ಆದರ್ಶದ ವಿಷಯದಲ್ಲಿ ತಂದೆ ತಾಯಿಯೊಂದಿಗೆ ಇರಬೇಕಾದ ಹಕ್ಕು.
ಸ'ಅದ್ ಬಿನ್ ಅಬೀ ವಕ್ಕಾಸ್(ರ) ತಾಯಿ ಉಮ್ಮು ಸ'ಅದ್ ರವರು ತನ್ನ ಮಗ ಸ'ಅದ್ ಬಿನ್ ಅಬೀ ವಕ್ಕಾಸ್(ರ) ಇಸ್ಲಾಮ್ ಸ್ವೀಕರಿಸಿ ಮುಸ್ಲಿಮರಾದಾಗ ಆಹಾರ ಪಾನೀಯವನ್ನು ತ್ಯಜಿಸಿ ಇಸ್ಲಾಮನ್ನು ತ್ಯಜಿಸುವಂತೆ ಒತ್ತಾಯಿಸಿದರು.
ಆಕೆ (ಸ'ಅದ್'ರ ತಾಯಿ) ಸ'ಅದ್(ರ) ರನ್ನು ಕರೆದು ನಿನ್ನ ಅಲ್ಲಾಹು ಹೆತ್ತವರನ್ನು ಅನುಸರಿಸುವಂತೆ ನಿನ್ನಲ್ಲಿ ಆಜ್ಞೆ ಮಾಡಿದ್ದಾನಲ್ಲವೇ... ನಾನು ನಿನ್ನ ತಾಯಿ ನಾನು ಹೇಳುತ್ತೇನೆ ನೀನು ಈ ಆದರ್ಶ(ಇಸ್ಲಾಮ್) ದಿಂದ ಹಿಂತಿರುಗು.
ಆಕೆ ಮೂರು ದಿನದಿಂದ ಅನ್ನ ಪಾನೀಯವನ್ನು ತ್ಯಜಿಸಿ ಹಸಿವಿನಿಂದ ನಿಶ್ಶಕ್ತಳಾಗುತ್ತಾಳೆ. ಆದರೆ ಸ'ಅದ್ ಬಿನ್ ಅಬೀ ವಕ್ಕಾಸ್(ರ) ರವರು ತನ್ನ ತಾಯಿಯ ಯಾವುದೇ ಭಾವನಾತ್ಮಕ ಬೆದರಿಕೆಗೂ ಜಗ್ಗದೆ ತಾನು ಸ್ವೀಕರಿಸಿದ ಆದರ್ಶದಲ್ಲೇ ಅಚಲವಾಗಿ ನಿಲ್ಲುತ್ತಾರೆ.
ನಂತರ ಆಕೆಯ ಇನ್ನೊಬ್ಬ ಮಗ ಉಮರಾ ಎಂಬವರು ಆಕೆಗೆ ಕುಡಿಯಲು ನೀರು ಕೊಡುತ್ತಾರೆ. ತದನಂತರ ಆಕೆ ಸ'ಅದ್(ರ) ರ ವಿರುದ್ಧ ಶಪಿಸುತ್ತಾಳೆ. ಆಗ ಅಲ್ಲಾಹನು ಈ ಆಯತನ್ನು ಅವತೀರ್ಣಗೊಳಿಸುತ್ತಾನೆ;
وَوَصَّيْنَا الْإِنْسَانَ بِوَالِدَيْهِ حُسْنًا ۖ وَإِنْ جَاهَدَاكَ لِتُشْرِكَ بِي مَا لَيْسَ لَكَ بِهِ عِلْمٌ فَلَا تُطِعْهُمَا ۚ إِلَيَّ مَرْجِعُكُمْ فَأُنَبِّئُكُمْ بِمَا كُنْتُمْ تَعْمَلُونَ
ತನ್ನ ಮಾತಾಪಿತರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಲು ನಾವು ಮನುಷ್ಯನಿಗೆ ಉಪದೇಶ ಮಾಡಿರು ವೆವು. ನಿನಗೆ ಯಾವುದೇ ಅರಿವಿಲ್ಲದಿರುವುದನ್ನು ನನ್ನೊಂದಿಗೆ ಸಹಭಾಗಿಯನ್ನಾಗಿ ಮಾಡಲು ಅವರು (ಮಾತಾಪಿತರು) ನಿನ್ನನ್ನು ಬಲವಂತಪಡಿಸಿದರೆ ಅವರನ್ನು ಅನುಸರಿಸದಿರು. ನಿಮ್ಮ ಮರಳುವಿಕೆಯು ನನ್ನ ಬಳಿಗಾಗಿದೆ. ಆಗ ನೀವು ಮಾಡಿಕೊಂಡಿರುವುದರ ಬಗ್ಗೆ ನಾನು ನಿಮಗೆ ತಿಳಿಸಿಕೊಡುವೆನು.
[ಅಲ್-ಅನ್ಕಬೂತ್ : 8]
via ಪವಿತ್ರ ಕುರ್ ಆನ್ (Pavitra Qur'aan)
http://bit.ly/KanQuraan
ಈ ಇತಿಹಾಸದ ಘಟನೆಯಲ್ಲಿ ಇವತ್ತು ಶಿರ್ಕ್ ಬಿದ'ಅತ್ ಮೇಳೈಸಿರುವ ಸಮಾಜದಲ್ಲಿ ಬದುಕುತ್ತಿರುವ ನಮಗೆ ಸಿಗುವ ಪಾಠವೇನೆಂದರೆ, ಇವತ್ತು ಹಳೆಯಕಾಲದ ಪುರೋಹಿತ ಶಾಹಿ ಮಾಲೆ ಮೌಲೂದ್ ದರ್ಗಾ ಶಿರ್ಕ್ ಬಿದ'ಅತ್ ಆದರ್ಶದಿಂದ ಹೊರ ಬಂದು ನೈಜ ಇಸ್ಲಾಮಿನ ಆದರ್ಶದಲ್ಲಿ ಬದುಕುತ್ತಿರುವ ಅದೆಷ್ಟೋ ಮಂದಿ ಯುವಕರ ತಾಯಂದಿರು ಅಥವಾ ಮನೆಯವರು ಅದೇ ಹಳೆಯ ಅಜ್ಜಂದಿರ ಕಾಲದ ಮಾಲೆ ಮೌಲೂದ್ ಆದರ್ಶದವರಾಗಿದ್ದು ಪ್ರವಾದಿ(ಸ.ಅ) ಸುನ್ನತ್ ಆದ ಗಡ್ಡ ಬೆಳೆಸಲು ಈ ಯುವಕರಿಗೆ ಅಡ್ಡಿ ಪಡಿಸುತ್ತಾರೆ. ತಾವೇ ನೋಡಿದ ಶಿರ್ಕ್ ಬಿದ'ಅತ್ ಆಚಾರದ ಹೆಣ್ಣನ್ನು ವರಿಸುವಂತೆ ಒತ್ತಾಯಿಸುತ್ತಾರೆ. ಈ ರೀತಿಯ ಒತ್ತಡಕ್ಕೆ ಸಿಲುಕಿ ಅದೆಷ್ಟೋ ಮುವಹ್ಹಿದ್ ಯುವಕರು ಕೊರಗುತ್ತಿದ್ದಾರೆ. ಕೆಲವರಂತೂ ಮನೆಯವರಲ್ಲಿ ಅವರ ಹಳೆಯ ಕಾಲದ ಶಿರ್ಕ್ ಬಿದ'ಅತ್ ಆಚಾರದವರಾಗಿ ನಟಿಸಿ ಹೊರಗಡೆ ಬಂದಾಗ ತೌಹೀದ್ ಆದರ್ಶದವರಾಗಿ ಎರಡು ಮುಖ ಹೊತ್ತು ಜೀವಿಸುವವರೂ ಇದ್ದಾರೆ.
ಗಲ್ಫ್ ನಾಡಿನಲ್ಲಿ ದುಡಿಯಲು ಹೋಗಿ ಶಿರ್ಕ್ ಮತ್ತು ತೌಹೀದಿನ ಮಧ್ಯೆ ಇರುವ ವ್ಯತ್ಯಾಸವನ್ನು ಅರ್ಥೈಸಿಕೊಂಡ ಪ್ರವಾಸಿ ಯುವಕರ ಕಥೆಯೂ ಇಷ್ಟೆ. ಪ್ರವಾಸಿ ಜೀವನದಲ್ಲಿ ತೌಹೀದ್ ಆಗಿಯೂ ಊರಿಗೆ ಬಂದಾಗ ಮನೆ ಮಂದಿ ಆಚರಿಸುವ ಅದೇ ಅಜ್ಜಂದಿರ ಕಾಲದ ನೂತನವಾದಕ್ಕೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ.
ಇದೆಲ್ಲ ನಮ್ಮ ಈಮಾನಿನ ದೌರ್ಬಲ್ಯತೆಯನ್ನು ಸಾರುತ್ತದೆ. ಈ ನಿಟ್ಟಿನಲ್ಲಿ ಸ'ಅದ್ ಬಿನ್ ಅಬೀ ವಕ್ಕಾಸ್(ರ)ರವರ ಚರಿತ್ರೆ ಅಂತಹ ಯುವಕರಿಗೆ ಸ್ಫೋರ್ತಿದಾಯಕವಾಗಿದೆ.
ಈ ಪೇಜನ್ನು ಲೈಕ್ ಮಾಡಲು ಈ ಲಿಂಕ್ ಬಳಸಿ👇🏽
https://m.facebook.com/QuranmatthuHadeesVchanagalu/
---------------------------------
وَوَصَّيْنَا الْإِنْسَانَ بِوَالِدَيْهِ حَمَلَتْهُ أُمُّهُ وَهْنًا عَلَىٰ وَهْنٍ وَفِصَالُهُ فِي عَامَيْنِ أَنِ اشْكُرْ لِي وَلِوَالِدَيْكَ إِلَيَّ الْمَصِيرُ
ಮಾನವರಿಗೆ ಅವರ ಮಾತಾಪಿತರ ವಿಷಯದಲ್ಲಿ ನಾವು ಉಪದೇಶ ಮಾಡಿರುವೆವು. ಅವನ ತಾಯಿಯು ಬಲಹೀನತೆಯ ಮೇಲೆ ಬಲಹೀನತೆಯನ್ನು ಸಹಿಸಿ ಅವನನ್ನು ಗರ್ಭ ಧರಿಸಿರುವಳು. ಅವನ ಸ್ತನಪಾನವನ್ನು ನಿಲ್ಲಿಸಲಾಗುವುದು ಎರಡು ವರ್ಷದೊಂದಿಗಾಗಿದೆ. ನನಗೂ, ನಿನ್ನ ಮಾತಾಪಿತರಿಗೂ ಕೃತಜ್ಞನಾಗಿರು. (ನಿನ್ನ) ಮರಳುವಿಕೆಯು ನನ್ನ ಬಳಿಗೇ ಆಗಿದೆ.
... وَإِنْ جَاهَدَاكَ عَلَىٰ أَنْ تُشْرِكَ بِي مَا لَيْسَ لَكَ بِهِ عِلْمٌ فَلَا تُطِعْهُمَا ۖ وَصَاحِبْهُمَا فِي الدُّنْيَا مَعْرُوفًا ۖ وَاتَّبِعْ سَبِيلَ مَنْ أَنَابَ إِلَيَّ ۚ ثُمَّ إِلَيَّ مَرْجِعُكُمْ فَأُنَبِّئُكُمْ بِمَا كُنْتُمْ تَعْمَلُونَ
ನಿನಗೆ ಯಾವುದೇ ಜ್ಞಾನವಿಲ್ಲದ ಏನನ್ನಾದರೂ ನನ್ನೊಂದಿಗೆ ಸಹಭಾಗಿಯನ್ನಾಗಿ ಮಾಡುವಂತೆ ಅವರಿ ಬ್ಬರೂ ನಿನ್ನನ್ನು ಬಲವಂತಪಡಿಸಿದರೆ, ಆಗ ಅವರನ್ನು ಅನುಸರಿಸಬಾರದು. ಐಹಿಕ ಜೀವನದಲ್ಲಿ ಅವರೊಂದಿಗೆ ಉತ್ತಮವಾಗಿ ವರ್ತಿಸು. ನನ್ನೆಡೆಗೆ ಮರಳಿದವರ ಮಾರ್ಗ ವನ್ನು ಹಿಂಬಾಲಿಸು. ತರುವಾಯ ನಿಮ್ಮ ಮರಳುವಿಕೆಯು ನನ್ನ ಬಳಿಗೇ ಆಗಿದೆ. ನೀವು ಮಾಡುತ್ತಿರುವುದರ ಬಗ್ಗೆ ಆಗ ನಾನು ನಿಮಗೆ ತಿಳಿಸಿಕೊಡುವೆನು.
[ಲುಕ್ಮಾನ್ : 14 - 15]

No comments:
Post a Comment