11 Dec 2016

ಬಿದ್ಅತ್ ಎಂದರೆ ಏನು?

ಬಿದ್ಅತ್

ಸೋಷಿಯಲ್ ಮೀಡಿಯಾಗಳಲ್ಲಿ ಬಿದ್ಅತ್ ನ ವಿಷಯದಲ್ಲಿ ಹಲವು ರೀತಿಯಲ್ಲಿ ಚರ್ಚೆ ಮಾಡುವುದನ್ನು ನೋಡಿದ್ದೇವೆ. ಆದರೆ ಬಿದ್ಅತ್ ಎಂದರೆ ಏನು ಎಂಬುದನ್ನು ಸರಿಯಾಗಿ ಅರ್ಥ ಮಾಡದಂತಹ ಗೊಂದಲದ ವಾತಾವರಣ ಹಲವರಲ್ಲಿ ಕಾಣಲು ಸಾಧ್ಯ. ಈ ಗೊಂದಲ ವನ್ನು ನಿವಾರಿಸಲು ಚಿಕ್ಕ ಪ್ರಯತ್ನ ಮಾತ್ರ...

ಹಲವರಿಗೆ ಬಿದ್ಅತ್ ಎಂದ ತಕ್ಷಣ ಮನಸ್ಸಿಗೆ ತೋಚುವುದು ಸಲಫಿಗಳು ವಿರೋಧಿಸುವ ಪ್ರವಾದಿ ﷺ ರ ಜನ್ಮ ದಿನಾಚರಣೆ, ಕುತುಬಿಯ್ಯತ್, ಉರೂಸ್, ಆಂಡ್ ನೇರ್ಚೆ, ರಾತೀಬು, ಕುತ್ತು ರಾತೀಬು, ಮೊದಲಾದ ಅನಾಚಾರಗಳು ಎಂಬ ಭಾವನೆಯಾಗಿದೆ. ಇನ್ನೊಂದೆಡೆ ಸುನ್ನೀ ಮುಸ್ಲಿಯಾರ್ ಗಳು ಬಿದ್ಅತನ್ನು ಒಳ್ಳೆಯ ಬಿದ್ಅತ್, ಕೆಟ್ಟ ಬಿದ್ಅತ್ ಎಂದು ಎರಡಾಗಿ ವಿಂಗಡಿಸಿ ಇಮಾಮರುಗಳ  ಅಭಿಪ್ರಾಯಗಳನ್ನು ದುರ್ವ್ಯಾಖ್ಯಾನ ಮಾಡಿ ಜನರನ್ನು ದಾರಿ ತಪ್ಪಿಸುವ ಕೆಲಸದಲ್ಲೂ ತೊಡಗಿದ್ದಾರೆ. ಆದರೆ ನಿಜವಾಗಿಯೂ ಬಿದ್ಅತ್ ಎಂದರೆ ಏನು❓ ಎಂಬುದನ್ನು ಮೊದಲನೆಯದಾಗಿ ನಾವು ಕುರಾನಿಂದಲೇ ತಿಳಿಯುವ.

 ಆಕಾಶ, ಭೂಮಿಯ ನಿರ್ಮಾಣವನ್ನು ಭಾಷಾರ್ಥದಲ್ಲಿ ಬಿದ್ಅತ್ ಎಂದು ಹೇಳಬಹುದು.

ಉದಾಹರಣೆಗೆ :-

بَدِيعُ السَّمَاوَاتِ وَالْأَرْض  ۖ وَإِذَا قَضَىٰ أَمْرًا فَإِنَّمَا يَقُولُ لَهُ كُنْ فَيَكُونُ

ಯಾವುದೇ ಪೂರ್ವ ಮಾದರಿಯೂ ಇಲ್ಲದೆ ಆಕಾಶಗಳನ್ನು ಮತ್ತು ಭೂಮಿಯನ್ನು ನಿರ್ಮಿಸಿದವನು. ಅವನೊಂದು ವಿಷಯವನ್ನು ತೀರ್ಮಾನಿಸಿದರೆ ಅದರೊಂದಿಗೆ ‘ಉಂಟಾಗು’ ಎಂದು ಮಾತ್ರ ಹೇಳುವನು; ತಕ್ಷಣ ಅದುಂಟಾಗುವುದು!

[ಅಲ್-ಬಕರಃ : 117]

👆 ಇಲ್ಲಿ ಅಲ್ಲಾಹನು ಆಕಾಶ ಭೂಮಿಯ ಸೃಷ್ಟಿ ಯ ಬಗ್ಗೆ ಹೇಳುವುದು "ಬದೀವು ಸ್ಸಮಾವಾತಿ ವಲ್ ಅರ್ಲ್" ಎಂದಾಗಿದೆ. ಈ ವಚನದಲ್ಲಿ ಮುಂದೆ ಎಂದೂ ಇಲ್ಲದ ಹೊಸದಾಗಿ ನಿರ್ಮಿಸಿದ ಆಕಾಶ, ಭೂಮಿ ಎಂದು ತಿಳಿಯಲು ಸಾಧ್ಯ. ಇದು ಭಾಷಾರ್ಥದಲ್ಲಿ ಬಿದ್ಅತ್ ಎನ್ನುವುದಕ್ಕೆ ಒಂದು  ಉದಾಹರಣೆಯಾಗಿದೆ. ಆ ವಾಕ್ಯದಲ್ಲಿಯೇ 'ಬದೀವು' (ಬಿದ್ಅತ್) ಎನ್ನುವ ಪದ ಇದೆ. ಎಂದರೆ ಬಿದ್ಅತ್ ಎನ್ನುವುದು ಹೊಸದಾಗಿ ಉಂಟಾಗುವುದು ಎಂದಾಗಿದೆ. ಈ ವಿಷಯವನ್ನು ಇಬ್ನು ಕತೀರ್ (ರ) ತನ್ನ ತಫ್ಸೀರ್ ನಲ್ಲಿ ಸೂಚಿಸಿದ್ದಾರೆ.

ಅದೇ ರೀತಿ ಯಾವುದೇ ಪೂರ್ವ ಮಾದರಿಯೂ ಇಲ್ಲದೆ ಹೊಸದಾಗಿ ಸೃಷ್ಟಿಸಿದ ಅಥವಾ ಹೊಸದಾಗಿ ನಿರ್ಮಾಣವಾಗುವ ಎಲ್ಲವೂ ಭಾಷಾರ್ಥದಲ್ಲಿರುವ ಬಿದ್ಅತ್ ಗೆ ಉದಾಹರಣೆಗಳಾಗಿವೆ.

ಆದರೆ ಧರ್ಮದ ವಿಷಯದಲ್ಲಿ ಪ್ರವಾದಿ ﷺ ರು ಕಲಿಸಿ ಕೊಟ್ಟದ್ದನ್ನು, ಮತ್ತು ವೈಜ್ಞಾನಿಕ ಕಾರಣಗಳಿಂದ ಸೇರಿದವುಗಳನ್ನು ಹೊರತುಪಡಿಸಿ ತಮ್ಮ ಇಷ್ಟಕ್ಕನುಸಾರ ಪುಣ್ಯ ಕರ್ಮವೆಂದು ಭಾವಿಸಿ ಇಸ್ಲಾಮಿಗೆ ಏನಾದರೂ ಸೇರಿಸುವುದು (ಧರ್ಮದಲ್ಲಿ ಹೊಸತಾಗಿ ಉಂಟುಮಾಡುವುದು) ಹರಾಮ್ ಆಗಿದೆ.

ಇಮಾಮ್ ಶಾಫಿಈ (ರ) ಹೇಳುತ್ತಾರೆ:👇

قال الإمام الشافعي- رحمه الله: المحدثات من الأمور ضربان أحدهما ما أحدث يخالف كتابا أو سنة أو أثرا أو إجماعا فهذه البدعة الضلالة، والثاني ما أحدث من الخير لا خلاف فيه لواحد من هذا، فهذه محدثة غير مذمومة. رواه البيهقي في (مناقب الشافعي) (ج1/469)، وذكره الحافظ ابن حجر في (فتح الباري): (13/267).

ಇಮಾಮ್ ಶಾಫಿಈ (ರ) ಹೇಳುತ್ತಾರೆ : ಹೊಸದಾಗಿ ಉಂಟಾಗುವ ಕಾರ್ಯಗಳನ್ನು ಎರಡಾಗಿ ವಿಭಜಿಸಬಹುದು. 1). ಹೊಸದಾಗಿ ನಿರ್ಮಿಸಿದ ಕಾರ್ಯಗಳು ಕುರ್'ಆನ್, ಸ್ವಹೀಹ್ ಹದೀಸ್, ಸ್ವಹಾಬಿಗಳ ಅಸರ್, ಇಜ್ಮಾಅ್ ಇವುಗಳಿಗೆ ವಿರುದ್ಧವಾದರೆ ಅದು ಪಥಭ್ರಷ್ಟತೆಯ ಬಿದ್ಅತ್ ಆಗಿದೆ.
2). ಮೇಲೆ ಹೇಳಿದ ಪ್ರಮಾಣಗಳಿಗೆ ವಿರುದ್ಧವಲ್ಲದ ರೀತಿಯಲ್ಲಿ ಹೊಸದಾಗಿ ಉಂಟಾದ ಒಳ್ಳೆಯ ಕಾರ್ಯಗಳು ಆಕ್ಷೇಪಾರ್ಹವಲ್ಲದ ಕಾರ್ಯವಾಗಿದೆ.

[ಬೈಹಕಿ:1/469, ಫತುಹುಲ್ ಬಾರಿ:13/267]

👆ಇಮಾಮ್ ಶಾಫಿಈ (ರ) ಮೇಲೆ ಹೇಳಿದ ಒಳ್ಳೆಯ ಕಾರ್ಯಗಳಿಗೆ ಒಂದು ಉದಾಹರಣೆ:- ಉಮರ್ (ರ)ರವರು ತರಾವೀಹ್ ನಮಾಝ್ ಗಾಗಿ ಜನರನ್ನು ಒಂದು ಇಮಾಮರ ಹಿಂದೆ ಒಂದುಗೂಡಿಸಿ ಜಮಾಅತ್ ಆಗಿ ನಿರ್ವಹಿಸಲು ಕಲ್ಪಿಸಿದರು.  ಇದು ಧರ್ಮದಲ್ಲಿ ಹೊಸತಾಗಿ ನಿರ್ಮಿಸಿದ ಬಿದ್ಅತ್ ಗೆ ಒಳಪಡುವುದಿಲ್ಲ ಎಂದು ಈ ಕೆಳಗಿನ ಲಿಂಕ್ ನ ಮೂಲಕ ತಿಳಿಯಬಹುದು.

https://islaminkannada.blogspot.in/2016/11/blog-post_8.html?m=1

ಇಬ್ನು ಹಜರ್ ಹೈತಮಿ ಹಳುತ್ತಾರೆ:

وقول عمر رضي الله عنه في التراويح نعمت البدعة هي أراد البدعة اللغوية وهو ما فعل على غير مثال كما قال تعالى: (قل ما كنت بدعاً من الرسل) ، وليست بدعة شرعا ، فإن البدعة الشرعية ضلالة كما قال صلى الله عليه وسلم قال: ومن قسمها من العلماء إلى حسن وغير حسن ، فإنما قسم البدعة اللغوية ومن قال كل بدعة ضلالة فمعناه البدعة الشرعية ، ألا ترى أن الصحابة رضي الله عنهم والتابعين لهم بإحسان أنكروا فرضية لغير الصلوات الخمس كالعيدين ، وإن لم يكن فيه نهي ، وكرهوا استلام الركنين الشاميين والصلاة عقيب السعي بين الصفا والمروة قياساً على الطواف ، وكذا ما تركه صلى الله عليه وسلم مع قيام المقتضي فيكون تركه سنة ، وفعله بدعة مذمومة   (الفتاوى الحديثية ٢٨١)

ತರಾವೀಹ್ ಜಮಾಅತ್ ನ ಕುರಿತು ಉಮರ್ (ರ) ರು ಹೇಳಿರುವ ಉತ್ತಮವಾದ ಬಿದ್ಅತ್ ನಲ್ಲಿ ಉದ್ದೇಶಿಸಿರುವುದು ಪೂರ್ವ ಮಾದರಿಯಿಲ್ಲದೆ ಕಾರ್ಯ ನಿರ್ವಹಿಸಿದ ಭಾಷಾರ್ಥದಲ್ಲಿರುವ ಬಿದ್ಅತನ್ನಾಗಿದೆ. ಅಲ್ಲಾಹನು ಹೇಳುತ್ತಾನೆ "(ಹೇಳಿರಿ: ‘ನಾನು ಸಂದೇಶವಾಹಕರಲ್ಲಿ ಹೊಸಬನಲ್ಲ)".... ಈ ಕಾರಣದಿಂದಾಗಿ ಉಮರ್ (ರ) ರವರು ಹೇಳಿರುವ ಬಿದ್ಅತ್ ಶರಈ ಆದ ಬಿದ್ಅತ್ ಅಲ್ಲ. ಕಾರಣ ಶರಈ ಆದ ಬಿದ್ಅತ್ ಗಳೆಲ್ಲವೂ ಪಥಭ್ರಷ್ಟತೆಯಾಗಿದೆ. ಇದನ್ನೇ ಆಗಿದೆ ಪ್ರವಾದಿ (ಸಅ)ರು ಹೊಸತಾಗಿ ನಿರ್ಮಿಸಿದವುಗಳು ಎಲ್ಲವೂ ಪಥಭ್ರಷ್ಟತೆಯಾಗಿದೆ ಎಂದಿರುವುದು. ಕೆಲವು ಉಲಮಾಗಳು ಒಳ್ಳೆಯ ಬಿದ್ಅತ್ ಮತ್ತು ಕೆಟ್ಟ ಬಿದ್ಅತ್ ಎಂದು ಎರಡಾಗಿ ವಿಂಗಡಿಸಿರುವುದು ಭಾಷಾರ್ಥದಲ್ಲಿರುವ ಬಿದ್ಅತನ್ನಾಗಿದೆ. ಇಲ್ಲಿ ಪಥಭ್ರಷ್ಟತೆಯಾದ ಬಿದ್ಅತ್ ಎಂದಿರುವುದರ ಅರ್ಥ ಧರ್ಮದಲ್ಲಿ ಹೊಸದಾಗಿ ನಿರ್ಮಿಸುವ ಆಚಾರಗಳನ್ನಾಗಿದೆ. ಎರಡು ಈದ್ ನಮಾಝ್ ನಂತೆ ಐದು ಹೊತ್ತಿನ ನಮಾಝ್ ಅಲ್ಲದ ಇತರ ನಮಾಝ್ ಗಳು ಕಡ್ಡಾಯವಾಗಿದೆ ಎನ್ನುವುದನ್ನು ಸ್ವಹಾಬಿಗಳು, ತಾಬಿವುಗಳು ನಿಷೇಧಿಸಿರುವುದನ್ನು ನೋಡುವುದಿಲ್ಲವೇ?... ಯಾಕೆಂದರೆ ಪ್ರವಾದಿ (ಸಅ)ರು ಈದ್ ನಮಾಝ್ ಕಡ್ಡಾಯವಲ್ಲ ಅಥವಾ ಕಡ್ಡಾಯಗೊಳಿಸಬೇಡಿ ಎಂದು ಯಾವತ್ತೂ ಹೇಳಿಲ್ಲ. ಅದೇ ರೀತಿ ತವಾಫ್ ನ ವೇಳೆ ರುಕುನುಲ್ ಯಮನ್ ಮತ್ತು ಹಜರುಲ್ ಅಸ್ವದ್ ಇರುವಂತಹ ಮೂಲೆಯನ್ನು ಮುಟ್ಟುವುದು ಸುನ್ನತ್ತಾಗಿದೆ. ಆದರೆ (ಕಅಬಾಲಯದ) ಬಾಕಿ ಇರುವ ಎರಡು ಮೂಲೆಯನ್ನು ಪ್ರವಾದಿ (ಸಅ)ರು ಮುಟ್ಟದ ಕಾರಣ ಅದನ್ನು ಮುಟ್ಟುವುದನ್ನು ಮತ್ತು ಸಫಾ ಮರ್ವಾದಲ್ಲಿ ಸಈ ಕಳೆದ ಕೂಡಲೇ ತವಾಫ್ ಗೆ ಖಿಯಾಸ್ ಮಾಡಿ ನಮಾಝ್ ಮಾಡುವುದನ್ನೂ ನಿರಾಕರಿಸಿದರು. ಈ ಪ್ರಕಾರ ಒಂದು ಕಾರ್ಯವು ಎಷ್ಟೇ ಆವಶ್ಯಕತೆ ಇದ್ದರೂ ಪ್ರವಾದಿ (ಸಅ)ರು ಉಪೇಕ್ಷಿಸಿದವುಗಳನ್ನು ಉಪೇಕ್ಷಿಸುವುದು ಸುನ್ನತ್ತಾಗಿದೆ. ಪ್ರವಾದಿ (ಸಅ)ರು ಉಪೇಕ್ಷಿಸಿದವುಗಳನ್ನು ಮಾಡುವುದು ಆಕ್ಷೇಪಾರ್ಹ ಬಿದ್ಅತ್ ಆಗಿದೆ.

(ಫತಾವಾ ಅಲ್ ಹದೀಸಿಯ್ಯ 281)

ಇಮಾಮ್ ಮಾಲಿಕ್ (ರ)ರವರು ಧರ್ಮದಲ್ಲಿ ಹೊಸದಾಗಿ ನಿರ್ಮಿಸುವ ವಿಷಯದಲ್ಲಿ ಹೇಳುವುದನ್ನು ಗಮನಿಸಿ...👇

 ” مَنِ ابْتَدَعَ فِي الْإِسْلَامِ بِدْعَةً يَرَاهَا حَسَنَةً، زَعَمَ أَنَّ مُحَمَّدًا صَلَّى اللَّهُ عَلَيْهِ وَسَلَّمَ خَانَ الرِّسَالَةَ، لِأَنَّ اللَّهَ يَقُولُ: {الْيَوْمَ أَكْمَلْتُ لَكُمْ دِينَكُمْ} [المائدة: 3]، فَمَا لَمْ يَكُنْ يَوْمَئِذٍ دِينًا، فَلَا يَكُونُ الْيَوْمَ دِينًا.
الاعتصام ـ للشاطبى : ج 1 / ص 49

 ಸದಾಚಾರವೆಂದು (ಒಳ್ಳೆಯದೆಂದು) ಪರಿಗಣಿಸಿ ಯಾರಾದರೂ ಇಸ್ಲಾಮಿನಲ್ಲಿ ಒಂದು ಹೊಸ ಆಚಾರವನ್ನು ನಿರ್ಮಿಸಿದರೆ ವಾಸ್ತವದಲ್ಲಿ ಅವನು ಪ್ರವಾದಿ ﷺ ರು ತನ್ನ ದೌತ್ಯದಲ್ಲಿ ಮೋಸ ಮಾಡಿದ್ದಾರೆಂದು ಆರೋಪಿಸುವವನಾಗಿದ್ದಾನೆ. ಯಾಕೆಂದರೆ ಅಲ್ಲಾಹನು ಹೇಳುತ್ತಾನೆ...

"ಇಂದು ನಾನು ನಿಮಗೆ ನಿಮ್ಮ ಧರ್ಮವನ್ನು ಪೂರ್ತೀಕರಿಸಿ ಕೊಟ್ಟಿರುವೆನು". [ಅಲ್-ಮಾ'ಇದಃ : 3]

ಆದ್ದರಿಂದ ಪ್ರವಾದಿ ﷺ ಕಾಲದಲ್ಲಿ ಧರ್ಮದಲ್ಲಿ ಪುಣ್ಯಕರ್ಮವಲ್ಲದ ಒಂದು ಆಚಾರವು ಇಂದು ಧರ್ಮದಲ್ಲಿ ಪುಣ್ಯಕರ್ಮವಾಗಲಾರದು.

[ಇಮಾಮ್ ಮಾಲಿಕ್- ಅಲ್ ಇಅತಿಸಾಮ್ 1/48]

ಆಯಿಶಾ (ರ)ರಿಂದ ವರದಿ:

عن عايشة رضي الله عنها قالت :
"رسول الله صلى الله عليه وسلم:من أحدث في أمرنا هاذا ما ليس فيه فهو رد "
(صحيح البخاري :٢٦٩٧ صحيح مسلم :١٧١٨ )

ಪ್ರವಾದಿ ﷺ ರು ಹೇಳಿದರು : "ನಮ್ಮ ಧರ್ಮದಲ್ಲಿ ಯಾರಾದರೂ ಏನನ್ನಾದರೂ ನೂತನವಾಗಿ ನಿರ್ಮಿಸಿದರೆ ಅದು ತಿರಸ್ಕೃತವಾಗಿದೆ ."

[ಸಹೀಹ್ ಬುಖಾರಿ:2697 ಸಾಹೀಹ್ ಮುಸ್ಲಿಂ 1718]

ಪ್ರವಾದಿ ﷺ ಹೇಳಿದರು :
"كُلَّ بِدْعَةٍ ضَلاَلَةٌ وَكُلَّ ضَلاَلَةٍ فِي النَّارِ"

ಎಲ್ಲಾ ಬಿದ್ಅತ್ ಗಳೂ ಪಥ ಭ್ರಷ್ಟತೆ ಯಾಗಿದೆ, ಎಲ್ಲಾ ಪಥ ಭ್ರಷ್ಟತೆಯೂ ನರಕಕ್ಕೆ ತಲುಪುತ್ತದೆ.

[ನಸಾಯಿ :1578]

ಉಮರ್ (ರ)ಹೇಳುತ್ತಾರೆ :

كل بدعة ضلالة وان رآها الناس حسنة "(سنن الدارمي )

ಎಲ್ಲಾ ನವೀನಾಚಾರಗಳೂ ಪಥಭ್ರಷ್ಟತೆಯಾಗಿದೆ, ಜನರು ಅವುಗಳನ್ನು ಎಷ್ಟು ಉತ್ತಮವಾಗಿ ಕಂಡರೂ ಕೂಡಾ.
[ಸುನೆನ್ ದಾರಿಮಿ]

ವಿದ್ವಾಂಸರಾದ ಇಬ್ನು ಹಜರ್ ಹೈತಮಿ (ರ) ರವರು ಹೇಳುತ್ತಾರೆ:

ಎಲ್ಲಾ ಬಿದ್ಅತ್ ಗಳೂ ಪಥ ಭ್ರಷ್ಟತೆ ಯಾಗಿದೆ, ಎಲ್ಲಾ ಪಥ ಭ್ರಷ್ಟತೆಯೂ ನರಕಕ್ಕೆ ತಲುಪುತ್ತದೆ. ಎಂಬ ಪ್ರವಾದಿ ﷺ ಮಾತಿನ ಅರ್ಥವೇನೆಂದರೆ ಹರಾಮ್ ಆದ ಬಿದ್ಅತ್ ಎಂದಾಗಿದೆ."

[ಫತಾವಲ್ ಹದೀಸಿಯ್ಯ 151]

👆ಇಲ್ಲಿ ಹರಾಮ್ ಆದ ಬಿದ್ಅತ್ ಎಂದರೆ ಧರ್ಮದಲ್ಲಿ ಹೊಸದಾಗಿ ಸೃಷ್ಟಿಸುವ ನವೀನಾಚಾರಗಳಾಗಿವೆ.

ಇಮಾಮ್ ಇಬ್ನು ಹಜರ್ ಅಸ್ಖಲಾನಿ ಹೇಳುತ್ತಾರೆ:

وقال ابن حجر : " والمراد بقوله : ( كل بدعة ضلالة ) ما أحدث ولا دليل له من الشرع بطريق خاص ولا عام " فتح الباري (13/254)

ಸಾಮಾನ್ಯವಾಗಿಯೂ, ಪ್ರತ್ಯೇಕವಾಗಿಯೂ ಯಾವುದೇ ಪುರಾವೆಗಳಿಲ್ಲದ ರೀತಿಯಲ್ಲಿ ಧರ್ಮದಲ್ಲಿ ಹೊಸತಾಗಿ ನಿರ್ಮಿಸಿದವುಗಳು (ಪಥಭ್ರಷ್ಟವಾದ ಬಿದ್ಅತ್)ಆಗಿದೆ.

[ಫತ್'ಹುಲ್ ಬಾರಿ 13/254]

ಶರಈ ಆದ ಬಿದ್ಅತ್ ನ ವಿರುದ್ಧ ಇಷ್ಟೆಲ್ಲಾ ಪ್ರಮಾಣಗಳಿದ್ದರೂ ಬಿದ್ಅತ್ ಏನೆಂದು ಅರಿಯದ ಕೆಲವು ಮುಸ್ಲಿಯಾರ್ ಗಳ ವಾದ ಈ ರೀತಿಯಾಗಿದೆ...👇
ಒಂದು ಕಾರ್ಯವು ಇಸ್ಲಾಮಿಗೆ ಪ್ರಮಾಣವಾಗಬೇಕಾದರೆ ಅದನ್ನು ಪ್ರವಾದಿ ﷺ ರು ಕಲಿಸಿ ಕೊಡಬೇಕಿಲ್ಲವಂತೆ, ಇದಕ್ಕೆ ಈ ಮುಸ್ಲಿಯಾರ್ ಗಳು ನೀಡುವ ಉದಾಹರಣೆ...
LCD, Computer, Monitor, mobile... ಇತ್ಯಾದಿಗಳನ್ನು ಪ್ರವಾದಿ ﷺ ರು ಉಪಯೋಗಿಸಿಲ್ಲ. ಆದ್ದರಿಂದ ಇದೆಲ್ಲವೂ ಸಲಫಿಗಳಿಗೆ ಇದು ಬಿದ್ಅತ್ ಅಲ್ಲವೇ? ಎಂದಾಗಿದೆ ಈ ಮುಸ್ಲಿಯಾರ್ ಗಳ ಪ್ರಶ್ನೆ.

ಮುಸ್ಲಿಯಾರುಗಳೇ ಗಮನಿಸಿ... ಈ ಇಡೀ ಪ್ರಪಂಚದ ಸೃಷ್ಟಿಯೇ ಬಿದ್ಅತ್ ಆಗಿದೆ. ಆನಂತರವಾಗಿದೆ LCD, Computer, Monitor, mobile... ಇತ್ಯಾದಿ ಇತ್ಯಾದಿ... ಇಂತಹ ಮುಸ್ಲಿಯಾರುಗಳು ಮೊದಲು ಬಿದ್ಅತ್ ಏನೆಂಬುದನ್ನು ಚೆನ್ನಾಗಿ ಅರಿಯಬೇಕಾಗಿದೆ.

ಪ್ರವಾದಿತ್ವದ 23 ವರ್ಷಗಳಲ್ಲಿ ಪ್ರವಾದಿ ﷺ ರು ಕಲಿಸಿಕೊಟ್ಟಿರುವುದು ಮಾತ್ರ ಇಸ್ಲಾಮ್ ಆಗಿದೆ ಎಂಬ ಪರಮಸತ್ಯವನ್ನು ಪ್ರತಿಯೊಬ್ಬ ಮುಸಲ್ಮಾನ ಅರಿತಿರಲೇಬೇಕು. ಪ್ರವಾದಿ ﷺ ರು ಕಲಿಸಿ ಕೊಡದಂತಹ ಯಾವುದಾದರೂ ಒಂದನ್ನು ದೀನ್ ಎಂದು ಆಚರಣೆ ಮಾಡಿದರೆ ಅದು ಎಷ್ಟೇ ದೊಡ್ಡ ಆಲಿಮಿನ ಅಭಿಪ್ರಾಯವಾದರೂ ಸರಿ, ಇಸ್ಲಾಮ್ ಆಗಿರಲು ಖಂಡಿತವಾಗಿಯೂ ಸಾಧ್ಯವಿಲ್ಲ. ಯಾಕೆಂದರೆ ಪ್ರವಾದಿ  (ಸಅ)ರ ಬಗ್ಗೆ ಅಲ್ಲಾಹನು ಪರಿಶುದ್ಧ ಕುರ್'ಆನ್ ನಲ್ಲಿ ಹೇಳುತ್ತಾನೆ:

وَمَا يَنْطِقُ عَنِ الْهَوَىٰ
ಅವರು ತಮ್ಮಿಷ್ಟದಂತೆ ಮಾತನಾಡುವುದಿಲ್ಲ.

 ... إِنْ هُوَ إِلَّا وَحْيٌ يُوحَىٰ
ಅದು ಅವರಿಗೆ ದಿವ್ಯಸಂದೇಶವಾಗಿ ನೀಡಲಾಗುವ ಒಂದು ಸಂದೇಶ ಮಾತ್ರವಾಗಿದೆ.

[ಅನ್ನಜ್ಮ್ : 3 - 4]

ನಮ್ಮ ಹೆಸರಲ್ಲಿ ಅವರು (ಪ್ರವಾದಿಯವರು) ಯಾವು ದಾದರೂ ಮಾತುಗಳನ್ನು ಸ್ವತಃ ರಚಿಸಿ ಹೇಳಿರುತ್ತಿದ್ದರೆ. ನಾವು ಅವರನ್ನು ಬಲಗೈಯಿಂದ ಹಿಡಿಯು ತ್ತಿದ್ದೆವು. ತರುವಾಯ ಅವರ ಕಂಠನಾಡಿಯನ್ನು ನಾವು ಕತ್ತರಿಸಿ ಹಾಕುತ್ತಿದ್ದೆವು. ಆಗ ನಿಮ್ಮ ಪೈಕಿ ಯಾರಿಗೂ ಅವರಿಂದ (ಶಿಕ್ಷೆಯನ್ನು) ತಡೆಯಲಾಗದು. ಖಂಡಿತವಾಗಿಯೂ ಇದು (ಕುರ್ಆನ್) ಭಯ ಭಕ್ತಿ ಪಾಲಿಸುವವರಿಗೆ ಇರುವ ಒಂದು ಉಪದೇಶವಾಗಿದೆ.

[ಅಲ್-ಹಾಕ್ಕಃ : 44 - 48]

ಪ್ರವಾದಿ (ಸಅ)ರ ಮಾತನ್ನು ಗಮನಿಸಿ.👇

ಪ್ರವಾದಿ ﷺ ರು ಹೇಳಿದರು : "ನಿಮ್ಮನ್ನು ಸ್ವರ್ಗಕ್ಕೆ ಹತ್ತಿರಗೊಳಿಸುವ ಯಾವುದೇ ಕಾರ್ಯವನ್ನು ನಿಮಗೆ ನಾನು ತಿಳಿಸದೆ ಬಿಟ್ಟಿಲ್ಲ. ನಿಮ್ಮನ್ನು ನರಕದಿಂದ ದೂರೀಕರಿಸುವ ಯಾವುದೇ ಕಾರ್ಯವನ್ನೂ ನಾನು ನಿಮಗೆ ಹೇಳಿ ಕೊಡದೆ ಹೋಗಿಲ್ಲ.” [ತ್ವಬ್ರಾನಿ]

ಪ್ರವಾದಿ ﷺ ರ  ರವರ ಈ ಮಾತಿಗೆ ಕವಡೆ ಕಾಸಿನ ಬೆಲೆಯೂ ನೀಡದ ಮುಸ್ಲಿಯಾರ್ ಗಳು ಪ್ರವಾದಿ ﷺ ಕಲಿಸಿ ಕೊಡದ ಪ್ರವಾದಿ ﷺ ರ ಜನ್ಮದಿನಾಚರಣೆ, ಸ್ವಲಾತ್ ಮಜ್ಲಿಸ್, ದಿಕ್ರ್ ಹಲ್ಕಾ, ಕುತುಬಿಯ್ಯತ್, ಉರೂಸ್, ಆಂಡ್ ನೇರ್ಚೆ, ರಾತೀಬು, ಕುತ್ತು ರಾತೀಬು, ದಫ್ ರಾತೀಬು,  ಮೊದಲಾದ ಅನಾಚಾರಗಳನ್ನು ಮುಗ್ಧ ಜನರಿಗೆ ಪರಿಚಯಿಸಿ ಅವರ ಜೇಬು ಖಾಲಿ ಮಾಡಲು ಹೊರಟಿದ್ದಾರೆ.

ಮುಸ್ಲಿಯಾರುಗಳೇ ಇನ್ನಾದರೂ ಎಚ್ಚೆತ್ತುಕೊಳ್ಳಿ. ದುಡ್ಡಿಗೋಸ್ಕರ ಜನರನ್ನು ವಂಚಿಸಿ ಪರಲೋಕದಲ್ಲಿ ಅಲ್ಲಾಹನ ಶಿಕ್ಷೆಗೆ ಗುರಿಯಾಗಬೇಡಿ.

ಪ್ರವಾದಿ ﷺ ರು ಪ್ರೀತಿಯ ಪುತ್ರಿ ಪಾತಿಮಾ (ರ) ರವರಲ್ಲಿ ಹೇಳಿದ ಮಾತನ್ನು ಗಮನಿಸಿ.👇

يا فاطمة ، أنقذي نفسك من النار ، فإني لا أملك لكم من الله شيئا

ಓ ಫಾತಿಮಾ ನಿನ್ನ ಶರೀರವನ್ನು ನೀನು ನರಕದಿಂದ ಸಂರಕ್ಷಿಸು, ಅಲ್ಲಾಹನಿಂದ ನಿನಗೆ ಯಾವುದನ್ನೂ ಕೊಡಲು ನನ್ನಿಂದ ಸಾಧ್ಯವಿಲ್ಲ.

ಪ್ರವಾದಿ ﷺ ರವರು ಸ್ವಂತ ಮಗಳನ್ನು ಕರೆದು ಈ ರೀತಿ ಹೇಳಬೇಕಾದರೆ ನಮ್ಮ ಅವಸ್ಥೆಯನ್ನು ಊಹಿಸಿ ನೋಡಿ.

ಅಲ್ಲಾಹನು ಎಲ್ಲಾ ತರದ ಶಿರ್ಕ್, ಬಿದ್ಅತ್, ಕುರಾಫಾತ್ ನಿಂದ ನಮ್ಮೆಲ್ಲರನ್ನೂ ರಕ್ಷಿಸಲಿ.

ಆಮೀನ್...

✍ Abu Muadh

9 Nov 2016

ತರಾವೀಹ್ ಜಮಾಅತ್ ಆಗಿ ನಿರ್ವಹಿಸುವುದು ಶರೀಅತ್ ನಲ್ಲಿ.



ಇಸ್ಲಾಮಿನ ಶರೀಅತ್ತಿನಲ್ಲಿ ಇಲ್ಲದ ಮೀಲಾದ್ ಆಚರಣೆ, ರಾತ್ರಿ ಬೆಳಕು ನಂದಿಸಿ ಮಾಡುವ ಕುತುಬಿಯ್ಯತ್, ಉರೂಸ್, ಆಂಡ್ ನೇರ್ಚೆ, ರಾತೀಬು, ಕುತ್ತು ರಾತೀಬು, ಮೊದಲಾದ ಅನಾಚಾರಗಳನ್ನು ಪ್ರೋತ್ಸಾಹಿಸಲು ಮುಸ್ಲಿಯಾರ್ ಗಳು ಕುರ್'ಆನಿನ ಆಯತ್ ಗಳನ್ನೂ, ಸ್ವಹಾಬಿಗಳ ಮಾತುಗಳನ್ನೂ, ಇಮಾಮರ ಅಭಿಪ್ರಾಯಗಳನ್ನೂ ದುರ್ವ್ಯಾಖ್ಯಾನ ಮಾಡುವುದನ್ನು ಕಾಣಬಹುದು.

ಮುಸ್ಲಿಯಾರುಗಳು ಮಾಡುವಂತಹ ಅನಾಚಾರಗಳನ್ನು ಜನಸಾಮಾನ್ಯರ ಮುಂದೆ ಎತ್ತಿ ಹೇಳುವಾಗ ಇವರು ಕೇಳುವ ಪ್ರಶ್ನೆ ತರಾವೀಹ್ ಜಮಾಅತ್ ಆಗಿ ನಿರ್ವಹಿಸುವುದು ಬಿದ್ಅತ್ ಅಲ್ಲವೇ ಎಂದಾಗಿದೆ.

ಇವರು ವಾದವನ್ನು ಸಮರ್ಥಿಸಲು ತರುವುದು ಅಲ್-ಬಕರ ಸೂರತ್ ನ 117 ನೇ ಆಯತ್ ಮತ್ತು ಇಬ್ನು ಕತೀರ್ ತಫ್ಸೀರಿನ ವಿವರಣೆಯಲ್ಲಿರುವ ಉಮರ್ (ರ)ರವರು ತರಾವೀಹ್ ಜಮಾಅತ್ ಆಗಿ ನಿರ್ವಹಿಸುವುದರ ಕುರಿತು ಹೇಳಿದಂತಹ ಮಾತನ್ನಾಗಿದೆ.

ತಫ್ಸೀರಿನ ವಿವರಣೆ ಈ ಕೆಳಗಿನಂತಿದೆ...

وقوله تعالى : ( بديع السماوات والأرض ) أي : خالقهما على غير مثال سبق ، قال مجاهد والسدي : وهو مقتضى اللغة ، ومنه يقال للشيء المحدث : بدعة . كما جاء في الصحيح لمسلم : " فإن كل محدثة بدعة [ وكل بدعة ضلالة ] " . والبدعة على قسمين : تارة تكون بدعة شرعية ، كقوله : فإن كل محدثة بدعة ، وكل بدعة ضلالة . وتارة تكون بدعة لغوية ، كقول أمير المؤمنين عمر بن الخطاب رضي الله عنه عن جمعه إياهم على صلاة التراويح واستمرارهم : نعمت البدعة هذه .

ಆಕಾಶ, ಭೂಮಿಯ ಸೃಷ್ಟಿಸಿರುವುದರ ಕುರಿತು ಹೇಳಿರುವುದು "ಬದೀವು ಸ್ಸಮಾವಾತಿ ವಲ್ ಅರ್ಲ್" ಯಾವುದೇ ಪೂರ್ವ ಮಾದರಿಯೂ ಇಲ್ಲದೇ ಆಕಾಶ ಭೂಮಿಯನ್ನು ಹೊಸದಾಗಿ ನಿರ್ಮಿಸಿದವನು ಎಂದಾಗಿದೆ. ಮುಜಾಹಿದ್ ಮತ್ತು ಸದೀಯ್ಯ್ (ರ)ರವರು ಹೇಳುತ್ತಾರೆ: ಇದು (ಬದೀವು) ಭಾಷೆಯಲ್ಲಿರುವ ಪದ ಪ್ರಯೋಗವಾಗಿದೆ. ಹೊಸದಾಗಿ ನಿರ್ಮಿಸುವುದೆಲ್ಲವೂ ಬಿದ್ಅತ್ ಗೆ ಸೇರಿದ್ದಾಗಿದೆ.

ಸ್ವಹೀಹ್ ಮುಸ್ಲಿಮ್ ನಲ್ಲಿ ಹೇಳಿದ ಹಾಗೆ ಹೊಸದಾಗಿ ನಿರ್ಮಿಸಿದವುಗಳು ಎಲ್ಲವೂ ಬಿದ್ಅತ್ ಆಗಿದೆ. ಎಲ್ಲಾ ಬಿದ್ಅತ್ ಗಳೂ ಕೆಟ್ಟದಾಗಿದೆ.

ಬಿದ್'ಅತ್ ಗಳಲ್ಲಿ ಎರಡು ವಿಧಗಳಿವೆ : ಕೆಲವೊಮ್ಮೆ ಬಿದ್ಅತ್ ಶರಈ ಆದ ಬಿದ್ಅತ್ ಆಗಿರುತ್ತದೆ. ಇದಾಗಿದೆ ಸ್ವಹೀಹ್ ಮುಸ್ಲಿಮ್ ನಲ್ಲಿ ಹೇಳಿರುವುದು. ಮತ್ತೊಂದು ಭಾಷಾರ್ಥದಲ್ಲಿರುವ ಬಿದ್ಅತ್. ಎಂದರೆ ಉಮರ್ (ರ) ತರಾವೀಹ್ ನಮಾಝ್ ಜಮಾಅತಿಗಾಗಿ ಜನರನ್ನು ಒಂದುಗೂಡಿಸಿರುವುದು ಭಾಷಾರ್ಥದ ಬಿದ್ಅತಿನಲ್ಲಿ ದೃಢಪಟ್ಟಿದೆ. ಇದಾಗಿದೆ ಉಮರ್ (ರ) "ಇದು ಒಳ್ಳೆಯಬಿದ್ಅತ್" ಎಂದು ಪದ ಪ್ರಯೋಗ ಮಾಡಿರುವುದು.

[ಇಬ್ನು ಕತೀರ್]


عن عبد الرحمن بن عبدٍ القاري : خرجت مع عمر بن الخطاب t ليلة في رمضان إلى المسجد فإذا الناس أوزاع متفرقون ، يصلي الرجل لنفسه ويصلي الرجل فيصلي بصلاته الرهط فقال عمر : إني أرى لو جمعت هؤلاء على قارئ واحد لكان أمثل ، ثم عزم فجمعهم على أبي ابن كعب ، ثم خرجت معه ليلة أخرى والناس يصلون بصلاة قارئهم قال عمر : نعم البدعة هذه ، والتي ينامون عنها أفضل من التي يقومون . يريد آخر الليل وكان الناس يقومون أوله

ಅಬ್ದುರ್ರಹ್ಮಾನ್ ಬಿನ್ ಅಬ್ದುಲ್ ಖಾರಿ (ರ) ಹೇಳುತ್ತಾರೆ: ನಾನು ರಮದಾನಿನ ಒಂದು ರಾತ್ರಿ ಉಮರ್ (ರ)ರೊಂದಿಗೆ ಮಸೀದಿಗೆ ಹೋದೆ. ಜನರು ಭಿನ್ನ ಭಿನ್ನರಾಗಿ ಹರಡಿಕೊಂಡಿದ್ದರು. ಕೆಲವರು ಒಂಟಿಯಾಗಿ ನಿಂತು ನಮಾಝ್ ನಿರ್ವಹಿಸುತ್ತಿದ್ದರೆ ಇನ್ನೂ ಕೆಲವರು ಇಮಾಮರ ಹಿಂದೆ ನಿಂತು ನಿರ್ವಹಿಸುತ್ತಿದ್ದರು. ಅದನ್ನು ಕಂಡು ಉಮರ್ (ರ) ಹೇಳಿದರು "ನನಗೆ ಅನಿಸುತ್ತೆ ನಾನು ಇವರನ್ನೆಲ್ಲಾ ಒಂದು ಖಾರಿಯ ಹಿಂದೆ ಒಗ್ಗೂಡಿಸಿದರೆ ಸಮಂಜಸವೆನಿಸಬಹುದು. ಅದೇ ಪ್ರಕಾರ ಅವರು ತನ್ನ ಇರಾದೆಯನ್ನು ಕಾರ್ಯ ರೂಪಕ್ಕೆ ತರಲು ಉಬೈದ್ ಬಿನ್ ಕಅಬ್ (ರ)ರನ್ನು ಇಮಾಮ್ ಆಗಿ ನಿಯುಕ್ತಿಗೊಳಿಸಿದರು. (ಅಬ್ದುರ್ರಹ್ಮಾನ್ ಹೇಳುತ್ತಾರೆ) ಇನ್ನೊಮ್ಮೆ ನಾನು ಉಮರ್ (ರ) ರೊಂದಿಗೆ ಮಸೀದಿಗೆ ಬಂದಾಗ ಜನರು ತಮ್ಮ ಇಮಾಮರ ಹಿಂದೆ ನಿಂತು ಜಮಾಅತ್ ಆಗಿ ನಮಾಝ್ ನಿರ್ವಹಿಸುತ್ತಿದ್ದರು. ಅದನ್ನು ಕಂಡು ಉಮರ್ (ರ) ಹೇಳಿದರು "ಈ ಹೊಸ ಕ್ರಮವು ಉತ್ತಮವಾಗಿದೆ ಮತ್ತು ಸಮಂಜಸವಾಗಿದೆ." ಇವರು ನಮಾಝ್ ನಿರ್ವಹಿಸುತ್ತಿರುವ ರಾತ್ರಿಯ ಈ ಅಂಶವು ಇವರು ಮಲಗಿ ನಿದ್ರಿಸುವ ಅಂಶಕ್ಕಿಂತ ಶ್ರೇಷ್ಠವಾಗಿದೆ. ಉಮರ್ (ರ)ರವರು ರಾತ್ರಿಯ ಅಂತಿಮ ಆಯಾಮದ ಶ್ರೇಷತೆಯನ್ನು ಉದ್ದೇಶಿಸಿ ಹೀಗೆ ಹೇಳಿದ್ದರು. ಏಕಂದರೆ ಜನರು ಈ ನಮಾಝನ್ನು ರಾತ್ರಿಯ ಮೊದಲ ಭಾಗದಲ್ಲಿ ನಿರ್ವಹಿಸುತ್ತಾರೆ.

☝ಇದಾಗಿದೆ ನಡೆದಿರುವ ವಿಷಯ. ಇದಕ್ಕೆ ಹದೀಸಿನ ಬೆಂಬಲವೂ ಇದೆ.


أن عائشة رضي الله عنها أخبرته أن رسول الله صلى الله عليه وسلم خرج ليلة من جوف الليل فصلى في المسجد وصلى رجال بصلاته فأصبح الناس فتحدثوا فاجتمع أكثر منهم فصلى فصلوا معه فأصبح الناس فتحدثوا فكثر أهل المسجد من الليلة الثالثة فخرج رسول الله صلى الله عليه وسلم فصلى فصلوا بصلاته فلما كانت الليلة الرابعة عجز المسجد عن أهله حتى خرج لصلاة الصبح فلما قضى الفجر أقبل على الناس فتشهد ثم قال أما بعد فإنه لم يخف علي مكانكم ولكني خشيت أن تفترض عليكم فتعجزوا عنها فتوفي رسول الله صلى الله عليه وسلم والأمر على ذلك

ಆಯಿಷಾ (ರ)ರಿಂದ ವರದಿ: "ಪ್ರವಾದಿ (ಸಅ)ರು ಒಂದು ರಾತ್ರಿ ಮಸೀದಿಯಲ್ಲಿ ನಮಾಝ್ ಮಾಡಿಸಿದರು. ಸ್ವಹಾಬಿಗಳು ಕೂಡ ಅವರೊಂದಿಗೆ ನಮಾಝ್ ನಿರ್ವಹಿಸಿದರು. ಎರಡನೇ ದಿನ ಪ್ರವಾದಿ (ಸಅ) ನಮಾಝ್ ಮಾಡಿಸುವಾಗ ಜನರ ಸಂಖ್ಯೆಯಲ್ಲಿ ಅಪಾರ ವೃದ್ಧಿಯಾಗಿತ್ತು. ಮೂರನೇ ಅಥವಾ ನಾಲ್ಕನೇ ದಿನ ಜನರು ದೊಡ್ಡ ಸಮೂಹವಾಗಿ ಬಂದು ನೆರೆದರು ಆದರೆ ಪ್ರವಾದಿ (ಸಅ) ನಮಾಝ್ ಮಾಡಿಸಲು ಮಸೀದಿಗೆ ಬರಲಿಲ್ಲ. ಬೆಳಗ್ಗೆ ಪ್ರವಾದಿ (ಸಅ)ರು ಹೇಳಿದರು "ನೀವು ಬಹಳ ದೊಡ್ಡ ಸಂಖ್ಯೆಯಲ್ಲಿ ಸೇರಿರುವುದನ್ನು ನಾನು ಕಂಡಿದ್ದೆ ಆದರೆ ಈ ನಮಾಝ್ ನಿಮ್ಮ ಮೇಲೆ ಕಡ್ಡಾಯಗೊಳ್ಳದಿರಲಿ ಎಂಬ ಅಂಶ ನನ್ನನ್ನು ಇಲ್ಲಿಗೆ ಬರುವುದರಿಂದ ತಡೆಯಿತು". (ಹಾಗೆ ಆದರೆ ನೀವು ಆ ಕುರಿತು ಅಸಡ್ಡೆ ತೋರಬಹುದು ಎಂಬ ಭಯ) ಪ್ರವಾದಿ (ಸಅ)ರವರ ನಿಧನದ ತನಕವೂ ಅದೇ ಅವಸ್ಥೆ ನೆಲೆಗೊಂಡಿತು."

ಸಹೀಹ್ ಮುಸ್ಲಿಮ್ ನಲ್ಲಿರುವ ಉಲ್ಲೇಖದಲ್ಲಿ ಪ್ರವಾದಿ (ಸಅ) ಮೂರು ರಾತ್ರಿ ನಮಾಝ್ ಮಾಡಿಸಿದರು ನಾಲ್ಕನೇ ರಾತ್ರಿ ಬರಲಿಲ್ಲ..... (ಈ ಉಲ್ಲೇಖದ ಕೊನೆಯಲ್ಲಿ ಪ್ರವಾದಿ (ಸಅ) ರ ಈ ಮಾತನ್ನು ನೀಡಲಾಗಿದೆ.)

ولكني خشيت أن تفترض عليكم فتعجزوا عنها فتوفي رسول الله صلى الله عليه وسلم والأمر على ذلك

"ಆದರೆ ಈ ನಮಾಝ್ ನಿಮ್ಮ ಮೇಲೆ ಕಡ್ಡಾಯಗೊಳಿಸಲ್ಪಡುತ್ತದೋ, ಎಂಬ ಆತಂಕ ನನ್ನನ್ನು ತಡೆಯಿತು ಬಳಿಕ ಪ್ರವಾದಿ (ಸಅ)ರು ನಿಧನರಾದರು. ಅದೇ ಕ್ರಮ ಮುಂದುವರಿಯಿತು."


ಇಲ್ಲಿ ನಾವು ತಿಳಿಯಬೇಕಾದ ವಿಷಯ : ತರಾವೀಹ್ ನಮಾಝ್ ಮಸೀದಿಯಲ್ಲಿ ಜಮಾಅತ್ ಆಗಿ ನಿರ್ವಹಿಸುವುದು ಅತ್ಯುತ್ತಮವಾಗಿದೆ ಎನ್ನುವುದರಲ್ಲಿ ಪ್ರಬಲ ಅಭಿಪ್ರಾಯವಿದೆ. ಏಕಂದರೆ ಪ್ರವಾದಿ (ಸಅ)ರ ಸುನ್ನತ್ ನಲ್ಲಿ ಇದಕ್ಕೆ ಆಧಾರವಿದೆ. ಪ್ರವಾದಿ (ಸಅ) ಇದನ್ನು ಮಸೀದಿಯಲ್ಲಿ ಜಮಾಅತ್ ಆಗಿ ನಿರ್ವಹಿಸಿದ್ದರು. ಇದು ತನ್ನ ಸಮೂಹಕ್ಕೆ ಕಡ್ಡಾಯವಾಗಿ ಪರಿಣಮಿಸದಿರಲಿ ಎಂಬ ಭೀತಿಯಿಂದ ಜಮಾಅತ್ ಆಗಿ ನಿರ್ವಹಿಸುವುದನ್ನು ತೊರೆದರು. ಆದರೆ ಪ್ರವಾದಿ (ಸಅ)ರ ಮರಣದ ನಂತರ ಈ ಭೀತಿಗೆ ಅವಕಾಶವಿರಲಿಲ್ಲ. ಮರಣಾನಂತರ ಪ್ರವಾದಿ (ಸಅ)ರಿಗೆ "ವಹೀ" (ದಿವ್ಯ ಸಂದೇಶ) ಕೊನೆಗೊಂಡಿತು. ಪ್ರವಾದಿ (ಸಅ)ರು ಭಯಪಟ್ಟಿರುವ ವಿಷಯದ ಆತಂಕವು ನಿವಾರಣೆಯಾಯಿತು. ಆ ಸಂದರ್ಭದಲ್ಲಿ ಉಮರ್ (ರ) ಜನರನ್ನು ಒಂದು ಇಮಾಮ್ ರ ಹಿಂದೆ ಜನರನ್ನು ಒಂದುಗೂಡಿಸಿ ಜಮಾಅತ್ ಆಗಿ ನಿರ್ವಹಿಸಲು ಆದೇಶಿಸಿದರು. ಇಲ್ಲಿ ಉಮರ್ (ರ)ರವರ ಖಿಲಾಫತ್ ನ ಅವಧಿಯಲ್ಲಿ ಪ್ರವಾದಿ (ಸಅ) ರು ಜಮಾಅತ್ ಆಗಿ ನಿರ್ವಹಿಸಿ ತೋರಿಸಿದಂತಹ ನಮಾಝನ್ನಾಗಿದೆ ಯಥಾ ರೀತಿಯಲ್ಲಿ ಜಮಾಅತ್ ಆಗಿ ನಿರ್ವಹಿಸಲು ಆದೇಶ ನೀಡಿರುವುದು. ಇದನ್ನೇ ಆಗಿದೆ ಉಮರ್ (ರ) ರವರು ಒಳ್ಳೆಯ ಬಿದ್ಅತ್ ಎಂದಿರುವುದು.

ಇಲ್ಲಿ ಉಮರ್ (ರ)ರವರು ಬಿದ್ಅತ್ ಎಂಬ ಪದ ಪ್ರಯೋಗಿಸಿರುವುದು ಒಂದು ಸತ್ಕಾರ್ಯವನ್ನು ಹೊಸದಾಗಿ ನಿರ್ಮಿಸಿದ ಹಿನ್ನೆಲೆಯಲ್ಲ. ಬದಲಾಗಿ, ಒಂದು ಸತ್ಕಾರ್ಯವನ್ನು ಜೀವಂತಗೊಳಿಸಿ ಅದನ್ನು ಕಾರ್ಯರೂಪದಲ್ಲಿ ಕಂಡು ತೃಪ್ತಿಗೊಂಡ ನೆಲೆಯಲ್ಲಾಗಿದೆ. ಬಿದ್ಅತನ್ನು 'ಹಸನ' ಮತ್ತು 'ಸಯ್ಯಿಅ' ಎಂದು ವರ್ಗೀಕರಿಸುವ ಉದ್ದೇಶ ಖಂಡಿತ ಉಮರ್ (ರ)ರಿಗೆ ಇರಲಿಲ್ಲ. ವಾಸ್ತವದಲ್ಲಿ ಶರೀಅತ್ತಿಗೆ ಸಂಬಂಧಿಸಿದ ಎಲ್ಲಾ ಹೊಸ ಕಾರ್ಯಗಳೂ ಪಥಭ್ರಷ್ಟತೆಯ ಕಡೆಗೆ ಒಯ್ಯುವ 'ಬಿದ್ಅತ್ ಗಳಾಗಿವೆ.

ಬಿದ್ಅತ್ ನ ವಿಷಯದಲ್ಲಿ ಉಮರ್ (ರ)ರವರು ಹೇಳಿದ ಹದೀಸ್ ಈ ಕೆಳಗಿನಂತಿದೆ...

ಉಮರ್ (ರ)ಹೇಳುತ್ತಾರೆ :

كل بدعة ضلالة وين رآها الناس حسنة "(سنن الدارمي )

ಎಲ್ಲಾ ನವೀನಾಚಾರಗಳೂ ಪಥಭ್ರಷ್ಟತೆಯಾಗಿದೆ, ಜನರು ಅವುಗಳನ್ನು ಎಷ್ಟು ಉತ್ತಮವಾಗಿ ಕಂಡರೂ ಕೂಡಾ.
(ಸುನೆನ್ ದಾರಿಮಿ)

ಬಿದ್ಅತ್ ಎಂದರೆಏನು? 👇
https://islaminkannada.blogspot.in/2016/12/blog-post.html?m=1

✍ Abu Muadh

5 Nov 2016

ಕುರ್'ಆನ್ ಮುಸ್ಲಿಮರ ಗ್ರಂಥವಲ್ಲ.

ಕುರ್'ಆನ್ ತೆರೆದ ಗ್ರಂಥವಾಗಿದೆ. ಕುರ್'ಆನ್ ಮುಸ್ಲಿಮರ ಗ್ರಂಥವಲ್ಲ. ಅದು ಪ್ರಪಂಚವನ್ನೂ, ಪ್ರಪಂಚದಲ್ಲಿರುವ ಏಕ ಕೋಶ ಜೀವಿ ಹಮೀಬಾದಿಂದ ಹಿಡಿದು ಬಹುಕೋಶ ಜೀವಿಯಾದ ನೀಲ ತಿಮಿಂಗಿಲದ ವರಗಿನ ಎಲ್ಲಾ ಜೀವ ರಾಶಿಗಳನ್ನು ಸೃಷ್ಟಿಸಿ ಪರಿಪಾಲಿಸುವವನೂ, ಇಡೀ ಜಗತ್ತಿನ ನಿಯಂತ್ರಕನೂ, ಎಲ್ಲಾ ರಾಜರಿಗೂ ರಾಜನೂ, ಜಗದೀಶ್ವರನೂ, ಸರ್ವ ಶಕ್ತನೂ ಆದ ಸಾಕ್ಷಾತ್ ದೇವ ಅಲ್ಲಾಹನು ಮನುಷ್ಯರಿಗಾಗಿ ಅವತೀರ್ಣಗೊಳಿಸಿದ ಅಲ್ಲಾಹನ ಗ್ರಂಥ.

ಕುರ್'ಆನ್ ಹೇಳುತ್ತಿದೆ ನೋಡಿ...👇

ذَٰلِكَ الْكِتَابُ لَا رَيْبَ ۛ فِيهِ ۛ هُدًى لِلْمُتَّقِينَ

ಇದು ಗ್ರಂಥ. ಇದರಲ್ಲಿ ಸಂದೇಹವೇ ಇಲ್ಲ. ಭಯಭಕ್ತಿ ಪಾಲಿಸುವವರಿಗೆ ಇದು ಸನ್ಮಾರ್ಗವನ್ನು ತೋರಿಸಿಕೊಡುತ್ತದೆ.

[ಕುರ್'ಆನ್: 2 : 2]

وَقُلِ الْحَقُّ مِنْ رَبِّكُمْ ۖ فَمَنْ شَاءَ فَلْيُؤْمِنْ وَمَنْ شَاءَ فَلْيَكْفُرْ ۚ

ಹೇಳಿರಿ: ‘ಸತ್ಯವು ನಿಮ್ಮ ಪ್ರಭುವಿನ ವತಿಯಿಂದಾ ಗಿದೆ’. ಆದ್ದರಿಂದ (ವಿಶ್ವಾಸವಿಡಲು) ಇಚ್ಛೆಯುಳ್ಳವರು ವಿಶ್ವಾಸವಿಡಲಿ ಮತ್ತು (ಅವಿಶ್ವಾಸವಿಡಲು) ಇಚ್ಛೆಯುಳ್ಳವರು ಅವಿಶ್ವಾಸವಿಡಲಿ.

[ಕುರ್'ಆನ್: 18 : 29]

لَا إِكْرَاهَ فِي الدِّينِ ۖ قَدْ تَبَيَّنَ الرُّشْدُ مِنَ الْغَيِّ ۚ

ಧರ್ಮದ ವಿಷಯದಲ್ಲಿ ಯಾವುದೇ ಬಲಾತ್ಕಾರ ವಿಲ್ಲ. ಸನ್ಮಾರ್ಗವು ದುರ್ಮಾರ್ಗದಿಂದ ಸ್ಪಷ್ಟವಾಗಿ ಬೇರ್ಪಟ್ಟು ನಿಂತಿದೆ.

[ಕುರ್'ಆನ್ : 2 : 256]

30 Oct 2016

ಇಸ್ಲಾಮ್: ಒಂದು ಕಿರು ಪರಿಚಯ...



ಇಸ್ಲಾಮ್ ಎಂಬ ಅರಬಿ ಪದದ ಅರ್ಥ ಶಾಂತಿ, ಸಮರ್ಪಣೆ ಎಂದಾಗಿದೆ. ಒಬ್ಬ ವ್ಯಕ್ತಿ ತನ್ನನ್ನು ತಾನೇ ಸೃಷ್ಟಿಕರ್ತನಿಗೆ ಸಮರ್ಪಿಸುವ ಮೂಲಕ ಪಡೆಯುವ ಮನಃಶಾಂತಿಯಾಗಿದೆ ಇಸ್ಲಾಮ್. ಹೆಸರೇ ಹೇಳುವಂತೆ ಇಸ್ಲಾಮ್ ಶಾಂತಿಯ ಧರ್ಮವಾಗಿದೆ. ಹೆಚ್ಚಿನವರೂ ಅಪಾರ್ಥ ಮಾಡಿಕೊಂಡಿರುವಂತೆ ಇಸ್ಲಾಮ್ ಎಂದರೆ ಪ್ರವಾದಿ ಮುಹಮ್ಮದ್‌(ಸ)ರವರು ಹುಟ್ಟುಹಾಕಿದ ಹೊಸ ಧರ್ಮವಲ್ಲ. ಭೂಮಿಯ ಮೇಲೆ ಮೊಟ್ಟ ಮೊದಲು ಕಾಲೂರಿದ ಆದಿ ಮನುಷ್ಯ ಆದಮರಿಂದ ತೊಡಗಿ ಕೊನೆಯ ಪ್ರವಾದಿ ಮುಹಮ್ಮದ್‌(ಸ)ರವರ ತನಕ ಎಲ್ಲ ಪ್ರವಾದಿಗಳೂ ಬೋಧಿಸಿದ ಏಕೈಕ ದೈವಿಕ ಧರ್ಮವಾಗಿದೆ ಇಸ್ಲಾಮ್.


ಇಸ್ಲಾಮಿನ ಮೂಲಭೂತ ಆಧಾರ ಗ್ರಂಥಗಳು:

ಕುರ್‌ಆನ್ ಇಸ್ಲಾಮ್ ಧರ್ಮದ ಮೂಲಭೂತ ಆಧಾರ ಗ್ರಂಥವಾಗಿದೆ. ಸೃಷ್ಟಿಕರ್ತನಾದ ಅಲ್ಲಾಹು ಮುಹಮ್ಮದ್‌(ಸ)ರವರ ಮೇಲೆ ಜಿಬ್ರೀಲ್ (gabriel) ಎಂಬ ದೇವದೂತರ ಮೂಲಕ ಅವತೀರ್ಣಗೊಳಿಸಿದ ಅವನ ವಚನಗಳಾಗಿವೆ ಕುರ್‌ಆನ್. ಕುರ್‌ಆನ್ ಇಸ್ಲಾಮ್ ಧರ್ಮದ ಮೂಲಭೂತ ಪ್ರಮಾಣ ಗ್ರಂಥವಾಗಿದೆ. ಇದರ ನಂತರ ಪ್ರವಾದಿ ಮುಹಮ್ಮದ್‌(ಸ)ರವರ ವಚನಗಳು, ಪ್ರವೃತ್ತಿಗಳು ಮತ್ತು ಅಂಗೀಕಾರಗಳನ್ನೊಳಗೊಂಡಿರುವ ಸುನ್ನತ್ ಇಸ್ಲಾಮಿನ ಎರಡನೇ ಪ್ರಮಾಣ ಗ್ರಂಥವಾಗಿದೆ. ಇವೆರಡರ ಹೊರತು ಇಸ್ಲಾಮ್ ಧರ್ಮದಲ್ಲಿ ಮೂಲಭೂತವಾಗಿ ಆಶ್ರಯಿಸಬಹುದಾದ ಬೇರೆ ಪ್ರಮಾಣ ಗ್ರಂಥಗಳಿಲ್ಲ. ಒಬ್ಬ ವ್ಯಕ್ತಿಗೆ ಅವನ ಜನನದಿಂದ ತೊಡಗಿ ಮರಣದ ತನಕ ಪ್ರಾಯೋಗಿಕ ತತ್ವಗಳ ಆಧಾರದ ಮೇಲೆ ದೈವಿಕ ಮಾರ್ಗದರ್ಶನ ನೀಡುವ ಗ್ರಂಥಗಳಾಗಿವೆ ಕುರ್‌ಆನ್ ಮತ್ತು ಸುನ್ನತ್.


ಮುಹಮ್ಮದ್(ಸ):

ಮುಹಮ್ಮದ್‌(ಸ)ರವರು ಅಲ್ಲಾಹನ ದಾಸರೂ ಅವನ ಸಂದೇಶವಾಹಕರೂ ಆಗಿದ್ದಾರೆ. ಅವರು ಇಸ್ಲಾಮ್ ಧರ್ಮದ ಕಟ್ಟಕಡೆಯ ಪ್ರವಾದಿಯಾಗಿದ್ದಾರೆಯೇ ಹೊರತು ಏಕೈಕ ಪ್ರವಾದಿಯಲ್ಲ. ಮುಹಮ್ಮದ್‌(ಸ)ರವರಿಗಿಂತ ಮುಂಚೆ ನಿಯೋಗಿಸಲಾದ ಅಬ್ರಹಾಮ್, ಮೋಶೆ, ಯೇಸು ಮೊದಲಾದ ಸಹಸ್ರಾರು ಸಂಖ್ಯೆಯ ಪ್ರವಾದಿಗಳ ಪೈಕಿ ಮುಹಮ್ಮದ್‌(ಸ)ರವರೂ ಒಬ್ಬರಾಗಿದ್ದಾರೆ. ಮುಹಮ್ಮದ್‌(ಸ)ರವರನ್ನು ಪ್ರವಾದಿಯೆಂದು ಒಪ್ಪಿಕೊಳ್ಳುವಂತೆಯೇ ಅಬ್ರಹಾಮ್, ಮೋಶೆ, ಯೇಸು ಮೊದಲಾದವರನ್ನೂ ಪ್ರವಾದಿಗಳೆಂದು ಒಪ್ಪಿಕೊಳ್ಳುವುದು ಮತ್ತು ಅವರನ್ನು ಪ್ರೀತಿಸುವುದು ಮುಸ್ಲಿಮನ ಮೇಲೆ ಕಡ್ಡಾಯವಾಗಿದೆ. ಮುಹಮ್ಮದ್‌(ಸ)ರವರನ್ನು ಪ್ರವಾದಿಯೆಂದು ಅಂಗೀಕರಿಸುವ ವ್ಯಕ್ತಿ ಮೋಶೆ ಅಥವಾ ಯೇಸುವನ್ನು ಪ್ರವಾದಿಯೆಂದು ಅಂಗೀಕರಿಸದಿದ್ದರೆ ಅವನು ಮುಸ್ಲಿಮನಾಗುವುದು ಸಾಧ್ಯವಿಲ್ಲ.


ಇಸ್ಲಾಮ್ ಧರ್ಮದ ಆಧಾರ ಸ್ಥಂಭಗಳು:

ಇಸ್ಲಾಮ್ ಧರ್ಮಕ್ಕೆ ಐದು ಆಧಾರ ಸ್ಥಂಭಗಳಿವೆ. ಅಲ್ಲಾಹನ ಹೊರತು ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್‌(ಸ)ರವರು ಅವನ ಸಂದೇಶವಾಹಕರಾಗಿದ್ದಾರೆ ಎಂಬ ಸಾಕ್ಷ್ಯವಚನ ಇಸ್ಲಾಮ್ ಧರ್ಮದ ಮೊಟ್ಟಮೊದಲ ಮತ್ತು ಅತಿಪ್ರಮುಖ ಆಧಾರ ಸ್ಥಂಭವಾಗಿದೆ. ಈ ಆಧಾರ ಸ್ಥಂಭದ ಮೇಲೆ ಅವಲಂಬಿತವಾಗಿರುವ ಇತರ ನಾಲ್ಕು ಆಧಾರ ಸ್ಥಂಭಗಳಾಗಿವೆ ದಿನನಿತ್ಯ ನಿಗದಿತ ಐದು ವೇಳೆಗಳಲ್ಲಿ ನಮಾಝ್ ನಿರ್ವಹಿಸುವುದು, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು, ಕಡ್ಡಾಯ ದಾನ (ಝಕಾತ್) ನೀಡುವ ಅರ್ಹತೆಯಿರುವವರು ಅದನ್ನು ನೀಡುವುದು ಮತ್ತು ಮಕ್ಕಕ್ಕೆ ತೆರಳಿ ಹಜ್ ಯಾತ್ರೆ ನಿರ್ವಹಿಸಲು ದೈಹಿಕ ಮತ್ತು ಆರ್ಥಿಕವಾಗಿ ಸಾಧ್ಯವಿರುವವರು ಅದನ್ನು ನಿರ್ವಹಿಸುವುದು. ಇಸ್ಲಾಮ್ ಧರ್ಮದ ಈ ಐದು ಆಧಾರ ಸ್ಥಂಭಗಳನ್ನೂ ತನ್ನ ಜೀವನದಲ್ಲಿ ಪಾಲಿಸಬೇಕಾದುದು ಮುಸ್ಲಿಮನ ಮೇಲೆ ಕಡ್ಡಾಯವಾಗಿದೆ. ಇವುಗಳ ಪೈಕಿ ಯಾವುದಾದರೂ ಒಂದು ಸ್ಥಂಭವನ್ನು ತೊರೆದರೂ ಅವನ ಇಸ್ಲಾಮ್ ಸ್ವೀಕಾರಾರ್ಹವಲ್ಲ ಮತ್ತು ಅವನು ಮುಸ್ಲಿಮನಾಗಿ ಉಳಿಯುವುದಿಲ್ಲ.


ಇಸ್ಲಾಮೀ ವಿಶ್ವಾಸ (ಈಮಾನ್)ದ ಆಧಾರ ಸ್ಥಂಭಗಳು:

ಇಸ್ಲಾಮೀ ವಿಶ್ವಾಸಕ್ಕೆ ಆರು ಆಧಾರ ಸ್ಥಂಭಗಳಿವೆ. ಅಲ್ಲಾಹನಲ್ಲಿ ವಿಶ್ವಾಸವಿಡುವುದು, ಅವನ ಮಲಕ್ (angel)ಗಳಲ್ಲಿ ವಿಶ್ವಾಸವಿಡುವುದು, ಅವನ ಗ್ರಂಥಗಳಲ್ಲಿ ವಿಶ್ವಾಸವಿಡುವುದು, ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಡುವುದು, ಅಂತ್ಯದಿನದಲ್ಲಿ ವಿಶ್ವಾಸವಿಡುವುದು ಮತ್ತು ವಿಧಿಯಲ್ಲಿ -ಅದರ ಒಳಿತು ಮತ್ತು ಕೆಡುಕುಗಳಲ್ಲಿ- ವಿಶ್ವಾಸವಿಡುವುದು. ಈ ಮೇಲಿನ ಆರು ಸ್ಥಂಭಗಳಲ್ಲೂ ವಿಶ್ವಾಸವಿಡುವುದು ಮುಸ್ಲಿಮನ ಮೇಲೆ ಕಡ್ಡಾಯವಾಗಿದೆ. ಇವುಗಳ ಪೈಕಿ ಕೇವಲ ಒಂದರ ಮೇಲಿನ ವಿಶ್ವಾಸವನ್ನು ತೊರೆದರೂ ಅವನು ಮುಸ್ಲಿಮನಾಗಿ ಉಳಿಯುವುದಿಲ್ಲ.


ಇಸ್ಲಾಮ್ ಧರ್ಮದಲ್ಲಿ ಬಲಾತ್ಕಾರವಿಲ್ಲ:

ತನ್ನ ನಂಬಿಕೆಯನ್ನು ಜನರ ಮೇಲೆ ಬಲಾತ್ಕಾರವಾಗಿ ಹೇರಬೇಕೆಂದು ಇಸ್ಲಾಮ್ ಬೋಧಿಸುವುದಿಲ್ಲ. ವಸ್ತುತಃ ಪ್ರತಿಯೊಬ್ಬ ವ್ಯಕ್ತಿಗೂ ಅವನಿಗೆ ಇಷ್ಟವಾದ ಧರ್ಮವನ್ನು ಆರಿಸುವ ಸ್ವಾತಂತ್ರ್ಯವನ್ನು ಇಸ್ಲಾಮ್ ನೀಡುತ್ತದೆ. ಇಸ್ಲಾಮೀ ಚರಿತ್ರೆಯಲ್ಲಿ ನಡೆದ ಯಾವುದೇ ಯುದ್ಧವೂ ಜನರ ವಿಶ್ವಾಸ ಸ್ವಾತಂತ್ರ್ಯವನ್ನು ಹರಣ ಮಾಡುವುದಕ್ಕಾಗಿರಲಿಲ್ಲ. ಬದಲಾಗಿ ಇಸ್ಲಾಮ್ ಧರ್ಮವನ್ನು ಬಾಹ್ಯ ಆಕ್ರಮಣಗಳಿಂದ ಸಂರಕ್ಷಿಸುವ ಸಲುವಾಗಿತ್ತು. ಘಝ್ನಿ, ಘೋರಿ ಮೊದಲಾದ ದೊರೆಗಳು ನಡೆಸಿದ ಆಕ್ರಮಣಗಳು ಅವರ ಸಾಮ್ರಾಜ್ಯ ವಿಸ್ತರಣೆಯ ಸಲುವಾಗಿತ್ತೇ ಹೊರತು ಇಸ್ಲಾಮ್ ಧರ್ಮಕ್ಕಾಗಿರಲಿಲ್ಲ. ಹಾಗೆಯೇ ಇಂದು ಕೆಲವು ಜನರು ಇಸ್ಲಾಮಿನ ಹೆಸರಲ್ಲಿ ನಡೆಸುವ ಭಯೋತ್ಪಾದನಾ ಕೃತ್ಯಗಳು ಅವರ ಸ್ವಹಿತಾಸಕ್ತಿಗಳ ಸಂರಕ್ಷಣೆಗಾಗಿದೆಯೇ ಹೊರತು ಇಸ್ಲಾಮಿನ ಏಳಿಗೆಗಲ್ಲ. ಯಾಕೆಂದರೆ ಇಸ್ಲಾಮ್ ಹಿಂಸೆಯನ್ನು ಪ್ರಚೋದಿಸುವುದಿಲ್ಲ. ನಾಲ್ಕು ಕಾಲುಗಳ ಮೇಲೆ ಚಲಿಸುವ ಮೂಕ ಪ್ರಾಣಿಗಳ ಮೇಲೂ ದಯೆ ತೋರಿಸಬೇಕೆಂದು ಹೇಳಿದ ಇಸ್ಲಾಮ್ ವಿಶ್ವಾಸದ ಹೆಸರಲ್ಲಿ ಜನರ ಮಾರಣ ಹೋಮ ಮಾಡುವುದನ್ನು ಖಂಡಿತ ಸಹಿಸುವುದಿಲ್ಲ. ಆದ್ದರಿಂದ ಮುಸ್ಲಿಮರಾದ ಕೆಲವರು ತಮ್ಮ ಹಿತಕ್ಕಾಗಿ ಮಾಡುವ ಯಾವುದೇ ಕಾರ್ಯವನ್ನು ಇಸ್ಲಾಮಿನ ಮೇಲೆ ಎತ್ತಿಕಟ್ಟಿ ಶಾಂತಿಯ ಧ್ವಜವಾಹಕ ಧರ್ಮವಾದ ಇಸ್ಲಾಮನ್ನು ಅವಹೇಳನ ಮಾಡುವುದು ಖಂಡಿತ ಸಲ್ಲದು.


ವಿಶ್ವಾಸ ಮತ್ತು ಕರ್ಮ:

ಇಸ್ಲಾಮಿನಲ್ಲಿ ವಿಶ್ವಾಸ ಮತ್ತು ಕರ್ಮವು ಅವಿನಾಭಾವ ಸಂಬಂಧವನ್ನು ಹೊಂದಿವೆ. ಒಂದು ಮತ್ತೊಂದಕ್ಕೆ ಪೂರಕವಾಗಿರಬೇಕಾಗಿದೆ. ಅಂದರೆ ವಿಶ್ವಾಸವಿಲ್ಲದ ಕರ್ಮ ಅಥವಾ ಕರ್ಮವಿಲ್ಲದ ವಿಶ್ವಾಸ ಇಸ್ಲಾಮಿನಲ್ಲಿ ಸ್ವೀಕೃತವಲ್ಲ.  ಇಸ್ಲಾಮೀ ವಿಶ್ವಾಸವನ್ನು ಹೊಂದಿರುವ ವ್ಯಕ್ತಿ ಅಲ್ಲಾಹನ ಎಲ್ಲ ಆದೇಶಗಳನ್ನೂ ತನ್ನ ಸಾಮರ್ಥ್ಯಕ್ಕೆ ಅನುಸಾರವಾಗಿ ಪಾಲಿಸಬೇಕಾಗಿದೆ ಮತ್ತು ಅಲ್ಲಾಹನ ಎಲ್ಲ ನಿಷೇಧಗಳಿಂದಲೂ ತನ್ನ ಸಾಮರ್ಥ್ಯಕ್ಕೆ ಅನುಸಾರವಾಗಿ ದೂರಸರಿಯಬೇಕಾಗಿದೆ. ಅಲ್ಲಾಹು ಮನುಷ್ಯರ ವಿಚಾರಣೆ ಮಾಡುವುದು ಅವರ ವಿಶ್ವಾಸ ಮತ್ತು ಕರ್ಮಗಳ ಆಧಾರದಲ್ಲಾಗಿದೆ. ನಿಷ್ಕಳಂಕವಾದ ವಿಶ್ವಾಸವನ್ನು ಹೊಂದಿದರೆ ಮಾತ್ರ ಅವನ ಕರ್ಮಗಳು ಸ್ವೀಕೃತವಾಗುತ್ತವೆ. ತೋರಿಕೆಗಾಗಿ ಮಾಡುವ ಯಾವ ಕರ್ಮಗಳೂ ಇಸ್ಲಾಮಿನಲ್ಲಿ ಸ್ವೀಕೃತವಲ್ಲ.


ವಿಶ್ವಭಾತೃತ್ವ:

ಇಸ್ಲಾಮ್ ವಿಶ್ವಭಾತೃತ್ವವನ್ನು ಪ್ರೋತ್ಸಾಹಿಸುತ್ತದೆ. ಜಗತ್ತಿನ ಒಂದು ಮೂಲೆಯಲ್ಲಿರುವ ಒಬ್ಬ ಮುಸ್ಲಿಮ್ ಜಗತ್ತಿನ ಇನ್ನೊಂದು ಮೂಲೆಯಲ್ಲಿರುವ ಇನ್ನೊಬ್ಬ ಮುಸ್ಲಿಮನ ಸಹೋದರನಾಗಿದ್ದಾನೆ. ಜಾತಿ, ಕುಲ, ವರ್ಣ, ದೇಶ, ಭಾಷೆ ಮೊದಲಾದ ಬೇಧಗಳು ಇಸ್ಲಾಮ್ ಧರ್ಮದಲ್ಲಿಲ್ಲ. ಕಷ್ಟದಲ್ಲಿರುವ ಯಾವುದೇ ವ್ಯಕ್ತಿಗೂ ಅವನ ಧರ್ಮ, ವರ್ಣ, ಭಾಷೆ, ದೇಶವನ್ನು ನೋಡದೆ ನೆರವೀಯಬೇಕೆಂದು ಇಸ್ಲಾಮ್ ಬೋಧಿಸುತ್ತದೆ. ಮಾನವೀಯ ನೆಲೆಯಲ್ಲಿ ತನ್ನ ಶತ್ರುವಿಗೂ ಉಪಕಾರ ಮಾಡಬೇಕೆಂದು ಇಸ್ಲಾಮ್ ಹೇಳುತ್ತದೆ.


ಸಮಾನತೆ:

ಇಸ್ಲಾಮ್ ಸಮಾನತೆಯನ್ನು ಬೋಧಿಸುವ ಧರ್ಮವಾಗಿದೆ. ಉಚ್ಛ ನೀಚವೆಂಬ ಬೇಧ ಇಸ್ಲಾಮಿನಲ್ಲಿಲ್ಲ. ಬಡವ ಬಲ್ಲಿದ, ಕರಿಯ ಬಿಳಿಯ ಎಂಬ ಬೇಧವೂ ಇಲ್ಲ. ಮನುಷ್ಯರೆಲ್ಲರೂ ಆದಮನ ಮಕ್ಕಳು ಎಂದು ಇಸ್ಲಾಮ್ ಹೇಳುತ್ತದೆ. ಆರಾಧನಾ ಕರ್ಮಗಳಲ್ಲಾಗಲಿ, ವ್ಯಾವಹಾರಿಕ ರಂಗಗಳಲ್ಲಾಗಲಿ ಅಥವಾ ಶಿಕ್ಷಾನಿಯಮಗಳಲ್ಲಾಗಲಿ ಇಸ್ಲಾಮ್ ಯಾರ ಮಧ್ಯೆಯೂ ಬೇಧ ಕಲ್ಪಿಸುವುದಿಲ್ಲ. ಮನುಷ್ಯನಿಗಿರುವ ದೇವಭಕ್ತಿಗೆ ಅನುಗುಣವಾಗಿ ಇಸ್ಲಾಮ್ ಅವನಿಗೆ ಶ್ರೇಷ್ಠತೆಯನ್ನು ಕಲ್ಪಿಸುತ್ತದೆ. ಇಸ್ಲಾಮಿನಲ್ಲಿ ಗಂಡು ಮತ್ತು ಹೆಣ್ಣಿನ ಮಧ್ಯೆಯೂ ಸಮಾನತೆಯಿದೆ. ಆದರೆ ಹೆಣ್ಣಿನ ದೈಹಿಕ ಪ್ರಕೃತಿಗೆ ಅನುಗುಣವಾಗಿ ಇಸ್ಲಾಮ್ ಆಕೆಗೆ ಕೆಲವು ನಿರ್ಬಂಧಗಳನ್ನು ಹೇರಿದೆ. ಆದರೆ ಹೆಣ್ಣಿನ ಮೇಲೆ ಹೇರುವ ಪುರುಷ ದಬ್ಬಾಳಿಕೆಯನ್ನು ಇಸ್ಲಾಮ್ ವಿರೋಧಿಸುತ್ತದೆ.


ಸಮಾನ ನ್ಯಾಯ:

ಇಸ್ಲಾಮ್ ಸಮಾನ ನ್ಯಾಯವನ್ನು ಎತ್ತಿಹಿಡಿಯುತ್ತದೆ. ಒಬ್ಬ ವ್ಯಕ್ತಿ ಬಡವನಾಗಿರುವ ಕಾರಣದಿಂದಲೋ ಅಥವಾ ಅವನು ಕರಿಯನಾಗಿರುವ ಕಾರಣದಿಂದಲೋ ಅವನಿಗೆ ನ್ಯಾಯ ನಿರಾಕರಿಸುವುದನ್ನು ಇಸ್ಲಾಮ್ ಬಲವಾಗಿ ವಿರೋಧಿಸುತ್ತದೆ. ನ್ಯಾಯ ಪಾಲನೆಯನ್ನು ಕಠಿಣವಾಗಿ ಬೋಧಿಸುವ ಧರ್ಮವಾಗಿದೆ ಇಸ್ಲಾಮ್. ನ್ಯಾಯ ತನ್ನ ಹೆತ್ತವರಿಗೆ, ಆಪ್ತಸಂಬಂಧಿಕರಿಗೆ ಅಥವಾ ಸ್ವತಃ ತನಗೇ ವಿರುದ್ಧವಾಗಿದ್ದರೂ ನ್ಯಾಯವನ್ನು ಎತ್ತಿ ಹಿಡಿಯಬೇಕೆಂದು ಇಸ್ಲಾಮ್ ಹೇಳುತ್ತದೆ. ಯುದ್ಧ ಮೊದಲಾದ ವಿಷಮ ಸ್ಥಿತಿಗಳಲ್ಲೂ ನ್ಯಾಯ ಪಾಲಿಸಬೇಕೆಂದು ಇಸ್ಲಾಮ್ ಬೋಧಿಸುತ್ತದೆ.


ವಿವಾಹ ಮತ್ತು ದಾಂಪತ್ಯ:

ಇಸ್ಲಾಮಿನಲ್ಲಿ ವಿವಾಹವೆಂದರೆ ಅದೊಂದು ಬಲವಾದ ಕರಾರಾಗಿದೆ. ವಿವಾಹವಾಗುವಾಗ ವರದಕ್ಷಿಣೆ ಪಡೆಯುವುದನ್ನು ಇಸ್ಲಾಮ್ ವಿರೋಧಿಸಿದೆ. ಆದರೆ ವಧುದಕ್ಷಿಣೆ (ಮಹ್ರ್) ನೀಡುವುದನ್ನು ಕಡ್ಡಾಯಗೊಳಿಸಿದೆ. ಕನ್ಯೆಯನ್ನು ವಿವಾಹ ಮಾಡಿಕೊಡುವಾಗ ಅದಕ್ಕೆ ಆಕೆ ಅನುಮತಿ ನೀಡುವುದು ಕಡ್ಡಾಯವಾಗಿದೆ. ವಿವಾಹದಲ್ಲಾಗಲಿ ಅಥವಾ ಇತರ ಯಾವುದೇ ವಿಷಯಗಳಲ್ಲಾಗಲಿ ದುಂದುವೆಚ್ಚ ಮಾಡುವುದನ್ನು ಇಸ್ಲಾಮ್ ವಿರೋಧಿಸಿದೆ. ದಂಪತಿಗಳು ಪರಸ್ಪರ ಕಷ್ಟಸುಖಗಳಲ್ಲಿ ಭಾಗಿಯಾಗಬೇಕೆಂದು ಮತ್ತು ಒಬ್ಬರನ್ನೊಬ್ಬರು ಅರಿತುಕೊಂಡು ಜೀವನ ನಡೆಸಬೇಕೆಂದು ಇಸ್ಲಾಮ್ ಬೋಧಿಸುತ್ತದೆ. ದಂಪತಿಗಳಲ್ಲಿ ಪರಸ್ಪರ ವಿರಸ ಮೂಡಿಸುವಂತಹ ಎಲ್ಲ ದ್ವಾರಗಳನ್ನು ಇಸ್ಲಾಮ್ ಮುಚ್ಚಿಹಾಕಿದೆ. ತನ್ನ ಪತ್ನಿಯ ಬಾಯಿಯಲ್ಲಿ ಹಾಕುವ ಒಂದು ತುತ್ತು ಅನ್ನಕ್ಕೂ ಪ್ರತಿಫಲವಿದೆಯೆಂದು ಇಸ್ಲಾಮ್ ಘೋಷಿಸುತ್ತದೆ. ಪತ್ನಿಯೊಂದಿಗೆ ಶಿಷ್ಟಾಚಾರದೊಂದಿಗೆ ವರ್ತಿಸುವವನೇ ನಿಜವಾದ ಪುರುಷ ಮತ್ತು ಪತಿಯ ಆಜ್ಞೆಗಳಿಗೆ ಶಿರಸಾವಹಿಸುವುದು ಹೆಣ್ಣಿನ ಮೇಲೆ ಕಡ್ಡಾಯವಾಗಿದೆಯೆಂದು ಇಸ್ಲಾಮ್ ಬೋಧಿಸುತ್ತದೆ.


ಕುಟುಂಬ:

ಇಸ್ಲಾಮೀ ಕುಟುಂಬದ ಮೇಲೆ ಇಸ್ಲಾಮೀ ಸಮಾಜ ಸ್ಥಾಪನೆಗೊಳ್ಳುವುದರಿಂದ ಕುಟುಂಬಕ್ಕೆ ಇಸ್ಲಾಮ್ ಮಹತ್ವವಾದ ಸ್ಥಾನವನ್ನು ನೀಡಿದೆ. ಕುಟುಂಬ ಸಂಬಂಧ ಕಡಿಯುವುದನ್ನು ಇಸ್ಲಾಮ್ ಘೋರ ಪಾಪವಾಗಿ ಪರಿಗಣಿಸುತ್ತದೆ. ಗಂಡು ಮತ್ತು ಹೆಣ್ಣು ಕುಟುಂಬದ ಪಾಲುದಾರರಾಗಿದ್ದರೂ ಕುಟುಂಬದ ನಾಯಕ ಸ್ಥಾನದ ಹೊಣೆಯನ್ನು ಇಸ್ಲಾಮ್ ಪುರುಷನ ಮೇಲೆ ವಹಿಸಿಕೊಟ್ಟಿದೆ. ಆದ್ದರಿಂದ ಕುಟುಂಬದ ಪಾಲನೆ ಪೋಷಣೆಯ ಹೊಣೆ ಪುರುಷನ ಮೇಲಿದೆ. ಕುಟುಂಬದ ವಿಷಯದಲ್ಲಿ ತೆಗೆಯಲಾಗುವ ಯಾವುದೇ ನಿರ್ಣಯವೂ ಗಂಡು ಮತ್ತು ಹೆಣ್ಣಿನ ಪಾಲುದಾರಿಕೆಯಲ್ಲಿರಬೇಕೇ ಹೊರತು ಗಂಡಿನ ಏಕಸ್ವಾಮ್ಯ ಮತ್ತು ದಬ್ಬಾಳಿಕೆಯನ್ನು ಇಸ್ಲಾಮ್ ಅಂಗೀಕರಿಸುವುದಿಲ್ಲ.


ಹೆತ್ತವರು ಮತ್ತು ಮಕ್ಕಳು:

ಹೆತ್ತವರನ್ನು ಪ್ರೀತಿಸುವುದು ಮತ್ತು ಅವರ ವೃದ್ಧಾಪ್ಯದಲ್ಲಿ ಅವರಿಗೆ ಆಸರೆಯಾಗಿ ನಿಲ್ಲುವುದು ಇಸ್ಲಾಮಿನಲ್ಲಿ ಕಡ್ಡಾಯವಾಗಿದೆ. ಹೆತ್ತವರ ಮಾತಿಗೆ ಎದುರುತ್ತರ ಕೊಡುವುದು ಅಥವಾ ಕನಿಷ್ಟ ಛೇ ಎಂಬ ಮಾತನ್ನು ಬಳಸುವುದು ನಿಷಿದ್ಧವಾಗಿದೆ. ಮಾತೆಯ ಕಾಲಡಿಯಲ್ಲಿ ಸ್ವರ್ಗವಿದೆಯೆಂದು ಇಸ್ಲಾಮ್ ಬೋಧಿಸುತ್ತದೆ. ಹೆತ್ತವರ ತೃಪ್ತಿಯ ವಿನಾ ಸ್ವರ್ಗಪ್ರವೇಶ ಸಾಧ್ಯವಿಲ್ಲವೆಂದು ಇಸ್ಲಾಮ್ ಹೇಳುತ್ತದೆ. ಮಕ್ಕಳನ್ನು ಪ್ರೀತಿಸಬೇಕು ಮತ್ತು ಅವರ ಮಧ್ಯೆ ಸಮಾನ ನ್ಯಾಯ ಪಾಲಿಸಬೇಕೆಂದು ಇಸ್ಲಾಮ್ ಹೇಳುತ್ತದೆ. ಬಡತನವನ್ನು ಭಯಪಟ್ಟು ಮಕ್ಕಳನ್ನು ಹತ್ಯೆ ಮಾಡುವುದನ್ನು ಇಸ್ಲಾಮ್ ಘೋರ ಪಾಪವಾಗಿ ಪರಿಗಣಿಸುತ್ತದೆ. ಭ್ರೂಣಹತ್ಯೆಯನ್ನು ಇಸ್ಲಾಮ್ ನಿಷಿದ್ಧಗೊಳಿಸಿದೆ. ಇಬ್ಬರು ಹೆಣ್ಮಕ್ಕಳನ್ನು ಚೆನ್ನಾಗಿ ಬೆಳೆಸಿ, ಅವರಿಗೆ ಗೌರವಾರ್ಹವಾದ ವಿದ್ಯೆಯನ್ನು ನೀಡಿ, ವಿವಾಹ ಮಾಡಿಕೊಡುವಾತನಿಗೆ ಸ್ವರ್ಗವಿದೆಯೆಂದು ಇಸ್ಲಾಮ್ ಘೋಷಿಸುತ್ತದೆ.


ಸಮಾಜ:

ಸಮಾಜದ ನೆಮ್ಮದಿಯನ್ನು ಕೆಡಿಸುವ ಮತ್ತು ಸಾಮಾಜಿಕ ಅಧಃಪತನಕ್ಕೆ ಕಾರಣವಾಗುವ ಎಲ್ಲ ಅನೈತಿಕ ಪ್ರವೃತ್ತಿಗಳನ್ನು ಇಸ್ಲಾಮ್ ನಿಷಿದ್ಧಗೊಳಿಸಿದೆ. ಮದ್ಯಪಾನ ಮೊದಲಾದ ಅಮಲು ಪದಾರ್ಥಗಳ ಸೇವನೆ, ವ್ಯಭಿಚಾರ, ವಿವಾಹಪೂರ್ವ ಲೈಂಗಿಕತೆ, ಸಲಿಂಗರತಿ, ಅನ್ಯರನ್ನು ದೂಷಣೆ ಮಾಡುವುದು, ಚಾಡಿ ಹೇಳುವುದು ಮುಂತಾದ ಎಲ್ಲ ದುರ್ಗುಣಗಳನ್ನೂ ಇಸ್ಲಾಮ್ ನಿಷಿದ್ಧಗೊಳಿಸಿದೆ. ಇವೆಲ್ಲವೂ ಕುಟುಂಬವನ್ನು ಛಿದ್ರಗೊಳಿಸುವ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುತ್ತದೆ. ಹಾಗೆಯೇ ಸಾಮಾಜಿಕ ಪಿಡುಗುಗಳಾದ ಕಳ್ಳತನ, ದರೋಡೆ, ದಬ್ಬಾಳಿಕೆ, ಅನ್ಯಾಯ, ಅಕ್ರಮ ಇತ್ಯಾದಿಗಳನ್ನು ನಿರ್ನಾಮಗೊಳಿಸುವ ಮಾರ್ಗಗಳನ್ನು ಕಲಿಸಿಕೊಡುತ್ತದೆ. ಸಮಾಜದ ಆರೋಗ್ಯಪೂರ್ಣ ನೆಲೆನಿಲ್ಲುವಿಕೆಗಾಗಿ ಅಗತ್ಯವಿರುವ ಎಲ್ಲ ಮಾರ್ಗನಿರ್ದೇಶನಗಳನ್ನು ಇಸ್ಲಾಮ್ ನೀಡಿದೆ. ಸಾಮಾಜಿಕ ಹಿತಕ್ಕಾಗಿ ಮಾಡುವ ಯಾವುದೇ ಕರ್ಮಗಳು ಇಸ್ಲಾಮಿನಲ್ಲಿ ಪ್ರತಿಫಲಾರ್ಹವಾಗಿವೆ.


ನೆರೆಹೊರೆ:

ನೆರೆಹೊರೆ ಸಂಬಂಧಕ್ಕೆ ಇಸ್ಲಾಮ್ ಬಹಳ ಮಹತ್ವ ನೀಡಿದೆ. ನೆರೆಯಲ್ಲಿರುವ ವ್ಯಕ್ತಿ ಯಾವ ಜಾತಿಗೆ ಸೇರಿದವನಾದರೂ ಅವನೊಂದಿಗೆ ಪಾಲಿಸಬೇಕಾದ ಶಿಷ್ಟಾಚಾರಗಳು, ತನ್ನಿಂದ ಅವನಿಗೆ ದೊರೆಯಬೇಕಾದ ಸುರಕ್ಷತೆಯನ್ನು ದೃಢೀಕರಿಸುವುದು, ಅವನ ಕಷ್ಟಸುಖಗಳಲ್ಲಿ ಪಾಲ್ಗೊಳ್ಳುವುದು ಮೊದಲಾದ ನಿಯಮ ನಿರ್ದೇಶನಗಳನ್ನು ಇಸ್ಲಾಮ್ ನೀಡಿದೆ. ನೆರೆಮನೆಯಾತ ಹಸಿದಿರುವಾಗ ಅವನ ಕಷ್ಟವನ್ನು ವಿಚಾರಿಸದೆ ನೆಮ್ಮದಿಯಾಗಿರುವುದನ್ನು ಇಸ್ಲಾಮ್ ವಿರೋಧಿಸುತ್ತದೆ.


ಆರ್ಥಿಕತೆ:

ಆರ್ಥಿಕ ಸಂಪಾದನೆಗಾಗಿ ವಕ್ರ ಮಾರ್ಗಗಳ ಮೊರೆ ಹೋಗುವುದನ್ನು ಇಸ್ಲಾಮ್ ನಿಷಿದ್ಧಗೊಳಿಸಿದೆ. ಕಳ್ಳತನ, ಬಡ್ಡಿ, ಜುಗಾರಿ, ಕಾಳಸಂತೆ, ಮೋಸ, ವಂಚನೆ ಇತ್ಯಾದಿಗಳನ್ನು ಇಸ್ಲಾಮ್ ವಿರೋಧಿಸಿದೆ. ನ್ಯಾಯಸಮ್ಮತ ಮಾರ್ಗಗಳ ಮೂಲಕ ಸಂಪಾದಿಸಿದ ಹಣದಿಂದ ಉಣ್ಣುವ ಆಹಾರವೇ ಶ್ರೇಷ್ಠ ಆಹಾರವೆಂದು ಇಸ್ಲಾಮ್ ಹೇಳುತ್ತದೆ. ಅನ್ಯರ ಮುಂದೆ ಕೈಚಾಚುವುದನ್ನು ಇಸ್ಲಾಮ್ ಪ್ರೋತ್ಸಾಹಿಸುವುದಿಲ್ಲ. ಪರಿಶ್ರಮಪಟ್ಟು ಕುಟುಂಬವನ್ನು ಪೋಷಿಸುವುದು ಅನ್ಯರ ಮುಂದೆ ಕೈಚಾಚುವುದಕ್ಕಿಂತಲೂ ಶ್ರೇಷ್ಠವೆಂದು ಇಸ್ಲಾಮ್ ಹೇಳುತ್ತದೆ.


ಪರಧರ್ಮ ಸಹಿಷ್ಣುತೆ:

ಪರಧರ್ಮ ದೂಷಣೆಯನ್ನು ಇಸ್ಲಾಮ್ ವಿರೋಧಿಸುತ್ತದೆ. ಮಾನವೀಯ ನೆಲೆಯಲ್ಲಿ ಅನ್ಯಧರ್ಮೀಯರ ಕಷ್ಟಸುಖಗಳಲ್ಲಿ ಭಾಗಿಯಾಗುವುದು, ಅವರ ಏಳಿಗೆಯನ್ನು ಬಯಸುವುದು, ಅವರೊಂದಿಗೆ ಆಪ್ತ ಸಂಬಂಧ ಹೊಂದುವುದು ಇತ್ಯಾದಿಗಳನ್ನು ಇಸ್ಲಾಮ್ ವಿರೋಧಿಸುವುದಿಲ್ಲ. ಆದರೆ ಧಾರ್ಮಿಕ ನೆಲೆಯಲ್ಲಿ ಅವರೊಂದಿಗೆ ಬೆರೆಯುವುದು, ಅಂದರೆ ಅವರ ಪೂಜೆ ಪುನಸ್ಕಾರಗಳಲ್ಲಿ ಪಾಲ್ಗೊಳ್ಳುವುದು, ಅವರ ಧಾರ್ಮಿಕ ಉತ್ಸವಗಳಲ್ಲಿ ಭಾಗಿಯಾಗುವುದು, ಅವರ ಸಂಪ್ರದಾಯಗಳನ್ನು ಅನುಕರಿಸುವುದು ಇತ್ಯಾದಿಗಳನ್ನು ಇಸ್ಲಾಮ್ ವಿರೋಧಿಸುತ್ತದೆ. ಧರ್ಮದ ಬಗ್ಗೆ ಪರಸ್ಪರ ಸಂವಾದ ಮಾಡುವುದನ್ನು ಇಸ್ಲಾಮ್ ಪ್ರೋತ್ಸಾಹಿಸುತ್ತದೆ. ಆದರೆ ಧರ್ಮದ ಹೆಸರಲ್ಲಿ ಜಗಳವಾಡುವುದನ್ನು ವಿರೋಧಿಸುತ್ತದೆ.


ಕಾರ್ಮಿಕ ನೀತಿ:

ಕಾರ್ಮಿಕರ ಹಕ್ಕುಗಳನ್ನು ಎತ್ತಿಹಿಡಿದ ಧರ್ಮವಾಗಿದೆ ಇಸ್ಲಾಮ್. ಕೂಲಿಯಾಳಿನ ಬೆವರು ಆರುವುದಕ್ಕೆ ಮೊದಲೇ ಅವನ ವೇತನ ಕೊಟ್ಟುಬಿಡಬೇಕೆಂದು ಇಸ್ಲಾಮ್ ಬೋಧಿಸುತ್ತದೆ. ವೇತನಕ್ಕೆ ಓರ್ವ ವ್ಯಕ್ತಿಯನ್ನು ನಿಶ್ಚಯಿಸಿದರೆ ಅವನಿಗೆ ಸಾಧ್ಯವಾಗದ ಕೆಲಸವನ್ನು ಅವನಿಂದ ಮಾಡಿಸಕೂಡದು, ಹಾಗೆ ಮಾಡಿಸುವುದಾದರೆ ಅವನಿಗೆ ಅದರಲ್ಲಿ ನೆರವೀಯಬೇಕೆಂದು ಇಸ್ಲಾಮ್ ಹೇಳುತ್ತದೆ.

ಹೀಗೆ ಇಸ್ಲಾಮ್ ಮನುಷ್ಯನ ಜೀವನದುದ್ದಕ್ಕೂ ಅವನಿಗೆ ದೈವಿಕ ಮಾರ್ಗದರ್ಶನ ನೀಡುತ್ತದೆ. ಇಲ್ಲಿ ಸೂಚಿಸಲಾಗಿರುವುದು ಅವುಗಳ ಪೈಕಿ ಕೆಲವನ್ನು ಮಾತ್ರ. ಮನುಷ್ಯನೆಂಬ ನೆಲೆಯಲ್ಲಿ ಎಲ್ಲರೊಂದಿಗೂ ಆತ್ಮೀಯವಾಗಿ ವರ್ತಿಸಬೇಕೆಂದು ಇಸ್ಲಾಮ್ ಹೇಳುತ್ತದೆ. ಇತರರ ಘನತೆ ಗೌರವಗಳಿಗೆ ಕುಂದುಂಟು ಮಾಡುವ ಎಲ್ಲ ಮಾತು, ಪ್ರವೃತ್ತಿಗಳನ್ನೂ ಇಸ್ಲಾಮ್ ವಿರೋಧಿಸುತ್ತದೆ. ಅಷ್ಟೇ ಅಲ್ಲ, ಮನುಷ್ಯ ಜೀವಿ ಸೇರಿದಂತೆ ಈ ಜಗತ್ತಿನಲ್ಲಿರುವ ಎಲ್ಲ ಜೀವಿಗಳೊಂದಿಗೆ ದಯೆ, ಕರುಣೆ ಮತ್ತು ವಾತ್ಸಲ್ಯ ತೋರಿಸಬೇಕೆಂದು ಇಸ್ಲಾಮ್ ಬೋಧಿಸುತ್ತದೆ.


ಕೃಪೆ: ಸತ್ಯ ಸಾರಥಿ 2011

26 Oct 2016

ಅಲ್ಲಾಹನು ಮುಸ್ಲಿಮರಿಗೆ ಮಾತ್ರ ಸೀಮಿತವೇ?



ಅಲ್ಲಾಹು ಮುಸ್ಲಿಮರಿಗೆ ಮಾತ್ರ ದೇವರಲ್ಲ. ಅಲ್ಲಾಹು! ಈ ಹೆಸರು ಕೇಳಿದೊಡನೆ ಹೆಚ್ಚಿನವರೂ ಅದು ಮುಸ್ಲಿಮರ ದೇವರು ಎಂಬ ತೀರ್ಮಾನಕ್ಕೆ ಬಂದುಬಿಡುತ್ತಾರೆ. ಇದೊಂದು ತಪ್ಪುಕಲ್ಪನೆಯಾಗಿದೆ. ಮುಸ್ಲಿಮರೆಂದರೆ ಅಲ್ಲಾಹನನ್ನು ಮಾತ್ರ ಆರಾಧಿಸುವವರು ಎಂಬುದು ಸತ್ಯವಾಗಿದ್ದರೂ, ಅಲ್ಲಾಹು ಎಂಬುದು ಕೇವಲ ಮುಸ್ಲಿಮರಿಗೆ ಮಾತ್ರ ಮೀಸಲಾದ ದೇವರು ಎಂಬ ಭಾವನೆ ಸರ್ವಥಾ ಸರಿಯಲ್ಲ. ಯಾಕೆಂದರೆ ಅಲ್ಲಾಹನಿಂದ ಅವತೀರ್ಣಗೊಂಡ ಗ್ರಂಥವಾದ ಕುರ್‌ಆನ್, ಅಲ್ಲಾಹನನ್ನು ಪರಿಚಯಿಸುವಾಗ ಮುಸ್ಲಿಮರಿಗೆ ಮಾತ್ರ ಮೀಸಲಾದ ದೇವರು ಎಂಬ ರೀತಿಯಲ್ಲಿ ಪರಿಚಯಿಸುವುದಿಲ್ಲ. ಅಲ್ಲಾಹನನ್ನು ಕುರಿತು ಪ್ರತಿಪಾದಿಸಿದ ಪ್ರವಾದಿಗಳಾರೂ ಅವನನ್ನು ಮುಸ್ಲಿಮರಿಗೆ ಮಾತ್ರ ಮೀಸಲುಗೊಳಿಸಲಿಲ್ಲ. ಅಂತಹ ಒಂದು ಸಂಕುಚಿತ ಭಾವನೆಯು ಯಾವನೇ ಒಬ್ಬ ಮುಸ್ಲಿಮನಿಗೆ ಇದ್ದರೆ ಅದು ಅವನ ಅಜ್ಞಾನವನ್ನಷ್ಟೇ ಸೂಚಿಸುತ್ತದೆ.
ಅಲ್ಲಾಹು ಎಂಬ ಪದಕ್ಕೆ ಕನ್ನಡದಲ್ಲಿ ದೇವರು ಎನ್ನಲಾಗುತ್ತದೆ. ಇಂಗ್ಲಿಷ್‌ನಲ್ಲಿ God ಎನ್ನಲಾಗುತ್ತದೆ. ಉರ್ದುವಿನಲ್ಲಿ ಖುದಾ ಎನ್ನಲಾಗುತ್ತದೆ. ಮಲಯಾಲದಲ್ಲ ದೈವಂ, ತಮಿಳಿನಲ್ಲಿ ಕಡವುಲ್ ಎನ್ನಲಾಗುತ್ತದೆ. ಆದರೆ ಇವುಗಳಾವುದೂ ಅಲ್ಲಾಹ್ ಎಂಬ ಪದಕ್ಕೆ ಸಮರ್ಪಕವಾಗಿ ಸರಿಹೊಂದಲಾರದು. ದೇವ, God, ಖುದಾ, ದೈವಂ, ಕಡವುಲ್ ಇವುಗಳೆಲ್ಲವೂ ಕೇವಲ ಆರಾಧ್ಯ ಎಂಬ ಅರ್ಥವನ್ನಷ್ಟೇ ಸೂಚಿಸುತ್ತವೆ. ಆರಾಧ್ಯ ಎಂಬುದಕ್ಕೆ ಅರಬಿ ಭಾಷೆಯಲ್ಲಿ ಇಲಾಹ್ ಅಥವಾ ಮಅಬೂದ್ ಎಂಬ ಪದವನ್ನು ಬಳಸಲಾಗುತ್ತದೆ. ಆರಾಧಿಸಲ್ಪಡುವ ಯಾವುದೇ ವಸ್ತು ಕೂಡ ಅರಬಿಯಲ್ಲಿ ಇಲಾಹ್ ಆಗಿ ಮಾರ್ಪಡುತ್ತದೆ. ಆದರೆ ಅಲ್ಲಾಹ್ ಎಂಬ ಅರಬಿ ಪದವು ಸಾಕ್ಷಾತ್ ದೇವನು, ನೈಜ ಆರಾಧ್ಯನು, ಆರಾಧನೆಗೆ ಅರ್ಹನಾಗಿರುವವನು ಎಂಬ ಅರ್ಥಗಳನ್ನು ಹೊಂದಿವೆ.
ಆದ್ದರಿಂದ ಅಲ್ಲಾಹ್ ಎಂಬುದು ಯಾವುದೇ ಕುಲದೇವನ ನಾಮವಲ್ಲ. ಒಂದು ಜನಾಂಗದ ಆರಾಧ್ಯನಿಗೆ ಮಾತ್ರ ಸೀಮಿತವಾದ ಹೆಸರಲ್ಲ. ಸೃಷ್ಟಿಕರ್ತನೂ, ಸರ್ವಶಕ್ತನೂ, ಜಗತ್ತಿನ ನಿಯಂತ್ರಕನೂ, ಪರಿಪಾಲಕನೂ ಆದ ನೈಜ ಆರಾಧ್ಯನನ್ನು ಸೂಚಿಸಲು ಕುರ್‌ಆನ್‌ನಲ್ಲಿ ಅಲ್ಲಾಹ್ ಎಂಬ ಪದವನ್ನು ಬಳಸಲಾಗಿದೆ. ಅಂದರೆ ಭಾಷೆ, ವರ್ಗ, ವರ್ಣ, ಜಾತಿ, ದೇಶ ಎಂಬ ಯಾವುದೇ ಬೇಧಭಾವವಿಲ್ಲದೆ ಸರ್ವ ಜನರ, ಸಕಲ ವಸ್ತುಗಳ, ಸರ್ವ ಪ್ರಪಂಚಗಳ ಸೃಷ್ಟಿಕರ್ತ, ಸಂರಕ್ಷಕ, ನೈಜ ಒಡೆಯನನ್ನು ಕುರ್‌ಆನ್ ಅಲ್ಲಾಹ್ ಎಂದು ಕರೆಯುತ್ತದೆ.

*ಅಲ್ಲಾಹು ಸಕಲ ವಸ್ತುಗಳ ಸೃಷ್ಟಿಕರ್ತನಾಗಿರುವನು, ಅವನು ಎಲ್ಲಾ ವಸ್ತುಗಳ ಮೇಲ್ವಿಚಾರಕನಾಗಿರುವನು. (ಕುರ್‌ಆನ್ 39/62)*

ಕುರ್'ಆನ್ ಮುಸ್ಲಿಮೇತರರನ್ನು ಕೊಲ್ಲುವಂತೆ ಆದೇಶಿಸುತ್ತದೆಯೇ?



    ಕುರ್‌ಆನ್‌ನ ಸೂಕ್ತಿಗಳನ್ನು ಸಂದರ್ಭಗಳಿಂದ ಬೇರ್ಪಡಿಸಿ (out of context) ಜನರಲ್ಲಿ ಇಸ್ಲಾಮಿನ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡುವ ಕಾರ್ಯದಲ್ಲಿ ಒಂದು ವರ್ಗವು ಸದಾ ನಿರತವಾಗಿದೆ. ಕಾಫಿರರನ್ನು ಕಂಡಲ್ಲಿ ವಧಿಸಿರಿ ಎಂದು ಕುರ್ ಆನ್ ಹೇಳುತ್ತದೆ ಎಂಬುದಕ್ಕೆ ಪುರಾವೆಯಾಗಿ ಅವರು ಕುರ್‌ಆನಿನ 2ನೇ ಅಧ್ಯಾಯದ 190 ಮತ್ತು 9ನೇ ಅಧ್ಯಾಯದ 5ನೇ ಸೂಕ್ತಿಗಳನ್ನು ತಲೆಬಾಲ ಕತ್ತರಿಸಿ ತೋರಿಸುತ್ತಾರೆ.
2ನೇ ಅಧ್ಯಾಯದ 190-191ನೇ ಸೂಕ್ತಿಗಳು ಹೀಗಿವೆ:
ನಿಮ್ಮೊಂದಿಗೆ ಯುದ್ಧ ಮಾಡುವವರೊಂದಿಗೆ ನೀವೂ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ. ಆದರೆ ನೀವು ಹದ್ದುಮೀರದಿರಿ. ಖಂಡಿತವಾಗಿಯೂ ಹದ್ದುಮೀರುವವರನ್ನು ಅಲ್ಲಾಹು ಇಷ್ಟಪಡುವುದಿಲ್ಲ. ನೀವು ಅವರನ್ನು ಕಂಡಲ್ಲಿ ವಧಿಸಿರಿ ಮತ್ತು ಅವರು ನಿಮ್ಮನ್ನು ಎಲ್ಲಿಂದ ಹೊರಗಟ್ಟಿದರೋ ಅಲ್ಲಿಂದ ನೀವೂ ಅವರನ್ನು ಹೊರಗಟ್ಟಿರಿ. ಕ್ಷೋಭೆಯು ಕೊಲೆಗಿಂತಲೂ ಭೀಕರವಾಗಿದೆ. ಆದರೆ ಮಸ್ಜಿದುಲ್ ಹರಾಮ್‌ನ ಬಳಿಯಲ್ಲಿ ಅವರು ನಿಮ್ಮೊಂದಿಗೆ ಹೋರಾಡುವವರೆಗೆ ನೀವು ಅವರೊಂದಿಗೆ ಹೋರಾಡದಿರಿ. ಅವರೇನಾದರೂ ನಿಮ್ಮ ಮೇಲೆ ದಾಳಿ ಮಾಡಿದರೆ ಅವರನ್ನು ಕೊಂದು ಬಿಡಿರಿ. ಸತ್ಯನಿಷೇಧಿಗಳಿಗೆ ಹೀಗೆ ಪ್ರತಿಫಲವನ್ನು ನೀಡಲಾಗುವುದು. (2/190-191)
ಮೊದಲ ವಚನಗಳಲ್ಲಿ ಶತ್ರುಗಳು ಮುಸ್ಲಿಮರ ವಿರುದ್ಧ ದಾಳಿ ನಡೆಸುವಾಗ ಮುಸ್ಲಿಮರು ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸಿದ ಬಳಿಕ ಒಂದು ವೇಳೆ ಶತ್ರುಗಳು ಶಾಂತಿಪ್ರಸ್ತಾಪವನ್ನು ಮುಂದಿಟ್ಟರೆ ಅದನ್ನು ಸ್ವೀಕರಿಸಬೇಕೆಂದು ಆ ಬಳಿಕದ ಸೂಕ್ತಿಯಲ್ಲಿ ಕುರ್‌ಆನ್ ಕಲಿಸುತ್ತದೆ:
ಅವರೇನಾದರೂ (ಯುದ್ಧವನ್ನು) ಸ್ಥಗಿತಗೊಳಿಸಿದರೆ ಅಲ್ಲಾಹು ಅತ್ಯಂತ ಕ್ಷಮಿಸುವವನೂ ಕರುಣಾಮಯಿಯೂ ಆಗಿರುವನು. ಗಲಭೆಯು ಇಲ್ಲದಾಗುವವರೆಗೆ ಮತ್ತು ಧರ್ಮವು ಅಲ್ಲಾಹನಿಗಾಗುವವರೆಗೆ ಅವರೊಂದಿಗೆ ಹೋರಾಡಿರಿ. ಅವರೇನಾದರೂ ಸ್ಥಗಿತಗೊಳಿಸಿದರೆ ಆಗ ಅಕ್ರಮಿಗಳ ಹೊರತು ಯಾರ ಮೇಲೂ ಹಗೆತನವನ್ನು ಇಟ್ಟುಕೊಳ್ಳದಿರಿ. (2/192-193)

ಅದೇ ರೀತಿ 9ನೇ ಅಧ್ಯಾಯದ 5ನೇ ಸೂಕ್ತಿಯಲ್ಲಿ ಹೀಗಿದೆ:
ಪವಿತ್ರ ತಿಂಗಳುಗಳು ಕಳೆದರೆ ನೀವು ಬಹುದೇವಾರಾಧಕರನ್ನು ಕಂಡಲ್ಲಿ ವಧಿಸಿರಿ, ಅವರನ್ನು ಸೆರೆಹಿಡಿಯಿರಿ, ಮುತ್ತಿಗೆ ಹಾಕಿರಿ ಮತ್ತು ಅವರಿಗಾಗಿ ಹೊಂಚುಹಾಕಿ ಕುಳಿತುಕೊಳ್ಳಿರಿ. ಅವರೇನಾದರೂ ಪಶ್ಚಾತ್ತಾಪ ಪಟ್ಟು ನಮಾಝನ್ನು ಸಂಸ್ಥಾಪಿಸಿ ಝಕಾತ್ ನೀಡುವುದಾದರೆ ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿರಿ. ಅಲ್ಲಾಹು ಅತ್ಯಂತ ಕ್ಷಮಿಸುವವನೂ ಕರುಣಾಮಯಿಯೂ ಆಗಿರುವನು. (9/5)
ವಿಮರ್ಶಕರು ಆರಿಸಿಕೊಳ್ಳುವ ವಧಾ ಸೂಕ್ತಿಗಳು ಕುರ್‌ಆನಿನಲ್ಲಿ ಇರುವುದು ಈ ಮೇಲೆ ಹೇಳಿದ ರೀತಿಯಾಗಿದೆ. ಈಗ ಈ ಸೂಕ್ತಿಗಳನ್ನು ಸ್ವಲ್ಪ ವಿವರವಾಗಿ ತಿಳಿಯೋಣ.
2ನೇ ಅಧ್ಯಾಯದಲ್ಲಿ ಪ್ರಸ್ತಾಪಿಸಲಾದ ಸೂಕ್ತಿಯು ನಿರಂತರ ದೌರ್ಜನ್ಯಕ್ಕೀಡಾದ ಬಳಿಕ ಮುಸ್ಲಿಮರಿಗೆ ದೊರಕಿದ ಮೊತ್ತಮೊದಲ ಯುದ್ಧಾನುಮತಿಯಾಗಿದ್ದರೆ 9ನೇ ಅಧ್ಯಾಯದಲ್ಲಿರುವ ಸೂಕ್ತಿಗಳು ಅಂದು ಮುಸ್ಲಿಮರು ಮತ್ತು ಬಹುದೇವಾರಾಧಕರ ಮಧ್ಯೆ ಜಾರಿಯಲ್ಲಿದ್ದ ಒಂದು ಕರಾರಿನ ಕುರಿತು ತಿಳಿಸಿಕೊಡುತ್ತದೆ. ಬಹುದೇವಾರಾಧಕರು ಕರಾರಿನ ಶರತ್ತುಗಳನ್ನು ಉಲ್ಲಂಘಿಸಿದಾಗ ತಮ್ಮ ವರ್ತನೆಗಳನ್ನು ತಿದ್ದಿಕೊಳ್ಳಲು ಅವರಿಗೆ ಕಾಲಾವಕಾಶವನ್ನು ನೀಡಲಾಯಿತು. ಅನ್ಯಥಾಃ ಅವರ ಮೇಲೆ ಯುದ್ಧ ಘೋಷಿಸಲಾಗುವುದೆಂದು ಸಾರಲಾಯಿತು.
ಇವೆರಡು ಸೂಕ್ತಿಗಳೂ ಅವತೀರ್ಣಗೊಂಡಿದ್ದು ಯುದ್ಧದ ಹಿನ್ನೆಲೆಯಲ್ಲಾಗಿತ್ತು. ಒಂದು ದೇಶವು ಯುದ್ಧನಿರತವಾಗಿರುವ ಸಂದರ್ಭದಲ್ಲಿ ಆ ದೇಶವು ಅಥವಾ ಅದರ ಸೇನಾಧಿಪತಿಯು ತನ್ನ ಸೈನಿಕರನ್ನು ಹುರಿದುಂಬಿಸುವುದಕ್ಕಾಗಿ ನೀವು ಶತ್ರುಗಳನ್ನು ಕಂಡಲ್ಲಿ ಕೊಲ್ಲಿರಿ ಎಂದು ಆದೇಶಿಸುವುದನ್ನು ಭಯೋತ್ಪಾದನೆಗೆ ಪ್ರೇರಣೆಯೆಂದು ಕರೆಯಲಾದೀತೇ? ಭಾರತ ಮತ್ತು ಪಾಕಿಸ್ಥಾನದ ಮಧ್ಯೆ ಯುದ್ಧ ನಡೆಯುವಾಗ ನಮ್ಮ ಸೇನಾಧಿಪತಿಯು ಪಾಕಿಸ್ಥಾನಿ ಸೈನಿಕರನ್ನು ಕಂಡಲ್ಲಿ ವಧಿಸಿರಿ ಎಂದು ನಮ್ಮ ಸೈನಿಕರಿಗೆ ಆದೇಶಿಸಿದರೆ ಅದು ಪಾಕಿಸ್ಥಾನಿಗಳ ಮೇಲೆ ಭಯೋತ್ಪಾದನೆ ನಡೆಸುವುದಕ್ಕೆ ಪುರಾವೆಯಾದೀತೇ? ಅದೇ ರೀತಿ ಅಮೆರಿಕ ಮತ್ತು ವಿಯಟ್ನಾಂ ಮಧ್ಯೆ ಯುದ್ಧ ನಡೆದಿತ್ತು. ಆ ಸಮಯದಲ್ಲಿ ಅಮೆರಿಕನ್ ಸೇನಾ ಮುಖ್ಯಸ್ಥರು ವಿಯಟ್ನಾಮಿಗಳನ್ನು ಕಂಡಲ್ಲಿ ಕೊಲ್ಲಿರಿ ಎಂದಿದ್ದನ್ನು ಇಂದು ಯಾರಾದರೂ ಯುದ್ಧದ ಹಿನ್ನೆಲೆಯನ್ನು ಮರೆಮಾಚಿಕೊಂಡು ಹೇಳಿದಲ್ಲಿ ಖಂಡಿತವಾಗಿಯೂ ಅದು ಅಮೆರಿಕನ್ ಸೇನಾ ಮುಖ್ಯಸ್ಥರನ್ನು ಒಬ್ಬ ಭಯೋತ್ಪಾದಕ ಅಥವಾ ಕಟುಕನಾಗಿ ಬಿಂಬಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
ಕುರ್‌ಆನ್‌ನಲ್ಲಿರುವ ವಧಾ ಸೂಕ್ತಿಗಳನ್ನು ಇಸ್ಲಾಮಿನ ವಿರುದ್ಧವಾಗಿ ಪ್ರಚಾರ ಮಾಡಿದವರಲ್ಲಿ ಅರುಣ್ ಶೌರಿಯೂ ಒಬ್ಬರು. ತಮ್ಮ ದಿ ವರ್ಲ್ಡ್ ಆಫ್ ಫತ್ವಾಸ್ (The World of Fatwas) ಎಂಬ ಗ್ರಂಥದಲ್ಲಿ ಅವರು ಕುರ್‌ಆನಿನ 9ನೇ ಅಧ್ಯಾಯದ ಇದೇ 5ನೇ ಸೂಕ್ತಿಯನ್ನೇ ಆರಿಸಿರುವರು.
ನೀವು ಬಹುದೇವಾರಾಧಕರನ್ನು ಕಂಡಲ್ಲಿ ಕೊಲ್ಲಿರಿ (ಕುರ್ ಆನ್ 9/5)
ತಮಾಷೆಯೆಂದರೆ ಅವರು 5ನೇ ಸೂಕ್ತಿಯ ಬಳಿಕ 6ನೇ ಸೂಕ್ತಿಯನ್ನು ಉಲ್ಲೇಖಿಸದೇ ನೇರವಾಗಿ 7ನೇ ಸೂಕ್ತಿಗೆ ಜಿಗಿದಿರುವರು. ಕಾರಣವೇನೆಂದರೆ 6ನೇ ಸೂಕ್ತಿಯಲ್ಲಿ ವಿಮರ್ಶಕರ ದುರ್ವಾದಗಳಿಗೆ ಸಮರ್ಪಕವಾದ ಉತ್ತರವಿದೆ. ಆ ಸೂಕ್ತಿಯಲ್ಲಿ ಅಲ್ಲಾಹು ತನ್ನ ಪ್ರವಾದಿಯೊಂದಿಗೆ ಹೀಗೆ ಆದೇಶಿಸುತ್ತಾನೆ.
ಬಹುದೇವಾರಾಧಕರ (ಶತ್ರುಗಳ) ಪೈಕಿ ಯಾರಾದರೂ ನಿನ್ನೊಂದಿಗೆ ಆಶ್ರಯವನ್ನು ಬೇಡಿದರೆ ಅವನಿಗೆ ಆಶ್ರಯ ನೀಡು. ಅವನು ಅಲ್ಲಾಹನ ವಚನವನ್ನು ಕೇಳುವಂತಾಗಲಿ. ನಂತರ ಅವನನ್ನು ಅವನಿಗೆ ಅತ್ಯಂತ ಸುರಕ್ಷಿತವಾಗಿರುವ ಸ್ಥಳಕ್ಕೆ ತಲುಪಿಸು. ಅದು ಯಾಕೆಂದರೆ ಅವರು ತಿಳುವಳಿಕೆಯಿಲ್ಲದ ಜನತೆಯಾಗಿರುವುದರಿಂದಾಗಿದೆ. (9/6)
ನಾವು ಪ್ರಸ್ತುತ ವಿದ್ಯಮಾನಗಳನ್ನು ಅವಲೋಕಿಸಿದಲ್ಲಿ ಅತ್ಯಂತ ಸೌಮ್ಯ ಹಾಗೂ ಶಾಂತಿಪ್ರಿಯ ಸೇನಾಧಿಕಾರಿ ಕೂಡಾ ಹೆಚ್ಚೆಂದರೆ ಶರಣಾದ ಸೈನಿಕನನ್ನು ಸ್ವತಂತ್ರವಾಗಿ ಓಡಿಹೋಗಲಷ್ಟೇ ಬಿಡುವನು. ಆದರೆ ಅವನನ್ನು ಸುರಕ್ಷಿತ ತಾಣಕ್ಕೆ ತಲಪಿಸಿರಿ ಎಂಬ ಆಜ್ಞೆಯನ್ನು ಎಂದೂ ನೀಡಲಾರ. ಅವನೆಷ್ಟು ಶಾಂತಿಪ್ರಿಯನಾಗಿದ್ದರೂ ಸರಿಯೇ. ಕುರ್‌ಆನ್ ಜಗತ್ತಿಗೆ ಶಾಂತಿ, ಕರುಣೆಯ ಪಾಠವನ್ನು ಕಲಿಸಲು ಅವತೀರ್ಣಗೊಂಡ ಗ್ರಂಥವಾಗಿದೆ. ಆದ್ದರಿಂದಲೇ ಅದು ಶತ್ರುವನ್ನು ಸುರಕ್ಷಿತ ಸ್ಥಳಕ್ಕೆ ತಲಪಿಸರಿ ಎಂದು ಆದೇಶಿಸುತ್ತದೆ. ಕುರ್‌ಆನ್ ವಚನಗಳನ್ನು ಅಸಾಂದರ್ಭಿಕವಾಗಿ ಉಲ್ಲೇಖಿಸುವಾಗ ವಿಮರ್ಶಕರು ಈ ವಚನದ ಹತ್ತಿರ ಕೂಡಾ ಸುಳಿಯುವುದಿಲ್ಲವೆಂಬುದು ಆಶ್ಚರ್ಯಕರವಾಗಿದೆ.
ಇನ್ನು ಇಂದು ಮುಸ್ಲಿಮರ ಪೈಕಿ ಭಯೋತ್ಪಾದನಾ ಕೃತ್ಯಗಳಲ್ಲಿ ನಿರತರಾದವರಿಗೆ ಮುಸ್ಲಿಮೇತರರನ್ನು ವಧಿಸಲು ಕುರ್‌ಆನ್ ನಲ್ಲಿರುವ ಇಂತಹ ಸೂಕ್ತಿಗಳೇ ಪ್ರೇರಣೆ ಎಂಬ ಆರೋಪದ ಕುರಿತು ಹೇಳುವುದಾದರೆ ಇದೊಂದು ಶುದ್ಧ ಸುಳ್ಳು ಹಾಗೂ ಕೆಲವು ಮಾಧ್ಯಮಗಳ ಸೃಷ್ಟಿಯಾಗಿದೆ. ಜಗತ್ತಿನಲ್ಲಿರುವ ಭಯೋತ್ಪಾದಕರೆಲ್ಲರೂ ಮುಸ್ಲಿಮರು ಎಂಬಂತೆ ಬಿಂಬಿಸಲು ಅವರು ನಡೆಸುತ್ತಿರುವ ವಿಫಲ ಯತ್ನವಾಗಿದೆ. ಇದಕ್ಕಾಗಿ ಅವರು ಒಂದು ವಿಶೇಷ ಘೋಷಣೆಯನ್ನೇ ಸೃಷ್ಟಿಸಿಕೊಂಡಿರುವರು. ಮುಸ್ಲಿಮರೆಲ್ಲರೂ ಭಯೋತ್ಪಾದಕರಲ್ಲ. ಆದರೆ ಭಯೋತ್ಪಾದಕರೆಲ್ಲರೂ ಮುಸ್ಲಿಮರು. ಇದೊಂದು ಶುದ್ಧ ವಂಚನೆ. ವಾಸ್ತವಿಕವಾಗಿ ಇಂದು ಎಷ್ಟು ಸ್ಪೋಟ ಪ್ರಕರಣಗಳನ್ನು ನಾವು ಪತ್ರಿಕೆಗಳಲ್ಲಿ ಮುಸ್ಲಿಮ್ ಭಯೋತ್ಪಾದನೆಯೆಂಬ ಶೀರ್ಷಿಕೆಯಲ್ಲಿ ಕಾಣುತ್ತಿರುವೆವೋ ಅವಕ್ಕಿಂತ ಎಷ್ಟೋ ಅಧಿಕ ಸಂಖ್ಯೆಯ ಸ್ಪೋಟ ಪ್ರಕರಣಗಳೂ, ಸಾವು ನೋವುಗಳೂ ಜಗತ್ತಿನಾದ್ಯಂತ ಸಂಭವಿಸುತ್ತಲೇ ಇವೆ. ವ್ಯತ್ಯಾಸವೆಂದರೆ ಇವುಗಳನ್ನು ವೈಭವೀಕರಿಸಲಾಗುತ್ತಿಲ್ಲ. ಭಯೋತ್ಪಾದನೆ, ಆತ್ಮಾಹುತಿ ಬಾಂಬ್ ದಾಳಿ ಎಂಬ ಭೂತಗಳನ್ನು ಹುಟ್ಟು ಹಾಕಿದವರು ಮುಸ್ಲಿಮರು ಎಂಬ ತಪ್ಪುಕಲ್ಪನೆಯು ಪ್ರಚಲಿತದಲ್ಲಿದೆ. ವಾಸ್ತವಿಕವಾಗಿ ಮುಸ್ಲಿಮೇತರ ಭಯೋತ್ಪಾದಕರು ಜಗತ್ತಿನಾದ್ಯಂತ ನಡೆಸಿದ ನರಮೇಧಗಳನ್ನು ಒಟ್ಟುಗೂಡಿಸಿದರೆ ಮುಸ್ಲಿಮ್ ಭಯೋತ್ಪಾದಕರು ಮಾಡಿದ್ದು ಏನೇನೂ ಇಲ್ಲ ಎಂದು ತಿಳಿಯಬಹುದಾಗಿದೆ. ಆದರೆ ಇತ್ತೀಚೆಗೆ ಭಯೋತ್ಪಾದನಾ ಕೃತ್ಯಗಳಲ್ಲಿ ಮುಸ್ಲಿಮೇತರರ ಹೆಸರುಗಳು ಬಹಿರಂಗಗೊಳ್ಳ ತೊಡಗಿದಾಗ ಅದೇ ಮಾಧ್ಯಮಗಳು ಭಯೋತ್ಪಾದಕರಿಗೆ ಧರ್ಮವಿಲ್ಲ ಎಂಬ ಹೊಸ ಘೋಷಣೆಯನ್ನು ಸೃಷ್ಟಿಸಿದ್ದಾರೆ!
ಪ್ರಭಾಕರನ್, ಹಿಟ್ಲರ್, ಮುಸ್ಸಲೋನಿ, ಜಾರ್ಜ್ ಬುಶ್ ಮುಂತಾದ ಜಗದ್ವಿಖ್ಯಾತ ಭಯೋತ್ಪಾದಕರಾರೂ ಮುಸ್ಲಿಮರಲ್ಲ. ಹಾಗಾದರೆ ಇವರನ್ನು ಭಯೋತ್ಪಾದನೆಗೆ ಪ್ರೋತ್ಸಾಹಿಸಿದ್ದಾದರೂ ಏನು? ಅವರ ಧರ್ಮಗ್ರಂಥಗಳೇ? ಇವರನ್ನೇಕೆ ಧರ್ಮದ ಆಧಾರದಲ್ಲಿ ಭಯೋತ್ಪಾದಕರೆಂದು ಕರೆಯಲಾಗುವುದಿಲ್ಲ?
ಇನ್ನು ಒಂದು ಧರ್ಮದ ಗ್ರಂಥದಲ್ಲಿ ಯುದ್ಧದ ಆಜ್ಞೆಗಳು ಇವೆ ಎಂಬ ಕಾರಣಕ್ಕಾಗಿ ಒಂದು ಧರ್ಮವನ್ನು ಭಯೋತ್ಪಾದಕ ಸ್ಥಾನದಲ್ಲಿ ನಿಲ್ಲಿಸುವುದಾದರೆ ಹಿಂದೂ ಗ್ರಂಥಗಳಲ್ಲಿರುವ ಈ ಕೆಳಗಿನ ಯುದ್ಧಾಜ್ಞೆಗಳು ಹಿಂದೂಧರ್ಮವು ಭಯೋತ್ಪಾದನೆಗೆ ಪ್ರೇರಣೆ ನೀಡುತ್ತದೆಂದು ಹೇಳಬಹುದೇ?
ಮಹಾಭಾರತ ಯುದ್ಧದ ಸಂದರ್ಭದಲ್ಲಿ ತನ್ನ ದಾಯಾದಿಗಳ ವಿರುದ್ಧ ಹೋರಾಡಲು ಅರ್ಜುನನು ಹಿಂಜರಿದಾಗ ಅವನಿಗೆ ಶ್ರೀಕೃಷ್ಣನು ನೀಡುವ ಆದೇಶವನ್ನು ಭಗವದ್ಗೀತೆ ಯಲ್ಲಿ (2/37) ಈ ರೀತಿ ಉದ್ಧರಿಸಲಾಗಿದೆ:
हतॊ वा प्राप्स्यसि स्वर्गं
जित्वा वा भॊक्ष्यसॆ महीम् ।
तस्मादुत्तिष्ठ कौन्तॆय
युद्धाय कृतनिश्चयः ॥
सुखदुःखॆ समॆ कृत्वा
लाभालाभौ जयजयौ ।
ततॊ युद्धाय युज्यस्व
नैवं पापमवाप्स्यसि ॥ (ಭಗವದ್ಗೀತೆ ಅಧ್ಯಾಯ 2 ಶ್ಲೋಕ 37-38)
ಒಂದೋ ನೀನು ಯುದ್ಧದಲ್ಲಿ ಕೊಲ್ಲಲ್ಪಟ್ಟರೆ ಸ್ವರ್ಗವನ್ನು ಪಡೆಯುವೆ ಅಥವಾ ಯುದ್ಧದಲ್ಲಿ ಗೆದ್ದರೆ ಪೃಥ್ವಿಯ ರಾಜ್ಯವನ್ನು ಭೋಗಿಸುವೆ ಈ ಕಾರಣದಿಂದ ಹೇ ಅರ್ಜುನನೇ! ನೀನು ಯುದ್ಧಕ್ಕಾಗಿ ನಿಶ್ಚಯಮಾಡಿ ಎದ್ದು ನಿಲ್ಲು. ಜಯ-ಪರಾಜಯ, ಲಾಭ-ಹಾನಿ ಮತ್ತು ಸುಖ ದುಃಖಗಳನ್ನು ಸಮಾನವಾಗಿ ತಿಳಿದುಕೊಂಡು, ಅನಂತರ ಯುದ್ಧಕ್ಕಾಗಿ ಸಿದ್ಧನಾಗು, ಈ ಪ್ರಕಾರ ಯುದ್ಧ ಮಾಡುವುದರಿಂದ ನೀನು ಪಾಪವನ್ನು ಹೊಂದುವುದಿಲ್ಲ.
ಜಯದಯಾಲ ಗೋಯಂದಕಾರವರು ತಮ್ಮ ಶ್ರೀಮದ್ಭಗವದ್ಗೀತೇ-ತತ್ವವಿವೇಚಿನೀ ಟೀಕಾ ಎಂಬ ಗ್ರಂಥದಲ್ಲಿ (ಪುಟ 68) ಈ ಮೇಲಿನ ವಚನವನ್ನು ಹೀಗೆ ವಿವರಿಸಿದ್ದಾರೆ:
ಆರನೇ ಶ್ಲೋಕದಲ್ಲಿ ಅರ್ಜುನನು – ನನಗಾಗಿ ಯುದ್ಧ ಮಾಡುವುದು ಅಥವಾ ಮಾಡದಿರುವುದು ಯಾವುದು ಶ್ರೇಷ್ಠವಾಗಿದೆ ಹಾಗೂ ಯುದ್ಧದಲ್ಲಿ ವಿಜಯವು ನಮಗಾಗುವುದೋ ಅಥವಾ ನಮ್ಮ ಶತ್ರುಗಳಿಗೋ? ಇದರ ನಿರ್ಣಯವನ್ನು ನಾನು ಮಾಡಲಾರೆ; ಎಂಬ ಮಾತನ್ನು ಹೇಳಿದ್ದನು. ಇದಕ್ಕೆ ಉತ್ತರವನ್ನು ಕೊಡುತ್ತಾ ಯುದ್ಧ ಮಾಡುತ್ತಾ ಮಾಡುತ್ತಾ ಸಾಯುವುದರಲ್ಲಿ ಅಥವಾ ವಿಜಯವನ್ನು ಪಡೆಯುವುದರಲ್ಲಿ ಈ ಎರಡರಲ್ಲೂ ಲಾಭವನ್ನು ತೋರಿಸಿಕೊಟ್ಟು ಅರ್ಜುನನಿಗೆ ಯುದ್ಧದ ಶ್ರೇಷ್ಠತೆಯನ್ನು ಭಗವಂತನು ಸಿದ್ಧಪಡಿಸುತ್ತಾನೆ. ಒಂದು ವೇಳೆ ಯುದ್ಧದಲ್ಲಿ ನಿನ್ನ ಶತ್ರುಗಳಿಗೆ ಜಯವುಂಟಾಗಿ ನೀನು ಕೊಲ್ಲಲ್ಪಟ್ಟರೂ ಸಹ ಒಳ್ಳೆಯ ಮಾತೇ ಆಗುತ್ತದೆ; ಏಕೆಂದರೆ ಯುದ್ಧದಲ್ಲಿ ಪ್ರಾಣತ್ಯಾಗ ಮಾಡುವುದರಿಂದ ನಿನಗೆ ಸ್ವರ್ಗ ದೊರೆಯುವುದು ಮತ್ತು ಒಂದು ವೇಳೆ ವಿಜಯಿಯಾದರೆ ಭೂಮಂಡಲದ ರಾಜ್ಯ ಸುಖವನ್ನು ಅನುಭವಿಸುವೆ; ಆದುದರಿಂದ ಎರಡೂ ದೃಷ್ಟಿಗಳಿಂದ ನಿನಗಾದರೋ ಯುದ್ಧ ಮಾಡುವುದೇ ಎಲ್ಲ ಪ್ರಕಾರದಿಂದಲೂ ಶ್ರೇಷ್ಠವಾಗಿದೆ. ಅದಕ್ಕಾಗಿ ನೀನು ಯುದ್ಧಕ್ಕೆ ಕಟಿಬದ್ಧನಾಗಿ ಸಿದ್ಧನಾಗು ಎಂಬುದೇ ಅಭಿಪ್ರಾಯವಾಗಿದೆ. (ಶ್ರೀಮದ್ಭಗವದ್ಗೀತೇ-ತತ್ವವಿವೇಚಿನೀ ಟೀಕಾ ಎಂಬ ಗ್ರಂಥದಲ್ಲಿ ಪುಟ 68)
ಇಲ್ಲಿರುವ ಗಮನಾರ್ಹವಾದ ಸಂಗತಿಯೇನೆಂದರೆ ಶ್ರೀಕೃಷ್ಣನು ಅರ್ಜುನನೊಂದಿಗೆ ಹೋರಾಡಲು ಹುರಿದುಂಬಿಸುವುದು ಅವನ ಸ್ವಂತ ದಾಯಾದಿಗಳೊಂದಿಗಾಗಿದೆ. ಅರ್ಥಾತ್ ಅವನ ಪಿತೃಸಹೋದರ ಪುತ್ರರೊಂದಿಗಾಗಿದೆ. ಒಂದೋ ನೀನು ಅವರನ್ನು ನಾಶ ಮಾಡಬೇಕು ಅಥವಾ ನೀನು ನಾಶವಾಗಬೇಕು. ಆದರೆ ಯುದ್ಧದಿಂದ ನೀನು ಹಿಂಜರಿಯಬಾರದು. ಎರಡರಲ್ಲಿಯೂ ನಿನಗೇ ಒಳಿತೇ ಇದೆ ಎಂದು ಬೋಧಿಸುತ್ತಾನೆ.
ಈ ವಚನದ ಆಧಾರದಲ್ಲಿ ಭಗವದ್ಗೀತೆಯು ಸ್ವಂತ ದಾಯಾದಿಗಳನ್ನೇ ಕೊಲ್ಲಲು ಆದೇಶಿಸುತ್ತದೆ ಎಂದು ಹೇಳಲಾದೀತೇ? ಖಂಡಿತವಾಗಿಯೂ ಸಾಧ್ಯವಿಲ್ಲ. ಏಕೆಂದರೆ ಈ ವಚನದ ಹಿನ್ನೆಲೆ ಯುದ್ಧಭೂಮಿಯಾಗಿದೆ.
ಋಗ್ವೇದದ ಒಂದನೇ ಮಂಡಲ, 132ನೇ ಸೂಕ್ತದ 2ರಿಂದ 6ರವರೆಗಿನ ಋಕ್ಕುಗಳು ಯುದ್ಧ ಮಾಡುವುದನ್ನು ಹುರಿದುಂಬಿಸುತ್ತವೆ. ಉದಾಹರಣೆಗೆ ಅದರ ನಾಲ್ಕನೇ ಋಕ್ಕಿನ ಒಂದು ಭಾಗವನ್ನು ನೋಡಿರಿ:
ಓ ಇಂದ್ರದೇವ, ಯಜ್ಞಾದಿ ಶ್ರೇಷ್ಠ ಕರ್ಮಗಳನ್ನು ಮಾಡುವವರ ಹಿತಕ್ಕೋಸ್ಕರ ನೀನು ಯಜ್ಞವಿರುದ್ಧರನ್ನು ಮತ್ತು ಕ್ರೋಧಯುಕ್ತ ಪಾಪಿಗಳನ್ನು ನಾಶಗೊಳಿಸು.
ಋಗ್ವೇದದ ಈ ವಚನವು ಯಜ್ಞವಿರೋಧಿಗಳನ್ನು ಸಾರ್ವತ್ರಿಕವಾಗಿ ಕೊಲ್ಲಲು ಆದೇಶಿಸುತ್ತದೆ ಎಂದು ಇದರ ಆಧಾರದಲ್ಲಿ ಹೇಳಲು ಸಾಧ್ಯವೇ? ಖಂಡಿತ ಸಾಧ್ಯವಿಲ್ಲ!
ಇದೇ ರೀತಿ ಕುರ್‌ಆನಿನಲ್ಲಿರುವ ವಚನಗಳು ಕೂಡಾ ಯುದ್ಧದ ಹಿನ್ನೆಲೆಯಲ್ಲಿ ಅವತೀರ್ಣಗೊಂಡ ವಚನಗಳಾಗಿವೆ. ಮುಸ್ಲಿಮೇತರರನ್ನು ಸದಾ ಕೊಲ್ಲುತ್ತಿರಬೇಕು ಎಂಬ ಆಶಯವನ್ನು ಈ ವಚನಗಳು ಸಾರುವುದಿಲ್ಲ.
ಇನ್ನು ಮುಸ್ಲಿಮ್ ಭಯೋತ್ಪಾದಕರು ಕುರ್‌ಆನಿನ ಆಧಾರದಿಂದಲೇ ಮುಸ್ಲಿಮೇತರರನ್ನು ಕೊಲ್ಲುತ್ತಿರುವರು ಎಂದು ವಾದಿಸುತ್ತಿರುವವರು ಪ್ರಾರ್ಥನಾ ನಿರತ ಮುಸ್ಲಿಮರ ಮೇಲೆ ಬಾಂಬ್ ಎಸೆದು ಕೊಲ್ಲಲು ಅದೇ ಭಯೋತ್ಪಾದಕರಿಗೆ ಯಾವ ಸೂಕ್ತಿಗಳು ಪ್ರೇರಣೆ ನೀಡಿದವು ಎಂಬುದನ್ನು ಕೂಡಾ ಸ್ಪಷ್ಟಪಡಿಸಿಕೊಡಬೇಕು.
ಸಂಕ್ಷಿಪ್ತವಾಗಿ ಹೇಳುವುದಾದರೆ ಕುರ್‌ಆನ್‌ನಲ್ಲಿ ವಧಾಸೂಕ್ತಿಗಳನ್ನು ವ್ಯಾಖ್ಯಾನಿಸುವಾಗ ಅವುಗಳ ಅವತೀರ್ಣ ಹಿನ್ನೆಲೆಗಳನ್ನು ಅರಿತುಕೊಂಡಿರುವುದು ಕಡ್ಡಾಯವಾಗಿದೆ. ಯಾಕೆಂದರೆ ಕುರ್‌ಆನ್‌ನ ಎಲ್ಲ ವಚನಗಳೂ ಎಲ್ಲ ಸಂದರ್ಭಗಳಲ್ಲೂ ಒಂದೇ ರೀತಿಯಾಗಿ ಅನ್ವಯಿಸುತ್ತದೆ ಎಂದು ಜಗತ್ತಿನ ಒಬ್ಬನೇ ಒಬ್ಬ ಕುರ್‌ಆನ್ ವ್ಯಾಖ್ಯಾನಕಾರನು ಹೇಳಿಲ್ಲ. ಇನ್ನು ಮುಸ್ಲಿಮರ ಪೈಕಿ ಕೆಲವರು ತಮ್ಮ ಸ್ವಾರ್ಥ ಹಿತಾಸಕ್ತಿಗಳಿಗಾಗಿ ಈ ಸೂಕ್ತಿಗಳನ್ನು ದುರುಪಯೋಗಪಡಿಸಿಕೊಂಡರೆ ಅದಕ್ಕೆ ಕುರ್‌ಆನ್ ಹೊಣೆಯಾಗಲಾರದು. ಇಸ್ಲಾಮಿನ ಹೆಸರಿನಲ್ಲಿ ಇಂದು ಕೆಲವರು ನಡೆಸುತ್ತಿರುವ ಭಯೋತ್ಪಾದನೆಯನ್ನು ಮುಸ್ಲಿಮ್ ವಿದ್ವಾಂಸರೆಲ್ಲರೂ ಒಕ್ಕೊರಳಿನಿಂದ ಖಂಡಿಸಿದ್ದಾರೆ.


ಕೃಪೆ: ಸತ್ಯ ಸಾರಥಿ 2011

ಜಿಹಾದ್ ಎಂದರೆ ಧರ್ಮಯುದ್ಧವೇ?


ಜಿಹಾದ್ ಎಂಬ ಪದದ ನೇರವಾದ ಅರ್ಥವು (direct meaning) ಧರ್ಮಯುದ್ಧವಾಗಿದೆಯೆಂದು ಬಹುತೇಕ ಮಂದಿಯೂ ತಪ್ಪುಕಲ್ಪನೆಯನ್ನಿಟ್ಟುಕೊಂಡಿದ್ದಾರೆ. ಇದಕ್ಕಿರುವ ಮುಖ್ಯ ಕಾರಣವು ಪಾಶ್ಚಾತ್ಯರ ಅಂಧಾನುಕರಣೆಯಾಗಿದೆ.

ಉದಾಹರಣೆಗೆ ‘Oxford University Press’ ಪ್ರಕಟಿಸಿದ ‘Oxford Advanced Learner’s Dictionary’ಯಲ್ಲಿ ಜಿಹಾದ್ (Jihad) ಎಂಬ ಪದಕ್ಕೆ ನೀಡಿದ ಅರ್ಥವನ್ನು ಈ ರೀತಿ ಕಾಣಬಹುದು:

“holy war fought by Muslims against those who reject Islam”

ಇಸ್ಲಾಮನ್ನು ತಿರಸ್ಕರಿಸುವವರ ವಿರುದ್ಧ ಮುಸ್ಲಿಮರು ಹೋರಾಡುವ ಪವಿತ್ರ ಯುದ್ಧ. (ಪುಟ 673)

ಪಾಶ್ಚಾತ್ಯರ ವಿಚಾರಧಾರೆಗಳನ್ನು ಹಾಗೆಯೇ ಭಟ್ಟಿಯಿಳಿಸಿಕೊಳ್ಳುವ ನಮ್ಮವರು ಜಿಹಾದ್‌ನ ವಿಷಯದಲ್ಲಿ ಕೂಡ ಅವರನ್ನು ಅಂಧವಾಗಿ ಅನುಕರಿಸಿದ್ದಾರೆ. ಗದಗದ ಸಂಕೇಶ್ವರ ಪ್ರಿಂಟರ‍್ಸ್ ಪ್ರಕಟಿಸಿದ ಇಂಗ್ಲಿಷ್-ಕನ್ನಡ ಸ್ಟ್ಯಾಂಡರ್ಡ್ ಡಿಕ್ಷನರಿಯಲ್ಲಿ ಇದೇ ರೀತಿಯ ಅರ್ಥ ನೀಡಿರುವುದನ್ನು ಕಾಣಬಹುದು:

ಕಾಫಿರರ ವಿರುದ್ಧ ಮುಸಲ್ಮಾನರ ಧರ್ಮಯುದ್ಧ; ಒಂದು ಮತಸಿದ್ಧಾಂತದ ಪರ ಅಥವಾ ವಿರುದ್ಧ ಹೂಡುವ ಧರ್ಮಯುದ್ಧ. (ಪುಟ 445)

ವಾಸ್ತವಿಕವಾಗಿ ಜಗತ್ತಿನ ಮುಂದೆ ಇಸ್ಲಾಮನ್ನು ಕರುಣೆಯಿಲ್ಲದ, ಬರ್ಬರ, ಕಿರಾತಕ ಧರ್ಮವೆಂದು ಬಿಂಬಿಸಲು ಹೆಣಗಾಡುವ ಪಾಶ್ಚಾತ್ಯರ ಒಂದು ತಂತ್ರ ಮಾತ್ರವಾಗಿದೆ ಇದು.

ಮಧ್ಯಯುಗದ ಕಾಲದಲ್ಲಿ ಮುಸ್ಲಿಮರ ಮತ್ತು ಯಹೂದಿಗಳ ವಿರುದ್ಧ ದಂಡೆತ್ತಿ ಬಂದ ಕ್ರಿಶ್ಚಿಯನ್ ಸಾಮ್ರಾಟರು ತಮ್ಮ ಆ ಹೋರಾಟವನ್ನು ಅಂದು ಧರ್ಮಯುದ್ಧವೆಂದು ಕರೆದಿದ್ದರು. ಸಲಾಹುದ್ದೀನ್ ಅಯ್ಯೂಬಿಯ ನಾಯಕತ್ವದಲ್ಲಿ ಮುಸ್ಲಿಮ್ ಸೇನೆಯು ಅವರನ್ನು ಹಿಮ್ಮೆಟ್ಟಿಸುವವರೆಗೆ ವರ್ಷಗಳ ಕಾಲ ಅವರು ಲಕ್ಷಾಂತರ ಜನರ ಮಾರಣಹೋಮ ನಡೆಸಿದರು. ಇದು ತದನಂತರ ‘Christian Crusades’ ಅಥವಾ ಶಿಲುಬೆಯುದ್ಧಗಳು ಎಂಬ ಹೆಸರಿನಲ್ಲಿ ಪ್ರಖ್ಯಾತವಾಯಿತು.

ಆದರೆ ಧರ್ಮದ ಹೆಸರಿನಲ್ಲಿ ತಮ್ಮ ಪೂರ್ವಿಕರು ನಡೆಸಿದ ಬರ್ಬರ ಹತ್ಯಾ ಕಾಂಡವನ್ನು ತಂತ್ರಪೂರ್ವಕವಾಗಿ ಮರೆಮಾಚುತ್ತಿರುವ ಪಾಶ್ಚಾತ್ಯರು ‘Crusade’ ಎಂಬ ಪದಕ್ಕೆ ಅದೇ ಡಿಕ್ಷನರಿಯಲ್ಲಿ ನೀಡಿದ ಅರ್ಥವನ್ನು ಗಮನಿಸಿ:

“anyone of the military expeditions by the European Christian countries to recover the Holy Land from the Muslims in the Middle Ages”

ಮಧ್ಯಯುಗದ ಕಾಲದಲ್ಲಿ ಪವಿತ್ರ ಭೂಮಿಯನ್ನು ಮುಸ್ಲಿಮರಿಂದ ಮರಳಿ ಪಡೆಯುವುದಕ್ಕಾಗಿ ಐರೋಪ್ಯ ಕ್ರೈಸ್ತ ರಾಷ್ಟ್ರಗಳಿಂದ ನಡೆಸಲ್ಪಟ್ಟ ಯಾವುದಾದರೊಂದು ಸೈನಿಕ ದಂಡೆಯಾತ್ರೆ. (ಪುಟ 288)

ಹೇಗಿದೆ ನೋಡಿ!! ನಿಷ್ಪಕ್ಷವಾಗಿ ಚಿಂತಿಸುವ ಓರ್ವ ವ್ಯಕ್ತಿಗೆ ಪಾಶ್ಚಾತ್ಯರ ಈ ಕುಟಿಲತೆಯು ಸುಲಭವಾಗಿ ಮನದಟ್ಟಾಗಬಹುದು. ಜಿಹಾದ್ ಮತ್ತು ಕ್ರುಸೇಡ್ ಗಳ ಮಧ್ಯೆ ಪಾಶ್ಚಾತ್ಯರು ತೋರಿಸುವ ಸ್ಪಷ್ಟವಾದ ಅಂತರ ಮತ್ತು ಪದಕಸರತ್ತುಗಳಿಂದ ತಮ್ಮ ಧರ್ಮವನ್ನು ಅವರು ಸಂರಕ್ಷಿಸುವ ಶೈಲಿಯು ಅದ್ವಿತೀಯವಾಗಿದೆ. ಜಿಹಾದನ್ನು ಅತಿ ಕ್ರೂರವಾಗಿ ವರ್ಣಿಸುವ ಅವರು ಕ್ರುಸೇಡನ್ನು ಅದು ಏನೂ ಅಲ್ಲವೆಂಬಂತೆ ಚಿತ್ರಿಸಿದ್ದಾರೆ!

ವಾಸ್ತವಿಕವಾಗಿ ಪಾಶ್ಚಾತ್ಯರು ಹೇಳುವಂತಹ ಅರ್ಥವಾಗಿದೆಯೇ ಜಿಹಾದ್ ಎಂಬ ಪದಕ್ಕಿರುವುದು? ಅಲ್ಲವೆಂದಾದರೆ ಜಿಹಾದ್ ಎಂಬ ಪದದ ನಿಜವಾದ ಅರ್ಥೆವೇನು?

ಜಿಹಾದ್ ಎಂಬುದು ಜಾಹದ ಎಂಬ ಕ್ರಿಯಾಪದದ ಕ್ರಿಯಾಧಾತುವಾಗಿದೆ. ಕ್ರೈಸ್ತರೇ ಸ್ವತಃ ಬರೆದು ಪ್ರಕಟಿಸಿದ ಅಲ್‌ಮುನ್ಜಿದ್ ಎಂಬ ಅರಬಿ ಡಿಕ್ಷನರಿಯಲ್ಲಿ ಇದಕ್ಕೆ ನೀಡಿದ ಅರ್ಥವು ಹೀಗಿದೆ:

جَاهَدَ مُجَاهَدَةً وَجِهَادًا : بَذَلَ وُسْعَهُ . وَمِنَ الْقُرْآنِ :  وَجَاهِدُوا فِي اللهِ حَقَّ جِهَادِهِ  || وَ – الْعَدُوَّ : قَاتَلَهُ مُحَامَاةً عَنِ الدِّينِ . وَالْأَصْلُ بَذَلَ كُلٌّ مِنْهُمَا جُهْدَهُ فِي دَفْعِ صَاحِبِهِ

ಜಾಹದ: ಇದರ ಕ್ರಿಯಾಧಾತುಗಳಾಗಿವೆ ಮುಜಾಹದತ್ ಮತ್ತು ಜಿಹಾದ್. ಇದರ ಅರ್ಥ: ಒರ್ವನು ತನ್ನ ಶ್ರಮವನ್ನು ವ್ಯಯಿಸಿದನು ಎಂದಾಗಿದೆ. ಕುರ್‌ಆನ್‌ನಲ್ಲಿ ಹೀಗಿದೆ: ಅಲ್ಲಾಹನಿಗಾಗಿ ಜಿಹಾದ್ ಮಾಡಬೇಕಾದ ರೀತಿಯಲ್ಲಿ ಜಿಹಾದ್ ಮಾಡಿರಿ (22/77). ಜಾಹದಲ್ ಅದುವ್ವ (ಅವನು ಶತ್ರುವಿನ ವಿರುದ್ಧ ಜಿಹಾದ್ ಮಾಡಿದನು) ಎಂದರೆ: ಧರ್ಮವನ್ನು ಸಂರಕ್ಷಿಸುವುದಕ್ಕಾಗಿ ಶತ್ರುವಿನ ವಿರುದ್ಧ ಹೋರಾಡಿದನು ಎಂದಾಗಿದೆ. ಇದರ ಮೂಲವು (ಶತ್ರುಗಳ ವಿರುದ್ಧ ಜಿಹಾದ್ ಮಾಡುವುದರ ಮೂಲವು) ಇಬ್ಬರು ವ್ಯಕ್ತಿಗಳು ಪರಸ್ಪರ ರಕ್ಷಣೆಗಾಗಿ ತಮ್ಮ ಶ್ರಮವನ್ನು ವ್ಯಯಿಸಿದರು ಎಂಬುದರಿಂದ ಬಂದುದಾಗಿದೆ. (ಪುಟ 106)

ಅರೇಬಿಕ್-ಇಂಗ್ಲಿಷ್ ಡಿಕ್ಷನರಿಗಳಲ್ಲಿ ಶ್ರೇಷ್ಠ ಸ್ಥಾನವನ್ನು ಪಡೆದಿರುವ, ಎಂಟು ಭಾಗಗಳಲ್ಲಿ ಪ್ರಕಟಿಸಲ್ಪಟ್ಟಿರುವ ಬೃಹತ್ ಡಿಕ್ಷನರಿಯಾಗಿರುವ ‘Arabic English Lexicon’ನಲ್ಲಿ ಅದರ ಸಂಪಾದಕರಾದ ಎಡ್ವರ್ಡ್ ವಿಲಿಯಂ ಲೇನ್ (Edward William Lane) ಜಿಹಾದ್ ಎಂಬ ಪದದ ನೈಜ ಅರ್ಥವನ್ನು ವಿವರಿಸುವುದನ್ನು ನೋಡಿರಿ:

 “ جِهَادٌ inf. n. of جَاهَدَ , properly signifies The using, or exerting, one’s utmost power, efforts, endeavours, or ability, in contending with an object of disapprobation; and this is of three kinds, namely, a visible enemy, the devil, and one’s self; all of which are included in the term as used in the Kuran xxii. 77.

You say, جَاهَدَ الْعَدُوَّ inf. n. as above and مُجَاهَدَةً He fought with the enemy or he encountered the enemy, imposing upon himself difficulty or distress or fatigue, or exerting his power or efforts or endeavours or ability, [or the utmost thereof,] to repel him, his enemy doing the like: and hence جَاهَدَ came to be used by the Muslims to signify generally he fought, warred, or waged war, against unbelievers and the like. You say also, جَاهَدَ فِي سَبِيلِ اللهِ , inf. n. جِهَادٌ and مُجَاهَدَةٌ ,  [He fought, &c., in the way of God; i e., in the cause of religion.] ”

ಜಿಹಾದ್ ಎಂಬುದು ಜಾಹದ ಎಂಬುದರ ಕ್ರಿಯಾಧಾತುವಾಗಿದೆ. ಇದರ ಸರಿಯಾದ ಅರ್ಥವು: ಓರ್ವನು ತನ್ನ ಪರಮವಾದ ಬಲವನ್ನು, ಶ್ರಮವನ್ನು, ಪ್ರಯತ್ನವನ್ನು ಮತ್ತು ಸಾಮರ್ಥ್ಯವನ್ನು ಅನಿಷ್ಟಕರವಾದ ವಸ್ತುವಿನ ವಿರುದ್ಧ ಹೋರಾಡುವುದಕ್ಕಾಗಿ ಬಳಸುವುದು ಅಥವಾ ಪ್ರಯೋಗಿಸುವುದು ಎಂದಾಗಿದೆ. ಈ ಅನಿಷ್ಟಕರವಾದ ವಸ್ತು ಮೂರು ವಿಧಗಳಾಗಿವೆ: ಪ್ರತ್ಯಕ್ಷ ಶತ್ರು, ಪಿಶಾಚಿ ಅಥವಾ ಸ್ವಂತ ಶರೀರ. ಕುರ್‌ಆನ್‌ನ 22/77 ವಚನದಲ್ಲಿ ಬಳಸಿರುವಂತೆ ಇವೆಲ್ಲವೂ ಜಿಹಾದ್ ಎಂಬ ಪದದಲ್ಲಿ ಒಳಪಡುತ್ತವೆ.

ಜಾಹದಲ್ ಅದುವ್ವ (ಅವನು ಶತ್ರುವಿನ ವಿರುದ್ಧ ಜಿಹಾದ್ ಮಾಡಿದನು) ಎಂದರೆ ಅದರ ಅರ್ಥವು: ಅವನು ತನ್ನ ಶರೀರದ ಮೇಲೆ ಕಷ್ಟ, ಯಾತನೆ ಅಥವಾ ಆಯಾಸವನ್ನು ಹೊರಿಸಿ, ಅಥವಾ ತನ್ನ ಬಲ, ಶ್ರಮ, ಪ್ರಯತ್ನ ಮತ್ತು ಸಾಮರ್ಥ್ಯವನ್ನು [ಅಥವಾ ಅವುಗಳ ಪಾರಮ್ಯವನ್ನು] ಪ್ರಯೋಗಿಸಿ, ತನ್ನ ಶತ್ರು ಕೂಡ ಇದೇ ರೀತಿ ತನ್ನ ವಿರುದ್ಧ ಪ್ರಯೋಗಿಸದಿರಲೆಂದು, ಅವನನ್ನು ಹಿಮ್ಮೆಟ್ಟಿಸುವುದಕ್ಕಾಗಿ ಅವನ ವಿರುದ್ಧ ಹೋರಾಡಿದನು ಎಂದಾಗಿದೆ. ಜಿಹಾದ್ ಎಂಬ ಪದಕ್ಕೆ ಈ ಅರ್ಥವಿರುವುದರಿಂದಾಗಿದೆ ಸಾಮಾನ್ಯವಾಗಿ ಅವನು ಅವಿಶ್ವಾಸಿಗಳ ಮತ್ತು ಅವರಂತಿರುವವರ ವಿರುದ್ಧ ಯುದ್ಧ ಮಾಡಿದನು, ಹೋರಾಡಿದನು ಎಂಬುದನ್ನು ಸೂಚಿಸಲು ಮುಸ್ಲಿಮರು ಈ ಪದವನ್ನು ಬಳಸುತ್ತಿರುವುದು. ಜಾಹದ ಫೀ ಸಬೀಲಿಲ್ಲಾಹ್ ಎಂದರೆ ಅದರ ಅರ್ಥವು: ಅವನು ದೇವನ ಮಾರ್ಗದಲ್ಲಿ ಅರ್ಥಾತ್ ಧರ್ಮದ ನಿಮಿತ್ತ ಹೋರಾಡಿದನು ಎಂದಾಗಿದೆ. (2/473)

ಇಸ್ಲಾಮನ್ನು ತಿರಸ್ಕರಿಸುವವರ (ಮುಸ್ಲಿಮೇತರರ) ವಿರುದ್ಧ ಮಾಡುವ ಪವಿತ್ರ ಯುದ್ಧವಾಗಿದೆ ಜಿಹಾದ್ ಎಂದು ಬರೆದ ಪಾಶ್ಚಾತ್ಯರು ಮತ್ತು ಜಿಹಾದ್ ಎಂಬ ಪದಕ್ಕಿರುವ ನೈಜವಾದ ಅರ್ಥವನ್ನು ಬರೆದ ಅರಬ್ ಕ್ರೈಸ್ತರ ಮಧ್ಯೆಯಿರುವ ಅಗಾಧ ವ್ಯತ್ಯಾಸವನ್ನು ಮತ್ತು ಪರಿಜ್ಞಾನವನ್ನು ಇದರಿಂದ ಕಂಡುಕೊಳ್ಳಬಹುದಾಗಿದೆ.

ಆದ್ದರಿಂದ ಅರಬಿ ಭಾಷೆಯಲ್ಲಿ ಜಿಹಾದ್ ಎಂಬುದರ ಅರ್ಥವು ಪರಿಶ್ರಮಿಸುವುದು, ಕಷ್ಟಪಟ್ಟು ಮಾಡುವುದು, ಕಠಿಣವಾಗಿ ಪ್ರಯತ್ನಿಸುವುದು ಎಂದಾಗಿದೆ. ಅಧಿಕ ಶ್ರಮವಿರುವ ಕೆಲಸವನ್ನು ಅರಬಿಯಲ್ಲಿ ಜುಹ್ದ್ ಎನ್ನಲಾಗುತ್ತದೆ. ಇಂಗ್ಲಿಷ್‌ನಲ್ಲಿ hardwork ಎನ್ನಲಾಗುವಂತೆ. ಅರಬಿಯಲ್ಲಿ ಜಿಹಾದ್ ಎಂಬ ಪದಕ್ಕೆ ಧರ್ಮಯುದ್ಧ ಅಥವಾ ಪವಿತ್ರಯುದ್ಧ (holy war) ಎಂಬ ಅರ್ಥವು ಇಲ್ಲವೇ ಇಲ್ಲ. ಇದು ತಮ್ಮ ಕ್ರುಸೇಡನ್ನು ನ್ಯಾಯೀಕರಿಸುವುದಕ್ಕಾಗಿ ಪಾಶ್ಚಾತ್ಯರು ಆವಿಷ್ಕರಿಸಿದ ನವೀನ ಅರ್ಥವಾಗಿದೆ. ಪವಿತ್ರ ಯುದ್ಧವನ್ನು ಅರಬಿಯಲ್ಲಿ ಹರ್ಬುನ್ ಮುಕದ್ದಸತುನ್ ಎನ್ನಲಾಗುತ್ತದೆ.

ಎಲಿಯಾಸ್ ಅಂತೋನಿ ಮತ್ತು ಎಡ್ವರ್ಡ್ ಎಲಿಯಾಸ್ ಬರೆದ ‘The School Dictionary’ ಎಂಬ ಇಂಗ್ಲಿಷ್-ಅರೇಬಿಕ್ ಡಿಕ್ಷನರಿಯಲ್ಲಿ crusade ಎಂಬ ಪದಕ್ಕೆ ನೀಡಿದ ಅರ್ಥವನ್ನು ಗಮನಿಸಿ:

حَرْبٌ صَلِيبِيَّةٌ

ಶಿಲುಬೆಯುದ್ಧ (ಪುಟ 70):
ಶಿಲುಬೆಯನ್ನು ಮುಂದಿಟ್ಟುಕೊಂಡು ಯುದ್ಧಮಾಡಿದ ಮಧ್ಯಯುಗದ ಕ್ರೈಸ್ತರ ಕ್ರುಸೇಡ್ ಪವಿತ್ರ ಭೂಮಿಯನ್ನು ಮುಸ್ಲಿಮರಿಂದ ಮರಳಿ ಪಡೆಯುವುದಕ್ಕಾಗಿರುವ ಹೋರಾಟವೆಂದು ಸಬೂಬು ನೀಡುವ ಪಾಶ್ಚಾತ್ಯರು ಜಿಹಾದ್ ಎಂಬ ಪದಕ್ಕೆ ಅದರ ನೈಜವಾದ ಅರ್ಥವನ್ನು ಯಾಕೆ ಹೇಳುವುದಿಲ್ಲ? ನಾವು ನಿಷ್ಪಕ್ಷವಾಗಿ ಚಿಂತಿಸಬೇಕಾಗಿದೆ.

ವಾಸ್ತವಿಕವಾಗಿ ಇಸ್ಲಾಮೀ ಪ್ರಮಾಣಗಳಲ್ಲಿ ಜಿಹಾದ್ ಎಂಬ ಪದವನ್ನು ಧಾರಾಳವಾಗಿ ಬಳಸಲಾಗಿದೆ. ಪರಿಶ್ರಮಿಸುವುದು, ಕಷ್ಟಪಡುವುದು, ಸ್ವೇಚ್ಛೆಯನ್ನು ಮೆಟ್ಟಿನಿಲ್ಲುವುದು, ಆಪತ್ಕರ ಘಟ್ಟಗಳಲ್ಲಿ ಸತ್ಯವನ್ನು ನುಡಿಯುವುದು, ಮಾತಾಪಿತರ ಸೇವೆಗೈಯುವುದು ಮುಂತಾದ ಅನೇಕ ಕಾರ್ಯಗಳನ್ನು ಇಸ್ಲಾಮ್ ಜಿಹಾದ್ ಎಂದೇ ಬಣ್ಣಿಸುತ್ತದೆ. ಅದೇ ರೀತಿ ಧರ್ಮ ಸಂರಕ್ಷಣೆಗಾಗಿ ಲೇಖನಿಯ ಮೂಲಕ, ನಾಲಗೆಯ ಮೂಲಕ ನಡೆಸುವ ಹೋರಾಟವನ್ನು ಮತ್ತು ಅನಿವಾರ್ಯ ಸಂದರ್ಭಗಳಲ್ಲಿರುವ ಸಶಸ್ತ್ರ ಹೋರಾಟವನ್ನು ಕೂಡ ಜಿಹಾದ್ ಎಂದೇ ಕರೆಯುತ್ತದೆ. ನಾವೀಗಾಗಲೇ ಕಂಡುಕೊಂಡಂತೆ ಸಶಸ್ತ್ರ ಹೋರಾಟವೆಂಬುದು ಜಿಹಾದ್ ಎಂಬ ಪದಕ್ಕಿರುವ ಅನೇಕ ಅರ್ಥಗಳಲ್ಲಿ ಒಂದು ಮಾತ್ರವಾಗಿದೆಯೇ ಹೊರತು ಅದರ ನೇರವಾದ ಅರ್ಥ (direct meaning) ಅಲ್ಲ.

ಪ್ರವಾದಿ(ಸ)ರವರು ಹೇಳಿದರು:
ಓರ್ವ ವ್ಯಕ್ತಿ ತನ್ನ ಶರೀರ ಮತ್ತು ಸ್ವೇಚ್ಛೆಯ ವಿರುದ್ಧ ಹೋರಾಡುವುದಾಗಿದೆ ಅತಿಶ್ರೇಷ್ಠ ಜಿಹಾದ್. (ಸಹೀಹುಲ್ ಜಾಮಿಅ ಹದೀಸ್ ನಂ. 1099)

ಪ್ರವಾದಿ(ಸ)ರವರು ಹೇಳಿದರು:
ಅಕ್ರಮಿಯಾದ ರಾಜನ ಮುಂದೆ ಸತ್ಯ ಮಾತನ್ನು ಹೇಳುವುದಾಗಿದೆ ಅತಿಶ್ರೇಷ್ಠ ಜಿಹಾದ್. (ಸಹೀಹುಲ್ ಜಾಮಿಅ ಹದೀಸ್ ನಂ. 1100)

ಅದೇ ರೀತಿ ಪ್ರವಾದಿ(ಸ)ರವರು ಹೇಳಿದರು:
ಸ್ವೀಕಾರ‍್ಯಯೋಗ್ಯವಾದ ರೀತಿಯಲ್ಲಿ ಹಜ್ ನಿರ್ವಹಿಸುವುದಾಗಿದೆ ಅತಿಶ್ರೇಷ್ಠ ಜಿಹಾದ್. (ಸಹೀಹುಲ್ ಬುಖಾರಿ ಹದೀಸ್ ನಂ. 1448)

ಇವು ಕೇವಲ ಕೆಲವು ಉದಾಹರಣೆಗಳು ಮಾತ್ರವಾಗಿವೆ. ಈ ಮೇಲಿನ ಹದೀಸ್ ಗಳಲ್ಲಿ ಜಿಹಾದ್ ಎಂದರೆ ಏನೆಂದು ಪ್ರವಾದಿ(ಸ)ರವರು ಸ್ವತಃ ವಿವರಿಸಿದ್ದಾರೆ. ಅರ್ಥಾತ್ ಇಲ್ಲಿ ಉದಾಹರಣೆಯಾಗಿ ನೀಡಲಾದ ಮೂರು ರೀತಿಯ ಜಿಹಾದ್‌ಗಳನ್ನು ಮಾಡಬೇಕಾದರೆ ಓರ್ವನು ತನ್ನ ಪರಮವಾದ ಬಲವನ್ನು, ಧೈರ್ಯವನ್ನು ಮತ್ತು ಪರಿಶ್ರಮವನ್ನು ಬಳಸಿ ತನ್ನ ಶರೀರದ ವಿರುದ್ಧ, ತನ್ನ ಶತ್ರುವಿನ ವಿರುದ್ಧ ಮತ್ತು ಪಿಶಾಚಿಯ ದುರ್ಬೋಧನೆಗಳ ವಿರುದ್ಧ ಹೋರಾಡಬೇಕಾಗಿದೆ. ಇದರ ಹೊರತು ಮುಸ್ಲಿಮೇತರರನ್ನು ಕೊಲ್ಲುವುದಾಗಿದೆ ಜಿಹಾದ್ ಎಂದು ಅಲ್ಲಾಹನಾಗಲಿ ಪ್ರವಾದಿ(ಸ)ರವರಾಗಲಿ ಎಲ್ಲೂ ಹೇಳಿಲ್ಲ.

ಅನಿವಾರ್ಯ ಸಂದರ್ಭಗಳಲ್ಲಿರುವ ಸಶಸ್ತ್ರ ಹೋರಾಟವನ್ನು ಇಸ್ಲಾಮ್ ಜಿಹಾದ್ ಎಂದು ಕರೆದಿದ್ದರೂ ಕೂಡ ಅದು ಮಾತ್ರವಾಗಿದೆ ಜಿಹಾದ್ ಎಂದು ಹೇಳಿಲ್ಲ. ಉದಾಹರಣೆಗೆ ಒಮ್ಮೆ ಪ್ರವಾದಿ(ಸ)ರವರು ಯುದ್ಧಕ್ಕಾಗಿ ಸೈನ್ಯ ಜಮಾವಣೆ ಮಾಡುತ್ತಿದ್ದಾಗ ಓರ್ವ ವ್ಯಕ್ತಿ ಬಂದು ನಾನು ತಮ್ಮೊಂದಿಗೆ ಜಿಹಾದ್‌ನಲ್ಲಿ ಪಾಲ್ಗೊಳ್ಳಲು ಇಚ್ಚಿಸುತ್ತೇನೆ ಎನ್ನುತ್ತಾರೆ. ಆಗ ಪ್ರವಾದಿ(ಸ)ರವರು ಆ ವ್ಯಕ್ತಿಯೊಂದಿಗೆ ನಿನ್ನ ಮಾತಾಪಿತರು ಬದುಕಿದ್ದಾರೆಯೇ ಎಂದು ಕೇಳುತ್ತಾರೆ. ಆ ವ್ಯಕ್ತಿ ಹೌದೆನ್ನುತ್ತಾರೆ. ಆಗ ಪ್ರವಾದಿ(ಸ)ರವರು ಹೇಳುತ್ತಾರೆ:

ಹಾಗಾದರೆ ನಿನ್ನ ಮಾತಾಪಿತರಲ್ಲಿ ನೀನು ಜಿಹಾದ್ ಮಾಡು. (ಸಹೀಹುಲ್ ಬುಖಾರಿ ಹದೀಸ್ ನಂ. 2842)

ಅರ್ಥಾತ್ ನೀನು ಪರಮವಾಗಿ ಪರಿಶ್ರಮಿಸಿ ನಿನ್ನ ವೃದ್ಧ ಮಾತಾಪಿತರ ಸೇವೆಗೈಯುವುತ್ತಾ ಬದುಕಿರುವುದಾಗಿದೆ ಸಶಸ್ತ್ರ ಹೋರಾಟ ಮಾಡಿ ಮಡಿಯುವುದಕ್ಕಿಂತಲೂ ನಿನಗಿರುವ ಶ್ರೇಷ್ಠವಾದ ಜಿಹಾದ್ ಎನ್ನುತ್ತಾ ಪ್ರವಾದಿ(ಸ)ರವರು ಆ ವ್ಯಕ್ತಿಯನ್ನು ಹಿಂದಕ್ಕೆ ಕಳುಹಿಸುತ್ತಾರೆ.

ಆದ್ದರಿಂದ ಸಂಕ್ಷಿಪ್ತವಾಗಿ ಹೇಳುವುದಾದರೆ ಓರ್ವ ವ್ಯಕ್ತಿಯು ತನ್ನ ಪರಮವಾದ ಪರಿಶ್ರಮವನ್ನು ಬಳಸಿ ಅಲ್ಲಾಹನ ತೃಪ್ತಿಯನ್ನು ಆಗ್ರಹಿಸುತ್ತಾ ಮಾಡುವ ಪ್ರತಿಯೊಂದು ಸತ್ಕರ್ಮವನ್ನೂ ಇಸ್ಲಾಮ್ ಜಿಹಾದ್ ಎಂದೇ ಕರೆದಿದೆ. ಕುರ್‌ಆನ್ ಹೇಳುತ್ತದೆ:

ನಮಗೋಸ್ಕರ (ಅಲ್ಲಾಹನಿಗೋಸ್ಕರ) ಜಿಹಾದ್ ಮಾಡುವವರನ್ನು ನಾವು ನಮ್ಮ ಮಾರ್ಗಗಳೆಡೆಗೆ ಖಂಡಿತವಾಗಿಯೂ ಮುನ್ನಡೆಸುವೆವು. ಖಂಡಿತವಾಗಿಯೂ ಅಲ್ಲಾಹು ಸತ್ಕರ್ಮ ಗೈಯುವವರ ಜೊತೆಗಿದ್ದಾನೆ. (29/69)

ಇಲ್ಲಿ ಅಲ್ಲಾಹನಿಗೋಸ್ಕರ ಜಿಹಾದ್ ಮಾಡುವುದು ಎಂದರೆ ಮುಸ್ಲಿಮೇತರರನ್ನು ಕೊಲ್ಲುವುದಾಗಲಿ, ಅವರ ವಿರುದ್ಧ ಧರ್ಮಯುದ್ಧವನ್ನು ಸಾರುವುದಾಗಲಿ ಅಲ್ಲ. ಬದಲಾಗಿ ಅಲ್ಲಾಹನ ತೃಪ್ತಿಯನ್ನು ಬಯಸುತ್ತಾ ಪರಮವಾಗಿ ಪರಿಶ್ರಮಿಸಿ ಸತ್ಕರ್ಮಗಳನ್ನು ಮಾಡುವುದಾಗಿದೆಯೆಂದು ಜಿಹಾದ್‌ಗೆ ಧರ್ಮಯುದ್ಧ ಅಥವಾ ಪವಿತ್ರಯುದ್ಧವೆಂದು ಅರ್ಥ ನೀಡುವವರು ಅರಿತುಕೊಳ್ಳಬೇಕು.

ಮುಖ ಎಂದು ಹೇಳುವಾಗ ಯಾವ ರೀತಿ ಅದು ಎರಡು ಕಣ್ಣುಗಳು, ಎರಡು ಕಿವಿಗಳು, ಮೂಗು, ಬಾಯಿ ಇತ್ಯಾದಿಗಳನ್ನು ಹೊಂದಿರುತ್ತದೆಯೋ ಮತ್ತು ಮುಖ ಎಂದರೆ ಅದು ಕೇವಲ ಮೂಗು ಎಂದು ಯಾವ ರೀತಿ ಅರ್ಥ ನೀಡಲು ಸಾಧ್ಯವಿಲ್ಲವೋ ಅದೇ ರೀತಿ ಅನಿವಾರ್ಯ ಸಂದರ್ಭಗಳಲ್ಲಿರುವ ಸಶಸ್ತ್ರ ಹೋರಾಟವು ಜಿಹಾದ್‌ನ ಒಂದು ಅಂಗವಾಗಿದ್ದರೂ ಕೂಡ ಜಿಹಾದ್ ಎಂದರೆ ಕೇವಲ ಸಶಸ್ತ್ರ ಹೋರಾಟವೆಂದು ಅರ್ಥ ನೀಡಲು ಸಾಧ್ಯವಿಲ್ಲ.

ಕೃಪೆ: ಸತ್ಯ ಸಾರಥಿ 2011

ಸೂರತ್ ಅಲ್ ಮಾಯಿದಾ 35 ನೇ ಸೂಕ್ತಿಯು ತವಸ್ಸುಲ್, ಇಸ್ತಿಗಾಸಕ್ಕೆ ಪುರಾವೆಯಾಗಿದೆಯೇ?

ಕೇರಳದಲ್ಲಿ ಸಮಸ್ತ ಎಂಬ ಹೆಸರಲ್ಲಿ ಕಾರ್ಯಾಚರಿಸುತ್ತಿರುವ ವ್ಯಾಜ್ಯ ಅಹ್ಲುಸ್ಸುನ್ನತ್'ನ ಸೂಫಿಗಳು ಹಾಗೂ ಬರೇಲ್ವಿಗಳು *ಅಲ್ ಮಾಇದಾ* ಸೂರಃದ ಈ *35 ನೇ ಸೂಕ್ತಿಯನ್ನು* ದುರ್ವ್ಯಾಖ್ಯಾನ ಗೊಳಿಸಿ ಇಲ್ಲಿ ಹೇಳಿರುವ ಸಮೀಪ ಮಾರ್ಗ ಮರಣಹೊಂದಿದ ಮಹಾ ಪುರುಷರಾಗಿದ್ದಾರೆ ಆದುದರಿಂದ ಅವರನ್ನು ಅಲ್ಲಾಹನೊಂದಿಗೆ
ಮಧ್ಯವರ್ತಿಯನ್ನಾಗಿಸಿ ಪ್ರಾರ್ಥಿಸಬಹುದು ಎಂದು ತಮ್ಮ ಕಬರ್ ಆರಾಧನಾ ಶಿರ್ಕನ್ನು ಸಮರ್ಥಿಸುತ್ತಾರೆ.

ಜಗತ್ಪ್ರಸಿದ್ಧ ತಫ್ಸೀರ್'ನ ವಿದ್ವಾಂಸರು ಈ ವಿಷಯದಲ್ಲಿ ಏನು ಅಭಿಪ್ರಾಯ ಪಟ್ಟಿದ್ದಾರೆ ಎಂದು ನೋಡೋಣ.

*1.ಇಮಾಮ್ ಇಬ್ನ್ ಕಸೀರ್ (رحمه الله) ಹೇಳುತ್ತಾರೆ;*

ಅಲ್ಲಾಹನು ಅವನ ಸತ್ಯವಿಶ್ವಾಸಿ ದಾಸರಲ್ಲಿ "ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವನ್ನು ಭಯಪಡಿರಿ" ಎಂದು ಆಜ್ಞಾಪಿಸುತ್ತಾನೆ. ಇದನ್ನು ವಿಧೇಯತೆಯ ಜೊತೆಗೂಡಿ ಹೇಳುವಾಗ, ಇದರ ಅರ್ಥ ಅಲ್ಲಾಹನು ಹರಾಂ(ನಿಷಿದ್ಧ) ಗೊಳಿಸಿದ ವಿಷಯಗಳಿಂದ ದೂರವಿರುವುದು ಎಂದಾಗುತ್ತದೆ. ನಂತರ ಅಲ್ಲಾಹನು ಹೇಳುತ್ತಾನೆ; "ಮತ್ತು ಅವನೆಡೆಗೆ ಸಮೀಪಗೊಳ್ಳಲಿರುವ ಮಾರ್ಗವನ್ನು ಹುಡುಕಿರಿ." "ಸುಫ್ಯಾನ್ ಅತ್ತವ್ರೀ" "ತಲಾಲಾ" ರವರಿಂದ ಕೇಳಿರುವುದಾಗಿ ಹೇಳುತ್ತಾರೆ ಅವರು "ಅತಾ" ಅವರಿಂದ ಅವರು "ಇಬ್ನ್ ಅಬ್ಬಾಸ್" (رضى الله عنه) ರವರಿಂದ ಕೇಳಿರುತ್ತಾರೆ; *ಇದರ ಅರ್ಥ "ಅಲ್ಲಾಹನಿಗೆ ಹತ್ತಿರವಾಗುದು."* ಎಂದಾಗಿದೆ. ಇದನ್ನು ಮುಜಾಹಿದ್, ಅಬೂ ವಾಯಿಲ್, ಅಲ್ ಹಸನ್, ಕತಾದ, ಅಬ್ದುಲ್ಲಾಹ್ ಇಬ್ನ್ ಕಸೀರ್, ಅಲ್ ಸದ್ದಿ , ಇಬ್ನ್ ಝಾಯಿದ್ (رحمه الله) ಮತ್ತಿತರರು ಕೂಡ ಹೇಳಿದ್ದಾರೆ. ಕತಾದ ಹೇಳುತ್ತಾರೆ; ಇದರ ಅರ್ಥ *"ಅನುಸರಣೆಯ ಮೂಲಕ ಅಲ್ಲಾಹನಿಗೆ ಹತ್ತಿರವಾಗುವುದು ಹಾಗೂ ಅವನು ಸಂತುಷ್ಠಗೊಳ್ಳುವ ಕರ್ಮವನ್ನು ಮಾಡುವುದು."*
ಇಬ್ನ್ ಝಾಯಿದ್ (رحمه الله)
ಅದರೊಟ್ಟಿಗೆ ಈ ಆಯತನ್ನು ಓದುತ್ತಾರೆ;

*"ಅವರು ಯಾರನ್ನು ಕರೆದು ಪ್ರಾರ್ಥಿಸುತ್ತಿರುವರೋ ಅವರು ಸ್ವತಃ ತಮ್ಮ ಪ್ರಭುವಿನೆಡೆಗೆ ಹತ್ತಿರವಾಗಲು ಮಾರ್ಗಗಳನ್ನು ಅರಸುತ್ತಿರುವರು."*

[ಅಲ್ ಇಸ್ರಾ - 17/57]

ಈ ವಿಷಯದಲ್ಲಿ ಈ ಇಮಾಮ್'ಗಳು ಹೇಳಿರುವುರ ಬಗ್ಗೆ ಮುಫಸ್ಸಿರೀನ್'ಗಳಲ್ಲಿ ಬೇರೆ ಬೇರೆ ಅಭಿಪ್ರಾಯಗಳಿಲ್ಲ.

ಸಮೀಪ ಮಾರ್ಗ ಅಥವಾ ಹಾದಿ ಎಂಬುದರ ಅರ್ಥ ಒಬ್ಬ ದಾಸನು ಆ ಮೂಲಕ ತನ್ನ ಗುರಿಯನ್ನು ತಲುಪುವುದು ಎಂದಾಗಿದೆ.

*[ತಫ್ಸೀರ್ ಇಬ್ನ್ ಕಸೀರ್ - 2/53, 54. 5/35 ರ ತಫ್ಸೀರ್'ನಲ್ಲಿ]*

*2. ತಫ್ಸೀರ್ ಜಲಾಲೈನಿ.*

ತಫ್ಸೀರ್ ಜಲಾಲೈನಿಯಲ್ಲಿ ಇದೇ ರೀತಿಯ ಅಭಿಪ್ರಾಯ ವ್ಯಕ್ತವಾಗಿದೆ; "ಓ ಸತ್ಯವಿಶ್ವಾಸಿಗಳೇ ಅಲ್ಲಾಹನನ್ನು ಭಯಪಡಿರಿ, ಅವನ ಶಿಕ್ಷೆಯನ್ನು ಭಯಪಡಿರಿ ಅವನ ಆಜ್ಞೆಗೆ ವಿಧೇಯನಾಗುವ ಮೂಲಕ. ಮತ್ತು "ಹುಡುಕಿರಿ" ಎಂಬುದರ ಅರ್ಥ ಆ ವಿಧೇಯತೆಯ ಮೂಲಕ ಅಲ್ಲಾಹನಿಗೆ ಹತ್ತಿರವಾಗುವುದಾಗಿದೆ. ಮತ್ತು ಅವನ ಮಾರ್ಗದಲ್ಲಿ ಹೋರಾಡಿರಿ. ಅವನ ಧರ್ಮವನ್ನು ಮೇಲೆತ್ತುವ ಸಲುವಾಗಿ. ಆ ಕಾರಣದಿಂದ ನೀವು ವಿಜಯಿಯಾಗುವಿರಿ.

*[ತಫ್ಸೀರ್ ಜಲಾಲೈನಿ - 5/35 ರ ತಫ್ಸೀರ್'ನಲ್ಲಿ]*

*3.ಇಮಾಮ್ ಫಕ್ರುದ್ಧೀನ್ ರಾಝಿ (رحمه الله) ಹೇಳುತ್ತಾರೆ;*

*(ಓ ಮುಸ್ಲಿಮರೇ) ಯಹೂದಿಗಳು ಯಾವ ರೀತಿ ಅವಿಧೇಯರಾಗಿ ಮತ್ತು ಪಾಪಗಳಿಂದಾಗಿ ವಿಧೇಯತೆಯಿಂದ ದೂರ ಸರಿದಿದ್ದಾರೆ ಎಂಬುದನ್ನು ತಾವು ನೋಡಿಲ್ಲವೇ. ಆದುದರಿಂದ ಅವರಿಗೆ ವಿರುದ್ಧವಾಗಿ ವರ್ತಿಸಿರಿ. ಅಲ್ಲಾಹನ ಆಜ್ಞೆಯನ್ನು ಉಲ್ಲಂಘಿಸುವ ವಿಷಯದಲ್ಲಿ ಎಚ್ಚರ ವಹಿಸಿರಿ. ಅವನ ಆಜ್ಞೆಗೆ ವಿಧೇಯರಾಗುವ ಮೂಲಕ ಅವನ ಸಾಮೀಪ್ಯವನ್ನು ಹುಡುಕಿರಿ.*

ಅಲ್ಲಾಹನು ಇಲ್ಲಿ ಯಹೂದಿ ಮತ್ತು ಕ್ರೈಸ್ತರು ಹೇಳಿದ್ದನ್ನು ಉಲ್ಲೇಖಿಸಿಯಾಗಿದೆ ಹೇಳಿರುವುದು.

*ಯಹೂದರು ಮತ್ತು ಕ್ರೈಸ್ತರು ಹೇಳಿದರು: ‘ನಾವು ಅಲ್ಲಾಹುವಿನ ಮಕ್ಕಳಾಗಿರುವೆವು ಮತ್ತು ಅವನಿಗೆ ಅತ್ಯಂತ ಪ್ರೀತಿಪಾತ್ರರಾಗಿರುವೆವು.’*

*[ಅಲ್ ಮಾಇದಾ - 18]*

*ಅರ್ಥಾತ್ ಯಹೂದಿ ಮತ್ತು ಕ್ರೈಸ್ತರು ನಾವು ಪ್ರವಾದಿಗಳ ಮಕ್ಕಳೆಂದೂ ಹಾಗೂ  ತಮ್ಮ ಪೂರ್ವಜರ ಬಗ್ಗೆ ಹೆಮ್ಮೆ ಆಚರಿಸುವವವರೂ ಆಗಿದ್ದಾರೆ. ನಂತರ ಅಲ್ಲಾಹನು ಹೇಳುತ್ತಾನೆ; ಓ ವಿಶ್ವಾಸಿಗಳೇ ನಿಮ್ಮ ಪೂರ್ವಿಕರ ಬಗ್ಗೆ ಹೆಮ್ಮೆ ಪಡುವುದನ್ನು ನಿಲ್ಲಿಸಿ. ಮತ್ತು ಅಲ್ಲಾಹನಿಗೆ ಭಯಪಟ್ಟು ಅವನಿಗೆ ಸಮೀಪಗೊಳ್ಳುವ ಮಾರ್ಗವನ್ನು ಹುಡುಕಿರಿ ಎಂದು.*

*[ಮಫಾತೀಹ್ ಅಲ್ ಗೈಬ್. ಸೂರಃ ಅಲ್ ಮಾಇದಾ 35 ರ ಸೂಕ್ತಿಯ ವಿವರಣೆಯಲ್ಲಿ]*

✍🏽 ನೌಫಲ್ ಕೆರೀಂ.

11 Oct 2016

ಬದರ್ ಸಂದೇಶ.

*ಬದರ್ ಸಂದೇಶ*

ನನ್ನ ಪ್ರೀತಿಯ ಸತ್ಯ ವಿಶ್ವಾಸಿ ಸಹೋದರ ಸಹೋದರಿಯರೆ,
ಅಸ್ಸಲಾಮು ಅಲೈಕುಂ ವರಹ್ಮತುಲ್ಲಾಹಿ ವ ಬರಕಾತುಹು.

ಹಿಜಿರ 2ನೇ ವರ್ಷ ರಮಳಾನ್ 17ನೇ ದಿವಸ ಇಸ್ಲಾಮಿನ ಅಳಿವು ಉಳಿವಿನ ಬದರ್ ಯುದ್ಧ ನಡೆದ ದಿನ.

*ಯಾರ ನಡುವೆ ಯುದ್ಧ...?*

ಅಲ್ಲಾಹನನ್ನು ಮಾತ್ರ ಆರಾಧಿಸುತ್ತಿರುವುದಕ್ಕಾಗಿ, ಅಲ್ಲಾಹನೊಂದಿಗೆ ಮಾತ್ರ ಪ್ರಾರ್ಥನೆ ಮತ್ತು ಇಸ್ತಿಗಾಸ ನಡೆಸುತ್ತಿದ್ದಕ್ಕಾಗಿ ಮತ್ತು ಅಲ್ಲಾಹನೆಡೆಗೆ ಜನರನ್ನು ಕರೆಯುತ್ತಿರುವುದಕ್ಕಾಗಿ
ಅಮಾನವೀಯವಾಗಿ ಪೀಡಿಸಿದ ಮಕ್ಕಾದ ಕುರೈಷಿ ಮುಶ್ರಿಕ್ ಗಳ ಘೋರ ಪೀಡನೆಗಳನ್ನು ಸಹಿಸಲಾರದೆ ಮಕ್ಕಾದಿಂದ ಮದೀನಾಗೆ ವಲಸೆ ಹೋದ
ನಾಯಕ ಪ್ರವಾದಿ ಮಹಮ್ಮದ್ (ಸ.ಅ) ರವರು ಮತ್ತು ಅವರು ತಂದ ಅಲ್ಲಾಹನ ಆಜ್ಞೆ ಗಳನ್ನು ಶಿರಸಾವಹಿಸಿ ಪಾಲಿಸಿ ಜೀವಿಸುತ್ತಿದ್ದ ಮುವಹ್ಹಿದ್'ಗಳಾದ ಮುಹಾಜಿರ್ ಹಾಗೂ ಮದೀನಾದ ಅನ್ಸಾರಿಗಳಾದ ಸ್ವಹಾಬಿಗಳನ್ನೊಳಗೊಂಡ ಒಟ್ಟು 313ಮಂದಿಯ ಒಂದು ಸಣ್ಣ ಗುಂಪು ಒಂದು  ಭಾಗದಲ್ಲೂ

ಹಾಗೂ

ಅಲ್ಲಾಹನಿಗೆ ಹತ್ತಿರವಾಗಲು ಇಬ್ರಾಹಿಂ(ಅ) ಮತ್ತು ಇಸ್ಮಾಯೀಲ್(ಅ) ಹಾಗೂ ಲಾತ, ಉಝ್ಝ, ಮನಾತ ಗಳಂತಹ ಮಹಾನ್‌ಗಳನ್ನು ಕರೆದು ಪ್ರಾರ್ಥಿಸುತ್ತಿದ್ದ ಅಮ್ರ್ ಇಬ್ನ್ ಹಿಶಾಮ್(ಅಬೂ ಜಹಲ್), ಉತ್ಬಾ ಬಿನ್ ರಬೀಅ, ಉಬಯ್ಯ್ ಇಬ್ನ್ ಖಲಫ್ ಮುಂತಾದ ದುರಹಂಕಾರಿ ನಾಯಕರನ್ನೊಳಗೊಂಡ ಮದಿರೆ ಮತ್ತು ಹೆಂಗಳೆಯರ ದಾಸರಾಗಿದ್ದ ಸುಮಾರು 950 ಮಂದಿ  ಮಕ್ಕಾದ ಕುರೈಷ್ ಮುಶ್ರಿಕ್‌ಗಳು ಮತ್ತೊಂದು ಭಾಗದಲ್ಲಿ.

ಇವರ ನಡುವೆ ಆಗಿತ್ತು ಯುದ್ಧ.

*ಯಾಕಾಗಿ ಯುದ್ಧ...?*

*ಮುಸ್ಲಿಮರ ಪಕ್ಷದಲ್ಲಿ :*

ನೈಜ ಸೃಷ್ಟಿಕರ್ತನನ್ನು ಆರಾಧಿಸಿ ತೌಹೀದ್ ಅನುಸರಿಸಿ ಜೀವಿಸುವ ಹಕ್ಕುಗಳಿಗಾಗಿ ಮತ್ತು ವಿಶ್ವಾಸ ಸಂರಕ್ಷಣೆಗಾಗಿ.

*ಮುಶ್ರಿಕರ ಪಕ್ಷದಲ್ಲಿ :*

ಮಕ್ಕಾದಿಂದ ಹೊರದಬ್ಬಲ್ಪಟ್ಟು ನೆರೆಯ ಮದೀನಾದಲ್ಲಿ ಆಶ್ರಯ ಪಡೆದ ಒಂದು ಪೀಡಿತ ಸಮೂಹವನ್ನು ಮರ್ದಿಸಿ ತಮ್ಮ ದುರಹಂಕಾರಿ ನಾಯಕರ ಪ್ರತಿಷ್ಟೆ ಕಾಪಾಡಲು ಹಾಗೂ ಮಹಮ್ಮದರು(ಸ.ಅ) ಸುಳ್ಳಾಗಿಸಿದ ತಮ್ಮ ಆರಾಧ್ಯರ ಘನತೆಯನ್ನು ಸಂರಕ್ಷಿಸಲು.

*ಮಕ್ಕಾದ ಮುಶ್ರಿಕ್ ಗಳ ಸೇನಾಬಲ :*

- 100 ಕುದುರೆಗಳು
- 170 ಒಂಟೆಗಳು

*ಮುಸ್ಲಿಮರ ಸೇನಾ ಬಲ :*

- 2 ಕುದುರೆಗಳು
- 70 ಒಂಟೆಗಳು

*ಫಲಿತಾಂಶ :*

ಮುಸ್ಲಿಮರ ಅಭೂತಪೂರ್ವ ವಿಜಯ.

- 70 ಮುಶ್ರಿಕ್ ಗಳು ಕೊಲ್ಲಲ್ಪಟ್ಟರು ಅನೇಕರು ಯುದ್ಧ ಕೈದಿಗಳಾಗಿ ಬಂಧಿಸಲ್ಪಟ್ಟರು.

- ಮುಸ್ಲಿಮ್ ಪಕ್ಷದಲ್ಲಿ 14 ಸಹಾಬಿಗಳು ಹುತಾತ್ಮರಾದರು.

*ಯಾರು ಬದರಿಂಙಳು...?*

ಅಲ್ಲಾಹನ ದೀನ್ ಸಂರಕ್ಷಣೆಗಾಗಿ ನಾಯಕನ ಆಜ್ಞೆ ಯನ್ನು ಪಾಲಿಸಿ ಉಡಲು ಸರಿಯಾದ ವಸ್ತ್ರವಿಲ್ಲದ ಕೈಯಲ್ಲಿ ಆಯುಧವಿಲ್ಲದ ಸುಡುವ ಮರಳುಗಾಡಿನ ಹೊಯಿಗೆಯಲ್ಲಿ ಬರಿಗಾಲಲ್ಲಿ ಬರಿಹೊಟ್ಟೆಯಲ್ಲಿ ಪ್ರಯಾಣಿಸಿ ಯುದ್ಧ ಭೂಮಿಯನ್ನು ತಲುಪಿದವರು. ಇವರಲ್ಲಿ ಇದ್ದ ಆಯುಧ ಒಂದೇ ಅದು ತಖ್ವ. ಏನೇ ಆದರೂ ಅಲ್ಲಾಹನ ಮೇಲೆ ದೃಢವಿಶ್ವಾಸದಿಂದ ಭರವಸೆಯಿಟ್ಟು ಮುನ್ನುಗ್ಗುವ ಅಚಂಚಲ ಈಮಾನ್. ಇವರು ಮರಳಿ ತಮ್ಮ ತಮ್ಮ ಮನೆಗೆ ಹಿಂದಿರುಗುವ ಆಸೆ ಇಟ್ಟು ಹೊರಟು ಬಂದವರಲ್ಲ. ಇಸ್ಲಾಮಿಗಾಗಿ ತಮ್ಮ ಮನೆ, ತೋಟ, ಮಡದಿ, ಮಕ್ಕಳು ಹೀಗೆ ಲೋಕದ ಸರ್ವ ಸುಖಾಡಂಭರಗಳನ್ನು ತ್ಯಜಿಸಿ ಬಂದ ಮಕ್ಕಾದ ತ್ಯಾಗಿಗಳಾದ ಮುಹಾಜಿರ್'ಗಳು ಇವರಲ್ಲಿದ್ದರು. ಅದೇ ರೀತಿ ಮಕ್ಕಾದಿಂದ ಮದೀನಾಗೆ ವಲಸೆ ಬಂದವರಿಗೆ ತಮ್ಮ ಉಡುಪು, ಆಹಾರ, ಮನೆ, ತೋಟ ಮುಂತಾದ ಸೊತ್ತುಗಳನ್ನು ನೀಡಿ ಅವರ ಘನತೆ ಗೌರವಗಳನ್ನು ರಕ್ಷಿಸಿದ ತ್ಯಾಗಿಗಳಾದ ಮದೀನಾದ ಅನ್ಸಾರೀ ಸ್ವಹಾಬಿಗಳೂ ಕೂಡ ಈ ಪುಟ್ಟ ಸೇನೆಯ ಭಾಗವಾಗಿದ್ದರು. ಇವರ ತ್ಯಾಗ ಮತ್ತು ಸಹನೆಯಿಂದಾಗಿ ಅಲ್ಲಾಹನ ಸಹಾಯವು ಒದಗಿಬಂತು.

*ಅಲ್ಲಾಹನು ಪವಿತ್ರ ಕುರ್'ಆನಿ ನಲ್ಲಿ ಹೇಳುತ್ತಾನೆ,*

*ನೀವು ನಿಮ್ಮ ಪ್ರಭುವಿನೊಂದಿಗೆ ಸಹಾಯವನ್ನು ಬೇಡಿದ ಸಂದರ್ಭ(ವನ್ನು ಸ್ಮರಿಸಿರಿ). ಆಗ ಸಾವಿರ ಮಲಕ್ ಗಳನ್ನು ಎಡೆಬಿಡದೆ ಕಳುಹಿಸುವ ಮೂಲಕ ನಾನು ನಿಮಗೆ ಸಹಾಯ ಮಾಡುವೆನು ಎಂದು ಅವನು ನಿಮಗೆ ಉತ್ತರವಿತ್ತನು.*

*[ಅಲ್-ಅನ್ಫಾಲ್ : 9]*

*ಆದರೆ ಇವತ್ತು.....?*

ಅಲ್ಲಾಹನಿಗೆ ಹತ್ತಿರವಾಗಲು ಇಬ್ರಾಹೀಂ(ಅ), ಇಸ್ಮಾಯೀಲ್(ಅ), ಲಾತ, ಉಝ್ಝ , ಮನಾತ ಮುಂತಾದ ಮಧ್ಯವರ್ತಿಗಳನ್ನು ಕರೆದು ಪ್ರಾರ್ಥಿಸುತ್ತಿದ್ದ ಅಬೂಜಹಲ್,  ಉತ್ಬತ್ ಮುಂತಾದ ಮಕ್ಕಾದ ಧಿಕ್ಕಾರಿ ನಾಯಕರ ವಿಶ್ವಾಸವನ್ನೇ ಹೋಲುವ ವಿಶ್ವಾಸದೊಂದಿಗೆ ಮುಸ್ಲಿಮ್ ಸಮುದಾಯದಲ್ಲಿ ಮಾಲೆ, ಮೌಲೂದ್, ಕುತ್ತುರಾತೀಬು, ರಸೂಲುಲ್ಲಾಹ್(ಸ.ಅ) ರ ವ್ಯಾಜ್ಯ ಕೂದಲು ತಂದು ವಂಚನೆ, ದರ್ಗಾದ ಹೆಸರಿನಲ್ಲಿ ಶಿರ್ಕ್ ಬಿದ'ಅತ್'ನ ಗಿಡ ನೆಟ್ಟು ಅದನ್ನು ಪೋಷಿಸುತ್ತಿರುವ ಕೇರಳ ಮೂಲಕ ವ್ಯಾಜ್ಯ ಅಹ್ಲುಸ್ಸುನ್ನತ್ ಜಮಾತ್ ಸಮಸ್ತವು ಈ ಬದರ್ ಯುದ್ಧದಲ್ಲಿ ಭಾಗವಹಿಸಿದ ಬದರಿಂಙಳನ್ನು ಅಲ್ಲಾಹನಿಗೆ ಮಧ್ಯವರ್ತಿಯಾಗಿ ಕರೆದು ಪ್ರಾರ್ಥಿಸುತ್ತಾ(ಕೆಲವೊಮ್ಮೆ ನೇರವಾಗಿ) ರಮದಾನ್ 17 ರಂದು
ಬದರಿಂಙಳೆ ಆಂಡ್(ವಾರ್ಷಿಕ) ಆಚರಣೆ ಮಾಡುತ್ತಿದೆ. ಬದರಿಂಙಳು ತ್ಯಾಗಗಳನ್ನು ಸಹಿಸಿ ಹೊಟ್ಟೆಗಿಲ್ಲದೆ ರಣಾಂಗಣಕ್ಕೆ ತೆರಳಿ ಯುದ್ಧ ಮಾಡಿ ತಮ್ಮ ವಿಶ್ವಾಸ ದಾರ್ಢ್ಯತೆಯನ್ನು ರಕ್ಷಿಸಿದ ಘಟನೆ ಇವರ ಪಾಲಿಗೆ ಹಬ್ಬದೂಟ ಮಾಡಿ ನಾಲಿಗೆ ಚಪಲ ತೀರಿಸಲು, ಪಳ್ಳಿಗೆ ಪತ್ತಿರ್ ಕೊಟ್ಟು ಇಸ್ಲಾಮಿನಲ್ಲಿ ನೂತವಾದವಾಗಿ ಸೇರಿಕೊಂಡ ಶಿರ್ಕ್ ಪ್ರಸರಿಸುವ ಬದರ್ ಮೌಲೂದ್ ಓದಲೂ ಹಾಗೂ ತಮ್ಮ ಪ್ರಾಣವನ್ನೇ ರಕ್ಷಿಸಲು ಅಸಹಾಯಕರಾಗಿದ್ದ ಬದರ್ ಶುಹದಾಗಳನ್ನು ಕರೆದು ತಮ್ಮ ಕಷ್ಟಕಾರ್ಪಣ್ಯಗಳನ್ನು ಹೇಳಿ ಪ್ರಾರ್ಥಿಸುವುದಕ್ಕೂ ಸೀಮಿತವಾಗಿದೆ.

ವಾಸ್ತವದಲ್ಲಿ ಇವರ ವಿಶ್ವಾಸ ಮಕ್ಕಾದ ಮುಶ್ರಿಕ್'ಗಳ ವಿಶ್ವಾಸಕ್ಕಿಂತಲೂ ಭೀಕರ ಶಿರ್ಕಿನದ್ದಾಗಿದೆ ಎಂಬುದು ಸತ್ಯ. ಅಬೂಜಹಲ್ ಕೂಡ ಯುದ್ಧಕ್ಕೆ ತೆರಳುವ ಮುನ್ನ ಪವಿತ್ರ ಕ'ಅಬಾಲಯದ ಹೊದಿಕೆ ಹಿಡಿದು ಈ ಎರಡು ಗುಂಪುಗಳಲ್ಲಿ ಸತ್ಯ ಎಲ್ಲಿದೆಯೋ ಅಲ್ಲಿಗೇ ವಿಜಯ ಒಳಿದು ಬರಲಿ ಎಂದು ಅಲ್ಲಾಹನಲ್ಲಿ ಪ್ರಾರ್ಥಿಸಿರುವುದಾಗಿ ನಮಗೆ ಹದೀಸಿನಲ್ಲಿ ಕಾಣಬಹುದು. ಇನ್ನು ಮಕ್ಕಾ ಮುಶ್ರಿಕ್'ಗಳು ತಮ್ಮ ಕಷ್ಟಕಾಲದಲ್ಲಿ ಅಲ್ಲಾಹನೊಂದಿಗೆ ಸಹಾಯ ಅಭ್ಯರ್ಥಿಸಿದ್ದಾಗಿಯೂ ಆ ನಂತರ ಆ ಕಷ್ಟಗಳು ದೂರವಾಗಿ ಸುಖ ಬಂದಾಗ ತಮ್ಮ ಆರಾಧ್ಯರೆಡೆಗೆ ಮರಳಿದ್ದಾಗಿಯೂ ಕುರ್'ಆನ್ ಹೇಳುತ್ತೆ.

ಆದರೆ ಇಂದು ಬದರಿಂಙಳೆ ಆಂಡ್ ನೇರ್ಚೆ ಮಾಡುವ ಸಮಸ್ತದವರು ಇಡೀ ವರ್ಷ ಅಲ್ಲಾಹನಿಗೆ ಮಧ್ಯವರ್ತಿಗಳಾಗಿ ಅವುಲಿಯಾ, ಬದರಿಂಙಳು, ಮಹಮ್ಮದ್(ಸ.ಅ) , ಮುಹಯ್ಯಿದ್ಧಿ ಶೈಖ್(ರ) ಈ ರೀತಿ ಮಧ್ಯವರ್ತಿಗಳಿಲ್ಲದೆ ಈ ಜನ ಅಲ್ಲಾಹನೊಂದಿಗೆ ಪ್ರಾರ್ಥಿಸುವುದೇ ಇಲ್ಲ. ಇನ್ನು ಮಗುವಿಗೆ ತೊಟ್ಟಿಲು ತೂಗುವಾಗ "ಲಾಹಿ ಲಾಹ ಇಲ್ಲಲ್ಲಾಹು ಲಾಹಿ ಲಾಹ ಇಲ್ಲಲ್ಲಾಹ್" ಎಂಬ ತೌಹೀದಿನ ಗೀತೆ ಹಾಡುವ ತಾಯಂದಿರು ಮಗು ತೊಟ್ಟಿಲಿಂದ ಕೆಳಗೆ ಬಿದ್ದರೆ ಕರೆಯುವುದು "ಯಾ ಬದರಿಂಙಳೆ"
 "ಯಾ ಮುಹಿಯ್ಯದ್ಧಿ ಶೈಖ್" ಎಂದಾಗಿದೆಯಲ್ಲವೇ..!!

ಇನ್ನು ನಮ್ಮಲ್ಲಿ ಕೆಲವರ ಮನೆಯ ಬಾಗಿಲಲ್ಲಿ ಬದರಿಂಙಳ 313 ಹೆಸರುಗಳನ್ನು ಒಂದು ಹಾಲೆಯಲ್ಲಿ ಬರೆದು ಅಂಟಿಸಿದ್ದು ಕಾಣಬಹುದು. ಇದು ಮನೆಯನ್ನು ಪಿಶಾಚಿ ಭಾದೆ, ಕಳ್ಳಕಾಕರ ಉಪಟಳದಿಂದ ಸಂರಕ್ಷಿಸುತ್ತೆ ಎಂದು ನಂಬಿಸಿ ಈ ರೀತಿಯ ವ್ಯಾಜ್ಯ ಸಾಧನಗಳನ್ನು ಮಾರಾಟ ಮಾಡುವ ಸಲುವಾಗಿ ಮನೆ ಮನೆಗೆ ತಿರುಗುವ ಮುಸ್ಲಿಯಾರ್'ಗಳ ದೊಡ್ಡ ತಂಡವೇ ಇದೆ.

ಈಗ ನೀವೇ ಯೋಚಿಸಿ ಈ ಸಮಸ್ತದವರ ವಿಶ್ವಾಸಕ್ಕೂ ಮಕ್ಕಾ ಮುಶ್ರಿಕ್'ಗಳ ವಿಶ್ವಾಸಕ್ಕೂ ವ್ಯತ್ಯಾಸವೇನು..?? ಉಪವಾಸ ವೃತ ಅನುಷ್ಠಿಸುವ ವ್ಯತ್ಯಾಸವೇ...? ಅಥವಾ ಮುಸ್ಲಿಮರ ಹಾಗೆ ಮಸೀದಿಗೆ ತೆರಳಿ ನಮಾಝ್ ನಿರ್ವಹಿಸುವ ವ್ಯತ್ಯಾಸವೇ...? ಇಸ್ಲಾಮಿನಲ್ಲಿ ಪ್ರವಾದಿ(ಸ.ಅ) ಯವರು ಕಲಿಸಿರದ ಸಹಾಬಿಗಳು ದೀನ್ ಆಗಿ ಪರಿಗಣಿಸದಂತಹ ಕಾರ್ಯಗಳನ್ನು ಇಸ್ಲಾಮಿನಲ್ಲಿ ಸೇರಿಸಿ ದೀನ್ ಎಂದು ಆಚರಿಸುವ ಜನರ ಅರ್ಥಾತ್ *ನೂತನವಾದಿಗಳ ಯಾವುದೇ ಫರ್ಳ್(ಕಡ್ಡಾಯ) ಅಥವಾ ಸುನ್ನತ್'ಆದ ಕರ್ಮಗಳನ್ನು ಅಲ್ಲಾಹನು ಸ್ವೀಕರಿಸಲಾರನು ಎಂದು ಹದೀಸಲ್ಲಿ ಬಂದಿದೆ.*
*[ಅಲ್ ಬುಖಾರಿ - 7300, ಅಲ್ ಮುಸ್ಲಿಮ್ - 1370]*

*ಅಲ್ಲಾಹನು ಪವಿತ್ರ ಕುರ್'ಆನಿನಲ್ಲಿ ಹೇಳುತ್ತಾನೆ;*

*مَا قَدَرُوا اللَّهَ حَقَّ قَدْرِهِ ۗ إِنَّ اللَّهَ لَقَوِيٌّ عَزِيزٌ*

*ಅವರು ಅಲ್ಲಾಹನನ್ನು ಗಣನೆ ಮಾಡಬೇಕಾದ ರೀತಿಯಲ್ಲಿ  ಗಣನೆ ಮಾಡಲಿಲ್ಲ. ಖಂಡಿತವಾಗಿಯೂ ಅಲ್ಲಾಹು ಬಲಿಷ್ಠನೂ ಪ್ರತಾಪಶಾಲಿಯೂ ಆಗಿರುವನು.*

*[ಅಲ್-ಹಜ್ಜ್ : 74]*
via ಪವಿತ್ರ ಕುರ್ ಆನ್ (Pavitra Qur'aan)
 http://bit.ly/KanQuraan

ಬದರ್ ಯುದ್ಧದಲ್ಲಿ ಯುದ್ಧ ಮಾಡಿ ಹುತಾತ್ಮ(ಶಹೀದ್) ರಾದವರಿಗೋ ಇಲ್ಲವೇ ಯುದ್ಧಮಾಡಿದವರಿಗೋ ಯಾರಿಗೂ ಸ್ವತಃ ಅವರವರನ್ನೇ ರಕ್ಷೆ ಮಾಡಲು ಸಾಧ್ಯವಾಗಿಲ್ಲ. ಎಲ್ಲರೂ ಅಲ್ಲಾಹನ ಮೇಲೆ ಭರವಸೆ ಇಟ್ಟು ಜೀವದ ಹಂಗು ತೊರೆದು ಹೋರಾಡಿದರು. ಅವರ ಸಂತ್ಯಸಂಧತೆ ಮತ್ತು ನೇತೃತ್ವದ ಅನುಸರಣೆ ಹಾಗೂ ತಖ್ವ ಅವರಿಗೆ ವಿಜಯ ನೀಡಿತೇ ವಿನಃ ಅವರ ಪರಾಕ್ರಮವಂತೂ ಖಂಡಿತಾ ಅಲ್ಲ. ಎಲ್ಲರ ಸಂಕಷ್ಟಗಳನ್ನು ದೂರೀಕರಿಸಲು ಅಲ್ಲಾಹನಿಗೆ ಮಾತ್ರವೇ ಸಾಧ್ಯವಿರುವುದು.
ಇದರಿಂದ ನಾವು ಅಲ್ಲಾಹನ ಸಹಾಯವೊಂದಿದ್ದರೆ ಕಷ್ಟಗಳು ಸಮುದ್ರದಷ್ಟಿದ್ದರೂ ಈಜಿ ಬರಬಹುದು ಎಂಬ ಪಾಠವನ್ನು ಕಲಿಯಬೇಕೇ ಹೊರತು ಇಂದು ನಮ್ಮ ನಡುವೆ ಕೆಲವರು ಮಾಡುವಹಾಗೆ ಅಲ್ಲಾಹನ ಶಿಫತ್ ಗಳನ್ನು ಬದರಿಂಙಳ ಮೇಲೆ ಹೇಳುವುದಕ್ಕಲ್ಲ.

ಈ ಸಂಧರ್ಭದಲ್ಲಿ ಬದರಿಂಙಳ ವಾರ್ಷಿಕ (ಬದರಿಂಙಳೆ ಆಂಡ್) ಮಾಡುವುದಕ್ಕೆ ಇಸ್ಲಾಮಿನ ಪೂರ್ವಕಾಲದ ಉತ್ತಮ ತಲೆಮಾರಿನಲ್ಲಿ ಜೀವಿಸಿದ ಸಜ್ಜನರಾದ ಸಲಫುಸ್ಸಾಲಿಹೀನ್'ಗಳಲ್ಲಿ ನಮಗೆ ಯಾವುದೇ ಮಾದರಿಯಿಲ್ಲ ಬದಲಾಗಿ ಅದು ನಂತರದ ಕಾಲಘಟ್ಟದಲ್ಲಿ ಯಾವುದೋ ಹೊಟ್ಟೆ ಬಾಕ ಬಿದ'ಇಗಳಿಂದ ಸೇರ್ಪಡೆಗೊಂಡ ಒಂದು ನೂತನಾಚಾರವಾಗಿದೆ. ಇದನ್ನು ಇಂದು ಇಸ್ಲಾಮಿನ ಹೆಸರಿಟ್ಟು ಇಸ್ಲಾಮಿಗೆ ಕಳಂಕ ಹಚ್ಚುತ್ತಿರುವ ಗೋರಿ ಆರಾಧಕ ಕೇರಳ ಸಮಸ್ತದ ಸೂಫಿ ಸಮೂಹವು ಆಚರಿಸಿ ಕೊಂಡು ಬರುತ್ತಿದೆ.

ಆದರೆ ಬದರಿಂಙಳೋ ಅಥವಾ ಇವರಿಗಿಂತ ನಂತರ ಜೀವಿಸಿದ ಸ್ವಹಾಬಿಗಳೋ ಯಾರೂ ಕೂಡ ಈ ದಿವಸ ಬದರಿಂಙಳ ವಾರ್ಷಿಕ (ಬದರಿಂಙಳೆ ಆಂಡ್) ಮಾಡಿಲ್ಲ. ಇವರ ನಂತರ ಇವರ ಕುಟುಂಬಸ್ಥರು ತುಂಬಾ ಸಮಯ ಜೀವಿಸಿದ್ದರು ಅವರು ಯಾರೂ ಕೂಡ ಬದರಿಂಙಳೆ ಆಂಡ್ ಮಾಡಿಲ್ಲ. ಬದರ್ ಯುದ್ಧದಲ್ಲಿ ಪಾಲ್ಗೊಂಡ ಬದರಿಂಙಳಿಗೆ ಅಲ್ಲಾಹನ ಬಳಿ ತುಂಬಾ ಮಹತ್ವದ ಪದವಿಯಿದೆ. ಆದರೂ ಕೂಡ ಇವರ ನಂತರ ಬಂದವರು ಯಾರೂ ಕೂಡ ಬದರಿಂಙಳೊಂದಿಗೆ ಪ್ರಾರ್ಥಿಸಿಲ್ಲ, ಇಸ್ತಿಗಾಸ ನಡೆಸಿಲ್ಲ.

*قُلْ إِنَّمَا أَدْعُو رَبِّي وَلَا أُشْرِكُ بِهِ أَحَدًا*

*(ಓ ಪ್ರವಾದಿಯವರೇ!) ಹೇಳಿರಿ: ‘ನಾನು ನನ್ನ ಪ್ರಭುವನ್ನು ಮಾತ್ರ ಕರೆದು ಪ್ರಾರ್ಥಿಸುವೆನು. ಅವನೊಂದಿಗೆ ಯಾರನ್ನೂ ನಾನು ಸಹಭಾಗಿಯನ್ನಾಗಿ ಮಾಡಲಾರೆನು’.*

*[ಅಲ್-ಜಿನ್ನ್ : 20]*
via ಪವಿತ್ರ ಕುರ್ ಆನ್ (Pavitra Qur'aan)
 http://bit.ly/KanQuraan

ಪವಿತ್ರ ಕುರ್'ಆನಿನ ಈ ಕರೆಗೆ ಓ...ಗೊಟ್ಟವರಾಗಿದ್ದಾರೆ ಬದರಿಂಙಳು. ಆದುದರಿಂದ ನಾವು ಅವರು ಬಿಟ್ಟುಹೋದ ಪಾದಹೆಜ್ಜೆಗಳನ್ನು ಅನುಸರಿಸಬೇಕಾಗಿದೆ.
ಕಷ್ಟದಲ್ಲೂ ಸುಖದಲ್ಲೂ ಸ್ತುತಿ
ಪ್ರಾರ್ಥನೆ ಗಳೆಲ್ಲವೂ ಕೂಡ ಸರಿಸಾಟಿ ಇಲ್ಲದ ಏಕ ಮಾತ್ರ ನಮ್ಮ ಸೃಷ್ಟಿಕರ್ತನಾದ ಅಲ್ಲಾಹನಿಗೆ ಮಾತ್ರ ಮೀಸಲಿಡಬೇಕಾಗಿದೆ. ಅಲ್ಲಾಹು ನಮ್ಮೆಲ್ಲರನ್ನು ಅನುಗ್ರಹಿಸಲಿ.

*✍🏽 ನೌಫಲ್ ಕೆರೀಂ*

ಕಬರ್ ನಲ್ಲಿರುವ ಪ್ರವಾದಿ ಮಹಮ್ಮದ್ (ﷺ)ಯವರನ್ನು ಯಾರಾದರೂ ಕರೆದರೆ ಅವರು ಆಲಿಸುತ್ತಾರೆಯೇ..?

ಕಬರ್ ನಲ್ಲಿರುವ ಪ್ರವಾದಿ ಮಹಮ್ಮದ್ (ﷺ)ಯವರನ್ನು ಯಾರಾದರೂ ಕರೆದರೆ ಅವರು ಆಲಿಸುತ್ತಾರೆಯೇ..?

ಪ್ರವಾದಿ (ﷺ) ಯವರು ಕಬರ್ ನಲ್ಲಿ ಬರ್ಝಕ್ ಜೀವನದ ಅರ್ಥದಲ್ಲಿ ಬದುಕಿದ್ದಾರೆ. ಅವರು ಇಹಲೋಕದಲ್ಲಿ ಮಾಡಿದ ಅವರ ಶ್ರೇಷ್ಠ ಕರ್ಮಕ್ಕೆ ಫಲವಾಗಿ ಬರ್ಝಕಿ ಜೀವನದಲ್ಲಿ ಅಲ್ಲಾಹನ ಅನುಗ್ರಹವನ್ನು ಅನುಭವಿಸುತ್ತಿದ್ದಾರೆ. ಆದರೆ ಕಬರ್ ಜೀವನ ಅಥವಾ ಬರ್ಝಕ್ ಜೀವನ ಇಹಲೋಕದ ಜೀವನದಂತೆ ಅಲ್ಲ ಅಥವಾ ಅದರ ನಂತರ ಬರಲಿರುವ ಪರಲೋಕದ ಜೀವನದಂತೆಯೂ ಅಲ್ಲ. ಇಹಲೋಕ ಮತ್ತು ಪರಲೋಕದ ಜೀವನದ ಮಧ್ಯೆ ಬರುವ ಜೀವನವಾಗಿದೆ ಬರ್ಝಕ್ ಜೀವನ. ನಮಗೆಲ್ಲರಿಗೂ ಗೊತ್ತಿರುವ ಹಾಗೆ ಪ್ರವಾದಿ (ﷺ) ಯವರು ಅವರಿಗಿಂತ ಮೊದಲು ಮರಣ ಹೊಂದಿರುವ ಪ್ರವಾದಿಗಳು ಹಾಗೂ ಇತರ ಜನರ ಹಾಗೆ ಮರಣ ಹೊಂದಿದ್ದಾರೆ.

ಕುರ್ ಆನ್ ಹೇಳುತ್ತೆ;

وَمَا جَعَلْنَا لِبَشَرٍ مِنْ قَبْلِكَ الْخُلْدَ ۖ أَفَإِنْ مِتَّ فَهُمُ الْخَالِدُونَ

(ಓ ಪ್ರವಾದಿಯವರೇ!) ತಮಗಿಂತ ಮುಂಚೆ ಯಾವುದೇ ಮನುಷ್ಯನಿಗೂ ನಾವು ಶಾಶ್ವತತೆಯನ್ನು ನೀಡಿಲ್ಲ. ಹೀಗಿರುವಾಗ ತಾವು ಮರಣಹೊಂದಿದರೆ ಅವರು ಶಾಶ್ವತರಾಗಿ ಉಳಿಯುವರೇ?

[ಅಲ್-ಅಂಬಿಯಾ : 34]
via ಪವಿತ್ರ ಕುರ್ ಆನ್ (Pavitra Qur'aan)
 http://bit.ly/KanQuraan

كُلُّ مَنْ عَلَيْهَا فَانٍ

ಅಲ್ಲಿ(ಭೂಮುಖದಲ್ಲಿ)ರುವ ಎಲ್ಲರೂ ನಾಶ ವಾಗುವರು.

 ... وَيَبْقَىٰ وَجْهُ رَبِّكَ ذُو الْجَلَالِ وَالْإِكْرَامِ

ಮಹತ್ವವುಳ್ಳವನೂ ಔದಾರ್ಯವುಳ್ಳವನೂ ಆದ ತಮ್ಮ ಪ್ರಭುವಿನ ಮುಖವು ಬಾಕಿಯುಳಿಯುವುದು.

[ಅರ್ರಹ್ಮಾನ್ : 26 - 27]
via ಪವಿತ್ರ ಕುರ್ ಆನ್ (Pavitra Qur'aan)
 http://bit.ly/KanQuraan

إِنَّكَ مَيِّتٌ وَإِنَّهُمْ مَيِّتُونَ

ಖಂಡಿತವಾಗಿಯೂ ತಾವು ಮರಣಹೊಂದುವಿರಿ ಮತ್ತು ಅವರೂ ಮರಣಹೊಂದುವರು.

[ಅಝ್ಝುಮರ್ : 30]
via ಪವಿತ್ರ ಕುರ್ ಆನ್ (Pavitra Qur'aan)
 http://bit.ly/KanQuraan

ಇದಲ್ಲದೆ ಇನ್ನೂ ಕೆಲವು ಕುರ್ ಆನಿನ ವಚನಗಳಲ್ಲಿ ಅಲ್ಲಾಹನು ಪ್ರವಾದಿ (ﷺ) ಯವರಿಗೆ ಮರಣ ವಿರುವುದರ ಬಗ್ಗೆ ಸೂಚಿಸುತ್ತಾನೆ. ಮೇಲಾಗಿ, ಸಹಾಬಾಗಳು (رضى الله عنه) ಪ್ರವಾದಿ (ﷺ) ಯವರನ್ನು ಅವರು ಮರಣ ಹೊಂದಿದಾಗ ಅವರನ್ನು ತೊಳೆದಿದ್ದಾರೆ, ಅವರಿಗೆ ಕಫನ್ ತೊಡಿಸಿದ್ದಾರೆ, ಅವರ ಮೇಲೆ ಜನಾಝ ನಮಾಝ್ ನಿರ್ವಹಿಸಿದ್ದಾರೆ ಹಾಗೂ ಅವರನ್ನು ದಫನ ಮಾಡಿದ್ದಾರೆ. ಇಹಲೋಕದ ಅರ್ಥದಲ್ಲಿ ಅವರು ಜೀವಿಸಿರುವುದಾಗಿದ್ದೇ ಆದರೆ ಸಹಾಬಾಗಳು (رضى الله عنه) ಇತರ ಜನರು ಮರಣ ಹೊಂದಿದಾಗ ಮಾಡಿದ ಹಾಗೆ ಅವರಿಗೆ ಮಾಡುತ್ತಿದ್ದರೇನು..?

ಪ್ರವಾದಿ (ﷺ) ರವರ ಮಗಳಾದ ಫಾತಿಮಾ (رضي الله عنها) ರವರು ತಮ್ಮ ತಂದೆಯ ಉತ್ತರಾಧಿಕಾರಿ ಯಾರು ಎಂದು ಅಬೂಬಕರ್ (رضى الله عنه) ರವರಲ್ಲಿ ಕೇಳುತ್ತಾರೆ.ಯಾಕೆಂದರೆ ಪ್ರವಾದಿ (ﷺ) ಯವರು ಮರಣ ಹೊಂದಿದ್ದಾರೆ ಎಂದು ಅವರಿಗೆ ಮನವರಿಕೆ ಆಗಿತ್ತು. ಸಹಾಬಾ (رضى الله عنه) ಗಳು ಯಾರೂ ಫಾತಿಮಾ (رضي الله عنها) ರವರ ಈ ಮಾತಿಗೆ ವಿರೋಧ ವ್ಯಕ್ತ ಪಡಿಸಿರಲಿಲ್ಲ. ನಂತರ ಅಬೂಬಕರ್ (رضى الله عنه) ರವರು ಫಾತಿಮಾ (رضي الله عنها) ರವರ ಪ್ರಶ್ನೆಗೆ ಉತ್ತರಿಸುತ್ತಾ, ಪ್ರವಾದಿ (ﷺ) ಯಾರನ್ನೂ ಉತ್ತರಾಧಿಕಾರಿಯಾಗಿ ನೇಮಿಸಿಲ್ಲ ಎಂಬುದಾಗಿ ಹೇಳುತ್ತಾರೆ.

ನಂತರ ಸಹಾಬಾ (رضى الله عنه) ಗಳೆಲ್ಲರೂ ಸೇರಿ ಪ್ರವಾದಿ (ﷺ) ಯವರ ಅನುಯಾಯಿಗಳಲ್ಲೊಬ್ಬರನ್ನು ಖಲೀಫರಾಗಿ ನೇಮಿಸುವುದಾಗಿ ಸರ್ವಾನುಮತದಿಂದ ಅಂಗೀಕರಿಸುತ್ತಾರೆ. ಹಾಗೆ ಅಬೂಬಕರ್ (رضى الله عنه) ರವರನ್ನು ಇಸ್ಲಾಮೀ ರಾಷ್ಟ್ರದ ಖಲೀಫರನ್ನಾಗಿ ನೇಮಿಸುತ್ತಾರೆ. ಪ್ರವಾದಿ (ﷺ) ಯವರು ಲೌಕಿಕ ಅರ್ಥದಲ್ಲಿ ಜೀವಿಸಿರುವುದಾಗಿದ್ದಲ್ಲಿ ಈ ಎಲ್ಲ ಬೆಳವಣಿಗೆಗಲು ನಡೆಯುತ್ತಿರಲಿಲ್ಲ. ಇದು ಸಹಾಬಾ (رضى الله عنه) ಗಳೆಲ್ಲರೂ ಪ್ರವಾದಿ (ﷺ) ಯವರು ಮರಣಹೊಂದಿರುವುದನ್ನು ಅಂಗೀಕರಿಸಿರುವುದನ್ನು ಸೂಚಿಸುತ್ತದೆ.

ಉಸ್ಮಾನ್ ಹಾಗೂ ಅಲೀ (رضى الله عنه) ಯವರ ಕಾಲದಲ್ಲಿ ಕ್ಷೋಭೆಯು ಮಿತಿಮೀರಿದಾಗ, ಆಗ ಮತ್ತು ಅದಕ್ಕಿಂತ ಮೊದಲು ಅಥವಾ ನಂತರ ಸಹಾಬಾಗಳು (رضى الله عنه) ಈ ಸಮಸ್ಯೆಗಳಿಂದ ಹೊರ ಬರವ ಮಾರ್ಗ ಹೇಗೆ ಎಂದು ಸಲಹೆ ಕೇಳಲು ಪ್ರವಾದಿ (ﷺ) ಯವರ ಗೋರಿಯ ಬಳಿ ಹೋಗಿಲ್ಲ. ಪ್ರವಾದಿ (ﷺ) ಯವರು ಲೌಕಿಕಾರ್ಥದಲ್ಲಿ ಬದುಕಿದ್ದು ಅವರು ನಮ್ಮನ್ನು ನೋಡುತ್ತಿರುವುದಾಗಿದ್ದಲ್ಲಿ ಖಂಡಿತವಾಗಿಯೂ ಪ್ರವಾದಿ (ﷺ) ಯವರು ತನ್ನ ಸಹಾಬಾಗಳ ಸಮಸ್ಯೆಗಳನ್ನು ಬಗೆಹರಿಸಲು ಮಧ್ಯೆ ಪ್ರವೇಶಿಸುತ್ತಿದ್ದರು.ಅಂದು ಇತರೆಲ್ಲರಿಗಿಂತ ಅವರ ಅಗತ್ಯತೆ ಅತೀ ಪ್ರಮುಖವಾಗಿದ್ದಿತು.

ಪ್ರವಾದಿ (ﷺ) ಯವರ ಆತ್ಮಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಅದು ಅತೀ ಶ್ರೇಷ್ಠವಾದ "ಇಲ್ಲಯ್ಯೀನ್" ಪದವಿಯಲ್ಲಿದೆ. ಯಾಕೆಂದರೆ ಪ್ರವಾದಿ (ﷺ) ಸೃಷ್ಠಿಗಳೆಲ್ಲೇ ಅತೀ ಶ್ರೇಷ್ಠರಾಗಿದ್ದಾರೆ. ಅವರಿಗೆ ಅಲ್ಲಾಹನು ಸ್ವರ್ಗದಲ್ಲಿ ಅತೀ ಶ್ರೇಷ್ಠ ಪದವಿಯಾದ "ಅಲ್- ವಸೀಲ" ವನ್ನು ನೀಡಿದ್ದಾನೆ.

ಬರ್ಝಕ್ ಜೀವನವು ವಿಶಿಷ್ಠವಾದ ಜೀವನವಾಗಿದೆ. ಪ್ರವಾದಿ (ﷺ) ಯವರಿಂದ ವರದಿಯಾದ ಈ ಹದೀಸಿನ ಆಧಾರದಲ್ಲಿ ಅಂಬಿಯಾಗಳು ಹಾಗೂ ಶುಹಾದಾಗಳು ಬರ್ಝಕ್ ನಲ್ಲಿ ಜೀವಂತವಿರುತ್ತಾರೆ.
ಪ್ರವಾದಿ (ﷺ) ಯವರು ಹೇಳುತ್ತಾರೆ; ಪ್ರವಾದಿಗಳು ತಮ್ಮ ಕಬರ್ ನಲ್ಲಿ ಜೀವಂತವಿರುತ್ತಾರೆ ಮತ್ತು ಅವರು ಅಲ್ಲಿ ನಮಾಝ್ ನಿರ್ವಹಿಸುತ್ತಾರೆ.
( ಅಲ್ - ಮುಂದಿರಿ ಹಾಗೂ ಅಲ್ - ಬೈಹಕಿ ಇದನ್ನು ಸಹೀಹ್ ಆಗಿ ಉಲ್ಲೇಖಿಸಿದ್ದಾರೆ.)

ಅಲ್ಲಾಹನು ಕುರ್ ಆನಿನಲ್ಲಿ ಹೇಳುತ್ತಾನೆ;

وَلَا تَقُولُوا لِمَنْ يُقْتَلُ فِي سَبِيلِ اللَّهِ أَمْوَاتٌ ۚ بَلْ أَحْيَاءٌ وَلَٰكِنْ لَا تَشْعُرُونَ

ಅಲ್ಲಾಹುವಿನ ಮಾರ್ಗದಲ್ಲಿ ಹತರಾದವರ ಬಗ್ಗೆ ನೀವು ‘ಮೃತಪಟ್ಟವರು’ ಎಂದು ಹೇಳದಿರಿ. ಅವರು ಜೀವಂತವಾಗಿರುವರು; ಆದರೆ, ನೀವು (ಅದರ ಬಗ್ಗೆ) ಗ್ರಹಿಸಲಾರಿರಿ.

[ಅಲ್-ಬಕರಃ : 154]
via ಪವಿತ್ರ ಕುರ್ ಆನ್ (Pavitra Qur'aan)
 http://bit.ly/KanQuraan

ಇದು ವಿಶಿಷ್ಠವಾದ ಜೀವನವಾಗಿದೆ. ಇದರ ಪ್ರಕೃತಿಯನ್ನು ಅಲ್ಲಾಹನೇ ಬಲ್ಲ. ಇದು ಆತ್ಮವು ದೇಹದಲ್ಲಿ ಅಡಗಿ ಕೊಂಡು ಜೀವಿಸುವ ಲೌಕಿಕ ಜೀವನದಂತಹ ಜೀವನ ಅಲ್ಲ.

ಮರಣ ಹೊಂದಿದವರಿಗೆ ಸಂಬಂಧ ಪಟ್ಟಂತೆ ಅವರು ಭೂಮಿಯ ಮೇಲೆ ಜೀವಂತವಿರುವ ಆದಮರ ಮಕ್ಕಳ ಮಾತನ್ನು ಆಲಿಸಲಾರರು.
ಏಕೆಂದರೆ ಅಲ್ಲಾಹನು ಕುರ್ ಆನಿ ನಲ್ಲಿ ಹೇಳುತ್ತಾನೆ;

ಗೋರಿಗಳಲ್ಲಿರುವವರನ್ನು ಆಲಿಸುವಂತೆ ಮಾಡಲು ತಮ್ಮಿಂದ ಸಾಧ್ಯವಿಲ್ಲ.

[ಫಾತಿರ್ :  22]

ಪ್ರವಾದಿ (ﷺ) ಯವರನ್ನು ಯಾರು ಕರೆಯುತ್ತಾರೋ, ಅವರ ಕರೆಯನ್ನು ಪ್ರವಾದಿ (ﷺ) ಯವರು ಕೇಳಿಸಲಾರರು ಎಂದು ಅಲ್ಲಾಹನೇ ದೃಢಪಡಿಸಿದ್ದಾನೆ. ಏಕೆಂದರೆ ಪ್ರವಾದಿ (ﷺ) ಯವರು ಮರಣ ಹೊಂದಿದ್ದಾರೆ. ಇಲ್ಲಿ ಪ್ರವಾದಿ (ﷺ) ಯವರು ಮನುಷ್ಯರ ಎಲ್ಲಾ ದುಆ ಮತ್ತು ಕರೆಯನ್ನು ಕೇಳಿಸುತ್ತಾರೆ ಎಂದು ಕುರ್ ಆನ್ ಮತ್ತು ಸಹೀಹ್ ಆಗಿ ಬಂದ ಯಾವ ಸುನ್ನತ್ ನಲ್ಲಿಯೂ ಇಲ್ಲ. ಬದಲಾಗಿ ಅವರ (ﷺ) ಮೇಲೆ ಯಾರು ಸ್ವಲಾತ್ ಸಲಾಮ್ ಗಳನ್ನು ಹೇಳುತ್ತಾರೋ ಅದನ್ನು ಅವರಿಗೆ (ﷺ) ತಲುಪಿಸಲಾಗುತ್ತದೆ ಎಂಬುದು ಸಹೀಹ್ ಹದೀಸ್ ಗಳಿಂದ ದೃಢಪಟ್ಟಿದೆ.

عَنْ أَبِي هُرَيْرَةَ، أَنَّ رَسُولَ اللَّهِ صلى الله عليه وسلم قَالَ ‏ "‏ مَا مِنْ أَحَدٍ يُسَلِّمُ عَلَىَّ إِلاَّ رَدَّ اللَّهُ عَلَىَّ رُوحِي حَتَّى أَرُدَّ عَلَيْهِ السَّلاَمَ

ಪ್ರವಾದಿ (ﷺ) ಹೇಳಿದ್ದಾರೆ ;
ನಿಮ್ಮಲ್ಲಿ ಯಾರಾದರೂ ನನಗೆ ಸಲಾಮ್ ಹೇಳಿದರೆ, ಅಲ್ಲಾಹನು ನನ್ನ ಆತ್ಮವನ್ನು ನನಗೆ ಹಿಂದಿರುಗಿಸುವನು. ಆಗ ನಾನು ಆ ಸಲಾಮ್ ಹೇಳಿದವನಿಗೆ ಪ್ರತ್ಯುತ್ತರ ನೀಡುವನು.

[ಅಬೂ ದಾವೂದ್ - 2041]

ಇದನ್ನು ಹಸನ್ ಇಸ್ ನಾದ್ ನೊಂದಿಗೆ ಅಬೂ ಹುರೈರಾ (رضى الله عنه) ರವರು ವರದಿ ಮಾಡಿದ್ದಾರೆ. ಇದರ ಅರ್ಥ ಸಲಾಮ್ ಹೇಳುವವನ ಸಲಾಮನ್ನು ಪ್ರವಾದಿ (ﷺ) ಯವರು ನೇರವಾಗಿ ಕೇಳಿಸುತ್ತಾರೆ ಎಂದಲ್ಲ. ಬದಲಾಗಿ ಯಾರಾದರೂ ಪ್ರವಾದಿ (ﷺ) ಯವರಿಗೆ ಸಲಾಮ್ ಹೇಳಿದರೆ ಅದನ್ನು ಮಲಕುಗಳ ಮುಖಾಂತರ ಪ್ರವಾದಿ (ﷺ) ಯವರಿಗೆ ಅಲ್ಲಾಹನು ತಲುಪಿಸುವ ಸಾಧ್ಯತೆ ಇದೆ. ಒಂದು ವೇಳೆ ಸಲಾಮ್ ಹೇಳುವವನ ಸ್ವರಗಳ ಶಬ್ದಗಳನ್ನು ಪ್ರವಾದಿ (ﷺ) ನೇರವಾಗಿ ಕೇಳಿಸಿಕೊಳ್ಳುತ್ತಾರೆ, ಎಂದು ನಾವು ಊಹಿಸಿ ಕೊಳ್ಳುವುದಾದರೂ ಇದು ಈ ವಿಷಯದಲ್ಲಿರುವ ಸಾಮಾನ್ಯ ನಿಯಮದ ಹೊರತಾಗಿಲ್ಲ ಎಂದಾಗಿದೆ. ಉದಾಹರಣೆಗೆ, ಮರಣಹೊಂದಿದವರು ತನ್ನ ಶವ ವಾಹನವನ್ನು ಹೊತ್ತುಕೊಂಡು ಹೋಗುವವರ ಪಾದ ಹೆಜ್ಜೆಗಳನ್ನು ಆಲಿಸುತ್ತಾರೆ ಎಂಬುದು. ಅಂತೆಯೇ ಬದರ್ ನ ದಿನ ಬಾವಿಯಲ್ಲಿ ಬಿದ್ದಿದ್ದ ಮುಶ್ರಿಕ್ ಗಳ ಕೊಳೆತ ಶವಗಳು ಪ್ರವಾದಿ (ﷺ) ಯವರ ಮಾತನ್ನು ಕೇಳಿಸಿದ ಹಾಗೆ. ಆಗ ಪ್ರವಾದಿ (ﷺ) ಯವರು ಅವರಲ್ಲಿ ಕೇಳಿದರು; ಈಗ ನಿಮ್ಮ ಪ್ರಭುವಿನ ಮಾತು ಸತ್ಯ ಎಂಬುದು ನಿಮಗೆ ಮನವರಿಕೆ ಆಯಿತೇ ಎಂದು. (ಇದು ಪ್ರವಾದಿ (ﷺ) ಯವರ
ಮುಅ್'ಜಿಝತ್(ಪವಾಡ) ಕೂಡ ಆಗಿದೆ.)

[ಫತ್ವ ಲಜಿನತುದ್ದಾಯಿಮಾ - 1/313, 318, 321]

ಇನ್ನು ಪ್ರವಾದಿ (ﷺ) ರನ್ನು ಕರೆಯುವುದು ಮತ್ತು ಅವರನ್ನು ಕರೆದು ಪ್ರಾರ್ಥಿಸುವುದು ಇದೆಲ್ಲ ಶಿರ್ಕ್ ನಲ್ಲಿ ಗಣಿಸಲ್ಪಡುತ್ತದೆ. ಇಂತಹ ಶಿರ್ಕ್ ಗಳನ್ನೇ ಪ್ರವಾದಿ (ﷺ) ಯವರು ತಮ್ಮ ಜನರಲ್ಲಿ ವಿರೋಧಿಸಿರುವುದು ಮತ್ತು ತಮ್ಮ ಜನರಲ್ಲಿ ಅದರ ವಿರುದ್ಧ ಜಾಗೃತಿ ಮೂಢಿಸಿರುವುದು. (ಯಾಕೆಂದರೆ ಪ್ರವಾದಿ (ﷺ) ಯವರ ಕಾಲದಲ್ಲೇ ಅಬೂ ಜಹಲ್ ಮುಂತಾದವರ ನೇತೃತ್ವದ ಮಕ್ಕಾ ಮುಶ್ರಿಕ್ ಗಳು ತಮ್ಮ ಪೂರ್ವಿಕರಾದ ಇಬ್ರಾಹಿಂ (ಅಲೈಹಿಸ್ಸಲಾಮ್), ಇಸ್ಮಾಯಿಲ್ (ಅಲೈಹಿಸ್ಸಲಾಮ್), ಲಾತ, ಉಝ್ಝ ಮುಂತಾದ ತಮ್ಮ ಪೂರ್ವಿಕರನ್ನು ಕರೆದು ಪ್ರಾರ್ಥಿಸುತ್ತಿದ್ದರು.)

ಮೂಲಃ ಶೈಖ್ ಮುಹಮ್ಮದ್ ಸಾಲಿಹ್ ಅಲ್ ಮುನಜ್ಜದ್ (ﺣﻔﻈﻪ ﺍﻟﻠﻪ)

ಕನ್ನಡಕ್ಕೆಃ ನೌಫಲ್ ಕೆರೀಂ.

ಮಾತೃಭಾಷೆಯಲ್ಲಿ ಖುತುಬಾ.

☝ಅಲ್ಲಾಹನಿಗೆ ಸರ್ವಸ್ತುತಿ☝

ಅರೇಬಿಕ್ ಖುತುಬಾ ಉತ್ತಮವೆಂಬ ವಿಷಯದಲ್ಲಿ ವಿದ್ವಾಂಸರಲ್ಲಿ ಒಮ್ಮತಾಭಿಪ್ರಾಯವಿದೆ. ಆದರೆ ಅದರ ಅಗತ್ಯತೆಯ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದೆ.
ಈ ಬಗ್ಗೆ ಮೂರು ಅಂಶಗಳನ್ನು ನೋಡೋಣ;

1.) ಅರೇಬಿಕ್‌ನಲ್ಲಿ ಖುತುಬಾ ನಡೆಸುವುದು ಅವಶ್ಯವಾಗಿದೆ, ಕೇಳುಗರಿಗೆ ಅದು ಅರ್ಥವಾಗದಿದ್ದರೂ ಕೂಡ. ಇದು ಮಾಲಿಕೀ ಹಾಗೂ ಹಂಬಲಿ ಮದ್‌ಹಬ್‌ನ ವೀಕ್ಷಣೆಯಾಗಿದೆ.

📖-ಅಲ್ ಫವಾಕಿಹ್ ಅಲ್ ದಿವಾನಿ (1/306) ಮತ್ತು ಕಶ್ಶಫ್ ಅಲ್ ಖಿನಾ (2/34)

[ಟಿಪ್ಪಣಿ: ಬೇರೆ ಎಲ್ಲಾ ವಿಷಯದಲ್ಲೂ ಶಾಫೀ ಮದ್‌ಹಬ್‌ ಅಂತ ಬೊಬ್ಬೆ ಹೊಡೆಯುವ ಸಮಸ್ತದವರು ತಮ್ಮ ನಬಾತೀ ಅರೇಬಿಕ್ ಖುತುಬಾವನ್ನು ಸಮರ್ಥಿಸಲು ಸಲಫಿಗಳ ವಿರುದ್ಧ ಎತ್ತುವ ಅಸ್ತ್ರ ಇದಾಗಿದೆ. ಆದರೆ ಇವರು ಅನುಸರಿಸುವ ಶಾಫೀ ಮದ್‌ಹಬ್‌ನ ಅಭಿಪ್ರಾಯ ಈ ಹಂಬಲೀ ಮಾಲಿಕೀ ಅಭಿಪ್ರಾಯಕ್ಕೆ ತದ್ವಿರುದ್ಧವೂ ಸಲಫಿಗಳವಾದಕ್ಕೆ ಪೂರಕವೂ ಆಗಿದೆ ಅದನ್ನು ಮುಂದೆ ನೋಡೋಣ.]

2.) ಅರೇಬಿಕ್‌ನಲ್ಲಿ ಖುತುಬಾ ನಡೆಸುವುದು ಅವಶ್ಯವಾಗಿದೆ,  ಆದರೆ ಆಲಿಸುವವರಿಗೆ ಅರೇಬಿಕ್ ಅರ್ಥವಾಗದ ಸಂಧರ್ಭದಲ್ಲಿ ಅದನ್ನು ಅವರ ಭಾಷೆಯಲ್ಲೇ ನಿರ್ವಹಿಸಬೇಕು. ಇದು ಶಾಫೀ ಮದ್‌ಹಬ್‌ ವಾದಿಗಳು ಸರಿ ಎನ್ನುವ ಅಭಿಪ್ರಾಯವಾಗಿದೆ (ಟಿಪ್ಪಣಿ: ಸಮಸ್ತದ ಶಾಫೀ ಮದ್‌ಹಬ್‌ವಾದಿಗಳನ್ನು ಹೊರತು ಪಡಿಸಿ) ಹಾಗೂ ಇದು ಕೆಲವು ಹಂಬಲೀ ಮದ್‌ಹಬ್‌ವಾದಿಗಳ ವಾದವೂ ಆಗಿದೆ.

📖-ಅಲ್ ಮಜ್ಮೂಹ್ ಅನ್ನವವೀ ನೋಡಿರಿ - (4/522)

3.) ಅರೇಬಿಕ್ ಖುತುಬಾ ಮುಸ್ತಹಬ್ಬ್ ಆಗಿದೆ, ಆದರೆ ಅವಶ್ಯಕವೇನೂ ಅಲ್ಲ. ಖತೀಬರು ಅರೇಬಿಕ್‌ಗೆ ಬದಲಿಯಾಗಿ ಅವರ ಸ್ವ ಭಾಷೆಯಲ್ಲೇ ಖುತುಬಾ ನಿರ್ವಹಿಸಬಹುದಾಗಿದೆ. ಇದು ಇಮಾಮ್ ಅಬೂ ಹನೀಫಾ(ರಹಿಮಹುಲ್ಲಾಹ್) ಹಾಗೂ ಕೆಲವು ಶಾಫೀ ಮದ್‌ಹಬ್‌ವಾದಿಗಳ ಅಭಿಪ್ರಾಯವಾಗಿದೆ.

📖-ಅಲ್ ಮುಹ್ತಾರ್ (1/543) ಮತ್ತು ಅಲ್ ಮಹ್‌ಸೂಹಾ ಅಲ್ ಫಿಕ್‌ಹಿಯ್ಯಾ (19/180)

ಈ ಮೂರನೇ ಅಭಿಪ್ರಾಯ ಸರಿ ಎಂದು ನಮ್ಮ ಹಲವು ಸಮಕಾಲೀನ ವಿದ್ವಾಂಸರು ಅಭಿಪ್ರಾಯ ಪಟ್ಟಿರುತ್ತಾರೆ, ಯಾಕೆಂದರೆ ಖುತುಬಾ ಅರೇಬಿಕ್ ಭಾಷೆಯಲ್ಲೇ ಆಗಬೇಕು ಎಂಬುದಕ್ಕೆ ಯಾವುದೇ ಸರಿಯಾದ ಆಧಾರವಿಲ್ಲ. ಖುತುಬಾದ ಉದ್ದೇಶ ಉಪದೇಶ, ಭೋಧನೆ ಹಾಗೂ ಕೇಳುಗರು ಅದರಿಂದ ಲಾಭ ಪಡೆಯುವುದಾಗಿದೆ. ಈ ಉದ್ದೇಶ ಪೂರ್ತಿಯಾಗುವುದು ಜನರು ಅರಿಯುವ ಭಾಷೆಯಲ್ಲಿ ನಿರ್ವಹಿಸಿದಾಗ ಮಾತ್ರ. ಇದನ್ನು ಫಿಕ್ಃ ಕೌನ್ಸಿಲ್ ಆಫ್ ಮುಸ್ಲಿಮ್ ವಲ್ಡ್ ಲೀಗ್ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಅದು ತನ್ನ ಪ್ರಕಟನೆಯಲ್ಲಿ ಈ ರೀತಿ ತಿಳಿಸಿದೆ;
ಅರೇಬಿಕ್ ಭಾಷೆ ಮಾತನಾಡದಂತಹ ದೇಶಗಳಲ್ಲಿ ಈದ್ ಹಾಗೂ ಜುಮಾ ಖುತುಬಾಗಳು ಅರೆಬಿಕ್ ಭಾಷೆಯಲ್ಲೇ ಆಗಬೇಕು ಎಂಬ ನಿಯಮ ಸಮಂಜಸವಲ್ಲ, ಆದರೆ ಖುತುಬಾದ ಆರಂಭದಲ್ಲಿ ಹೇಳುವ ಕುರ್‌ಆನ್ ಆಯತ್‌ಗಳನ್ನು ಹಾಗೂ ಇತರ ಕಡೆಗಳಲ್ಲಿ ಹೇಳಬಯಸುವ ಕುರ್ ಆನ್ ಆಯತ್‌ಗಳನ್ನು ಅರೇಬಿಕ್ ನಲ್ಲೇ ಹೇಳುವುದು ಉತ್ತಮ. ಅರಬಿಯೇತರರೂ ಕೂಡ ಅರಬಿಕ್ ಭಾಷೆಯಲ್ಲೇ ಕುರ್ ಆನ್ ಆಲಿಸುತ್ತಾರೆ, ಕುರ್ ಆನ್ ಕಲಿಯಲು ಮತ್ತು ಓದಲು ಕುರ್ ಆನ್ ಅವತೀರ್ಣ ಗೊಂಡ ಅರೇಬಿಕ್ ಭಾಷೆ ಉತ್ತಮವಾಗಿದೆ. ಆದರೆ ನಂತರ ಖತೀಬರು ಆಲಿಸುವ ಜನರಿಗೆ ಅವರ ಭಾಷೆಯಲ್ಲಿ ಅದರ ಅರ್ಥ ವಿವರಣೆ ನೀಡಬೇಕು.


📖-ಕಿರಾಅತ್ ಅಲ್ ಮಜ್ಮಾ ಅಲ್ ಫಿಕ್‌ಹಿ  (Page. 99) (ಐದನೇ ಅಧಿವೇಶನ, ಐದನೇ ಪ್ರಕಟನೆ)

ಈ ವಿಷಯದಲ್ಲಿ ಉಲಮಾಗಳ ಸ್ಥಾಯೀ ಸಮಿತಿಯು ಒಂದು ಫತ್ವ ಹೊರಡಿಸಿದೆ;
ಪ್ರವಾದಿ(ಸ.ಅ)ರು ಜುಮಾ ಖುತುಬಾ ಅರೆಬಿಕ್ ಭಾಷೆಯಲ್ಲೇ ಆಗಬೇಕು ಎಂದು ಆಜ್ಞಾಪಿರುವ ಬಗ್ಗೆ ಯಾವುದೇ ಆಧಾರವಿಲ್ಲ, ಆದರೆ ಮಹಾನ್ ಪ್ರವಾದಿ(ಸ.ಅ)ರು ಅರೆಬಿ ಭಾಷೆಯಲ್ಲೇ ಖುತುಬಾ ನಿರ್ವಹಿಸಿದ್ದಾರೆ. ಏಕೆಂದರೆ ಅದು ಅವರ ಮತ್ತು ಅವರ ಜನತೆಯ ಭಾಷೆಯಾಗಿದೆ. ಅವರನ್ನು ಯಾರಾದರೂ ಅವರ ಭಾಷೆಯಲ್ಲೇ ಉದ್ದೇಶಿಸಿ ಮಾತನಾಡಿದರೆ ಮತ್ತು ಮಾರ್ಗದರ್ಶನ ಮಾಡಿದರೆ ಮಾತ್ರ ಅವರಿಗೆ ಅರ್ಥವಾಗುವುದು. ಪ್ರವಾದಿ(ಸ.ಅ)ರು ಯಾವುದೇ ದೇಶದ ರಾಜರಿಗೆ ಪತ್ರ ಬರೆಯುವಾಗ ಅರೆಬಿಕ್ ನಲ್ಲೇ ಬರೆಯುತ್ತಿದ್ದರು. ಆದರೆ ಅವರಿಗೆ ಗೊತ್ತಿತ್ತು ಆ ರಾಜರು ಮಾತನಾಡುವುದು ಅರಬಿಯೇತರ ಭಾಷೆ ಎಂದು, ಅವರು ಅದನ್ನು ಅವರ ಭಾಷೆಗೆ ಭಾಷಾಂತರ ಮಾಡಿ ಅರ್ಥೈಸುತ್ತಾರೆ ಎಂದೂ ಅವರಿಗೆ ಗೊತ್ತಿತ್ತು.

ಇದರ ಆಧಾರದಲ್ಲಿ, ಜನರ ಆಡು ಭಾಷೆಯಲ್ಲಿ ಅಥವಾ ಅಧಿಕ ಕೇಳುಗರು ಅರ್ಥೈಸುವ ಭಾಷೆಯಲ್ಲಿ ನಿರ್ವಹಿಸುವುದು ಸಮ್ಮತಾರ್ಹವಾಗಿದೆ. ಇದರಿಂದಾಗಿ ಅವರು ತಮ್ಮನ್ನು ಉದ್ದೇಶಿಸಿ ಮಾತನಾಡುವವರ(ಖುತುಬಾ ನಿರ್ವಹಿಸುವವರ) ಮಾರ್ಗದರ್ಶನವನ್ನು , ಸಲಹೆಯನ್ನು ಅರ್ಥೈಸಿ ಆ ಖುತುಬಾದ ಲಾಭ ಪಡೆಯಲು ಅವರಿಗೆ ಸಹಾಯವಾಗುತ್ತದೆ.

ಖತೀಬರು ಅರಬಿಯೇತರ ಭಾಷೆ ಮಾತನಾಡುವ ದೇಶದಲ್ಲಿ ಆ ದೇಶದ ಭಾಷೆಯಲ್ಲಿ ಖುತುಬಾ ನಿರ್ವಹಿಸಿದರೆ, ಖುತುಬಾದ ಉದ್ದೇಶವಾದ ಮಾರ್ಗದರ್ಶನ, ಭೋಧನೆ ಹಾಗೂ ಬುದ್ಧಿವಾದ ಇದನ್ನೆಲ್ಲ ನೆರವೇರಿಸಿದಂತಾಗುತ್ತದೆ.

ಮೊದಲು ಅರಬಿಯಲ್ಲಿ ಖುತುಬಾ ನಿರ್ವಹಿಸಿ ನಂತರ ಅದನ್ನು ಸ್ಥಳೀಯ ಭಾಷೆಗೆ ಭಾಷಾಂತರ ಮಾಡುವುದು ಉತ್ತಮವಾಗಿದೆ, ಪ್ರವಾದಿ(ಸ.ಅ)ರ ಖುತುಬಾ ಹಾಗೂ ಪತ್ರವನ್ನು ನಾವು ಮೇಲೆ ಚರ್ಚಿಸಿದಂತೆ ಇದೇ ರೀತಿ ಬಳಸಿ ಅದರ ಉದ್ದೇಶ ನೆರವೇರಿಸುತ್ತಿದ್ದರು.

📖-ಫತ್ವ ಅಲ್ ಲಜ್‌ನಾ ಅಲ್ ದಾಯಿಮಾ (8/253)


ಶೈಖ್ ಇಬ್ನ್ ಬಾಝ್ (ರಹಿಮಹುಲ್ಲಾಹ್) ಹೇಳಿದ್ದಾರೆ;
ಮಸೀದಿಯಲ್ಲಿ ಅರಬಿಯೇತರರು ಅಧಿಕವಿದ್ದು ಅವರಿಗೆ ಅರಬಿ ಅರ್ಥವಾಗದಂತಹ ಸಂಧರ್ಭದಲ್ಲಿ ಅರಬಿಯೇತರ ಭಾಷೆಯಲ್ಲಿ ಖುತುಬಾ ನಿರ್ವಹಿಸುವುದಕ್ಕೆ ಯಾವುದೇ ವಿರೋಧವಿಲ್ಲ. ಅಥವಾ ಅರಬಿಯಲ್ಲಿ ಹೇಳಿ ಅದನ್ನು ನಂತರ ಸ್ಥಳೀಯ ಭಾಷೆಗೆ ಭಾಷಾಂತರ ಮಾಡಬಹುದು.

ಆದರೆ ಇವತ್ತಿನ ದಿನಗಳಲ್ಲಿ ಸಾಮಾನ್ಯವಾಗಿ ಅಧಿಕ ಜನರು ಅರಬಿ ಭಾಷೆ ಕಲಿತು ಅರ್ಥೈಸುವವರಾಗಿದ್ದಾರೆ. ಅಂತಹ ಜನರೇ ಅಧಿಕವಿರುವಲ್ಲಿ ಅರಬಿಯಲ್ಲೇ ಖುತುಬಾ ನಿರ್ವಹಿಸುವುದು ಉತ್ತಮ. ಪ್ರಮುಖವಾಗಿ ಇತ್ತೀಚೆಗೆ ಸಲಫಿಗಳು ಅರಬೇತರರು ಹಾಜರಾಗುವ ಮಸೀದಿಯಲ್ಲಿ ಅರಬೇತರ ಭಾಷೆಯಲ್ಲಿ ಖುತುಬಾ ನಿರ್ವಹಿಸುತ್ತಿದ್ದಾರೆ.

ಆಧಾರಗಳ ಬೆಳಕಿನಲ್ಲಿ ಅವಶ್ಯಕತೆಗಾಗಿ ಈ ರೀತಿ ಮಾಡುವುದು ಅನುವದನೀಯವಾಗಿದೆ. ಕುರ್ ಆನಿನಲ್ಲಿ ಅಲ್ಲಾಹನು ಹೇಳುತ್ತಾನೆ;

وَمَا أَرْسَلْنَا مِنْ رَسُولٍ إِلَّا بِلِسَانِ قَوْمِهِ لِيُبَيِّنَ لَهُمْ ۖ فَيُضِلُّ اللَّهُ مَنْ يَشَاءُ وَيَهْدِي مَنْ يَشَاءُ ۚ وَهُوَ الْعَزِيزُ الْحَكِيمُ

ನಾವು ಯಾವುದೇ ಸಂದೇಶವಾಹಕರನ್ನೂ ಅವರು ತಮ್ಮ ಜನತೆಗೆ (ಸಂಗತಿಗಳನ್ನು) ವಿವರಿಸುವ ಸಲುವಾಗಿ ಅವರ ಭಾಷೆಯಲ್ಲಿಯೇ (ಸಂದೇಶ ನೀಡಿದ) ಹೊರತು ಕಳುಹಿಸಿಲ್ಲ. ಅಲ್ಲಾಹು ಅವನಿಚ್ಛಿಸುವವರನ್ನು ಪಥಭ್ರಷ್ಟಗೊಳಿಸುವನು ಮತ್ತು ಅವನಿಚ್ಛಿಸುವವರನ್ನು ಸನ್ಮಾರ್ಗಕ್ಕೆ ಸೇರಿಸುವನು. ಅವನು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.


[ಇಬ್ರಾಹೀಮ್ : 4]
via ಪವಿತ್ರ ಕುರ್ ಆನ್ (Pavitra Qur'aan)
http://bit.ly/KanQuraan

ಉದಾಹರಣೆಗೆ ನೋಡುವುದಾದರೆ, ಸಹಾಬಾಗಳು ಅರಬೇತರ ಪ್ರದೇಶಗಳಾದ ಪರ್ಶಿಯ ಮತ್ತು ಬೈಝಂಟೇನಿಯಂಗಳನ್ನು ಜಯಿಸಿದಾಗ ವ್ಯಾಖ್ಯಾನಕಾರರ ಮೂಲಕ ಅವರ ಭಾಷೆಯಲ್ಲಿ ಇಸ್ಲಾಮನ್ನು ಅವರಿಗೆ ತಿಳಿಸಿ ಕೊಡದೆ ಅವರ ಮೇಲೆ ದಾಳಿ ಮಾಡಿಲ್ಲ.

📖-ಮಜ್ಮೂಹ್ ಫತ್ವಾ ಇಬ್ನ್ ಬಾಝ್ (12/372)

ಶೈಖ್ ಇಬ್ನ್ ಉಸೈಮೀನ್ (ರಹಿಮಹುಲ್ಲಾಹ್) ಹೇಳುತ್ತಾರೆ;
ಈ ವಿಷಯದಲ್ಲಿ ಹಾಜರಿರುವ ಜನರು ಅರಬಿಯೇತರರಾಗಿದ್ದು, ಅವರು ಅರಬಿ ಅರ್ಥ ಮಾಡದಂತಹವರಾಗಿದ್ದರೆ ಖತೀಬರು ಅವರ ಭಾಷೆಯಲ್ಲೇ ಜುಮಾ ಖುತುಬಾ ನಿರ್ವಹಿಸುವುದು ಅನುವದನೀಯವಾಗಿದೆ. ಯಾಕೆಂದರೆ ಖುತುಬಾದ ಉದ್ದೇಶ ಅಲ್ಲಾಹನ ದಾಸನಿಗೆ ಅಲ್ಲಾಹನ ಪಾವಿತ್ರ್ಯತೆಯ ಮಿತಿಯನ್ನು ಮನದಟ್ಟು ಮಾಡಿಕೊಡುವುದು, ಉಪದೇಶಿಸುವುದು ಹಾಗೂ ಮಾರ್ಗದರ್ಶನ ಮಾಡುವುದಾಗಿದೆ. ಆದರೆ ಕುರ್ ಆನಿನ ಸೂಕ್ತಿಗಳನ್ನು ಅರಬಿಯಲ್ಲೇ ಓದಬೇಕು, ನಂತರ ಜನರ ಭಾಷೆಯಲ್ಲಿ ಅದನ್ನು ಉಪದೇಶಿಸಬೇಕು.

وَمَا أَرْسَلْنَا مِنْ رَسُولٍ إِلَّا بِلِسَانِ قَوْمِهِ لِيُبَيِّنَ لَهُمْ ۖ فَيُضِلُّ اللَّهُ مَنْ يَشَاءُ وَيَهْدِي مَنْ يَشَاءُ ۚ وَهُوَ الْعَزِيزُ الْحَكِيمُ

ನಾವು ಯಾವುದೇ ಸಂದೇಶವಾಹಕರನ್ನೂ ಅವರು ತಮ್ಮ ಜನತೆಗೆ (ಸಂಗತಿಗಳನ್ನು) ವಿವರಿಸುವ ಸಲುವಾಗಿ ಅವರ ಭಾಷೆಯಲ್ಲಿಯೇ (ಸಂದೇಶ ನೀಡಿದ) ಹೊರತು ಕಳುಹಿಸಿಲ್ಲ. ಅಲ್ಲಾಹು ಅವನಿಚ್ಛಿಸುವವರನ್ನು ಪಥಭ್ರಷ್ಟಗೊಳಿಸುವನು ಮತ್ತು ಅವನಿಚ್ಛಿಸುವವರನ್ನು ಸನ್ಮಾರ್ಗಕ್ಕೆ ಸೇರಿಸುವನು. ಅವನು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.


[ಇಬ್ರಾಹೀಮ್ : 4]
via ಪವಿತ್ರ ಕುರ್ ಆನ್ (Pavitra Qur'aan)
 http://bit.ly/KanQuraan

ವಾಸ್ತವವಾಗಿ ಅಲ್ಲಾಹನ ಈ ವಚನವು ಇದನ್ನೇ ಸೂಚಿಸುತ್ತದೆ, ಖುತುಬಾವನ್ನು ಜನರ ಭಾಷೆಯಲ್ಲೇ ಹೇಳಬೇಕು.

ಅಲ್ಲಾಹನು ಈ ಸೂಕ್ತದಲ್ಲಿ ಜನರನ್ನು ಅವರು ಅರಿಯುವ ಭಾಷೆಯಲ್ಲಿ ಉಪದೇಶಿಸುದುದರ ಬಗ್ಗೆ ಹೇಳಿದ್ದಾನೆ, ಇದರ ಆಧಾರದಲ್ಲಿ ಅರಬಿಯೇತರ ಭಾಷೆಗಳಲ್ಲಿ ಖುತುಬಾ ನಿರ್ವಹಿಸುವುದರಲ್ಲಿ ಯಾವುದೇ ತೊಂದರೆ ಇಲ್ಲ.

📖- ಫ಼ತಾವ ನೂರ್ ಅಲಾ ಅಲ್ ದರ್ಬ್.

ಶೈಖ್ ರಶೀದ್ ರಿದಾ(ರಹಿಮಹುಲ್ಲಾಹ್) ಹೇಳಿದ್ದಾರೆ;

ನಾವು ಹಲವು ಬಾರಿ ಹೇಳಿದ್ದೇವೆ, ಅರೇಬಿಕ್ ಭಾಷೆಯನ್ನು ಕಲಿಯುವುದು ಪ್ರತಿಯೊಬ್ಬ ಮುಸ್ಲಿಮನ ಮೇಲೂ ಕಡ್ಡಾಯವಾಗಿದೆ. ಯಾಕೆಂದರೆ ಇಸ್ಲಾಮ್ ಧರ್ಮವನ್ನು ಅರಿಯುವುದು, ಅದರ ಆಶಯ ಆದರ್ಶಗಳನ್ನು ಸ್ಥಾಪಿಸುವುದು, ಅದರ ಜವಾಬ್ದಾರಿಗಳನ್ನು ನೆರವೇರಿಸುವುದು ಎಲ್ಲವೂ ಈ ಭಾಷೆಯನ್ನು ಕಲಿತು ಅರ್ಥೈಸುವುದರ ಮೇಲೆ ನಿಂತಿದೆ, ಅಲ್ಲದೆ ಬೇರೆ ಮಾರ್ಗವಿಲ್ಲ. ಆದರೂ ಶುಕ್ರವಾರದ ಜುಮಾ ಖುತುಬಾ ಅರೆಬಿಕ್ ಭಾಷೆಯಲ್ಲೇ ಆಗಬೇಕು ಅಂತ ಯಾವುದೇ ನಿರ್ಬಂಧವಿಲ್ಲ.

📖 - ಮಜ್ಜಲತ್ ಅಲ್ ಮನಾರ್ 6/496.

ಆದರೆ ನಮ್ಮಲ್ಲಿ ಮುಸ್ಲಿಯಾರ್'ಗಳು  ಅರಬಿಯೇತರ ಖುತುಬಾ ನಿರ್ವಹಿಸುವ ಸಲಫಿಗಳ ಮಸೀದಿಯಲ್ಲಿ ಜುಮಾ ನಮಾಝ್'ಗೆ ಹೋಗಬೇಡಿ ಅದು ಬಾತಿಲ್(ಅಸಿಂಧು) ಅಂತ ಹೇಳುತ್ತಾರಲ್ಲ, ಆದರೆ ಇಮಾಮ್ ಶಾಫೀ(ರಹಿಮಹುಲ್ಲಾಹ್) ನಿಜಕ್ಕೂ ಈ ರೀತಿ ಖುತುಬಾದ ವಿಷಯದಲ್ಲಿ ಹೇಳಿದ್ದಾರ ಅಂತ ಸಾಮಾನ್ಯ ಮುಸ್ಲಿಮರಿಗೆ ಸಂಶಯ ಉಂಟಾಗಬಹುದು. ಹೌದು ಶಾಫೀ ಇಮಾಮ್(ರಹಿಮಹುಲ್ಲಾಹ್) ತಮ್ಮ ಅಲ್ ಉಮ್ಮ್ ಗ್ರಂಥದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಅದನ್ನು ಅವರ ಶಿಷ್ಯ ಇಮಾಮ್ ನವವಿ(ರಹಿಮಹುಲ್ಲಾಹ್) ಸಮರ್ಥಿಸಿದ್ದಾರೆ ಕೂಡ, ಆದರೆ ಮುಸ್ಲಿಯಾರ್'ಗಳು ಈ ವಿಷಯದಲ್ಲಿ ತಮ್ಮ ಶಾಫೀ ಮದ್'ಹಬನ್ನು ಮಡಚಿಡುವುದಕ್ಕೆ ಮುಖ್ಯ ಕಾರಣ ಇವರು ಯಾವಾಗಲೋ ರಚಿಸಿಟ್ಟಿರುವ ನಬಾತಿ ಖುತುಬಾವನ್ನು ಜುಮಾ ಖುತುಬಾ ಎಂದು ಅಂಗೀಕರಿಸಿ ಆಗಿದೆ, ಈಗ ಇವರು ಮುಕ್ಕಾಲುಗಂಟೆ ಎಂದು ಜರೆಯುವ ಸಲಫಿಗಳು ಅದನ್ನು ಜನರಿಗೆ ತಿಳಿಸಿ ಕೊಟ್ಟಾಗ ಇವರು ನೂತನವಾದಿಗಳು ಎಂದು ಜನರಿಗೆ ಮನದಟ್ಟಾಗಬಹುದು ಎಂಬ ಭಯ ಹಾಗೂ ಅಹಂಕಾರದಿಂದ ಕೂಡಿದ ವನಪ್ರತಿಷ್ಟೆಯಲ್ಲದೆ ಬೇರೇನೂ ಅಲ್ಲ..!! ಈ ಮುಸ್ಲಿಯಾರ್'ಗಳ ಅಹಂಕಾರದಿಂದಾಗಿ ಇವರ ಅನುಯಾಯಿಗಳು ಇಂದು ವಾರಕ್ಕೊಮ್ಮೆ ಅಲ್ಲಾಹನ ದೀನ್ ಕಲಿಯಲು ಸಿಗುವ ಅವಕಾಶ ದಿಂದ ವಂಚಿತರಾಗಿದ್ದಾರೆ. ಅಲ್ಲಾಹನು ನಮಗೆ ದೀನಿನ ಪ್ರಮಾಣವನ್ನು ಪ್ರಮಾಣವಾಗಿ ಅಂಗೀಕರಿಸಿ ಅದನ್ನು ಜನರಿಗೆ ಬೋಧಿಸುವ ಉಲೆಮಾಗಳಿಂದ ಇಲ್ಮ್ ಕಲಿಯಲು  ತೌಫೀಕ್ ನೀಡಲಿ.

📶ಈ ಲೇಖನವನ್ನು ಅತ್ಯಧಿಕ ಶೇರ್ ಮಾಡಿರಿ ಇಂ ಶಾ ಅಲ್ಲಾಹ್.

ಸರಳ ವಿವಾಹ.



ಸರಳ ವಿವಾಹ.

"ﻗﺎﻝ ﺍﻟﻨﺒﻲ ﺻَﻠَّﻰ ﺍﻟﻠَّﻪُ ﻋَﻠَﻴْﻪِ ﻭَﺳَﻠَّﻢَ : ‏"ﺧﻴﺮ ﺍﻟﻨﻜﺎﺡ ﺃﻳﺴﺮﻩ‏

 (ﺭﻭﺍﻩ ﺍﺑﻦ ﺣﺒﺎﻥ. ﻭﺻﺤﺤﻪ ﺍﻷﻟﺒﺎﻧﻲ ﻓﻲ ﺻﺤﻴﺢ ﺍﻟﺠﺎﻣﻊ ‏٣٣٠٠)

ಪ್ರವಾದಿ ﷺ ರು ಹೇಳಿದರು : ನಿಮ್ಮ ಪೈಕಿ ಅತೀ ಕಡಿಮೆ ಶ್ರಮ ಇರುವ ವಿವಾಹವೇ ಅತೀ ಶ್ರೇಷ್ಠ ವಿವಾಹ.

(ಅಬೂ ದಾವೂದ್ : 2117, ಸ್ವಹೀಹ್ ಜಾಮಿಅ್ : 3300)

ತವಸ್ಸುಲ್ ಇಸ್ಲಾಮಿನಲ್ಲಿ.

ತವಸ್ಸುಲ್

ಸೃಷ್ಟಿಗಳು, ತಮ್ಮ ಮತ್ತು ಅಲ್ಲಾಹನ ನಡುವೆ ಓರ್ವ ವ್ಯಕ್ತಿಯನ್ನು ಅಥವಾ ಒಂದು ವಸ್ತುವನ್ನು ಮಧ್ಯವರ್ತಿಯನ್ನಾಗಿಸಿ ಆ ಮೂಲಕ ಅಲ್ಲಾಹನಿಗೆ ನಿಕಟವಾಗುವುದಕ್ಕೆ ಇಸ್ಲಾಮಿನಲ್ಲಿ 'ತವಸ್ಸುಲ್' ಎನ್ನಲಾಗುತ್ತದೆ. ಇಂದು ಮುಸ್ಲಿಸಮುದಾಯದಲ್ಲಿ ಹೆಚ್ಚಿನ ಜನರೂ ಇಂತಹ ಮಧ್ಯವರ್ತಿಗಳನ್ನಾಗಿ ಮಾಡಿಕೊಂಡಿರುವುದು ಮೃತಪಟ್ಟ ಮಹಾತ್ಮರು ಮತ್ತು ಜೀವಿಸುತ್ತಿರುವ ಮಹಾತ್ಮರ ಹಕ್ಕ್, ಜಾಹ್, ಬರ್ಕತ್ ಇತ್ಯಾದಿಗಳನ್ನಾಗಿದೆ.

ಇಂದು ನಮ್ಮ ಸಮುದಾಯದಲ್ಲಿರುವ ಜನ ಸಾಮಾನ್ಯರ ಪೈಕಿ ಹೆಚ್ಚಿನವರ ವಿಶ್ವಾಸ ಪ್ರಕಾರ ನಮ್ಮಲ್ಲಿ ಯಾರೂ ಕೂಡ ಅಲ್ಲಾಹನೆಡೆಗೆ ನೇರವಾಗಿ ನಿಕಟವಾಗಲು ಸಾಧ್ಯವಿಲ್ಲದವರಾಗಿದ್ದೇವೆ ಎಂದಾಗಿದೆ. ಏಕೆಂದರೆ ನಾವು ಅಲ್ಲಾಹನ ಸಾಮೀಪ್ಯವನ್ನು ಗಳಿಸಿದವರಲ್ಲ. ನಾವು ದಿನನಿತ್ಯ ಹಲವಾರು ಪಾಪಗಳಲ್ಲಿ ನಿರತರಾಗುತ್ತೇವೆ. ಆದುದರಿಂದ ಅವನೆಡೆಗೆ ಹೆಚ್ಚು ನಿಕಟವಾಗಿರುವ ಅವನ ಇಷ್ಟದಾಸರಾದ ಅಂಬಿಯಾ- ಔಲಿಯಾಗಳ ಮೂಲಕ ಮಾತ್ರವೇ ನಮ್ಮಿಂದ ಅವನೆಡೆಗೆ ನಿಕಟವಾಗಲು ಸಾಧ್ಯ. ಅವರು ನಮ್ಮ ವಿಷಯವನ್ನು ಅಲ್ಲಾಹನಲ್ಲಿ ಹೇಳುವರು; ಆಗ ಅಲ್ಲಾಹನು ಅದನ್ನೆಂದೂ ನಿರಾಕರಿಸಲಾರನು.
ಉದಾಹರಣೆಗೆ ನಿಮಗೆ ಗೊತ್ತಿರುವ ಹಾಗೆ ನಮ್ಮ ಊರಲ್ಲಿ ನಮಾಝ್ ಮಾಡದ, ಹಲ್ಲುಜ್ಜದ, ಕೂದಲು ಬಾಚದ ಕೊಳಕು ಕೊಳಕಾಗಿ ಮೈ ಮೇಲೆ ಯಾವುದೋ ಅದೃಶ್ಯ ಶಕ್ತಿ ಪ್ರವೇಶ ಗೊಂಡಂತೆ ನಟಿಸುವ ಕೆಲವು ಮುರೀದುಗಳನ್ನು ನೀವು ಗಮನಿಸಿರಬಹುದು, ಆ ತರ ವ್ಯಕ್ತಿಗಳು ಹೆಚ್ಚಾಗಿ ಹೆಂಡದ ದಾಸರಾಗಿರುತ್ತಾರೆ. ಅವರು ನೀನು ಯಾಕೆ ಆರಾಧನೆ ಮಾಡಲ್ಲ ಎಂದು ಕೇಳಿದರೆ ಹೇಳುವ ಉತ್ತರ; ನಾವು ಯಾರ ಮುರೀದುಗಳಾಗಿರುತ್ತೇವೆಯೋ ಆ ತಂಘಳ್ ಅಥವಾ ಬಾಬಾಗಳೊಟ್ಟಿಗೆ ನಮಗೆ ಸ್ವರ್ಗ ಪ್ರವೇಶವಿದೆ ಎಂದಾಗಿದೆ. ಆ ಬಾಬಾಗಳ ಮುರೀದು ಆಗಿರುವ ಕಾರಣ ಅವರು ಮಾಡಿರುವ ಇಬಾದತ್ ನಿಂದ ಇವರು ಸ್ವರ್ಗಕ್ಕೆ ಹೋಗುತ್ತಾರಂತೆ ನೋಡಿ ಎಷ್ಟು ಭೀಕರವಾದ ಶಿರ್ಕಿನ ವಿಶ್ವಾಸ ಈ ಸಮುದಾಯಕ್ಕೆ.

ಅದೇನೇ ಇರಲಿ ಆದರೆ ಇಸ್ಲಾಮ್ ಪರಿಚಯಿಸುವ ಅಲ್ಲಾಹ್ (ಸೃಷ್ಟಿಕರ್ತ) ಮಧ್ಯವರ್ತಿಗಳಿಲ್ಲದವನೂ, ಅವನ ದಾಸರಿಗೆ ನೇರವಾಗಿ ನಿಕಟವಾಗಲು ಸಾಧ್ಯವಿರುವ ಪರಮ ಕಾರುಣ್ಯದ ಒಡೆಯನೂ ಆಗಿದ್ದಾನೆ. ಅವನ ವಿಶೇಷಣಗಳಾಗಿ ಕುರ್ ಆನ್ ಅತ್ಯಧಿಕವಾಗಿ ಪರಿಚಯಿಸುವುದು 'ರಹ್ಮಾನ್' (ಪರಮ ದಯಾಳು) 'ರಹೀಂ'(ಕರುಣಾನಿಧಿ) ಎಂಬವುಗಳನ್ನಾಗಿದೆ. ಕುರ್ ಆನಿನಲ್ಲಿ ಅಲ್ಲಾಹನು ಸೃಷ್ಟಿಗಳೊಂದಿಗಿರುವ ತನ್ನ ಸಾಮೀಪ್ಯದ ಕುರಿತು ಈ ರೀತಿ ಸ್ವತಃ ಘೋಷಿಸಿಕೊಂಡಿದ್ದಾನೆ.

وَلَقَدْ خَلَقْنَا الْإِنْسَانَ وَنَعْلَمُ مَا تُوَسْوِسُ بِهِ نَفْسُهُ ۖ وَنَحْنُ أَقْرَبُ إِلَيْهِ مِنْ حَبْلِ الْوَرِيدِ

ಖಂಡಿತವಾಗಿಯೂ ನಾವು ಮನುಷ್ಯನನ್ನು ಸೃಷ್ಟಿಸಿರುವೆವು. ಅವನ ಮನಸ್ಸು ಪಿಸುಗುಟ್ಟುವುದನ್ನು ನಾವು ಅರಿಯುವೆವು. ನಾವು (ಅವನ) ಕಂಠನಾಡಿಗಿಂತಲೂ ಅವನಿಗೆ ಹೆಚ್ಚು ನಿಕಟವಾಗಿರುವೆವು.

[ಕ್ವಾಫ್ : 16]

وَإِذَا سَأَلَكَ عِبَادِي عَنِّي فَإِنِّي قَرِيبٌ ۖ أُجِيبُ دَعْوَةَ الدَّاعِ إِذَا دَعَانِ ۖ فَلْيَسْتَجِيبُوا لِي وَلْيُؤْمِنُوا بِي لَعَلَّهُمْ يَرْشُدُونَ

ನನ್ನ ದಾಸರು ತಮ್ಮೊಂದಿಗೆ ನನ್ನ ಬಗ್ಗೆ ಕೇಳಿದರೆ ಖಂಡಿತವಾಗಿಯೂ ನಾನು (ಅವರಿಗೆ ಅತಿ) ನಿಕಟವಾಗಿರುವೆನು (ಎಂದು ಹೇಳಿರಿ). ಪ್ರಾರ್ಥಿಸುವವನು ನನ್ನನ್ನು ಕರೆದು ಪ್ರಾರ್ಥಿಸಿದರೆ ನಾನು ಆ ಪ್ರಾರ್ಥನೆಗೆ ಉತ್ತರವನ್ನು ನೀಡುವೆನು.[44]ಆದ್ದರಿಂದ ಅವರು ನನ್ನ ಕರೆಗೆ ಓಗೊಡಲಿ ಮತ್ತು ನನ್ನಲ್ಲಿ ವಿಶ್ವಾಸವಿಡಲಿ. ಅವರು ಸನ್ಮಾರ್ಗ ಪಡೆದವರಾಗಲೂ ಬಹುದು.

[ಅಲ್-ಬಕರಃ : 186]

ಈ ಮೇಲಿನ ಪವಿತ್ರ ಕುರ್ ಆನಿನ ಎರಡು ಆಯತ್ ಗಳನ್ನು ಗಮನಿಸಿ, ಅಲ್ಲಾಹನು ಅದೆಂತಹ ದಯಾಳು! ಅವನು ನಮಗೆ ಅತ್ಯಂತ ನಿಕಟನಾಗಿರುವನು ಎಂದೂ ಪಾಪ ಮತ್ತು ಕೆಡುಕುಗಳಲ್ಲಿ ನಿರತರಾಗಿರುವವರು ಕೂಡ ನಿರಾಶರಾಗಬೇ ಕಾಗಿಲ್ಲ; ಅವರಿಗೆ ಕ್ಷಮೆನೀಡಲು ನಾನು ಸದಾ ಸನ್ನದ್ಧನಿದ್ದೇನೆ ಎಂದು ಸ್ವತಃ ಅವನೇ ತಿಳಿಸುತ್ತಾನೆ. ಹೀಗಿರುವಾಗ ಆ ಪ್ರಭುವಿನೆಡೆಗೆ ನಿಕಟಗೊಳಿಸಲಿಕ್ಕಾಗಿ ಇತರ ಯಾವುದಾದರೂ ಮಧ್ಯವರ್ತಿಗಳ ಅಗತ್ಯವಿದೆಯೇ...? ನಮ್ಮನ್ನು ಅವನಿಗೆ ಇತರ ಯಾರಾದರೂ ಪರಿಚಯಿಸಿಕೊಡಬೇಕಾದ ಮತ್ತು ನಿಕಟಗೊಳಿಸಬೇಕಾದ ಅಗತ್ಯವಿದೆಯೇ..?! ಈ ಪ್ರಶ್ನೆಗಳಿಗೆ ಪಥಭ್ರಷ್ಟನಲ್ಲದೆ ಇನ್ಯಾರೂ ಹೌದು ಎಂಬ ಉತ್ತರ ಕೊಡಲಾರ. ಇದೊಂದು ವಿಚಿತ್ರ ವಿಶ್ವಾಸವೇ ಆಗಿದೆ! ನಮಗೆ ನಿಕಟನಾಗಿರುವ,  ನಮ್ಮ ರಹಸ್ಯ-ಬಹಿರಂಗಗಳನ್ನು ಬಲ್ಲ, ನಮ್ಮನ್ನು ಅತೀವವಾಗಿ ಪ್ರೀತಿಸುವ ಅಲ್ಲಾಹನನ್ನು ಭೌತಿಕವಾದ ವ್ಯವಸ್ಥೆಗಳೊಂದಿಗೆ ಹೋಲಿಸುವುದು ಸರಿಯಲ್ಲ. ಇವರು ಅಲ್ಲಾಹನ ಕುರಿತು ಅರಿತಿರುವುದು ಕುರ್ ಆನಿನಿಂದಾಗಲೀ ಪ್ರವಾದಿ ಚರ್ಯೆ ಯಿಂದಾಗಲೀ ಅಲ್ಲ. ಬದಲಾಗಿ ಕೆಲವು ದಂತಕಥೆಗಳ ಮತ್ತು ಕಟ್ಟು ಕಥೆಗಳ ಮೂಲಕವಾಗಿದೆ. ಇವರ ತವಸ್ಸುಲ್'ಗೂ ಇಸ್ಲಾಮಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಅದು ಅನ್ಯಧರ್ಮೀಯರಿಂದ ಎರವಲು ಪಡೆದ ಅನಾಚಾಗಳಾಗಿವೆ. ಆದರೆ ಶರೀಅತ್ತಿನಲ್ಲಿ ಅನುಮತಿಸಲಾಗಿರುವ ಕೆಲವು ತವಸ್ಸುಲ್ ಗಳಿವೆ. ಅವುಗಳು ಈ ರೀತಿಯಾಗಿದೆ.

1. ನಾವು ಮಾಡುವ ಸತ್ಕರ್ಮಗಳ ಮೂಲಕ ಮಾಡಲಾಗುವ ತವಸ್ಸುಲ್:-
••• ಅಲ್ಲಾಹ್ ಮತ್ತು ಅವನ ರಸೂಲರನ್ನು(ಸ.ಅ) ಅನುಸರಿಸುತ್ತಾ, ಅಲ್ಲಾಹ್ ಮತ್ತು ರಸೂಲ್(ಸ.ಅ) ಆದೇಶಿಸಿರುವುದನ್ನು ನಿರ್ವಹಿಸಿ ವಿರೋಧಿಸಿರುವುದನ್ನು ವರ್ಜಿಸಿ ಬದುಕುವ ಮೂಲಕ ಸತ್ಕರ್ಮಗಳನ್ನು ಮಾಡುವುದು ಇದರಲ್ಲಿ ಪ್ರಮುಖವಾಗಿದೆ. ಕುರ್ ಆನ್ ಹೀಗೆ ನುಡಿಯುತ್ತದೆ.

يَا أَيُّهَا الَّذِينَ آمَنُوا اتَّقُوا اللَّهَ وَابْتَغُوا إِلَيْهِ الْوَسِيلَةَ وَجَاهِدُوا فِي سَبِيلِهِ لَعَلَّكُمْ تُفْلِحُونَ

ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವನ್ನು ಭಯಪಡಿರಿ ಮತ್ತು ಅವನೆಡೆಗೆ ಸಮೀಪಗೊಳ್ಳಲಿರುವ ಮಾರ್ಗವನ್ನು ಹುಡುಕಿರಿ ಹಾಗೂ ಅವನ ಮಾರ್ಗದಲ್ಲಿ ಹೋರಾಡಿರಿ. (ತನ್ಮೂಲಕ) ನಿಮಗೆ ಯಶಸ್ವಿಯಾಗಲು ಸಾಧ್ಯವಾಗಬಹುದು.

[ಅಲ್-ಮಾ'ಇದಃ : 35]

ಈ ಸೂಕ್ತಿಯನ್ನು ಕೆಲವು ಉರೂಸ್ ವಾದಿ ದುರ್ವ್ಯಾಖ್ಯಾನ ವೀರರು ದುರ್ವ್ಯಾಖ್ಯಾನ ಮಾಡುತ್ತಾರೆ. ಮತ್ತು ಅವರು ಹೇಳುತ್ತಾರೆ ಅಲ್ಲಾಹನೆಡೆಗೆ ಹತ್ತಿರ ಗೊಳಿಸುವ ಮಾರ್ಗ ಅವನ ಇಷ್ಟ ದಾಸರಾಗಿದ್ದಾರೆ ಎಂದು. ಆದರೆ ಈ ಸೂಕ್ತದಲ್ಲಿ ಹೇಳಿರುವುದು ಸ್ವಂತ ಸತ್ಕರ್ಮಗಳ ಮೂಲಕ ಅಲ್ಲಾಹನಿಗೆ ನಿಕಟಗೊಳ್ಳುವುದರ ಕುರಿತಾಗಿದೆ. ಈ ವಿಷಯದಲ್ಲಿ ಕುರ್ ಆನ್ ವ್ಯಾಖ್ಯಾನಕಾರರ ನಡುವೆ ಭಿನ್ನಾಭಿಪ್ರಾಯವಿಲ್ಲವೆಂದು ತಫ್ಸೀರ್ ಇಬ್ನ್ ಕಸೀರ್'ನಲ್ಲಿ ಪ್ರತ್ಯೇಕವಾಗಿ ಹೇಳಲಾಗಿದೆ.

(ತಫ್ಸೀರ್ ಇಬ್ನ್ ಕಸೀರ್ 2/53)

ಗುಹೆಯಲ್ಲಿ ಸಿಲುಕಿದ ಮೂವರ ಕುರಿತು ವಿವರಿಸುವ ಪ್ರಸಿದ್ಧವಾದ ಹದೀಸ್ ಸತ್ಕರ್ಮಗಳ ಮೂಲಕ ಮಾಡಬಹುದಾದ ತವಸ್ಸುಲ್'ಗಿರುವ ಉದಾಹರಣೆ ಯಾಗಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ ಪ್ರತಿಯೊಬ್ಬರಿಗೂ ತಾವೆಸಗಿದ ಇಬಾದತ್(ಸತ್ಕರ್ಮ) ಗಳ ಮೂಲಕ ತವಸ್ಸುಲ್ ಮಾಡುವುದು ಸಮ್ಮತಾರ್ಹವಾಗಿದೆ.

2. ಜೀವಂತವಿರುವವರ ಪ್ರಾರ್ಥನೆಯ ಮೂಲಕ ತವಸ್ಸುಲ್ ಮಾಡುವುದು:-
••• ಇದು ತವಸ್ಸುಲ್ ಮಾಡುವ ವ್ಯಕ್ತಿ, ಇಂತಹ ಕಾರ್ಯಕ್ಕಾಗಿ ತನಗೋಸ್ಕರ ಅಲ್ಲಾಹನಲ್ಲಿ ಪ್ರಾರ್ಥಿಸಬೇಕೆಂದು ಇನ್ನೋರ್ವನಲ್ಲಿ ಅಪೇಕ್ಷಿಸುವುದು.

ಓರ್ವ ಅಹ್'ರಾಬಿ(ಗ್ರಾಮೀಣ ಅರಬಿ) ಪ್ರವಾದಿ(ಸ.ಅ) ರ ಬಳಿ ಆಗಮಿಸಿ ಮಳೆಗಾಗಿ ಪ್ರಾರ್ಥಿಸಲು ಅಪೇಕ್ಷಿಸಿದ್ದು  ಇದಕ್ಕೊಂದು ಉದಾಹರಣೆಯಾಗಿದೆ. ಇದು ಮುತ್ತಫಕುನ್ ಅಲೈಹಿಯ ವರದಿಯಾಗಿದೆ.  ಇದೇ ರೀತಿ ನಮಗೂ ಜೀವಂತವಿರುವ ಸಜ್ಜನರಲ್ಲಿ ಪ್ರಾರ್ಥಿಸಲು ಅಪೇಕ್ಷಿಸಬಹುದು. ಉಮರ್ ಬಿನ್ ಖತ್ತಾಬ್ (ರ) ರವರು ಉಮ್ರಾ ನಿರ್ವಹಿಸಲು ಮಕ್ಕಾಗೆ ತೆರಳುವಾಗ ಪ್ರವಾದಿ(ಸ.ಅ) ರವರು ಅವರೊಂದಿಗೆ: "ಗೆಳೆಯಾ! ನಿನ್ನ ಪ್ರಾರ್ಥನೆಯಲ್ಲಿ ನಮ್ಮನ್ನೂ ಸೇರಿಸು" ಎಂದಿರುವುದು ಇದಕ್ಕಿರುವ ಇನ್ನೊಂದು ಪುರಾವೆಯಾಗಿದೆ.

ಆದರೆ ತವಸ್ಸುಲ್ ಮಾಡಲಾಗುವ ವ್ಯಕ್ತಿ ಜೀವಂತವಿರುವ ಕಾಲದಲ್ಲಿ ಮಾತ್ರ ಈ ತವಸ್ಸುಲ್ ಸಮ್ಮತಾರ್ಹವಾಗುತ್ತದೆ. ಅದು ಪ್ರವಾದಿ ಚರ್ಯೆಯೂ ಕೂಡ. ಯಾಕೆಂದರೆ ಪೂರ್ವಿಕ ಪ್ರವಾದಿಗಳಲ್ಲಿ ನಮ್ಮ ಮುತ್ತು ಮುಹಮ್ಮದ್ ರಸೂಲುಲ್ಲಾಹಿ(ಸ ಅ) ರವರು ತವಸ್ಸುಲ್ ಮಾಡಿಲ್ಲ. ಆದರೆ ಕೆಲವು ಅರ್ಧ ಕಲಿತ ಹಾಗೆ ವರ್ತಿಸುವ ಮುಲ್ಲಾಗಳು ಇಸ್ರಾ ಮಿಅರಾಜ್ ನ ರಾತ್ರಿ ಮೂಸ(ಅ) ರವರೊಂದಿಗೆ ನಮ್ಮ ನೆಬಿ(ಸ.ಅ) ಯವರು ತವಸ್ಸುಲ್ ಮಾಡಿದ್ದಾರೆ ಎಂದು ಪ್ರವಾದಿ(ಸ.ಅ) ರ ಮೇಲೆ ಶಿರ್ಕ್ ಆರೋಪ ಹೊರಿಸುವುದು ನಡೆಯುತ್ತಾ ಇದೆ. ಅದೇನೇ ಆರೋಪ ಮಾಡಲಿ ಪ್ರವಾದಿ(ಸ.ಅ) ರ ಮೇಲೆ ಆರೋಪ ಹೊರಿಸುವ ಸುಳ್ಳು ಪ್ರಚಾರ ಮಾಡುವವರನ್ನು ಅಲ್ಲಾಹ್ ನೋಡಿಕೊಳ್ಳುವನು.

3. ಅಲ್ಲಾಹನ ನಾಮ-ವಿಶೇಷಣಗಳ ಮೂಲಕ ಮಾಡಲಾಗುವ ತವಸ್ಸುಲ್:-
••• ಇದು ಅನುಮತಿಸಲಾದ ತವಸ್ಸುಲ್ ನ ಇನ್ನೊಂದು ವಿಧವಾಗಿದೆ. ಅಲ್ಲಾಹನನ್ನು ಸ್ತುತಿಸಿ, ಅವನನ್ನು ಮಹತ್ವೀಕರಿಸಿ, ಅವನ ಮಹತ್ವವಾದ ನಾಮಗಳ ಮತ್ತು ಉನ್ನತವಾದ ಗುಣ - ವಿಶೇಷಣಗಳ ಮೂಲಕ ಅವನ ಕೀರ್ತನೆ ಮಾಡಿ,  ತರುವಾಯ ಅವನಲ್ಲಿ ತಾನಿಚ್ಚಿಸುವ ಕಾರ್ಯಕ್ಕಾಗಿ ಪ್ರಾರ್ಥಿಸಬೇಕು. ಇದಾಗಿದೆ ಅದರ ವಿಧಾನ. ಸೂರಃ ಅಹ್'ರಾಫ್ ನ 180 ನೇ ವಚನದಲ್ಲಿ ಇದರ ಬಗ್ಗೆ ಸ್ಪಷ್ಟವಾಗಿ ಹೇಳಿದೆ.

وَلِلَّهِ الْأَسْمَاءُ الْحُسْنَىٰ فَادْعُوهُ بِهَا ۖ وَذَرُوا الَّذِينَ يُلْحِدُونَ فِي أَسْمَائِهِ ۚ سَيُجْزَوْنَ مَا كَانُوا يَعْمَلُونَ

ಅಲ್ಲಾಹುವಿಗೆ ಅತ್ಯುತ್ತಮವಾದ ನಾಮಗಳಿವೆ. ಆದ್ದರಿಂದ ನೀವು ಅವನನ್ನು ಆ ನಾಮಗಳಿಂದ ಕರೆಯಿರಿ. ಅವನ ನಾಮಗಳಲ್ಲಿ ಕೃತ್ರಿಮವನ್ನು ತೋರಿಸುವವ ರಾರೋ ಅವರನ್ನು ಬಿಟ್ಟುಬಿಡಿರಿ. ಅವರು ಮಾಡಿಕೊಂಡಿರುವುದರ ಫಲವನ್ನು ತರುವಾಯ ಅವರಿಗೆ ನೀಡಲಾಗುವುದು.

[ಅಲ್-ಅ'ಅರಾಫ್ : 180]

ಸಂಕ್ಷಿಪ್ತವಾಗಿ ಹೇಳುವುದಾದರೆ, ಇಸ್ಲಾಮ್ ತವಸ್ಸುಲನ್ನು ಪೂರ್ಣವಾಗಿ ನಿರಾಕರಿಸುವುದಿಲ್ಲ ಮತ್ತು ಅದರಲ್ಲಿ ಅನುಮತಿಸಲಾದವುಗಳೂ ಇವೆ ಎಂದು ಈ ಮೇಲಿನ ವಿವರಣೆಯಲ್ಲಿ ಸ್ಪಷ್ಟವಾಯಿತಲ್ಲವೇ.... ಆದರೆ ಇಂದು ನಮ್ಮ ಸಮೂಹದಲ್ಲಿ ಅತಿಹೆಚ್ಚಾಗಿ ರೂಢಿಯಲ್ಲಿರುವ ತವಸ್ಸುಲ್ ಈ ಮೇಲೆ ವಿವರಿಸಿದ ರೀತಿಯಲ್ಲಿ ಅಲ್ಲ, ಬದಲಾಗಿ ಮರಣ ಹೊಂದಿದ ಮಹಾತ್ಮರ ಮತ್ತು ಅವರ ಹಕ್ಕ್, ಜಾಹ್, ಬರ್ಕತ್'ಗಳ ಮೂಲಕವಾಗಿವೆ ಎಂಬುದರಲ್ಲಿ ಸಂದೇಹವೇ ಇಲ್ಲ. ಇದೆಲ್ಲವೂ ಇಸ್ಲಾಮ್ ಕಲಿಸದವುಗಳೂ ಅನ್ಯ ಧರ್ಮೀಯರಿಂದ ನಮ್ಮ ಸಮುದಾಯದೊಳಗೆ ನುಸುಳಿ ಬಂದಂತವುಗಳಾಗಿವೆ. ಅದು ಇಸ್ಲಾಮಿನಲ್ಲಿ ಸೇರಿದ್ದಾಗಿದೆ ಎಂದು ಸಾಬೀತು ಪಡಿಸಲು ಅದನ್ನು ಆಚರಿಸುವವರಿಗೆ ಎಂದಿಗೂ ಸಾಧ್ಯವಿಲ್ಲ. ಕುರ್ ಆನಿನಲ್ಲಿ ಹದೀಸಿನಲ್ಲಿ ಹಲವು ರೀತಿಯ ಪ್ರಾರ್ಥನೆಗಳಿವೆ, ಆದರೆ ಅವುಗಳಲ್ಲಿ ಯಾವುದೇ ಒಂದು ಪ್ರಾರ್ಥನೆಯೂ ಕೂಡ ಗತಿಸಿ ಹೋದ ಪ್ರವಾದಿಗಳು ಅಥವಾ ಸಜ್ಜನರನ್ನು ಕರೆದು ಆ ಮೂಲಕ ಅಲ್ಲಾಹನಲ್ಲಿ ಪ್ರಾರ್ಥಿಸುವ ಒಂದೇ ಒಂದು ಪ್ರಾರ್ಥನೆ ಇಲ್ಲ ಎಂಬುದು ಗಮನಾರ್ಹವಾಗಿದೆ.


6 Oct 2016

ಪ್ರವಾದಿ ﷺ ಸಾಮಾನ್ಯ ಮನುಷ್ಯರೇ?

ಪ್ರವಾದಿ ﷺ ಸಾಮಾನ್ಯ ಮನುಷ್ಯರೇ?

ಪ್ರವಾದಿ ﷺ ರು ಈ ಲೋಕದಲ್ಲಿರುವ ಬೇರೆ ಎಲ್ಲಾ ಸೃಷ್ಟಿಗಳಿಗಿಂತ ಅನೇಕ ವೈಶಿಷ್ಟತೆ ಮತ್ತು ಶ್ರೇಷ್ಟತೆಯಿರುವ ಮಹಾತ್ಮರಾಗಿದ್ದರು ಎಂದು ಇಸ್ಲಾಂ ಕಲಿಸುತ್ತದೆ. ನುಬುವ್ವತ್, ರಿಸಾಲತ್, ಮುಹ್'ಜಿಝತ್, ಪಾಪ ಸುರಕ್ಷತೆ.... ಮೊದಲಾದವುಗಳು ಕೆಲವು ಉದಾಹರಣೆಗಳಾಗಿವೆ. ಮಾತ್ರವಲ್ಲದೆ ಪ್ರವಾದಿ ﷺ ರಿಗೆ ಇತರ ಪ್ರವಾದಿಗಳಂತೆ ಪ್ರತ್ಯೇಕವಾದ ಬೇರೆ ಹಲವು ಪ್ರತ್ಯೇಕ ಶ್ರೇಷ್ಠತೆ ಕೂಡಾ ಇದೆ.

ಉದಾ:- ಪಪ್ರಪ್ರಥಮವಾಗಿ ಸ್ವರ್ಗ ಪ್ರವೇಶಿಸುವವರೂ, ಪರ ಲೋಕದಲ್ಲಿ ಶಫಾಅತ್ ಮಾಡಲು ಮೊದಲು ಅನುಮತಿ ಲಭಿಸುವವರೂ, ಹೌಲುಲ್ ಕೌಸರ್ ನಿಂದ ಪಾನೀಯ ಕೊಡುವ ಅರ್ಹತೆ ಲಭಿಸುವವರೂ ಪ್ರವಾದಿ ﷺ ಆಗಿರುವರು.

ಈ ವಾಸ್ತವಿಕತೆಯನ್ನು ಹೇಳುವವರನ್ನು ಮುಸ್ಲಿಯಾರ್ ಗಳು ಪ್ರವಾದಿ ﷺ ರನ್ನು ಸಾಮಾನ್ಯ ಮನುಷ್ಯರನ್ನಾಗಿ ಮಾಡುವವರು, ಅವರನ್ನು ಪ್ರೀತಿಸದವರು ಎಂದು ಅಪಪ್ರಚಾರ ನಡೆಸುತ್ತಾರೆ.

ಆದರೆ, ಕುರಾನ್ ಹೇಳುವುದನ್ನು ನೋಡಿ.

قُلْ إِنَّمَا أَنَا بَشَرٌ مِثْلُكُمْ يُوحَىٰ إِلَيَّ أَنَّمَا إِلَٰهُكُمْ إِلَٰهٌ وَاحِدٌ ۖ فَمَنْ كَانَ يَرْجُو لِقَاءَ رَبِّهِ فَلْيَعْمَلْ عَمَلًا صَالِحًا وَلَا يُشْرِكْ بِعِبَادَةِ رَبِّهِ أَحَدًا

(ಓ ಪ್ರವಾದಿಯವರೇ!) ಹೇಳಿರಿ: ‘ನಾನು ನಿಮ್ಮಂತಿರುವ ಒಬ್ಬ ಮನುಷ್ಯನು ಮಾತ್ರವಾಗಿರುವೆನು.[559] ನಿಮ್ಮ ಆರಾಧ್ಯನು ಏಕಮೇವ ಆರಾಧ್ಯನಾಗಿರುವನೆಂದು ನನಗೆ ದಿವ್ಯಸಂದೇಶ ನೀಡಲಾಗುತ್ತಿದೆ. ಆದ್ದರಿಂದ ಯಾರಾದರೂ ತನ್ನ ಪ್ರಭುವಿನ ಭೇಟಿಯನ್ನು ಆಶಿಸುವು ದಾದರೆ ಅವನು ಸತ್ಕರ್ಮವನ್ನು ಮಾಡಲಿ ಮತ್ತು ತನ್ನ ಪ್ರಭುವಿನ ಆರಾಧನೆಯಲ್ಲಿ ಯಾರನ್ನೂ ಸಹಭಾಗಿಯನ್ನಾಗಿ ಮಾಡದಿರಲಿ’.

ಟಿಪ್ಪಣಿಗಳು :
[559] ಪ್ರವಾದಿ ಮುಹಮ್ಮದ್ ﷺ ‍ರವರು ತಿನ್ನುವ, ಕುಡಿಯುವ, ಮಾಂಸ-ನೆತ್ತರುಗಳಿರುವ, ನೋವು-ನಲಿವುಗಳನ್ನು ಹೊಂದಿರುವ ಓರ್ವ ಮನುಷ್ಯರೇ ಆಗಿದ್ದರು. ಅಲ್ಲಾಹುವಿನಿಂದ ಅವರಿಗೆ ವಹ್ಯ್ ಲಭಿಸುತ್ತದೆ ಎಂಬುದು ಅವರನ್ನು ಇತರ ಜನಸಾಮಾನ್ಯರಿಂದ ಉನ್ನತಗೊಳಿಸುತ್ತದೆ.

[ಅಲ್-ಕಹ್'ಫ್ : 110]

قُلْ إِنَّمَا أَنَا بَشَرٌ مِثْلُكُمْ يُوحَىٰ إِلَيَّ أَنَّمَا إِلَٰهُكُمْ إِلَٰهٌ وَاحِدٌ فَاسْتَقِيمُوا إِلَيْهِ وَاسْتَغْفِرُوهُ ۗ

ಹೇಳಿರಿ: ‘ನಾನು ನಿಮ್ಮಂತಿರುವ ಒಬ್ಬ ಮನುಷ್ಯ ಮಾತ್ರವಾಗಿರುವೆನು. ನಿಮ್ಮ ಆರಾಧ್ಯನು ಏಕಮೇವ ಆರಾಧ್ಯ ನಾಗಿರುವನೆಂದು ನನಗೆ ದಿವ್ಯಸಂದೇಶ ನೀಡಲಾಗುತ್ತಿದೆ. ಆದ್ದರಿಂದ ಅವನೆಡೆಗಿರುವ ಮಾರ್ಗದಲ್ಲಿ ನೀವು ನೇರವಾಗಿ ನೆಲೆಗೊಳ್ಳಿರಿ. ಅವನೊಂದಿಗೆ ಪಾಪಮುಕ್ತಿಯನ್ನು ಬೇಡಿರಿ.

[ಫುಸ್ಸಿಲತ್ : 6]

قَالَتْ لَهُمْ رُسُلُهُمْ إِنْ نَحْنُ إِلَّا بَشَرٌ مِثْلُكُمْ وَلَٰكِنَّ اللَّهَ يَمُنُّ عَلَىٰ مَنْ يَشَاءُ مِنْ عِبَادِهِ ۖ وَمَا كَانَ لَنَا أَنْ نَأْتِيَكُمْ بِسُلْطَانٍ إِلَّا بِإِذْنِ اللَّهِ ۚ وَعَلَى اللَّهِ فَلْيَتَوَكَّلِ الْمُؤْمِنُونَ

ಅವರೆಡೆಗೆ ಕಳುಹಿಸಲಾದ ಸಂದೇಶವಾಹಕರು ಅವರೊಂದಿಗೆ ಹೇಳಿದರು: ‘ನಾವು ನಿಮ್ಮಂತಿರುವ ಮನುಷ್ಯರು ಮಾತ್ರವಾಗಿರುವೆವು. ಆದರೆ ಅಲ್ಲಾಹು ತನ್ನ ದಾಸರ ಪೈಕಿ ತಾನಿಚ್ಛಿಸುವವರ ಮೇಲೆ ಔದಾರ್ಯ ತೋರುವನು. ಅಲ್ಲಾಹುವಿನ ಅನುಮತಿಯ ವಿನಾ ನಿಮಗೆ ಯಾವುದಾದರೂ ಆಧಾರ ಪ್ರಮಾಣವನ್ನು ತಂದುಕೊಡಲು ನಮ್ಮಿಂದಾಗದು. ಸತ್ಯವಿಶ್ವಾಸಿಗಳು ಅಲ್ಲಾಹುವಿನ ಮೇಲೆ ಭರವಸೆಯಿಡಲಿ.

[ಇಬ್ರಾಹೀಮ್ : 11]

أَوْ يَكُونَ لَكَ بَيْتٌ مِنْ زُخْرُفٍ أَوْ تَرْقَىٰ فِي السَّمَاءِ وَلَنْ نُؤْمِنَ لِرُقِيِّكَ حَتَّىٰ تُنَزِّلَ عَلَيْنَا كِتَابًا نَقْرَؤُهُ ۗ قُلْ سُبْحَانَ رَبِّي هَلْ كُنْتُ إِلَّا بَشَرًا رَسُولًا

ಅಥವಾ ತಮಗೆ ಒಂದು ಸ್ವರ್ಣ ಭವನ ವುಂಟಾಗುವ ತನಕ, ಅಥವಾ ತಾವು ಆಕಾಶಕ್ಕೆ ಏರಿ ಹೋಗುವ ತನಕ. ನಮಗೆ ಓದಬಹುದಾದ ಒಂದು ಗ್ರಂಥವನ್ನು ತಾವು ನಮ್ಮ ಬಳಿಗೆ ಇಳಿಸಿಕೊಡುವ ತನಕ ತಾವು ಏರಿ ಹೋಗಿರುವುದಾಗಿ ನಾವೆಂದೂ ವಿಶ್ವಾಸವಿಡಲಾರೆವು’. (ಓ ಪ್ರವಾದಿಯವರೇ!) ಹೇಳಿರಿ: ‘ನನ್ನ ಪ್ರಭು ಪರಮಪಾವನನು! ಸಂದೇಶ ವಾಹಕನಾಗಿರುವ ಒಬ್ಬ ಮಾನವ ಎಂಬುದರ ಹೊರತು ನಾನು ಇನ್ನೇನಾದರೂ ಆಗಿರುವೆನೇ?’[517]

ಟಿಪ್ಪಣಿಗಳು :
[517] ಹೇರಳವಾಗಿ ಅದ್ಭುತ ಕಾರ್ಯಗಳನ್ನು ತೋರಿಸುವ ಶಕ್ತಿ ಪ್ರವಾದಿಗಳಿಗಿಲ್ಲ. ಅಲ್ಲಾಹು ಅವರ ಮೂಲಕ ಅದ್ಭುತ ಕಾರ್ಯಗಳನ್ನು ಪ್ರಕಟಿಸಲು ಇಚ್ಛಿಸುವಾಗ ಅವು ಸಂಭವಿಸುತ್ತವೆ.

[ಅಲ್-ಇಸ್ರಾ'ಅ : 93]

ಇಲ್ಲಿ ನಾವು ತಿಳಿಯಬೇಕಾಗಿರುವುದು, ಪ್ರವಾದಿ ﷺ ರ ಕುರಿತು ಮನುಷ್ಯರ ಪರಮಾವಧಿ ತಿಳುವಳಿಕೆ ನಿಶ್ಚಯವಾಗಿಯೂ ತಾವೋರ್ವ ಮನುಷ್ಯರು ಹಾಗೂ ಅಲ್ಲಾಹನ ಸರ್ವ ಸೃಷ್ಟಿ ಗಳಲ್ಲಿ ಅತ್ಯುನ್ನತರು ಮಾತ್ರರಾಗಿದ್ದೀರಿ ಎಂದಾಗಿದೆ.

ಪ್ರವಾದಿ ﷺ ರ ಹಖೀಖತ್ತನ್ನು ತಿಳಿದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಎಷ್ಟು ಅಧ್ಯಯನ ನಡೆಸಿದರೂ ಮನುಷ್ಯರು ತಲುಪುವ ಪರಮಾವಧಿ ಜ್ಞಾನ ಪ್ರವಾದಿ ﷺ ರು ಇಲಾಹ್, ಅಥವಾ ಮಲಕ್ ಅಲ್ಲವೆಂದಾಗಿದೆ.

ಪ್ರತಿಯೊಬ್ಬ ಪ್ರವಾದಿಗಳಲ್ಲೂ ಸಾಧಾರಣತ್ವ, ಮತ್ತು ಅಸಾಧಾರಣತ್ವ ಇದೆ.

ಸಾಧಾರಣತ್ವ: ಎಂದರೆ ತಿನ್ನುವುದು, ಕುಡಿಯುವುದು, ನಿದ್ರಿಸುವುದು, ಮಾತನಾಡುವರು, ವ್ಯಾಪಾರ, ಪತಿ-ಪತ್ನಿ ಸಂಬಂಧ, ಮಲ ಮೂತ್ರ ವಿಸರ್ಜನೆ, ನೋವು ನಲಿವು, ಮಾಂಸ-ನೆತ್ತರುಗಳಿರುವ, ನಮ್ಮಂತೆಯೇ ರೂಪವಿರುವ ಸಾಮಾನ್ಯ ಮನುಷ್ಯರಾಗಿದ್ದಾರೆ.

ಅಸಾಧಾರಣತ್ವ: ಎಂದರೆ ಅಲ್ಲಾಹನಿಂದ ವಹೀಹ್ ಲಭಿಸುವವರೂ, ಪಪ್ರಪ್ರಥಮವಾಗಿ ಸ್ವರ್ಗ ಪ್ರವೇಶಿಸುವವರೂ, ಪರ ಲೋಕದಲ್ಲಿ ಶಫಾಅತ್ ಮಾಡಲು ಮೊದಲು ಅನುಮತಿ ಲಭಿಸುವವರೂ, ಹೌಲುಲ್ ಕೌಸರ್ ನಿಂದ ಪಾನೀಯ ಕೊಡುವ ಅರ್ಹತೆ ಲಭಿಸುವವರೂ, ಇತ್ಯಾದಿ... ಪ್ರವಾದಿ ﷺ ಆಗಿರುವರು. ಇದೆಲ್ಲವೂ ಅಸಾಧಾರಣ ವ್ಯಕ್ತಿತ್ವಕ್ಕೆ ಉದಾಹರಣೆಗಳಾಗಿವೆ.
ಎಂದರೆ, ಹೇರಳವಾಗಿ ಅದ್ಭುತ ಕಾರ್ಯಗಳನ್ನು ತೋರಿಸುವ ಶಕ್ತಿ ಪ್ರವಾದಿಗಳಿಗಿಲ್ಲ. ಅಲ್ಲಾಹುಅವರ ಮೂಲಕ ಅದ್ಭುತ ಕಾರ್ಯಗಳನ್ನು ಪ್ರಕಟಿಸಲು ಇಚ್ಛಿಸುವಾಗ ಅವು ಸಂಭವಿಸುತ್ತವೆ.

ಪ್ರತಿಯೊಬ್ಬ ಪ್ರವಾದಿಗಳನ್ನು ನಾವು ಗೌರವಿಸಬೇಕು, ಅವರು ನಡೆದು ಬಂದ ದಾರಿಯನ್ನು ನಾವು ಹಿಂಬಾಲಿಸಬೇಕು. ಆದರೆ ಯಹೂದಿ ಮತ್ತು ಕ್ರೈಸ್ತರಂತೆ ಪ್ರವಾದಿಗಳನ್ನು ದಿವ್ಯತ್ವಕ್ಕೇರಿಸುವುದು, ಹಾಗೂ ಸತ್ಯ ವಿಶ್ವಾಸಿಗಳನ್ನು ಅಪಮಾನಿಸಿ ತೇಜೋವಧೆ ಮಾಡುವುದು ಸಲ್ಲದು.
ಪ್ರವಾದಿಗಳ ಪದವಿಗೆ ನ್ಯೂನತೆಗಳನ್ನು ಉಂಟು ಮಾಡದೆ ಮಾನುಷಿಕ ಕಾರ್ಯಗಳೆಲ್ಲವೂ ಅವರಿಂದ ಸಂಭವಿಸುವುದರಲ್ಲಿ ವಿರೋಧವಿಲ್ಲ.

ಕುರಾನ್ ಹೇಳುವುದನ್ನು ನೋಡಿ.

وَمَا أَرْسَلْنَا قَبْلَكَ مِنَ الْمُرْسَلِينَ إِلَّا إِنَّهُمْ لَيَأْكُلُونَ الطَّعَامَ وَيَمْشُونَ فِي الْأَسْوَاقِ ۗ وَجَعَلْنَا بَعْضَكُمْ لِبَعْضٍ فِتْنَةً أَتَصْبِرُونَ ۗ وَكَانَ رَبُّكَ بَصِيرًا

ಆಹಾರವನ್ನು ಸೇವಿಸುವವರಾಗಿ ಮತ್ತು ಪೇಟೆಗಳಲ್ಲಿ ನಡೆಯುವವರಾಗಿ ಹೊರತು ತಮಗಿಂತ ಮುಂಚೆ ನಾವು ಸಂದೇಶವಾಹಕರ ಪೈಕಿ ಯಾರನ್ನೂ ಕಳುಹಿಸಿಲ್ಲ. ನೀವು ತಾಳ್ಮೆ ವಹಿಸುವಿರೋ ಎಂದು ನೋಡುವುದಕ್ಕಾಗಿ ನಿಮ್ಮಲ್ಲಿ ಕೆಲವರನ್ನು ನಾವು ಇತರ ಕೆಲವರಿಗೆ ಒಂದು ಪರೀಕ್ಷೆಯನ್ನಾಗಿ ಮಾಡಿರುವೆವು.[690] ತಮ್ಮ ಪ್ರಭು (ಎಲ್ಲವನ್ನೂ) ವೀಕ್ಷಿಸುವವನಾಗಿರುವನು.

ಟಿಪ್ಪಣಿಗಳು :
[690] ಅಲ್ಲಾಹು ಕೆಲವರಿಗೆ ಆಧ್ಯಾತ್ಮಿಕ ಪದವಿಗಳನ್ನು ನೀಡುತ್ತಾನೆ. ಕೆಲವರಿಗೆ ಲೌಕಿಕ ಸ್ಥಾನಮಾನಗಳನ್ನೂ ಸಮೃದ್ಧಿಯನ್ನೂ ನೀಡುತ್ತಾನೆ. ಕೆಲವರಿಗೆ ಏನನ್ನೂ ನೀಡುವುದಿಲ್ಲ. ಇವೆಲ್ಲವನ್ನೂ ಅಲ್ಲಾಹು ತನ್ನ ಯುಕ್ತಿಗನುಗುಣವಾಗಿಯೇ ಮಾಡುತ್ತಿದ್ದಾನೆ. ಅದನ್ನು ಅರ್ಥಮಾಡಿಕೊಂಡು ಕೃತಜ್ಞತಾಪೂರ್ವಕವಾಗಿ ಪ್ರತಿಕ್ರಿಯಿಸಲು ಮತ್ತು ಸಂಕಷ್ಟಗಳನ್ನು ತಾಳ್ಮೆಯೊಂದಿಗೆ ಎದುರಿಸಲು ಯಾರಿಗೆ ಸಾಧ್ಯವಾಗುತ್ತದೆ ಎಂದು ಅವನು ಪರೀಕ್ಷಿಸುತ್ತಾನೆ. ಪ್ರವಾದಿಯನ್ನು ಕಳುಹಿಸಿ ಅವರ ಬಗ್ಗೆ ನಿಮ್ಮ ನಿಲುವನ್ನೂ ಪರೀಕ್ಷಿಸುತ್ತಾನೆ. ನಿಮ್ಮ ವಿರೋಧಕ್ಕೆ ಪ್ರವಾದಿಯ ಪ್ರತಿಕ್ರಿಯೆ ಹೇಗಿರುತ್ತದೆಂಬುದನ್ನೂ ಪರೀಕ್ಷಿಸುತ್ತಾನೆ.

[ಅಲ್-ಫುರ್ಕಾನ್ : 20]

وَلَقَدْ أَرْسَلْنَا رُسُلًا مِنْ قَبْلِكَ وَجَعَلْنَا لَهُمْ أَزْوَاجًا وَذُرِّيَّةً ۚ وَمَا كَانَ لِرَسُولٍ أَنْ يَأْتِيَ بِآيَةٍ إِلَّا بِإِذْنِ اللَّهِ ۗ لِكُلِّ أَجَلٍ كِتَابٌ

ತಮಗಿಂತ ಮುಂಚೆಯೂ ನಾವು ಸಂದೇಶ ವಾಹಕರನ್ನು ಕಳುಹಿಸಿರುವೆವು. ಅವರಿಗೆ ನಾವು ಪತ್ನಿಯರನ್ನೂ ಸಂತತಿಗಳನ್ನೂ ಮಾಡಿಕೊಟ್ಟಿರುವೆವು. ಅಲ್ಲಾಹುವಿನ ಅನುಮತಿಯ ವಿನಾ ಯಾವುದೇ ಒಂದು ದೃಷ್ಟಾಂತವನ್ನು ತರಲು ಯಾವುದೇ ಸಂದೇಶವಾಹಕನಿಗೂ ಸಾಧ್ಯವಾಗಲಾರದು. ಪ್ರತಿಯೊಂದು ಕಾಲಕ್ಕೂ ಒಂದು (ಆಧಾರಪ್ರಮಾಣ) ಗ್ರಂಥವಿರುವುದು.

[ಅರ್ರ'ಅದ್ : 38]

ಪ್ರಮಾಣಗಳು ಪ್ರವಾದಿ ﷺ ರನ್ನು ಮೇಲಿನಂತೆ ಪರಿಚಯಿಸುತ್ತದೆ ಎನ್ನುವುದು ವ್ಯಕ್ತವಿದೆ. ಆದರೆ ಇಂದು ಸಮುದಾಯವು ಪ್ರವಾದಿ ﷺ ರ ಕುರಿತು ಇಸ್ಲಾಂ ಕಲಿಸದ ಕೆಲವು ವಿಶ್ವಾಸಗಳನ್ನು ಇಟ್ಟುಕೊಂಡಿರುವುದನ್ನು ನಾವು ನೋಡಬಹುದು.

ಉದಾ :- ಪ್ರವಾದಿಯವರಿಗೆ ನೆರಳಿಲ್ಲ, ಪ್ರವಾದಿಯವರ ಮೂತ್ರ ಶುದ್ದಿಯಾಗಿದೆ, ಅವರು ಆಧ್ಯಾತ್ಮಿಕವಾಗಿ ಮಲಕ್ ಆಗಿದ್ದಾರೆ, ಮುಂತಾದ ವಿಶ್ವಾಸಗಳು! ಇಂತಹ ಹಲವು ವಿಶ್ವಾಸಗಳನ್ನು ಸಮಸ್ತದವರು ಅವರ ಮದ್ರಸಾಗಳಲ್ಲಿ ಕೂಡಾ ಕಲಿಸಿ ಕೊಡುತ್ತಿದ್ದಾರೆ! ಆದರೆ ಇವುಗಳಿಗೆ ಇಸ್ಲಾಂನ ಪ್ರಮಾಣಗಳಲ್ಲಿ ಯಾವುದೇ ಆಧಾರಗಳಿಲ್ಲ.

ಸಂಕ್ಷಿಪ್ತವಾಗಿ ಹೇಳುವುದಾದರೆ ಪ್ರವಾದಿ ﷺ ರಿಗೆ ಧಾರಾಳ ವೈಶಿಷ್ಟತೆ ಇದ್ದರೂ ಮನುಷ್ಯ ಪ್ರಕೃತಿಯಲ್ಲಿ ಅವರು (ಹಸಿವು, ಬಾಯಾರಿಕೆ, ನೋವು, ದುಃಖ, ಭಾವನೆ, ವಿಚಾರ, ಮುಂತಾದ ಕಾರ್ಯಗಳಲ್ಲಿ) ನಮ್ಮಂತೆ ಓರ್ವ ಮನುಷ್ಯರಾಗಿದ್ದರು. ಅದೇ ಸಮಯ ನುಬುವತ್ ನ ಎಲ್ಲಾ ವೈಶಿಷ್ಟತೆಗಳು ಪ್ರವಾದಿ ﷺ ರಲ್ಲಿ ಮೇಳೈಸಿತ್ತು. ಆದರೆ ಅವರು ಇಚ್ಛಿಸುವಾಗ ಅತಿಮಾನುಷ ದೃಷ್ಟಾಂತಗಳನ್ನು ಪ್ರಕಟಿಸಲು, ಹಾಗೂ ಅಗೋಚರ ಕಾರ್ಯಗಳನ್ನು ತಿಳಿಯಲು ಅವರಿಗೆ ಸಾಧ್ಯವಿರಲಿಲ್ಲವೆಂದು ನಾವು ತಿಳಿದುಕೊಂಡೆವು. ಇದು ಈ ವಿಷಯದಲ್ಲಿ ಇಸ್ಲಾಂನ ನೈಜ ದೃಷ್ಟಿಕೋನವಾಗಿದೆ.

ಸಲಫಿಗಗಳು ಇದಕ್ಕಿಂತ ಭಿನ್ನವಾದ ವಿಶ್ವಾಸವನ್ನು ಯಾವತ್ತೂ ಇರಿಸಿಕೊಂಡವರಲ್ಲ. ಸಲಫಿಗಳ ಮಟ್ಟಿಗೆ ಹೇಳುವುದಾದರೆ ಕುರಾನ್ ಮತ್ತು ಸ್ವಹೀಹ್ ಆದ ಹದೀಸ್'ಗಳಲ್ಲಿ ಪ್ರವಾದಿ ﷺ ಹಾಗೂ ಇತರ ಪ್ರವಾದಿಗಳ ಕುರಿತು ಯಾವ ವೈಶಿಷ್ಟತೆಗಳನ್ನು ವಿವರಿಸಲಾಗಿದೆಯೋ ಅದರಲ್ಲಿ ಯಾವುದನ್ನೂ ನಿಷೇಧಿಸದೆ ಪ್ರತಿಯೊಂದನ್ನು ಯಥಾಪ್ರಕಾರ ಅಂಗೀಕರಿಸಿ ಪ್ರಚುರಪಡಿಸುವುದಾಗಿದೆ.

ಕರಾಮತ್ ಮುಅ್'ಜಿಝತ್ ಗಿಂತ ಮಿಗಿಲೇ?

ಕರಾಮತ್ ಮುಅ್'ಜಿಝತ್ ಗಿಂತಲೂ ಮಿಗಿಲೇ?

ಅಲ್ಲಾಹನು ಪರಿಶುದ್ಧ ಕುರ್'ಆನಿನಲ್ಲಿ ವಿವರಿಸುವುದನ್ನು ಗಮನಿಸಿ...

قَالُوا يَا مُوسَىٰ إِمَّا أَنْ تُلْقِيَ وَإِمَّا أَنْ نَكُونَ أَوَّلَ مَنْ أَلْقَىٰ

ಅವರು (ಮಾಂತ್ರಿಕರು) ಹೇಳಿದರು: ‘ಓ ಮೂಸಾ! ಒಂದೋ ತಾವು ಹಾಕಿರಿ ಅಥವಾ ಮೊದಲು ಹಾಕುವವರು ನಾವಾಗುವೆವು’.

 ... قَالَ بَلْ أَلْقُوا ۖ فَإِذَا حِبَالُهُمْ وَعِصِيُّهُمْ يُخَيَّلُ إِلَيْهِ مِنْ سِحْرِهِمْ أَنَّهَا تَسْعَىٰ

ಅವರು (ಮೂಸಾ) ಹೇಳಿದರು: ‘ಅಲ್ಲ, ನೀವು ಹಾಕಿರಿ’. ಆಗ ಅಗೋ! ಅವರ ಮಾಂತ್ರಿಕತೆಯಿಂದಾಗಿ ಅವರ ಹಗ್ಗಗಳು ಮತ್ತು ಬೆತ್ತಗಳು ಚಲಿಸುತ್ತಿರುವುದಾಗಿ ಅವರಿಗೆ ಭಾಸವಾಯಿತು.

 ... فَأَوْجَسَ فِي نَفْسِهِ خِيفَةً مُوسَىٰ

ಆಗ ಮೂಸಾರಿಗೆ ತಮ್ಮ ಮನದಲ್ಲಿ ಭಯ ಮೂಡಿತು.

 ... قُلْنَا لَا تَخَفْ إِنَّكَ أَنْتَ الْأَعْلَىٰ

ನಾವು ಹೇಳಿದೆವು: ‘ಭಯಪಡದಿರಿ. ಖಂಡಿತವಾ ಗಿಯೂ ಮೇಲುಗೈ ಸಾಧಿಸುವವರು ತಾವೇ ಆಗಿರುವಿರಿ.

 ... وَأَلْقِ مَا فِي يَمِينِكَ تَلْقَفْ مَا صَنَعُوا ۖ إِنَّمَا صَنَعُوا كَيْدُ سَاحِرٍ ۖ وَلَا يُفْلِحُ السَّاحِرُ حَيْثُ أَتَىٰ

ತಾವು ತಮ್ಮ ಬಲಗೈಯ್ಯಲ್ಲಿರುವುದನ್ನು (ಬೆತ್ತವನ್ನು) ಹಾಕಿರಿ. ಅವರು ನಿರ್ಮಿಸಿದ್ದೆಲ್ಲವನ್ನೂ ಅದು ನುಂಗುವುದು’. ಅವರು ಮಾಡಿರುವುದು ಮಾಂತ್ರಿಕನ ತಂತ್ರ ಮಾತ್ರವಾಗಿದೆ. ಮಾಂತ್ರಿಕನು ಎಲ್ಲೇ ಹೋದರೂ ಯಶಸ್ವಿಯಾಗಲಾರನು.

[ತ್ವಾಹಾ : 65 - 69]

 ಔಲಿಯಾಗಳು ಸ್ವಂತ ಇಚ್ಛೆಯಂತೆ ಕರಾಮತ್ ತೋರಿಸುತ್ತಾರೆ ಎಂದು ಅಲ್ಲಾಹನ ವಿಧಿ ವಿಶ್ವಾಸದ ನಿಯಮಗಳನ್ನು ಉಲ್ಲಂಘಿಸಿ ಇಮಾಮರ ಅಭಿಪ್ರಾಯಗಳನ್ನು, ಹದೀಸ್ ಗಳನ್ನು, ಕುರಾನಿನ ಸೂಕ್ತಿಗಳನ್ನು ತನ್ನ ವಾದವನ್ನು ಜಯಿಸಲು ಬೇಕಾಬಿಟ್ಟಿ ದುರ್ವ್ಯಾಖ್ಯಾನ ಮಾಡುವವರ ಗಮನಕ್ಕೆ.🔽

ಸೂರ ತ್ವಾಹಾ 67 ನೇ ವಚನದಲ್ಲಿ  ಮೂಸಾ  (ಅಸ)ರು ಹೆದರಿದ ಘಟನೆ ನಮಗೆ ತಿಳಿದು ಬರುತ್ತದೆ. ಮತ್ತು 68, 69 ನೇ ವಚನದಲ್ಲಿ ಅಲ್ಲಾಹನ ವಹೀಹ್ ನ ಬಗ್ಗೆ ವಿವರಿಸಿದ್ದನ್ನು ನೋಡಬಹುದು.

ಇಲ್ಲಿ ಯಾವುದೇ ಪ್ರವಾದಿಗಳಿಗೂ ಅಲ್ಲಾಹನ ವಹೀಹ್ ಇಲ್ಲದೇ ಸ್ವಂತ ಇಚ್ಛೆಯಂತೆ ಮುಅ್'ಜಿಝತನ್ನು ಪ್ರಕಟಿಸಲು ಸಾಧ್ಯವಿಲ್ಲ ಎಂದು ತಿಳಿದು ಬರುತ್ತದೆ. ಒಂದು ವೇಳೆ ಸ್ವಂತ ಇಚ್ಛೆಯಂತೆ ಪ್ರಕಟಿಸಲು ಸಾಮರ್ಥ್ಯವಿದೆ ಎಂದು ವಾದಿಸುವುದಾದರೆ ಮೇಲಿನ 67 ನೇ ಸೂಕ್ತಿಯಲ್ಲಿ ಇರುವಂತೆ ಮೂಸಾ (ಅಸ)ರು ಹೆದರುವ ಆವಶ್ಯಕತೆಯಾದರೂ ಏನು?...
ಮುಅ್'ಜಿಝತ್ ದಅವತ್ತಿನ ಭಾಗವಾಗಿದೆ ಎಂದ ಮಾತ್ರಕ್ಕೆ ಅಲ್ಲಾಹನ ವಹೀಹ್ ಇಲ್ಲದೇ ಸ್ವಂತ ಇಚ್ಛೆಯಂತೆ ಮುಅ್'ಜಿಝತನ್ನು ಪ್ರಕಟಿಸಲು ಸಾಧ್ಯವಿಲ್ಲ.

🔹ಕರಾಮತ್ ಔಲಿಯಾಗಳ  ಸ್ವಂತ ಸಾಮರ್ಥ್ಯದಿಂದ ಎಂದು ವಾದಿಸುವವರೇ... ಸ್ವಲ್ಪವಾದರೂ ಚಿಂತಿಸಿ...

ಅಲ್ಲಾಹನು ಅನುಗ್ರಹಿಸಲಿ...

✍ Abu Muadh.

ಸಮಸ್ತ ಸುನ್ನಿಗಳು ಓದುತ್ತಿರುವ ಖುತುಬ ಪ್ರವಾದಿ (ಸಅ)ರು ಓದಿದ್ದೇ ಆಗಿದೆಯೇ?

ಸಮಸ್ತ ಸುನ್ನಿಗಳು ಓದುತ್ತಿರುವ ಖುತುಬಾ ಪ್ರವಾದಿ (ಸಅ)ರು ಓದಿದ್ದೇ ಆಗಿದೆಯೇ?


ಸುನ್ನೀ ಮಸೀದಿಗಳಲ್ಲಿ ಓದುವ ನಬಾತಿ ಖುತುಬವು ಹಿಜ್ರ 335 ರಲ್ಲಿ ಜನಿಸಿ ಹಿಜ್ರ 374 ರಲ್ಲಿ ಮರಣ ಹೊಂದಿದ ಈಜಿಪ್ಟ್ ನ ಪಂಡಿತರಲ್ಲಿ ಒಬ್ಬರಾದ ಇಬ್ನು ನಬಾತತ್ ಅಲ್ ಮಿಸ್ರೀ ರವರು ಒಂದು ಕಾಲದಲ್ಲಿ ಪಾರಾಯಣ ಮಾಡಿದಂತಹ ಕುತುಬವಾಗಿದೆ. ಇದನ್ನು ಸುನ್ನೀ ಮಸೀದಿಗಳಲ್ಲಿ ಹುಟ್ಟಿನಿಂದ ಸಾಯುವ ವರೆಗೆ ಪುನರಾವರ್ತಿಸಿ ಪ್ರತೀ ವರ್ಷ ಓದಿದ್ದನ್ನೇ ಓದಲಾಗುತ್ತಿದೆ. ಈ ನಬಾತಿ ಖುತುಬವನ್ನು ಕೆ.ವಿ ಮೊಹಮ್ಮದ್ ಮುಸ್ಲಿಯಾರ್ ರವರು ಭಾಷಾಂತರಿಸಿದ 'ನಬಾತಿ ಖುತುಬ ಪರಿಭಾಷ ವಿವರ್ತನಂ' ಎಂಬ ಮಲಯಾಳಂ ಭಾಷಾಂತರ ಲಭ್ಯವಿದೆ. ಆದರೆ ಇತ್ತೀಚೆಗೆ ಎ.ಪಿ ಸುನ್ನಿಗಳು ಹೊಸತಾಗಿ ಖುತುಬದ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಒಟ್ಟಿನಲ್ಲಿ ಸುನ್ನಿಗಳ ವಾದವೇನೆಂದರೆ, ಪ್ರವಾದಿ (ﷺ) ರ ಖುತುಬಾದ ಭಾಷೆ ಅರಬಿಯಾಗಿದೆ ಎಂದಾಗಿದೆ.

ಪ್ರವಾದಿ (ಸಅ) ರು ಅರಬಿಯಲ್ಲಿ ಕುತುಬ ನಿರ್ವಹಿಸಿದ್ದರಿಂದ ಕುತುಬ ಅರಬಿಯಲ್ಲೇ ಆಗಬೇಕೆಂದು ವಾದಿಸುವವರು ಈಗ ಓದುತ್ತಿರುವ ಕುತುಬ ಪ್ರವಾದಿ (ಸಅ) ಓದಿದ್ದೇ ಆಗಿದೆಯೇ ಎಂದು ಪರಿಶೀಲಿಸಬೇಕಾಗಿದೆ.


ಆದರೆ ಪ್ರಸ್ತುತ ತೌಹೀದ್ ನ ಅಥವಾ ಸಲಫಿ ಮಸೀದಿಗಳಲ್ಲಿ ನಿರ್ವಹಿಸುತ್ತಿರುವ ಖುತುಬಾ ಪ್ರವಾದಿ  (ﷺ) ರ ಚರ್ಯೆಯಂತಿದೆ.


وَحَدَّثَنَا يَحْيَى بْنُ يَحْيَى، وَحَسَنُ بْنُ الرَّبِيعِ، وَأَبُو بَكْرِ بْنُ أَبِي شَيْبَةَ قَالَ يَحْيَى أَخْبَرَنَا وَقَالَ الآخَرَانِ، حَدَّثَنَا أَبُو الأَحْوَصِ، عَنْ سِمَاكٍ، عَنْ جَابِرِ بْنِ سَمُرَةَ، قَالَ كَانَتْ لِلنَّبِيِّ صلى الله عليه وسلم خُطْبَتَانِ يَجْلِسُ بَيْنَهُمَا يَقْرَأُ الْقُرْآنَ وَيُذَكِّرُ النَّاسَ ‏.‏


ಜಾಬಿರ್ ಇಬ್ನು ಸಮ್ರಾ (ರ) ಹೇಳುತ್ತಾರೆ: ಪ್ರವಾದಿ (ﷺ) ರಿಗೆ ಎರಡು ಖುತುಬಗಳಿದ್ದವು, ಆ ಎರಡು ಖುತುಬಗಳ ಮಧ್ಯೆ ಕುಳಿತುಕೊಳ್ಳುತ್ತಿದ್ದರು, ಕುರ್'ಆನ್ ಓದುತ್ತಿದ್ದರು ಮತ್ತು ಜನರಿಗೆ ಪ್ರಚೋದಿಸುತ್ತಿದ್ದರು ಅಥವಾ ಉಪದೇಶಿಸುತ್ತಿದ್ದರು.


(ಸಹೀಹ್ ಮುಸ್ಲಿಮ್ 862)


ಈ ಮೇಲಿನ ಪುರಾವೆಯಲ್ಲಿ ತಿಳಿಯುವುದೇನೆಂದರೆ ಅರಬೇತರ ರಾಷ್ಟ್ರಗಳಲ್ಲಿ ಕುರ್'ಆನ್ ಓದಿ ಜನರಿಗೆ ಉಪದೇಶ ಮಾಡಬೇಕಾದರೆ ಅರಬಿ ಅಲ್ಲದ ಭಾಷೆಯನ್ನೇ ಬಳಸಬೇಕಾಗುತ್ತದೆ. ಆದ್ದರಿಂದಲೇ ತೌಹೀದ್ ಅಥವಾ ಸಲಫಿ ಮಸೀದಿಗಳಲ್ಲಿ ನಿರ್ವಹಿಸುತ್ತಿರುವ ಖುತುಬಗಳು ಪ್ರವಾದಿ  (ﷺ) ರ ಖುತುಬಕ್ಕೆ ಸಮಾನವಾಗುತ್ತದೆ.

✍ Abu Muadh.

ಮಕ್ಕಾ ಮುಶ್ರಿಕರು ಮತ್ತು ಮುಸ್ಲಿಮರ ನಡುವೆ ಇದ್ದ ತರ್ಕ.

ಮಕ್ಕಾ ಮುಶ್ರಿಕರು ಮತ್ತು ಮುಸ್ಲಿಮರ ನಡುವೆ ಇದ್ದ ತರ್ಕ.

ಮಕ್ಕಾ ಮುಶ್ರಿಕರು ಮತ್ತು ಮುಸ್ಲಿಮರ ನಡುವೆ ಇದ್ದ ತರ್ಕ ಅಲ್ಲಾಹನ ವಹದಾನಿಯತ್ (ಅಲ್ಲಾಹನ ಏಕತ್ವ) ವಿಷಯದಲ್ಲಾಗಿದೆ.

ಅಬ್ರಹತ್ ನ ಸೈನ್ಯವು ಕಅಬಾಲಯವನ್ನು ಒಡೆದು ಹಾಕಲು ಬರುವಾಗ ಕಅಬಾಲಯದ ಆಧಿಪತ್ಯವು ಮುಶ್ರಿಕ್ ಆದ ಅಬ್ದುಲ್ ಮುತ್ತಲಿಬ್ ನ ಕೈಯಲ್ಲಾಗಿತ್ತು. ಆ ಸಂಧರ್ಭದಲ್ಲಿ ಅಬ್ದುಲ್ ಮುತ್ತಲಿಬ್ ನ ಪ್ರಾರ್ಥನೆ ಈ ರೀತಿಯಾಗಿದೆ.

اللهم يا رب هاذ البيت
 "ಈ ಮನೆಯ (ಕಅಬಾಲಯ) ಪರಿಪಾಲಕನಾದ ಓ ಅಲ್ಲಾಹನೇ" ಎಂದಾಗಿತ್ತು.

ಕಅಬಾಲಯವು ಅಲ್ಲಾಹನ ಭವನ ಇದನ್ನು ಅಲ್ಲಾಹನು ಸಂರಕ್ಷಿಸುತ್ತಾನೆ ಎಂದು ಮಕ್ಕಾ ಮುಶ್ರಿಕರಿಗೆ ಧೃಡ ವಿಶ್ವಾಸವಿತ್ತು. ಆದ್ದರಿಂದಲೇ ಅಬ್ದುಲ್ ಮುತ್ತಲಿಬ್ ಅಲ್ಲಾಹನನ್ನು ಕರೆದು ಪ್ರಾರ್ಥಿಸಿದ್ದು.

ಬದ್ರ್ ಯುದ್ಧದ ಸಂಧರ್ಭದಲ್ಲಿ ಅಬೂ ಜಹಲ್ ಕೂಡ ಯುದ್ಧಕ್ಕೆ ಹೊರಡುವ ಮುನ್ನ ಪವಿತ್ರ ಕ'ಅಬಾಲಯದ ಬಟ್ಟೆ ಹಿಡಿದು ಈ ಎರಡು ಗುಂಪುಗಳಲ್ಲಿ ಸತ್ಯ ಎಲ್ಲಿದೆಯೋ ಅಲ್ಲಿಗೇ ವಿಜಯ ಒಲಿದುಬರಲಿ ಎಂದು ಅಲ್ಲಾಹನಲ್ಲಿ ಪ್ರಾರ್ಥಿಸಿರುವುದಾಗಿ ನಮಗೆ ಚರಿತ್ರೆಗಳಲ್ಲಿ ಕಾಣಬಹುದಾಗಿದೆ.

ಇನ್ನು ಮಕ್ಕಾ ಮುಶ್ರಿಕರ ವಿಶ್ವಾಸ ಮತ್ತು ನಾಮಧಾರಿ ಮುಸ್ಲಿಯಾರುಗಳ ವಿಶ್ವಾಸವನ್ನು ಪರಿಶೀಲಿಸೋಣ...

ಸ್ವಹೀಹ್ ಮುಸ್ಲಿಮ್ ನಲ್ಲಿರುವ ಒಂದು ಹದೀಸನ್ನು ಗಮನಿಸಿ. 🔽

كتاب الحج
باب التَّلْبِيَةِ وَصِفَتِهَا وَوَقْتِهَا ‏

وَحَدَّثَنِي عَبَّاسُ بْنُ عَبْدِ الْعَظِيمِ الْعَنْبَرِيُّ، حَدَّثَنَا النَّضْرُ بْنُ مُحَمَّدٍ الْيَمَامِيُّ، حَدَّثَنَا عِكْرِمَةُ، - يَعْنِي ابْنَ عَمَّارٍ - حَدَّثَنَا أَبُو زُمَيْلٍ، عَنِ ابْنِ عَبَّاسٍ، - رضى الله عنهما - قَالَ كَانَ الْمُشْرِكُونَ يَقُولُونَ لَبَّيْكَ لاَ شَرِيكَ لَكَ - قَالَ - فَيَقُولُ رَسُولُ اللَّهِ صلى الله عليه وسلم ‏ "‏ وَيْلَكُمْ قَدْ قَدْ ‏"‏ ‏.‏ فَيَقُولُونَ إِلاَّ شَرِيكًا هُوَ لَكَ تَمْلِكُهُ وَمَا مَلَكَ ‏.‏ يَقُولُونَ هَذَا وَهُمْ يَطُوفُونَ بِالْبَيْتِ ‏.‏

Sahih Muslim 1185

ಮಕ್ಕಾ ಮುಶ್ರಿಕರು ಹಜ್ಜ್ ನಿರ್ವಹಿಸುವ ವೇಳೆ ಲಬ್ಬೈಕಲ್ಲಾಹುಮ್ಮ ಲಬ್ಬೈಕ್ ಎಂಬ ತಲ್ಬೀಯತ್ ಹೇಳುವ ಸಂಧರ್ಭದಲ್ಲಿ  "ಲಬ್ಬೈಕ ಲಾ ಶರೀಕ ಲಕ" ಎಂಬಲ್ಲಿಗೆ ಮುಟ್ಟುವಾಗ ಪ್ರವಾದಿ ﷺ ರು ಮಕ್ಕಾ ಮುಶ್ರಿಕರನ್ನು "ನಿಲ್ಲಿಸಿ, ಸಾಕು ಸಾಕು ನಿಮಗೆ ನಾಶ" ಎಂದು ತಡೆಯುತ್ತಾರೆ. ಆದರೆ ಮಕ್ಕಾ ಮುಶ್ರಿಕರು ಅದನ್ನು ಲೆಕ್ಕಿಸದೆ ಅವರು ಶಿರ್ಕ್ ನ ಘೋಷಣೆಯನ್ನು ಮುಂದುವರಿಸುತ್ತಾರೆ. ಅದು ಈ ಕೆಳಗಿನ ರೀತಿಯಲ್ಲಾಗಿದೆ.

فَيَقُولُونَ إِلاَّ شَرِيكًا هُوَ لَكَ تَمْلِكُهُ وَمَا مَلَكَ

"ನಿನಗೆ (ಅಲ್ಲಾಹನಿಗೆ) ಕೆಲವು ಸಹಭಾಗಿಗಳಿದ್ದಾರೆ (ಆರಾಧ್ಯರು). ಅವರು ನೀನು (ಅಲ್ಲಾಹನು) ಕೊಟ್ಟಂತಹ ಸಾಮರ್ಥ್ಯ ದಿಂದಲ್ಲದೆ ಅವರಿಗೆ ಎನೂ ಮಾಡಲು ಸಾಧ್ಯವಿಲ್ಲ". ಇದಾಗಿದೆ ಮಕ್ಕಾ ಮುಶ್ರಿಕರ ವಿಶ್ವಾಸ.

ವಿಪರ್ಯಾಸವೇನೆಂದರೆ ಮುಸ್ಲಿಂ ನಾಮಧಾರಿ ಮುಸ್ಲಿಯಾರುಗಳು ಇದೇ ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ. ಮುಸ್ಲಿಯಾರುಗಳ ವಿಶ್ವಾಸ ಮರಣ ಹೊಂದಿದ ಔಲಿಯಾ, ಅಂಬಿಯಾ, ಶುಹದಾಗಳು ಅಲ್ಲಾಹನು ಕೊಟ್ಟಂತಹ ಸಾಮರ್ಥ್ಯದಿಂದ ಸಹಾಯವನ್ನು ಮಾಡುತ್ತಾರೆ ಎಂದಾಗಿದೆ. ಇದೇ ವಿಶ್ವಾಸವನ್ನು ಇಟ್ಟುಕೊಂಡ ಮಕ್ಕಾ ಮುಶ್ರಿಕರು ಇಸ್ಲಾಮಿನಿಂದ ಹೊರಗೂ ಮತ್ತು ಮುಸ್ಲಿಯಾರುಗಳು ಇಸ್ಲಾಮಿನ ಒಳಗೂ ಆಗುವುದಾದರೂ ಹೇಗೆ? ಎಂಬುವುದನ್ನು ಚಿಂತಿಸಬೇಕಾಗಿದೆ.

ಇಲ್ಲಿ ನಮಗೆ ತಿಳಿದು ಬರುವ ವ್ಯತ್ಯಾಸವೇನೆಂದರೆ ಸಮಸ್ತ ಮುಸ್ಲಿಯಾರುಗಳು ಅಲ್ಲಾಹನಿಗೆ ಸಹಭಾಗಿ ಇಲ್ಲ ಅಂತ ಹೇಳಿ ಮಹಾತ್ಮರನ್ನು ಕರೆದು ಇಸ್ತಿಗಾಸ ಮಾಡುತ್ತಾರೆ. ಮಕ್ಕಾ ಮುಶ್ರಿಕರು ಅಲ್ಲಾಹನಿಗೆ ಸಹಭಾಗಿ ಇದ್ದಾರೆ ಎಂದು ಹೇಳಿ ಮಹಾತ್ಮರನ್ನು ಕರೆದು ಇಸ್ತಿಗಾಸ ಮಾಡುತ್ತಾರೆ. ಎಂದರೆ ಮಕ್ಕಾ ಮುಶ್ರಿಕರ ವಿಶ್ವಾದಲ್ಲಿ ಸ್ಥಿರತೆ ಇದೆ. ಮುಸ್ಲಿಯಾರುಗಳ ವಿಶ್ವಾಸದಲ್ಲಿ ಸ್ಥಿರತೆ ಇಲ್ಲ ಎಂಬುವುದು ಸ್ಪಷ್ಟವಾಗುತ್ತಿದೆ.

ಇನ್ನು ಮಕ್ಕಾ ಮುಶ್ರಿಕ್ ಗಳು ತಮ್ಮ ಕಷ್ಟಕಾಲದಲ್ಲಿ ಅಲ್ಲಾಹನೊಂದಿಗೆ ಮಾತ್ರ ಸಹಾಯ ಯಾಚಿಸಿದ್ದಾಗಿಯೂ ಆನಂತರ ಆ ಕಷ್ಟಗಳು ದೂರವಾಗಿ ಸುಖ ಬಂದಾಗ ತಮ್ಮ ಆರಾಧ್ಯರೆಡೆಗೆ ಮರಳಿದ್ದಾಗಿಯೂ ಕುರ್ ಆನ್ ಹೇಳುತ್ತೆ.

ಆದರೆ ಇಂದು ಈ ಮಕ್ಕಾ ಮುಶ್ರಿಕ್ ಗಳಿಗಿಂತಲೂ ಭೀಕರವಾದ ವಿಶ್ವಾಸವಿಟ್ಟು ನಮ್ಮ ನಡುವೆ ಮುಸ್ಲಿಮ್ ನಾಮಧಾರಿ ಮುಸ್ಲಿಯಾರುಗಳು ಬದುಕುತ್ತಿದ್ದಾರೆ. ನೀವೇ ಗಮನಿಸಿ ತಾಯಿಯು ತೊಟ್ಟಿಲು ತೂಗುವಾಗ "ಲಾಹಿಲಾಹ ಇಲ್ಲಲ್ಲಾಹು ಲಾಹಿಲಾಹ ಇಲ್ಲಲ್ಲಾ" ಎಂಬ ಹಾಡನ್ನು ಹಾಡುವುದಾದರೆ ಅದೇ ಮಗು ತೊಟ್ಟಿಲಿನಿಂದ ಕೆಳಗೆ ಬೀಳುವಾಗ ಕರೆಯುವುದು "ಯಾ ಬದರಿಂಙಳೇ, ಯಾ ಮುಹಿಯ್ಯದ್ಧಿ ಶೈಖೇ ಎಂದು. ಇದಾಗಿದೆ ಮುಸ್ಲಿಯಾರುಗಳು ತಮ್ಮ ಅನುಯಾಯಿಗಳಿಗೆ ಕಲಿಸಿ ಕೊಡುತ್ತಿರುವುದು. ಎಲ್ಲಿ ಹೋಯಿತು ವಿಶ್ವಾಸ...? ಇವರಾಗಿದ್ದಾರೆಯೇ "ಲಾಹಿಲಾಹ ಇಲ್ಲಲಾಹ್" ನಲ್ಲಿ ವಿಶ್ವಾಸವಿಡುವ ಮುಸಲ್ಮಾನರು...?

ಇಂತಹ ನಾಮಧಾರಿ ಪುರೋಹಿತರ ಕೆಡುಕಿನಿಂದ ನಮ್ಮನ್ನೂ ನಮ್ಮ ಕುಟುಂಬವನ್ನೂ ಅಲ್ಲಾಹನು ರಕ್ಷಿಸಲಿ.


✍🏼 Abu Muadh

ದಿಕ್ರ್ ಹಲ್ಕಾ ಪ್ರಮಾಣಗಳಿಗೆ ವಿರುದ್ಧವೂ ಅನಿಸ್ಲಾಮಿಕವೂ ಆಗಿದೆ.

ದಿಕ್ರ್ ಹಲ್ಕಾ ಪ್ರಮಾಣಗಳಿಗೆ ವಿರುದ್ಧವೂ ಅನಿಸ್ಲಾಮಿಕವೂ ಆಗಿದೆ.

ನಾವು ಫಜ್ರ್ ನಮಾಝ್'ಗೆ ತೆರಳುವ ಮುಂಚೆ ಇಬ್ನ್ ಮಸ್'ಹೂದ್(ರ) ರೊಡನೆ ಸೇರಿ ಮಸೀದಿಗೆ ಹೋಗಲು ಅವರ ಮನೆಯ ಜಗಲಿಯ ಮೇಲೆ ಕುಳಿತಿದ್ದೆವು. ಅಷ್ಟರಲ್ಲಿ ಅಬೂ ಮೂಸ ಅಲ್ ಅಶಹರೀ(ರ) ಯವರು ಅಲ್ಲಿಗೆ ಬಂದು "ಅಬೂ ಅಬ್ದುರಹ್ಮಾನ್(ಇಬ್ನ್ ಮಸ್'ಹೂದ್) ಇನ್ನೂ ಮಸೀದಿಗೆ ಹೊರಟಿಲ್ವ ಎಂದು ಕೇಳಿದರು.

ನಾವು "ಇಲ್ಲ" ಎಂದು ಉತ್ತರಿಸಿದೆವು.

ಅಬೂ ಮೂಸ ಅಲ್ ಅಶಹರಿ(ರ) ರವರು  ನಮ್ಮೊಂದಿಗೆ ಸೇರಿ ಇಬ್ನ್ ಮಸ್'ಹೂದ್(ರ)ರ ದಾರಿ ಕಾಯ ತೊಡಗಿದರು. ಸ್ವಲ್ಪ ಸಮಯದ ನಂತರ ಇಬ್ನ್ ಮಸ್'ಹೂದ್(ರ) ರವರು ಮನೆಯಿಂದ ಹೊರ ಬಂದಾಗ ಅಬುಲ್ ಮೂಸಾ ಅಲ್ ಅಶ್'ಹರಿ(ರ) ಯವರು ಇಬ್ನ್ ಮಸ್'ಹೂದ್'ರಲ್ಲಿ ಹೇಳಿದರು;

"ಓ, ಅಬೂ ಅಬ್ದುರಹ್ಮಾನ್(ಇಬ್ನ್ ಮಸ್'ಹೂದ್)! ಅನುವದನೀಯವಲ್ಲದ್ದನ್ನು ನಾನು ಮಸೀದಿಯಲ್ಲಿ ಕಂಡೆನು."

ಇಬ್ನ್ ಮಸ್'ಹೂದ್(ರ) ಕೇಳಿದರು: "ಏನದು?"

ಅಬೂ ಮೂಸಾ ಅಲ್ ಅಶಹರಿ(ರ) ರವರು ಹೇಳಿದರು; "ಮಸೀದಿಯಲ್ಲಿ ಜನರು ಗುಂಪು ಗುಂಪಾಗಿ  ವೃತ್ತಾಕಾರದಲ್ಲಿ ಕುಳಿತು ನಮಾಝ್'ಗಾಗಿ ಕಾಯುತ್ತಿರುವುದನ್ನು ನಾನು ಕಂಡೆ, ಅದರಲ್ಲಿ ಪ್ರತೀ ಗುಂಪಿಗೂ ಒಬ್ಬ ನಾಯಕನಿದ್ದ. ಮತ್ತು ಅಲ್ಲಿ ಕುಳಿತಿದ್ದ ಪ್ರತೀ ವ್ಯಕ್ತಿಯ ಬಳಿಯೂ ಚಿಕ್ಕ ಚಿಕ್ಕ ಕಲ್ಲುಗಳಿದ್ದವು."

ಗುಂಪಿನ ನಾಯಕ ಇತರರಲ್ಲಿ ಹೇಳುತ್ತಿದ್ದ "ಅಲ್ಲಾಹು ಅಕ್ಬರ್ ಎಂದು ನೂರು ಬಾರಿ ಹೇಳಿರಿ." ಆಗ ಅವರು ಅಲ್ಲಾಹು ಅಕ್ಬರ್ ಎಂದು ನೂರು ಬಾರಿ ಹೇಳುತ್ತಿದ್ದರು. ಅದೇ ರೀತಿ "ಲಾಹಿಲಾಹ ಇಲ್ಲಲ್ಲಾಹ್" ಹಾಗೂ "ಸುಬ್'ಹಾನಲ್ಲಹ್" ಎಂದು ನೂರು ಬಾರಿ ಹೇಳಲು ಗುಂಪಿನ ನಾಯಕ ಕರೆ ನೀಡುತ್ತಿದ್ದ , ಅವರು ನೂರು ಬಾರಿ ಹೇಳುತ್ತಿದ್ದರು.

ನಂತರ ಇಬ್ನ್ ಮಸ್'ಹೂದ್(ರ) ಕೇಳಿದರು; "ನೀನು ಅವರಿಗೆ ಏನು ಹೇಳಿದೆ?"

ಅಬುಲ್ ಮೂಸಾ ಅಲ್ ಅಶಹರಿ(ರ) ಹೇಳಿದರು; "ನಾನು ಏನನ್ನೂ ಹೇಳಲಿಲ್ಲ, ನಾನು ನಿಮ್ಮ ಅಭಿಪ್ರಾಯಕ್ಕಾಗಿ ಕಾಯುತ್ತಿರುವೆನು."

ಅಬ್ದುಲ್ಲಾಹ್ ಇಬ್ನ್ ಮಸ್'ಹೂದ್(ರ) ಕೋಪದಿಂದ ಹೇಳಿದರು: "ನೀನು ಯಾಕೆ ಅವರಿಗೆ ಅವರ ಪಾಪಗಳನ್ನು ಎಣಿಕೆ ಮಾಡಲು ಆಜ್ಞಾಪಿಸಲಿಲ್ಲ..?

ನಂತರ, ಅಬ್ದುಲ್ಲಾಹ್ ಇಬ್ನ್ ಮಸ್'ಹೂದ್(ರ) ರವರು ಮುಂದೆ ನಡೆದು ಹೋದರು, ನಾವು ಅವರನ್ನು ಹಿಂಬಾಲಿಸಿದೆವು. ಮಸೀದಿಯಲ್ಲಿ ಆ ಗುಂಪು ಜನರ ಒಂದು ತಂಡವನ್ನು ಎದುರುಗೊಂಡು ಅವರಲ್ಲಿ ಕೇಳಿದರು; " ಏನಿದು... ನೀವು ಮಾಡುತ್ತಿರುವುದು...?

ಆ ಜನರು ಹೇಳಿದರು; "ಓ! ಅಬೂ ಅಬ್ದುರಹ್ಮಾನ್, ಇವು ಕಲ್ಲುಗಳಾಗಿವೆ. ನಾವು ಅಲ್ಲಾಹು ಅಕ್ಬರ್, ಲಾಹಿಲಾಹ ಇಲ್ಲಲ್ಲಾ ಮತ್ತು ಸುಬ್'ಹಾನಲ್ಲಹ್ ಎಂದು ಹೇಳಿ ಇದರ ಮೂಲಕ ಎಣಿಕೆ ಮಾಡುತ್ತಿದ್ದೇವೆ."

ಇಬ್ನ್ ಮಸ್'ಹೂದ್(ರ) ಹೇಳಿದರು, ನಿಮ್ಮ ಪಾಪಗಳನ್ನು ಎಣಿಕೆ ಮಾಡಿರಿ. ನಿಮ್ಮ ಮೇಲೆ ಸಂಕಟವೆರಗಲಿ, ಓ ಉಮ್ಮತೇ ಮುಹಮ್ಮದ್(ಸ.ಅ), ಎಷ್ಟು ಬೇಗ ನೀವು ಪಥಭ್ರಷ್ಟರಾಗಿ ಬಿಟ್ಟಿರಲ್ಲವೇ...ನಿಮ್ಮ ಪ್ರವಾದಿ(ಸ.ಅ) ರ ಸಹಾಬಿಗಳು ಇನ್ನೂ ಜೀವಂತವಿದ್ದಾರೆ, ರಸೂಲುಲ್ಲಾಹ್(ಸ.ಅ) ರು ಧರಿಸಿದ ಬಟ್ಟೆ ಬರೆಗಳು ಇನ್ನೂ ನಾಶವಾಗಿಲ್ಲ,  ರಸೂಲುಲ್ಲಾಹ್(ಸ.ಅ)ರು ಉಪಯೋಗಿಸಿದ ಮಡಿಕೆಗಳು ಇನ್ನೂ ಒಡೆದು ಹೋಗಿಲ್ಲ. ನನ್ನ ಪ್ರಾಣ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ, ಅಲ್ಲಾಹನ ಸಂದೇಶವಾಹಕರ(ಸ.ಅ) ರ ಧರ್ಮಕ್ಕಿಂತ ಉತ್ತಮವಾದುದನ್ನು ನೀವು ಅನುಸರಿಸುತ್ತಿರುವಿರಾ..?? ಅಥವಾ ನೀವು ಪಥನದ ಬಾಗಿಲನ್ನು ತಟ್ಟುತ್ತಿರುವಿರಾ..???

ಆ ಗುಂಪಿನ ಜನರು ಹೇಳಿದರು; "ಅಲ್ಲಾಹನ ಮೇಲಾಣೆ, ಓ, ಅಬು ಅಬ್ದುರಹ್ಮಾನ್, ನಾವು ಇದರಿಂದ ಉತ್ತಮವಾದುದನ್ನಲ್ಲದೆ ಬೇರೇನನ್ನೂ ನಿರೀಕ್ಷಿಸಿಲ್ಲ."

ಇಬ್ನ್ ಮಸ್'ಹೂದ್(ರ) ಹೇಳಿದರು; "ಎಷ್ಟು ಜನರು ಉತ್ತಮ ಕರ್ಮಗಳನ್ನು ಮಾಡಲು ಪ್ರಯತ್ನಿಸುತ್ತಾರೆ ಆದರೆ ಅವರೆಂದಿಗೂ ಅದನ್ನು ತಲುಪಲಾರರು. ಅಲ್ಲಾಹನ ಸಂದೇಶವಾಹಕರು (ಸ.ಅ) ನಮಗೆ ಕುರ್'ಆನ್ ಓದುವವರ ಬಗ್ಗೆ ಹೇಳಿದ್ದರು, ಅವರು ಕುರ್'ಆನ್ ಪಾರಾಯಣ ಮಾಡುತ್ತಾರೆ ಆದರೆ ಅದು ಅವರ ಗಂಟಲ ಮೂಲಕ ಹಾದು ಹೋಗುವುದಲ್ಲದೆ ಬೇರೇನೂ ಅವರಿಗೆ ಅದರಿಂದ ಉಪಯೋಗವಾಗಲಾರದು. ನಿಮ್ಮಲ್ಲಿ ಹೆಚ್ಚಿನವರು ಅದೇ ರೀತಿಯ ಜನರು ಎಂದು ನಾನು ನಂಬುತ್ತೇನೆ."

ನಂತರ ಇಬ್ನ್ ಮಸ್'ಹೂದ್(ರ) ರವರು ಆ ಜನತೆಯನ್ನು ಬಿಟ್ಟು ತೆರಳಿದರು.

ಅಮ್ರ್ ಇಬ್ನ್ ಸಲಾಮಃ(ರ) ಹೇಳುತ್ತಾರೆ: "ಅನ್ನಹ್ರವಾನ್ ಯುದ್ಧದಲ್ಲಿ ಆ ಗುಂಪಿನಲ್ಲಿದ್ದ ಬಹುತೇಕ ಮುಖಗಳು ಖವಾರಿಜ್'ಗಳೊಟ್ಟಿಗೆ ಸೇರಿ ನಮ್ಮೊಂದಿಗೆ ಯುದ್ಧ ಮಾಡುವುದನ್ನು ನಾವು ಕಂಡಿರುವೆವು."

[ಅದ್ದಾರಿಮೀ - 204, ಅಲ್ ಹೈತಮೀ - ಅಲ್ ಮಜ್ಮಾ, 1/181, 189, ಅಲ್ಬಾನಿಯರು ಸಹೀಹ್ ಎಂದಿದ್ದಾರೆ - ಅಸ್ಸಹೀಹ್, 2005; ಅರ್ರದ್ದ್ ಅಲಲ್ - ಅಬಶೀ, ಪುಟ. 45-47]