهم من حسن القصد، والاجتهاد الذي (٣يرجى لهم : بهما المثوبة، تجدهم فاترين في ) أمر الرسولعما أمروا بالنشاط فيه، وإنما هم بمنزلة من يحلي المصحف ولا يقرأ فيه، أو يقرأ فيه ولا يتبعه


ಅನಾಚಾರಗಳನ್ನು (ಬಿದ್ಅತನ್ನುಮಾಡುವ ಜನರಿಗೆ (ಇಬ್ನು ತೈಮಿಯಾಯಾ  ಕಾಲದಒಳ್ಳೆಯ ಉದ್ದೇಶವಿದೆಆದರೆ ಪ್ರವಾದಿ (ಸಅಕಲ್ಪಿಸಿದವುಗಳನ್ನುಪಾಲಿಸಲು ಅವರು ತಯಾರಿಲ್ಲಉದಾಹರಣೆಗೆ ಹೇಳುವುದಾದರೆ ಅವರು ಮುಸ್ಹಫನ್ನು ಅಲಂಕರಿಸುವರುಆದರೆ ಪಾರಾಯಣ ಮಾಡುವುದಿಲ್ಲಅಥವಾಅವರು ಪಾರಾಯಣ ಮಾಡುತ್ತಾರೆ ಅನುಸರಿಸುವುದಿಲ್ಲ.


فتعظيم المولد، واتخاذه موسماً، قد يفعله بعض الناس، ويكون له فيه (1) أجر عظيم لحسن قصده، وتعظيمه لرسول الله ، كما قدمته لك أنه يحسن من بعض الناس، مايستقبح من المؤمن المسددولهذا قيل للإمام أحمد عن بعض الأمراءإنه أنفق على مصحف ألف دينار، أو نحو ذلك فقال : دعهم فهذا أفضل ما أنفقوا فيه الذهب أو كماقال : مع أن مذهبه أن زخرفة المصاحف مكروهةوقد تأول بعض الأصحاب أنه أنفقها في تجويد (۲الورق والخط . وليس مقصود أحمد هذا، إنما قصده أن هذا العملفيه مصلحة، وفيه أيضاً مفسدة كره لأجلها


ಕೆಲವರು ಜನ್ಮ ದಿನವನ್ನು ಆಧರಿಸಿಅದನ್ನು ಹಬ್ಬದ ದಿನವನ್ನಾಗಿ ಆಚರಿಸುತ್ತಾರೆಅವರ ಒಳ್ಳೆಯ ಉದ್ದೇಶ ಮತ್ತು ಪ್ರವಾದಿ (ಸಅರನ್ನು ಆಧರಿಸುವುದಕ್ಕಾಗಿಅವರಿಗೆ ದೊಡ್ಡ ಪ್ರತಿಫಲ ಸಿಗಲೂ ಬಹುದುಇದೇ ಕಾರ್ಯವನ್ನು ಈಮಾನ್ ಇರುವವರು ಆಚರಿಸುವಾಗ ಅದು ಅನಾಚಾರ (ಬಿದ್ಅತ್ಆಗಿದೆಎಂದರೆಕೆಲವರಿಗೆ ಅದನ್ನು (ಕಾರಣಾಂತರಗಳಿಂದಅನುವು ಮಾಡಿ ಕೊಡಬೇಕಾಗುತ್ತದೆಉದಾಹರಣೆಗೆ (ಇಮಾಮ್ ಆಹ್ಮದ್  ಕಾಲದರಾಜರು (ಚಿನ್ನದಿಂದಸಾವಿರಾರು ದೀನಾರ್ ಖರ್ಚು ಮಾಡಿ ಮುಸ್ಹಫನ್ನು ತಯಾರಿಸುತ್ತಿದ್ದರು ಎಂದು ಇಮಾಮ್ ಅಹ್ಮದ್ (ರೊಂದಿಗೆ (ಕೆಲವರಿಂದಹೇಳಲಾಯಿತುಮುಸ್ಹಫನ್ನು ಅಲಂಕರಿಸಬಾರದು ಅದು ಕರಾಅತ್ ಆಗಿದೆ ಎಂದು ಇಮಾಮ್ ಅಹ್ಮದ್ ( ನಿಲುವಾಗಿದ್ದರೂ ಅವರು ಹೇಳಿದರು “ಅವರನ್ನು ಅವರಪಾಡಿಗೆ ಬಿಟ್ಟು ಬಿಡಿ” ಅವರು  ರೀತಿ ಖರ್ಚು ಮಾಡುವುದೇ ಉತ್ತಮ ಎಂದು ಇಮಾಮ್ ಅಹ್ಮದ್ (ರು ಹೇಳಿದರುಇಮಾಮ್ ಅಹ್ಮದ್ ( ಉದ್ದೇಶಅದರಲ್ಲಿ ಕೆಲವು ಪ್ರಯೊಜನವೂ ಇದೆಕೆಲವು ದೋಷವೂ ಇದೆ ಎಂದಾಗಿದೆ (ಅದು ಸರಿಯಲ್ಲ ಎಂದರೆ ಅವರು  ಚಿನ್ನವನ್ನು ಬೇರೆ ಯಾವುದೇ ರೀತಿಯಲ್ಲಿಅನಾವಶ್ಯಕ ಖರ್ಚು ಮಾಡಬಹುದು ಎಂಬ ಅರ್ಥದಲ್ಲಿ).


فهؤلاء إن لم يفعلوا هذا، وإلا اعتاضوا بفساد (۳لا صلاح فيه، مثل أن ينفقها في كتاب من كتب الفجور من كتب الأسمار، أو الأشعار أو حكمة فارس والروم.


ಅಂತವರು ಅದನ್ನು ಮಾಡುವುದಿಲ್ಲ ಎಂದಾದರೆ ಅವರು ಒಂದು ಪ್ರಯೋಜನವೂ ಇಲ್ಲದ ಅನಾವಶ್ಯಕ ಬೇಡದ ಪುಸ್ತಕಗಳಿಗೆ ಖರ್ಚು ಮಾಡಿ ಅದಕ್ಕಿಂತಲೂಹೆಚ್ಚಿನ ಪಥಬ್ರಷ್ಟತೆಯಲ್ಲಿ ತೊಡಗಿರುತ್ತಾರೆ


فتفطن لحقيقة الدين، وانظر ما اشتملت عليه الأفعال من المصالح الشرعية، والمفاسد؛ بحيث تعرف ما مراتب المعروف ومراتب المنكر، حتى تقدم أهمها عند الازدحام


ಆದ್ದರಿಂದ ಇಸ್ಲಾಮಿನ ಸತ್ಯಾವಸ್ಥೆಯನ್ನು ಅರಿತುಕೊಳ್ಳಿರಿಶರೀಅದಲ್ಲಿರುವ ಒಳಿತು ಯಾವುದೆಂದೂಅದಕ್ಕೆ ವಿರುದ್ಧವಾದ ಕೆಡುಕುಗಳು ಯಾವುದೆಂದೂಅರಿತುಕೊಳ್ಳಿರಿಇದರಿಂದ ನೀವು ಒಳಿತು ಕೆಡುಕುಗಳನ್ನು ತಿಳಿಯುವಿರಿ.


ಇದಾಗಿದೆ ಇಸ್ಲಾಮಿನ ಶೈಖ್ ಎಂದು ಖ್ಯಾತಿ ಹೊಂದಿರುವ ಶೈಖುಲ್ ಇಸ್ಲಾಮ್ ಇಬ್ನು ತೈಮಿಯಾ (ರವರ ನಿಲುವು


ಇದರಿಂದಾಗಿದೆ ಸಮಸ್ತ ಮುಸ್ಲಿಯಾರುಗಳು ಒಂದು ಭಾಗವನ್ನು ಕದ್ದು  ಭಾಗವನ್ನು ದುರವ್ಯಾಖ್ಯಾನ ಮಾಡಿ ಜನ ಸಾಮಾನ್ಯರನ್ನು ತಪ್ಪಾದ ದಾರಿಗೆಎಳೆದೊಯ್ದು ತಮ್ಮ ಜೇಬನ್ನು ತುಂಬಿಸುತ್ತಿರುವುದು.


ಮುಗ್ದ ಜನರನ್ನು ಶಿರ್ಕ್ಬಿದ್ಅತ್ ನೆಡೆಗೆ ಕೊಂಡೊಯ್ಯಲು ಕುರ್ಆನಿನ ಮೇಲೆಯೂಪ್ರವಾದಿ (ಸಅ ಮೇಲೆಯೂಇಮಾಮರ ಮೇಲೆಯೂ ಸುಳ್ಳುಹೇಳಲು ಸಮಸ್ತದ ಮುಸ್ಲಿಯಾರುಗಳು ಅಂಜದವರಾಗಿದ್ದಾರೆ ಎನ್ನುವುದಾಗಿದೆ ವಾಸ್ತವ


ಇಂತವರ ಕೆಡುಕಿನಿಂದ ಅಲ್ಲಾಹನು ನಮ್ಮನ್ನು ರಕ್ಷಿಸಲಿ


✍🏼 Abu Muadh