30 Sept 2016

ಇಸ್ಲಾಮೀ ಕರ್ಮ ಶಾಸ್ತ್ರ.

1). ಇಸ್ಲಾಮೀ ಕರ್ಮ ಶಾಸ್ತ್ರದ ಮೂಲಾಧಾರಗಳು.

a).ಪವಿತ್ರ ಕುರಾನ್.

b).ಸುನ್ನತ್ (ಪ್ರವಾದಿ ಚರ್ಯೆ).

c).ಇಜ್ಮಾ (ಕುರಾನ್ ಮತ್ತು ಹದೀಸ್ ಗಳಲ್ಲಿ ಇತ್ಯರ್ಥವಾಗದ ಯಾವುದೇ ಒಂದು ಸಮಸ್ಯೆಯ ಕುರಿತ ಪರಿಹಾರದ ಸಲುವಾಗಿ ಆ ಕಾಲದ ಪ್ರವಾದಿಯ ಉಮ್ಮತ್ತಿನಲ್ಲಿರುವ ಪಂಡಿತ ಶಿರೋಮಣಿಗಳ ಸಹಮತವನ್ನು “ಇಜ್ಮಾ” ಎನ್ನುತ್ತಾರೆ).

d).ಕಿಯಾಸ್ (ಕುರಾನ್ ಮತ್ತು ಹದೀಸ್ ಗಳಲ್ಲಿನೇರವಾಗಿ ಉಲ್ಲೇಖಿಸಲ್ಪಡದಿರುವ ಯಾವುದೇ ಒಂದು ಸಮಸ್ಯೆಯ ಕುರಿತ ಪರಿಹಾರದ ಸಲುವಾಗಿ ಕುರಾನ್ ಮತ್ತು ಹದೀಸ್ ಗಳಲ್ಲಿಉಲ್ಲೇಖಿಸಲ್ಪಟ್ಟಿರುವ ಅದನ್ನು ಹೋಲುವ ಬೇರೊಂದು ಸಮಸ್ಯೆಯಿಂದ ಪರಿಹಾರವನ್ನು ಕಂಡು ಹಿಡಿಯುವುದನ್ನು “ಕಿಯಾಸ್” (ತುಲನೆ ಮಾಡುವುದು) ಎನ್ನುತ್ತಾರೆ.) ಈ ನಾಲ್ಕುಇಸ್ಲಾಮೀ ಕರ್ಮ ಶಾಸ್ತ್ರದ ಮೂಲಾಧಾರಗಳಾಗಿವೆ.

2). ಪ್ರವಾದಿ(ಸ) ಯವರ ಕಾಲದಲ್ಲಿ ಕರ್ಮ ಶಾಸ್ತ್ರ.⬇

ಪ್ರವಾದಿ(ಸ)ಯವರ ಕಾಲದಲ್ಲಿ ವಹ್ಯ್ ನ ಜ್ಞಾನವೇ ಕರ್ಮ ಶಾಸ್ತ್ರವಾಗಿತ್ತು. ಪವಿತ್ರ ಕುರಾನ್ ನೇರವಾಗಿ ಸಮಸ್ಯೆಗಳನ್ನು ಸೂಚಿಸಿ ಅವುಗಳ ಪರಿಹಾರವನ್ನೂ ಉಲ್ಲೇಖಿಸುತ್ತಿತ್ತು. ಇಲ್ಲವೆಂದಾದಲ್ಲಿ ಕುರಾನೇತರ ವಹ್ಯ್ ನ ಮೂಲಕ ಪ್ರವಾದಿ(ಸ) ಅವುಗಳಿಗೆ ಪರಿಹಾರವನ್ನು ಸೂಚಿಸುತ್ತಿದ್ದರು. ಇದನ್ನು ” ಫಿಕ್ಹುಲ್ ವಹ್ಯ್” ಎನ್ನಲಾಗುತ್ತದೆ.

3). ಪ್ರವಾದಿ(ಸ) ಯವರ ಸಹಚರರ (ಸಹಾಬಿಗಳ) ಮತ್ತವರ ಶಿಷ್ಯಂದಿರ (ತಾಬಿಈನ್ ಗಳ) ಕಾಲದ ಕರ್ಮ ಶಾಸ್ತ್ರ.⬇

ಇಸ್ಲಾಂ ಒಂದು ಸಾರ್ವ ಕಾಲಿಕ ಮತ್ತು ಸಕಲ ಮನುಕುಲದ ಧರ್ಮ. ಪ್ರವಾದಿ(ಸ)ಯವರ ಕಾಲಾನಂತರ ಇಸ್ಲಾಮೀ ಸಾಮ್ರಾಜ್ಯವು ವಿಸ್ತರಿಸಲಾರಂಭಿಸಿತು. ಹೊಸ ಹೊಸ ಜನ ಪ್ರದೇಶಗಳು ಇಸ್ಲಾಮೀ ಆಡಳಿತ ವ್ಯವಸ್ಥೆಯ ಅಧೀನದಲ್ಲಿ ಬರ ತೊಡಗಿದುವು ಮತ್ತಿದರಿಂದಾಗಿ ಕೆಲ ಹೊಸ ಹೊಸ ಸಮಸ್ಯೆಗಳೂ ಉದ್ಭವಿಸಿತ್ತು. ಹೀಗೆ ಹೊಸ ಪ್ರದೇಶ ಮತ್ತು ಹೊಸ ಕಾಲಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ವಿಧ್ವಾಂಸರು ಇಸ್ಲಾಮಿನ ಮೂಲ ಸಿದ್ಧಾಂತ ಮತ್ತು ಮೂಲಾಧಾರಗಳ ಗವೇಷಣೆ ನಡೆಸಿ ತಲೆದೋರಿದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಹಿಡಿದರು. ಈ ಗವೇಷಣೆಯನ್ನೇ “ಇಜ್ತಿಹಾದ್” ಎಂದು ಕರೆಯಲಾಯಿತು. ಹೀಗೆ ಪ್ರವಾದಿ(ಸ) ಯವರ ಸಹಚರರ (ಸಹಾಬಿಗಳ) ಮತ್ತವರ ಶಿಷ್ಯಂದಿರ (ತಾಬಿಈನ್ ಗಳ) ಕಾಲದಲ್ಲಿ ” ಫಿಕ್ಹುಲ್ ವಹ್ಯ್” ನಂತೆಯೇ “ಅಲ್ ಫಿಕ್ಹುಲ್ ಇಜ್ತಿಹಾದೀ” (ಗವೇಷಣಾಧಾರಿತ ಕರ್ಮಶಾಸ್ತ್ರ) ಕೂಡಾ ಇಸ್ಲಾಮೀ ಕರ್ಮಶಾಸ್ತ್ರದ ಭಾಗವಾಗಿತ್ತು.


4). ತಾಬಿಈನ್ ರ ಕಾಲದ ಕೆಲವು ಪ್ರಸಿದ್ಧ ಕರ್ಮಶಾಸ್ತ್ರಜ್ಞರು⬇

ಇಮಾಮ್ ಅಬೂ ಹನೀಫ (ರ)   (ನೂಮಾನ್ ಬಿನ್ ಸಾಬಿತ್)

ಜನನ : ಹಿಜರಿ 80 ಕ್ರಿ.ಪೂ 699 ಕೂಫಃ (ಇರಾಕ್).ಮರಣ : ಹಿಜರಿ 150 ಕ್ರಿ.ಪೂ 767 ಬಗ್ದಾದ್ (ಇರಾಕ್)

ಇಮಾಮ್ ಮಾಲಿಕ್ (ರ) (ಮಾಲಿಕ್ ಬಿನ್ ಅನಸ್)

ಜನನ : ಹಿಜರಿ 93 ಕ್ರಿ.ಪೂ 715 (ಮದೀನ). ಮರಣ : ಹಿಜರಿ 179 ಕ್ರಿ.ಪೂ 796 (ಮದೀನ)

ಇಮಾಮ್ ಶಾಫೀ (ರ) (ಮುಹಮ್ಮದ್ ಬಿನ್ ಇದ್ರೀಸ್)

ಜನನ : ಹಿಜರಿ 150 ಕ್ರಿ.ಪೂ 767 (ಅಸ್ಕಲಾನ್).ಮರಣ : ಹಿಜರಿ 204 ಕ್ರಿ.ಪೂ 820 ಬಗ್ದಾದ್ (ಇರಾಕ್)

ಇಮಾಮ್ ಅಹ್ಮದ್ ಬಿನ್ ಹಂಬಲ್ (ರ)

ಜನನ : ಹಿಜರಿ 164 ಕ್ರಿ.ಪೂ 780 ಬಗ್ದಾದ್ (ಇರಾಕ್).ಮರಣ : ಹಿಜರಿ 241 ಕ್ರಿ.ಪೂ 855 ಬಗ್ದಾದ್ (ಇರಾಕ್)




🔴 ಕುರಾನ್, ಸುನ್ನತ್, ಇಜ್ಮಾಅ ಮತ್ತು ಖಿಯಾಸ್ ಗೆ ಹೊರತಾಗಿರುವ ಯಾವುದೇ ಅಭಿಪ್ರಾಯಗಳನ್ನು ಕೊಟ್ಟರೂ ಅದು ಇಸ್ಲಾಮಿಗೆ ಪುರಾವೆಯಾಗುವುದಿಲ್ಲ.

الإسناد من الدين
ದೀನ್ ಗೆ ಪ್ರಮಾಣವು ಮುಖ್ಯವಾಗಿದೆ.

ಪ್ರಮಾಣವೆಂದರೆ ಅದು ಕುರಾನ್ ಮತ್ತು ಸುನ್ನತ್ತಿಗೆ ಹೊಂದಿಕೊಂಡಿರಬೇಕು. ಯಾಕೆಂದರೆ ಅಲ್ಲಾಹನು ಕುರಾನಿನಲ್ಲಿ ಹೇಳುತ್ತಾನೆ 🔽


الْيَوْمَ أَكْمَلْتُ لَكُمْ دِينَكُمْ وَأَتْمَمْتُ عَلَيْكُمْ نِعْمَتِي وَرَضِيتُ لَكُمُ الْإِسْلَامَ دِينًا

ಇಂದು ನಾನು ನಿಮಗೆ ನಿಮ್ಮ ಧರ್ಮವನ್ನು ಪೂರ್ತೀಕರಿಸಿ ಕೊಟ್ಟಿರುವೆನು. ನನ್ನ ಅನುಗ್ರಹವನ್ನು ನಾನು ನಿಮಗೆ ನೆರವೇರಿಸಿಕೊಟ್ಟಿರುವೆನು. ಇಸ್ಲಾಮನ್ನು ಧರ್ಮವಾಗಿ ನಾನು ನಿಮಗೆ ತೃಪ್ತಿಪಟ್ಟಿರುವೆನು.

[ಅಲ್-ಮಾ'ಇದಃ : 3]

ಪ್ರವಾದಿ ﷺ ರ ಕಾಲದ ನಂತರ ಬೇರೆ ಒಂದು ಇಸ್ಲಾಮ್ ಇಲ್ಲ. ಅಲ್ಲಾಹನು ಪ್ರವಾದಿ ﷺ ರ ಕಾಲದಲ್ಲಿಯೇ ಇಸ್ಲಾಮನ್ನು ಪೂರ್ಣಗೊಳಿಸಿದ್ದಾನೆ. ನಂತರ ಉದ್ಭವಿಸುವ ಯಾವುದೇ ಘಟನೆಗಳು ಇಸ್ಲಾಮಿಗೆ ಪುರಾವೆಯಲ್ಲ.

ಪ್ರವಾದಿ ﷺ ರು ಹೇಳುತ್ತಾರೆ : ನನ್ನ ಪೈಕಿ ನನ್ನ ನಂತರ ಜೀವಿಸುವವರು ಬಹಳಷ್ಟು ಭಿನ್ನಾಭಿಪ್ರಾಯವನ್ನು ಕಾಣಲಿರುವರು. ಆ ಸಂಧರ್ಭದಲ್ಲಿ ನೀವು ನನ್ನ ಮತ್ತು ನಾಲ್ವರು ಖಲೀಫರ ಸುನ್ನತ್ತನ್ನು ಬಲವಾಗಿ ಹಿಡಿದುಕೊಳ್ಳಿರಿ. ಯಾವುದೇ ಕಾರಣಕ್ಕೂ ಸುನ್ನತ್ತನ್ನು ಕೈಬಿಡದಿರಿ.
(ಅಬೂ ದಾವೂದ್ : 4607, ತಿರ್ಮಿದಿ :2676)


ಪ್ರವಾದಿ ﷺ ರು ಹೇಳಿದರು : ನನ್ನ ಮತ್ತು ನನ್ನ ಸಹಾಬಿಗಳ ಮಾರ್ಗದಲ್ಲಿ ಯಾರು ಇದ್ದಾರೆಯೇ ಅವರಾಗಿದ್ದಾರೆ ವಿಜಯಿಗಳು.

ಪ್ರವಾದಿ ﷺ ರು ಹೇಳಿದರು : ನಾನು ನಿಮಗೆ ಎರಡು ವಸ್ತುಗಳನ್ನು ಬಿಟ್ಟು ಹೋಗುತ್ತಿದ್ದೇನೆ (ಕುರಾನ್ ಮತ್ತು ಪ್ರವಾದಿ ಚರ್ಯೆ) ಅದನ್ನು ಗಟ್ಟಿಯಾಗಿ ಹಿಡಿಯುವ ವರೆಗೆ ನೀವು ದಾರಿ ತಪ್ಪಲಾರಿರಿ.


ಎಲ್ಲದಕ್ಕೂ ಪರ್ಯಾವಸಾನ ಇಲ್ಲಿದೆ.
 ಅಲ್ಲಾಹನು ಕುರಾನಿನಲ್ಲಿ ಹೇಳುತ್ತಾನೆ 🔽

يَا أَيُّهَا الَّذِينَ آمَنُوا أَطِيعُوا اللَّهَ وَأَطِيعُوا الرَّسُولَ وَأُولِي الْأَمْرِ مِنْكُمْ ۖ فَإِنْ تَنَازَعْتُمْ فِي شَيْءٍ فَرُدُّوهُ إِلَى اللَّهِ وَالرَّسُولِ إِنْ كُنْتُمْ تُؤْمِنُونَ بِاللَّهِ وَالْيَوْمِ الْآخِرِ ۚ ذَٰلِكَ خَيْرٌ وَأَحْسَنُ تَأْوِيلًا

ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವನ್ನು ಅನುಸರಿಸಿರಿ. (ಅವನ) ಸಂದೇಶವಾಹಕರನ್ನೂ ನಿಮ್ಮಿಂದಲೇ ಇರುವ ಕಾರ್ಯನಿರ್ವಾಹಕರನ್ನೂ ಅನುಸರಿಸಿರಿ. ನೀವು ಅಲ್ಲಾಹುವಿನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರಾಗಿದ್ದರೆ ನಿಮ್ಮ ಮಧ್ಯೆ ಯಾವುದೇ ವಿಷಯದಲ್ಲಾದರೂ ಭಿನ್ನಾಭಿಪ್ರಾಯ ತಲೆದೋರಿದರೆ ನೀವದನ್ನು ಅಲ್ಲಾಹುವಿನೆಡೆಗೂ ಸಂದೇಶವಾಹಕರೆಡೆಗೂ ಮರಳಿಸಿರಿ. ಅದು ಅತ್ಯುತ್ತಮವಾದುದೂ ಅತಿಸೂಕ್ತ ಪರ್ಯಾವಸಾನವುಳ್ಳದ್ದೂ ಆಗಿದೆ.

[ಅನ್ನಿಸಾ'ಅ : 59]

ನಮಾಝ್‌ನಲ್ಲಿ ಕೈ ಕಟ್ಟುವುದು ಎಲ್ಲಿ...?

ನಮಾಝ್‌ನಲ್ಲಿ ಕೈ ಕಟ್ಟುವುದು ಎಲ್ಲಿ...?

     ಈ ವಿಷಯವನ್ನು ಪರಿಶೋಧನೆಗೆ ಒಳಪಡಿಸಿದರೆ ನಮ್ಮ ಸಮೂಹದಲ್ಲಿ ವಿವಿಧ ರೀತಿಯ ನಿಲುವುಗಳಿವೆ ಎಂಬುದನ್ನು ಕಾಣಲು ಸಾಧ್ಯ. ಶಾಫಿಈ ಮದ್‌ಹಬ್‌ನವರೆಂದು ತಮ್ಮನ್ನು ಪರಿಚಯ ಪಡಿಸುವವರು ಹೊಟ್ಟೆಯಮೇಲೆ ಕೈ ಕಟ್ಟುವಾಗ ಹನಫೀ ಮದ್‍ಹಬ್‌ನವರು ಹೊಕ್ಕುಳ ಕೆಳಗೆ ಕೈ ಕಟ್ಟುತ್ತಾರೆ. ಮಾಲಿಕೀ ಮದ್‌ಹಬ್‌ನವರೆಂದು ಹೇಳಿಕೊಳ್ಳುವವರು ಕೈ ಕಟ್ಟದೇ ನಮಾಝ್ ನಿರ್ವಹಿಸುತ್ತಾರೆ. ಜನರನ್ನೂ ಸಂಖ್ಯಾಬಲವನ್ನೂ ನೋಡಿ ಅವರಿಗೆ ಬೇಕಾದಂತೆ ವಿವಿಧ ರೀತಿಯಲ್ಲಿ ಕೈ ಕಟ್ಟಿ ನಮಾಝ್ ನಿರ್ವಹಿಸುವವರೂ ಇದ್ದಾರೆ.

ಆದರೆ ನಮ್ಮ ಮಾದರಿ ಪುರುಷರಾದ ಪ್ರವಾದಿ ಮಹಮ್ಮದ್(ಸ) ರವರು ಈ ವಿಷಯದಲ್ಲಿ ಯಾವ ನಿಲುವನ್ನು ಸ್ವೀಕರಿಸಿದರು ಎಂದು ಸತ್ಯ ವಿಶ್ವಾಸಿಗಳು ಪರಿಶೋಧಿಸಬೇಕು! ಪ್ರವಾದಿ(ಸ) ನುಡಿದರು:

صَلُّوا كَماَ رَأَيْتُمُونِي أُصَلّي
 (صحيح البخاري631- صحيح مسلم674)

"ನಾನು ಹೇಗೆ ನಮಾಝ್ ನಿರ್ವಹಿಸುವುದನ್ನು ನೀವು ಕಂಡಿರುವಿರೋ ಅದೇ ರೀತಿಯಲ್ಲಿ ನೀವು ನಮಾಝ್ ನಿರ್ವಹಿಸಿರಿ."

Swaheeh bukari :631, Swaheeh muslim :674


ಹಾಗೆ ನೋಡುವಾಗ ಪ್ರವಾದಿ(ಸ) ರವರು ಕೈ ಕಟ್ಟಿರುವುದು ಎದೆಯ ಮೇಲಾಗಿತ್ತೆಂದು ನಿಸ್ಸಂಶಯವಾಗಿ ವ್ಯಕ್ತವಾಗುತ್ತದೆ. ಕೆಲವು ಹದೀಸ್‌ಗಳನ್ನು ನೋಡಿರಿ:👇


عَنْ طَاوُسٍ، قَالَ كَانَ رَسُولُ اللَّهِ صلى الله عليه وسلم يَضَعُ يَدَهُ الْيُمْنَى عَلَى يَدِهِ الْيُسْرَى ثُمَّ يَشُدُّ بَيْنَهُمَا عَلَى صَدْرِهِ وَهُوَ فِي الصَّلاَةِ .

ತಾವೂಸ್ ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ﷺ) ನಮಾಝ್ ನಿರ್ವಹಿಸುವಾಗ ಬಲಗೈಯನ್ನು ಎಡಗೈಯ ಮೇಲೆ ಗಟ್ಟಿಯಾಗಿ ಹಿಡಿದು ತಮ್ಮ ಎದೆಯ ಮೇಲೆ ಇಡುತ್ತಿದ್ದರು.

Narrated Tawus:
The Messenger of Allah (ﷺ) used to place his right hand on his left hand, then he folded them strictly on his chest in prayer.

Grade : Sahih

Hadith Classified :
Shykh Nasir Ud Din Al-Albani
Reference  : Sunan Abi Dawud 759
In-book reference  : Book 2, Hadith 369
English translation  : Book 3, Hadith 758

حَدَّثَنَا يَحْيَى بْنُ سَعِيدٍ , عَنْ سُفْيَانَ , حَدَّثَنِي سِمَاكٌ , عَنْ قَبِيصَةَ بْنِ هُلْبٍ , عَنْ أَبِيهِ , قَالَ : رَأَيْتُ النَّبِيَّ صَلَّى اللَّهُ عَلَيْهِ وَسَلَّمَ يَنْصَرِفُ عَنْ يَمِينِهِ وَعَنْ يَسَارِهِ , وَرَأَيْتُهُ قَالَ يَضَعُ هَذِهِ عَلَى صَدْرِهِ. وصف يحي اليمني علي اليسر ي فوق المفصل "

ಕಬೀಸಃ ಇಬ್ನ್ ಹುಲ್ಬ್ (ರ) ರವರು ತಮ್ಮ ತಂದೆಯಿಂದ ವರದಿ ಮಾಡಿರುತ್ತಾರೆ: "ನಮಾಝ್ ಮುಗಿದರೆ ಪ್ರವಾದಿ(ಸ.ಅ) ರವರು ತಮ್ಮ ಬಲ ಮತ್ತು ಎಡ ಭಾಗದಿಂದ ಎದ್ದು ಹೋಗುವುದನ್ನು ನಾನು ಕಂಡಿರುವೆನು. ಹಾಗೆಯೇ ಅವರು ಇದನ್ನು ಎದೆಯ ಮೇಲೆ ಇಟ್ಟಿರುವುದಾಗಿ ನಾನು ಕಂಡಿದ್ದೇನೆ. ಇದನ್ನು ಎಂದರೆ ಬಲಗೈಯನ್ನು ಎಡಗೈಯ ಮಣಿಗಂಟಿನ ಮೇಲೆ ಇಟ್ಟರು ಎಂದು ವರದಿಗಾರರಲ್ಲಿ ಒಬ್ಬರಾದ ಯಹ್ಯಾ ಅದನ್ನು ತೋರಿಸಿ ಕೊಟ್ಟರು.

Sayyiduna Hulb (ra) relates, 'I saw the Prophet (sallallahu alaihi wa sallam) turn from both his right and left and I also saw him place this upon his chest.' Yahya (one of the narrators) described this as being the right hand upon the left above the wrist joint.

Musnad Ahmad : 22026 / 5-226

ಸಂದೇಶ ವಾಹಕರೊಂದಿಗೆ ನಮಾಝ್ ನಿರ್ವಹಿಸಿದ ಸ್ವಹಾಬಿಯು ಹೇಳುವುದನ್ನು ನೋಡಿ.

" عن وايل بن حجر قال:> صليت مع ر سول الله صلي الله عليه وسلم, ووضع يدة اليمني علي يدة اليسر علي "صدره"

ವಹೀಲ್ ಇಬ್ನು ಹುಜಿರ್ ರಿಂದ ವರದಿ: "ನಾನು ಅಲ್ಲಾಹನ ಸಂದೇಶ ವಾಹಕ (ಸಅ) ರೊಂದಿಗೆ ನಮಾಝ್ ನಿರ್ವಹಿಸಿದೆ. ಅವರು ತನ್ನ ಬಲ ಕೈಯನ್ನು ಎಡದ ಕೈಯ ಮೇಲಿನಿಂದ ಎದೆಯ ಮೇಲೆ ಇಟ್ಟರು.

swaheeh Ibnu Qusaima 1-243

ಇಬ್ನು ಹಜರುಲ್ ಅಸ್ಖಲಾನಿ'ಯವರು ಸ್ವಹೀಹ್ ಬುಖಾರಿ'ಯ ವ್ಯಾಖ್ಯಾನ ಗ್ರಂಥವಾದ ಫತಹುಲ್ ಬಾರಿ'ಯಲ್ಲಿ ಹೇಳುವುದನ್ನು ನೋಡಿ.

" وقد روي ابن خز يمه من حديث وايل انه و ضعهما علي صدره, والبزار عند صدره, وعند احمد في حديث هلب الطاني نحوه وفي زيادات المسند من حديث علي انه وضعهما تخت السره واسناده ضعيف "

ಪ್ರವಾದಿ (ಸಅ) ತನ್ನ ಎರಡು ಕೈಗಳನ್ನು ಎದೆಯ ಮೇಲೆ ಇಟ್ಟರು ಎಂಬ ವಾಯಿಲ್'ರ ಹದೀಸ್ ಇಬ್ನು ಖುಸೈಮ್'ರು ಎದೆಯ ಮೇಲೆ ಇಟ್ಟರು ಎಂದೂ, ಬಝಾರ್'ರು ಅದೇ ರೀತಿ ಎದೆಯ ಮೇಲೆ ಇಟ್ಟರು ಎಂದೂ ಹುಲ್ಬುತ್ವಾನಿ'ಯವರ ಹದೀಸ್ ನಲ್ಲಿ  ಇಮಾಮ್ ಅಹ್ಮದ್ ವರದಿ ಮಾಡಿದ್ದಾರೆ. ಎಂದರೆ ಪ್ರವಾದಿ (ಸಅ)ರು ಎರಡು ಕೈಗಳನ್ನು ಹೊಕ್ಕುಳಿನ ಕೆಳಗೆ ಇಟ್ಟರು ಎಂಬ ಹದೀಸಿನ ಸನದ್(ಪರಂಪರೆ) ದುರ್ಬಲವಾಗಿದೆ.

( Fath-hul Bari 2-224 )

ಇಮಾಮ್ ನವವೀ ತನ್ನ ಶರಹುಲ್ ಮುಹದ್ದಬ್ ನಲ್ಲಿ ಹೇಳುವುದನ್ನು ನೋಡಿ.

" واحتج اصحابنا یحدیث وایل بن حجر رضی الله عنه قال: صلیت مع رسول الله و وضع یده الیمنی علی یده الیسری علی "صدره"

ವಹೀಲ್ ಇಬ್ನು ಹುಜಿರ್ (ರ) ಹೇಳಿದರು: "ನಾನು ಅಲ್ಲಾಹನ ಸಂದೇಶವಾಹಕರೊಂದಿಗೆ ನಮಾಝ್ ನಿರ್ವಹಿಸಿದೆ. ಅವರು ತನ್ನ ಬಲ ಕೈಯನ್ನು ಎಡದ ಕೈಯ ಮೇಲೆ ಎದೆಯಲ್ಲಿ ಇಟ್ಟರು.

Sharahul Muhadhab 3-313

""""""""""""""""""""""""""""""""""""""""""""""""""

ಮರಣ ಹೊಂದಿದವರಿಗೆ ಕುರ್'ಆನ್ ಓದಿ ಹದಿಯಾ ಮಾಡುವುದು ಶಾಫಿಯೀ ಮದ್ಹಬ್ ನ ವೀಕ್ಷಣೆಯಲ್ಲಿ.

ಮರಣ ಹೊಂದಿದವರಿಗೆ ಕುರ್'ಆನ್ ಓದಿ ಹದಿಯಾ ಮಾಡುವುದು ಶಾಫಿಯೀ ಮದ್ಹಬ್ ನ ವೀಕ್ಷಣೆಯಲ್ಲಿ.



وَأَنْ لَيْسَ لِلْإِنْسَانِ إِلَّا مَا سَعَىٰ

ಮನುಷ್ಯನಿಗೆ ಅವನು ಪರಿಶ್ರಮ ಪಟ್ಟಿರುವುದರ ಹೊರತು ಬೇರೇನೂ ಇಲ್ಲವೆಂದು,[1066]

ಟಿಪ್ಪಣಿಗಳು :
[1066] ಯಾವುದೇ ಮನುಷ್ಯನಿಗೆ ಮೋಕ್ಷವು ಸಿಗಬೇಕಾದರೆ ಅದಕ್ಕೆ ಅವನ ಕರ್ಮಗಳ ಹೊರತು ಇನ್ನಾವುದೂ ಪ್ರಯೋಜನಪಡ ಲಾರದೆಂದು ಈ ಸೂಕ್ತಿಯು ಸ್ಪಷ್ಟಪಡಿಸುತ್ತದೆ.

[ಅನ್ನಜ್ಮ್ : 39]


اما قراءة القرآن فالمشهور من مذهب الشافعي انه ﻻ يصل ثوابها الى الميت وقال بعض اصحابه انه يصل ثوابها الى الميت و ذهب جماعة من العلماء الى انه يصل ثواب جميع العبادات وكل هذه المذاهب ضعيفة و دليلهم القياس علي الدعاء و دليل الشافعي و موافقه قول الله تعالى"وان ليس لﻹنسان اﻻ ما سعى " و قول النبي صلى الله عليه وسلم "اذا مات ابن آدم انقطع عمله اﻻ من ثلاث صدقة جارية و علم ينتفع به او ولد صالح يدعو له (شرح مسلم : ج1 ص 90)

ಶಾಫಿಈ ಮದ್ಹಬಿನ ಮಶ್ಹೂರ್ ಆದ ಅಭಿಪ್ರಾಯ ಕುರ್‌ಆನ್ ಓದಿ ಹದೀಯ ಮಾಡಿದರೆ ಅದು ಆ ಮಯ್ಯತ್ತಿಗೆ ತಲುಪುವುದಿಲ್ಲ ಎಂದು ಇಮಾಮ್ ಶಫೀಈ ಮತ್ತು ಅವರನ್ನು ಅನುಸರಿಸಿದವರೂ ಪುರಾವೆಯಾಗಿ ಕಂಡಿದ್ದು ಸೂರ ಅನ್ನಜ್ಮ್ 39 ನೇ ಸೂಕ್ತಿಯನ್ನಾಗಿದೆ. ಅದೇ ರೀತಿ ಪ್ರವಾದಿ ﷺ ರು ಹೇಳುತ್ತಾರೆ : ಒಬ್ಬ ಮರಣ ಹೊಂದಿದರೆ ಅವನಿಂದ ಮೂರು ಕಾರ್ಯಗಳು ಮಾತ್ರ ಬಾಕಿಯಾಗಿ ಉಳಿದಿರುತ್ತದೆ. ಅದೇನೆಂದರೆ 1. ಮರಣ ಹೊಂದಿದ ವ್ಯಕ್ತಿಯ ಸ್ವಾಲಿಹ್ ಆದ ಮಕ್ಕಳ ಪ್ರಾರ್ಥನೆ, 2. ಉಪಕಾರಕ್ಕೆ ಸಿಗುವಂತಹ ಅರಿವು, 3. ಜಾರಿಯಾ ಆದ ಸ್ವದಕಾ. ಎಂದಾಗಿದೆ ಇಮಾಮ್ ನವವೀ ತನ್ನ ಶರಹುಲ್ ಮುಸ್ಲಿಮ್ ನಲ್ಲಿ ಉಲ್ಲೇಖಿಸಿರುವುದು.

(ಶರಹ್ ಮುಸ್ಲಿಮ್ : 1/90)

ಅದೇ ರೀತಿ ಇಬ್ನು ಕತೀರ್ (ರ) ರವರು ತನ್ನ ತಫ್ಸೀರ್ ನಲ್ಲಿ ಅನ್ನಜ್ಮ್ ಸೂರತ್ತಿನ 39 ನೇ ಸೂಕ್ತಿಯನ್ನು ವ್ಯಾಖ್ಯಾನಿಸಿ ಹೇಳುತ್ತಾರೆ : 🔽

ومن هذه الآية الكريمة استنبط الشافعي رحمه الله ومن اتبعه أن القراءة لا يصل إهداء ثوابها إلى الموتى لأنه ليس من عملهم ولا كسبهم ولهذا لم يندب إليه رسول الله صلى الله عليه وسلم أمته ولا حثهم عليه ولا أرشدهم إليه بنص ولا إيماءٍ ولم ينقل ذلك عن أحد من الصحابة رضي الله عنه ولو كان خيرا لسبقونا إليه .

"ಮರಣ ಹೊಂದಿದವರಿಗೆ ಕುರಾನ್ ಪಾರಾಯಣ ಮಾಡಿ ಅದರ ಪ್ರತಿಫಲವನ್ನು ಹದಿಯಾ ಮಾಡಿದರೆ ಅದು ಅವರಿಗೆ ತಲುಪುವೂದಿಲ್ಲ ಎಂದು ಇಮಾಮ್ ಶಫೀಈ (ರ) ಮತ್ತು ಅವರ ಅನುಚರರು ಈ ಆದರಣೀಯ ಆಯತ್ ನಿಂದ ಪುರಾವೆಯನ್ನು ಸಂಶೋದಿಸಿದ್ದಾರೆ ಕಾರಣ ಅದು ಅವರ ಪರಿಶ್ರಮದಲ್ಲಿ ಅವರ ಸಂಪಾದನೆಯಲ್ಲಿ ಸೇರಿಲ್ಲ ಆದುದರಿಂದ ಪ್ರವಾದಿ(ಸ್)ರವರು ತಮ್ಮ ಸಮುದಾಯವನ್ನು ಈ ಸಂಪ್ರದಾಯಡೆಡೆಗೆ ಪ್ರೇರೇಪಿಸಿಲ್ಲ ಮತ್ತು ಸ್ಪಷ್ಟವಾದ ವಚನದ ಮೂಲಕ ಅಥವಾ ಸೂಚನೆಯ ಮೂಲಕವೂ ಅವರು ಆದರೆಡೆಗೆ ಮಾರ್ಗದರ್ಶನ ನೀಡಲಿಲ್ಲ. ಈ ಸಂಪ್ರದಾಯವೂ ಯಾವೊಬ್ಬ ಸಾಹಾಬಿಯಿಂದಲೂ ಉದ್ದರಿಸಲ್ಪಟ್ಟಿಲ್ಲ ಅದೊಂದು ಪುಣ್ಯ ಕರ್ಮವಾಗಿದ್ದರೆ ಅವರು ನಮಗಿಂತಲೂ ಮುಂಚಿತವಾಗಿ ದಾವಿಸುತಿದ್ದರು"

(ತಫ್ಸೀರ್ ಇಬ್ನ್ ಕತೀರ್" 1/64-65)



ಕುರಾನ್ ಬದುಕಿ ಇರುವವರಿಗೆ ಮುನ್ನೆಚ್ಚರಿಕೆಯಾಗಿದೆ, ಮರಣ ಹೊಂದಿದವರಿಗೆ ಅಲ್ಲ. 🔽

وَمَا عَلَّمْنَاهُ الشِّعْرَ وَمَا يَنْبَغِي لَهُ ۚ إِنْ هُوَ إِلَّا ذِكْرٌ وَقُرْآنٌ مُبِينٌ

ನಾವು ಅವರಿಗೆ (ಪ್ರವಾದಿಯವರಿಗೆ) ಕವಿತೆ ಯನ್ನು ಕಲಿಸಿಕೊಟ್ಟಿಲ್ಲ. ಅದು ಅವರಿಗೆ ಯುಕ್ತವಾದುದೂ ಅಲ್ಲ. ಇದೊಂದು ಉಪದೇಶ ಮತ್ತು ವಿಷಯಗಳನ್ನು ಸ್ಪಷ್ಟಗೊಳಿಸುವ ಕುರ್ಆನ್ ಮಾತ್ರವಾಗಿದೆ.

 ... لِيُنْذِرَ مَنْ كَانَ حَيًّا وَيَحِقَّ الْقَوْلُ عَلَى الْكَافِرِينَ

ಬದುಕಿರುವವರಿಗೆ ಮುನ್ನೆಚ್ಚರಿಕೆ ನೀಡುವ ಸಲುವಾಗಿ ಮತ್ತು ಸತ್ಯನಿಷೇಧಿಗಳ ಮೇಲೆ (ಶಿಕ್ಷೆಯ) ವಚನವು ಸತ್ಯವಾಗುವ ಸಲುವಾಗಿ.

[ಯಾಸೀನ್ : 69 - 70]


🔴 ಪ್ರವಾದಿ ﷺ ರವರು, ಅವರ ಜೀವನಕಾಲದಲ್ಲಿ ನೂರಾರು ಸ್ವಹಾಬಿಗಳ ಮರಣಾನಂತರದ ಕಾರ್ಯಗಳಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಅವರಲ್ಲಿ ಯಾವುದಾದರೂ ಒಂದು ಮಯ್ಯತ್'ನ ಬಳಿ ಪ್ರವಾದಿ(ಸ.ಅ) ರವರು ಕುರ್'ಆನಿನ ಯಾವುದಾದರೂ ಒಂದು ಆಯತನ್ನು ಪಠಿಸಿರುವುದಾಗಿ ಅಥವಾ ಇತರರಲ್ಲಿ ಪಠಿಸಲು ಅಪೇಕ್ಷಿಸಿರುವುದಾಗಿ ಯಾವುದೇ ಒಂದು ಆಧಾರವಿಲ್ಲ. ಅಷ್ಟು ಮಾತ್ರವಲ್ಲ ಅಂತಹ ಸಂಧರ್ಭಗಳಲ್ಲಿ ಪ್ರವಾದಿ ﷺ ರವರು ಮೌನಪಾಲಿಸಿ ಇತರರಿಗೆ ಮೌನ ಪಾಲಿಸುವಂತೆ ಆದೇಶ ನೀಡಿದ್ದಾರೆ. ಆದುದರಿಂದ ಅಲ್ಲಿ ಕುರ್'ಆನ್ ಪಾರಾಯಣ ಮಾಡುವುದು ಪ್ರವಾದಿ ﷺ ರವರ ಮಾದರಿಯಿಲ್ಲದ ಅನಾಚಾರವಾಗಿದೆ. ಅದು ಅನಾಚಾರವಾದುದು ಕುರ್'ಆನ್ ಒಂದು ಕೆಟ್ಟ ಪ್ರವೃತ್ತಿಯಾದುದರಿಂದಲ್ಲ, ಬದಲಾಗಿ ಆ ಸಮಯದಲ್ಲಿ ಕುರ್'ಆನ್ ಪಾರಾಯಣವನ್ನು ಪ್ರವಾದಿ ﷺ ರವರು ನಮಗೆ ತೋರಿಸಿ ಕೊಡಲಿಲ್ಲ. ಈ ಅನಾಚಾರವನ್ನು ಸಮರ್ಥಿಸಲಿಕ್ಕಾಗಿ ಕೆಲವು ವಿದ್ವಾಂಸರು ಮುಂದಿಡುವುದು "ಇಖರಊ ಸೂರತ ಯಾಸೀನ್ ಅಲಾ ಮೌತಾಕುಮ್" ಎಂಬ ದುರ್ಬಲ ಹದೀಸನ್ನಾಗಿದೆ. ಪ್ರಸ್ತುತಃ ಹದೀಸ್ ನ ದುರ್ಬಲತೆಯ ಕುರಿತು ಇಮಾಮ್ ನವವೀ(ರ) ರವರು ಹೇಳುವುದನ್ನು ನೋಡಿರಿ:

أَنَّ النَّبِيَّ صَلَّى اللَّهُ عَلَيْهِ وَسَلَّمَ قَالَ: اقْرَءُوا يس عَلَى مَوْتَاكُمْ : إِسْنَادُهُ ضَعِيفٌ فِيهِ مَجْهُولَانِ

"ಪ್ರವಾದಿ(ಸ.ಅ) ರವರು ನುಡಿದರು: ನೀವು ಮರಣ ಹೊಂದಿದವರ ಮೇಲೆ ಸೂರಃ ಯಾಸೀನ್ ಪಾರಾಯಣ ಮಾಡಿರಿ. ನಾನು (ಇಮಾಮ್ ನವವೀ)  ಹೇಳುತ್ತೇನೆ: ಈ ಹದೀಸ್ ನ ಸನದ್ ದುರ್ಬಲವಾಗಿದೆ. ಈ ಹದೀಸ್ ನ ಸನದ್ ನಲ್ಲಿ ಇಬ್ಬರು ಮಜ್'ಹೂಲ್ ಗಳಿದ್ದಾರೆ."
(ಅಲ್ ಅದ್ಕಾರ್ : 122)


ಹೀಗಿರುವಾಗ ಮರಣ ಹೊಂದಿದ ವ್ಯಕ್ತಿಯ ಬಳಿಯಲ್ಲಿ ಕುರ್ ಆನ್ ಪಾರಾಯಣ ಮಾಡುವುದಕ್ಕೆ ಪ್ರಮಾಣಗಳಲ್ಲಿ ಯಾವುದೇ ಪುರಾವೆಗಳಿಲ್ಲವೆಂಬುದು ಸ್ಪಷ್ಟ.

ಮರಣಾನಂತರ ಸಿಗುವಂತಹ ಪ್ರಯೋಜನಗಳು.

ಮರಣಾನಂತರ ಸಿಗುವಂತಹ ಪ್ರಯೋಜನಗಳು.

ಪ್ರವಾದಿ (ﷺ) ಹೇಳಿದರು :
أَمَّا أَبُوكَ فَلَوْ كَانَ أَقَرَّ بِالتَّوْحِيدِ فَصُمْتَ وَتَصَدَّقْتَ عَنْهُ نَفَعَهُ ذَلِكَ:

ತಮ್ಮ ತಂದೆ ತೌಹೀದ್'ನಲ್ಲಿ ಇರುವವರಾಗಿದ್ದು ತಾವು ಅವರ ಪರವಾಗಿ ಉಪವಾಸ ಆಚರಿಸಿದರೆ ಮತ್ತು ದಾನಧರ್ಮ ಮಾಡಿದರೆ ಅದು ಅವರಿಗೆ ಪ್ರಯೊಜನಪಡುತ್ತದೆ.

ಇಮಾಮ್ ಅಹ್ಮದ್(ರ) ರವರು ವರದಿ ಮಾಡಿದಂತೆ ಅಲ್'ಆಸ್ ಇಬ್ನು ವಾಯಿಲ್'ರವರು ಜಾಹಿಲೀಯತ್ ನಲ್ಲಿದ್ದಾಗ ನೂರು ಒಂಟೆಗಳನ್ನು ಬಲಿ ಕೊಡುವುದಾಗಿ ಹರಕೆ ಹೊತ್ತಿದ್ದರು. ಅವರ ಇಬ್ಬರು ಮಕ್ಕಳ ಪೈಕಿ ಹಿಶಾಮ್ ಇಬ್ನುಲ್ ಆಸ್'ರವರು ತನ್ನ ಪಾಲಿನ ಐವತ್ತು ಒಂಟೆಗಳನ್ನು ಬಲಿ ಕೊಟ್ಟರು. ಆಗ ಇನ್ನೊಬ್ಬ ಮಗನಾದ ಆಮ್ರ್  ಇಬ್ನುಲ್ ಆಸ್ ಪ್ರವಾದಿ ( ﷺ )ರೊಂದಿಗೆ ಇದರ ಬಗ್ಗೆ ಕೇಳಿದಾಗ ಪ್ರವಾದಿ ( ﷺ )ರವರು ಮೇಲಿನ ಹದೀಸಿನಲ್ಲಿ ಇರುವಂತೆ ಉತ್ತರ ಕೊಟ್ಟರು.

ಮೃತ ತಂದೆ ಮತ್ತು ತಾಯಿ ಮುಸ್ಲಿಮರಾಗಿದ್ದರೆ ಅವರ ಪರವಾಗಿ ಮಕ್ಕಳು ಮಾಡುವ ದಾನಧರ್ಮ ಮತ್ತು ಉಪವಾಸಗಳು ಅವರಿಗೆ ಪ್ರಯೋಜನ ನೀಡುತ್ತದೆಯಂಬುದಕ್ಕೆ ಇದರಲ್ಲಿ ಪುರಾವೆಯಿದೆ. ಯಾಕೆಂದರೆ ಮಕ್ಕಳು ತಂದೆ, ತಾಯಂದಿರ ಪರಿಶ್ರಮದ ಫಲವಾಗಿದ್ದಾರೆ. ಆದ್ದರಿಂದ ಈ ಕೆಳಗಿನ ಆಯತ್ತಿನ ಸಾರ್ವತ್ರಿಕ ಅರ್ಥದಲ್ಲಿ ಅವರೂ ಸೇರುತ್ತಾರೆ.

وَأَنْ لَيْسَ لِلْإِنْسَانِ إِلَّا مَا سَعَى :النجم

ಮನುಷ್ಯನಿಗೆ ಅವನು ಪರಿಶ್ರಮಿಸಿದ್ದಲ್ಲದೆ ಬೇರೇನೂ ಲಭ್ಯವಾಗದು.
[ಕುರ್'ಆನ್:53:39]

ಈ ಹದೀಸಿನಲ್ಲಿರುವ ಪ್ರಕಾರ ಮಕ್ಕಳು ಮಾಡುವ ಕರ್ಮಗಳ ಪ್ರತಿಫಲವು ತೌಹೀದ್'ನಲ್ಲಿರುವ ಅವರ ತಂದೆ ಮತ್ತು ತಾಯಿಗೆ ತಲುಪುತ್ತದೆ. ಆದ್ದರಿಂದ ಈ ಹದೀಸಿನಲ್ಲಿರುವ ವಿಷಯವನ್ನು ತಂದೆ ಅಥವಾ ತಾಯಿಗೆ ಮಾತ್ರ ಸೀಮಿತಗೊಳಿಸಬೇಕೇ ಹೊರತು ಮೃತಪಟ್ಟವರಿಗೆಲ್ಲಾ ತಲುಪುತ್ತದೆ ಎಂಬುದಕ್ಕೆ ಆಧಾರವನ್ನಾಗಿ ಮಾಡಬಾರದು. ಕೆಲವರು ಈ ಹದೀಸನ್ನು ಆಧಾರವಾಗಿಟ್ಟು ಮೃತಪಟ್ಟವರಿಗೆ ಹದ್ಯಾ ಮಾಡಿದರೆ ಅದರ ಪ್ರತಿಫಲವು ಅವರಿಗೆ ತಲುಪುತ್ತದೆ ಎನ್ನುತ್ತಾರೆ. ಇದು ತಪ್ಪು.  ಯಾಕೆಂದರೆ ಹದೀಸ್'ನಲ್ಲಿ ಅದಕ್ಕೆ ಪುರಾವೆಯಿಲ್ಲ. ಹದೀಸಿನಲ್ಲಿರುವುದು ಮಕ್ಕಳು ಮಾಡುವ ಕರ್ಮಗಳ ಪ್ರತಿಫಲವು ಅವರ ತಂದೆ, ತಾಯಿಗೆ ತಲುಪುತ್ತದೆ ಎಂಬುದು ಮಾತ್ರವಾಗಿದೆ.

ಮೃತಪಟ್ಟ ಯಾವುದೇ ವ್ಯಕ್ತಿಗೂ ಜೀವಂತವಿರುವ ವ್ಯಕ್ತಿ ಹದ್ಯಾ ಮಾಡುವ ಯಾವುದೇ ಕರ್ಮವೂ ತಲುಪುತ್ತದೆ ಎಂಬುದಕ್ಕೆ ಹದೀಸಿನಲ್ಲಿ ಯಾವುದೇ ಪುರಾವೆಯಿಲ್ಲ . ಆದರೆ ಕೆಲವೊಂದು ಕರ್ಮಗಳ ಹೊರತು. ಅವುಗಳ ಪೈಕಿ ಒಂದು ದುವಾ  (ಪ್ರಾರ್ಥನೆ). ಮೃತ ವ್ಯಕ್ತಿಗಾಗಿ ಪ್ರಾರ್ಥನೆ ಮಾಡಿದರೆ ಮತ್ತು ಅದನ್ನು ಅಲ್ಲಾಹನು ಆ ಪ್ರಾರ್ಥನೆಗೆ ಉತ್ತರವನ್ನು ನೀಡಿದರೆ ಆ ಪ್ರಾರ್ಥನೆಯು ಮೃತ ವ್ಯಕ್ತಿಗೆ ಪ್ರಯೋಜನ ಪಡುತ್ತದೆ. 'ಅಹ್ಕಾಮುಲ್ ಜನಾಯಿಝ್' ಎಂಬ ನನ್ನ ಗ್ರಂಥದಲ್ಲಿ ನಾನಿದನ್ನು ವಿವರಿಸಿದ್ದೇನೆ. ಅತಿರೇಕದಲ್ಲಿ ಮತ್ತು ಅಪೂರ್ಣತೆಯಲ್ಲಿ ಒಳಪಡದಿರುವುದಕ್ಕಾಗಿ ನಾವು ಇದನ್ನು ಅರಿತುಕೊಳ್ಳಬೇಕಾಗಿದೆ.

ಒಟ್ಟಿನಲ್ಲಿ ಮಕ್ಕಳು ತಮ್ಮ ತಂದೆ ಅಥವಾ ತಾಯಿಯ ಪರವಾಗಿ ದಾನಧರ್ಮ ವನ್ನು ಮಾಡಬಹುದು, ಉಪವಾಸ ಆಚರಿಸಬಹುದು, ಹಜ್ಜ್ ನಿರ್ವಹಿಸಬಹುದು, ಉಮ್ರಾ ನಿರ್ವಹಿಸಬಹುದು. ಯಾಕೆಂದರೆ ಮಕ್ಕಳು ತಂದೆ, ತಾಯಂದಿರ ಪರಿಶ್ರಮದ ಫಲವಾಗಿದ್ದಾರೆ. ಈ ವಿಶೇಷತೆಯು ತಂದೆ ತಾಯಂದಿರ ಹೊರತು ಬೇರೆಯವರಿಗೆ ಇಲ್ಲ. ಈಗಾಗಲೇ ತಿಳಿಸಿದವುಗಳ ಹೊರತು.

ಅಶೈಖ್ ಮೊಹಮ್ಮದ್ ನಾಸಿರುದ್ದೀನ್ ಅಲ್ ಅಲ್ಬಾನಿ
(ಸಿಲ್ಸಿಲತು ಅಹಾದೀಸಿ ಸ್ವಹೀಹಾ 484)

ಮುಹಮ್ಮದ್ ಬಿನ್ ಅಬ್ದುಲ್ ವಹ್ಹಾಬ್ (ರ) ರವರ ಕುಟುಂಬ ಪರಂಪರೆ

ಸಲಫೀ ವಿದ್ವಾಂಸ ಶೈಖ್ ಮುಹಮ್ಮದ್ ಬಿನ್ ಅಬ್ದುಲ್ ವಹ್ಹಾಬ್(ರ) ರ ಕುಟುಂಬ ಪರಂಪರೆಯ ಬಗ್ಗೆ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವ ಕಳ್ಳ ಕಥೆಗಳಿಗೆ ಉತ್ತರ;

ಮುಹಮ್ಮದ್ ಬಿನ್ ಅಬ್ದುಲ್ ವಹ್ಹಾಬ್ (ರ) ರವರ ಕುಟುಂಬ ಪರಂಪರೆ
👇👇👇

1. ಸುಲೈಮಾನ್ ಬಿನ್ ಅಲಿಯ್

2. ಮುಹಮ್ಮದ್ ಬಿನ್ ಅಹ್ಮದ್

3. ರಾಷಿದ್ ಬಿನ್ ಬುರೈದ್

4. ಮುಹಮ್ಮದ್ ಬಿನ್ ಬುರೈದ್

5. ಮುಷ್ರಫ್ ಬಿನ್ ಉಮರ್

6. ಮ'ಳೂದ್ ಬಿನ್ ರ'ಈಸ್

7. ಸಾಹಿರ್ ಬಿನ್ ಮುಹಮ್ಮದ್

8. ಉಲುವ್ವ್ ಬಿನ್ ಹುವೈಬ್

9. ಖಾಸಿಂ ಬಿನ್ ಮೂಸ

10. ಮಸ್'ಊದ್ ಬಿನ್ ಉಖ್ಬ

11.  ಸನೀಅ ಬಿನ್ ನಷ್'ಹಲ್

12. ಷದಾದ್ ಬಿನ್ ಝುಹೈರ್

13. ಶಿಹಾಬ್ ಬಿನ್ ರಬೀಅ

14. ಅಬೀ ಸ'ಊದ್ ಬಿನ್ ಮಾಲಿಕ್

15. ಹಂಳಲತ್ ಬಿನ್ ಮಾಲಿಕ್

16. ಸೈದ್ ಬಿನ್  ಮನಾದ್

17. ತಮೀಂ ಬಿನ್ ಮುತ್ರ್

18. ಅದ್ದ್ ಬಿನ್ ತ್ವಬೀಹ

19. ಇಲ್ಯಾಸ್ ಬಿನ್ ಮುಳ್ತರ್ರ್

20. ನಿಸಾರಿ ಬಿನ್ ಮ'ಆದ್

22. ಇಬ್ನ್  ಅದ್ನಾನ್

ಇದಾಗಿದೆ ಅಬ್ದುಲ್ ವಹಾಬ್ ರವರ ನೈಜ್ಯ ಪರಂಪರೆ.

ಆದರೆ ಈಗ ಸಾಮಾಜಿಕ ತಾಣಗಳಲ್ಲಿ ಆ ಮಹಾತ್ಮಮರ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ಅಪಪ್ರಚಾರಕ್ಕೆ ಇಳಿದವರ  ಮನೋಸ್ಥಿತಿಯನ್ನು ನಮಗೆ ಊಹಿಸಬಹುದಾಗಿದೆ. ಇಂತಹ ನೀಚ ಕೆಲಸಕ್ಕೆ ಇಳಿದವರು ಬೇರೆ ಯಾರು ಅಲ್ಲ ಕೇರಳದ ಶಿಯಾ ಜಮಾ'ಅತ್ ಎಂಬ ಕೂದಲು ವ್ಯಾಪಾರಿಗಳ ಸಂತತಿಗಳಾಗಿವೆ. ಕಾರಣ ಸರ್ವ ಶಿಯಾಗಳ ಆದರ್ಶ ವನ್ನು ಧೂಳಿಪಟ ಮಾಡಿದ ಶೈಖ್'ರ ವರನ್ನು ಇಸ್ಲಾಮಿನ ಶತ್ರು ವಾಗಿ ಬಿಂಬಿಸುವುದು ಅವರ ಉದ್ದೇಶ ವಾಗಿದೆ.

ಸಲಫಿಗಳು ಸಮಸ್ತ ಶಿಯಾಗಳ ಆದರ್ಶ ವನ್ನು ಆದರ್ಶ ದ ಮೂಲಕವೇ ಎದುರಿಸಿದಾಗ, ಅದಕ್ಕೆ ಉಳಿಗಾಲವಿಲ್ಲ ಎಂಬ ಭಯದಿಂದ ಇಂತಹ ನೀಚ ಕೆಲಸಕ್ಕೆ ಇಳಿಯುತ್ತಾರೆ. ಪ್ರವಾದಿ(ಸ)ರವರ ಕೂದಲೆಂದು ಹೇಳಿ ಯಾರದ್ದೋ ಕೂದಲನ್ನು ತಂದು ಅದಕ್ಕೆ ನಕಲಿ ಸನದ್  ಉಂಟು ಮಾಡಿದವರಿಗೆ ಶೈಖರ ಹೆಸರಿನಲ್ಲಿ ನಕಲಿ ಸನದ್ ಉಂಟು ಮಾಡುವುದು ದೊಡ್ಡ ಕೆಲಸವೇನಲ್ಲ.

ವಾಸ್ತವದಲ್ಲಿ ಬನೂ ತಮೀಂ ಎಂಬ ಪ್ರತಿಷ್ಠಿತ ಗೋತ್ರದಲ್ಲಾಗಿದೆ ಅವರ ಜನನ.ಇದು ಚರಿತ್ರಕಾರರು ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ.

ಮಾತ್ರವಲ್ಲ ಬನೂ ತಮೀಂ ಗೋತ್ರವನ್ನು ಪ್ರವಾದಿ(ಸ)ರವರು ಪ್ರಶಂಸಿಸುತಿದ್ದರು..

⤵⤵⤵

  ನನ್ನ ಉಮ್ಮತಿನಲ್ಲಿ ದಜ್ಜಾಲಿನೊಂದಿಗೆ ಶಕ್ತವಾಗಿ ಹೋರಾಡುವವರು ಬನೂ ತಮೀಂ ಗೋತ್ರದವರಾಗಿದ್ದಾರೆ. ಎಂದು ಪ್ರವಾದಿ(ಸ) ಹೇಳಿದ ಉಲ್ಲೇಖಿಸಲ್ಪಟ್ಟಿದೆ.

ಮತ್ತೊಂದು ಸಂದರ್ಭದಲ್ಲಿ ಬನೂ ತಮೀಂ ಗೋತ್ರದವರ ಝಕಾತ್ ಬಂದಾಗ ಪ್ರವಾದಿ(ಸ)ರವರು ,ಇದು ನಮ್ಮ ಜನರದ್ದಾಗಿದೆ ಎಂದೂ ಹದೀಸ್ ನಲ್ಲಿ ಉಲ್ಲೇಖಿಸಲ್ಪಟ್ಟಿದೆ.

ಇಷ್ಟೇ ಅಲ್ಲದೆ ಈ ಬನೂ ತಮೀಮ್ ಗೋತ್ರದವರು ಪ್ರವಾದಿ ಇಸ್ಮಾಯೀಲ್ (ಅ) ರ ವಂಶಸ್ಥರೂ ಆಗಿದ್ದಾರೆ.

👉🏿ಹದೀಸ್:-

حَدَّثَنَا زُهَيْرُ بْنُ حَرْبٍ، حَدَّثَنَا جَرِيرٌ، عَنْ عُمَارَةَ بْنِ الْقَعْقَاعِ، عَنْ أَبِي زُرْعَةَ، عَنْ أَبِي هُرَيْرَةَ ـ رضى الله عنه ـ قَالَ لاَ أَزَالُ أُحِبُّ بَنِي تَمِيمٍ. وَحَدَّثَنِي ابْنُ سَلاَمٍ أَخْبَرَنَا جَرِيرُ بْنُ عَبْدِ الْحَمِيدِ عَنِ الْمُغِيرَةِ عَنِ الْحَارِثِ عَنْ أَبِي زُرْعَةَ عَنْ أَبِي هُرَيْرَةَ. وَعَنْ عُمَارَةَ عَنْ أَبِي زُرْعَةَ عَنْ أَبِي هُرَيْرَةَ قَالَ مَا زِلْتُ أُحِبُّ بَنِي تَمِيمٍ مُنْذُ ثَلاَثٍ سَمِعْتُ مِنْ رَسُولِ اللَّهِ صلى الله عليه وسلم يَقُولُ فِيهِمْ، سَمِعْتُهُ يَقُولُ " هُمْ أَشَدُّ أُمَّتِي عَلَى الدَّجَّالِ ". قَالَ وَجَاءَتْ صَدَقَاتُهُمْ، فَقَالَ رَسُولُ اللَّهِ صلى الله عليه وسلم " هَذِهِ صَدَقَاتُ قَوْمِنَا ". وَكَانَتْ سَبِيَّةٌ مِنْهُمْ عِنْدَ عَائِشَةَ. فَقَالَ " أَعْتِقِيهَا فَإِنَّهَا مِنْ وَلَدِ إِسْمَاعِيلَ ".

ಅಬೂ ಹುರೈರಾ(ರ) ರಿಂದ ವರದಿ;

ರಸೂಲುಲ್ಲಾಹ್(ಸ.ಅ) ರಿಂದ  ಬನೂ ತಮೀಮ್ ಗೋತ್ರದವರ ಬಗ್ಗೆ ಈ ಮೂರು ಸಂಗತಿಯನ್ನು ಕೇಳಿದ ನಂತರ ನಾನು ಆ ಗೋತ್ರದವರನ್ನು ಪ್ರೀತಿಸಲು ಪ್ರಾರಂಭಿಸಿದೆ.
ಒಮ್ಮೆ ಬನೂ ತಮೀಮ್ ಗೋತ್ರದವರ ಕುರಿತು ರಸೂಲ್(ಸ.ಅ) ಹೇಳಿದರು; ನನ್ನ ಸಮುದಾಯದಲ್ಲಿ ಈ ಜನರು ದಜ್ಜಾಲನ ವಿರುದ್ಧ ಶಕ್ತವಾಗಿ ಹೋರಾಡುವವರಾಗಿದ್ದಾರೆ. ಮತ್ತೊಮ್ಮೆ ಬನೂ ತಮೀಮ್ ಗೋತ್ರದವರ ಝಕಾತ್ ರಸೂಲುಲ್ಲಾಹ್(ಸ.ಅ)ರ ಮುಂದೆ ತರಲ್ಪಟ್ಟಾಗ ಇದು ನಮ್ಮ ಜನರದ್ದಾಗಿದೆ ಎಂದು ಹೇಳಿದರು. ಇನ್ನೊಮ್ಮೆ ರಸೂಲ್(ಸ.ಅ) ಆಯಿಶಾ(ರ) ರನ್ನು ಕರೆದು, ಬನೂ ತಮೀಮ್ ಗೋತ್ರದವಳಾದ ಒಬ್ಬಳು ಗುಲಾಮ ಸ್ರ್ತೀ ಇದ್ದಾಳೆ. ಅವಳನ್ನು ವಿಮೋಚನೆ ಗೊಳಿಸು, ಅವಳು ಪ್ರವಾದಿ ಇಸ್ಮಾಯೀಲ್(ಅ) ರ ವಂಶಸ್ಥಳಾಗಿದ್ದಾಳೆ ಎಂದರು.

#Reference :

#Sahih_al_Bukhari_2543_In_book_reference_Book_49

&

#Sahih_al_Bukhari_4366_In_book_reference_Book_64

ಇಷ್ಟೆಲ್ಲಾ ಪುರಾವೆಗಳು ಇದ್ದರೂ ಕೂಡ ಇದನೆಲ್ಲಾ ಅಡಗಿಸಿಡಲು ಶ್ರಮಿಸುವವರಿಗೆ ಯಾವ ಕಾಲಘಟ್ಟದಲ್ಲಿಯೂ ನಿರಾಶೆ ಯಲ್ಲದೇ  ಬೇರೆ ಏನೂ ಸಿಗಲಾರದು.

ಇನ್ನೊಂದು ಪ್ರಮುಖ ಅಂಶವೇನೆಂದರೆ ಶೈಖ್ ಇಬ್ನ್ ಅಬ್ದುಲ್ ವಹ್ಹಾಬ್(ರ) ಮಾತ್ರ ವಲ್ಲದೆ ಶೈಖ್ ಇಬ್ನ್ ಉಸೈಮೀನ್ (ರ) ಹಾಗೂ ಸೌದಿಯ ಈಗಿನ ಗ್ರಾಂಡ್ ಮುಫ್ತಿ ಆಗಿರುವ ಅಬ್ದುಲ್ ಅಝೀಝ್ ಇಬ್ನ್ ಅಬ್ದುಲ್ಲಾಹ್ ಆಲು ಶೈಖ್(ಹ) ಕೂಡ ಇದೇ ಪ್ರತಿಷ್ಠಿತ ಬನೂ ತಮೀಮ್ ಗೋತ್ರದಲ್ಲಿ ಜನಿಸಿದವರಾಗಿದ್ದಾರೆ.

✍🏽 ಲೇಖನ: ಮುಷ್ತಾಕ್ ಅಬ್ದುರ್ರಹ್ಮಾನ್ ಪುತ್ತೂರು.

•••
ಈ ಪೇಜನ್ನು ಲೈಕ್ ಮಾಡಲು ಈ ಲಿಂಕ್ ಬಳಸಿ👇🏽
https://m.facebook.com/QuranmatthuHadeesVchanagalu/

29 Sept 2016

ತರಾವೀಹ್ ಅಥವಾ ಕಿಯಾಮು ರಮದಾನ್ ನಮಾಝಿನ ಸಂಖ್ಯೆ ಮತ್ತು ಅದಕ್ಕಾಗಿ ಒಂದುಗೂಡುವಿಕೆ ಪ್ರಮಾಣಗಳಿಂದ.



 حدثنا إسماعيل قال حدثني مالك عن سعيد المقبري عن أبي سلمة بن عبد الرحمن أنه سأل عائشة رضي الله عنها كيف كانت صلاة رسول الله صلى الله عليه وسلم في رمضان فقالت ما كان يزيد في رمضان ولا في غيره على إحدى عشرة ركعة يصلي أربعا فلا تسل عن حسنهن وطولهن ثم يصلي أربعا فلا تسل عن حسنهن وطولهن ثم يصلي ثلاثا فقلت يا رسول الله أتنام قبل أن توتر قال يا عائشة إن عيني تنامان ولا ينام قلب)

 الكتب » صحيح البخاري » كتاب صلاة التراويح » باب فضل من قام رمضان

 أخرجه البخاري في كتاب الجمعة، (وكتاب الصلاة التراويح.)  باب قيام النبي بالليل برقم 1079، ومسلم في كتاب صلاة المسافرين، باب صلاة الليل برقم 1219.


ಆಯಿಷಾ (ರ) ರವರಿಂದ ನಿವೇಧನೆ : ಅಲ್ಲಾಹನ ಪ್ರವಾದಿ ﷺ ರ ರಮದಾನ್ ನ ರಾತ್ರಿ ನಮಾಜ್ ಯಾವ ರೀತಿ ಆಗಿತ್ತು ಎಂದು ಉಮ್ಮು ಸಲಮಾ (ರ) ರ ಪ್ರಶ್ನೆಗೆ ಆಯಿಶ (ರ) ರವರ ಉತ್ತರ :ರಸೂಲ್ (ಸ) ರಮದಾನ್ ನಲ್ಲಾಗಲೀ ಅಲ್ಲದ ದಿವಸಗಳಲ್ಲಾಗಲೀ 11 ಕ್ಕಿಂತ ಹೆಚ್ಹು ನಮಾಜ್ ಮಾಡಿಲ್ಲ. ನೆಬಿ ﷺ ನಾಲ್ಕು ರಕ'ಅತ್ ನಮಾಝ್ ಮಾಡುತ್ತಿದ್ದರು ಆದರೆ ಅದರ ಅಂದ ಮತ್ತು ಧೀರ್ಘವನ್ನು ಕೇಳಬೇಡಿ, ನಂತರ ನಾಲ್ಕು ರಕ'ಅತ್ ನಮಾಝ್ ಮಾಡುತ್ತಿದ್ದರು ಆದರೆ ಅದರ ಅಂದ ಮತ್ತು ಧೀರ್ಘವನ್ನು ಕೇಳಬೇಡಿ. ನಂತರ ಮೂರು ರಕ'ಅತ್ ನಮಾಝ್ ನಿರ್ವಹಿಸುತಿದ್ದರು.

 🔘 ಈ ಮೇಲಿನ ಹದೀಸನ್ನು ಬುಖಾರಿ ಇಮಾಮ್ ಬರೆದಿರುವುದು ಸಹೀಹ್ ಬುಖಾರಿಯ ಕಿತಾಬ್ ಸ್ವಲಾತ್ ತರಾವೀಹ್ ನಲ್ಲಿ.

 🔘ಸುನ್ನಿಗಳ  ಪ್ರಕಾರ ತರಾವೀಹ್ 20 ರಕ'ಅತ್ ಎಂದು ಸಂಕಲ್ಪ ಮಾಡಿ ಆಯಿಷಾ (ರ)ರವರು ವರದಿ ಮಾಡಿದ 8+3 ರಕ'ಅತ್ ನ್ನು ಒಟ್ಟುಗೂಡಿಸಿದರೆ 20+8+3=31 ರಕ'ಅತ್ ನಮಾಝ್ ನಿರ್ವಹಿಸಬೇಕಾಗಿದೆ. ಯಾಕೆಂದರೆ ಆಯಿಷಾ (ರ)ರವರು ವರದಿ ಮಾಡಿದ ಹದೀಸನ್ನು ತಿರಸ್ಕರಿಸಲು ಯಾರಿಂದಲೂ ಸಾಧ್ಯವಿಲ್ಲ.

🔘ಪ್ರವಾದಿ ﷺ ರ ನಮಾಝಿನ ರೀತಿ. 🔽

 ثبت عنها في الصحيحين رضي الله عنها قالت: (كان النبي صلى الله عليه وسلم يصلي من الليل عشر ركعات يسلم من كل ركعتين ثم يوتر بواحدة) أخرجه مسلم في كتاب صلاة المسافرين وقصرها، باب صلاة الليل وعدد ركعات النبي صلى الله عليه وسلم، برقم 1216.

 ಪ್ರವಾದಿ ﷺ ರು ರಾತ್ರಿಯಲ್ಲಿ ಹತ್ತು (10) ರಕ'ಅತ್ ನಮಾಝ್ ನಿರ್ವಹಿಸುತಿದ್ದರು, ಎಲ್ಲಾ ಎರಡನೇ (2) ರಕ'ಅತಿನಲ್ಲಿ ಸಲಾಂ (ಅಸ್ಸಲಾಮು ಅಲೈಕುಂ ವರಹ್ಮತುಲ್ಲಾಹ್) ಹೇಳುತಿದ್ದರು, ನಂತರ ಒಂದು ವಿತ್ರ್ ನಿರ್ವಹಿಸುತಿದ್ದರು.

🔘ಆಯಿಷಾ ( ರ ) ಹೇಳಿದ 11 ರಕಅತ್ ಖಿಯಾಮು ರಮದಾನ್ ನಮಾಝ್ ತರಾವೀಹ್ ನಮಾಝ್ ಆಗಿದೆ ಎಂದು ಇಮಾಮ್ ನವವೀ ( ರ ) ತನ್ನ ಷರಹು ಮುಸ್ಲಿಂ ನಲ್ಲಿ.🔽

 والمراد بقيام رمضان صلاة التراويح - شرح مسلم   ج :1  ص :159

 🔘 ಆಯಿಷಾ ( ರ ) ಹೇಳಿದ 11 ರಕಅತ್ ಖಿಯಾಮು ರಮದಾನ್ ನಮಾಝ್ ತರಾವೀಹ್ ನಮಾಝ್ ಆಗಿದೆ ಎಂದು ಇಬ್ನು ಹಜರ್ ಅಸ್ಖಲಾನಿ ತನ್ನ ಫತ್'ಹುಲ್ ಬಾರಿ ಯಲ್ಲಿ.🔽

 سمعت الصلاة فى الجماعة فى ليالى رمضان التراويح لانهم اول ما اجتمعوا عليها كانوا يستريحون بين كل تسليمتين - حافظ بن حجر العسكلانى >>فتح البارى  خ :2  ص :25

 🔘 ತರಾವೀಹ್ 8+3=11 ಇಮಾಮ್ ಸುಯೂತಿ ತನ್ನ ಹಾವಿಲಿಲ್ ಫತಾವಾದಲ್ಲಿ.🔽

 وما نقله عن صحيح ابن حبان غاية فيما ذهبنا إليه من تمسكنا بما في البخاري عن عائشة أنه كان لا يزيد في رمضان ولا في غيره على إحدى عشرة ; فإنه موافق له من حيث إنه صلى التراويح ثمانيا ثم أوتر بثلاث ، فتلك إحدى عشرة (الحاوى للفتاوى للسيوطي 1-249)

 🔘 11 ರಕಅತ್ ನಮಾಝ್ ನಿರ್ವಹಿಸಬೇಕೆಂದು ಉಮರ್ (ರ) ರವರ ಕಲ್ಪನೆ. ಇಮಾಮ್ ಮಲಿಕ್  (ರ) ತನ್ನ ಮುವತ್ತಾದಲ್ಲಿ.🔽

 ﺹ : 154 ‏] 6271 - ﻭﻓﻲ ﺣﺪﻳﺚ ﻣﺎﻟﻚ ، ﻋﻦ ﻣﺤﻤﺪ ﺑﻦ ﻳﻮﺳﻒ ، ﻋﻦ ﺍﻟﺴﺎﺋﺐ ﺑﻦ ﻳﺰﻳﺪ ، ﻗﺎﻝ : ﺃﻣﺮ ﻋﻤﺮ ﺃﺑﻲ ﺑﻦ ﻛﻌﺐ ﻭﺗﻤﻴﻤﺎ ﺍﻟﺪﺍﺭﻱ ﺃﻥ ﻳﻘﻮﻣﺎ ﻟﻠﻨﺎﺱ ﺑﺈﺣﺪﻯ ﻋﺸﺮﺓ ﺭﻛﻌﺔ

🔘ಪ್ರವಾದಿ ﷺ ರು  ರಮದಾನಿನಲ್ಲಿ 8 ರಕಅತ್ ಮತ್ತು ವಿತ್ರ್ ನಿರ್ವಹಿಸುತಿದ್ದರು ಎಂದು ಜಾಬಿರ್ (ರ) ರವರುವರದಿ ಮಾಡಿದ ಹದೀಸ್ ಇಬ್ನು ಖುಝೈಮಾ ರವರ ಸ್ವಹೀಹ್ ನಲ್ಲಿ. 🔽

 عَنْ جَابِرِ بْنِ عَبْدِ اللهِ – رضي الله عنهما – قَالَ : ((صَلَّى بِنَا رَسُولُ اللهِ صلى الله عليه وسلم فِي شَهْرِ رَمَضَانَ ثَمَانَ رَكَعَاتٍ وَأَوْتَرَ))(رواه ابن خزيمة في صحيحه

🔘ಇಮಾಮ್ ಬೈಹಕಿ ರಿಪೋರ್ಟ್ ಮಾಡಿದ ಉಮರ್ (ರ)ರವರ  23 ರಕಅತಿನ  ಹದೀಸ್ ದುರ್ಬಲವಾಗಿದೆ ಎಂದು.🔽

 روى البيهق عن السائب بن يزيد كنا نقوم فى زمان عمر بن الخطاب بعشرين ركعة والوتر فى سنده ابو عثمان البصرى واسمه عروة بن عبد الله قال النيموى فى تعليق أثار السنين لم اقف على من ترجم له انتهى قلت: لم اقف أنا على ترجمته مح التفحص الكثير وايضا فى سنده ابو طاهر الفقيه شيخ البيهقى ولم اقف على من وثقه ومن ادعى صحة هذا الاثر فعليه ان يشبة كون كل منهما ثقة قابلا للاحتجاج - تحفة الاحوذى  75:2

 🔘ತರಾವೀಹ್ ನಮಾಝಿಗಾಗಿ ಒಂದುಗೂಡುವಿಕೆ.🔽

 عن عبد الرحمن بن عبدٍ القاري : خرجت مع عمر بن الخطاب ليلة في رمضان إلى المسجد فإذا الناس أوزاع متفرقون ، يصلي الرجل لنفسه ويصلي الرجل فيصلي بصلاته الرهط فقال عمر : إني أرى لو جمعت هؤلاء على قارئ واحد لكان أمثل ، ثم عزم فجمعهم على أبي ابن كعب ، ثم خرجت معه ليلة أخرى والناس يصلون بصلاة قارئهم قال عمر : نعم البدعة هذه ، والتي ينامون عنها أفضل من التي يقومون . يريد آخر الليل وكان الناس يقومون أوله

 ಅಬ್ದುರ್ರಹ್ಮಾನ್ ಬಿನ್ ಅಬ್ದುಲ್ ಖಾರಿ (ರ) ಹೇಳುತ್ತಾರೆ: ನಾನು ರಮದಾನಿನ ಒಂದು ರಾತ್ರಿ ಉಮರ್ (ರ)ರೊಂದಿಗೆ ಮಸೀದಿಗೆ ಹೋದೆ. ಜನರು ಭಿನ್ನ ಭಿನ್ನರಾಗಿ ಹರಡಿಕೊಂಡಿದ್ದರು. ಕೆಲವರು ಒಂಟಿಯಾಗಿ ನಿಂತು ನಮಾಝ್ ನಿರ್ವಹಿಸುತ್ತಿದ್ದರೆ ಇನ್ನೂ ಕೆಲವರು ಇಮಾಮರ ಹಿಂದೆ ನಿಂತು ನಿರ್ವಹಿಸುತ್ತಿದ್ದರು. ಅದನ್ನು ಕಂಡು ಉಮರ್ (ರ) ಹೇಳಿದರು "ನನಗೆ ಅನಿಸುತ್ತೆ ನಾನು ಇವರನ್ನೆಲ್ಲಾ ಒಂದು ಖಾರಿಯ ಹಿಂದೆ ಒಗ್ಗೂಡಿಸಿದರೆ ಸಮಂಜಸವೆನಿಸಬಹುದೆಂದು. ಅದೇ ಪ್ರಕಾರ ಅವರು ತನ್ನ ಇರಾದೆಯನ್ನು ಕಾರ್ಯ ರೂಪಕ್ಕೆ ತರಲು ಉಬೈದ್ ಬಿನ್ ಕಅಬ್ (ರ)ರನ್ನು ಇಮಾಮ್ ಆಗಿ ನಿಯುಕ್ತಿಗೊಳಿಸಿದರು. (ಅಬ್ದುರ್ರಹ್ಮಾನ್ ಹೇಳುತ್ತಾರೆ) ಇನ್ನೊಮ್ಮೆ ನಾನು ಉಮರ್ (ರ) ರೊಂದಿಗೆ ಮಸೀದಿಗೆ ಬಂದಾಗ ಜನರು ತಮ್ಮ ಇಮಾಮರ ಹಿಂದೆ ನಿಂತು ಜಮಾಅತ್ ಆಗಿ ನಮಾಝ್ ನಿರ್ವಹಿಸುತ್ತಿದ್ದರು. ಅದನ್ನು ಕಂಡು ಉಮರ್ (ರ) ಹೇಳಿದರು "ಈ ಹೊಸ ಕ್ರಮವು ಉತ್ತಮವಾಗಿದೆ ಮತ್ತು ಸಮಂಜಸವಾಗಿದೆ." ಇವರು ನಮಾಝ್ ನಿರ್ವಹಿಸುತ್ತಿರುವ ರಾತ್ರಿಯ ಈ ಅಂಶವು ಇವರು ಮಲಗಿ ನಿದ್ರಿಸುವ ಅಂಶಕ್ಕಿಂತ ಶ್ರೇಷ್ಠವಾಗಿದೆ. ಉಮರ್ (ರ)ರವರು ರಾತ್ರಿಯ ಅಂತಿಮ ಆಯಾಮದ ಶ್ರೇಷತೆಯನ್ನು ಉದ್ದೇಶಿಸಿ ಹೀಗೆ ಹೇಳಿದ್ದರು. ಏಕಂದರೆ ಜನರು ಈ ನಮಾಝನ್ನು ರಾತ್ರಿಯ ಮೊದಲ ಭಾಗದಲ್ಲಿ ನಿರ್ವಹಿಸುತ್ತಾರೆ.

 ಉಮರ್ (ರ) ರ ಈ ನಿಲುವಿಗೆ ಹದೀಸಿನ ಬೆಂಬಲವೂ ಇದೆ.

 أن عائشة رضي الله عنها أخبرته أن رسول الله صلى الله عليه وسلم خرج ليلة من جوف الليل فصلى في المسجد وصلى رجال بصلاته فأصبح الناس فتحدثوا فاجتمع أكثر منهم فصلى فصلوا معه فأصبح الناس فتحدثوا فكثر أهل المسجد من الليلة الثالثة فخرج رسول الله صلى الله عليه وسلم فصلى فصلوا بصلاته فلما كانت الليلة الرابعة عجز المسجد عن أهله حتى خرج لصلاة الصبح فلما قضى الفجر أقبل على الناس فتشهد ثم قال أما بعد فإنه لم يخف علي مكانكم ولكني خشيت أن تفترض عليكم فتعجزوا عنها فتوفي رسول الله صلى الله عليه وسلم والأمر على ذلك

 ಆಯಿಷಾ (ರ)ರಿಂದ ವರದಿ: "ಪ್ರವಾದಿ (ಸಅ)ರು ಒಂದು ರಾತ್ರಿ ಮಸೀದಿಯಲ್ಲಿ ನಮಾಝ್ ಮಾಡಿಸಿದರು. ಸ್ವಹಾಬಿಗಳು ಕೂಡ ಅವರೊಂದಿಗೆ ನಮಾಝ್ ನಿರ್ವಹಿಸಿದರು. ಎರಡನೇ ದಿನ ಪ್ರವಾದಿ (ಸಅ) ನಮಾಝ್ ಮಾಡಿಸುವಾಗ ಜನರ ಸಂಖ್ಯೆಯಲ್ಲಿ ಅಪಾರ ವೃದ್ಧಿಯಾಗಿತ್ತು. ಮೂರನೇ ಅಥವಾ ನಾಲ್ಕನೇ ದಿನ ಜನರು ದೊಡ್ಡ ಸಮೂಹವಾಗಿ ಬಂದು ನೆರೆದರು ಆದರೆ ಆ ದಿನ ಪ್ರವಾದಿ (ಸಅ) ನಮಾಝ್ ಮಾಡಿಸಲು ಮಸೀದಿಗೆ ಬರಲಿಲ್ಲ. ಬೆಳಗ್ಗೆ ಪ್ರವಾದಿ (ಸಅ)ರು ಹೇಳಿದರು "ನೀವು ಬಹಳ ದೊಡ್ಡ ಸಂಖ್ಯೆಯಲ್ಲಿ ಸೇರಿರುವುದನ್ನು ನಾನು ಕಂಡಿದ್ದೆ ಆದರೆ ಈ ನಮಾಝ್ ನಿಮ್ಮ ಮೇಲೆ ಕಡ್ಡಾಯಗೊಳ್ಳದಿರಲಿ ಎಂಬ ಅಂಶ ನನ್ನನ್ನು ಇಲ್ಲಿಗೆ ಬರುವುದರಿಂದ ತಡೆಯಿತು". (ಹಾಗೆ ಆದರೆ ನೀವು ಆ ಕುರಿತು ಅಸಡ್ಡೆ ತೋರಬಹುದು ಎಂಬ ಭಯ) ಪ್ರವಾದಿ (ಸಅ)ರವರ ನಿಧನದ ತನಕವೂ ಅದೇ ಅವಸ್ಥೆ ನೆಲೆಗೊಂಡಿತು." ಸಹೀಹ್ ಮುಸ್ಲಿಮ್ ನಲ್ಲಿರುವ ಉಲ್ಲೇಖದಲ್ಲಿ ಪ್ರವಾದಿ (ಸಅ) ಮೂರು ರಾತ್ರಿ ನಮಾಝ್ ಮಾಡಿಸಿದರು ನಾಲ್ಕನೇ ರಾತ್ರಿ ಬರಲಿಲ್ಲ..... (ಈ ಉಲ್ಲೇಖದ ಕೊನೆಯಲ್ಲಿ ಪ್ರವಾದಿ (ಸಅ) ರ ಈ ಮಾತನ್ನು ನೀಡಲಾಗಿದೆ.)

 ولكني خشيت أن تفترض عليكم فتعجزوا عنها فتوفي رسول الله صلى الله عليه وسلم والأمر على ذلك 

 "ಆದರೆ ಈ ನಮಾಝ್ ನಿಮ್ಮ ಮೇಲೆ ಕಡ್ಡಾಯಗೊಳಿಸಲ್ಪಡುತ್ತದೋ, ಎಂಬ ಆತಂಕ ನನ್ನನ್ನು ತಡೆಯಿತು ಬಳಿಕ ಪ್ರವಾದಿ (ಸಅ)ರು ನಿಧನರಾದರು. ಅದೇ ಕ್ರಮ ಮುಂದುವರಿಯಿತು." ಇಲ್ಲಿ ನಾವು ತಿಳಿಯಬೇಕಾದ ವಿಷಯ : ತರಾವೀಹ್ ನಮಾಝ್ ಮಸೀದಿಯಲ್ಲಿ ಜಮಾಅತ್ ಆಗಿ ನಿರ್ವಹಿಸುವುದು ಅತ್ಯುತ್ತಮವಾಗಿದೆ ಎನ್ನುವುದರಲ್ಲಿ ಪ್ರಬಲ ಅಭಿಪ್ರಾಯವಿದೆ. ಏಕೆಂದರೆ ಪ್ರವಾದಿ (ಸಅ)ರ ಸುನ್ನತ್ ನಲ್ಲಿ ಇದಕ್ಕೆ ಆಧಾರವಿದೆ. ಪ್ರವಾದಿ (ಸಅ) ಇದನ್ನು ಮಸೀದಿಯಲ್ಲಿ ಜಮಾಅತ್ ಆಗಿ ನಿರ್ವಹಿಸಿದ್ದರು. ಇದು ತನ್ನ ಸಮೂಹಕ್ಕೆ ಕಡ್ಡಾಯವಾಗಿ ಪರಿಣಮಿಸದಿರಲಿ ಎಂಬ ಭೀತಿಯಿಂದ ಜಮಾಅತ್ ಆಗಿ ನಿರ್ವಹಿಸುವುದನ್ನು ತೊರೆದರು. ಆದರೆ ಪ್ರವಾದಿ (ಸಅ)ರ ಮರಣದ ನಂತರ ಈ ಭೀತಿಗೆ ಅವಕಾಶವಿರಲಿಲ್ಲ. ಮರಣದೊಂದಿಗೆ ಪ್ರವಾದಿ (ಸಅ)ರಿಗೆ "ವಹೀ" (ದಿವ್ಯ ಸಂದೇಶ) ಕೊನೆಗೊಂಡಿತು. ಪ್ರವಾದಿ (ಸಅ)ರು ಭಯಪಟ್ಟಿರುವ ವಿಷಯದ ಆತಂಕವು ನಿವಾರಣೆಯಾಯಿತು. ಆ ಸಂದರ್ಭದಲ್ಲಿ ಉಮರ್ (ರ) ಜನರನ್ನು ಒಂದು ಇಮಾಮ್ ರ ಹಿಂದೆ ಜನರನ್ನು ಒಂದುಗೂಡಿಸಿ ಜಮಾಅತ್ ಆಗಿ ನಿರ್ವಹಿಸಲು ಆದೇಶಿಸಿದರು. ಇಲ್ಲಿ ಉಮರ್ (ರ)ರವರ ಖಿಲಾಫತ್ ನ ಅವಧಿಯಲ್ಲಿ ಪ್ರವಾದಿ (ಸಅ) ರು ಜಮಾಅತ್ ಆಗಿ ನಿರ್ವಹಿಸಿ ತೋರಿಸಿದಂತಹ ನಮಾಝನ್ನಾಗಿದೆ ಯಥಾವತ್ತಾದ ರೀತಿಯಲ್ಲಿ ಜಮಾಅತ್ ಆಗಿ ನಿರ್ವಹಿಸಲು ಆದೇಶ ನೀಡಿರುವುದು. ಉಮರ್ (ರ) ರವರ ಈ ನಿಲುವು ಒಂದು ಸತ್ಕಾರ್ಯವನ್ನು ಹೊಸದಾಗಿ ನಿರ್ಮಿಸಿದ ಹಿನ್ನೆಲೆಯಲ್ಲ. ಬದಲಾಗಿ, ಒಂದು ಸತ್ಕಾರ್ಯವನ್ನು ಜೀವಂತಗೊಳಿಸಿ ಅದನ್ನು ಕಾರ್ಯರೂಪದಲ್ಲಿ ಕಂಡು ತೃಪ್ತಿಗೊಂಡ ನೆಲೆಯಲ್ಲಾಗಿದೆ. ಇದನ್ನೇ ಆಗಿದೆ ಉಮರ್ (ರ) ರವರು "ಬಿದ್ಅತ್ ಹಸನ" ಎಂದಿರುವುದು.

✍ Abu Muadh.

ಮಹಿಳೆಯರ ಮಸೀದಿ ಪ್ರವೇಶ.

ಮಹಿಳೆಯರ ಮಸೀದಿ ಪ್ರವೇಶ.


عن سالم عن ابيه عن النبي صلا لله عليه وسلم(إذااستأذنت امرآت آحدكم الئ المسجد فلائمنعها) (صحيح البخاري رقم-٥٢٣٨

ಸಾಲಿಂ (ರ)ರವರಿಂದ :ಅವರು ತನ್ನ ತಂದೆ ಯಿಂದ ವರದಿ:ಪ್ರವಾದಿ(ಸ ಅ)ರವರು ಹೇಳುವೂದನ್ನು ನಾನು ಆಲಿಸಿದ್ದೇನೆ "ನಿಮ್ಮ ಪೈಕಿ ಯಾರಾದರೊಬ್ಬರ ಪತ್ನಿ ಮಸೀದಿ ಗೆ ತೆರಳಲು ಅನುಮತಿ ಕೇಳಿದರೆ ಅವನು ಆಕೆಯನ್ನು ತಡೆಯ ಕೂಡದು !"(ಸಹೀಹುಲ್ ಬುಖಾರಿ ನ೦ ,5238 )
 
-------------------------------------------
   
ن عايشة (ر)قالت كن نساء المومنات يشهدن مع رسول الله (ص )صلات الفجر متلفعات بمروطهن ثم ينقلب إلى بيوتهن حين يقظين الصلاة لا يعرفهن أحد من
الغلس (صحيح البخاري ٥٧٨)

ಆಯಿಶ (ರ) ರಿಂದ ನಿವೇಧನೆ :ಸತ್ಯ ವಿಶ್ವಾಸಿಗಳಾದ ಸ್ತ್ರೀಗಳು ಫ಼ಜ್ರ್ ನಮಾಝ್ ಗಅಗಿ ರಸೂಲ್(ಸ) ರೊಂದಿಗೆ ಮಸೀದಿಗೆ ತೆರಳಿ ನಮಾಝ್ ನಿರ್ವಹಿಸುತ್ತಿದ್ದರು ಕತ್ತಲೆ ಕಾರಣ ಅವರನ್ನು ಯಾರಿಗೂ ಪರಿಚಯ ಸಿಗುತ್ತಿರಲಿಲ್ಲ  (bukhaari 578 muslim 230,231 232)

---------------------------------------------

 عَبْدُ اللَّهِ بْنُ يُوسُفَ، حَدَّثَنَا اللَّيْثُ، عَنْ عُقَيْلٍ، عَنِ ابْنِ شِهَابٍ، عَنْ عُرْوَةَ بْنِ الزُّبَيْرِ، عَنْ عَائِشَةَ ـ رضى الله عنها ـ زَوْجِ النَّبِيِّ صلى الله عليه وسلم أَنَّ النَّبِيَّ صلى الله عليه وسلم كَانَ يَعْتَكِفُ الْعَشْرَ الأَوَاخِرَ مِنْ رَمَضَانَ حَتَّى تَوَفَّاهُ اللَّهُ، ثُمَّ اعْتَكَفَ أَزْوَاجُهُ مِنْ بَعْدِهِ‏.‏

ಆಯಿಶ(ರ) ರವರಿಂದ ನಿವೇಧನೆ: ಪ್ರವಾದಿ(ಸ)  ಮರಣದ ವರಿಗೆ ರಮದಾನ್ ನ ಕೊನೆಯ 10 ರಿಂದ ಮಸೀದಿಯಲ್ಲಿ ಇಅತಿಕಾಫ್ ಕೂರುತ್ತಿದ್ದರು ಪ್ರವಾಜಗರ ಮರಣದ ನಂತರ ಅವರ ಪತ್ನಿಯಂದಿರೂ ಇಅತಿಕಾಫ್ ಇರುತ್ತಿದ್ದರು
(Bukhari  :2026)
--------------------------------------------

ಇಬ್ನು ಉಮರ್(ರ) ರಿಂದ ವರದಿ:ಉಮರ್ (ರ)ಪತ್ನಿ ಆತಿಕಾ(ರ) ರೊಡನೆ ವ್ಯಕ್ತಿಯೊಬ್ಬರು ಕೇಳಿದರು' ನೀವು ಮಸೀದಿಗೆ ಹೋಗುವುದು ಉಮರ್ ರ ರಿಗೆ ಇಷ್ಟವಿಲ್ಲವೆಂದು ನಿಮಗೆ ತಿಳಿಯದೆ? ಆಗ ಆತಿಕಾ(ರ) ಹೇಳಿದ ರು:ಹಾಗಾದರೆ ಉಮರ್ (ರ)ರು ನನ್ನನ್ನು ತಡೆಯುವುದಿಲ್ಲ ಯಾಕೆ?ಆಗ ಅವರು(ಇಬ್ನ್ ಉಮರ್) ಹೇಳಿದರು:ಉಮರ್(ರ) ನಿಮ್ಮನ್ನು ತಡೆಯದಿರಲು ಕಾರಣ ಪ್ರವಾದಿ(ಸ)ರು ಹೇಳಿದ್ದಾರೆ :ಅಲ್ಲಾಹನ ದಾಸಿಯರನ್ನು ಅಲ್ಲಾಹನ ಮಸೀದಿಯಿಂದ ತಡೆಯದಿರಿ
(ಬುಖಾರಿ)

---------------------------------------

ಇಮಾಮ್ ಶಾಪಿ(ರ) ಹೇಳುತ್ತಾರೆ:ಜುಮಾ ಕಡ್ಡಾಯವಿಲ್ಲದವರು ರೋಗಿ, ಯಾತ್ರಿಕರು,ಹಾಗು ಮಹಿಳೆಯರು ಜುಮಾ ದಿವಸ ಇಮಾಮ್ ನಮಾಝ್ ಮುಗಿಸುದಕ್ಕಿಂತ. ಮುಂಚೆ ಲುಹರ್ ನಮಾಜ್ ಮಾಡುವುದು ನಾನು ಇಷಪಡುದಿಲ್ಲ. ಕಾರಣ ಅವರಿಗೆ ಜುಮಾಕ್ಕೆ ಹೋಗಲು ಸಾಧ್ಯ ವಾಗುದಾದರೆ ಅದುವೇ ಉತ್ತಮ.
(ಅಲ್ ಉಮ್ಮ್)

----------------------------------------

ಇಮಾಮ್ ಅಶ್ಶಾಫಿಈ(ರ) ತಮ್ಮ ಇಖ್ತಿಲಾಫುಲ್ ಹದೀಸ್ ಎಂಬ ಗ್ರಂಥದಲ್ಲಿ ನೀಡಿದ ಒಂದು ಅಧ್ಯಾಯದ ಹೆಸರು ಹೀಗಿದೆ:
باب خروج النساء إلى المساجد

ಅಧ್ಯಾಯ: ಮಹಿಳೆಯರು ಮಸೀದಿಗಳಿಗೆ ಹೊರಡುವುದು

ಈ ಅಧ್ಯಾಯದಲ್ಲಿ ಅವರು ಉದ್ಧರಿಸಿದ ಒಂದು ಹದೀಸ್ ಹೀಗಿದೆ:

عن أبي هريرة رضي الله عنه أن النبي صلى الله عليه وسلم قال: لا تمنعوا إماء الله مساجد الله وإذا خرجن فليخرجن تفلات قال الربيع يعني لا يتطيبن عن سالم عن أبيه أن رسول الله صلى الله عليه وسلم قال: إذا استأذنت امرأة أحدكم إلى المساجد فلا يمنعها

ಅಬೂ ಹುರೈರಾ(ರ)ರಿಂದ ವರದಿ: ಪ್ರವಾದಿ(ಸ)ರವರು ಹೇಳಿದರು: ಅಲ್ಲಾಹನ ದಾಸಿಯರನ್ನು ಅಲ್ಲಾಹನ ಮಸೀದಿಗಳಿಂದ ತಡೆಯಬಾರದು. ಅವರು ಮಸೀದಿಗಳಿಗೆ ಹೋಗುವುದಾದರೆ ತಫಿಲಾತ್ ಗಳಾಗಿ ಹೋಗಲಿ. ಅಂದರೆ ಸುಗಂಧ ಹಚ್ಚದೆ ಹೋಗಲಿ. ಸಾಲಿಮ್ ತಮ್ಮ ತಂದೆಯಿಂದ ವರದಿ: ಪ್ರವಾದಿ(ಸ)ರವರು ಹೇಳಿದರು: ನಿಮ್ಮ  ಪತ್ನಿ ಮಸೀದಿಗೆ ಹೋಗಲು ನಿಮ್ಮೊಂದಿಗೆ ಅನುಮತಿ ಕೇಳಿದರೆ ಅವರನ್ನು ತಡೆಯಬಾರದು.
[ಇಖ್ತಿಲಾಫುಲ್ ಹದೀಸ್ 8/768]

-----------------------------------

عن عائشة رضي الله عنها قالت: إن كان رسول الله صلى الله عليه وسلم ليصلي الصبح فتنصرف النساء
متلفعات بمروطهن ما يعرفن من الغلس

ಆಯಿಶಾ(ರ)ರಿಂದ ವರದಿ: ಪ್ರವಾದಿ(ಸ)ರವರು ಸುಬಹ್ ನಮಾಝ್ ನಿರ್ವಹಿಸುತ್ತಿದ್ದರು. ನಮಾಝ್ ನಿರ್ವಹಿಸಿದ ಬಳಿಕ ಮಹಿಳೆಯರು ತಮ್ಮ ವಸ್ತ್ರಗಳನ್ನು ಹೊದ್ದುಕೊಂಡು ಹಿಂದಿರುಗಿ ಹೋಗುತ್ತಿದ್ದರು. ಕತ್ತಲೆಯ ಕಾರಣ ಅವರನ್ನು ಗುರುತಿಸಲು ಆಗುತ್ತಿರಲಿಲ್ಲ. [ಅಲ್ ಉಮ್ಮ್ 1/132]

----------------------------------------

عن عائشة رضي الله عنها قالت: كن نساء من المؤمنات يصلين مع النبي صلى الله عليه وسلم وهن متلفعات بمروطهن ثم يرجعن إلى أهلهن ما يعرفهن أحد من الغلس

ಆಯಿಶಾ(ರ)ರಿಂದ ವರದಿ: ವಿಶ್ವಾಸಿನಿಗಳಾದ ಮಹಿಳೆಯರು ವಸ್ತ್ರಗಳನ್ನು ಹೊದ್ದುಕೊಂಡು ಪ್ರವಾದಿ(ಸ)ರವರೊಂದಿಗೆ ನಮಾಝ್ ನಿರ್ವಹಿಸುತ್ತಿದ್ದರು.ನಂತರ ಅವರು ತಮ್ಮ ಮನೆಯವರ ಕಡೆಗೆ ಹಿಂದಿರುಗುತ್ತಿದ್ದರು. ಕತ್ತಲೆಯಿಂದಾಗಿ ಅವರನ್ನು ಗುರುತು ಹಿಡಿಯಲು ಯಾರಿಗೂ ಸಾಧ್ಯವಾಗುತ್ತಿರಲಿಲ್ಲ. [ಅಲ್ ಉಮ್ಮ್ 1/133]

-------------------------------------------

قال الشافعي: ومن قلت لا جمعة عليه من الأحرار للعذر بالحبس أو غيره ومن النساء وغير البالغين والمماليك فإذا شهد الجمعة صلاها ركعتين وإذا أدرك منها ركعة أضاف إليها أخرى وأجزأته عن الجمعة

ಇಮಾಮ್ ಅಶ್ಶಾಫಿಈ (ರ) ಹೇಳುತ್ತಾರೆ: ಯಾರಿಗೆಲ್ಲ ಜುಮುಅ ನಮಾಝ್ ನಿರ್ವಹಿಸುವುದು ಕಡ್ಡಾಯವಿಲ್ಲವೆಂದು ನಾನು ಹೇಳಿದೆನೋ ಅಂತಹವರು, ಅಂದರೆ ತಡೆಹಿಡಿಯಲಾಗಿರುವ ಕಾರಣ ಜುಮುಅ ನಮಾಝಿಗೆ ಹಾಜರಾಗಲು ಸಾಧ್ಯವಾಗದ ಸ್ವತಂತ್ರ ಪುರುಷರು ಮುಂತಾದವರು, ಅದೇ ರೀತಿ ಮಹಿಳೆಯರು, ಹರೆಯವನ್ನು ತಲುಪದವರು ಮತ್ತು ಗುಲಾಮರು, ಜುಮುಅ ನಮಾಝಿಗೆ ಹಾಜರಾದರೆ ಅವರು ಜುಮುಅ ನಮಾಝ್ ನಿರ್ವಹಿಸಬೇಕು. ಇನ್ನು ಅವರಿಗೆ ಒಂದೇ ರಕ್ ಅತ್ ನಮಾಝ್ ಸಿಕ್ಕಿದರೆ ಅದಕ್ಕೆ ಇನ್ನೊಂದು ರಕ್ ಅತ್ ಸೇರಿಸಿ ನಿರ್ವಹಿಸಬೇಕು. ಇದು ಜುಮುಅ ನಮಾಝ್ ಆಗಿ ಅವರಿಗೆ ಸಾಕು. [ಅಲ್ ಉಮ್ಮ್ 1/289]

---------------------------------------

عن أم سلمة رضي الله عنها زوج النبي صلى الله عليه وسلم قالت: كان رسول الله صلى الله عليه وسلم إذا سلم من صلاته قام النساء حين يقضي تسليمه ومكث النبي صلى الله عليه وسلم في مكانه يسيرا قال ابن شهاب: فنرى مكثه ذلك والله أعلم لكي ينفذ النساء قبل أن يدركهن من انصرف من القوم

ಪ್ರವಾದಿ(ಸ)ರವರ ಪತ್ನಿ ಉಮ್ಮು ಸಲಮಾ(ರ)ರಿಂದ ವರದಿ: ಪ್ರವಾದಿ(ಸ)ರವರು ನಮಾಝ್ ನಿರ್ವಹಿಸಿ ಸಲಾಮ್ ಹೇಳಿದರೆ ಮಹಿಳೆಯರು ಎದ್ದೇಳುತ್ತಿದ್ದರು. ಪ್ರವಾದಿ(ಸ)ರವರು ಕೆಲ ಹೊತ್ತು ನಮಾಝ್ ನಿರ್ವಹಿಸಿದ ಸ್ಥಳದಲ್ಲೇ ಕೂರುತ್ತಿದ್ದರು. (ಈ ಹದೀಸನ್ನು ವರದಿ ಮಾಡಿದ) ಇಬ್ನ್ ಶಿಹಾಬ್ (ಇಮಾಮ್ ಝುಹ್ರೀ) ಹೇಳುತ್ತಾರೆ: ಪ್ರವಾದಿ(ಸ) ರವರು ಹೀಗೆ ಕುಳಿತುಕೊಳ್ಳುತ್ತಿರುವುದು ಪುರುಷರು ಹೊರಡುವುದಕ್ಕೆ ಮೊದಲೇ ಮಹಿಳೆಯರು ಮಸೀದಿಯಿಂದ ಹೊರಡಲಿ ಎಂಬ ಉದ್ದೇಶದಿಂದಾಗಿರಬಹುದು. ಹೆಚ್ಚು ಬಲ್ಲವನು ಅಲ್ಲಾಹು. [ಅಲ್ ಉಮ್ಮ್ 1/204]

----------------------------------------

ಇಮಾಮ್ ಅಶ್ಶಾಫಿಈ(ರ) ತಮ್ಮ ಇಖ್ತಿಲಾಫುಲ್ ಹದೀಸ್ ಎಂಬ ಗ್ರಂಥದಲ್ಲಿ ನೀಡಿದ ಒಂದು ಅಧ್ಯಾಯದ ಹೆಸರು ಹೀಗಿದೆ:
باب خروج النساء إلى المساجد
ಅಧ್ಯಾಯ: ಮಹಿಳೆಯರು ಮಸೀದಿಗಳಿಗೆ ಹೊರಡುವುದು

ಈ ಅಧ್ಯಾಯದಲ್ಲಿ ಅವರು ಉದ್ಧರಿಸಿದ ಒಂದು ಹದೀಸ್ ಹೀಗಿದೆ:


عن أبي هريرة رضي الله عنه أن النبي صلى الله عليه وسلم قال: لا تمنعوا إماء الله مساجد الله وإذا خرجن فليخرجن تفلات قال الربيع يعني لا يتطيبن عن سالم عن أبيه أن رسول الله صلى الله عليه وسلم قال: إذا استأذنت امرأة أحدكم إلى المساجد فلا يمنعها

ಅಬೂ ಹುರೈರಾ(ರ)ರಿಂದ ವರದಿ: ಪ್ರವಾದಿ(ಸ)ರವರು ಹೇಳಿದರು: ಅಲ್ಲಾಹನ ದಾಸಿಯರನ್ನು ಅಲ್ಲಾಹನ ಮಸೀದಿಗಳಿಂದ ತಡೆಯಬಾರದು. ಅವರು ಮಸೀದಿಗಳಿಗೆ ಹೋಗುವುದಾದರೆ ತಫಿಲಾತ್ ಗಳಾಗಿ ಹೋಗಲಿ. ಅಂದರೆ ಸುಗಂಧ ಹಚ್ಚದೆ ಹೋಗಲಿ. ಸಾಲಿಮ್ ತಮ್ಮ ತಂದೆಯಿಂದ ವರದಿ: ಪ್ರವಾದಿ(ಸ)ರವರು ಹೇಳಿದರು: ನಿಮ್ಮ  ಪತ್ನಿ ಮಸೀದಿಗೆ ಹೋಗಲು ನಿಮ್ಮೊಂದಿಗೆ ಅನುಮತಿ ಕೇಳಿದರೆ ಅವರನ್ನು ತಡೆಯಬಾರದು. [ಇಖ್ತಿಲಾಫುಲ್ ಹದೀಸ್ 8/768]

-------------------------------------

وأحب إذا حضر النساء الأعياد والصلوات يحضرنها نظيفات بالماء غير متطيبات ولا يلبسن ثوب شهرة ولا زينة وأن يلبسن ثيابا قصدة من البياض وغيره وأكره لهن الصبغ كلها فإنها تشبه الزينة والشهرة أو هما

ಮಹಿಳೆಯರು ಈದ್ ನಮಾಝ್ ಗಳಲ್ಲಿ ಮತ್ತು ಇತರ ನಮಾಝ್ ಗಳಲ್ಲಿ ಪಾಲ್ಗೊಳ್ಳುವುದಾದರೆ ಅವರು ನೀರಿನಿಂದ ಶುದ್ಧಿಯಾಗಿರುವ ಸ್ಥಿತಿಯಲ್ಲಿ ಬರಬೇಕು. ಅವರು ಸುಗಂಧ ಹಚ್ಚಿಕೊಂಡಿರಬಾರದು. ಅವರು ಸೌಂದರ್ಯ ಪ್ರಕಟಗೊಳಿಸುವ ಬೆಲೆಬಾಳುವ ವಸ್ತ್ರಗಳನ್ನು ಧರಿಸಬಾರದು. ಅವರು ಮಧ್ಯಮ ಸ್ಥಿತಿಯಲ್ಲಿರುವ ಬೆಳ್ಳಗಿನ ಬಣ್ಣವನ್ನು ಹೊಂದಿರುವ ವಸ್ತ್ರಗಳನ್ನು ಧರಿಸಬೇಕು. ಅವರು ಬಣ್ಣ ಬಣ್ಣದ ವಸ್ತ್ರಗಳನ್ನು ಧರಿಸುವುದನ್ನು ನಾನು ಅಸಹ್ಯಪಡುತ್ತೇನೆ. ಯಾಕೆಂದರೆ ಅದು ಅಲಂಕಾರ ಮತ್ತು ಪ್ರಸಿದ್ಧಿಯನ್ನು ಅಥವಾ ಅವೆರಡನ್ನೂ ಹೋಲುತ್ತದೆ. [ಅಲ್ ಉಮ್ಮ್ 1/356]

-------------------------------------

عن ابن عباس رضى الله عنهما قال: صلى رسول الله صلى الله عليه وسلم يوم العيدين ولم يصل قبلهما ولا بعدهما شيئا ثم انتقل إلى النساء فخطبهن قائما وأمر بالصدقة قال فجعل النساء يتصدقن بالقرط وأشباهه

ಇಬ್ನ್ ಅಬ್ಬಾಸ್(ರ್)ರಿಂದ ವರದಿ: ಪ್ರವಾದಿ(ಸ)ರವರು ಎರಡು ಹಬ್ಬಗಳ ದಿನಗಳಲ್ಲಿ ಈದ್ಗಾಹ್ ನಲ್ಲಿ ಈದ್ ನಮಾಝ್ ನಿರ್ವಹಿಸಿದರು. ಈದ್ ನಮಾಝಿಗೆ ಮುಂಚೆಯಾಗಲಿ ನಂತರವಾಗಲಿ ಅವರು ಬೇರೆ ಯಾವುದೇ ನಮಾಝ್ ಮಾಡಲಿಲ್ಲ. ನಂತರ ಅವರು ಮಹಿಳೆಯರ ಬಳಿಗೆ ಹೋಗಿ ನಿಂತುಕೊಂಡು ಅವರಿಗೆ (ಪ್ರತ್ಯೇಕ) ಖುತುಬ ನಿರ್ವಹಿಸಿದರು ಮತ್ತು ದಾನಧರ್ಮ ಮಾಡುವಂತೆ ಆದೇಶಿಸಿದರು. ಆಗ ಅವರು ತಮ್ಮ ಕಿವಿಯೋಲೆ ಮುಂತಾದವುಗಳನ್ನು ದಾನವಾಗಿ ನೀಡಿದರು. [ಅಲ್ ಉಮ್ಮ್ 1/358]

----------------------------------------------


قال الشافعي: ولا أحب لواحد ممن له ترك الجمعة من الأحرار للعذر ولا من النساء وغير البالغين والعبيد أن يصلي الظهر حتى ينصرف الإمام أو يتأخى انصرافه بأن يحتاط حتى يرى أنه قد انصرف لأنه لعله يقدر على إتيان الجمعة فيكون إتيانها خيرا له.


ಇಮಾಮ್ ಅಶ್ಶಾಫಿಈ (ರ) ಹೇಳುತ್ತಾರೆ: ಇಮಾಮ್ ಜುಮುಅ ನಮಾಝ್ ನಿರ್ವಹಿಸಿ ಮುಗಿಯುವ ತನಕ ಅಥವಾ ಸೂಕ್ಷ್ಮತೆಗಾಗಿ ಇಮಾಮ್ ಜುಮುಅ ನಮಾಝ್ ನಿರ್ವಹಿಸಿ ಮುಗಿಸಿದ್ದಾರೆಂಬ ಅಭಿಪ್ರಾಯವು ಉಂಟಾಗುವ ತನಕ, ಜುಮುಅ ನಮಾಝ್ ನಿರ್ವಹಿಸದಿರಲು ವಿನಾಯಿತಿಯಿರುವ ಸ್ವತಂತ್ರ ಪುರುಷರು, ಮಹಿಳೆಯರು, ಹರೆಯವನ್ನು ತಲುಪದವರು ಮತ್ತು ಗುಲಾಮರು, ಝುಹ್ರ್ ನಮಾಝ್ ನಿರ್ವಹಿಸುವುದನ್ನು ನಾನು ಇಷ್ಟಪಡುವುದಿಲ್ಲ. ಯಾಕೆಂದರೆ ಇವರಿಗೆ (ಜುಮುಅ ನಮಾಝ್ ನಿರ್ವಹಿಸದಿರಲು ವಿನಾಯಿತಿಯಿರುವವರಿಗೆ) ಜುಮುಅ ನಮಾಝ್ ನಲ್ಲಿ ಪಾಲ್ಗೊಳ್ಳುವ ಸಾಮರ್ಥ್ಯ ಲಭ್ಯವಾಗಬಹುದು. ಆ ಸಂದರ್ಭದಲ್ಲಿ ಅವರು ಜುಮುಅ ನಮಾಝ್ ನಲ್ಲಿ ಪಾಲ್ಗೊಳ್ಳುವುದು ಅವರಿಗೆ ಉತ್ತಮವಾಗಿದೆ. [ಅಲ್ ಉಮ್ಮ್ 1/289]

ಪ್ರಾರ್ಥನೆ ಅಥವಾ ಇಸ್ತಿಗಾಸ ಕುರ್'ಆನ್ ಮತ್ತು ಸುನ್ನತ್ತಿನ ಬೆಳಕಿನಲ್ಲಿ.

ಪ್ರಾರ್ಥನೆ ಅಥವಾ ಇಸ್ತಿಗಾಸ ಕುರ್'ಆನ್ ಮತ್ತು ಸುನ್ನತ್ತಿನ ಬೆಳಕಿನಲ್ಲಿ.

ಈ ಲೇಖನ ಉತ್ತಮ ಸಮುದಾಯದ ಹಿಜ್ರಾ ಮೂರನೇ ಶತಮಾನದ ವರೆಗಿನ ಸ್ವಹಾಬಿಗಳು, ತಾಬಿವುಗಳು, ತಾಬಿವುತ್ತಾಬಿವುಗಳು ಪ್ರಾರ್ಥನೆ ಮತ್ತು ಸಹಾಯ ಯಾಚನೆಯನ್ನು ಅರ್ಥೈಸಿದ ರೀತಿಯನ್ನು ಸಾರುತ್ತದೆ.

-----------------------------

ಅಲ್ಲಾಹನು ಪರಿಶುದ್ಧ ಕುರ್'ಆನಿನಲ್ಲಿ ಹೇಳುತ್ತಾನೆ.👇

وَلَا تَدْعُ مِنْ دُونِ اللَّهِ مَا لَا يَنْفَعُكَ وَلَا يَضُرُّكَ ۖ فَإِنْ فَعَلْتَ فَإِنَّكَ إِذًا مِنَ الظَّالِمِينَ

ಅಲ್ಲಾಹುವಿನ ಹೊರತು ತಮಗೆ ಲಾಭವನ್ನಾಗಲಿ, ಹಾನಿಯನ್ನಾಗಲಿ ಮಾಡದ ಯಾವುದರೊಂದಿಗೂ ತಾವು ಪ್ರಾರ್ಥಿಸದಿರಿ. ತಾವೇನಾದರೂ ಹಾಗೆ ಮಾಡುವುದಾದರೆ ಖಂಡಿತವಾಗಿಯೂ ತಾವು ಅಕ್ರಮಿಗಳ ಪೈಕಿ ಸೇರಿದವರಾಗುವಿರಿ.

[ಯೂನುಸ್ : 106]

👆 ಈ ಸೂಕ್ತಿಯು ಪ್ರವಾದಿ ಮೊಹಮ್ಮದ್ (ಸಅ)ರಿಗೆ ಎಚ್ಚರಿಕೆಯಾಗಿದೆ. (ಎಂದರೆ ಅಲ್ಲಾಹೇತರರನ್ನು ಕರೆದು ಪ್ರಾರ್ಥಿಸುತ್ತಿದ್ದರು ಎಂದರ್ಥವಲ್ಲ).

ಈ ಸೂಕ್ತಿಯನ್ನು ಸ್ವಹಾಬಿಗಳು, ತಾಬಿವುಗಳು, ತಾಬಿವುತ್ತಾಬಿವುಗಳು ಅರ್ಥೈಸಿದ್ದು ಈ ರೀತಿಯಾಗಿದೆ.⬇

القول في تأويل قوله تعالى : وَلا تَدْعُ مِنْ دُونِ اللَّهِ مَا لا يَنْفَعُكَ وَلا يَضُرُّكَ فَإِنْ فَعَلْتَ فَإِنَّكَ إِذًا مِنَ الظَّالِمِينَ (106)
قال أبو جعفر: يقول تعالى ذكره: ولا تدع ، يا محمد ، من دون معبودك وخالقك شيئًا لا ينفعك في الدنيا ولا في الآخرة ، ولا يضرك في دين ولا دنيا، يعني بذلك الآلهة والأصنام. يقول: لا تعبدها راجيا نفعها أو خائفًا ضرَّها، فإنها لا تنفع ولا تضر ، " فإن فعلت " ، ذلك ، فدعوتها من دون الله ، (فإنك إذًا من الظالمين ) ، يقول: من المشركين بالله، الظالمي أنفُسِهم . (26)

ಓ ಮುಹಮ್ಮದರೇ...  ತಮ್ಮ ಆರಾಧ್ಯನೂ, ಸೃಷ್ಟಿಕರ್ತನೂ ಆದ ಅಲ್ಲಾಹನೊಂದಿಗಲ್ಲದೇ ಇಹಲೋಕದಲ್ಲೂ, ಪರಲೋಕದಲ್ಲೂ ನಿಮಗೆ  ಪ್ರಯೋಜನಪಡದ ಯಾವೊಂದನ್ನೂ ಕರೆದು ಪ್ರಾರ್ಥಿಸದಿರಿ. ಮತ್ತು ಅವುಗಳು (ಆರಾಧ್ಯರುಗಳು, ಮತ್ತು ವಿಗ್ರಹಗಳು) ಧರ್ಮದಲ್ಲಾಗಲೀ, ಇಹಲೋಕದಲ್ಲಾಗಲೀ ಯಾವುದೇ ಹಾನಿಯನ್ನೂ ಮಾಡಲಾರವು. ತಮಗೆ ಲಾಭವನ್ನಾಗಲೀ, ಹಾನಿಯನ್ನಾಗಲೀ ಮಾಡದ ಯಾವುದರೊಂದಿಗೂ ಲಾಭ, ಹಾನಿಯ ಉದ್ದೇಶವಿಟ್ಟು ನೀವು ಕರೆದು ಪ್ರಾರ್ಥಿಸದಿರಿ. ತಾವೇನಾದರೂ ಹಾಗೆ ಮಾಡುವುದಾದರೆ, (ಅಲ್ಲಾಹು ಅಲ್ಲದವುಗಳನ್ನು ಕರೆದು ಪ್ರಾರ್ಥಿಸುವುದಾದರೆ) ಖಂಡಿತವಾಗಿಯೂ ತಾವು ಅಕ್ರಮಿಗಳ ಪೈಕಿ ಸೇರಿದವರಾಗುವಿರಿ. ಮಾತ್ರವಲ್ಲ ಅಲ್ಲಾಹನೊಂದಿಗೆ ಸಹಭಾಗಿಯನ್ನಾಗಿ (ಶಿರ್ಕ್) ಮಾಡಿದವರ ಸಾಲಿನಲ್ಲಿ ಸೇರಿದವರಾಗುವಿರಿ.

ತಫ್ಸೀರ್ ತ್ವಬರೀ (ಹಿಜ್ರಾ: 224–310)⬆

👆 ಮೇಲಿನ ಸೂಕ್ತದ ತಫ್ಸೀರ್ ತ್ವಬರಿಯ ವಿವರಣೆಯಲ್ಲಿ ಯಾವೊಂದನ್ನೂ ಕರೆದು ಪ್ರಾರ್ಥಿಸದಿರಿ (شيئًا) ಎಂಬ ವಾಕ್ಯದಲ್ಲಿ ವಿಗ್ರಹಗಳು, ಕಬರ್, ಮಹಾತ್ಮರು, ಅಂಬಿಯಾಗಳೂ, ಔಲಿಯಾಗಳೂ, ಶೈಖ್'ಗಳೂ ಸೇರಿದಂತೆ ಕರೆದು ಪ್ರಾರ್ಥಿಸುವಂತಹ ಎಲ್ಲಾ ಆರಾಧ್ಯರುಗಳೂ ಸೇರಿದವರಾಗಿದ್ದಾರೆ. ಆದರೆ ಕಬರ್ ಆರಾಧಕರಾದ ಮುಸ್ಲಿಯಾರುಗಳು ಈ ಆಯತನ್ನು ಕೇವಲ ವಿಗ್ರಹಗಳಿಗೆ ಮಾತ್ರ ಸೀಮಿತಗೊಳಿಸುತ್ತಾರೆ. ವಿಗ್ರಹದ ಹಿಂದೆ ಒಬ್ಬ ಆರಾಧಿಸಲ್ಪಡುವ ವ್ಯಕ್ತಿ ಇದ್ದೇ ಇರುತ್ತಾನೆ. ಅದೇ ರೀತಿ ಕಬರ್ ಎತ್ತರಿಸಿ ಕಟ್ಟುವುದರಲ್ಲೂ ಕೂಡಾ. ಇದಕ್ಕೆ ಉದಾಹರಣೆ.👇

وَقَالُوا لَا تَذَرُنَّ آلِهَتَكُمْ وَلَا تَذَرُنَّ وَدًّا وَلَا سُوَاعًا وَلَا يَغُوثَ وَيَعُوقَ وَنَسْرًا

ಅವರು ಹೇಳಿದರು: ‘(ಓ ಜನರೇ!) ನೀವು ನಿಮ್ಮ ಆರಾಧ್ಯರನ್ನು ಕೈಬಿಡದಿರಿ. ವದ್ದ್, ಸುವಾ'ಅ, ಯಗೂಸ್, ಯಊಕ್ ಮತ್ತು ನಸ್ರ್ ರನ್ನು ಬಿಡದಿರಿ’.

ಕುರ್ ಆನ್ 71/23

ನೂಹ್ (ಅ) ರ ಜನತೆಯನ್ನು ಶೈತಾನನು ಮೇಲೆ ಹೆಸರಿಸಿದ ಐದು ಜನ ಮಹಾತ್ಮರ ಕಬರನ್ನು ಹಂತ ಹಂತವಾಗಿ ಪರಿಚಯಿಸಿ ಅವರ ವಿಗ್ರಹವನ್ನು ಸ್ಥಾಪಿಸುವಲ್ಲಿಗೆ ತಲುಪಿಸಿದನು. ಆ ಜನತೆಯು ತಮ್ಮ ಸಮಸ್ಯೆಗಳನ್ನು ನೀಗಿಸಲು ಈ ಐದು ಮಹಾತ್ಮರ ಕಬರನ್ನು ಆಶ್ರಯಿಸುತ್ತಿದ್ದರು.

ಕುರ್ ಆನ್ ವ್ಯಾಖ್ಯಾನಕಾರರ ನಾಯಕ ಎಂದು ಕರೆಯಲ್ಪಡುವ ಇಬ್ನ್ ಅಬ್ಬಾಸ್ ರವರು ಹೇಳುತ್ತಾರೆ: ಅವು (ವದ್ದ್, ಸುವಾಅ, ಯಗೂಸ್, ಯಊಕ್ ಮತ್ತು ನಸ್ರ್) ನೂಹ್ (ಅ) ರವರ ಜನತೆಯಲ್ಲಿದ್ದ ಮಹಾತ್ಮರಾದ ಜನರ ಹೆಸರುಗಳಾಗಿವೆ.

(ಸಹೀಹುಲ್ ಬುಖಾರಿ 3/316 ಹದೀಸ್ ನಂ 4920)

ಅದೇ ರೀತಿ ನಮ್ಮೂರಿನಲ್ಲೂ ಮಹಾತ್ಮರ ಕಬರ್ ಎತ್ತರಿಸಿ ಕಟ್ಟುವುದೂ ಆರಾಧನೆಯ ಭಾಗವೇ ಆಗಿದೆ. ಆದರೆ ಮುಸ್ಲಿಯಾರ್ ಗಳು ಇದನ್ನು ಇಸ್ತಿಗಾಸ ಎಂಬ ಅಡ್ಡ ಹೆಸರು ಹಾಕಿ ಮಯ್ಯತ್ ನೊಂದಿಗೆ ಮಾಡುವ ಇಸ್ತಿಗಾಸವನ್ನು ಆರಾಧನೆಯಿಂದ ದೂರವಾಗಿಸಿ ಮುಗ್ಧ ಜನರನ್ನು ವಂಚಿಸುತ್ತಿದ್ದಾರೆ.

🔴 ನಾವಿಲ್ಲಿ ತಿಳಿಯಬೇಕಾದ ವಿಷಯವೇನೆಂದರೆ ನಮ್ಮ ಊರಿನಲ್ಲಿ ಮುಸ್ಲಿಯಾರ್ ಗಳು ಹೇಳುವ ವಾದ "ನಾವು ಮರಣ ಹೊಂದಿದ ಅಂಬಿಯಾಗಳಲ್ಲಿ, ಔಲಿಯಾಗಳಲ್ಲಿ ಪ್ರಾರ್ಥಿಸುವುದಿಲ್ಲ, ಸಹಾಯ ಯಾಚನೆ (ಇಸ್ತಿಗಾಸ) ಮಾಡುತ್ತೇವೆ" ಎಂದಾಗಿದೆ. ಇಲ್ಲಿ ಮರಣ ಹೊಂದಿದವರೊಂದಿಗೆ ಸಹಾಯ ಯಾಚನೆ ಮಾಡುವುದು ಎಂದು ಹೇಳುವಾಗ ಇದು ಕಾರ್ಯ, ಕಾರಣ ಸಂಬಂಧದ ಹೊರಗಿನ ವಿಶ್ವಾಸವಾಗಿದೆ. ಇದು ಜೀವಂತ ಇರುವವರೊಂದಿಗೆ ಸಹಾಯ ಯಾಚನೆ ಮಾಡುವುದಕ್ಕಿಂತಲೂ ಭಿನ್ನವಾಗಿದೆ. ಜೀವಂತ ಇರುವವರೊಂದಿಗೆ ಸಹಾಯ ಯಾಚನೆ ಮಾಡುವಾಗ ಕಾರ್ಯ ಮತ್ತು ಕಾರಣವು ಪ್ರಕಟಗೊಳ್ಳುತ್ತದೆ. ಆದರೆ ಅಲ್ಲಾಹನೊಂದಿಗೆ ಪ್ರಾರ್ಥಿಸುವಾಗ ಅಥವಾ ಸಹಾಯ ಯಾಚನೆಯ ಸಂದರ್ಭ ಅದು ಅಲ್ಲಾಹನಿಗೆ ಅರಿಯಬೇಕಾದರೆ ಯಾವುದೇ ಕಾರ್ಯವೂ, ಕಾರಣವೂ ಪ್ರಕಟಗೊಳ್ಳುವ ಆವಶ್ಯಕತೆ ಇಲ್ಲ. ಆದ್ದರಿಂದ ಕಾರ್ಯ, ಕಾರಣ ಸಂಬಂಧಕ್ಕೆ ಒಳಪಡದ ಪ್ರಾರ್ಥನೆ ಅಥವಾ ಸಹಾಯ ಯಾಚನೆ ಅಲ್ಲಾಹನಿಗೆ ಮಾತ್ರ ಸೀಮಿತವಾಗಿರಬೇಕು. ಅಲ್ಲಾಹನಿಗೆ ಮಾತ್ರ ಸೀಮಿತವಾದ ಪ್ರಾರ್ಥನೆ ಅಥವಾ ಸಹಾಯ ಯಾಚನೆಯನ್ನು ಮರಣ ಹೊಂದಿದವರೊಂದಿಗೆ ಮಾಡಿದರೆ ಅದು ಅಲ್ಲಾಹನಿಗೆ ಸಹಭಾಗಿಯನ್ನಾಗಿ ಮಾಡಿದಂತಾಗುತ್ತದೆ.

ಇನ್ನೊಂದು ವಿಷಯವೇನೆಂದರೆ, ಮುಸ್ಲಿಯಾರ್ ಗಳು ಸಮರ್ಥಿಸುವ ಸಹಾಯ ಯಾಚನೆ (ಇಸ್ತಿಗಾಸ) ಎನ್ನುವುದು ಕೇವಲ ಅಡ್ಡಹೆಸರು ಮಾತ್ರವಾಗಿದೆ. ಇವರು ಮರಣ ಹೊಂದಿದವರಲ್ಲಿ ಮಾಡುವ ಸಹಾಯ ಯಾಚನೆ ಸತ್ಯದಲ್ಲಿ ಪ್ರಾರ್ಥನೆಯಾಗಿದೆ.

ಮುಸ್ಲಿಯಾರ್ ಗಳು ಮಾಡುವಂತಹ ಪ್ರಾರ್ಥನೆಗೆ ಏನೇ ಅಡ್ಡ ಹೆಸರು ಹಾಕಿದರೂ ಅದು ಪ್ರಾರ್ಥನೆಯಿಂದ ಹೋರಗಿಲ್ಲ ಎನ್ನುವುದಕ್ಕೆ ಉದಾಹರಣೆ.⬇

فَإِذَا رَكِبُوا فِي الْفُلْكِ دَعَوُا اللَّهَ مُخْلِصِينَ لَهُ الدِّينَ فَلَمَّا نَجَّاهُمْ إِلَى الْبَرِّ إِذَا هُمْ يُشْرِكُونَ

ಆದರೆ ಅವರು (ಬಹುದೇವಾರಾಧಕರು) ಹಡಗಿನಲ್ಲಿ ಏರಿದರೆ ಶರಣಾಗತಿಯನ್ನು ಅಲ್ಲಾಹುವಿಗೆ ನಿಷ್ಕಳಂಕಗೊಳಿಸಿ ಅವನೊಂದಿಗೆ ಪ್ರಾರ್ಥಿಸುವರು. ತರುವಾಯ ಅವನು ಅವರನ್ನು ಸುರಕ್ಷಿತವಾಗಿ ದಡಕ್ಕೆ ತಲುಪಿಸಿದರೆ ಅಗೋ! ಅವರು (ಅವನೊಂದಿಗೆ) ಸಹಭಾಗಿತ್ವವನ್ನು ಮಾಡುವರು.

[ಅಲ್-ಅನ್ಕಬೂತ್ : 65]

👆 ಈ ಸೂಕ್ತಿಯನ್ನು ಸ್ವಹಾಬಿಗಳು, ತಾಬಿವುಗಳು, ತಾಬಿವುತ್ತಾಬಿವುಗಳು ಅರ್ಥೈಸಿದ್ದು ಈ ರೀತಿಯಾಗಿದೆ.⬇

يقول تعالى ذكره: فإذا ركب هؤلاء المشركون السفينة في البحر، فخافوا الغرق والهلاك فيه ( دَعَوُا اللَّهَ مُخْلِصِينَ لَهُ الدِّينَ ) يقول: أخلصوا لله عند الشدّة التي نـزلت بهم التوحيد، وأفردوا له الطاعة، وأذعنوا له بالعبودة، ولم يستغيثوا بآلهتهم وأندادهم، ولكن بالله الذي خلقهم ( فَلَمَّا نَجَّاهُمْ إِلَى الْبَرِّ ) يقول: فلما خلصهم مما كانوا فيه وسلَّمهم، فصاروا إلى البرّ، إذا هم يجعلون مع الله شريكا في عبادتهم، ويدعون الآلهة والأوثان معه أربابا.

ಮುಶ್ರಿಕರು (ಬಹುದೇವಾರಾಧಕರು) ಹಡಗಿನಲ್ಲಿ ಯಾತ್ರೆ ಹೋಗುವ ಸಂದರ್ಭ ಕಡಲಿನಲ್ಲಿ ಮುಳುಗಿ ಸಾಯುವೆವು ಎಂದು ಖಾತರಿಯಾದಾಗ  ಅಲ್ಲಾಹನೊಂದಿಗೆ ನಿಷ್ಕಳಂಕವಾಗಿ ಪ್ರಾರ್ಥಿಸುವರು. ಅವರಿಗೆ ಬಂದಂತಹ ಆಪತ್ತಿನ ಸಮಯದಲ್ಲಿ ತೌಹೀದ್ ಉಳ್ಳವರಾಗಿ, ಶರಣಾಗತಿಯನ್ನು  ತಾಳ್ಮೆಯುಳ್ಳ ದಾಸರಾಗಿ ಅಲ್ಲಾಹನಿಗೆ ಮಾತ್ರ ಸೀಮಿತಗೊಳಿಸಿ, ಆರಾಧನೆಯನ್ನು ಅಲ್ಲಾಹನಿಗೆ ಮಾತ್ರ ನಿಷ್ಕಳಂಕಗೊಳಿಸುವರು. ಮತ್ತು ಅವರು ಅಲ್ಲಾಹನಿಗೆ ಮಾಡಿದಂತಹ ಸಹಭಾಗಿಗಳೊಂದಿಗೆ *ಸಹಾಯ ಯಾಚನೆ (ಇಸ್ತಿಗಾಸ)* ಮಾಡದೆ ತಮ್ಮನ್ನು ಸೃಷ್ಟಿಸಿದಂತಹ ಅಲ್ಲಾಹನಲ್ಲಿ ಸಹಾಯವನ್ನು ಬೇಡುವರು. ಮತ್ತು ಅವರು ಈ ಆಪತ್ತಿನಿಂದ ಪಾರಾಗಿ ದಡವನ್ನು ಸೇರಿದರೆ ಆರಾಧನೆಯಲ್ಲಿ ಅಲ್ಲಾಹನಿಗೆ ಸಹಭಾಗಿಯನ್ನಾಗಿ ಮಾಡಿ ಅಲ್ಲಾಹು ಅಲ್ಲದವರನ್ನೂ ಕರೆದು ಪ್ರಾರ್ಥಿಸುವರು.

ತಫ್ಸೀರ್ ತ್ವಬರೀ (ಹಿಜ್ರಾ: 224-310)⬆

ಮೇಲೆ ಕೊಟ್ಟಂತಹ ಅನ್ಕಬೂತ್ ಸೂರತ್ ನ 65 ನೇ ಸೂಕ್ತಿಯಲ್ಲಿನ ದುವಾ ಅಥವಾ ಪ್ರಾರ್ಥನೆ ಎಂಬ ಪದಕ್ಕೆ ಇಮಾಮ್ ತ್ವಬರೀ (ರ) ನೀಡಿದ ವಿವರಣೆ ಸಹಾಯ ಯಾಚನೆ ಅಥವಾ ಇಸ್ತಿಗಾಸ ಎಂದಾಗಿದೆ. ಇಲ್ಲಿ ನಾವು ಅಲ್ಲಾಹನಲ್ಲಿ ಮಾಡುವ ಪ್ರಾರ್ಥನೆ ಅಥವಾ ಸಹಾಯ ಯಾಚನೆಯನ್ನು ಅಲ್ಲಾಹನ ಸೃಷ್ಟಿಗಳೊಂದಿಗೆ ಮಾಡುವುದು ಬಹುದೇವಾರಾಧನೆಗೆ ಸಮವಾಗಿದೆ.

ಪ್ರಾರ್ಥನೆ ಆರಾಧನೆಯಾಗಿದೆ. 👇

وعن النعمان بن بشير رضي الله عنهما عن النبي صلى الله عليه وسلم قال‏:‏ ‏ "‏الدعاء هو العبادة‏"‏‏.‏

ನುಮಾನ್ ಬಿನ್ ಬಶೀರ್ (ರ) ರಿಂದ ವರದಿ : ಪ್ರವಾದಿ ﷺ ರು ಹೇಳಿದರು : ಪ್ರಾರ್ಥನೆ ಆರಾಧನೆಯಾಗಿದೆ. ನಂತರ ಪ್ರವಾದಿ ﷺ ರು ಈ ಸೂಕ್ತಿಯನ್ನು ಓದಿದರು.👇

وَقَالَ رَبُّكُمُ ادْعُونِي أَسْتَجِبْ لَكُمْ ۚ إِنَّ الَّذِينَ يَسْتَكْبِرُونَ عَنْ عِبَادَتِي سَيَدْخُلُونَ جَهَنَّمَ دَاخِرِينَ

ನಿಮ್ಮ ಪ್ರಭು ಹೇಳಿರುವನು: ‘ನೀವು ನನ್ನೊಂದಿಗೆ ಪ್ರಾರ್ಥಿಸಿರಿ. ನಾನು ನಿಮಗೆ ಉತ್ತರವನ್ನು ನೀಡುವೆನು. ನನ್ನನ್ನು ಆರಾಧಿಸದೆ[950 ಅಹಂಕಾರ ಪಡುವವರಾರೋ ಖಂಡಿತವಾಗಿಯೂ ಅವರು ತರುವಾಯ ಅಪಮಾನಿತ ರಾಗಿ ನರಕಾಗ್ನಿಯನ್ನು ಪ್ರವೇಶಿಸುವರು’.

ಟಿಪ್ಪಣಿಗಳು :
[950] ಪ್ರಾರ್ಥನೆ ಆರಾಧನೆಯಾಗಿದೆಯೆಂದು ಈ ಸೂಕ್ತಿಯು ಸಂಶಯಕ್ಕೆಡೆಯಿಲ್ಲದಂತೆ ಸ್ಪಷ್ಟಪಡಿಸುತ್ತದೆ.
[ಗಾಫಿರ್ : 60]

[ತಿರ್ಮಿದಿ ಹದೀತ್ # 2969, 3247, 3372]
[ಇಬ್ನ್ ಮಾಜ ಹದೀತ್ # 3828]

🔴ಮುಸ್ಲಿಯಾರುಗಳ ಇನ್ನೊಂದು ವಾದವಾಗಿದೆ "ನಾವು ಔಲಿಯಾಗಳೊಂದಿಗೆ, ಅಂಬಿಯಾಗಳೊಂದಿಗೆ ಸಹಾಯ ಯಾಚನೆ ಮಾಡುವಾಗ ಅವರನ್ನು ಇಲಾಹ್ ಮಾಡಿ ಯಾಚಿಸುವುದಿಲ್ಲ" ಎಂದಾಗಿದೆ. ಆದರೆ ಮೇಲೆ ಕೊಟ್ಟಂತಹ ಸೂಕ್ತಿಗಳು ಮತ್ತು ಅದರ ವಿವರಣೆಗಳು ಮುಸ್ಲಿಯಾರುಗಳ ಈ ವಾದವನ್ನು ತಳ್ಳುವಂತಾಗಿದೆ. ಇಲ್ಲಿ ಆರಾಧನೆ ಆಗಬೇಕಾದರೆ ಇಲಾಹ್ ಮಾಡಬೇಕೆಂದಿಲ್ಲ. ಪ್ರಾರ್ಥನೆ ಅಥವಾ ಮರಣ ಹೊಂದಿದವರಲ್ಲಿ ಇಸ್ತಿಗಾಸ ಮಾಡುವುದು ಆರಾಧನೆಯಾಗಿದೆ ಎಂದು ಮೇಲೆ ವಿವರಿಸಿದ ಕುರ್'ಆನ್ ಸೂಕ್ತಿಗಳಲ್ಲಿ ಮತ್ತು ಹದೀಸಿನಲ್ಲಿ ಸ್ಪಷ್ಟವಾಗಿದೆ. ಸ್ವಹಾಬಿಗಳೂ, ತಾಬಿವುಗಳೂ, ತಾಬಿವುತ್ತಾಬಿವುಗಳೂ ಅರ್ಥೈಸಿದ ರೀತಿಯು ಇದುವೇ ಆಗಿದೆ ಎನ್ನುವುದಕ್ಕೆ ಇಮಾಮ್ ತ್ವಬರೀ (ರ)(ಹಿಜ್ರಾ: 224-310) ರವರ ತಫ್ಸೀರ್ ಪುರಾವೆಯಾಗಿದೆ.

ಅಲ್ಲಾಹನು ಕುರ್'ಆನಿನಲ್ಲಿ ಹೇಳುತ್ತಾನೆ.👇

أَلَا لِلَّهِ الدِّينُ الْخَالِصُ ۚ وَالَّذِينَ اتَّخَذُوا مِنْ دُونِهِ أَوْلِيَاءَ مَا نَعْبُدُهُمْ إِلَّا لِيُقَرِّبُونَا إِلَى اللَّهِ زُلْفَىٰ

ಅರಿಯಿರಿ! ನಿಷ್ಕಳಂಕವಾದ ಶರಣಾಗತಿಯು ಅಲ್ಲಾಹುವಿಗೆ ಮಾತ್ರ ಅರ್ಹವಾದುದಾಗಿದೆ. ಅವನ ಹೊರತು ಅನ್ಯರನ್ನು ರಕ್ಷಕರನ್ನಾಗಿ ಮಾಡಿಕೊಂಡವರು (ಹೇಳುವರು): ‘ನಮ್ಮನ್ನು ಅಲ್ಲಾಹುವಿನೆಡೆಗೆ ಹತ್ತಿರ ಗೊಳಿಸುವ ಸಲುವಾಗಿಯೇ ಹೊರತು ನಾವು ಅವರನ್ನು ಆರಾಧಿಸುತ್ತಿಲ್ಲ’.

[ಅಝ್ಝುಮರ್ : 3]

👆 ಈ ಮೇಲಿನ ಸೂಕ್ತಿಯಲ್ಲಿರುವ ವಾದವು ಈಗಿನ ಮುಸ್ಲಿಯಾರುಗಳಲ್ಲೂ ಕಂಡು ಬರುತ್ತಿದೆ. ಆ ವಾದದ ವಿರುದ್ದ ಅದೇ ಸೂಕ್ತಿಯಲ್ಲಿ ಅಲ್ಲಾಹನು ಮುಂದುವರಿದು ಹೇಳುತ್ತಾನೆ.👇

 إِنَّ اللَّهَ يَحْكُمُ بَيْنَهُمْ فِي مَا هُمْ فِيهِ يَخْتَلِفُونَ ۗ إِنَّ اللَّهَ لَا يَهْدِي مَنْ هُوَ كَاذِبٌ كَفَّارٌ

ಅವರು ಯಾವ ವಿಷಯದಲ್ಲಿ ಭಿನ್ನರಾಗಿ ರುವರೋ ಆ ವಿಷಯದಲ್ಲಿ ಖಂಡಿತವಾಗಿಯೂ ಅಲ್ಲಾಹು ಅವರ ಮಧ್ಯೆ ತೀರ್ಪು ನೀಡುವನು. ಖಂಡಿತವಾಗಿಯೂ ಸುಳ್ಳು ನುಡಿಯುವವನೂ, ಕೃತಘ್ನನೂ ಆಗಿರುವ ಯಾರನ್ನೂ ಅಲ್ಲಾಹು ಸನ್ಮಾರ್ಗಕ್ಕೆ ಸೇರಿಸಲಾರನು.

[ಅಝ್ಝುಮರ್ : 3]

ಸಹೋದರರೇ ನೀವು ಮುಸ್ಲಿಯಾರುಗಳ ಕಾಪಟ್ಯದ ಬಲೆಗೆ ಬಿದ್ದು ತಮ್ಮ ಬುದ್ದಿಯನ್ನು ಪುರೋಹಿತರ ಕಾಲಿನ ಬುಡದಲ್ಲಿ ಅಡವು ಇಟ್ಟರೆ ನಿಮಗೆ ಸತ್ಯವನ್ನು ಸತ್ಯವಾಗಿ ಅರಿಯಲು ಸಾಧ್ಯವಿಲ್ಲ. ಪರಲೋಕದಲ್ಲಿ ನಿಮ್ಮೊಂದಿಗೆ ಅವರು ಇರಲಾರರು. ಆದ್ದರಿಂದ ಅಲ್ಲಾಹನು ಕರುಣಿಸಿದಂತಹ ನಿಮ್ಮ ಬುದ್ದಿಯನ್ನು ಯಾರಿಗೂ ಅಡವು ಇಡದೆ ಸದುಪಯೋಗಪಡಿಸಿ ಚಿಂತಿಸಿ...

ಅಲ್ಲಾಹನು ಹೇಳುತ್ತಾನೆ.👇

وَالَّذِينَ اجْتَنَبُوا الطَّاغُوتَ أَنْ يَعْبُدُوهَا وَأَنَابُوا إِلَى اللَّهِ لَهُمُ الْبُشْرَىٰ ۚ فَبَشِّرْ عِبَادِ

ಮಿಥ್ಯಾರಾಧ್ಯರನ್ನು -ಅವರನ್ನು ಆರಾಧಿಸುವು ದನ್ನು- ವರ್ಜಿಸಿ, ಅಲ್ಲಾಹುವಿನೆಡೆಗೆ ವಿನಯತೆಯೊಂದಿಗೆ ಮರಳಿದವರಾರೋ ಅವರಿಗೆ ಶುಭವಾರ್ತೆಯಿದೆ. ಆದ್ದ ರಿಂದ ನನ್ನ ದಾಸರಿಗೆ ಶುಭವಾರ್ತೆಯನ್ನು ತಿಳಿಸಿರಿ.

 ... الَّذِينَ يَسْتَمِعُونَ الْقَوْلَ فَيَتَّبِعُونَ أَحْسَنَهُ ۚ أُولَٰئِكَ الَّذِينَ هَدَاهُمُ اللَّهُ ۖ وَأُولَٰئِكَ هُمْ أُولُو الْأَلْبَابِ

ಅಂದರೆ ಮಾತುಗಳನ್ನು ಕಿವಿಗೊಟ್ಟು ಆಲಿಸುವ ಮತ್ತು ಅದರಲ್ಲಿ ಅತ್ಯುತ್ತಮವಾಗಿರುವುದನ್ನು ಅನುಸರಿಸು ವವರಿಗೆ. ಅಲ್ಲಾಹು ಮಾರ್ಗದರ್ಶನ ಮಾಡಿರುವುದು ಅವರಿಗಾಗಿದೆ ಮತ್ತು ಬುದ್ಧಿವಂತರು ಅವರೇ ಆಗಿರುವರು.

[ಅಝ್ಝುಮರ್ : 17 - 18]

ಅಲ್ಲಾಹನು ನಮ್ಮೆಲ್ಲರನ್ನೂ ಸನ್ಮಾರ್ಗದಲ್ಲಿ ಸೇರಿಸಿ, ಅವನ ಕರುಣೆಯಿಂದ, ಅವನ ಅನುಗ್ರಹದಿಂದ ನರಕ ಶಿಕ್ಷೆಯಿಂದ ಪಾರು ಮಾಡಿ, ಸ್ವರ್ಗದಲ್ಲಿ ಒಂದುಗೂಡಿಸಲಿ...

ಆಮೀನ್....


✍Abu Muadh

ಗಡ್ಡ ಬೆಳೆಸುವುದು ಇಸ್ಲಾಮಿನಲ್ಲಿ.

ಗಡ್ಡ ಬೆಳೆಸುವುದು ಇಸ್ಲಾಮಿನಲ್ಲಿ.

ಗಡ್ಡ ಬೆಳೆಸುವುದು ಪ್ರವಾದಿ ﷺ ರ ಕಲ್ಪನೆಯಲ್ಲಿ ಪ್ರಬಲವಾದ ಕಲ್ಪನೆಯಾಗಿದೆ. ಆದ್ದರಿಂದ ಪುರುಷರು ಗಡ್ಡ ಬೆಳೆಸುವುದು ಇಸ್ಲಾಮಿನಲ್ಲಿ ಕಡ್ಡಾಯವಾಗಿದೆ.


1. ಪ್ರವಾದಿ ﷺ ರು ಹೇಳಿದರು :

خالفوا المشركين، وفرو الحى واحفوا الشوارب.

ನೀವು ಮುಶ್ರಿಕರಿಗೆ ವಿರುದ್ದವಾಗಿರಿ. ಗಡ್ಡ ಬೆಳೆಸಿರಿ ಮತ್ತು ಮೀಸೆಯನ್ನು ಚಿಕ್ಕದಾಗಿಸಿರಿ.

(ಬುಖಾರಿ: 5553, ಮುಸ್ಲಿಮ್ : 259)

2. ಪ್ರವಾದಿ ﷺ ರು ಹೇಳಿದರು :

جزوا الشوارب وارخو اللحى خالفوا المجوس.

ನೀವು ಮೀಸೆಯನ್ನು ಚಿಕ್ಕದಾಗಿಸಿ, ಗಡ್ಡವನ್ನು ಬೆಳೆಸಿರಿ. ಅಗ್ನಿ ಆರಾಧಕರಿಂದ ವ್ಯತ್ಯಸ್ತರಾಗಿರಿ.

(ಮುಸ್ಲಿಮ್: 260)

3. ಪ್ರವಾದಿ ﷺ ರು ಹೇಳಿದರು :

ان اهل الشرك يعفون شواربهم ويحفون لحاهم فخالفوهم، فاعفوا الحى واحفوا الشوارب.

ಖಂಡಿತವಾಗಿಯೂ ಶಿರ್ಕ್ ಮಾಡುವವರು ಮೀಸೆಯನ್ನು ಬೆಳೆಸುವರು ಮತ್ತು ಗಡ್ಡವನ್ನು ಚಿಕ್ಕದಾಗಿಸುವರು. ನೀವು ಅವರಿಂದ ವ್ಯತ್ಯಸ್ತರಾಗಿರಿ. ನೀವು ಗಡ್ಡವನ್ನು ಬೆಳೆಸಿರಿ, ಮೀಸೆಯನ್ನು ಚಿಕ್ಕದಾಗಿಸಿರಿ.

(ಬುಖಾರಿ, ಮುಸ್ಲಿಮ್ )

4. ಪ್ರವಾದಿ ﷺ ರು ಹೇಳಿದರು :

من فطرة الإسلام أخذ الشارب واعفاء اللحى....

ಇಸ್ಲಾಮಿನ ಶುದ್ಧ ಪ್ರಕೃತಿಯಲ್ಲಿ ಒಳಗೊಂಡದ್ದಾಗಿದೆ ಮೀಸೆ ತೆಗೆಯುವುದು ಮತ್ತು ಗಡ್ಡ ಬೆಳೆಸುವುದು.
(ಬುಖಾರಿ, ಮುಸ್ಲಿಮ್ )

أمرنا باحفاء الشوارب واعفاء الحى
ಇಬ್ನು ಉಮರ್ (ರ) ಹೇಳುತ್ತಾರೆ : ನಮಗೆ ಗಡ್ಡ ಬಿಡಲೂ, ಮೀಸೆಯನ್ನು ಚಿಕ್ಕದಾಗಿಸಲೂ ಕಲ್ಪಿಸಿದರು.

ಇಲ್ಲಿ ನಮಗೆ ತಿಳಿದು ಬರುವುದು ಗಡ್ಡ ಬೆಳೆಸುವುದು ವಾಜಿಬ್ ಎಂದಾಗಿದೆ.  ವಾಜಿಬ್ ಗೆ ಎದುರಾಗಿ ಪ್ರವರ್ತಿಸುವುದಾದರೆ ಅದು ಹರಾಮ್ ಆಗಿದೆ. ಆದ್ದರಿಂದ ಇಸ್ಲಾಮಿನ ಪಂಡಿತರು ಗಡ್ಡ ಬೋಳಿಸುವುದು ಹರಾಮ್ ಆಗಿದೆ ಎಂದು ವ್ಯಕ್ತ ಪಡಿಸಿದ್ದಾರೆ.

يحرم حلق اللحية
ಗಡ್ಡ ಬೋಳಿಸುವುದು ಹರಾಮ್ ಆಗಿದೆ.
(ಫತಾವಲ್ ಕುಬ್ರ 4/302)

ಈ ವಿಷಯದಲ್ಲಿ ಇಜ್ಮಾಅ ಕೂಡಾ ಇದೆ.
(ಇಬ್ನು ಮುಫ್ಲಿಹ್ ರ ಅಲ್ ಫುರೂಗ್ 1/130)

ويحرم حلق اللحية, ولا يفعله إلا المخنثون من الرجال

ಪುರುಷರಲ್ಲಿ ಸ್ತೀಯರ ಹಾಗೆ ಇರುವವರಲ್ಲದೇ ಹಾಗೆ ಮಾಡುವುದಿಲ್ಲ.
(ಇಮಾಮ್ ಇಬ್ನು ಅಬ್ದುಲ್ ಬರ್ರ್)

ನಿಮ್ಮ ಗಡ್ಡ ನಿಮ್ಮ ಸೌಂದರ್ಯವನ್ನು ಇಲ್ಲದಾಗಿಸುತ್ತದೆ ಎಂದು ತೋಚುತ್ತಿದೆಯಾದರೆ ನಿಮಗೆ ಪ್ರವಾದಿ ﷺ ರನ್ನು ಇಷ್ಟಪಡಲು ಸಾಧ್ಯವಿಲ್ಲ. ಕಾರಣ ಪ್ರವಾದಿ ﷺ ರ ಕುರಿತು ಸ್ವಹಾಬಿಗಳು ಹೇಳುವುದನ್ನು ನೋಡಿ.🔽

كان رسول الله كثير شعر اللحية..
ಪ್ರವಾದಿ ﷺ ರು ಧಾರಾಳವಾಗಿ ಗಡ್ಡ ಇರುವವರಾಗಿದ್ದರು.
(ಮುಸ್ಲಿಮ್ 2344)

 ಅಲ್ಲಾಹನುಕುರಾನಿನಲ್ಲಿ ಹೇಳುತ್ತಾನೆ 🔽

لَقَدْ خَلَقْنَا الْإِنْسَانَ فِي أَحْسَنِ تَقْوِيمٍ

ಖಂಡಿತವಾಗಿಯೂ ನಾವು ಮನುಷ್ಯನನ್ನು ಅತ್ಯುತ್ತಮ ರಚನೆಯೊಂದಿಗೆ ಸೃಷ್ಟಿಸಿರುವೆವು.

[ಅತ್ತೀನ್ : 4]

وَلَأُضِلَّنَّهُمْ وَلَأُمَنِّيَنَّهُمْ وَلَآمُرَنَّهُمْ فَلَيُبَتِّكُنَّ آذَانَ الْأَنْعَامِ وَلَآمُرَنَّهُمْ فَلَيُغَيِّرُنَّ خَلْقَ اللَّهِ ۚ وَمَنْ يَتَّخِذِ الشَّيْطَانَ وَلِيًّا مِنْ دُونِ اللَّهِ فَقَدْ خَسِرَ خُسْرَانًا مُبِينًا

ಖಂಡಿತವಾಗಿಯೂ ನಾನು ಅವರನ್ನು ಪಥಭ್ರಷ್ಟ ಗೊಳಿಸುವೆನು ಮತ್ತು ಅವರಲ್ಲಿ ವ್ಯರ್ಥಕಲ್ಪನೆಗಳನ್ನು ಹುಟ್ಟಿಸುವೆನು. ಖಂಡಿತವಾಗಿಯೂ ನಾನು ಅವರೊಂದಿಗೆ ಆದೇಶಿಸುವೆನು. ಆಗ ಅವರು ಜಾನುವಾರುಗಳ ಕಿವಿಗಳನ್ನು ಹರಿಯುವರು. ಖಂಡಿತವಾಗಿಯೂ ನಾನು ಅವರೊಂದಿಗೆ ಆದೇಶಿಸುವೆನು. ಆಗ ಅವರು ಅಲ್ಲಾಹುವಿನ ಸೃಷ್ಟಿ (ಪ್ರಕೃತಿ)ಯನ್ನು ಬದಲಾಯಿಸುವರು.’[119.b] ಯಾರು ಅಲ್ಲಾಹುವಿನ ಹೊರತು ಸೈತಾನನನ್ನು ರಕ್ಷಕನನ್ನಾಗಿ ಮಾಡಿಕೊಳ್ಳುವನೋ ಖಂಡಿತವಾಗಿಯೂ ಅವನು ಸ್ಪಷ್ಟವಾದ ನಷ್ಟಕ್ಕೊಳಗಾಗಿರುವನು.

ಟಿಪ್ಪಣಿಗಳು :
[119.b] ಅಲ್ಲಾಹು ಪ್ರತಿಯೊಂದು ವಸ್ತುವನ್ನೂ ಸಂತುಲಿತ ಪ್ರಕೃತಿಯೊಂದಿಗೆ ಸೃಷ್ಟಿಸಿರುವನು. ಮಾನವ ಜೀವನವು ಕೂಡ ಈ ಪ್ರಕೃತಿನಿಯಮಗಳ ವ್ಯಾಪ್ತಿಯಲ್ಲಿ ಸೇರಿದೆ. ಪ್ರಕೃತಿ ನಿಯಮಗಳಿಗೆ ವಿರುದ್ಧವಾದ ಯಾವುದೇ ಕೃತ್ಯವೂ ದುಷ್ಪರಿಣಾಮವುಂಟು ಮಾಡುವುದರಿಂದ ಅವೆಲ್ಲವೂ ನಿಷಿದ್ಧವಾಗಿವೆ.

[ಅನ್ನಿಸಾ'ಅ : 119]
-----------------------------

ಅಲ್ಲಾಹನ ಸಂದೇಶವಾಹಕರ(ಸ.ಅ) ರ ಚರ್ಯೆ ನಮಗೆ ಏನನ್ನು ಸೂಚಿಸುತ್ತದೆ ಎಂದರೆ ಗಡ್ಡವನ್ನು ಬೋಳಿಸುವುದು ಅಥವಾ ಅದನ್ನು ಕತ್ತರಿಸಿ ಕಿರಿದು ಗೊಳಿಸುವುದು ಹರಾಂ ಆಗಿದೆ. ಇದು ಪ್ರವಾದಿ(ಸ.ಅ) ರಿಂದ ಸಹೀಹ್ ಪರಂಪರೆಯಲ್ಲಿ ವರದಿಯಾದ ಹದೀಸ್ ಆಗಿದೆ.
ಅಲ್ಲಾಹನ ರಸೂಲ್(ಸ.ಅ) ಹೇಳುತ್ತಾರೆ; "ಮೀಸೆಯನ್ನು ಕತ್ತರಿಸಿರಿ ಅಥವಾ ಕಿರಿದು ಮಾಡಿರಿ ಗಡ್ಡವನ್ನು ಬೆಳೆಸಿರಿ. ಮತ್ತು ಮುಶ್ರಿಕೀನ್ ಗಳಿಗಿಂತ ಭಿನ್ನವಾಗಿರಿ."
(ಅಲ್ ಬುಖಾರಿ, ಅಲ್ ಲಿಬಾಸ್,5442; ಮುಸ್ಲಿಮ್, ಅಲ್ ತಹಾರಾ,382)

ಆದರೆ ಒಬ್ಬ ವ್ಯಕ್ತಿಯ ಗಡ್ಡವು ಸರಿಯಾಗಿ ಬೆಳೆಯದೇ ಇದ್ದಲ್ಲಿ ಅದು ಅವನ ತಪ್ಪಾಗಿರುವುದಿಲ್ಲ. ಅವನ ಸಂಕಲ್ಪವು ಪ್ರವಾದಿ(ಸ.ಅ) ರ ಚರ್ಯೆಗೆ ಅನುವಾಗಿದ್ದಲ್ಲಿ ಆತ ಆ ಕಾರಣ ಶಿಕ್ಷಿಸಲ್ಪಡಲಾರ.

ಒಂದು ಹದೀಸ್ ಪ್ರಕಾರ ಪ್ರವಾದಿ(ಸ.ಅ) ರು ತಮ್ಮ ಗಡ್ಡವನ್ನು ಕಿರಿದು ಮಾಡುತ್ತಿದ್ದರು ಎಂದಿದೆ. ಅದು ಸುಳ್ಳು ವರದಿಯಾಗಿದೆ. ಹಾಗಂತ ಇದರ ಅರ್ಥ ಮುಖ ವಿಕಾರ ಮಾಡಿ ಗಡ್ಡ ಬೆಳೆಸಬೇಕೆಂದಲ್ಲ. ಗಮನಿಸಬೇಕಾದ ಅಂಶವೇನೆಂದರೆ ಇಸ್ಲಾಮ್ ಸೌಂದರ್ಯದ ಧರ್ಮವಾಗಿದೆ. ಒಮ್ಮೆ ಪ್ರವಾದಿ(ಸ.ಅ) ರಲ್ಲಿ ಕೇಳಲಾಯಿತು; ಒಬ್ಬ ವ್ಯಕ್ತಿ ತನ್ನ ವಸ್ತ್ರ ಮತ್ತು ಪಾದರಕ್ಷೆಗಳನ್ನು ಶುಚಿಯಾಗಿಡಲು ಬಯಸಿದರೆ ಅದು ಉತ್ತಮವೇ? ಅಲ್ಲಾಹನ ಸಂದೇಶವಾಹಕರು ಉತ್ತರಿಸಿದರು; "ಅಲ್ಲಾಹ್ ರಬ್ಬುಲ್ ಇಝ್ಝತ್ ಪರಿಪಾವನನಾಗಿದ್ದಾರೆ ಮತ್ತು ಆತ ಪಾವನತೆಯನ್ನು ಇಷ್ಟಪಡುವವನಾಗಿದ್ದಾನೆ.
(ಮುಸ್ಲಿಮ್, ಅಲ್ ಈಮಾನ್, 131)

ಅಲ್ಲಾಹನ ಸಂದೇಶವಾಹಕರು ಕೂದಲು ಬಾಚಿ ಅಚ್ಚುಕಟ್ಟಾಗಿಸಲು ಆದೇಶಿಸಿರುತ್ತಾರೆ. "ಯಾರಿಗೆ ಕೂದಲಿದೆಯೋ ಆತನು ಅದರ ಕಡೆ ಗಮನ ಹರಿಸಲಿ." (ಅಬೂದಾವೂದ್, ಅಲ್ ಅಲ್ಬಾನಿ, ಕಿತಾಬ್ ಅಲ್ ತರಜ್ಜುಲ್, 3632. ಅಲ್ಬಾನಿಯವರು ಹಸನ್ ಎಂದಿದ್ದಾರೆ)

ಹಾಫಿಝ್ ಇಬ್ನ್ ಹಜರ್ ಹೇಳುತ್ತಾರೆ, ಇಬ್ನ್ ಬತ್ತಲ್ ಹೇಳಿದ್ದಾರೆ; ಬಾಚುವುದು ಎಂದರೆ ಕೂದಲು ಮತ್ತು ಗಡ್ಡವನ್ನು ಅಚ್ಚುಕಟ್ಟಾಗಿಸುವುದು. ಮತ್ತು ಅದಕ್ಕೆ ಎಣ್ಣೆ ಹಚ್ಚುವುದಾಗಿದೆ. ಇದು ಪ್ರವಾದಿ(ಸ.ಅ) ರ ಚರ್ಯೆಗಳಲ್ಲಿ ಒಳಪಟ್ಟದ್ದಾಗಿದೆ. ಅವರು(ಸ.ಅ) ಹೇಳಿದ್ದಾರೆ; "ಯಾರು ನನ್ನ ಚರ್ಯೆಯಿಂದ ತಿರುಗುವನೋ ಅವನಿಗೂ ನನಗೂ ಸಂಬಂಧವಿಲ್ಲ." (ಅಲ್ ಬುಖಾರಿ, ಅಲ್ ನಿಖಾಹ್, 4675)
____________________

🔴 ಗಡ್ಡವನ್ನು ಲೇವಡಿ ಮಾಡುವುದರ ವಿಧಿ?

ಪ್ರವಾದಿ ﷺ ರ ಸುನ್ನತ್ತಿನಲ್ಲಿ ಸೇರಿದ ಒಂದು ಸುನ್ನತ್ತನ್ನು ಲೇವಡಿ ಮಾಡುವವನ ಬಗ್ಗೆ ಶರೀಅತ್ತಿನಲ್ಲಿರುವ ವಿಧಿಯೇನು?

ಉದಾಹರಣೆಗೆ ಕೆಲವರು ಗಡ್ಡವನ್ನು ಮತ್ತು ಗಡ್ಡ ಬೆಳೆಸಿದ ವ್ಯಕ್ತಿಯನ್ನು ಲೇವಡಿ ಮಾಡುತ್ತಾರೆ. ಅವರು ಅವನನ್ನು "ಓ ಗಡ್ಡದವನೇ" ಎಂದು ಲೇವಡಿಯೊಂದಿಗೆ ಕರೆಯುತ್ತಾರೆ. ಈ ರೀತಿ ಹೇಳುವವನ ವಿಧಿಯೇನು ಎಂಬುದನ್ನು ವಿವರಿಸಿ ಕೊಡಬೇಕೆಂದು ಗೌರವಾನ್ವಿತರಾದ ತಮ್ಮೊಂದಿಗೆ ನಾವು ವಿನಂತಿಸುತ್ತಿದ್ದೇವೆ.

ಉತ್ತರ:
ಗಡ್ಡವನ್ನು ಲೇವಡಿ ಮಾಡುವುದು ಬಹು ದೊಡ್ಡ ದುರಾಚಾರವಾಗಿದೆ. "ಓ ಗಡ್ಡದವನೇ" ಎಂದು ಕರೆಯುವ ಮೂಲಕ ಗಡ್ಡವನ್ನು ಲೇವಡಿ ಮಾಡುವುದು ಉದ್ದೇಶವಾಗಿದ್ದರೆ ಅದು ಕುಫ್ರ್ ಆಗಿದೆ.
 ಆದರೆ ವ್ಯಕ್ತಿಯನ್ನು ಗುರುತಿಸುವುದಕ್ಕಾಗಿ ಹಾಗೆ ಕರೆಯುವುದಾದರೆ ಅದು ಕುಫ್ರ್ ಆಗಲಾರದು. ಆದರೂ ಆ ರೀತಿ ಕರೆಯುವುದು ಸರಿಯಲ್ಲ. ಯಾಕೆಂದರೆ ಅಲ್ಲಾಹನು ಹೇಳುತ್ತಾನೆ :
 (ಓ ಪ್ರವಾದಿಯವರೇ) ಹೇಳಿರಿ : ನೀವು ಅಲ್ಲಾಹನನ್ನು, ಅವನ ದೃಷ್ಟಾಂತಗಳನ್ನು, ಮತ್ತು ಅವನ ರಸೂಲರನ್ನು ಲೇವಡಿ ಮಾಡುತ್ತಿರುವಿರಾ? ನೀವು ನೆಪಗಳನ್ನು ಹೇಳಬೇಡಿರಿ. ನೀವು ವಿಶ್ವಾಸವನ್ನು ತಾಳಿದ ಬಳಿಕ ಅವಿಶ್ವಾಸಿಗಳಾಗಿ (ಕಾಫಿರ್ ಗಳಾಗಿ) ಮಾರ್ಪಟ್ಟಿರುವಿರಿ. [ಕುರ್‍ಆನ್ : 9:65-66]

(ಫತಾವ ಲಜ್ನತಿ ದ್ದಾಇಮಾ: 2/43)
-------------------------------------------------