5 Oct 2016

ಮದೀನಾದಲ್ಲಿರುವ ಹಸಿರು ಕುಬ್ಬ.

ಮದೀನಾದಲ್ಲಿರುವ ಹಸಿರು ಕುಬ್ಬ.

ಕುಬ್ಬ ರಚಿಸಲು ಪ್ರಾರಂಭವಾಗಿರುವುದು ಪ್ರಥಮವಾಗಿ ಯಮನಿನಲ್ಲಿರುವ ಕುಬೂರಿಗಳು ಪ್ರಥಮ ಗುಂಭಜ್ ನಿರ್ಮಿಸಿದ್ದು ಯಮನಿನಲ್ಲಿ ಹಿಜ್ರಾ 647 ರಲ್ಲಿ. ನಂತರ ಅಯ್ಯೂಬಿ ಸುಲ್ತಾನತ್ ಪ್ರಾರಂಭವಾದಾಗ ಅವರ ಮೃತರನ್ನು ಗುಂಭಜ್ ಗಳಲ್ಲಿ ದಫನ ಮಾಡಲಾಗುತಿತ್ತು. ಕುಬ್ಬಾ ಇಮಾಮ್ ಝೈದೀನ್ ಮತ್ತು ಸುಲ್ತಾನ್ ರವರಿಗೆ ಮಾತ್ರ ಪ್ರತ್ಯೇಖವಾಗಿತ್ತು. ಕುಬೂರಿಗಳಾದ ಸೂಫಿ ಸಂತರ ಕಾಲವಾಗಿತ್ತು ಅಂದು. ಹಿಜ್ರಾ 617 ರಿಂದ ಇವರು ಸಿರಿಯಾ ಮತ್ತು ಮಿಸ್ರ್ ನಲ್ಲಿ ಇವರ ರಾಜಾದಿಕಾರ ಇರುವಲ್ಲೆಲ್ಲಾ ಇವರ ಮಹಾತ್ಮಾರ ಕಬರ್ ಗಳಿಗೆ ಕುಬ್ಬ ಗಳನ್ನು ರಚಿಸುತಿದ್ದರು.


عن سعيد بن المسيب : أنه أنكر إدخال حجرة عائشة في المسجد، كأنه خشي أن يتخذ مسجداً(11).

ಪ್ರವಾದಿ ﷺ ರವರ ಕಬರನ್ನು ಜನರು ಅಲ್ಲಿ ಅರಾಧನೆ ಪ್ರಾರಂಭಿಸಬಹುದೆಂದು ಹೆದರಿ ಮಸೀಗೆ ಸೇರಿಸುವುದನ್ನು ಆಯಿಶಾ (ರ) ವಿರೋಧಿಸುತಿದ್ದರು.


ಇನ್ನು ಕುಬ್ಬ ವನ್ನು ರಚಿಸದವರು ಯಾರೆಂದು ತಿಳಿಯಬೇಕಲ್ಲವೊ. ಕೇಳಿ ನಾಸಿರ್ ಹಸನ್ ಬಿನ್ ಮಹಮ್ಮದ್ ಕಲವೂನ್ ರ ಕಾಲ ಹಿಜ್ರಾ 678 ರಲ್ಲಿ ಪ್ರಥಮವಾಗಿ ರಸೂಲ್ ﷺ ರ ಹಿಜ್ರ್ ನಲ್ಲಿ ಕುಬ್ಬವನ್ನು ನಿರ್ಮಿಸಲಾಯಿತು. ಮೊದಲು ಕಲ್ಲನ್ನು ನಾಲ್ಕು ಬದಿಯಲ್ಲಿ ಕಟ್ಟಿ ನಂತರ ಒಳಗೆ ಬೆಳಕು ಚೆಲ್ಲುವ ಹಾಗಿ ಮರದಿಂದ ನಾಲ್ಕು ಬದಿ ಕಟ್ಟಿ ಎತ್ತರಿಸಿ ನಂತರ ಬಟ್ಟೆಯಿಂದ ಕುಬ್ಬ ವನ್ನು ರಚಿಸಲಾಯಿತು.ಇದು ಮಳೆಯಿಂದ ನಾಶವಾಯಿತು. ನಂತರ ಪುನಃ ರಚಿಸಲಾಯಿತು ಅದು ಬೆಂಕಿಯಿಂದ ಸುಟ್ಟುಹೋಯಿತು. ನಂತರ ಸುಲ್ತಾನ ಶಬಾನ್ ಬಿನ್ ಹಸನ್ ಬಿನ್ ಮಹಮ್ಮದ್ 765 ರಲ್ಲಿ ಪುನಃ ಇದನ್ನು ನವೀಕರಿಸುತ್ತಾರೆ ಇದರ ಬಗ್ಗೆ ಶೈಕ್ ಕನ್ ಆನಿ ಹೇಳುತ್ತಾರೆ.

وقال العلاّمة الصنعاني في الجواب عن هذه الشبهة: (فإن قلت: هذا قبر رسول الله قد عمرت عليه قبة عظيمة، أنفقت فيها الأموال. قلت: هذا جهل عظيم بحقيقة الحال: فإن هذه القبة ليس بناؤها منه، ولا من الصحابة، ولا من تابعيهم، ولا تابعي التابعين، ولا من علماء أمته وأئمة ملته، بل هذه القبة المعمولة على قبره -صلى الله عليه وسلم-، من أبنية بعض ملوك مصر المتأخرين، وهو قلاوون الصالحي المعروف بالملك المنصور في سنة 678هـ، ذكره في تحقيق النصرة بتلخيص معالم دار الهجرة،

ಈ ಕುಬ್ಬ ವನ್ನು ರಚಿಸಿದವರು ಸ್ವಹಾಬತ್ತಲ್ಲ ಅಥವಾ ತಾಬಿವುಗಳು ಯಾರೂ ಅಲ್ಲ ಇನ್ನು ತಬವುತ್ತಾಬಿವುಗಳು ಯಾರೂ ಅಲ್ಲ ಮತ್ತು ಇಮಾಮರು ಯಾರೂ ಅಲ್ಲ. ಕಾಲಗಳ ಅಂತರದಲ್ಲಿ ಕಳೆದು ಹೋದ ಕೆಲ ಮಿಸ್ರೀ ರಾಜ ವಂಶಜರು ಹಿಜ್ರಿ 678 ರಲ್ಲಿ ಇದನ್ನು ನಿರ್ಮಿಸಿದರು.

 ಈ ಕುಬ್ಬ ಪುನಃ 886 ರಲ್ಲಿ ಸುಟ್ಟು ಹೋಯಿತು. ಅದನ್ನು ಹಿಜ್ರ 887 ರಲ್ಲಿ ಪುನಃ
ನವೀಕರಿಸಲಾಯಿತು. ಆದರೆ ಈ ಸಲ ಬಹಳ ಎತ್ತರದಲ್ಲಿ ರಾಜ ಕಾಯತ್ ಬಾಯ್ ಇದನ್ನು ನಿರ್ಮಿಸಿದರು. ಹಿಜ್ರಾ 892  ರಲ್ಲಿ ಇದನ್ನು ಬಿಳಿ ಬಣ್ಣದಿಂದ ವರ್ಣಸಲಾಯಿತು. 361 ವರ್ಷ ಇದು ಬಿಳಿ ಬಣ್ಣದಿಂದ ರಾರಾಜಿಸುತ್ತಿತ್ತು.
ಪ್ರಪ್ರಥಮವಾಗಿ ಹಿಜ್ರಾ 1253 ರಲ್ಲಿ  ಸುಲ್ತಾನ್ ಅಬ್ದುಲ್ ಹಮೀದ್ ಅಲ್ ಉಸ್ಮಾನಿ ಹಸಿರು ಬಣ್ಣ ಬಳಿಯಲು ಆಜ್ಞೆ ಹೊರಡಿಸಿದರು. ಈಗ ಇರುವ ಹಸಿರು ಗೊಮ್ಮಟವು (ಗ್ರೆಗೋರಿಯನ್ ಕ್ಯಾಲೆಂಡರ್ 2016 ಕ್ಕೆ) ಬರೇ 197 ವರ್ಷಗಳಿಂದ ಬಂದಂತಹಾ ಹಸಿರು ಕುಬ್ಬ. ಇದನ್ನು ಸುಲ್ತಾನ್ ಮಹ್ಮೂದ್ ರವರು 1818 ರಲ್ಲಿ ನಿರ್ಮಿಸಿದರು. ಇದನ್ನು ಕುಬೂರಿಗಳು ಜನರಿಗೆ ಪರಿಚಯಿಸುತ್ತಿರುವ ಶೈಲಿ ಯಹೂದಿಗಳು ಕುಬ್ಬತ್ ಸಖ್ರಾ ವನ್ನು ಬೈತುಲ್ ಮುಕದ್ದಸೆಂದು ಯಾವ ರೀತಿ ಪ್ರಚಾರ ಪಡಿಸುತ್ತಾರೋ ಹಾಗೆ.


ಗೊಮ್ಮಟ ರೂಪದಲ್ಲಿ ಶಿಲಾನ್ಯಾಸ ಮಾಡುವ ಉದ್ದೇಶವನ್ನು ಈ ಲಿಂಕ್ ನ ಮೂಲಕ ಇನ್ನಷ್ಟು ತಿಳಿಯಿರಿ.
Watch ""Pacha kubba" by Dr.Ashraf moulavi madeenah" on YouTube - https://youtu.be/K7aucUPsxE8

No comments:

Post a Comment