ರಜಬ್ 27 ರ ಉಪವಾಸದ ಹದೀಸಿನ ನಿಜಸ್ಥಿತಿ.
*عن أبي هريرة رضي الله عنه قال قال رسول الله صلى الله عليه وسلم : من صام يوم سبع وعشرين من رجبٍ كتب الله له صيام ستين شهرا*
(إحياء علوم الدين: ١: ٣٢٨
*ನಬಿ ﷺ ರವರು ಹೇಳಿದರು..*
ಯಾರಾದರೂ ರಜಬ್ ಇಪ್ಪತ್ತ ಏಳರಂದು ಉಪವಾಸ ಹಿಡಿದರೆ ಅರುವತ್ತು ತಿಂಗಳ ಉಪವಾಸದ ಪ್ರತಿಫಲ ಅವನಿಗೆ ಅಲ್ಲಾಹನು ನೀಡುವನು. [ಇಹ್ಯಾ 1/328]
ಈ ಹದೀಸ್ ಶೈಖ್ ಅಬೂ ಮೂಸಲ್ ಮದೀನೀ [ರ.ಅ] ರವರು فضائل الأيام والأشهر ಎಂಬ ಗ್ರಂಥದಲ್ಲಿ ವರದಿ ಉಲ್ಲೇಖಿಸಿದ್ದಾರೆ. [ಹಾಶಿಯತುಲ್ ಇಹ್ಯಾ]
ಈ ಹದೀಸ್ ಬಗ್ಗೆ ಮುಹದ್ದಿಥ್ಗಳ ತೀರ್ಪು: ಇದರಲ್ಲಿ ಸಮಸ್ತ ಸುನ್ನಿಗಳು ಅಂಗೀಕರಿಸುವ ಇಮಾಮರೂ ಇದ್ದಾರೆ.
ಇಮಾಮ್ ಇಬ್ನ್ ಜೌಝೀ
ಮೌದೂʼ (ಕಟ್ಟಕಥೆ)
ಇಮಾಮ್ ಧಹಬೀ
باطل (ಅಸತ್ಯ)
ಇಬ್ನ್ ಹಜರ್ ಅಲ್ ಅಸ್ಖಲಾನೀ
لا يصح (ಸಹೀಹ್ ಅಲ್ಲ)
ಶೌಕಾನೀ
موضوع
ಅಲ್-ಅಲ್ಬಾನೀ
موضوع / ضعيف جدا
📌 ಇಹ್ಯಾ ಉಲೂಮ್ ಅದ್ದೀನ್ನಲ್ಲಿ ಹದೀಸ್ ಇರುವುದರಿಂದ ಮಾತ್ರ ಅದು ಸಹೀಹ್ ಆಗುವುದಿಲ್ಲ.
*ಇಮಾಮ್ ಗಝ್ಝಾಲಿ (ರ) ಸ್ವತಃ ಹೇಳುತ್ತಾರೆ: “ಇಹ್ಯಾದಲ್ಲಿರುವ ಎಲ್ಲಾ ಹದೀಸ್ಗಳು ಸಹೀಹ್ ಅಲ್ಲ.”*
ಇಮಾಮ್ ಗಝ್ಝಾಲಿ (ರ) ಅವರ ಸ್ಪಷ್ಟ ಹೇಳಿಕೆಗಳು.
«فَإِنْ قُلْتَ: هَذِهِ الأَحَادِيثُ الَّتِي أَوْرَدْتَهَا فِي هَذَا الْكِتَابِ هَلْ هِيَ صَحِيحَةٌ؟
فَاعْلَمْ أَنِّي لَمْ أَلْتَزِمْ فِيهَا الصِّحَّةَ،
بَلْ أَوْرَدْتُ مَا اشْتَهَرَ عَلَى أَلْسِنَةِ أَهْلِ الْعِلْمِ وَالتَّصْوِيفِ.»
“ಈ ಪುಸ್ತಕದಲ್ಲಿ ನಾನು ಉಲ್ಲೇಖಿಸಿದ ಹದೀಸ್ಗಳು ಸಹೀಹ್ವೇ ಎಂದು ಕೇಳಿದರೆ – ನಾನು ಅವುಗಳ ಸಹೀಹ್ ಆಗಿರುವುದನ್ನು ಶರತ್ತಾಗಿ ತೆಗೆದುಕೊಂಡಿಲ್ಲ. ಪಂಡಿತರು ಮತ್ತು ಸೂಫಿಗಳಲ್ಲಿ ಪ್ರಸಿದ್ಧವಾಗಿದ್ದವುಗಳನ್ನು ಮಾತ್ರ ಉಲ್ಲೇಖಿಸಿದ್ದೇನೆ.”
«مَا ذَكَرْتُهُ فِي هَذَا الْكِتَابِ مِنَ الأَخْبَارِ فَلَمْ أَلْتَزِمْ فِيهِ الصِّحَّةَ،
فَمَا كَانَ ضَعِيفًا فَقَدْ بَيَّنَهُ أَهْلُ الْحَدِيثِ.»
“ಈ ಗ್ರಂಥದಲ್ಲಿ ಉಲ್ಲೇಖಿಸಿದ ವರದಿಗಳಲ್ಲಿ ನಾನು ಸಹೀಹ್ ಆಗಿರಬೇಕೆಂದು ಬದ್ಧನಾಗಿಲ್ಲ; ದುರ್ಬಲವಾದವುಗಳನ್ನು ಹದೀಸ್ ಪಂಡಿತರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.”
ಇಮಾಮ್ ಅಲ್-ಇರಾಖೀ (رحمه الله)
تخريج أحاديث الإحياء – (ಇಹ್ಯಾ ಹದೀಸ್ ತಖ್ರೀಜ್)
«أَوْدَعَ أَبُو حَامِدٍ الْغَزَالِيُّ كِتَابَهُ الإِحْيَاءَ أَحَادِيثَ كَثِيرَةً،
صَحِيحَةً وَحَسَنَةً وَضَعِيفَةً،
وَفِيهِ مَوْضُوعَاتٌ قَلِيلَةٌ.»
(تخريج أحاديث الإحياء – المقدمة)
“ಇಮಾಮ್ ಅಬೂ ಹಾಮಿದ್ ಅಲ್-ಗಝ್ಝಾಲಿ ಅವರು ತಮ್ಮ ಇಹ್ಯಾ ಗ್ರಂಥದಲ್ಲಿ
ಸಹೀಹ್, ಹಸನ್, ದುರ್ಬಲ ಹದೀಸ್ಗಳನ್ನು ಸೇರಿಸಿದ್ದಾರೆ;
ಅದರಲ್ಲಿ ಕೆಲವೇ ಕೆಲವು ನಿರ್ಮಿತ (ಮೌದುಊ) ವರದಿಗಳೂ ಇವೆ.”
ಇಮಾಮ್ ಮುರ್ತದಾ ಅಲ್-ಜುಬೈದಿ (رحمه الله)
إتحاف السادة المتقين بشرح إحياء علوم الدين
«وَاعْلَمْ أَنَّ الأَحَادِيثَ الَّتِي فِي الإِحْيَاءِ
لَيْسَتْ كُلُّهَا صَحِيحَةً،
بَلْ فِيهَا الصَّحِيحُ وَالْحَسَنُ وَالضَّعِيفُ،
وَقَلِيلٌ مِنَ الْمَوْضُوعِ،
كَمَا بَيَّنَهُ الْحَافِظُ الْعِرَاقِيُّ فِي تَخْرِيجِهِ.»
(إتحاف السادة المتقين ١/٣٨)
“ಇಹ್ಯಾದಲ್ಲಿರುವ ಹದೀಸ್ಗಳೆಲ್ಲವೂ ಸಹೀಹ್ ಅಲ್ಲ.
ಅದರಲ್ಲಿ ಸಹೀಹ್, ಹಸನ್, ದುರ್ಬಲ ಮತ್ತು ಸ್ವಲ್ಪ ನಿರ್ಮಿತ ವರದಿಗಳಿವೆ.
ಇದನ್ನು ಹಾಫಿಝ್ ಇರಾಖೀ ಅವರು ತಮ್ಮ ತಖ್ರೀಜ್ನಲ್ಲಿ ವಿವರಿಸಿದ್ದಾರೆ.”
ಜುಬೈದಿ (ರ) ಅವರ ಮತ್ತೊಂದು ಸ್ಪಷ್ಟ ಮಾತು:
«وَأَبُو حَامِدٍ لَمْ يَشْتَرِطِ الصِّحَّةَ فِيمَا أَوْرَدَهُ،
وَإِنَّمَا أَرَادَ التَّرْغِيبَ وَالتَّرْهِيبَ.»
(إتحاف السادة المتقين)
“ಇಮಾಮ್ ಗಝ್ಝಾಲಿ ಅವರು ಉಲ್ಲೇಖಿಸಿದ ವರದಿಗಳಲ್ಲಿ ಸಹೀಹ್ ಎಂಬ ಷರತ್ತು ಹಾಕಿಲ್ಲ.
ಆತೂರು ಇಬ್ರಾಹಿಂ ಸಖಾಫಿ ಉಲ್ಲೇಖಿಸಿದ:
ಹಾಶಿಯತುಲ್ ಬರ್ಮಾವಿ
ಇಆನತು ತ್ವಾಲಿಬೀನ್
ಹಾಶಿಯತುಲ್ ಬಾಜೂರಿ
ಹಾಶಿಯತುಲ್ ಜಮಲ್
ಇವುಗಳು “ಹಾಶಿಯಾ” ಗ್ರಂಥಗಳು (commentary)
ಇವುಗಳ ಆಧಾರ ಹದೀಸ್ ಅಲ್ಲ, ಫಿಖ್ಹಿ ಇಜ್ತಿಹಾದ್ ಅಥವಾ ಪ್ರಚಲಿತ ಅಭ್ಯಾಸ.
*ಇಮಾಮ್ ನವವಿ (رحمه الله)* – ರಜಬ್ ಉಪವಾಸ ಕುರಿತು ಸ್ಪಷ್ಟ ಹೇಳಿಕೆ
الْمَجْمُوع شرح المهذب
«لَمْ يَثْبُتْ فِي صَوْمِ رَجَبَ حَدِيثٌ صَحِيحٌ،
وَلَا فِي صِيَامِ شَيْءٍ مِنْهُ مُعَيَّنٍ،
وَالْأَحَادِيثُ فِيهِ كُلُّهَا ضَعِيفَةٌ،
بَلْ مَوْضُوعَةٌ.»
(المجموع شرح المهذب ٦ / ٤٤٧)
“ರಜಬ್ ತಿಂಗಳ ಉಪವಾಸದ ಬಗ್ಗೆ ಯಾವುದೇ ಸಹೀಹ್ ಹದೀಸ್ ಸಾಬೀತಾಗಿಲ್ಲ.
ಅದರಲ್ಲಿಯೂ ನಿರ್ದಿಷ್ಟ ದಿನದ ಉಪವಾಸದ ಕುರಿತು ಏನೂ ಸಾಬೀತಾಗಿಲ್ಲ. ಈ ವಿಷಯದ ಎಲ್ಲಾ ಹದೀಸ್ಗಳು ದುರ್ಬಲ – ಕೆಲವಂತೂ ನಿರ್ಮಿತವಾದ ಹದೀಸ್ ಆಗಿದೆ.”
*ಇಮಾಮ್ ನವವಿ (ರ)* – ನಿರ್ದಿಷ್ಟ ದಿನವನ್ನು ವಿಶೇಷಗೊಳಿಸುವ ಬಗ್ಗೆ
«الصَّوْمُ فِي شَهْرِ رَجَبَ لَا فَضْلَ لَهُ عَلَى غَيْرِهِ،
وَلَا خُصُوصَ لِشَيْءٍ مِنْ أَيَّامِهِ،
وَتَخْصِيصُ بَعْضِ أَيَّامِهِ بِالصَّوْمِ مَكْرُوهٌ
إِذَا اعْتَقَدَ فِيهِ فَضِيلَةً خَاصَّةً.»
(فتاوى النووي ص ٥٤)
“ರಜಬ್ ತಿಂಗಳ ಉಪವಾಸಕ್ಕೆ ಬೇರೆ ತಿಂಗಳುಗಳಿಗಿಂತ ವಿಶೇಷ ಶ್ರೇಷ್ಟತೆ ಇಲ್ಲ. ಅದರ ಯಾವುದೇ ದಿನಕ್ಕೂ ವಿಶೇಷತೆ ಇಲ್ಲ.
ಅದರಲ್ಲಿ ಕೆಲವು ದಿನಗಳನ್ನು ವಿಶೇಷವೆಂದು ನಂಬಿ ಉಪವಾಸ ಮಾಡುವುದು ಮಕರೂಹ್.”
ಇಮಾಮ್ ನವವಿ (ರ) ಹೇಳುತ್ತಾರೆ:
«تَخْصِيصُ يَوْمٍ بِعِبَادَةٍ
يَحْتَاجُ إِلَى دَلِيلٍ صَحِيحٍ صَرِيحٍ.»
(شرح مسلم – قواعد عامة)
“ಯಾವುದೇ ಒಂದು ದಿನವನ್ನು ವಿಶೇಷ ಇಬಾದತ್ಗೆ ಮೀಸಲು ಮಾಡುವುದಕ್ಕೆ ಸ್ಪಷ್ಟ ಮತ್ತು ಸಹೀಹ್ ಪುರಾವೆ ಅಗತ್ಯ.”
*ಇಬ್ನ್ ಹಜರ್ ಅಲ್-ಹೈತಮಿ (ر)* – ರಜಬ್ ಉಪವಾಸದ ಹದೀಸ್ಗಳ ಸ್ಥಿತಿ.
«لَمْ يَرِدْ فِي فَضْلِ شَهْرِ رَجَبَ،
وَلَا فِي صَوْمِ شَيْءٍ مِنْهُ خَاصَّةً،
حَدِيثٌ صَحِيحٌ وَلَا حَسَنٌ،
وَجَمِيعُ مَا وَرَدَ فِيهِ ضَعِيفٌ،
بَلْ كَثِيرٌ مِنْهُ مَوْضُوعٌ.»
(الفتاوى الحديثية، ص ١١٩)
“ರಜಬ್ ತಿಂಗಳ ಶ್ರೇಷ್ಟತೆಗೂ
ಅದರಲ್ಲಿನ ಯಾವುದಾದರೂ ನಿರ್ದಿಷ್ಟ ಉಪವಾಸಕ್ಕೂ
ಸಹೀಹ್ ಅಥವಾ ಹಸನ್ ಹದೀಸ್ ಯಾವುದೂ ಬಂದಿಲ್ಲ.
ಈ ವಿಷಯದ ಎಲ್ಲಾ ವರದಿಗಳು ದುರ್ಬಲವಾಗಿವೆ;
ಬಹುಪಾಲು ನಿರ್ಮಿತವಾಗಿದೆ.”
ಇಬ್ನ್ ಹಜರ್ ಅಲ್-ಹೈತಮಿ ರಜಬ್ 27 / ಮಿಅರಾಜ್ ದಿನವನ್ನು ವಿಶೇಷಗೊಳಿಸುವ ಕುರಿತು
«وَتَخْصِيصُ يَوْمِ السَّابِعِ وَالْعِشْرِينَ مِنْ رَجَبَ
بِصَوْمٍ أَوْ عِبَادَةٍ خَاصَّةٍ
لَا أَصْلَ لَهُ فِي الشَّرْعِ،
وَلَمْ يَثْبُتْ فِيهِ شَيْءٌ عَنِ النَّبِيِّ ﷺ.»
(الفتاوى الفقهية الكبرى ٢ / ٥٣)
“ರಜಬ್ 27ನೇ ದಿನವನ್ನು
ವಿಶೇಷ ಉಪವಾಸ ಅಥವಾ ಇಬಾದತ್ಗೆ ಮೀಸಲು ಮಾಡುವುದು ಶರೀಅತ್ನಲ್ಲಿ ಮೂಲವಿಲ್ಲ.
ಈ ಕುರಿತು ನಬಿ ﷺ ರಿಂದ ಏನೂ ಸಾಬೀತಾಗಿಲ್ಲ.”
ಇಬ್ನ್ ಹಜರ್ ಅಲ್-ಹೈತಮಿ ದುರ್ಬಲ ಹದೀಸ್ ಆಧಾರವಾಗಿ “ಸುನ್ನತ್” ಎಂದು ಘೋಷಿಸುವುದರ ಬಗ್ಗೆ
«لَا يَجُوزُ أَنْ يُجْعَلَ الضَّعِيفُ
أَصْلًا فِي إِثْبَاتِ سُنَّةٍ،
وَلَا فِي تَخْصِيصِ زَمَانٍ أَوْ عِبَادَةٍ.»
(الفتاوى الحديثية)
“ದುರ್ಬಲ ಹದೀಸನ್ನು ಸುನ್ನತ್ ಸಾಬೀತುಪಡಿಸುವ ಆಧಾರವಾಗಿಯೂ ಅಥವಾ ಇಬಾದತ್ಗಳನ್ನು ವಿಶೇಷಗೊಳಿಸಲು ಬಳಸಲು ಅನುಮತಿ ಇಲ್ಲ.”
*ಶೈಖ್ ಅಬ್ದುಲ್ ಖಾದಿರ್ ಜೀಲಾನಿ (ರ) ಹೇಳುತ್ತಾರೆ:*
«اتَّبِعِ السُّنَّةَ وَلَا تَبْتَدِعْ، فَإِنَّ السُّنَّةَ طَرِيقُ النَّجَاةِ، وَالْبِدْعَةَ طَرِيقُ الْهَلَاكِ.»
الغنية (باب اتباع السنة)
“ಸುನ್ನತನ್ನು ಅನುಸರಿಸು; ಹೊಸದನ್ನು (ಬಿದ್ಅತ್) ದೀನಿನಲ್ಲಿ ಸೇರಿಸಬೇಡ. ಏಕೆಂದರೆ ಸುನ್ನತ್ತಾಗಿದೆ ರಕ್ಷಣೆಗಾಗಿ ದಾರಿ,
ಬಿದ್ಅತ್ ನಾಶದ ದಾರಿ.”
«وَكُلُّ عِبَادَةٍ لَمْ يَفْعَلْهَا رَسُولُ اللهِ ﷺ فَاتْرُكْهَا،وَلَا تَتَقَرَّبْ إِلَى اللهِ بِهَا.»
الغنية (كتاب الأمر بالمعروف)
“ನಬಿ ﷺ ಮಾಡದೇ ಇರುವ ಪ್ರತಿಯೊಂದು ಇಬಾದತ್ನ್ನು ನೀನು ಬಿಟ್ಟುಬಿಡು; ಅದನ್ನು ಅಲ್ಲಾಹನ ಹತ್ತಿರ ಹೋಗುವ ಮಾರ್ಗವೆಂದು ಪರಿಗಣಿಸಬೇಡ.”
«تَعْظِيمُ الْأَزْمِنَةِ وَالْأَمْكِنَةِ إِنَّمَا يَكُونُ بِمَا عَظَّمَهُ الشَّرْعُ، لَا بِالْهَوَى وَالِاخْتِرَاعِ.»
الغنية (باب الأدب مع الشرع)
“ಕಾಲಗಳಿಗೂ ಸ್ಥಳಗಳಿಗೂ ಗೌರವ ನೀಡುವುದು
ಶರೀಅತ್ ಗೌರವಿಸಿದ ಮಟ್ಟದಲ್ಲೇ ಇರಬೇಕು;
ವೈಯಕ್ತಿಕ ಆಸೆ ಅಥವಾ ಕಲ್ಪನೆಗಳ ಆಧಾರದ ಮೇಲೆ ಅಲ್ಲ.”
ಮಿಅರಾಜ್ ದಿನಾಂಕವೇ ಖಚಿತವಲ್ಲ.
ರಜಬ್ 27 ಎನ್ನುವುದು ಹಲವು ಇಮಾಮರ ಅಭಿಪ್ರಾಯ ದುರ್ಬಲ ಎಂದಾಗಿದೆ.
ಇಬ್ನ್ ಹಜರ್ (ರ) ಇಸ್ರಾ ಮಿಅರಾಜ್ ರಮದಾನಿನಲ್ಲಿ ಎಂದಿದ್ದಾರೆ.
ಹಲವರು ರಬೀಉಲ್ ಅವ್ವಲ್
ಬಹುಮತ ಅಥವಾ ಇಜ್ಮಾಅ ಇರುವುದು ಇಸ್ರಾ ಮಿಅರಾಜ್ ದಿನಾಂಕ ಖಚಿತವಲ್ಲ, ಉಪವಾಸದ ಕುರಿತು ಬಂದಿರುವ ಹದೀಸ್ ದುರ್ಬಲವಾಗಿದೆ ಎಂದಾಗಿದೆ.
✍🏾Abu Muadh