ಭೌತಿಕ ಮತ್ತು ಅಭೌತಿಕ ಸಾಮರ್ಥ್ಯದ ಪರಿಕಲ್ಪನೆ ಜಿನ್ನ್ ಮತ್ತು ಇತರ ಸೃಷ್ಟಿಗಳಲ್ಲಿ.
24 September 2024
ಭೌತಿಕ :
ಭೌತಿಕ ಎಂದರೆ ಪ್ರಾಪಂಚಿಕ, ಐಹಿಕ, ಲೌಕಿಕ ಎಂದಾಗಿದೆ.
ಭೌತಿಕವು ನೆಲ, ಜಲ, ಗಾಳಿ, ಗುಡ್ಡ, ಹೊಳೆ, ಕಾಡು, ಸರೋವರ, ಖನಿಜ, ಗ್ರಹ, ನಕ್ಷತ್ರ, ಮನುಷ್ಯ ವರ್ಗ, ಜಿನ್ನ್ ವರ್ಗ, ಮಲಕ್ ವರ್ಗ ಸೇರಿದಂತೆ ಹಲವಾರು ಜೀವ ಜಂತುಗಳನ್ನು ಒಳಗೊಂಡಿದೆ.
ಅಭೌತಿಕ :
ಭೌತಿಕ ಎಂಬ ಪದದ ವಿಪರೀತ ಪದವಾಗಿದೆ ಅಭೌತಿಕ ಎನ್ನುವುದು. ಅಭೌತಿಕ ಎಂದರೆ ಯಾವುದೇ ಸೃಷ್ಟಿಯೊಂದಿಗೆ ಹೊಂದಾಣಿಕೆಯಾಗದ, ಪ್ರಾಪಂಚಿಕವಲ್ಲದ ವಿಷಯಗಳಾಗಿದೆ.
ಅಭೌತಿಕವಾದ (ಪ್ರಾಪಂಚಿಕವಲ್ಲದ) ಎಲ್ಲಾ ಮಧ್ಯಸ್ಥಿಕೆಯು ಅಲ್ಲಾಹನಿಗೆ ಮಾತ್ರ ಇರುವುದಾಗಿದೆ. ಇದು ಅಲ್ಲಾಹನ ಸಾಮರ್ಥ್ಯವಾಗಿದೆ. ಅಲ್ಲಾಹನಿಗೆ ಮಾತ್ರ ಇರುವ ಸಾಮರ್ಥ್ಯವನ್ನು ಜಿನ್ನಿನೊಂದಿಗೆ ಅಥವಾ ಸೃಷ್ಟಿಗಳೊಂದಿಗೆ ಕಾಣುವುದು ಬಹುದೇವ ವಿಶ್ವಾಸವಾಗಿದೆ.
ಅದೇ ರೀತಿ ಜಿನ್ನ್ ನ ಸಾಮರ್ಥ್ಯವನ್ನು ಅಭೌತಿಕ ಎಂದು ವ್ಯಾಖ್ಯಾನಿಸಿ ಎಲ್ಲವೂ ಶಿರ್ಕ್ (ಮುತಲಕನ್ ಶಿರ್ಕ್) ಎಂದು ಹುಕುಮ್ ನೀಡುವುದು ಅಲ್ಲಾಹನ ಸಾಮರ್ಥ್ಯಕ್ಕೆ ಹೋಲಿಸಿದಂತೆ ಅಲ್ಲವೆ?
ಅಭೌತಿಕ ಎಂದರೆ ಪಂಚೇಂದ್ರಿಯಗಳಿಗೆ ನಿಲುಕದ ಎಂಬ ಮಡವೂರಿಗಳ ತಪ್ಪಾದ ಕೆಟ್ಟ ವಾದ ಅರ್ಥಹೀನವಾಗಿದೆ. ಇಲ್ಲಿಂದಾಗಿದೆ ಮಡವೂರಿಗಳ ಆದರ್ಶದ ವ್ಯತಿಚಲನ. ಇದನ್ನೇ ಆಗಿದೆ 2012 ರ ನಂತರದ KNM ಪುನರಾವರ್ತಿಸಿರುವುದು.
ಪಂಚೇಂದ್ರಿಯಗಳಿಗೆ ನಿಲುಕದ ಎನ್ನುವುದಕ್ಕೆ ಅಗೋಚರ ಎಂದು ಅರ್ಥ ಕಲ್ಪಿಸಬಹುದೇ ಹೊರತು ಅಭೌತಿಕ ಎನ್ನುವ ಅರ್ಥ ಕಲ್ಪಿಸುವುದು ಅಜ್ಞಾನವೆ ಸರಿ.
KNM ನ ವಾದ ಪ್ರಕಾರ ಜಿನ್ನ್ ನ ಸಾಮರ್ಥ್ಯದೊಂದಿಗೆ ಇರುವ ಎಲ್ಲಾ ಮಧ್ಯಸ್ಥಿಕೆಯು ಶಿರ್ಕ್ ಎನ್ನುವುದಾದರೆ KNM ನ ವಾದ ಪ್ರಕಾರ ಜಿನ್ನ್ ಪ್ರಾಪಂಚಿಕವಲ್ಲ ಎಂದಾಗಬೇಕಲ್ಲವೇ?
KNM ನ ಮೊಂಡು ವಾದದ ಪ್ರಕಾರ ಮನುಷ್ಯನ ಸಂಭಂದಿಸಿ ಜಿನ್ನ್ ನ ಸಾಮರ್ಥ್ಯ ಅಭೌತಿಕ (ಪ್ರಾಪಂಚಿಕವಲ್ಲ) ಎಂದಾದರೆ, ಆಕಾಶದಲ್ಲಿ ಮನುಷ್ಯನಿಗೆ ಕಾಣದಂತಹ ಲೆಕ್ಕಕ್ಕೆ ನಿಲುಕದಷ್ಟು ನಕ್ಷತ್ರಗಳಿವೆ. ಈ ನಕ್ಷತ್ರಗಳು ಪ್ರಾಪಂಚಿಕವಲ್ಲ (ಅಭೌತಿಕ) ಎಂದರ್ಥವೇ?
ಪ್ರಕಾಶವು ಕೆಡುವಂತದ್ದಾಗಿದೆ ಅದು ಬೌತಿಕವಾಗಿದೆ. ಇದೇ ಪ್ರಕಾಶದಿಂದ ಅಲ್ಲವೆ ಮಲಕ್ ಗಳನ್ನು ಅಲ್ಲಾಹನು ಸೃಷ್ಟಿಸಿರುವುದು. ಅದೇ ರೀತಿ ಜಿನ್ನ್ ಗಳನ್ನು ಸೃಷ್ಟಿಸಿರುವುದು ಅಗ್ನಿಯಿಂದಲ್ಲವೆ? ಅಗ್ನಿ ಬೌತಿಕವಲ್ಲವೆ? ಬೌತಿಕವಾದ ವಸ್ತುಗಳಿಂದ ಸೃಷ್ಟಿಸಿದ ಜಿನ್ನ್ ಮತ್ತು ಮಲಕ್ ಅಬೌತಿಕ ಆಗುವುದಾದರೂ ಹೇಗೆ?
ಅಬೌತಿಕವಾದ ಪ್ರಕಾಶ ಇದೆ. ಅದು ಅಲ್ಲಾಹನ ಪ್ರಕಾಶವಾಗಿದೆ. ಅದನ್ನು ಕೆಡಿಸಲು ಖಂಡಿತವಾಗಿಯೂ ಯಾರಿಂದಲೂ ಸಾಧ್ಯವಿಲ್ಲ. ಇದಾಗಿದೆ ಬೌತಿಕ ಮತ್ತು ಅಬೌತಿಕ ಬೇರ್ಪಡುವ ರೀತಿ.
ಮರಣ ಹೊಂದಿದವರಲ್ಲಿ ಅಭೌತಿಕ ಪರಿಕಲ್ಪನೆ.
ಮುಹಿಯುದ್ದೀನ್ ಶೈಖ್ ರನ್ನು ಉದಾಹರಣೆಯಾಗಿ ಹೇಳುವುದಾದರೆ ಅವರು ಪ್ರಸ್ತುತ ಪ್ರಾಪಂಚಿಕವಲ್ಲದ (ಅಭೌತಿಕವಾದ) ಬರ್ಝಕಿ ಲೋಕದಲ್ಲಿದ್ದಾರೆ ಎಂಬ ಕಾರಣಕ್ಕೆ ಅವರಲ್ಲಿರುವ ಎಲ್ಲಾ ಮಧ್ಯಸ್ಥಿಕೆಯು ಶಿರ್ಕಾಗಿಕುತ್ತದೆ. ಯಾಕೆಂದರೆ ಶಿರ್ಕ್ ಮತ್ತು ತೌಹೀದ್ ಬೇರ್ಪಡುವುದು ಅಭೌತಿಕವಾದ (ಪ್ರಾಪಂಚಿಕವಲ್ಲದ) ಮಧ್ಯಸ್ಥಿಕೆಯಿಂದಾಗಿದೆ.
ಮುಹಿಯುದ್ದೀನ್ ಶೈಖ್ ರನ್ನು ಕರೆಯುವುದು ಶಿರ್ಕ್ ಎನ್ನುವ ಮಾನದಂಡ ಸಮಸ್ತ ಪುರೋಹಿತರು ಅಲ್ಲಾಹನಿಗೆ ಮಾತ್ರವಿರುವ ಅಭೌತಿಕತೆಯನ್ನು ಮುಹಿಯುದ್ದೀನ್ಶೈಖ್ ರಲ್ಲಿ ಕಾಣುವುದರಿಂದಾಗಿದೆ.
ಅದೇ ರೀತಿ ಅಲ್ಲಾಹನಿಗೆ ಮಾತ್ರ ಇರುವ ಅಭೌತಿಕತೆ ಮುಹಿಯುದ್ದೀನ್ ಶೈಖ್ ಗೆ ಕಲ್ಪಿಸುವುದು ಬಹು ದೈವ ವಿಶ್ವಾಸವಾದರೆ, ಜಿನ್ನ್ ನೊಂದಿಗೆ ಇರುವಮಧ್ಯಸ್ಥಿಕೆ ಎಲ್ಲವೂ ಶಿರ್ಕ್ ಎಂದು ಹೇಳುವುದು, ಜಿನ್ನ್ ಗೆ ಪ್ರಾಪಂಚಿಕವಾಗಿ (ಭೌತಿಕವಾಗಿ) ಯಾವುದೇ ಮಧ್ಯಸ್ಥಿಕೆ ಇಲ್ಲ ಎಂದು ಹೇಳಿದಂತೆ ಅಲ್ಲವೆ? ಇದುಜಿನ್ನ್ ನ ಸಾಮರ್ಥ್ಯ ಪ್ರಪಂಚಾತೀಥ ಎಂದು ವಿಶ್ವಾಸ ಇಟ್ಟಂತೆ ಅಲ್ಲವೆ? ಪ್ರಪಂಚಾತೀಥ ಸಾಮರ್ಥ್ಯ ಅಲ್ಲಾಹನಿಗೆ ಮಾತ್ರ ಇರುವುದಲ್ಲವೆ? KNM ನ ಈ ವಾದವು ಬಹುದೈವ ವಿಶ್ವಾಸಕ್ಕೆ ಹೋಲಿಕೆಯಾಗುವುದಿಲ್ಲವೆ?
ಒಂದು ವೇಳೆ ಭೌತಿಕವಾದ (ಪ್ರಾಪಂಚಿಕ) ಮಧ್ಯಸ್ಥಿಕೆ ಜಿನ್ನ್ ನೊಂದಿಗೆ ಇದೆ ಎಂದು ಒಪ್ಪುವವರಾಗಿದ್ದರೆ WISDOM ನ ವಾದವನ್ನು ಅಂಗೀಕರಿಸಬಹುದಲ್ಲವೆ? ನೀವು KNM ಅಥವಾ SKSM ನಲ್ಲಿ ಇದ್ದು ಏನು ಪ್ರಯೋಜನ? KNM ನ ವಿಶ್ವಾಸವೇ ಜಿನ್ನ್ ನ ಸಾಮರ್ಥ್ಯ ಅಭೌತಿಕ ಎಂದಾಗಿದೆ.