6 Oct 2016

ವಫಾತಾದ ಪ್ರವಾದಿ(ಸ)ರವರಲ್ಲಿ ಸಿದ್ದೀಕ್,(ರ)ರವರ ಜನಾಝ ದಫನ ಮಾಡಲಿಕ್ಕೆ ಅನುಮತಿ ಕೇಳಿದ್ದಾರೆಯೇ?

ವಫಾತಾದ ಪ್ರವಾದಿ(ಸ)ರವರಲ್ಲಿ ಸಿದ್ದೀಕ್,(ರ)ರವರ ಜನಾಝ ದಫನ ಮಾಡಲಿಕ್ಕೆ ಅನುಮತಿ ಕೇಳಿದ್ದಾರೆಯೇ?

ಅಲ್ಲಾಹೇತರರನ್ನು ಪ್ರಾರ್ಥಿಸಲಿಕ್ಕೂ ಸಹಾಯ ಯಾಚಿಸಲಿಕ್ಕೂ ನಾನಾ ರೀತಿಯ ಪುರಾವೆಗಳನ್ನು ಕುರ್'ಆನ್ ಮತ್ತು ಹದೀಸಿನಿಂದ ಕಂಡು ಹಿಡಿದು ದುರ್ವ್ಯಾಖ್ಯಾನ ಮಾಡಿ ಮುಗ್ಧ ಜನರನ್ನು ವಂಚಿಸುತ್ತಿರುವ ಈ ಸಂದರ್ಭ ದಲ್ಲಿ ಇಂತಹ ಲೇಖನಗಳು ಓದುಗರಿಗೆ ಪ್ರಯೋಜನವಾಗಲಿ ಎಂಬ ಉದ್ದೇಶ ದಿಂದ ಬರೆಯುತಿದ್ದೇನೆ.


👉🏾ಅಬೂ ಬಕರ್ ಸಿದ್ದೀಕ್ (ರ)ರು ಮರಣ ಹೊಂದುವ ಮುನ್ನ ಪ್ರವಾದಿ(ಸ)ರ ಹತ್ತಿರ ದಫನ ಮಾಡಲಿಕ್ಕೆ ಅನುಮತಿ ಕೇಳಿದ ಕಥೆ.


ವಫಾತಾದ ಪ್ರವಾದಿ(ಸ) ಕಬರಿನ ಹತ್ತಿರ  ಬಂದು ಸಮ್ಮತಿ ಕೇಳಿದಾಗ ಪ್ರವಾದಿ(ಸ)ರವರು ಅದಕ್ಕೆ ಅನುಮತಿ ಕೊಟ್ಟ ವಿಷಯವನ್ನು ವಿವರಿಸುತ್ತೇನೆ.
..
"ತನ್ನ ಮರಣ ಆಸನ್ನವಾದ ಸಮಯದಲ್ಲಿ ಅಬೂಬಕರ್ ಸಿದ್ದೀಕ್(ರ)ರು ಜೊತೆಯಲ್ಲಿದ್ದವ ರಲ್ಲಿ ಹೀಗೆ ಹೇಳಿದರು:ನಾನು ಮರಣಹೊಂದಿದರೆ ನನ್ನ ಮಯ್ಯಿತನ್ನು ಪ್ರವಾದಿ(ಸ)ರ ಕಬರಿನ ಹತ್ತಿರ ಕೊಂಡು ಹೋಗಿ ಅಲ್ಲಿ ನೀವು ಹೀಗೆ ಹೇಳಿ:

 السلام عليك يا الرسول   الله."

 ಇದು ನಿಮ್ಮ ಆತ್ಮೀಯ ಸ್ನೇಹಿತ ಅಬೂಬಕರಿನ (ರ) ಜನಾಝಾಗಿದೆ.
..ಇವರನ್ನು ಇಲ್ಲಿ ದಫನ ಮಾಡಲಿಕ್ಕೆ ಅನುಮತಿ ಕೇಳುತಿದ್ದಾರೆ." ಅದರ ನಂತರ ಪ್ರವಾದಿ (ಸ)ರ ಅನುಮತಿ ಸಿಕ್ಕಿದರೆ ನನ್ನನ್ನು ಪ್ರವಾದಿ(ಸ)ರ ಹತ್ತಿರ ದಫನ ಮಾಡಿ ..

ಆ ಸಂದರ್ಭದಲ್ಲಿ ಒಳಗಿನಿಂದ ಅಶರೀರ ವಾಣಿ(ಪ್ರವಾದಿ ಸ)  ಕೇಳಿಸಿತು. (ನವೂಝು ಬಿಲ್ಲಾಹ್)
"ನನ್ನ ಸ್ನೇಹಿತನನ್ನು ಇಲ್ಲಿ ದಫನ ಮಾಡಿ " ಎಂದು

⬇⬇⬇⬇⬇⬇⬇

أخرج ابن عساكر في تاريخه قال: روي أن أبا بكر رضي الله عنه لما حضرته


الوفاة قال لمن حضره: إذا أنا مت وفرغتم من جهازي فاحملوني حتى تقفوا
بباب البيت الذي فيه قبر النبي صلى الله عليه وسلم فقفوا بالباب وقولوا:
السلام عليك يا رسول الله! هذا أبو بكر يستأذن. فإن أذن لكم بأن فتح
الباب وكان الباب مغلقا بقفل فادخلوني وادفنوني، وإن لم يفتح الباب
فأخرجوني إلى البقيع وادفنوني به، فلما وقفوا على الباب وقالوا ما ذكر
سقط القفل وانفتح الباب وإذا بهاتف يهتف من القبر: ادخلوا الحبيب إلى
الحبيب فإن الحبيب إلى الحبيب مشتاق.
وذكره الرازي في تفسيره 5 ص 378،

⤴⤴ಇದಾಗಿದೆ ಸಮಸ್ತದವರ ಇಸ್ತಿಗಾಸಕ್ಕೆ ಪುರಾವೆ

ಇನ್ನು ವಿಷಯಕ್ಕೆ ಬರೋಣ....

ಮುಸ್ಲಿಮರು ಎಂಬ ಕಾರಣಕ್ಕೆ ಕೇಳಿದನ್ನೆಲ್ಲಾ ಕಣ್ಣುಮುಚ್ಚಿ ವಿಶ್ವಾಸವಿಡಲಿಕ್ಕೆ ಅಲ್ಲಾಹು ಆಜ್ಞಾಪಿಸಲಿಲ್ಲ ಅದರ ಬದಲು ಅಲ್ಲಾಹನು ಹಾಗೂ ಪ್ರವಾದಿ (ಸ)ರು  ಏನೆಲ್ಲಾ ಕಲಿಸಿ ಕೊಡುತ್ತಾರೆ ಅದನೆಲ್ಲಾ ಕಣ್ಣು ಮುಚ್ಚಿ ವಿಶ್ವಾಸವಿಡಲಿಕ್ಕೆ ಅಲ್ಲಾಹನು ಆಜ್ಞಾಪಿಸುತ್ತಾನೆ..

ಕುರ್'ಆನ್  ಅದಕ್ಕೆ ಪುರಾವೆಯಾಗಿದೆ⬇

وَمَا آتَاكُمُ الرَّسُولُ فَخُذُوهُ وَمَا نَهَاكُمْ عَنْهُ فَانْتَهُوا ۚ وَاتَّقُوا اللَّهَ ۖ إِنَّ اللَّهَ شَدِيدُ الْعِقَابِ


ಸಂದೇಶವಾಹಕರು ನಿಮಗೆ ಏನನ್ನು ನೀಡುವರೋ ಅದನ್ನು ಸ್ವೀಕರಿಸಿರಿ ಮತ್ತು ಅವರು
 ಯಾವುದರಿಂದ ವಿರೋಧಿಸುವರೋ ಅದರಿಂದ ದೂರಸರಿಯಿರಿ. ಅಲ್ಲಾಹುವನ್ನು ಭಯಪಡಿರಿ. ಖಂಡಿತವಾಗಿಯೂ ಅಲ್ಲಾಹು ಕಠಿಣವಾಗಿ ಶಿಕ್ಷಿಸುವವ ನಾಗಿರುವನು.

ಹಶ್ರ್ -7

*ಮೇಲಿನ ಇಬಾರತಿನಲ್ಲಿ*
*ಇಬ್ನ್ ಅಸಾಕಿರ್ ಹೇಳಿದ್ದೇನು*?


نا عبد الله بن الصقر نا الحسن بن موسى نا محمد بن عبد الله الطحان حدثني
أبو طاهر المقدسي عن عبد الجليل المزني عن حبة العرني عن علي بن أبي طالب
قال لما حضرت أبا (4) بكر الوفاة أقعدني عند رأسه وقال لي يا علي إذا أنا
مت فغسلني بالكف الذي غسلت به رسول الله (صلى الله عليه وسلم) وحنطوني
واذهبوا بي إلى البيت الذي فيه رسول الله (صلى الله عليه وسلم) فاستأذنوا
فإن رأيتم الباب قد يفتح فادخلوا بي وإلا فردوني إلى مقابر المسلمين حتى
يحكم الله بين عباده قال فغسل وكفن وكنت أول من يأذن إلى الباب فقلت يا
رسول الله هذا أبو بكر مستأذن فرأيت الباب قد تفتح وسمعت قائلا يقول
ادخلوا الحبيب إلى حبيبه فإن الحبيب إلى الحبيب مشتاق


هذا منكر وراويه أبو الطاهر موسى بن محمد بن عطاء المقدسي وعبد الجليل
مجهول والمحفوظ أن الذي غسل أبا بكر امرأته أسماء بنت عميس


ತಫ್ಸೀರುಗಳಲ್ಲಿ ಕೆಲವು ರೀತಿಯ  ಕಟ್ಟುಕಥೆ ಗಳು ಹಾಗೂ ಕಥೆಗಳನ್ನು  ಉಲ್ಲೇಖಿಸಿದನ್ನು ಹಿಂದೆ ಮುಂದೆ ನೋಡದೆ ವಿಶ್ವಾಸವಿರಿಸಲೇಬೇಕೆಂದಿಲ್ಲ. ಅದು ಸನದಿರುವ ವಿಷಯವೂ ಕೂಡ ಅಲ್ಲ. ಸಹೀಹಾದ ವರದಿಯಲ್ಲ‌ ಅಲ್ಲ. ಇದು منكر حديث ಆಗಿದೆ. ಇಂತಹ ಕಟ್ಟು ಕತೆಗಳೇ ಇಸ್ಲಾಮಿಗೆ ಪುರಾವೆ !!?

ಅದೂ ಅಲ್ಲದೇ ಈ ರಿಪೋರ್ಟಿನ ಕುರಿತು ಇಬ್ನ್ ಹಜರ್ (ರ) ತನ್ನ ಲಿಸಾನುಲ್ ಮೀಝಾನಿನಲ್ಲಿಯೂ
ಇಮಾಂ ಸುಯೂತಿ  (ರ) ರು ಖಸ್ವಾಯಿಸಿಯಿಲ್ಲೂ,ಇಬ್ನ್ ಅಸಾಕಿರ್ ತಾರೀಖ್ ದಿಮಷ್ಕಲ್ಲಿ ಹೇಳುವುದೇನೆಂದರೆ:

 ಈ ಕಥೆಯಲ್ಲಿರುವ ರಾವಿ(ವರದಿಗಾರ)ಗಳು  ಮಜ್ಹೂಲ್ (ಅಪರಿಚಿತರು) ಗಳಾಗಿದ್ದಾರೆಂದೂ,ಕಝ್ಝಾಬ್ (ಸುಳ್ಳುಗಾರ)ರೆಂದು ಎಂದಾಗಿದೆ

باب قد فتح فسمعت قائلا يقول ادخلوا الحبيب إلى حبيبه فإن الحبيب إلى الحبيبمشتاق


وقال ابن عساكر هذا حديث منكر *وفي إسناده أبو الطاهر موسى بن محمد بن
عطاء المقدسي كذاب *عن عبد الجليل المري وهو مجهول


ادخلوا الحبيب إلى حبيبه فإن الحبيب إلى الحبيب مشتاق وقال بن عساكر هذا
منكر وأبو طاهر هو موسى بن محمد بن عطاء كذاب وعبد الجليل مجهول

♻♻♻♻♻♻♻♻♻


ಇಂತಹ ಸನದ್ ಗಳಿಲ್ಲದ ,ದುರ್ಬಲವಾದ,ಕಟ್ಟು ಕಥೆಗಳನ್ನು ಇಸ್ಲಾಮಿಗೆ ತುರುಕಿಸಲಿಕ್ಕೆ ಹವಣಿಸುತ್ತಿರುವ ಪುರೋಹಿತಶಾಹಿಗಳು ಎಲ್ಲಾ ಕಾಲಘಟ್ಟದಲ್ಲಿಯೂ ಇದ್ದರು.

يَا أَيُّهَا الَّذِينَ آمَنُوا إِنَّ كَثِيرًا مِنَ الْأَحْبَارِ وَالرُّهْبَانِ لَيَأْكُلُونَ أَمْوَالَ النَّاسِ بِالْبَاطِلِ وَيَصُدُّونَ عَنْ سَبِيلِ اللَّهِ ۗ وَالَّذِينَ يَكْنِزُونَ الذَّهَبَ وَالْفِضَّةَ وَلَا يُنْفِقُونَهَا فِي سَبِيلِ اللَّهِ فَبَشِّرْهُمْ بِعَذَابٍ أَلِيمٍ

ಓ ಸತ್ಯವಿಶ್ವಾಸಿಗಳೇ! ಖಂಡಿತವಾಗಿಯೂ ವಿದ್ವಾಂಸರು ಮತ್ತು ಪುರೋಹಿತರ ಪೈಕಿ ಹೆಚ್ಚಿನವರು ಅನ್ಯಾಯವಾಗಿ ಜನರ ಸಂಪತ್ತನ್ನು ತಿನ್ನುವವರೂ, ಅಲ್ಲಾಹುವಿನ ಮಾರ್ಗದಿಂದ (ಜನರನ್ನು) ತಡೆಯುವ ವರೂ ಆಗಿರುವರು.270 ಚಿನ್ನ ಮತ್ತು ಬೆಳ್ಳಿಯನ್ನು ನಿಕ್ಷೇಪ ಮಾಡಿಡುವವರು ಮತ್ತು ಅಲ್ಲಾಹುವಿನ ಮಾರ್ಗದಲ್ಲಿ ಅದನ್ನು ವ್ಯಯಿಸದಿರುವವರು ಯಾರೋ ಅವರಿಗೆ ಯಾತನಾಮಯವಾದ ಶಿಕ್ಷೆಯಿದೆಯೆಂಬ ಶುಭವಾರ್ತೆ ಯನ್ನು ತಿಳಿಸಿರಿ.

👆🏻👆🏻👆🏻ಅಲ್ಲಾಹನ ವಚನಗಳು ಎಷ್ಟು ಸತ್ಯ

ತಮ್ಮ ಲಾಭಕೋಸ್ಕರ ಅಲ್ಲಾಹನ ವಚನಗಳನ್ನು ತಿದ್ದುಪಡಿ ಮಾಡುತ್ತಿರುವ,ಪ್ರವಾದಿ(ಸ)ರ ಚರ್ಯೆಯನ್ನು ಕಳಂಕಮಾಡುವವರ ಫಿತ್ನಗಳಿಂದ ನಮ್ಮೆಲ್ಲರನ್ನು ಸರ್ವಶಕ್ತನಾದ ಅಲ್ಲಾಹನು ರಕ್ಷಿಸಲಿ

ಆಮೀನ್

ಮುಷ್ತಾಕ್ ಬಿನ್ ಅಬ್ದುರ್ರಹ್ಮಾನ್🖊🌹🌹

No comments:

Post a Comment