*ಲಾ ಇಲಾಹ ಇಲ್ಲಲ್ಲಾಹ್" ನ ಸರಿಯಾದ ಅರ್ಥ*
معنى لا إله إلا الله
ಸೌದಿ ಅರೇಬಿಯಾದ ಪ್ರಸಿದ್ಧ ಇಸ್ಲಾಮಿಕ್ ಪಂಡಿತರೂ, ಗ್ರ್ಯಾಂಡ್ ಮುಫ್ತಿಯೂ ಆಗಿದ್ದ ಶೈಖ್ ಅಬ್ದುಲ್ ಅಝೀಝ್ ಇಬ್ನು ಬಾಝ್ (رحمه الله) ರವರು ಕೇರಳದ ಪ್ರಮುಖ ಇಸ್ಲಾಮಿಕ್ ವಿದ್ವಾಂಸರಲ್ಲಿ ಒಬ್ಬರಾದ ಉಮರ್ ಬಿನ್ ಅಹ್ಮದ್ ಮೌಲವಿ (رَحِمَهُ الله) ರವರ ಲೇಖನವನ್ನು ಓದಿ ಬರೆಯುತ್ತಾರೆ...
الحمد لله رب العالمين، والصلاة والسلام على من بعثه الله رحمة للعالمين، وعلى آله وصحبه ومن تبعهم بإحسان إلى يوم الدين وبعد:
ಎಲ್ಲ ಪ್ರಶಂಸೆಗಳು ಸಕಲ ಲೋಕಗಳ ರಬ್ಬಾದ ಅಲ್ಲಾಹನಿಗೆ ಸಲ್ಲುತ್ತವೆ. ಅಲ್ಲಾಹನು ಸಮಸ್ತ ಲೋಕಗಳಿಗೆ ಕರುಣೆಯಾಗಿ ಕಳುಹಿಸಿದ ಪ್ರವಾದಿಯವರ ಮೇಲೆ, ಅವರ ಕುಟುಂಬದವರ ಮೇಲೆ, ಅವರ ಸಹಾಬಿಗಳ ಮೇಲೆ ಮತ್ತು ಕಿಯಾಮತ್ ದಿನದವರೆಗೆ ಅವರನ್ನು ಉತ್ತಮ ರೀತಿಯಲ್ಲಿ ಅನುಸರಿಸುವವರ ಮೇಲೆ ಶಾಂತಿ ಮತ್ತು ಕರುಣೆ ಸುರಿಸಲಿ.
اطلعت على الكلمة التي كتبها أخونا في الله العلامة الشيخ عمر بن أحمد المليباري في معنى لا إله إلا الله، وقد تأملت ما أوضحه فضيلته في أقوال الفرق الثلاث في معناها وهذا بيانها:
ಅಲ್ಲಾಹನಿಗಾಗಿ ನಮ್ಮ ಸಹೋದರರಾದ ಗೌರವಾನ್ವಿತ ಶೈಖ್ ಉಮರ್ ಬಿನ್ ಅಹ್ಮದ್ ಅಲ್-ಮಲಿಬಾರಿ (ಉಮರ್ ಮೌಲವಿ) ಅವರು "ಲಾ ಇಲಾಹ ಇಲ್ಲಲ್ಲಾಹ್" ನ ಅರ್ಥದ ಕುರಿತು ಬರೆದ ಲೇಖನವನ್ನು ನಾನು ಓದಿದ್ದೇನೆ. ಅವರು ಅದರ ಅರ್ಥದ ಕುರಿತು ಮೂರು ಗುಂಪುಗಳ ಅಭಿಪ್ರಾಯಗಳನ್ನು ಉಲ್ಲೇಖಿಸಿದ್ದಾರೆ:
الأول: لا معبود بحق إلا الله.
1.ಅಲ್ಲಾಹನ ಹೊರತು ಸತ್ಯವಾಗಿ ಆರಾಧನೆಗೆ ಅರ್ಹನಾದವರು ಯಾರೂ ಇಲ್ಲ.
الثاني: لا مطاع بحق إلا الله.
2.ಅಲ್ಲಾಹನ ಹೊರತು ಸತ್ಯವಾಗಿ ವಿಧೇಯತೆ ಸಲ್ಲಿಸಲು ಅರ್ಹನಾದವರು ಯಾರೂ ಇಲ್ಲ.
الثالث: لا رب إلا الله.
3.ಅಲ್ಲಾಹನ ಹೊರತು ರಬ್ ಯಾರೂ ಇಲ್ಲ.
والصواب هو الأول كما أوضحه فضيلته
*ಮಹನೀಯರು* (*ಉಮರ್ ಮೌಲವಿ*) ವಿವರಿಸಿದಂತೆ, ಸರಿಯಾದ ಅಭಿಪ್ರಾಯವು ಮೊದಲನೆಯದೇ ಆಗಿದೆ."
، وهو الذي دل عليه كتاب الله سبحانه في مواضع من القرآن الكريم
ಇದನ್ನು ಅಲ್ಲಾಹನ ಪುಸ್ತಕವು ಅನೇಕ ಸ್ಥಳಗಳಲ್ಲಿ ಸೂಚಿಸಿದೆ.
مثل قوله سبحانه: إِيَّاكَ نَعْبُدُ وَإِيَّاكَ نَسْتَعِينُ [الفاتحة:5]
ಅಲ್ಲಾಹನು ಹೇಳುತ್ತಾನೆ:
"ನಾವೇ ನಿನ್ನನ್ನು ಆರಾಧಿಸುತ್ತೇವೆ ಮತ್ತು ನಿನ್ನಲ್ಲಿಯೇ ಸಹಾಯ ಯಾಚಿಸುತ್ತೇವೆ."
وقوله عز وجل: وَقَضَى رَبُّكَ أَلَّا تَعْبُدُوا إِلَّا إِيَّاهُ [الإسراء:23]
ಮತ್ತೆ ಹೇಳುತ್ತಾನೆ:
"ನಿಮ್ಮ ರಬ್ಬು ತನ್ನನ್ನು ಹೊರತುಪಡಿಸಿ ಯಾರನ್ನೂ ಆರಾಧಿಸಬಾರದೆಂದು ಆದೇಶಿಸಿದ್ದಾನೆ."
وقوله سبحانه: وَمَا خَلَقْتُ الْجِنََّ وَالْإِنْسَ إِلَّا لِيَعْبُدُونِ [الذاريات:56]
ಮತ್ತೆ ಹೇಳುತ್ತಾನೆ:
"ನಾನು ಜಿನ್ನ್ ಮತ್ತು ಮಾನವರನ್ನು ನನ್ನ ಆರಾಧನೆಗಾಗಿ ಮಾತ್ರ ಸೃಷ್ಟಿಸಿದೆನು."
وقوله سبحانه وتعالى: ذَلِكَ بِأَنَّ اللَّهَ هُوَ الْحَقُّ وَأَنَّ مَا يَدْعُونَ مِنْ دُونِهِ هُوَ الْبَاطِلُ [الحج:62]،
ಮತ್ತೆ ಹೇಳುತ್ತಾನೆ:
"ಅಲ್ಲಾಹನೇ ಸತ್ಯ; ಅವರು ಆತನ ಹೊರತು ಯಾರನ್ನು ಕರೆಯುತ್ತಾರೋ ಅವರು ಅಸತ್ಯರು."
والآيات في هذا المعنى كثيرة
ಈ ಅರ್ಥವನ್ನು ಸೂಚಿಸುವ ಆಯತ್‌ಗಳು ಬಹಳವಿವೆ.
، وهو الذي فهمه المشركون من هذه الكلمة حين دعاهم النبي ﷺ إليها، وقال: يا قومي قولوا: لا إله إلا الله تفلحوا.
فأنكروا ذلك، واستكبروا في قبوله، لأنهم فهموا أن ذلك يخالف ما عليه آباؤهم من عبادة الأصنام والأشجار والأحجار، وتأليههم لها،
ಪ್ರವಾದಿ ﷺ ಅವರು ಮುಶ್ರಿಕರನ್ನು "ಲಾ ಇಲಾಹ ಇಲ್ಲಲ್ಲಾಹ್" ಕಡೆಗೆ ಕರೆದಾಗ, ಅವರು ಈ ಕಲಿಮಾದ ಅರ್ಥವನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದರು. ಆದ್ದರಿಂದ ಅವರು ಅದನ್ನು ನಿರಾಕರಿಸಿದರು ಮತ್ತು ಅಹಂಕಾರ ತೋರಿದರು.
ಯಾಕೆಂದರೆ ಈ ಕಲಿಮಾ ಅವರ ಪೂರ್ವಜರು ಅನುಸರಿಸುತ್ತಿದ್ದ ವಿಗ್ರಹಾರಾಧನೆ, ಮರಗಳ ಆರಾಧನೆ, ಕಲ್ಲುಗಳ ಆರಾಧನೆ ಮತ್ತು ಅವುಗಳನ್ನು ದೇವರೆಂದು ಪರಿಗಣಿಸುವ ಪದ್ಧತಿಗೆ ವಿರುದ್ಧವಾಗಿತ್ತು.
كما ذكر الله عز وجل في قوله سبحانه في سورة ص: وَعَجِبُوا أَنْ جَاءَهُمْ مُنْذِرٌ مِنْهُمْ وَقَالَ الْكَافِرُونَ هَذَا سَاحِرٌ كَذَّابٌ
ಅಲ್ಲಾಹನು ಅವರ ಬಗ್ಗೆ ಹೇಳುತ್ತಾನೆ:
"ಅವರು ಹೇಳಿದರು: ಇವನು ಸುಳ್ಳುಗಾರ ಮಾಂತ್ರಿಕನು.
أَجَعَلَ الْآلِهَةَ إِلَهًا وَاحِدًا إِنَّ هَذَا لَشَيْءٌ عُجَابٌ [ص:4، 5]
ಇವನು ಎಲ್ಲ ದೇವರುಗಳನ್ನು ಒಬ್ಬನೇ ದೇವರನ್ನಾಗಿ ಮಾಡಿಬಿಟ್ಟನೇ? ಇದು ಆಶ್ಚರ್ಯಕರ ವಿಷಯ."
وقال سبحانه وتعالى في سورة الصافات عن المشركين: إِنَّهُمْ كَانُوا إِذَا قِيلَ لَهُمْ لَا إِلَهَ إِلَّا اللَّهُ يَسْتَكْبِرُونَ وَيَقُولُونَ أَئِنَّا لَتَارِكُو آلِهَتِنَا لِشَاعِرٍ مَجْنُونٍ [الصافات:35، 36]
ಮತ್ತೊಂದು ಕಡೆ:
"ಅವರಿಗೆ 'ಲಾ ಇಲಾಹ ಇಲ್ಲಲ್ಲಾಹ್' ಎಂದು ಹೇಳಿದಾಗ ಅವರು ಅಹಂಕಾರ ತೋರಿಸುತ್ತಿದ್ದರು ಮತ್ತು 'ನಾವು ನಮ್ಮ ದೇವರುಗಳನ್ನು ಒಬ್ಬ ಹುಚ್ಚು ಕವಿಗಾಗಿ ಬಿಟ್ಟುಬಿಡಬೇಕೇ?' ಎಂದು ಹೇಳುತ್ತಿದ್ದರು."
فعلم من ذلك أنهم فهموا معناها بأنها تبطل آلهتهم وتوجب تخصيص العبادة لله وحده، ولهذا لما أسلم من أسلم منهم، ترك ما هو عليه من الشرك، وأخلص العبادة لله وحده، ولو كان معناها: لا رب إلا الله. أو لا مطاع إلا الله، لما أنكروا هذه الكلمة، فإنهم يعلمون أن الله ربهم وخالقهم، وأن طاعته واجبة عليهم، فيما علموا أنه من عنده سبحانه،
ಇದರಿಂದ ಅವರು ಈ ಕಲಿಮಾದ ಅರ್ಥವನ್ನು ಅರಿತಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಅಂದರೆ ಇದು ಅವರ ದೇವತೆಗಳನ್ನು ತಿರಸ್ಕರಿಸಿ, ಆರಾಧನೆಯನ್ನು ಅಲ್ಲಾಹನಿಗೆ ಮಾತ್ರ ಮೀಸಲಿಡುವುದನ್ನು ಕಡ್ಡಾಯಗೊಳಿಸುತ್ತದೆ.
ಆದ್ದರಿಂದ ಅವರಲ್ಲಿ ಯಾರು ಇಸ್ಲಾಂ ಸ್ವೀಕರಿಸಿದರೋ ಅವರು ಶಿರ್ಕನ್ನು ತೊರೆದು, ಆರಾಧನೆಯನ್ನು ಅಲ್ಲಾಹನಿಗೆ ಮಾತ್ರ ಮೀಸಲಿಟ್ಟರು.
ಒಂದು ವೇಳೆ "ಲಾ ಇಲಾಹ ಇಲ್ಲಲ್ಲಾಹ್" ಎಂಬುದರ ಅರ್ಥ ಕೇವಲ "ಅಲ್ಲಾಹನ ಹೊರತು ರಬ್ ಯಾರೂ ಇಲ್ಲ" ಅಥವಾ "ಅಲ್ಲಾಹನ ಹೊರತು ವಿಧೇಯತೆ ಸಲ್ಲಿಸಲು ಅರ್ಹನಾದವರು ಯಾರೂ ಇಲ್ಲ" ಎಂಬುದಾಗಿದ್ದರೆ, ಮುಶ್ರಿಕರು ಇದನ್ನು ನಿರಾಕರಿಸುತ್ತಿರಲಿಲ್ಲ. ಏಕೆಂದರೆ ಅಲ್ಲಾಹನೇ ತಮ್ಮ ಸೃಷ್ಟಿಕರ್ತ ಮತ್ತು ಪಾಲಕ ಎಂಬುದನ್ನು ಅವರು ಈಗಾಗಲೇ ಒಪ್ಪಿಕೊಂಡಿದ್ದರು.
ولكنهم كانوا يعتقدون أن عبادة الأصنام والأنبياء، والملائكة والصالحين، والأشجار ونحو ذلك على وجه الاستشفاع بها إلى الله، ورجاء أن تقربهم إليه زلفى كما ذكر الله ذلك عنهم سبحانه في قوله الكريم: وَيَعْبُدُونَ مِنْ دُونِ اللَّهِ مَا لَا يَضُرُّهُمْ وَلَا يَنْفَعُهُمْ وَيَقُولُونَ هَؤُلَاءِ شُفَعَاؤُنَا عِنْدَ اللَّهِ [يونس:18]
ಆದರೆ ಅವರು ವಿಗ್ರಹಗಳು, ಪ್ರವಾದಿಗಳು, ಮಲಕ್‌ಗಳು, ಸಜ್ಜನರು ಮತ್ತು ಇತರ ವಸ್ತುಗಳನ್ನು ಆರಾಧಿಸುತ್ತಿದ್ದರು. ಅವುಗಳು ತಮ್ಮನ್ನು ಅಲ್ಲಾಹನಿಗೆ ಹತ್ತಿರ ಮಾಡುತ್ತವೆ ಮತ್ತು ತಮ್ಮ ಪರವಾಗಿ ಶಿಫಾರಸು ಮಾಡುತ್ತವೆ ಎಂದು ಅವರು ನಂಬುತ್ತಿದ್ದರು.
ಅಲ್ಲಾಹನು ಅವರ ಬಗ್ಗೆ ಹೇಳುತ್ತಾನೆ:
"ಅವರು ಅಲ್ಲಾಹನ ಹೊರತು ಅವರಿಗೆ ಹಾನಿಯನ್ನೂ ಲಾಭವನ್ನೂ ಮಾಡದ ವಸ್ತುಗಳನ್ನು ಆರಾಧಿಸುತ್ತಾರೆ ಮತ್ತು 'ಇವರು ಅಲ್ಲಾಹನ ಬಳಿಯಲ್ಲಿ ನಮ್ಮ ಶಿಫಾರಸುಗಾರರು' ಎಂದು ಹೇಳುತ್ತಾರೆ."
فأبطل الله ذلك ورده عليهم بقوله سبحانه: قُلْ أَتُنَبِّئُونَ اللَّهَ بِمَا لَا يَعْلَمُ فِي السَّمَاوَاتِ وَلَا فِي الْأَرْضِ سُبْحَانَهُ وَتَعَالَى عَمَّاا يُشْرِكُونَ [يونس:18]
ಅಲ್ಲಾಹನು ಅವರ ಮಾತನ್ನು ತಿರಸ್ಕರಿಸಿ:
"ಆಕಾಶಗಳಲ್ಲಿಯೂ ಭೂಮಿಯಲ್ಲಿಯೂ ಅಲ್ಲಾಹನಿಗೆ ತಿಳಿಯದ ವಿಷಯವನ್ನು ನೀವು ಆತನಿಗೆ ತಿಳಿಸುತ್ತೀರಾ? ಅವರು ಮಾಡುವ ಶಿರ್ಕಿನಿಂದ ಆತನು ಪವಿತ್ರನು ಮತ್ತು ಉನ್ನತನಾಗಿದ್ದಾನೆ." ಎಂದು ಹೇಳುತ್ತಾನೆ.
وفي قوله عز وجل: تَنْزِيلُ الْكِتَابِ مِنَ اللَّهِ الْعَزِيزِ الْحَكِيمِ
"ಈ ಗ್ರಂಥವು ಪ್ರಬಲನೂ ಜ್ಞಾನಿಯೂ ಆದ ಅಲ್ಲಾಹನಿಂದ ಇಳಿಸಲ್ಪಟ್ಟದ್ದು."
إِنَّا أَنْزَلْنَا إِلَيْكَ الْكِتَابَ بِالْحَقِّ فَاعْبُدِ اللَّهَ مُخْلِصًا لَهُ الدِّينََ
"ನಾವು ಈ ಗ್ರಂಥವನ್ನು ಸತ್ಯದೊಂದಿಗೆ ನಿನಗೆ ಇಳಿಸಿದ್ದೇವೆ. ಆದ್ದರಿಂದ ಧರ್ಮವನ್ನು ಆತನಿಗೇ ನಿಷ್ಕಳಂಕವಾಗಿ ಮೀಸಲಿಟ್ಟು ಅಲ್ಲಾಹನನ್ನು ಆರಾಧಿಸು."
أَلَا لِلَّهِ الدِّينُ الْخَالِصُ وَالَّذِينَ اتَّخَذُوا مِنْ دُونِهِ أَوْلِيَاءَ مَا نَعْبُدُهُمْ إِلَّا لِيُقَرِّبُونَا إِلَى اللَّهِ زُلْفَى [الزمر:1-3]
"ತಿಳಿದುಕೊಳ್ಳಿರಿ! ನಿಷ್ಕಳಂಕವಾದ ಧರ್ಮವು ಅಲ್ಲಾಹನಿಗೇ ಸೇರಿದೆ." "ಮತ್ತು ಆತನ ಹೊರತು ಇತರರನ್ನು ರಕ್ಷಕರು/ಸಹಾಯಕರಾಗಿ ಮಾಡಿಕೊಂಡವರು (ಹೀಗೆ ಹೇಳುತ್ತಾರೆ):"
"ನಾವು ಅವರನ್ನು ಆರಾಧಿಸುವುದು ನಮ್ಮನ್ನು ಅಲ್ಲಾಹನಿಗೆ ಇನ್ನಷ್ಟು ಹತ್ತಿರ ಮಾಡುವುದಕ್ಕಾಗಿ ಮಾತ್ರ."
(ಅಝ್-ಝುಮರ್: 1-3)
والمعنى أنهم يقولون ما نعبدهم إلا ليقربونا إلى الله زلفى، فرد الله عليهم ذلك بقوله سبحانه: إِنَّ اللَّهَ يَحْكُمُ بَيْنَهُمْ فِي مَا هُمْ فِيهِ يَخْتَلِفُونَ إِنَّ اللَّهَ لَا يَهْدِي مَنْ هُوَ كَاذِبٌ كَفَّارٌ [الزمر:3]
ಮತ್ತೆ ಅವರು ಹೇಳುತ್ತಿದ್ದರು:
"ನಾವು ಇವರನ್ನು ಆರಾಧಿಸುವುದು ನಮ್ಮನ್ನು ಅಲ್ಲಾಹನಿಗೆ ಹತ್ತಿರ ಮಾಡುವುದಕ್ಕಾಗಿ ಮಾತ್ರ."
ಅಲ್ಲಾಹನು ಇದನ್ನೂ ತಿರಸ್ಕರಿಸಿ: "ಅಲ್ಲಾಹನು ಅವರ ಭಿನ್ನಾಭಿಪ್ರಾಯಗಳ ನಡುವೆ ತೀರ್ಪು ನೀಡುವನು. ಖಂಡಿತವಾಗಿಯೂ ಅಲ್ಲಾಹನು ಸುಳ್ಳುಗಾರನನ್ನೂ ಕೃತಘ್ನನನ್ನೂ ಸನ್ಮಾರ್ಗಕ್ಕೆ ನಡೆಸುವುದಿಲ್ಲ." ಎಂದು ಹೇಳುತ್ತಾನೆ
فبين سبحانه بذلك أنهم كاذبون في زعمهم أن آلهتهم تقربهم إلى الله زلفى، كافرون بهذا العمل. والآيات في هذا المعنى كثيرة.
"ಹೀಗೆ ಅಲ್ಲಾಹನು ಸ್ಪಷ್ಟಪಡಿಸಿದನು: ತಮ್ಮ ಆರಾಧ್ಯರು ತಮ್ಮನ್ನು ಅಲ್ಲಾಹನಿಗೆ ಹತ್ತಿರ ಮಾಡುತ್ತಾರೆ ಎಂಬ ಅವರ ದಾವೆ ಸುಳ್ಳಾಗಿದೆ. ಮತ್ತು ಈ ಕೃತ್ಯದ ಮೂಲಕ ಅವರು ಕುಫ್ರ್ ಮಾಡಿರುವವರಾಗಿದ್ದಾರೆ. ಈ ಅರ್ಥವನ್ನು ಸೂಚಿಸುವ ಆಯತ್‌ಗಳು ಬಹಳವಿವೆ."
والحمد لله رب العالمين وصلى الله وسلم على سيدنا محمد وآله وصحبه ومن تبعهم بإحسان إلى يوم الدين
ಎಲ್ಲ ಪ್ರಶಂಸೆಗಳು ಸಕಲ ಲೋಕಗಳ ರಬ್ಬಾದ ಅಲ್ಲಾಹನಿಗೆ ಸಲ್ಲುತ್ತವೆ. ಅಲ್ಲಾಹನು ನಮ್ಮ ನಾಯಕ ಮುಹಮ್ಮದ್ ﷺ ಅವರ ಮೇಲೆ, ಅವರ ಕುಟುಂಬದವರ ಮೇಲೆ, ಅವರ ಸಹಾಬಿಗಳ ಮೇಲೆ ಮತ್ತು ಕಿಯಾಮತ್ ದಿನದವರೆಗೆ ಅವರನ್ನು ಉತ್ತಮ ರೀತಿಯಲ್ಲಿ ಅನುಸರಿಸುವವರ ಮೇಲೆ ಕರುಣೆ ಮತ್ತು ಶಾಂತಿ ಸುರಿಸಲಿ.
مجموع فتاوى ومقالات متنوعة للشيخ ابن باز (2/ 5).
ಮಜ್ಮೂಅ್ ಫತಾವಾ ವ ಮಕಾಲಾತ್ ಮುತನವ್ವಿಅ ಇಬ್ನ್ ಬಾಝ್ Volume 2, Page 5.
ಶೈಖ್ ಉಮರ್ ಬಿನ್ ಅಹ್ಮದ್ ಮೌಲವಿ (رَحِمَهُ الله) ಅವರು ಜ್ಞಾನ, ದಅ್ವತ್ ಮತ್ತು ಸತ್ಯದ ಪ್ರಚಾರದಲ್ಲಿ ತಮ್ಮ ಜೀವನವನ್ನು ಮೀಸಲಿಟ್ಟ ವಿದ್ವಾಂಸರಾಗಿದ್ದರು. ಅವರ ಉಪನ್ಯಾಸಗಳು ಮತ್ತು ಬರಹಗಳು ಅನೇಕ ಜನರಿಗೆ ಇಸ್ಲಾಮಿನ ಸರಿಯಾದ ಅರಿವನ್ನು ನೀಡಲು ಕಾರಣವಾಗಿವೆ. ಅಲ್ಲಾಹ್ ಅವರ ಮೇಲೆ ಕರುಣೆ ತೋರಿ, ಅವರನ್ನು ವಿಶಾಲವಾದ ಜನ್ನತ್‌ನಲ್ಲಿ ಸೇರಿಸಲಿ. ಆಮೀನ್.
No comments:
Post a Comment